Oppanna.com

ಜೀವನ ರೂಪಿಸುವ ಶಿಕ್ಷಣದ ಅಭಾವ?

ಬರದೋರು :   ಅಜ್ಜಕಾನ ಭಾವ    on   10/09/2012    30 ಒಪ್ಪಂಗೊ

ಅಜ್ಜಕಾನ ಭಾವ

ಅಭಾವನ ಅಭಾವ ಆಯಿದು ಹೇಳಿ ಎಲ್ಲೋರು ಹೇಳಿಯೊಂಡಿತ್ತವು ಓ ಮನ್ನೆ ಚಾತುರ್ಮಾಸ್ಯಕ್ಕೆ ಹೋಗಿಪ್ಪಗ. ಅಪ್ಪು.. ನಾವು ರಜಾ ಅನ್ಯಕಾರ್ಯಲ್ಲಿ ಮುಳುಗಿದ್ದರಿಂದ ಇತ್ಲಾಗಿ ಬಂದದ್ದು ರಜಾ ಕಮ್ಮಿಯೇ. ಬರವದು ಹೇಳಿರೆ ರಜಾ ಜಾಸ್ತಿ ಸಮಯ ಬೇಕಾವ್ತಿದಾ. ಅದಕ್ಕೆ ಇಷ್ಟು ಸಮಯ ಬರವಲಾಗದ್ದದು. ಇರಳಿ, ಮತ್ತೆ ಬರವಲೆ ಶುರು ಮಾಡಿದ್ದು ಗುರು ಕೃಪೆಂದ.

ಅಬಾವ ಎಂತರ ಬರವದು ಹೇಳಿ ಯೋಚಿಸಿಯೊಂಡು ಓ.. ಮನ್ನೆ ಕೊಡೆಯಾಲಂದ  ಬೆಂಗಳೂರಿಂಗೆ  ರೈಲು ಹತ್ತಿತ್ತು. ಒಟ್ಟಿಂಗೆ  ಹಳೆಮನೆ ಅಣ್ಣ-ತಮ್ಮ, ಬೊಳುಂಬು ಮಾವ°, ಶರ್ಮಪ್ಪಚ್ಚಿ, ಆಚಕರೆಮಾಣಿ ಕೂದೊಂಡು ನಿದ್ದೆ ಬಪ್ಪನ್ನಾರ ಸುಮಾರು ಚೆರ್ಚೆ ಮಾಡಿತ್ತು. ಗುಣಾಜೆ ಮಾಣಿಯೋ ಇದ್ದಿದ್ದರೆ ನಿದ್ದೆಯೇ ಬತ್ತಿತ್ತಿಲ್ಲೆಯೋ ಏನೋ? ಎಡಕ್ಕಿಲಿ ಆಚಕರೆಮಾಣಿ ಅವನ ಪೂರ್ವಾಶ್ರಮಲ್ಲಿ ನೆಡದ ಒಂದು ಕಥೆ ಹೇಳಿದ°. ಅದು ನವಗೆ ಈಗ ಬೇಡ. ಅವನೇ ಹೇಳುಗು. ಆ ವಿಚಾರಂದ ನವಗೂ ಒಂದು ವಿಷಯ ಸಿಕ್ಕಿ ಅಭಾವ ಆದ್ದದರ ಹೇಳುಲೆ  ಸಿಕ್ಕಿತ್ತು.

ಹೆಚ್ಚು ಹಳೆಯ ಕತೆ ಅಲ್ಲ. ಹದಿನೈದು ವರ್ಷದ ಹಿಂದಿನ ನಮ್ಮ ಬದುಕಿನ ಬಗ್ಗೆ ನೆಂಪು ಮಾಡಿಗೊಳ್ಳಿ. ಅಂಬಗ ಬರವದು ನಿಂಗಳ ಅನುಭವಕ್ಕೆ ಬಕ್ಕು. ನಾವು ಅ, ಆ, ಇ, ಈ ಕಲಿವಲೆ ಹೋವ್ತಿತ್ತು. ಒಂದೋ ಎರಡು ವರ್ಷ ಬಾಲವಾಡಿಲಿ ಅಕ್ಷರಾಭ್ಯಾಸ ಆಟೋಟ ಎಲ್ಲ ಆಗಿ, ಪ್ರಾಥಮಿಕ ಶಾಲೆಲಿ ಒಂದರಿಂದ ಏಳು, ಪ್ರೌಡಶಾಲೆಲಿ ಎಂಟರಿಂದ ಹತ್ತು ಪದವಿ ಪೂರ್ವ ಕಾಲೇಜಿಲಿ ಪಿಯುಸಿ ಆಗಿ ದೊಡ್ಡ ಕಾಲೇಜಿಂಗೆ ಬಂತು. ಇದೆಂತ ಈಗಲೂ ಹಾಂಗೆ ಅಲ್ಲದೋ ಹೇಳಿ  ಗ್ರೇಶೆದಿ. ಅಪ್ಪು ಹಾಂಗೆ ಇಪ್ಪದು ಆದರೆ ಇದರ ಪ್ರಸ್ತಾಪ ಮಾಡಿದ್ದು ಏಕೆ ಹೇಳಿ ಮತ್ತೆ ಗೊಂತಕ್ಕು.

ಮಕ್ಕೊ ಶಾಲೆಗೆ ಹೋಪದು

ಅಂಗನವಾಡಿಗೊ, ಪ್ರಾಥಮಿಕ ಶಾಲೆಗೊ ಹೋಯೆಕ್ಕಾರೆ ಎರಡೋ, ಮೂರೋ ಮೈಲು ನಡದು ಬರೆಕ್ಕು. ಹಾಂಗೇಳಿ ಅದು ಸಮತಟ್ಟು ಜಾಗೆಯೂ ಅಲ್ಲ. ಗುಡ್ಡೆ ಹತ್ತಿ, ತೋಡು ದಾಂಟಿ, ಗದ್ದೆಪುಣಿ ಸವೆಸಿ ಅಡಕ್ಕೆ ತೋಟದ ಮಧ್ಯೆ ಸಾಗಿ ಬರೆಕು. ಅದೇ ಪ್ರೌಡಶಾಲೆಗೆ ನಾಲ್ಕೈದು ಮೈಲಿ ನಡಕ್ಕೊಂಡು ಹೋಯೆಕ್ಕು. ಪಿಯುಸಿಗೆ ಹೋಪವ ಹತ್ತು-ಹದಿನೈದು ಮೈಲಿ ಬಸ್ಸಿಲಿ ಹೋಯೆಕು. ಇರಲಿ, ಅದೇ ಈಗ ಕಳುದ ನಾಲ್ಕೈದು ವರ್ಷಗಳ ವರ್ತಮಾನ ನೋಡುವೋ°.. ಮನೆ ಜಾಲಿಂದ ಮಾರ್ಗದ ಕರೆವರೆಂಗೆ ಅಪ್ಪನೋ, ಅಮ್ಮನೋ, ಅಣ್ಣನೋ ಸ್ಕೂಟರಿಲಿಯೋ ಬೈಕಿಲಿಯೋ ತಂದು ಬಿಡೇಕು. ಅಲ್ಲಿಂದ ಸ್ಕೂಲ್ ಬಸ್ಸಿಲಿ ಹೆರಟರೆ, ಶಾಲೆ ಜಾಲಿಲಿಯೇ ಇಳಿವದು. ಹೋತ್ತೋಪಗ ಪುನಾಂತಿರುಗಿ ಬಸ್ಸಿಲಿ ಮಾರ್ಗಕರೇವರೆಂಗೆ ಬಂದರೆ ಅಲ್ಲಿಂದ ಸ್ಕೂಟರಿಲಿ ಮನೆಗೆ ಬಪ್ಪದು.

ಕಾಲ ಬದಲಾಯಿದು. ವ್ಯವಸ್ಥೆ ಅನುಕೂಲ ಹೆಚ್ಚಾಯಿದು. ಅದರ ನಾವು ಒಪ್ಪುತ್ತು. ಆದರೆ ಈ ಎರಡು ವ್ಯವಸ್ಥೆಗಳ ಸರಿಯಾಗಿ ಗಮನಿಸಿ ನೋಡಿ. ಹಿಂದೆ ನೆಡಕ್ಕೊಂಡು ಹತ್ರಾಣ ಮನೆ ಮಕ್ಕಳೊಂದಿಗೆ ಪುಂಡಾಟ ಮಾಡಿಯೊಂದು ದಾರಿಲಿ ಸಿಕ್ಕುವ ನೇರಳೆಯೋ, ಪೇರಳೆಯೋ ತಿಂದೊಂಡು ಬೀಜದ ಹಣ್ಣಿಂಗೆ ಕಲ್ಲು ಹೊಡಕ್ಕೊಂಡು, ತೋಡಿಗಿಳುದು ಇನ್ನೊಂದು ದಡಲ್ಲಿಪ್ಪ ಕೇದಗೆಯ ಕೊಯ್ಕೊಂಡು ಕಟ್ಟಲ್ಲಿ ನೀರಿಪ್ಪಗ ನೀರ್ಕಪ್ಪೆ ಆಡಿಯೊಂಡು ಬಂದೊಂಡಿತ್ತು. ಆದರೀಗ ಇದೂ ಏವದೂ ಇಲ್ಲೆ. ಈ ಪುಂಡಾಟಂದ ನಾವು ಹಲವು ರೀತಿಯ ವ್ಯಾವಹಾರಿಕ ಜ್ಞಾನವ ಪಡಕ್ಕೊಂಡಿತ್ತು. ಕೈಲಿ ಎರಡು ಬೀಜ ಇದ್ದರೆ ಆಚವನ ಆಟಕ್ಕೆ ದಿನಿಗೇಳಿ ಸೋಲಿಸಿ ನಾಲ್ಕೋ ಎಂಟೋ ಮಾಡಿಕೊಳ್ತಿತ್ತು. ಇದುವೇ ಅಲ್ಲದೋ ಜೀವನ ರೂಪಿಸುವ ಶಿಕ್ಷಣ. ಇಕ್ಕು ಕೆಲವು ಸರ್ತಿ ಜಗಳ ಪೆಟ್ಟು ಮಾಡಿಕ್ಕು. ಅದೂ ಒಂದು ಜ್ಞಾನವ ಕೊಡ್ತಲ್ಲದೋ..

ಉದಿಯಪ್ಪಗ ಶಾಲೆ ಸುರು ಆಯೆಕ್ಕಾರೆ ಅರ್ಧ ಮುಕ್ಕಾಲು ಗಂಟೆ  ಮೊದಲೇ ಬಂದು ಕಳ್ಳ ಪೋಲಿಸೋ, ಮೆಟ್ಟುಕಲ್ಲೋ, ಕಂಬಾಟವೋ ಆಡ್ತಿತ್ತು. ಮತ್ತೆ ಪಾಠ. ಶಾಲೆ ಮುಗುದು ಪುನಾ ರಜಾ ಆಡಿ ಮನೆಗೆ ಬಂದ ಮೇಲೆ ಮನೆಕೆಲಸ, ಶಾಲೆಕೆಲಸ ಮಾಡ್ತಿತ್ತು. ಆದರೆ ಈಗ ಉದಿಯಪ್ಪಗ ಎದ್ದು ಬೇಗು ಹಾಕಿಯೊಂಡು ಟ್ಯೂಶನ್ ಗೆ.  ಅಲ್ಲಿಂದ ಶಾಲೆಗೆ, ಪುನಾ ಟ್ಯೂಶನ್ ಗೆ. ಮನೆಗೆ ಬಪ್ಪಗ ಇರುಳು. ಮೊನ್ನೆ ಕೊಡೆಯಾಲಲ್ಲಿ ಬೊಳುಂಬು ಮಾವನ ಮಾತಾಡ್ಸಿ ಬಸ್ಟೇಂಡಿಗೆ ಹೋಪಗ ಒಂದು ಪ್ರತಿಷ್ಠಿತ ಶಾಲೆ ಕೋಲೇಜಿನ ಹತ್ರೆ ಹೋಗಿತ್ತೆ. ದಾರಿಲಿ ಒಂದು ಅಂಗಡಿಗೆ ಪೇಪರ್ ತೆಕ್ಕೊಂಬಲೆ ಹೋದೆ. ಆ ಅಂಗುಡಿ ಜೆನದತ್ರೆ ಮಾತಡುವಾಗ ಹೇಳಿತ್ತು. ‘ಅಣ್ಣಾ, ನಾನು ಬೆಳಗ್ಗೆ ಆರುವರೆಗೆ ಅಂಗಿಡಿ ಬಾಗಿಲು ತೆಗಿವಾಗ ಮಕ್ಳು ಇಲ್ಲಿ ಇರ್ತಾರೆ. ಕೇಳಿದ್ರೆ ಟ್ಯೂಶನ್ ಅಂತಾರೆ. ಸಂಜೆ ಏಳೂವರೆಗೆ ಮನೆಗೆ ಹೊರಡುವಾಗ ಹಾಗೇ ಹೇಳ್ತಾರೆ. ಹಾಗಾದ್ರೆ ಇವ್ರು ಮನೆಕೆಲಸ ಏನು ಮಾಡ್ತಾರೆ. ಪೇಪರ್ ತೆಗೊಂಡು ಹತ್ರುಪಾಯು ಕೊಟ್ಟ ಸೀದಾ ಹೊರಡ್ತಾರೆ. ನಾವೇ ಚಿಲ್ರೆ ತೆಗೊಳ್ಳಿ ಅಂತ ಹೇಳ್ಬೆಕು.’ ಹೇಳಿತ್ತು. ಇದರ ಕೇಳಿಯಪ್ಪಗ ಕಾಲನದವಡೆಲಿ ವ್ಯಾವಹಾರಿಕ ಜ್ಞಾನ ಇಲ್ಲದ್ದೇ ಆವ್ತಾ ಇದ್ದು ಹೇಳಿ ಅನ್ಸುತ್ತು. ಅದಕ್ಕೆ ಇಂತಾ ಹಲವು ಉದಾಹರಣೆಗೊ ಸಿಕ್ಕುಗು.  ನಾವು ನಮ್ಮ ಬೆಳವಣಿಗೆಯ ಸಮಯಲ್ಲಿ ಎಲ್ಲಾ ರೀತಿಯ ಪಡೆದರಲ್ಲದೋ ಪರಿಪೂರ್ಣ ಅಪ್ಪಲೆ  ಅಪ್ಪದು. ಮನಸ್ಸು ಕೆಲವು ವರ್ಷಗಳ ಹಿಂದಾಣ ಘಟನೆಗಳ ನೆಂಪು ಮಾಡಿಯಪ್ಪಗ ಇಷ್ಟು ಬರದಾತು. ನಿಂಗಳೂ ಈ ಮಾತುಗಳ ಒಪ್ಪುವಿ ಹೇಳ್ತದು ಎನ್ನ ಭಾವನೆ.

ನಾವು ನಮ್ಮತನವ ಉಳಿಶಿ, ನಮ್ಮ ಮುಂದಾಣವಕ್ಕೆ ಅದರ ಉಳುಶುವುದು ನಮ್ಮ ಕರ್ತವ್ಯ ಅಲ್ಲದೋ? ಅಷ್ಟಾದರೆ ನಮ್ಮ ಮುಂದಾಣ ಪೀಳಿಗೆಗೆ ಯಾವುದೇ ವಿಚಾರಲ್ಲಿ ಅಭಾವ ಆಗ ಅಲ್ಲದೋ?

ನಿಂಗಳ ಪ್ರೀತಿಯ
ಅಜ್ಜಕಾನ ಭಾವ
ajjakana.bhava@gmail.com

30 thoughts on “ಜೀವನ ರೂಪಿಸುವ ಶಿಕ್ಷಣದ ಅಭಾವ?

  1. ಮಕ್ಕೊಗೆ ಸಾಮಾನ್ಯ ಜ್ಞಾನ ಇರೆಕಾದ್ದು ಮುಖ್ಯ , ಹೀಂಗೆ ಹೇಳಿದ ಕೂಡ್ಲೇ ಜನ ಗ್ರೇಶುದು ’ಸಾಮಾನ್ಯಜ್ಞಾನದ ಪುಸ್ತಕವ’ ಓದ್ಸೆಕು ಹೇಳಿ ! ವ್ಯವಹಾರ ಜ್ಞಾನ, ಜನರೊಟ್ಟಿಂಗೆ ಬೆರವದು, ಕಾಮನ್ ಸೆನ್ಸ್, ತುಂಬಾ ಸಾಮಾನ್ಯ ವಿಷಯಂಗಳ ಬಗ್ಗೆ, ಜೀವನದ ಬಗ್ಗೆ ಇರೆಕಾದ ಅರಿವು ಮುಖ್ಯ.
    ಈಗ ವಿದ್ಯೆ ಹೇಳಿರೆ, ಸರ್ಟಿಫಿಕೇಟುಗೊ ಹೇಳುವ ಅರ್ಥ ಬಪ್ಪಲೆ ಶುರು ಆಯ್ದು. ಇನ್ನು ಅಬ್ಬೆಪ್ಪಂಗೆ ಸೂಪರ್ ಪೇರೆಂಟ್ಸ್ ಅಪ್ಪ ಆಶೆ ! ಮಕ್ಕೊಗೆ ಆಸಕ್ತಿ ಇದ್ದರೂ ಇಲ್ಲದ್ರೂ ಕ್ರಿಕೆಟ್, ಮ್ಯೂಜಿಕ್, ಡಾನ್ಸ್ ಕ್ಲಾಸ್, ಅಬಾಕಸ್, ಇತ್ಯಾದಿ ಇತ್ಯಾದಿ ಇತ್ಯಾದಿಗೆ ಕಳ್ಸುದೇ ಒಂದು ಗೌಜಿ !
    ಮಾರ್ಕಿಲ್ಲಿ ಮಕ್ಕಳ ಬೌದ್ಧಿಕ ಮಟ್ಟವ ಅಳವದು ನಿಲ್ಲೆಕು.
    ಈ ವಿಷಯಂಗಳ ಬಗ್ಗೆ ಚರ್ಚಿಸಿದ ಅಜ್ಜಕಾನ ಭಾವನ ಈ ಲೇಖನ ಲಾಯ್ಕಾಯ್ದು 🙂

  2. ಕೆಲವು ಹಳ್ಳಿಗಳಲ್ಲಿ ಈಗಲೂ ಮೊದಲಿನ ಹಾ೦ಗೆಯೇ ಶಿಕ್ಷಣ ನಡೆತಾ ಇದ್ದು ಹೇಳುದೇ ಸ್ವಲ್ಪ ಸಮಾಧಾನದ ಸ೦ಗತಿ.
    ಇನ್ನು ಪೇಟೆಯಲ್ಲಿ ಮನೆ ಜನವೇ ಮನೆ ಕೆಲಸ ಮಾಡದೇ ಇಪ್ಪಾಗ ಮಕ್ಕೋ ಎ೦ತಾ ಕೆಲಸ ಮಾಡ್ತವು. ಯೆನ್ನ ಮಗ೦ಗೆ/ಮಗಳಿಗೆ ಎರಡನೇ ಕ್ಲಾಸಲ್ಲೇ ಇಪ್ಪತ್ತರ ಮಗ್ಗಿ ಬತ್ತು ಹೇಳಲೆ ಅಪ್ಪ ಅಮ್ಮ೦ಗೆ ಖುಷಿ, ಇಪ್ಪತ್ತು ಜನರೊಟ್ಟಿಗೆ ಬೆರೆಯಲು ಗೊತ್ತಿಲ್ಲದೇ ಇದ್ದರೂ…

    1. ಸತ್ಯವಾದ ಮಾತು ಹೇಳಿದಿ ಅಪ್ಪಚ್ಚಿ..ನಲ್ಕು ಜನರತ್ರ ಮಾತಾಡ್ಲೆ ಅರದಿಯದ್ದರು ಒದ್ಲೆ ಉಶಾರಿ ಅಲ್ಲದ್ದೆ ರ್ರಂಕ್ ಬೇರೆ ಇರ್ತು..

    2. ಮಾನೀರ್ ಬಾವಂಗೆ ದನ್ಯವಾದ

      ನೀ ಹೇಳಿದ್ದು ಖರೇ.. ಮಗ್ಗಿ ಮಾತ್ರ ಅಲ್ದೋ ಈಗ ಅ, ಆ ಇ, ಈನೂ ಬತ್ತಿಲ್ಲೆಡಾ.. ಹೇಂಗೆ ಸರಿ ಮಾಡೋವು ಹೇಳೊದೆ ಯೋಚ್ನೆ..

  3. ಎಂತ ಮಾಡುದು ಭಾವ , ಮನುಷ್ಯಂಗೆ ಪೈಸೆ ಮಾಡುದೆ ಜೀವನ ಆಗಿ ಹೊಯಿದು ಯೆನ್ನಂದ ಎಂತ ಮಾಡಲೇ ಯೆಡಿಗಯಿದಿಲೆ ಮಕ್ಕ ಆದರೂ ಎಂತರೂ ಸಾಧನೆ ಮಾಡ್ಲಿ ಹೇಳಿ ಅಪ್ಪ ಅಮ್ಮನ ಆಶಯವೋ ಹೇಳಿ

  4. ವಿದ್ಯಕ್ಕ ಕೊಟ್ಟ ಒಪ್ಪ ಓದಿಕ್ಕಿ ಆನು ಒಪ್ಪ ಕೊಡುದು ಅಗತ್ಯ ಇಲ್ಲೆ ಕಾಣುತ್ತು, ಎನ್ನದೂ ಅದೇ ಅಭಿಪ್ರಾಯ.

  5. ಅಭಾವ,ಈಗ ಎಲ್ಲದಕ್ಕೂ ಎಲ್ಲರಿಂಗೂ ಸಮಯಾಭಾವ!
    ವಿದ್ಯಾಭ್ಯಾಸ ಒಂದು ಹೊರೆ ಆಯಿದು.ಕಲಿವದು ಹೆಚ್ಚು,ಕಲಿವ ಖರ್ಚು ಹೆಚ್ಚು,ಅದಕ್ಕೆ ಕೊಡುವ ಪ್ರಾಮುಖ್ಯವೂ ಹೆಚ್ಚು.ಯುವಜನತೆಗೆ ನೆಂಟರ ಮೇಲೆ ಆಸ್ಥೆ ಕಮ್ಮಿ,ಫ್ರೆಂಡ್ಸ್ ಇದ್ದರೆ ಆತು.ಕಂಪ್ಯೂಟರ್,ಮೊಬೈಲ್ -ಇವು ಸಮಯ ಕೊಲ್ಲಲೆ ಸಾಧನಂಗೊ.ಈಗ ಸಕ್ರಿಯ ಆಗಿಪ್ಪ ೪೦-೬೦ ವರ್ಷದವು ಮರೆ ಆದ ಮೇಲೆ ನಮ್ಮ ಸಮಾಜಲ್ಲಿ ತುಂಬಾ ಬದಲಾವಣೆ ಅಪ್ಪಲಿದ್ದು.
    ಎಲ್ಲಾ ಕಾಲನಿಯಮ.ನಾವು ಸ್ಥಿರಬುದ್ಧಿಲಿ ಅದರ ಸ್ವೀಕರಿಸುವೊ,ನಮ್ಮತನವ ಉಳಿಸುವಯತ್ನ ಮಾಡುವೊ.

  6. ವಿದ್ಯೆಯ ವ್ಯಾಪಾರೀಕರಣ ಹೇಳುದು ಎಷ್ಟು ಹಾಳು ಮಾಡುತ್ತು ಜೀವನವ !
    ಎನ್ನ ಮಗ, ಆಚವನ ಮಗಂದ ಹೆಚ್ಚು ಮಾರ್ಕು ತೆಗೆಯೆಕ್ಕು ಹೇಳಿ ಅಪ್ಪ ಅಮ್ಮಂದ್ರು ಅಸಬಡುದು, ಎಲ್ಲಿಗೂ ಹೆರ ಹೊಪಲೆ ಬಿಡದ್ದೆ, ಮಕ್ಕಳ ಬರೀ ಪುಸ್ತಕದ ಹುಳು ಮಾಡುದು. ಇದಕ್ಕೆ ಹೆತ್ತವರು ಮಾತ್ರ ಕಾರಣ ಅಲ್ಲ, ಈಗಾಣ ಶಿಕ್ಷಣ ವೆವಸ್ತೆಯೇ ಹಾಂಗೆ.

  7. ಕಲಿವದು ಹೇಳಿರೆ ಬರೇ ಶಾಲೆ, ಹೋಂ ವರ್ಕ್, ಟ್ಯೂಶನ್ ಹೇಳ್ತ ಈ ಕಾಲಲ್ಲಿ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಸಾಧ್ಯ ಇಲ್ಲೆ.
    ಆದರೆ ಈಗ ಶಾಲೆಗೆ ಹೋವ್ತ ಮಕ್ಕಳ ಹೆತ್ತವು, ಅಜ್ಜಕಾನ ಭಾವ ಹೇಳ್ತದ ಹಾಂಗಿಪ್ಪ ಬಾಲ್ಯವ ಅನುಭವಿಸಿದ್ದವು.
    ಅದೇ ಕೊಶಿಯ, ಮಕ್ಕಳಾಟವ ಅವು, ಅವರ ಮಕ್ಕೊಗೆ ಏಕೆ ಒದಗಿಸಿಕೊಡ್ತವಿಲ್ಲೆ ಹೇಳುವದೇ ಒಂದು ಒಗಟು.

    1. ಅಪ್ಪಚ್ಚಿಗೆ ದನ್ಯವಾದ..

      ನಂಗೊ ಹೇಳ್ತಾಂಗೆ ಈಗಾಣ ಹಿರ್ಯೋರು ಅವು ಅನುಭವಿಸಿದ ಬಾಲ್ಯದ ಐವತ್ತರಸ್ಟು ಮಕ್ಕೊಗೆ ಒದಗಿಸಿದರೂ ಸಾಕಲ್ಲದೋ..

  8. ಜೀವನ ಮೌಲ್ಯಂಗಳ ಕಲಿವಲೆ ಮಕ್ಕಳ ಅಪ್ಪ ಅಮ್ಮನ ಪ್ರೋತ್ಸಾಹ ಅಗತ್ಯ ಇದ್ದು..ಈಗ ಎಲ್ಯೊರೆಗೆ ಎತ್ತಿದ್ದು ಹೇಳಿರೆ ಕಲಿವದರಲ್ಲಿ ರಾಂಕ್ ಬಂದರೆ ಬೆಲೆ ಇಲ್ಲದ್ರೆ ಅವಕ್ಕೆ ಬೆಲೆ ಇಲ್ಲೆ ಹೇಳಿಪ್ಪ ಅಭಿಪ್ರಾಯ..ಆದರೆ ನಿಜ ಜೀವನಲ್ಲಿ ಎಲ್ಲೋರು ಸೊಲ್ತವು..ಹಾಂಗೆ ಅಪ್ಪಲಾಗ..

    1. ಬೆಟ್ಟುಕಜೆ ಬಾವಂಗೆ ದನ್ಯವಾದ..
      ಅನುಭವಂದಲೇ ಜೀವನ ಆಯೆಕ್ಕಾದ್ದಲ್ಲದೋ ಬಾವಾ..
      ಅತ್ಲಾಗಿ ಉಂಬುಳು ಕಮ್ಮಿ ಆತೋ..

  9. ಈಗ ಜೀವನ ರೂಪಿಸುವುದು ಹೇಳೀದರೆ ,೨ಜಿ”ವನ ಕ್ರಮ ಅಲ್ಲದೊ?.

    ಇರಲಿ, ಅ೦ಬಗ ಪ್ರೀ ಸ್ಟಯಿಲಿಲಿ ,೧೦ ಮೀ. ದೂರಕ್ಕೆ ಕಲ್ಲು,ಕೊದ೦ಟಿ ಹಾರಿಸಿ,

    ದೂ೦ಚ(ಕ್ರೌ-ಅಲ್ಲ) ಮಾವಿನ ಹಣ್ಣಿನ ಉದುರಿಸಿದ್ದು ನೆ೦ಪಾತದ.

    1. ಎಮ್ಮೆಸ್ಸೆಪ್ಪಚ್ಚಿಗೆ ದನ್ಯವಾದ
      ಅದೆಂತಕೆ ನಿಂಗೊ ಪೂರ್‍ಣ ನಾಮ ಹೇಳದ್ದೆ ೨ಜಿ ೩ಜಿಯಾಂಗೆ ಹೇಳುಸ್ಸು..

      ನಿಂಗೊಗೆ ನೆಂಪಾದ್ದು ನವಗೂ ನೆಂಪಾತು… ಕೊದಂಟಿ ಈಗ ಸಿಕ್ಕುಗೋ?

  10. ajjakAna BAva bhAri ceMdakke barada adakke nerekaraya bhAva mAva appacchi kiriyabbe atte yallA sErisidavu rAga. Agali oLLediddu. ajjakAna bhAvaMge shubhASaya

  11. ಅಭಾವ ಇದಕ್ಕೆ ಇಂದಿನ ಕಾಲದ ಶಾಲೆಗಳುದೆ ಅಪ್ಪ ಅಮ್ಮಂದಿರುದೆ ಕಾರಣ ಹೇಳಿ ಎನಗೆ ಕಾಣುತ್ತು.

  12. ಅಪ್ಪು ಭಾವ…ಈಗೀಗ ವಿದ್ಯಾರ್ಹತೆ ಜಾಸ್ತಿ ಅವ್ತಾ ಇದ್ದಷ್ಟೆ ಬಿಟ್ರೆ, ಜೀವನಕ್ಕೆ ಬೇಕಾದ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಆದ್ದದು ನಿಜ…

  13. ಅಭಾವ ಹೇಳಿದ್ದು ನಿಜ. ಈಗಾಣ ಮಕ್ಕೊ ಹೆಚ್ಚು ಹೆಚ್ಚು ಮಾರ್ಕು ತೆಗವಲೆ ಪ್ರಯತ್ನ ಮಾಡ್ತವಷ್ಟೆ ವಿನಃ ಅವಕ್ಕೆ ದೈನಂದಿನ ವ್ಯವಹಾರದ ಬಗ್ಗೆ, ಸಾಮಾನ್ಯ ನಡವಳಿಕೆ ಬಗ್ಗೆ ತಿಳುವಳಿಕೆ ಕಡಮ್ಮೆ ಹೇಳಿಯೇ ಎನ್ನದೂ ತೀರ್ಮಾನ. ಸಣ್ಣ ಇಪ್ಪಗಳೇ ಹೀಂಗಿಪ್ಪ ವಿಷಯಂಗಳನ್ನು ಅವು ತಿಳುಕ್ಕೊಳೆಕು. ಮದಲಾಣ ಕಾಲದ ವಿದ್ಯಾಭ್ಯಾಸದ ಒಟ್ಟಿಂಗೆ ಇದೆಲ್ಲ್ಲ ಕಲುಶದ್ರೂ ಬಂದೊಂಡಿತ್ತು. ಈಗಾಣ ಕಾಲ ಹಾಂಗಲ್ಲ ಆನೇ ? ಎಲ್ಲದಕ್ಕುದೆ ಟ್ಯೂಶನ್ ಬೇಕು ಎಂತ ಹೇಳ್ತಿ ?
    ಮಕ್ಕೊ ಶಾಲಗೆ ಹೋಪ ದೃಶ್ಯ ಕಂಡು ಹಳೆಕಾಲ ನೆಂಪಾತು. ಅವರ ಬೆನ್ನಿಲ್ಲಿಪ್ಪ ಬೇಗು ಮಾಂತ್ರ ಈಗಾಣ ಕಾಲದ್ದು. ಟಂಗೀಸು ಚೀಲ ಅವರ ಹೆಗಲಿಲ್ಲಿದ್ದರೆ, ಅದು ನಮ್ಮದೇ ಚಿತ್ರದ ಹಾಂಗಾವುತ್ತಿತು.

    1. ಮಾವ
      ದನ್ಯವಾದಂಗೊ..
      ಟಂಗೀಸು ಚೀಲದ ಪಟಕ್ಕೆ ಸುಮಾರು ಹಳತ್ತಿಂಗೆ ಮಡಗಿದ ಹಾರ್‍ಡು ಪತ್ತಾಯಲ್ಲಿ ಹುಡ್ಕಿದೆ ಸಿಕ್ಕಿದ್ದಿಲ್ಲೆ ಇದಾ.. ನಿಂಗಳತ್ರೆ ಇಕ್ಕೋ?

      ಈ ಟ್ಯೂಶನ್ನಿಂಗೆ ಮೊದಲು ಹೊವ್ತಿದ್ದ ಕಾರಣವು ಈಗಾಣದ್ದೂ ಸಮಾ ಉಲ್ಟಾ ಅಲ್ಲದೋ

      1. ಮದಲಾಣ ಕಾಲಲ್ಲಿ ಟ್ಯೂಶನ್ನಿಂಗೆ ಹೋವ್ತವು ಹೇಳಿರೆ ಬರೇ ದಡ್ಡಂಗೊ, ಕ್ಲಾಸಿಲ್ಲಿ ಫೈಲು ಆವ್ತವಕ್ಕೆ ಮಾಂತ್ರ.
        ಈಗಾಣ ಕಾಲಲ್ಲಿ ಟ್ಯೂಶನ್ನಿಂಗೆ ಹೋಗದ್ದವು ದಡ್ಡಂಗೊ. ಎಂತ ಹೇಳ್ತೆ ? ಟ್ಯೂಶನ್ನು ಬೇಡದ್ರೂ ಆಚವ ಹೋಯಿದ ಹೇಳಿ ಇವನುದೆ ಹೋಯೆಕ್ಕಾವುತ್ತು. ಅದುದೆ ಒಂದು ಸ್ಟೈಲು.

  14. ಅಬಾವನ ‘ಅಭಾವ’ ಲಾಯ್ಕ ಆಯ್ದು. ನಾಲ್ಕು ಜೆನರೊಟ್ಟಿಂಗೆ ಒಡನಾಟಲ್ಲಿ ಬೆಳದು ನಾಲ್ಕು ಜೆನರೊಟ್ಟಿಂಗೆ ಬೆರತು ಬದುಕುವ ಕ್ರಮ ಬದಲಪ್ಪದು ನಿಜವಾಗಿಯೂ ಚಿಂತನೀಯ. ಮುಂದೆ ಸ್ವಂತಕಾಲಿಲ್ಲಿ ನಿಂದಪ್ಪಗ ಆರೂ ಯಾವುದೂ ಬೇಡ. ಬಾಗಿಲೆಟ್ಟಿ ಮನೆಯೊಳ ಕೂದುಗೊಂಡು ಕಂಪ್ಯೂಟರ್ಲೇ ಪ್ರಪಂಚವ ಓದುವ ಪರಿಸ್ಥಿತಿಯತ್ತ ಹೋವ್ತಾ ಇದ್ದು ನಮ್ಮ ನಾಗರೀಕತೆ. ಒಟ್ಟಿಂಗೆ ಆರೋಗ್ಯಕ್ಕೆ ಶಾರೀರಿಕ ವ್ಯಾಯಾಮವೂ ಸಣ್ಣಪ್ರಾಯಲ್ಲೇ ಅಭಾವ ಆವ್ತು ಹೇಳ್ವದು ಯೋಚಿಸಕ್ಕಾದ್ದೇ.

    1. ಯೇ ಬಾವ
      ದನ್ಯವಾದಂಗೊ..
      ನಾಕು ಜೆನರೊಟ್ಟಿಂಗೆ ಆಡಿದರಲ್ಲದೋ ಯೇವ ಊರಿಂಗೆ ಹೋದರು ಏಳುಲೆದಿಗಪ್ಪದು..
      ಕಂಡಿತಾ ಈ ಅನುಭವಂಗೋ ನಿಂಗೊಗೆ ಆ ಊರಿಲಿ ಆದಿಕ್ಕು.. ಆ ಸುದ್ದಿಯೂ ಬೈಲಿಲಿ ಬಕ್ಕಲ್ಲದೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×