ನಮ್ಮ ಆಟಂಗಳ ಅಭಾವ

ಕಳದ ವಾರಾಂತ್ಯಲ್ಲಿ ಗಡಿಬಿಡಿ. ಒಂದು ಕಡೆ ಎಡಪ್ಪಾಡಿ ಅಣ್ಣನ ಮದುವೆ (ಒಪ್ಪಣ್ಣ ಸುದ್ದಿ ಹೇಳಿದ್ದ), ಇನ್ನೊಂದೆಡೆ ಎನ್ನ ತರವಾಡು ಮನೆಲಿ ಭೂತಸ್ಥಾನದ ಬ್ರಹ್ಮಕಲಶ, ಇನ್ನು ಉಪನಯನಂಗ, ಮದುವೆಗೊ ಇತ್ತು, ಎಲ್ಲಿ ಹೋಪದು, ಬಿಡುದು. ತರವಾಡು ಮನೆಗೆ ಹೋಯೆಕ್ಕಷ್ಟೆ,. ಅಲ್ಲಿ ಮುಗ್ಸಿ ಎಡಪ್ಪಾಡಿಗೆ ಹೋಪ ತೀರ್ಮಾನ. ಹೇಂಗೂ ಒಂದೇ ಬೈಲನ್ನೆ? ಹಾಂಗೆ ದೊಡ್ಡಣ್ಣಂಗೆ ಸಮೋಸ ಕಳ್ಸಿ ಹೆರಟಾತು ಶೆನಿವಾರ ಉದಿಯಪ್ಪಗಳೆ. ಇರುಳು ವಾಸ್ತು ಕಾರ್ಯಂಗ, ಉದಿಯಪ್ಪಗ ಪ್ರತಿಷ್ಠೆ.

ತರವಾಡು ಮನೆ ಹೇಳಿರೆ ದೊಡ್ಡ ಗೌಜಿ ಇದ್ದನ್ನೆ. ದೇವ ದೈವ ಕಾರ್ಯಂಗ. ಕುಟುಂಬದ ಎಲ್ಲರೂ (ತ್ರಿವೇಂಡ್ರಂಯಿಂದ ಡೆಲ್ಲಿವರೆಗೆ ಇಪ್ಪ) ಸೇರುಗು. ಎಲ್ಲಿ ನೋಡಿರು ಅಜ್ಜಂದ್ರಿಂದ ಪುಳ್ಯಕ್ಕಳ ಗೌಜಿಯೋ ಗೌಜಿ. ಒಂದು ಕಡೆ ನಮ್ಮ ಚೆಂಬಾಯಿಗೊ ಹಲವು ವಿಚಾರಂಗಳ ಚರ್ಚೆ ಮಾಡಿಯೊಂಡಿತ್ತು. ಇನ್ನೊಂದು ಕಡೆ ಪುಳ್ಯಕ್ಕಳ ಆಟ. ಅವಾಗ ನೆಂಪಾತು ಅಭಾವ ಬರೆವುದೇ ಅಭಾವ ಅಯಿದು ಹೇಳಿ. ಒಟ್ಟಿಂಗೆ ವಿಶ್ಯವು ಸಿಕ್ಕಿತ್ತು ಅದೇ “ನಮ್ಮ ಆಟಂಗಳ ಅಭಾವ“.

ಈಗಾಣ ಮಕ್ಕೊ ನಾವು ಸಣ್ಣಾಗಿಪ್ಪಗ ಆಡಿಯೊಂಡಿದ್ದ ಆಟಂಗಳ ಆಡುದು ಕಮ್ಮಿ ಆಯಿದು, ಅದ್ರಲ್ಲೂ ಪೇಟೆ ಮಕ್ಕೊಗಂತು ಗೊಂತೆ ಇಲ್ಲೆ! ಹಾಂಗಾಗಿ ಈ ಆಟಂಗಳ ಅಭಾವ  ಆಯಿದು  ಹೇಳುಲಕ್ಕೇನೊ. ದೊಡ್ಡಣ್ಣ ಶಾಲೆಲಿ ಕಳ್ಸುಲೆ ಶುರು ಮಾಡಿದ್ದನಡ. ಮೊನ್ನೆ ಸಮೋಸ ಬೈಂದು ಹೇಳಿದ ಒಪ್ಪಣ್ಣ ಎಡೆಂಕಿಲಿ. ಆಷ್ಟಪ್ಪಗ ಮೂಲೆಲಿ ಕೂದೊಂಡಿದ್ದ ಬಂ. ಅಜ್ಜಿ ’ಈಗಾಣ ಮಕ್ಕೊ ಇಂಗ್ಸಿಲಿ ಮಾತಾಡುದು, ಕಾನೆಂಟಿಲಿ ಆಡ್ತ ಆಟ ಆಡುದೂಳಿ’ ಪಿರಿಪಿರಿ ಮಾಡಿತ್ತು. ಅವಾಗ ಒಪ್ಪಣ್ಣ ನಮ್ಮ ಆಟಂಗಳ ಪರಿಚಯಿಸುತ್ತ ಅಂಕಣ ಶುರು ಮಾಡ್ವನ ಕೇಳಿದ. ಅಕ್ಷರದಣ್ಣ ಆನು ಬರೆತ್ತೆ ಹೇಳಿದ. ಹಾಂಗಾಗಿ ಆನು ಆಟಂಗಳ ವಿವರ್ಸುತ್ತಿಲ್ಲೆ, ಪಟ್ಟಿ ಮಾತ್ರ ಮಾಡುತ್ತೆ. ಮುಂದೆ ಅಂಕಣಲ್ಲಿ ವಿವರ ಓದುಲಕ್ಕು.

ಗಣೇಶಮಾವ, ಚೆನ್ನೆ ಮಣೆ ಆಡಿ ಹೊತ್ತು ಕಳವದು.

ಪಟ್ಟಿ:

 • ಕಲ್ಲ್ಲಾಟ,
 • ಕುಂಟಾಟ,
 • ಚೆನ್ನ್ನೆಮಣೆ,
 • ಮುಟ್ಟಾಟ,
 • ಕಂಬಾಟ,
 • ಬೈನೆ ಕುಟ್ಟುದು,
 • ಮೆಟ್ಟುಕಲ್ಲು,
 • ಹಾಳೆ ಎಳಿವುದು,
 • ಕಳ್ಳ ಪೋಲಿಸ್,
 • ಹುಗ್ಗಾಟ,
 • ಮರ ಕೋತಿ,
 • ಬೀಜ ಕುಟ್ಟುದು,
 • ಗೋಲಿ ಆಟ,
 • ಪಲ್ಲೆ ಆಟ,
 • ಹಾವು ಏಣಿ,
 • ಲೂಡೊ,
 • ಕೆರೆ ದಡ,
 • ಹುಲಿ ದನ,
 • ಟೊಪ್ಪಿ ಆಟ,
 • ಲಗೋರಿ,
 • ಇಸ್ಪೇಟಿಲಿ ಕತ್ತೆ, ಬ್ಯಾಂಕ್, ಜೋಕರ್,
 • ಅವಲಕ್ಕಿ ಪವಲಕ್ಕಿ,
 • ಅಟ್ಟ ಮುಟ್ಟಾ ತನ್ನಾಂದೇವಿ
 • ಇತ್ಯಾದಿ…

ಹೊಸತ್ತರ ಕಲಿತ್ತಾ ಹಾಂಗೆ ಹಳತ್ತರ ಮರವಲಾಗನ್ನೆ. ಹಾಂಗೆ ನಮ್ಮ ಸಣ್ಣ ಮಕ್ಕೊಗೆ ನಮ್ಮ ಆಟವ ಕಲಿಸಿ ಅದರ ಉಳುಸುವ ಕಾರ್ಯವ ಸೇರಿ ಮಾಡೆಕ್ಕು ಹೇಳ್ತದು ಎನ್ನ ಅಭಿಪ್ರಾಯ. ಪೇಟೆಲಿಪ್ಪವಕ್ಕೆ ಅದು ಕಷ್ಟಕ್ಕು. ಆದರೆ ಮಕ್ಕೊಗೆ ಎಲ್ಲ ಸಮಯಲ್ಲಿ ಶಾಲೆ ಇರುತ್ತಿಲ್ಲೆ, ರಜೆಯ ಕಾಲಲ್ಲಿ ಅವರ ಹಳ್ಳಿಗೆ ಕರಕೊಂಡು ಹೋಗಿ ಅಲ್ಲಿಪ್ಪ ಮಕ್ಕಳ ಜೊತೆ ಕಳುಸಿದರೆ ಅವೂ ಕಲಿಗು. ಹಾಂಗೆ ಹಳ್ಳಿಲಿಪ್ಪವು ಕೂಡಾ ಮಕ್ಕೊ ಈ ಆಟಂಗಳ ಆಡುಲೆ ಅವಕಾಶ ಮಾಡಿರೆ ಮುಂದಂಗೆ ಅಭಾವ ಆಗ.

ನೂರು ವರ್ಷ ನಮ್ಮ ಆಳಿದ ಆಂಗ್ಲರ ಆಟಲ್ಲಿ ಅಭಾವ ಆದ ನಮ್ಮ ಆಟಂಗಳ ನೂರಾರು ವರ್ಷ ಉಳ್ಸುದು ನಮ್ಮ ಕೈಲೇ ಇದ್ದು. ಆ ಕೆಲಸವ ಮಾಡುವ ಆಗದೋ…?


ನಿಂಗಳ
ಅಜ್ಜಕಾನ ಭಾವ

ಅಜ್ಜಕಾನ ಭಾವ

   

You may also like...

23 Responses

 1. ಮುರಳಿ says:

  ನಮಸ್ಕಾರ
  ಈ ಲಿಸ್ಟ್ ನ ನೋಡಿ ಅಪ್ಪಗ , ಎನಗುದೆ ಒಂದೆರಡು ಆಟನ್ಗೋ ಹೊಳೆತ್ತಾ ಇದ್ದು …
  – ಮೇಲೆ ಕೆಳ
  – ಕಬಡ್ಡಿ
  – ಮನೆ ಆಟ ( ತುಂಬ ಸಣ್ಣ ಆಡಿಪ್ಪಗ ಆಡಿಗೊಂಡಿದ್ದ ಆಟ ಆತೋ)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *