ಬೆಂಗಳೂರು ಪೇಟೆಲಿ ಜಾತ್ರೆಯ ಗೌಜಿಗಿಲ್ಲೆ ಅಭಾವ

ಗುರುಗಳೊಟ್ಟಿಂಗೆ ಸಭೆ ಹೊರನಾಡಿಲಿ

ಮೊನ್ನೆ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಗುರಿಕ್ಕಾರ್ರ ದೂರವಾಣಿ ಕರೆ, ಸುಮ್ಮನೆ ಮಾಡ್ತವಿಲ್ಲೆ. ಏನೋ ದೊಡ್ಡ ಕೆಲಸ ಇದ್ದರೆ ಮಾಂತ್ರ ಬಪ್ಪದು. ಎಂತ ಕೇಳಿಯಪ್ಪಗ ಗುರುಗಳ ಆದೇಶ ಆಯಿದು ಇಂದೇ ಹೊಯೆಕ್ಕಡ, ಬೇಗ ಹೆರಡು,  ಎಂಟು ಗಂಟೆಗೆ ಬತ್ತೆ. ಅಷ್ಟೆ, ಇಲ್ಲೆ ಹೇಳ್ತ ಪ್ರಶ್ನೆಯೆ ಇಲ್ಲೆ.  ಇರುಳು ಹೆರಟತ್ತು, ಹೊರನಾಡಿನ ಕಡೆಂಗೆ. ಉದಿಯ ಕಾಲಕ್ಕೆ ತಲುಪಿ ಅನ್ನಪೂರ್ಣೆಯ ದರುಶನ ಮಾಡಿ, ಮಹಾಪ್ರಸಾದ ಸೇವಿಸಿ, ಗುರು ಸ್ಥಾನಕ್ಕೆ ಹೋತು. ಅಲ್ಲಿ ಎಡಪ್ಪಾಡಿ ಅಣ್ಣ, ಉಳುದವು ಸೇರಿಯೊಂಡವು. ಸಭೆ ಸೇರಿತ್ತು. ಪೂರ್ತಿ ಆಯಿದಿಲ್ಲೆ ತೀರ್ಥಹಳ್ಳಿಗೆ ಬರೆಕ್ಕು ಹೇಳಿ ಆದೇಶ ಆತು. ಅಲ್ಲಿಂದ ಹೊತ್ತಪ್ಪಗ ಹೆರಟು ತೀರ್ಥಹಳ್ಳಿಗೆ ತಲುಪಿತ್ತು. ಸುಂದರ ಪರಿಸರ, ತುಂಗಾ ತೀರ ಈ ಸುದ್ದಿಯ ಒಪ್ಪಣ್ಣಾ ಹೇಳುಗು, ಅವನೂ ಇತ್ತಿದ್ದ ಎಡೆಕ್ಕಿಲಿ. ಇರುಳಿಂಗೆ ಬೇಟಿ ಇಲ್ಲೆ, ಹಾಂಗೆ ಪೂಜೆ ನೋಡಿ ಉಂಡು ಮಲಗಿದೆಯ.

ಉದೆಕಾಲಕ್ಕೆ ಎದ್ದು ತುಂಗಾ ತೀರಕ್ಕೆ ಮೀವಲೆ ಹೆರಟಪ್ಪಗ ಬೈಗಳು ಸಿಕ್ಕಿತ್ತಿದಾ ಎಡಪ್ಪಾಡಿ ಅಕ್ಕನದ್ದೂ, ಅಜ್ಜಮನೆ ಪುಳ್ಳಿದೂ. ಹಿಂದೆ ಬಂದು ಶುಬ್ರ ಆಗಿ ಪೂಜೆ ನೋಡುಲೆ ಮುಂದಂಗೆ ಕೂತೆಯ. ಸುಮಾರು ಸರ್ತಿ ನೋಡಿದ್ದು ಶ್ರೀ ಕರಾರ್ಚಿತ ಪೂಜೆಯಾ, ಆದರೆ ಅಂದು ವಿಶೇಷ ಕಂಡತ್ತು. ಯೇಕೋ ಊರ ಹೂಗಳ ಮಧ್ಯೆ ಶ್ರೀ ಕರಾರ್ಚಿತ ದೇವರುಗೋ ಬಹುಸುಂದರ ಕಂಡತ್ತು.. ತುಂಬಾ ಹೂಗುಗೊ ಈಗ ಕಾಂಬಲೇ ಸಿಕ್ಕುದು ಅಪರೂಪ. ಅದರ ಬಗ್ಗೆ ಮುಂದಾಣ ಅಭಾವಲ್ಲಿ ಬರೆತ್ತೆ. ಮತ್ತೆ ಬೇಟಿ ಮುಗುಶಿ ಊರಿಂಗೆ ಹೆರಟೆಯಾ. ಅದಾ ಎಡಪ್ಪಾಡಿ ಬಾವ ಬಿಡಲೇ ಬಿಡಾ ನೀನು ಬೆಂಗಳೂರಿಂಗೆ ಬಾ ಹೇಳಿಯೊಂಡು. ನವಗೂ ಪೆರ್ಲದಣ್ಣನತ್ರ ರಜಾ ಕೆಲಸ ಇತ್ತು, ಹೆರಟತ್ತು ಒಟ್ಟಿಂಗೆ.

ಕಡಲೆ / ಶೇಂಗಾ

ಸುಂದರ ವಾತಾವರಣಂದ ಗೌಜಿಯ ಗೋಜಿಂಗೆ ಬಂದತ್ತು. ಪುಣ್ಯಕ್ಕೆ ೪ ಗಂಟೆಗೆ ಎಡಪ್ಪಾಡಿ ಬಾವನ ಮನೆ ತಲುಪಿದೆಯ. ರಜಾ ಒರಗಿ ನಿತ್ಯಕಾರ್ಯ ಮುಗುಶಿಯಪ್ಪಗ ಎಡಪ್ಪಾಡಿ ಅಕ್ಕ ಬೆಶಿ ಬೆಶಿ ಕಾಪಿಯುದೇ, ಹುಳಿದೋಸೆಯುದೇ ಮಾಡಿತ್ತಿತ್ತು. ಗಡದ್ದಿಲಿ ತಿಂದೆ, ಅದರಲ್ಲಿ ಕಮ್ಮಿ ಮಾಡಿರೆ ನವಗೆ ಲೋಸು ಹೇಳಿ ಸಮೋಸ ಕಳ್ಸುಗು ದೊಡ್ಡ ಭಾವ, ಗಬ್ಲಕ್ಕ ಅಣ್ಣಂಗೆ. ಮಧ್ಯಾಹ್ನಕ್ಕೆ ಪೆರ್ಲದಣ್ಣನ ಓಪಿಸಿಂಗೆ ಹೋಗಿ ನಮ್ಮ ಕೆಲಸದ ಚರ್ಚೆ ಮಾಡಿತ್ತು. ಎಡೆಕ್ಕಿಲಿ ರಾಜಕೀಯವುದೇ ಬಂತು. ಅವ° ಅವಾಗವಾಗ ಲೇಪುಟಾಪಿಲಿ ಟಿ. ವಿ. ನೋಡುತ್ತದು ಕ್ರಮ, ಹಾಂಗೆ ಹೇಳಿದ ಈ ಪ್ರತಿಮಕ್ಕನ ಇವು ಜಾತ್ರೆಗೆ ಕಳ್ಸಿದ್ದು ಉದಿಯಂದ ಒಂದೇ ಸಮನೆ ಹೇಳ್ತಾ ಇದ್ದು ಇಂದು ಕಡ್ಲೆ ತಿಂದರೆ ಪಿತ್ತ ಇಲ್ಲೆ ಹೇಳಿ.

ಕಡಲೆ ಬೇಶುದು

ಎಂತಪ್ಪ ವಿಶ್ಯ ಗೊಂತಿಲ್ಲದ್ದರೆ ಹೀಂಗೆ ಅಪ್ಪದು, ಈ ವಿಶ್ಯದ ಸಮೋಸವು ಬೈಂದಿಲ್ಲೆ ದೊಡ್ಡ ಬಾಂವಂದ. ಅವನತ್ರೆ ಕೇಳಿದೆ, ಇನ್ನು ಸ್ವಲ್ಪಹೊತ್ತಿಲೆ ಟಿ. ವಿ. ಅಕ್ಕ ಕತೆ ಹೇಳ್ತು ಹೇಳಿದ. ಸರಿ ಕಾದೊಂಡು ಕೂತತ್ತು ನಾವು. ನಮ್ಮ ಕೆಲಸ ಮುಗುದ ಮೇಲೆ  ಹೇಂಗೂ ಪ್ರೀ.. ಎಲ್ಲಿಯಾರು ಹೋಯೆಕ್ಕಾರೆ ಪೆರ್ಲದಣ್ಣ ಬರೇಕು. ದೊಡ್ಡ ಬಸವನ ದೇವಸ್ಥಾನ ಇಪ್ಪದು ಚಾಮರಾಜ ಬೇಟೆಯ ಬಸವನಗುಡಿಲಿಡ. ಬಸವ ಇಪ್ಪಕಾರಣವೇ ಬಸವನ ಗುಡಿ. ಐನೂರು ವರ್ಶಂಗಳಿಂದಲೂ ಹಿಂದೆ ಇಲ್ಲಿಯ ರೈತರು ಬೆಳೆಶಿದ ಕಡ್ಲೆಯ ಒಂದು ಮಾಯಾವಿ ಬಸವ ಬಂದು ತಿಂದೊಂಡಿತ್ತಡ. ಎಂತ ಮಾಡುದು ಹೇಳಿ ಜೆನಂಗೊ ಒಂದು ದೇವಸ್ಥಾನ ಕಟ್ಟಿ. ಸುರುವಾಣ ಪಸಲಿನ ಬಸವಂಗೆ ಕೊಡ್ತ ಕ್ರಮ ಅಡ. ದೊಡ್ಡ ಪೇಟೆ ಆದರೂ ಮುಂದುವರೆದ್ದು ಕ್ರಮ. ನೋಡೆಕ್ಕು ಅನಿಸಿ ಪೆರ್ಲದಣ್ಣಂಗೆ ಹೇಳಿದೆ, ಹೊತ್ತೋಪಗ ಹೋಪ ಹೇಳಿದ ಅವ°.

ಪೆರ್ಲದಣ್ಣ ಸಕ್ಕರೆ ಮಿಠಾಯಿ/ಚೌ ಚೌ ತೆಕ್ಕೊಂಬದು.

ಜೆನ - ಜಾತ್ರೆ

ಪೆರ್ಲದಣ್ಣನ ಬೈಕಿಲಿ ಮೆಟ್ರೊ ಅಪ್ಪ ಜಾಗೆ ದಾಟಿ, ಸುರಂಗ ಮಾರ್ಗ ಕಳುಶಿ ಮುಂದೆ ಬಪ್ಪಗ ಸಿಕ್ಕಿದ್ದು ಗಾಂಧಿ ಬಜಾರು. ಇಲ್ಲೆ ಬೈಕ್ ಇಟ್ಟು ಹೋಪ ಹೇಳಿದ ಅವ°. ಸರಿ ನೆಡಕ್ಕೊಡು ಹೋದ್ಸು ಮುಂದಂಗೆ ಐದು ಮಿನಿಟಿನ ದಾರಿ. ಯಬ್ಬೋ ಜೆನವೋ ಜೆನ ಪುತ್ತೂರು ಮಾಲಿಂಗೇಶ್ವರ ದೇವಸ್ಥಾನ ಜಾತ್ರೆಂದ್ರಲೂ ಬಲವೋ ಕಾಣ್ತು. ಇನೊಂದೊಡೆಲಿ ಕಡ್ಲೆ ಮಾರುತ್ತವು. ಹಾಂಗೆ ಜಾತ್ರೆ ಹೇಳಿರೆ ತಿಂಡಿಗೊ, ಆಟ ಸಾಮಾನು ಎಲ್ಲಾ ಇರೆಕ್ಕನ್ನೆ. ಎಲ್ಲಾ ನೋಡ್ತಾ ಬಸವನ ದರ್ಶನ ಮಾಡಿ ಬಂತು. ಕಡ್ಲೆ ತೆಕ್ಕೊಂಡತ್ತು, ಅಷ್ಟಪ್ಪಗ ಅಜ್ಜಿಮನೆ ಅಳಿಯ ಪೋನು ಮಾಡಿ ಎನಗೇ .. ಹೇಳಿ ರಾಗ ಎಳೆದ ಅವಂಗೂ ತೆಕ್ಕೊಂಡತ್ತು.

ಕೊಂಬಿನ ಮನುಷ್ಯ

ಮುಂದೆ ಹೋಪಗ ಕಂಡತ್ತದಾ.. ಸುಮಾರು ಜೆನಂಗಳ ಮಂಡೆಲಿ ಕೋಡುಗೊ. ಇದೆಂತರಪ್ಪ. ಮತ್ತೆ ಗೊಂತಾತು ಬಸವನ ಹಬ್ಬ ಅಲ್ಲದೋ. ಹಾಂಗೆ ಕೋಡು ಅಡಾ. ತಲೆಗೆ ಮಡಗುಲಡಾ. ಅಷ್ಟೊತ್ತಿಗೆ ಪೆರ್ಲದಣ್ಣ ನೆಂಪು ಮಾಡಿದ ಬಸ್ಸಿಂಗೆ ಹೊತ್ತಾತು ಹೇಳಿ. ಗಡಿಬಿಡಿಲಿ ಮೆಜೆಸ್ಟಿಕ್ಕಿಗೆ ಬಂದು ಬಸ್ಸು ಹತ್ತಿ ಊರಿಂಗೆ ಹೊರಟೆ. ಜಾತ್ರೆಯ ಗೌಜಿ ಅಷ್ಟು ದೊಡ್ಡ ಪೇಟೆಲಿ ಅಭಾವ ಆಯಿದಿಲ್ಲೆ ಹೇಳಿ ಯೋಚಿಸುತ್ತಾ ರಾಜಹಂಸ ಏರಿ ಒರಗಿದೆ.

ಅಜ್ಜಕಾನ ಭಾವ

   

You may also like...

6 Responses

 1. ಗೋಪಾಲ ಮಾವ says:

  ಯಬ್ಬಬ್ಬಬ್ಬ. ಅಜ್ಜಕಾನ ಭಾವ ಒಂದು ವಾರಲ್ಲಿ ಅಷ್ಟೆಲ್ಲ ಊರಿಂಗೆ ಟ್ರಿಪ್ಪು ಹಾಕಿ ಅಲ್ಯಾಣ ಸುದ್ದಿಗಳ ಎಲ್ಲ ವರದಿ ಮಾಡಿದ್ದು ಲಾಯಕಾಯಿದು. ಪೇಟೆಲಿ ನಿತ್ಯ ಜಾತ್ರೆ ಆದ ಕಾರಣ, ಜಾತ್ರೆಯ ಪ್ರಾಮುಖ್ಯತೆ, ಅದಕ್ಕೆ ಹೋದರೆ ಆವುತ್ತ ಕೊಶಿಯೇ ಕಡಮ್ಮೆ ಆವುತ್ತಾ ಇದ್ದು. ಸಂತೆ ಗೆದ್ದೆಲಿ ಅಪ್ಪನ ಒಟ್ಟಿಂಗೆ, ಗೆಳೆಯರ ಒಟ್ಟಿಂಗೆ ತಿರುಗಲೆ ಎಂತ ಮಜಾ ಅಲ್ಲದೊ ? ಹೇಳಿದ ಹಾಂಗೆ ಕಡೇಂಗೆ ಕಾಣ್ತ ಪಟಲ್ಲಿ ಅಲ್ಲಿ ರಾಶಿ ಹಾಕಿದ್ದದು, ಹೂಗೊ ? ಅಲ್ಲ ಕರು ಕುರು ಮಿಕ್ಸ್ಚರೊ ?

  • ಬೊಳುಂಬು ಮಾವಾ..
   ಕೊಶಿ ಆತು.. ಕಡೆ ಪಟಲ್ಲಿ ಎಂತರ ಕೇಳಿದ್ದಿ.. ಅರ್ಗೆಂಟಿಲಿ ಬರೆವಾಗ ಹೆಸರು ಕೊಡುಲೆ ಮರದ್ದು.. ಈಗ ಹೆಸರು .ಕೊಟ್ಟಿದೆ ಪಟದ ಮೇಲೆ ಒತ್ತಿ ನೋಡಿಕ್ಕಿ, ದೊಡ್ಡಕೆ ಕಾಣ್ತು.

 2. ಅಜ್ಜಕಾನ ಭಾವ೦ ಚೆ೦ದಕೆ ಚಿತ್ರಣ ಕೊಟ್ಟಿದ೦.ಆನು ಒ೦ದಾರಿ ಬಸವನಗುಡಿ ಜಾತ್ರಗೆ ಹೋಗಿದ್ದಿದ್ದೆ ಆದರೆ ಈ ಕತಗೊ ಎಲ್ಲಾ ಗೊ೦ತಿತ್ತಿಲ್ಲೆ.ಮನ್ನೆ ಹೊರನಾಡಿ೦ಗೂ ಬರೆಕಿತ್ತು ಆರೋಗ್ಯ ಸರಿ ಇಲ್ಲದ್ದೆ ಬಪ್ಪಲಾಯಿದಿಲ್ಲೆ.ಇರಲಿ ಲೇಖನ ಒಳ್ಳೆದಾಯಿದು.ಒಪ್ಪ೦ಗಳೊಟ್ಟಿ೦ಗೆ.

 3. ಶ್ರೀಶಣ್ಣ says:

  ಅಜ್ಜಕಾನ ಭಾವನ ಜಾತ್ರೆ ಗೌಜಿ ಓದಿ ಅಪ್ಪಗ, ಕುಂಬಳೆ ಬೆಡಿ ಜಾತ್ರೆಗೆ ಹೋಪಗಾಣ ಸಂಭ್ರಮ ನೆಂಪಾತು.
  [ಅರ್ಗೆಂಟಿಲಿ ಬರೆವಾಗ] -ಅರ್ಗೆಂಟ್ ಮಾಡಿದ್ದು ಎಂತಗೆ ಭಾವ? ಅದು ಸಣ್ಣ ಮಕ್ಕೊ ಅಲ್ಲದಾ ಅರ್ಗೆಂಟ್ ಮಾಡುತ್ಸು?

 4. ಅದೆಲ್ಲ ಸರಿ ನಿಂಗ ಕಡ್ಲೆ ಎಷ್ಟು ಸೇರು ತೆಕ್ಕೊಂಡಿದಿ?ಮತ್ತೆ ಕಡ್ಲೆ ತಿಂದು ಅಲ್ಲೇ ಮುಂದಾಣ ರೋಡ್ ಲಿ ಇಪ್ಪ ಕೇನ್ ವಾಲಾ ಹೇಳುವ ಕಬ್ಬಿಣ ಹಾಲಿನ ಅಂಗಡಿಗೆ ಹೋಗಿ ಜ್ಯೂಸು ಕುಡ್ಕೊಂಡು ಇತ್ತಿದ್ದೀರಡ…
  ಮತ್ತೆ ಎಂತ್ಸೂ ಆಯಿದಿಲ್ಲೆಯ?

 5. raghumuliya says:

  ಪ್ರಶಾಂತವಾದ ಸಾಗರ ದಡಕ್ಕೆ ಅಪ್ಪಳುಸುವ ತೆರೆಗಳ ನೆಂಪು ಮಾಡಿತ್ತು ಅಜ್ಜಕಾನ ಭಾವನ ಲೇಖನ.ಹೊರನಾಡು,ತೀರ್ಥಹಳ್ಳಿಲಿ ಗುರುಗಳ ಸಾನ್ನಿಧ್ಯಂದ ಜೆನಮರುಳೋ ಜಾತ್ರೆಮರುಳೋ ಹೇಳುವ ಬಸವನಗುಡಿಯ ಕಡಲೇಕಾಯಿ ಪರಿಸೆಗೆ..ಮತ್ತೆ ತೆರೆ ಸಮುದ್ರ ಮಧ್ಯಕ್ಕೆ ಹೋಪ ಹಾಂಗೆ, ಭಾವನ ಪ್ರಯಾಣ ಊರಿನ ಪ್ರಶಾಂತತೆಗೆ..ಆಹಾ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *