ಅಶೋಕೆಲಿ ಪ್ಲಾಸ್ಟಿಕಿನ ಅಭಾವ

September 1, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 44 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗ ಚಾತುರ್ಮಾಸ್ಯ ಕಾಲ.
ಗುರುಗೊ ವ್ರತಲ್ಲಿ ಇದ್ದವಿದಾ, ನಾವೆಲ್ಲ ಹೋಗಿ ಆಶೀರ್ವಾದ ತೆಕ್ಕೊಳ್ಳೆಕ್ಕಾದ ಕಾಲ.
ಗುರುಕ್ಕಾರ್ರಿಂಗೂ ಪುರುಸೋತ್ತು ಇಲ್ಲೆ, ಚಾತುರ್ಮಾಸ್ಯ ಶುರುವಾದಲ್ಲಿಂದ. ವ್ಯಾಸ ಮಂತ್ರಾಕ್ಷತೆ ಎತ್ತುಸೆಕ್ಕು ಎಲ್ಲ ಮನೆಗೊಕ್ಕೆ.

೧.ಬಟ್ಟ ಮಾವಂಗೆ ಸಮ್ಮಾನಲ್ಲಿ ಸಿಕ್ಕಿದ್ದು

ನಾವು ಹೋಯೆಕ್ಕು, ಆಶೀರ್ವಾದ ಪಡೆಯೆಕ್ಕು ಹೇಳಿ ತೀರ್ಮಾನ ಶುರುವಿಂದಲೇ ಇತ್ತು.
ಹಾಂಗೆ ಬೈಲಿಲಿ ಹೇಳದ್ದೆ ಬಟ್ಟ ಮಾವನೊಟ್ಟಿಂಗೆ ಹೆರಟತ್ತು. ಗೊಂತಿದ್ದನ್ನೆ ಬೈಲಿಲಿ ಚರ್ಚೆ ಆಯಿದು ಅವಕ್ಕೆ ಸಿಕ್ಕಿದ ಸಮ್ಮಾನದ ಬಗ್ಗೆ.

ದೊಡ್ಡ ಬಾವನ ‘ಸಮೋಸ’ ಬೈಲಿನವು ಹೋಗಿ ಬೈಂದವು. ಎಂತ ಎಲ್ಲಾ ಅಜ್ಜಕಾನ ಭಾವ ‘ಅಭಾವ’ ಹೇಳುದರ ಬಿಟ್ಟು ಬೇರೆಂತ ಸುದ್ದಿ ಹೇಳ್ತದು ಗ್ರೇಶಿದಿರೋ.
ಆಟ ಶುರುವಾಯೆಕ್ಕಾದರೆ ಪೀಠಿಕೆ ಬೇಡದಾ ಹೇಳುಗು ಮುಳಿಯ ಭಾವ.

ನಮ್ಮ ಶ್ರೀ ಅಕ್ಕ, ಶಾಂತತ್ತೆ ಏವತ್ತು ಪರಂಚುಗು ಅಜ್ಜಕಾನ ಭಾವಂಗೆ.
ಎಂತೆಂತದೋ ವಿಶಯಂಗಳ ಬಗ್ಗೆ ಸರಿ ಇಲ್ಲೆ ಹೇಳಿ ಬರೆತ್ತ ಹೇಳಿಯೊಂಡು. ಬೈಗಳು ತಿಂದು ಸಾಕಾತು ಇದಾ, ಹಾಂಗೆ ಹೇಳಿ ಪೂರ್ತಿ ವಿಷಾಯಂತರ ಆಗ ಆತೋ.
ಬಟ್ಟ ಮಾವ ಒಂದು ವಿಷ್ಯ ಹೇಳಿದವಿದಾ ಮೊನ್ನೆ ಅಶೋಕೆಲಿ,. ಅದುವೇ ಇಂದ್ರಾಣ ವಿಷಯ. “ಅಶೋಕೆಲಿ ಪ್ಲಾಸ್ಟಿಕಿನ ಅಭಾವ”.

ಪ್ಲಾಸ್ಟಿಕ್ ಹೇಳಿರೆ ಒಂದು ಮಾರಿ, ಅದು ಅಭಾವ ಆದರೆ ಒಳ್ಳೆದನ್ನೆ. ಅದಕ್ಕೆ ಮೊದಲೇ ಹೇಳಿದ್ದು, ಈ ಸರ್ತಿ ವಿಷಯಾಂತರ ಆಯಿದು ’ಅಭಾವ’ಲ್ಲಿ ಹೇಳಿ.
ಪ್ಲಾಸ್ಟಿಕಿಂದ ಅಪ್ಪ ತೊಂದರೆಯ ಗಮನಿಸಿ ನಮ್ಮ ಗುರುಗೊ ಚಾತುರ್ಮಾಸ್ಯಾರಂಭಲ್ಲಿ ಒಂದು ಸಂಕಲ್ಪ ಮಾಡಿದ್ದವು. ಎಂತರ ಹೇಳಿರೆ “ಹಂತ ಹಂತವಾಗಿ ಪ್ಲಾಸ್ಟಿಕ್ ಮುಕ್ತ ಮಠ ಆಯೆಕ್ಕು ‘ನಮ್ಮಮಠ’ ಹೇಳಿ. ಹಾಂ
ಗೆ ಅಶೋಕೆಲಿ ಇದರ ಕಟ್ಟು ನಿಟ್ಟಾಗಿ ಜಾರಿಗೆ ತಪ್ಪಲೆ ಅಪ್ಪಣೆ ಮಾಡಿದ್ದವು” ನವಗೆ. ನಾವೆಲ್ಲ ಆ ಕಾರ್ಯಲ್ಲಿ ಕೈಜೋಡಿಸೆಕ್ಕಿದಾ.. ಒಟ್ಟಿಂಗೆ ಇದ್ದಿರನ್ನೆ?
ಅದು ನಮ್ಮ ಜೆವಾಬ್ದಾರಿಯೂ ಅಪ್ಪು.

೨.ವಸ್ತ್ರದ ಚೀಲ

ಈ ಪ್ಲಾಸ್ಟಿಕ್ ನೀಷೇಧದ ಸುದ್ದಿ ನವಗೆ ಮೊದಲೆ ಗೊಂತಿಲ್ಲೆ ಇದಾ, ಗುರಿಕ್ಕಾರ್ರಿಂಗೆ ಹೇಳುಲು ಮರದ್ದಡ.
ಹಾಂಗೆ ಅಲ್ಲಿ ಹೋಗಿಪ್ಪಗ ಸಿಕ್ಕಿದ ಕೆಲವು ಸುದ್ದಿಗಳ ತಿಳ್ಸುತ್ತೆ ಈಗಾ.

 • ಮಾಸ್ಟ್ರುಮಾವಂಗೆ ಎಲೆ ತೊಟ್ಟೆ ಹೇಂಗೆ ಹೆರ ತೆಗವದು ಹೇಳಿ ತಲೆಬೆಶಿ – ಅದಿಲ್ಲದ್ರೆ ಆಗ ಇದಾ ಅವಕ್ಕೆ, ನವಗೆ ಸುದ್ದಿಗಳೂ ಸಿಕ್ಕ.
 • ನಮ್ಮ ಕಾಂತಿಲ  ಕೇಟಿಮಾವ ಇದ್ದವನ್ನೆ ಕೊಡೆಯಾಲಲ್ಲಿ, ಅವು ಮಾಪಲತೋಟದ ಅತ್ತೆಗೆ ಪರಂಚಿಕೊಂಡಿತ್ತವು – ತೊಟ್ಟೆಲಿಪ್ಪ ಶಾಲು ತೆಗೆವಗ ‘ಪರಪರ‘ ಶೆಬ್ದ ಮಾಡಿದ್ದಕ್ಕೆ.
  ಬೊಳುಂಬು ಮಾವಂಗು ಹೇಳಿದವಡಾ, ಪ್ಲಾಸ್ಟಿಕ್ ನಿಷೇಧ ಮಾಡಿದ್ದು ಒಳ್ಳೆದಾತು. ನಮ್ಮ ಕೊಡೆಯಾಲಲ್ಲೂ ಮಾಡ್ಸೆಕು ಹೇಳಿ, ಮೊನ್ನೆ ಸಿಕ್ಕಿಪ್ಪಗ ಹೇಳಿದವು.
 • ಬಟ್ಟ ಮಾವಂಗೆ ಸಮ್ಮಾನಲ್ಲಿ ಸಿಕ್ಕುವ ಶಾಲು ಎಲ್ಲಿ ಮಡಗುದು ಹೇಳಿ ಬೆಶಿ, ಅವಕ್ಕೆ ಶಾಲಿನೊಟ್ಟಿಂಗೆ ವಸ್ತ್ರದ ಚೀಲವು ಕೊಟ್ಟಪ್ಪಗ ಕೊಶಿ ಆತು! ( ಪಟಲ್ಲಿ ಇದ್ದು )
 • ಸುಂಗೊಳ್ಳಿಮನೆ ಸುಬ್ಬಣ್ಣಂಗೆ, ಅವರ ಕಾರ್ಯಕರ್ತರಿಂಗೆ ಕೆಲಸ ಇಲ್ಲೆ ಹೇಳಿ ಬೆಶಿಯಾದರೆ, ಎಡಪ್ಪಾಡಿ ಅಣ್ಣಂಗೆ ಕೊಶಿ ನಾಕು ಜೆನ ಕಮ್ಮಿ ಸಾಕು ಹೇಳಿ.
 • ಮಿರ್ಜಾನದ ಗಣೇಶಣ್ಣಂಗೆ ಪ್ಲಾಸ್ಟಿಕ್ ಅಲ್ಲಿ ಹಾಕೆಡಿ ಹೇಳ್ತದು ಇಲ್ಲದ್ದೆ ರೆಜಾ ವಿಶ್ರಾಂತಿ ಸಿಕ್ಕುತ್ತಡಾ ಐನೂರಕ್ಕಿಂತಲೂ ಹೆಚ್ಚು ಜೆನ ಸೇರಿರೂ.
 • ಸುಮಾರು ಜೆನಕ್ಕೆ ಪ್ರಸಾದದ ತೆಂಗಿನಕಾಯಿ ಹೇಂಗೆ ತೆಕ್ಕೊಂಡೊಪದು ಹೇಳಿ ಮಂಡೆಬೆಶಿ.
 • ಶುಭತ್ತೆ ಮಗಂಗೆ ಗೋಕರ್ಣಕ್ಕೆ ಹೋದರೆ  ಪ್ಲಾಸ್ಟಿಕ್ ತೊಟ್ಟೆಲಿ ಹಾಲು ಹೇಂಗೆ ಸಿಕ್ಕುತ್ತೋ (ಒಪ್ಪಣ್ಣ ಅಂದೇ ಸುದ್ದಿ ಹೇಳಿದ್ದ: ಸಂಕೊಲೆ )
 • ಗಣೇಶ ಮಾವಂಗೆ ಇರುಳಾಣ ಊಟಕ್ಕೆ ಚಪಾತಿ (ಹೊತ್ತಪ್ಪಗಳೆ ಹೆರಡುದು ಹೇಳಿ ಮೊದಲೆ ನಿಶ್ಚಯ ಆಗಿತ್ತು) ಕಟ್ಟುದು ಹೇಂಗೆ ಹೇಳ್ತ ತಲೆ ಬೆಶಿ.
 • ಅಚೆಕರೆ ದೊಡ್ಡಣ್ಣಂಗೆ ಕೊಡೆಯೆ ಪ್ಲಾಸ್ಟಿಕಿನ ಒಳ ಹುಗ್ಗುಸುದು ಹೇಂಗೆ ಹೇಳ್ತದು ಚಿಂತೆ.
 • ಶ್ರೀ ಅಕ್ಕಂಗೆ ಕುಂಕುಮಾರ್ಚನೆ ಮಾಡ್ಲಪ್ಪಗ ಸಜ್ಜಿಗೆ ತೊಟ್ಟೆಲಿ ಮಡಗಿದ ಲಲಿತಾಸಹಸ್ರನಾಮ ಪುಸ್ತಕ ತೆಗವದು ಹೇಂಗೆ ಹೇಳ್ತ ಬೆಶಿ.

ಇನ್ನೂ ಪಟ್ಟಿ ಬೆಳೆಗು. ಸದ್ಯಕ್ಕೆ ಇಷ್ಟು ಸಾಕು ಕಾಣ್ತು.

ಪ್ಲಾಸ್ಟಿಕ್ ನಮ್ಮ ಜೀವನಲ್ಲಿ ಹೇಂಗೆ ಸೇರಿ ಹೋಯಿದು ಹೇಳ್ತದರ ಆನು ಇಲ್ಲಿ ಹೇಳಿದ್ದು.
ಅದು ನಮ್ಮ ಆರೋಗ್ಯಕ್ಕೆ, ಪರಿಸರಕ್ಕೆ ಒಳ್ಳೆದಲ್ಲ. ಅದರ ಉಪಯೋಗವ ಕಮ್ಮಿ ಮಾಡುವ ಆಗದೋ.
ನಮ್ಮ ಅರೋಗ್ಯ, ಪರಿಸರ ‘ಅಭಾವ’ ಆಗದ್ದೆ ಮುಂದಂಗು ಸುಖವಾದ ಜೀವನ ನಡ್ಸುತ್ತ ಹಾಂಗೆ ಅಪ್ಪಲೆ ನಮ್ಮ ಸಹಕಾರ ನೀಡುವೊ ಆಗದೋ.

ನಿಂಗಳ ಪ್ರೀತಿಯ,

ಅಜ್ಜಕಾನ ಭಾವ
ajjakana.bhava@gmail.com

ಅಶೋಕೆಲಿ ಪ್ಲಾಸ್ಟಿಕಿನ ಅಭಾವ, 4.6 out of 10 based on 7 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 44 ಒಪ್ಪಂಗೊ

 1. ನೆಗೆಗಾರ°

  ಹೀಂಗುದೇ ತೊಟ್ಟೆ ನಿಶೇದ ಮಾಡಿರೆ ಬಟ್ಯ° ಎಂತರ ಮಾಡುದು, ಪಾಪ! 😉

  [Reply]

  ಬಟ್ಯ Reply:

  ಕುಪ್ಪಿ!

  [Reply]

  VA:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಬಟ್ಯಂಗೆ ಕರಟ ಇದ್ದನ್ನೆ ನೆಗೆ ಬಾವ.. ಮೊದಲು ತೊಟ್ಟೆ ಇತ್ತೋ.. ಕೇಳು ಅದರತ್ರೆ….

  [Reply]

  VN:F [1.9.22_1171]
  Rating: 0 (from 0 votes)
 2. ಮೋಹನಣ್ಣ
  Krishnamohana Bhat

  ellora pratikriye noodi tumba khushi aatu.Batyange kuppiyo karatavo entadu aavuttu adara ola eppa vastuvinge bele navagaadara haangalla ola enta elladru akku chila ondu chenda ereku hangaagi plastic thotte akku heli tirmaana tekkondidu.Anu chila elladde hodare kelavu janengokke samshaya battu eva Mohanannane appo allado heli.Atri Book Centerina Ashoka Bhavana haange kadak eppale kaltare ella sari akku.alli chila kondodaru kondogadru katti koduva sampradaaya elle doddake board haakiddavu baruvaaga sanchi tarbeku heli.Vyaapaara hoodaru plastic totteli pustaka haaki kodtaville.ennu baachanige bagye bareyaddre tappakku modalella kombinaddo maraddo baachanigago mathe bandadu eegaana baachanigago.tatkaalakke este.oppangalottinge.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಮಾವ

  ಅಜ್ಜಕಾನ ಭಾವನ “…. ಅಭಾವ” ಲೇಖನ ಲಾಯಕಿತ್ತು. ವಸ್ತು ವಿಷಯವ ವಿವರಿಸುತ್ತಾ ಪ್ಲಾಸ್ಟಿಕ್ ತೊಟ್ಟೆಯ ವಿವಿಧ ಅವತಾರಂಗಳನ್ನೂ ಹೇಳಿದ್ದ. ಅವನ ಕಲ್ಪನೆಯೂ ಲಾಯಕಿತ್ತು. ಇದು ಬೈಲಿಲ್ಲಿ ಮಾತಾಡ್ಳೆ ಒಳ್ಳೆ ಒಂದು ವಿಷಯ ಖಂಡಿತ. ಈ ರೀತಿಯಾಗಿ ಆದರೂ ಎಲ್ಲೋರಿಂಗು ಪ್ಲಾಸ್ಟಿಕ್ಕಿನ ಬಗ್ಗೆ ಬೇಜಾರು ಬಂದು ಅದರ ಸಹವಾಸ ಕಡಮ್ಮೆ ಆಗಲಿ ಹೇಳಿ ಆಶಿಸುತ್ತೆ. ಶರ್ಮಪ್ಪಚ್ಚಿಯ ವಿವರವಾದ ಲೇಖನ ಬರಲಿ. ಈ ಸಂದರ್ಭಲ್ಲಿ ಅಜ್ಜಕಾನದ ಭಾವನ ಲೇಖನಕ್ಕೆ ಪೂರಕವಾಗಿ ಎನ್ನದೊಂದು ಸಣ್ಣ ಚುಟುಕು ಹಾಕಿದ್ದೆ. ಓದಿ ಹೇಂಗಿದ್ದು ಹೇಳಿ.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಮಾವ ನಿಂಗೊಳ ಚುಟುಕು ಸಾಂಧರ್ಬಿಕವಾಗಿ ಲಾಯ್ಕಲ್ಲಿ ಬೈಂದು..
  ನಿಂಗೊ ಹೇಳಿದ “ಒಂದು ಪ್ಲಾಸ್ಟಿಕ್ ತೊಟ್ಟೆಯ ಸುತ್ತ” ವು ನೆಂಪಾವುತ್ತು..
  ಇದಾ ಇಲ್ಲಿ ಒತ್ತಿರೆ ಸಿಕ್ಕುತ್ತು.. http://oppanna.com/lekhana/%E0%B2%92%E0%B2%82%E0%B2%A6%E0%B3%81-%E0%B2%AA%E0%B3%8D%E0%B2%B2%E0%B2%BE%E0%B2%B8%E0%B3%8D%E0%B2%9F%E0%B2%BF%E0%B2%95%E0%B3%8D-%E0%B2%A4%E0%B3%8A%E0%B2%9F%E0%B3%8D%E0%B2%9F%E0%B3%86%E0%B2%AF

  ಮತ್ತೆ ಕೇಟಿ ಮಾವ ಇದರ ಓದಿ ಬೈದ್ದವಿಲೆನ್ನೆ ಅಜ್ಜಕಾನ ಭಾವನ..

  [Reply]

  ಬೊಳುಂಬು ಮಾವ°

  ಗೋಪಾಲ ಮಾವ Reply:

  ಎನ್ನ “ಒಂದು ಪ್ಲಾಸ್ಟಿಕ್ ತೊಟ್ಟೆಯ ಸುತ್ತ” ಕಥೆಯ ಪುನ: ನೆಂಪು ಮಾಡಿದ್ದಕ್ಕೆ ಧನ್ಯವಾದಂಗೊ.
  ಕೇಟಿ ಮಾವಂಗೆ ಅವರ ಸುದ್ದಿ ಬರದ್ದಕ್ಕೆ ಭಾರೀ ಕೊಶಿ ಆತು. ಅಜ್ಜಕಾನ ಭಾವಂಗೆ ಎನ್ನ ನೆಂಪಾದ್ದು ಸಾಕು ಹೇಳಿದವು ಅವು. ಒಪ್ಪಣ್ಣನ ಅಭಿಮಾನಿ ಬಳಗಲ್ಲಿ ಅವೂ ದೆ ಒಬ್ಬ.

  [Reply]

  VA:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ

  ಅಜ್ಜಿಗೆ ಉಂಡ್ಳಕಾಳು, ಚಕ್ಕುಲಿ, ಹಪ್ಪಳ ಎಲ್ಲ ಕಟ್ಟಿಕೊಡ್ಳೆ ಎಂತರ ಮಾಡುದೂಳಿ ಮಂಡೆಬೆಶಿ. ಗುರಿಕ್ಕಾರ್ರ ಹತ್ತರೆ ವಸ್ತ್ರದ ಪ್ಯಾಕೆಟ್ ಮಣ್ಣ ತಂದುಕೊಡ್ಳೆ ಹೇಳೆಕ್ಕಷ್ಟೆ. ಎನ್ನತ್ರ ಹೇಳ್ಳೇಳಿದವು.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  {ಅಜ್ಜಿಗೆ ಉಂಡ್ಳಕಾಳು, ಚಕ್ಕುಲಿ, ಹಪ್ಪಳ ಎಲ್ಲ ಕಟ್ಟಿಕೊಡ್ಳೆ ಎಂತರ ಮಾಡುದೂಳಿ ಮಂಡೆಬೆಶಿ}
  ಅದಾ.. ಅಜ್ಜಿಯ ಸದ್ಯ ಕಂಡಿದಿಲ್ಲೆ ಇದಾ ಹಾಂಗೆ ನೆಂಪಯಿದಿಲ್ಲೆ..
  ಗುರಿಕ್ಕಾರ್ರು ಹಾಳೆ ಡಬ್ಬಿ ಫ್ಯಾಕ್ಟರಿ ಮಾಡ್ತ ಅಂದಾಜಿಲಿ ಇದ್ದವಡಾ..

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  @ಗುರಿಕ್ಕಾರ್ರು:
  ನಾವು ಹಾಕಿದ ಕಮೆಂಟಿನ ನವಗೆ (ಹಾಕಿದವಕ್ಕೇ) ಮಾರ್ಪಾಡು ಮಾಡುವ ಹಾಂಗೆ ಅಥವಾ ಅಳಿಸಿ ಹಾಕುವ ವೆವಸ್ತೆ ಮಾಡ್ಲೆ ಎಡಿಗಾ?

  [Reply]

  ಗುರಿಕ್ಕಾರ°

  ಗುರಿಕ್ಕಾರ° Reply:

  ಶರ್ಮಪ್ಪಚ್ಚಿಗೆ ನಮಸ್ಕಾರ ಇದ್ದು.

  ಅತ್ಯಪೂರ್ವ ಸಲಹೆ ಒಂದರ ಕಂಡು ತುಂಬಾ ಕೊಶಿ ಆತು,
  ಬೈಲಿನ ಗುಣಮಟ್ಟ ಬೆಳೆಶಲೆ ನಿಂಗಳ ಶ್ರಮ ಎಂಗೊಗೆ ಕಂಡೋಂಡೇ ಇದ್ದು. ಸಂತೋಷ ಆವುತ್ತು.

  ಈ ಸಲಹೆಯನ್ನುದೇ ನಮ್ಮ ಬೈಲಿನ ಅತ್ಯಂತ ಪ್ರಮುಖ ಸಂಗತಿಯಾಗಿ ಪರಿಗಣಿಸಿತ್ತು. ಪಿರಿ ಸಿಕ್ಕೆಕ್ಕಾರೆ ರಜಾ ಹೊತ್ತಾತು, ಹಾಂಗಾಗಿ ತಡವಾತು ಅಷ್ಟೆ.
  ಈಗ ಒಬ್ಬ ಹಾಕಿದ ಒಪ್ಪವ ಸ್ವತಃ ಅವಂಗೇ ತಿದ್ದಲೆ / ಉದ್ದಲೆ ಎಡಿತ್ತು – ಹತ್ತು ನಿಮಿಷದ ಒಳದಿಕೆ.
  ಸಲಹೆಗೊ ಬತ್ತಾ ಇರಳಿ.
  ಹರೇರಾಮ.

  [Reply]

  VA:F [1.9.22_1171]
  Rating: +1 (from 1 vote)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಧನ್ಯವಾದ ಗುರಿಕ್ಕಾರ್ರೇ.
  ಪೋಸ್ಟ್ ಮಾಡಿ ಅಪ್ಪಗ ಎಂತಾರೂ ತಪ್ಪು ಹೇಳಿ ಕಂಡರೆ ಸರಿಪಡುಸಲೆ ಒಂದು ಒಳ್ಳೆ ಅವಕಾಶ. ಇದರ ದುರುಪಯೋಗ ಆಗದ್ದೆ ಸದುಪಯೋಗ ಆಗಲಿ ಹೇಳುವದೇ ಎನ್ನ ಆಶಯ.

  [Reply]

  VA:F [1.9.22_1171]
  Rating: 0 (from 0 votes)
 7. premalatha

  ಎನ್ನದೊಂದು ಪ್ರತಿಕ್ರಿಯೆ ಇರಲಿ, ರಜ ತಡವಾದರುದೆ!

  ಅದೂ………
  ಎಲ್ಲೋರು ಚೆಂದಕೆ ಭಾಗವಹಿಸುತ್ತವು, ನಿನ್ನ ಬೈಲಿಲಿ..
  ಖುಷಿ ಆವ್ತು ಓದಲೆ..ತೊಟ್ಟೆ ಪರಪರ… :)

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಕೊಶಿ ಆತು ನಿಂಗಳ ಒಪ್ಪ ನೋಡಿ.. ಬೈಲಿನ ಎಲ್ಲಾ ಒಪ್ಪಂಗಳ ಓದಿ ಒಪ್ಪ ಕೊಡ್ತಾ ಇರಿ..
  ಅದಾ ಮರು ಹೋಗಿತ್ತು ಪಟ್ಟಿಲಿ ಬರವಲೆ ಈಗ ಸೇರ್ಸುತ್ತೆ..
  ಪ್ರೇಮಲತಕ್ಕಂಗೆ ಸಂಗೀತ ಹೇಳುಲಪ್ಪಗ ತೊಟ್ಟೆಲಿಪ್ಪ ಪದ್ಯ ಪದ್ಯ ಪುಸ್ತಕ ತೆಗೆವಾಗ ಪರಪರ ಶಬ್ದ ಆದರೆ ಎಂತ ಮಡುದು ಹೇಳಿ ಯೋಚನೆ..!

  [Reply]

  VN:F [1.9.22_1171]
  Rating: 0 (from 0 votes)
 8. premalatha

  ಊಹೂ0… ಆ ಯೋಚನೆ ಎನಗಿಲ್ಲೆ, ಪ್ಲಾಸ್ಟಿಕ್’ಲಿ ಪುಸ್ತಕ ತೆಕ್ಕೊಂಡುಹೋಪ ಅಭ್ಯಾಸ ಯಾಕೋ ಇಲ್ಲೆ, ಮೊದಲಿಂದಲೂ..
  ಇದ್ದರೆ, ರೆಕ್ಸಿನ್ ಬ್ಯಾಗ್ ಇರ್ತು. ಆದರೆ ಬಡೆಕ್ಕಿಲ ಮನೆಂದ ಹಲಸಿನ ‘ಸೊಳೆ ಹೊರುದ್ದು’ ( ಹೊಳೆ ಸೊರುದ್ದು! – ಅದೆನ್ನ ಮೈದುನನ ಭಾಷೆ!! :) )ಬೆಂಗ್ಳೂರಿನ್ಗೆ
  ಬಪ್ಪದಾದರೆ ‘ತೊಟ್ಟೆ’ಲೇ! – ಕ್ರಿಸ್ಪ್ ಇರೆಕಲ್ಲದಾ… ಅದಕ್ಕೆಂತ ಮಾಡುದೀಗ?

  [Reply]

  VA:F [1.9.22_1171]
  Rating: 0 (from 0 votes)
 9. ‘ರಾಮ’ರಾಜ್ಯಲ್ಲಿ ಪ್ಲಾಸ್ಟಿಕ್ ಇಲ್ಲೆಯಡ್ಡ…

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಧನ್ಯೋಸ್ಮಿ.
  ‘ರಾಮ’ರಾಜ್ಯದ ಪುನ:ನಿರ್ಮಾಣದ ಕನಸು ನನಸಪ್ಪಲ್ಲಿ ಮಾರ್ಗದರ್ಶನದ ಕೃಪೆಯೂ ಇರಲಿ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಕೇಜಿಮಾವ°ಪೆರ್ಲದಣ್ಣಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ಅಕ್ಷರ°ಮುಳಿಯ ಭಾವಹಳೆಮನೆ ಅಣ್ಣವಿಜಯತ್ತೆಬೊಳುಂಬು ಮಾವ°ಡಾಗುಟ್ರಕ್ಕ°ಕಳಾಯಿ ಗೀತತ್ತೆಚುಬ್ಬಣ್ಣಅನುಶ್ರೀ ಬಂಡಾಡಿನೀರ್ಕಜೆ ಮಹೇಶಅನು ಉಡುಪುಮೂಲೆವಿದ್ವಾನಣ್ಣಚೂರಿಬೈಲು ದೀಪಕ್ಕಪಟಿಕಲ್ಲಪ್ಪಚ್ಚಿಬಂಡಾಡಿ ಅಜ್ಜಿರಾಜಣ್ಣಬಟ್ಟಮಾವ°vreddhiಕೆದೂರು ಡಾಕ್ಟ್ರುಬಾವ°ಒಪ್ಪಕ್ಕಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ