ಜೀವನ ರೂಪಿಸುವ ಶಿಕ್ಷಣದ ಅಭಾವ?

September 10, 2012 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 30 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಭಾವನ ಅಭಾವ ಆಯಿದು ಹೇಳಿ ಎಲ್ಲೋರು ಹೇಳಿಯೊಂಡಿತ್ತವು ಓ ಮನ್ನೆ ಚಾತುರ್ಮಾಸ್ಯಕ್ಕೆ ಹೋಗಿಪ್ಪಗ. ಅಪ್ಪು.. ನಾವು ರಜಾ ಅನ್ಯಕಾರ್ಯಲ್ಲಿ ಮುಳುಗಿದ್ದರಿಂದ ಇತ್ಲಾಗಿ ಬಂದದ್ದು ರಜಾ ಕಮ್ಮಿಯೇ. ಬರವದು ಹೇಳಿರೆ ರಜಾ ಜಾಸ್ತಿ ಸಮಯ ಬೇಕಾವ್ತಿದಾ. ಅದಕ್ಕೆ ಇಷ್ಟು ಸಮಯ ಬರವಲಾಗದ್ದದು. ಇರಳಿ, ಮತ್ತೆ ಬರವಲೆ ಶುರು ಮಾಡಿದ್ದು ಗುರು ಕೃಪೆಂದ.

ಅಬಾವ ಎಂತರ ಬರವದು ಹೇಳಿ ಯೋಚಿಸಿಯೊಂಡು ಓ.. ಮನ್ನೆ ಕೊಡೆಯಾಲಂದ  ಬೆಂಗಳೂರಿಂಗೆ  ರೈಲು ಹತ್ತಿತ್ತು. ಒಟ್ಟಿಂಗೆ  ಹಳೆಮನೆ ಅಣ್ಣ-ತಮ್ಮ, ಬೊಳುಂಬು ಮಾವ°, ಶರ್ಮಪ್ಪಚ್ಚಿ, ಆಚಕರೆಮಾಣಿ ಕೂದೊಂಡು ನಿದ್ದೆ ಬಪ್ಪನ್ನಾರ ಸುಮಾರು ಚೆರ್ಚೆ ಮಾಡಿತ್ತು. ಗುಣಾಜೆ ಮಾಣಿಯೋ ಇದ್ದಿದ್ದರೆ ನಿದ್ದೆಯೇ ಬತ್ತಿತ್ತಿಲ್ಲೆಯೋ ಏನೋ? ಎಡಕ್ಕಿಲಿ ಆಚಕರೆಮಾಣಿ ಅವನ ಪೂರ್ವಾಶ್ರಮಲ್ಲಿ ನೆಡದ ಒಂದು ಕಥೆ ಹೇಳಿದ°. ಅದು ನವಗೆ ಈಗ ಬೇಡ. ಅವನೇ ಹೇಳುಗು. ಆ ವಿಚಾರಂದ ನವಗೂ ಒಂದು ವಿಷಯ ಸಿಕ್ಕಿ ಅಭಾವ ಆದ್ದದರ ಹೇಳುಲೆ  ಸಿಕ್ಕಿತ್ತು.

ಹೆಚ್ಚು ಹಳೆಯ ಕತೆ ಅಲ್ಲ. ಹದಿನೈದು ವರ್ಷದ ಹಿಂದಿನ ನಮ್ಮ ಬದುಕಿನ ಬಗ್ಗೆ ನೆಂಪು ಮಾಡಿಗೊಳ್ಳಿ. ಅಂಬಗ ಬರವದು ನಿಂಗಳ ಅನುಭವಕ್ಕೆ ಬಕ್ಕು. ನಾವು ಅ, ಆ, ಇ, ಈ ಕಲಿವಲೆ ಹೋವ್ತಿತ್ತು. ಒಂದೋ ಎರಡು ವರ್ಷ ಬಾಲವಾಡಿಲಿ ಅಕ್ಷರಾಭ್ಯಾಸ ಆಟೋಟ ಎಲ್ಲ ಆಗಿ, ಪ್ರಾಥಮಿಕ ಶಾಲೆಲಿ ಒಂದರಿಂದ ಏಳು, ಪ್ರೌಡಶಾಲೆಲಿ ಎಂಟರಿಂದ ಹತ್ತು ಪದವಿ ಪೂರ್ವ ಕಾಲೇಜಿಲಿ ಪಿಯುಸಿ ಆಗಿ ದೊಡ್ಡ ಕಾಲೇಜಿಂಗೆ ಬಂತು. ಇದೆಂತ ಈಗಲೂ ಹಾಂಗೆ ಅಲ್ಲದೋ ಹೇಳಿ  ಗ್ರೇಶೆದಿ. ಅಪ್ಪು ಹಾಂಗೆ ಇಪ್ಪದು ಆದರೆ ಇದರ ಪ್ರಸ್ತಾಪ ಮಾಡಿದ್ದು ಏಕೆ ಹೇಳಿ ಮತ್ತೆ ಗೊಂತಕ್ಕು.

ಮಕ್ಕೊ ಶಾಲೆಗೆ ಹೋಪದು

ಅಂಗನವಾಡಿಗೊ, ಪ್ರಾಥಮಿಕ ಶಾಲೆಗೊ ಹೋಯೆಕ್ಕಾರೆ ಎರಡೋ, ಮೂರೋ ಮೈಲು ನಡದು ಬರೆಕ್ಕು. ಹಾಂಗೇಳಿ ಅದು ಸಮತಟ್ಟು ಜಾಗೆಯೂ ಅಲ್ಲ. ಗುಡ್ಡೆ ಹತ್ತಿ, ತೋಡು ದಾಂಟಿ, ಗದ್ದೆಪುಣಿ ಸವೆಸಿ ಅಡಕ್ಕೆ ತೋಟದ ಮಧ್ಯೆ ಸಾಗಿ ಬರೆಕು. ಅದೇ ಪ್ರೌಡಶಾಲೆಗೆ ನಾಲ್ಕೈದು ಮೈಲಿ ನಡಕ್ಕೊಂಡು ಹೋಯೆಕ್ಕು. ಪಿಯುಸಿಗೆ ಹೋಪವ ಹತ್ತು-ಹದಿನೈದು ಮೈಲಿ ಬಸ್ಸಿಲಿ ಹೋಯೆಕು. ಇರಲಿ, ಅದೇ ಈಗ ಕಳುದ ನಾಲ್ಕೈದು ವರ್ಷಗಳ ವರ್ತಮಾನ ನೋಡುವೋ°.. ಮನೆ ಜಾಲಿಂದ ಮಾರ್ಗದ ಕರೆವರೆಂಗೆ ಅಪ್ಪನೋ, ಅಮ್ಮನೋ, ಅಣ್ಣನೋ ಸ್ಕೂಟರಿಲಿಯೋ ಬೈಕಿಲಿಯೋ ತಂದು ಬಿಡೇಕು. ಅಲ್ಲಿಂದ ಸ್ಕೂಲ್ ಬಸ್ಸಿಲಿ ಹೆರಟರೆ, ಶಾಲೆ ಜಾಲಿಲಿಯೇ ಇಳಿವದು. ಹೋತ್ತೋಪಗ ಪುನಾಂತಿರುಗಿ ಬಸ್ಸಿಲಿ ಮಾರ್ಗಕರೇವರೆಂಗೆ ಬಂದರೆ ಅಲ್ಲಿಂದ ಸ್ಕೂಟರಿಲಿ ಮನೆಗೆ ಬಪ್ಪದು.

ಕಾಲ ಬದಲಾಯಿದು. ವ್ಯವಸ್ಥೆ ಅನುಕೂಲ ಹೆಚ್ಚಾಯಿದು. ಅದರ ನಾವು ಒಪ್ಪುತ್ತು. ಆದರೆ ಈ ಎರಡು ವ್ಯವಸ್ಥೆಗಳ ಸರಿಯಾಗಿ ಗಮನಿಸಿ ನೋಡಿ. ಹಿಂದೆ ನೆಡಕ್ಕೊಂಡು ಹತ್ರಾಣ ಮನೆ ಮಕ್ಕಳೊಂದಿಗೆ ಪುಂಡಾಟ ಮಾಡಿಯೊಂದು ದಾರಿಲಿ ಸಿಕ್ಕುವ ನೇರಳೆಯೋ, ಪೇರಳೆಯೋ ತಿಂದೊಂಡು ಬೀಜದ ಹಣ್ಣಿಂಗೆ ಕಲ್ಲು ಹೊಡಕ್ಕೊಂಡು, ತೋಡಿಗಿಳುದು ಇನ್ನೊಂದು ದಡಲ್ಲಿಪ್ಪ ಕೇದಗೆಯ ಕೊಯ್ಕೊಂಡು ಕಟ್ಟಲ್ಲಿ ನೀರಿಪ್ಪಗ ನೀರ್ಕಪ್ಪೆ ಆಡಿಯೊಂಡು ಬಂದೊಂಡಿತ್ತು. ಆದರೀಗ ಇದೂ ಏವದೂ ಇಲ್ಲೆ. ಈ ಪುಂಡಾಟಂದ ನಾವು ಹಲವು ರೀತಿಯ ವ್ಯಾವಹಾರಿಕ ಜ್ಞಾನವ ಪಡಕ್ಕೊಂಡಿತ್ತು. ಕೈಲಿ ಎರಡು ಬೀಜ ಇದ್ದರೆ ಆಚವನ ಆಟಕ್ಕೆ ದಿನಿಗೇಳಿ ಸೋಲಿಸಿ ನಾಲ್ಕೋ ಎಂಟೋ ಮಾಡಿಕೊಳ್ತಿತ್ತು. ಇದುವೇ ಅಲ್ಲದೋ ಜೀವನ ರೂಪಿಸುವ ಶಿಕ್ಷಣ. ಇಕ್ಕು ಕೆಲವು ಸರ್ತಿ ಜಗಳ ಪೆಟ್ಟು ಮಾಡಿಕ್ಕು. ಅದೂ ಒಂದು ಜ್ಞಾನವ ಕೊಡ್ತಲ್ಲದೋ..

ಉದಿಯಪ್ಪಗ ಶಾಲೆ ಸುರು ಆಯೆಕ್ಕಾರೆ ಅರ್ಧ ಮುಕ್ಕಾಲು ಗಂಟೆ  ಮೊದಲೇ ಬಂದು ಕಳ್ಳ ಪೋಲಿಸೋ, ಮೆಟ್ಟುಕಲ್ಲೋ, ಕಂಬಾಟವೋ ಆಡ್ತಿತ್ತು. ಮತ್ತೆ ಪಾಠ. ಶಾಲೆ ಮುಗುದು ಪುನಾ ರಜಾ ಆಡಿ ಮನೆಗೆ ಬಂದ ಮೇಲೆ ಮನೆಕೆಲಸ, ಶಾಲೆಕೆಲಸ ಮಾಡ್ತಿತ್ತು. ಆದರೆ ಈಗ ಉದಿಯಪ್ಪಗ ಎದ್ದು ಬೇಗು ಹಾಕಿಯೊಂಡು ಟ್ಯೂಶನ್ ಗೆ.  ಅಲ್ಲಿಂದ ಶಾಲೆಗೆ, ಪುನಾ ಟ್ಯೂಶನ್ ಗೆ. ಮನೆಗೆ ಬಪ್ಪಗ ಇರುಳು. ಮೊನ್ನೆ ಕೊಡೆಯಾಲಲ್ಲಿ ಬೊಳುಂಬು ಮಾವನ ಮಾತಾಡ್ಸಿ ಬಸ್ಟೇಂಡಿಗೆ ಹೋಪಗ ಒಂದು ಪ್ರತಿಷ್ಠಿತ ಶಾಲೆ ಕೋಲೇಜಿನ ಹತ್ರೆ ಹೋಗಿತ್ತೆ. ದಾರಿಲಿ ಒಂದು ಅಂಗಡಿಗೆ ಪೇಪರ್ ತೆಕ್ಕೊಂಬಲೆ ಹೋದೆ. ಆ ಅಂಗುಡಿ ಜೆನದತ್ರೆ ಮಾತಡುವಾಗ ಹೇಳಿತ್ತು. ‘ಅಣ್ಣಾ, ನಾನು ಬೆಳಗ್ಗೆ ಆರುವರೆಗೆ ಅಂಗಿಡಿ ಬಾಗಿಲು ತೆಗಿವಾಗ ಮಕ್ಳು ಇಲ್ಲಿ ಇರ್ತಾರೆ. ಕೇಳಿದ್ರೆ ಟ್ಯೂಶನ್ ಅಂತಾರೆ. ಸಂಜೆ ಏಳೂವರೆಗೆ ಮನೆಗೆ ಹೊರಡುವಾಗ ಹಾಗೇ ಹೇಳ್ತಾರೆ. ಹಾಗಾದ್ರೆ ಇವ್ರು ಮನೆಕೆಲಸ ಏನು ಮಾಡ್ತಾರೆ. ಪೇಪರ್ ತೆಗೊಂಡು ಹತ್ರುಪಾಯು ಕೊಟ್ಟ ಸೀದಾ ಹೊರಡ್ತಾರೆ. ನಾವೇ ಚಿಲ್ರೆ ತೆಗೊಳ್ಳಿ ಅಂತ ಹೇಳ್ಬೆಕು.’ ಹೇಳಿತ್ತು. ಇದರ ಕೇಳಿಯಪ್ಪಗ ಕಾಲನದವಡೆಲಿ ವ್ಯಾವಹಾರಿಕ ಜ್ಞಾನ ಇಲ್ಲದ್ದೇ ಆವ್ತಾ ಇದ್ದು ಹೇಳಿ ಅನ್ಸುತ್ತು. ಅದಕ್ಕೆ ಇಂತಾ ಹಲವು ಉದಾಹರಣೆಗೊ ಸಿಕ್ಕುಗು.  ನಾವು ನಮ್ಮ ಬೆಳವಣಿಗೆಯ ಸಮಯಲ್ಲಿ ಎಲ್ಲಾ ರೀತಿಯ ಪಡೆದರಲ್ಲದೋ ಪರಿಪೂರ್ಣ ಅಪ್ಪಲೆ  ಅಪ್ಪದು. ಮನಸ್ಸು ಕೆಲವು ವರ್ಷಗಳ ಹಿಂದಾಣ ಘಟನೆಗಳ ನೆಂಪು ಮಾಡಿಯಪ್ಪಗ ಇಷ್ಟು ಬರದಾತು. ನಿಂಗಳೂ ಈ ಮಾತುಗಳ ಒಪ್ಪುವಿ ಹೇಳ್ತದು ಎನ್ನ ಭಾವನೆ.

ನಾವು ನಮ್ಮತನವ ಉಳಿಶಿ, ನಮ್ಮ ಮುಂದಾಣವಕ್ಕೆ ಅದರ ಉಳುಶುವುದು ನಮ್ಮ ಕರ್ತವ್ಯ ಅಲ್ಲದೋ? ಅಷ್ಟಾದರೆ ನಮ್ಮ ಮುಂದಾಣ ಪೀಳಿಗೆಗೆ ಯಾವುದೇ ವಿಚಾರಲ್ಲಿ ಅಭಾವ ಆಗ ಅಲ್ಲದೋ?

ನಿಂಗಳ ಪ್ರೀತಿಯ
ಅಜ್ಜಕಾನ ಭಾವ
ajjakana.bhava@gmail.com

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 30 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ವಿದ್ಯಕ್ಕ ಕೊಟ್ಟ ಒಪ್ಪ ಓದಿಕ್ಕಿ ಆನು ಒಪ್ಪ ಕೊಡುದು ಅಗತ್ಯ ಇಲ್ಲೆ ಕಾಣುತ್ತು, ಎನ್ನದೂ ಅದೇ ಅಭಿಪ್ರಾಯ.

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ದನ್ಯವಾದ ಟೀಕೆ ಮಾವಂಗೆ..
  ನಾಕು ಪೆಟ್ಟು ಕೊಟ್ಟರಲ್ಲದೋ ಕಬ್ಬಿಣ ಹದಾ ಅಪ್ಪದು.. ಅದರ ಬಿಡುಲಾಗನ್ನೇ ಮಾವ..

  [Reply]

  VN:F [1.9.22_1171]
  Rating: 0 (from 0 votes)
 2. ರಾಜನಾರಾಯಣ ಹಾಲುಮಜಲು

  ಎಂತ ಮಾಡುದು ಭಾವ , ಮನುಷ್ಯಂಗೆ ಪೈಸೆ ಮಾಡುದೆ ಜೀವನ ಆಗಿ ಹೊಯಿದು ಯೆನ್ನಂದ ಎಂತ ಮಾಡಲೇ ಯೆಡಿಗಯಿದಿಲೆ ಮಕ್ಕ ಆದರೂ ಎಂತರೂ ಸಾಧನೆ ಮಾಡ್ಲಿ ಹೇಳಿ ಅಪ್ಪ ಅಮ್ಮನ ಆಶಯವೋ ಹೇಳಿ

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ದನ್ಯವಾದ ಹಾಲು-ಬಾವ

  ವಿಷಯ ಅಪ್ಪು.. ಅದಾಗದ್ದಾಂಗೆ ಅಪ್ಪಲೆ ಎಲ್ಲೊರು ಪ್ರಯತ್ನ ಮಾಡಿರಕ್ಕಲ್ಲದೋ?

  [Reply]

  VN:F [1.9.22_1171]
  Rating: 0 (from 0 votes)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  ಕೆಲವು ಹಳ್ಳಿಗಳಲ್ಲಿ ಈಗಲೂ ಮೊದಲಿನ ಹಾ೦ಗೆಯೇ ಶಿಕ್ಷಣ ನಡೆತಾ ಇದ್ದು ಹೇಳುದೇ ಸ್ವಲ್ಪ ಸಮಾಧಾನದ ಸ೦ಗತಿ.
  ಇನ್ನು ಪೇಟೆಯಲ್ಲಿ ಮನೆ ಜನವೇ ಮನೆ ಕೆಲಸ ಮಾಡದೇ ಇಪ್ಪಾಗ ಮಕ್ಕೋ ಎ೦ತಾ ಕೆಲಸ ಮಾಡ್ತವು. ಯೆನ್ನ ಮಗ೦ಗೆ/ಮಗಳಿಗೆ ಎರಡನೇ ಕ್ಲಾಸಲ್ಲೇ ಇಪ್ಪತ್ತರ ಮಗ್ಗಿ ಬತ್ತು ಹೇಳಲೆ ಅಪ್ಪ ಅಮ್ಮ೦ಗೆ ಖುಷಿ, ಇಪ್ಪತ್ತು ಜನರೊಟ್ಟಿಗೆ ಬೆರೆಯಲು ಗೊತ್ತಿಲ್ಲದೇ ಇದ್ದರೂ…

  [Reply]

  ಬೆಟ್ಟುಕಜೆ ಮಾಣಿ

  ಬೆಟ್ಟುಕಜೆ ಮಾಣಿ Reply:

  ಸತ್ಯವಾದ ಮಾತು ಹೇಳಿದಿ ಅಪ್ಪಚ್ಚಿ..ನಲ್ಕು ಜನರತ್ರ ಮಾತಾಡ್ಲೆ ಅರದಿಯದ್ದರು ಒದ್ಲೆ ಉಶಾರಿ ಅಲ್ಲದ್ದೆ ರ್ರಂಕ್ ಬೇರೆ ಇರ್ತು..

  [Reply]

  VN:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಮಾನೀರ್ ಬಾವಂಗೆ ದನ್ಯವಾದ

  ನೀ ಹೇಳಿದ್ದು ಖರೇ.. ಮಗ್ಗಿ ಮಾತ್ರ ಅಲ್ದೋ ಈಗ ಅ, ಆ ಇ, ಈನೂ ಬತ್ತಿಲ್ಲೆಡಾ.. ಹೇಂಗೆ ಸರಿ ಮಾಡೋವು ಹೇಳೊದೆ ಯೋಚ್ನೆ..

  [Reply]

  VN:F [1.9.22_1171]
  Rating: 0 (from 0 votes)
 4. ಸುವರ್ಣಿನೀ ಕೊಣಲೆ

  ಮಕ್ಕೊಗೆ ಸಾಮಾನ್ಯ ಜ್ಞಾನ ಇರೆಕಾದ್ದು ಮುಖ್ಯ , ಹೀಂಗೆ ಹೇಳಿದ ಕೂಡ್ಲೇ ಜನ ಗ್ರೇಶುದು ’ಸಾಮಾನ್ಯಜ್ಞಾನದ ಪುಸ್ತಕವ’ ಓದ್ಸೆಕು ಹೇಳಿ ! ವ್ಯವಹಾರ ಜ್ಞಾನ, ಜನರೊಟ್ಟಿಂಗೆ ಬೆರವದು, ಕಾಮನ್ ಸೆನ್ಸ್, ತುಂಬಾ ಸಾಮಾನ್ಯ ವಿಷಯಂಗಳ ಬಗ್ಗೆ, ಜೀವನದ ಬಗ್ಗೆ ಇರೆಕಾದ ಅರಿವು ಮುಖ್ಯ.
  ಈಗ ವಿದ್ಯೆ ಹೇಳಿರೆ, ಸರ್ಟಿಫಿಕೇಟುಗೊ ಹೇಳುವ ಅರ್ಥ ಬಪ್ಪಲೆ ಶುರು ಆಯ್ದು. ಇನ್ನು ಅಬ್ಬೆಪ್ಪಂಗೆ ಸೂಪರ್ ಪೇರೆಂಟ್ಸ್ ಅಪ್ಪ ಆಶೆ ! ಮಕ್ಕೊಗೆ ಆಸಕ್ತಿ ಇದ್ದರೂ ಇಲ್ಲದ್ರೂ ಕ್ರಿಕೆಟ್, ಮ್ಯೂಜಿಕ್, ಡಾನ್ಸ್ ಕ್ಲಾಸ್, ಅಬಾಕಸ್, ಇತ್ಯಾದಿ ಇತ್ಯಾದಿ ಇತ್ಯಾದಿಗೆ ಕಳ್ಸುದೇ ಒಂದು ಗೌಜಿ !
  ಮಾರ್ಕಿಲ್ಲಿ ಮಕ್ಕಳ ಬೌದ್ಧಿಕ ಮಟ್ಟವ ಅಳವದು ನಿಲ್ಲೆಕು.
  ಈ ವಿಷಯಂಗಳ ಬಗ್ಗೆ ಚರ್ಚಿಸಿದ ಅಜ್ಜಕಾನ ಭಾವನ ಈ ಲೇಖನ ಲಾಯ್ಕಾಯ್ದು :)

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಡಾಗುಟ್ರಕ್ಕಂಗೆ ದನ್ಯವಾದ
  ಜನ ಜ್ಞಾನಗ್ನಾನ ಮಾಡಿದ ಮೇಲೆ ಉಳಿವದೆಂತರ ಅಕ್ಕಾ..

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಚೆನ್ನಬೆಟ್ಟಣ್ಣದೇವಸ್ಯ ಮಾಣಿಸರ್ಪಮಲೆ ಮಾವ°ವಿನಯ ಶಂಕರ, ಚೆಕ್ಕೆಮನೆವೇಣೂರಣ್ಣಗೋಪಾಲಣ್ಣವಿಜಯತ್ತೆಸಂಪಾದಕ°ರಾಜಣ್ಣದೊಡ್ಡಮಾವ°ದೊಡ್ಡಭಾವಯೇನಂಕೂಡ್ಳು ಅಣ್ಣಬಟ್ಟಮಾವ°ಮಾಷ್ಟ್ರುಮಾವ°ಜಯಗೌರಿ ಅಕ್ಕ°ಚೆನ್ನೈ ಬಾವ°ಪೆರ್ಲದಣ್ಣಮಂಗ್ಳೂರ ಮಾಣಿಶ್ಯಾಮಣ್ಣಸುಭಗvreddhiಗಣೇಶ ಮಾವ°ಸುವರ್ಣಿನೀ ಕೊಣಲೆನೆಗೆಗಾರ°ಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ