ಸಮಾಜ ಸೇವೆ

January 21, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲರಿಂಗು ಆಶೆ ಇರ್ತು, – “ಎನ್ನ ಹೆಸರು ಎಲ್ಲರ ಬಾಯಿಂದ ಬರೆಕ್ಕು, ಆನು ಎಂತವ ಹೇಳಿ ಎಲ್ಲರಿಂಗು ತಿಳಿಯೆಕ್ಕು. ಅನು ಮಾಡಿದ ಘನ ಕಾರ್ಯಂಗ ಎಲ್ಲರುದೇ ಮಾತಾಡೆಕ್ಕು” ಹೇಳಿ.
ಹಾಂಗೆ ಗೊಂತಾಯಕ್ಕಾದ್ರೆ ಅದರ ತೋರ್ಪಡಿಸೆಕ್ಕನ್ನೆ. ಅದಕ್ಕೆ ಎಂತ ಮಾಡ್ತದು ಗ್ರೇಶಿಯೊಂಡಿಪ್ಪಗ ನೆಂಪಪ್ಪದೆ ‘ಸಮಾಜ ಸೇವೆ‘..!

‘ಎನಗರಡಿಯ’ ಹೇಳಿಯೊಂಡೆ ಶುರುವಪ್ಪದು ಈ ಕಾರ್ಯ.
ಶುರುವಪ್ಪದು ಎಲ್ಲಿ ಹೇಳಿ ಇನ್ನೊಂದು ಪ್ರಶ್ನೆ. ಅದಕ್ಕೆ ಉತ್ತರ ಹಲವು. ಗುರು ಕಾರ್ಯ ಮಾಡಿಯೊಂಡು ಕಾರ್ಯ ಮಾಡೆಕ್ಕು ಹೇಳಿ ಇಪ್ಪವಕ್ಕೆ ಮಠದ ಚಟುವಟಿಕೆಗ, ಗೋಸೇವೆ ಇದ್ದು.
ಇನ್ನು ಎಲ್ಲಾ ಸಮಾಜಲ್ಲು ಫೇಮಸ್ಸು ಆಯೆಕ್ಕು ಹೇಳ್ತವಕ್ಕೆ ಕಲಾ, ಸಾಂಸ್ಕೃತಿಕ ಸಂಘಂಗ ಇದ್ದು. ಪರದೇಶಲ್ಲು ಹೆಸರು ಹೋಯೆಕ್ಕು ಹೇಳ್ತವಕ್ಕೆ ರೋಟರಿ, ಜೇಸಿಯೊ ಮಣ್ಣ ಇದ್ದು.
ಎವದಾದರು ಒಂದ್ರಲ್ಲಿ ಸೇರಿಯೊಂಬದು ಶುರುವಿಂಗೆ, ಕೆಲವು ಜನ ನಾಲ್ಕೈದರಲ್ಲು ಇಕ್ಕು.

ಒಂದರಲ್ಲಿ ಶುರುವಾದ್ರೆ ಅಲ್ಲಿಂದ ಹಿಂದೆ ಬಪ್ಪಲೆ ಇಲ್ಲೆ.
ಒಳ್ಳೆದನ್ನೆ ಸಮಾಜಕ್ಕೆ ಮಾಡ್ತ ಕಾರ್ಯ ಅನ್ನೆ, ಹಾಂಗಾಗಿ ಬೇಜಾರು ಇಲ್ಲೆ.
ಆನುದೆ ರಜ ರಜ ಮಾಡಿಯೊಂಡು ಇತ್ತಿದ್ದೆ, ಕೋಲೇಜಿಂಗೆ ಹೋಗಿಯೊಂಡಿಪ್ಪಗ.
ಅವಗ ಅಪ್ಪ ಬೈಗು, ‘ಮನೆಲಿ ಎಂತ ಮಾಡ, ಊರು ಉದ್ದಾರ ಮಾಡ್ತಡ, ಉದಿಯಪ್ಪಗ ಕೋಲೇಜಿಂಗೆ ಹೆರಟರೆ, ಸೈತಾನ ಏಳುವ ಹೊತ್ತಿಂಗೆ ಬಕ್ಕು’ ಹೇಳಿ.
(ಆನು ಮಾಡಿದ್ದು ನಿಂಗೊಗೆಲ್ಲ ಗೊಂತಾಯಕ್ಕನ್ನೆ). ಈಗ ಹೋಪಲೆ ಆವುತ್ತಿಲ್ಲೆ, ಅಡಕ್ಕೆ ಹೆರ್ಕುಲೆ ಜೆನ ಇಲ್ಲೆ ಇದಾ!

ಸಂಘಟನೆ ಸೇರಿ ಆತು. ಅಲ್ಲಿ ಎಂತರ ಮಾಡುದು. ನಾಕು ಜೆನ ಪುಳ್ಳರು ಸೇರಿಯೊಂಡು ಯೋಜನೆ ತಯಾರಿಸಿತ್ತು.
ಸಂಘಂಗಳಲ್ಲಿ ವರ್ಷಕ್ಕೊಂದು ಕಮಿಟಿ ಆವುತ್ತಿದ, ಅದಕ್ಕೆ ‘ವಾರ್ಷಿಕ ಯೋಜನೆ’ ಮಾಡ್ತದು.
‘ಊರು ಉದ್ದಾರ ಆಯೆಕ್ಕು. ಎನ್ನ ಹೆಸರು ಎಲ್ಲರ ಬಾಯಿಲು ಬರೆಕ್ಕು’ ಇದು ಆಂಗ್ಲ ಭಾಷೆಲಿ ಹೇಳ್ತರೆ ‘one line agenda’ (ಒಂದು ಗುರಿ ಹೇಳುಲಕ್ಕೇನೋ).
ಊರ ಮಾರ್ಗದ ರಿಪೇರಿಯೊ, ಕಲ್ತ ಶಾಲೆಯ ಚೆಂದ (clean) ಮಾಡುದೊ, ಕೃಷಿಕರಿಂಗೆ ಹೊಸ ವಿಚಾರ ತಿಳಿಸ್ತ  ‘ವಿಚಾರ ಸಂಕಿರಣಂಗಳೊ’, ಅದಕ್ಕೆ ಇದಕ್ಕೆ ಧನ ಸಹಾಯಂಗಳೊ, ನಾಟಕ, ಆಟ ಮಾಡ್ಸುದೊ (ಖರ್ಚಿಂಗೆ ದುಡ್ಡು ಬೇಕನ್ನೆ) ಇತ್ಯಾದಿ ಕಾರ್ಯಂಗಳ ತಿಂಗಳಿಗೊಂದರ ಹಾಂಗೆ ಮಾಡ್ತದು.

ಕೆಲಸ ಆಯೆಕ್ಕಾದ್ರೆ ಮೊದಲು ಬೇಕಪ್ಪದು ಎರಡು ವಿಶ್ಯಂಗ.
ಒಂದು ಧನ ಇನ್ನೊಂದು ಜೆನ. ಧನ ಸಂಗ್ರಹ ಆಯೆಕ್ಕದ್ರೆ ಜೆನ ಒಟ್ಟು ಸೇರೆಕ್ಕಲ್ಲದ!
ಅದಕ್ಕೆ ನಾಕು ಜೆನ ಪುಳ್ಳರು ಸೇರಿಯೊಂಡು ಅಲ್ಲಿ ಇಲ್ಲಿ ಊರಿಡಿ ಸುತ್ತಿ ಒಪ್ಪಣ್ಣ, ಒಪ್ಪಕ್ಕಂಗಳ ಸೇರ್ಸುತ್ತ ಕೆಲ್ಸ ಮಾಡಿತ್ತು.
(ಎಡಪ್ಪಾಡಿ ಅಣ್ಣ ಬೆಂಗ್ಳೂರಿಲಿ ಹೀಂಗೆ ಪುಳ್ಳರ ಸೇರಿಸಿ ಎಂತದೋ ‘ಅವಲಂಬನ’ ಹೇಳ್ತ ತಂಡ ಮಾಡಿದ್ದನಡ. ಗುರುಗೊಕ್ಕೆ ಈ ತಂಡ ಹೇಳಿರೆ ತುಂಬಾ ಪ್ರೀತಿ ಅಡ, ಒಪ್ಪಣ್ಣನ ಬೈಲಿನ ಮೇಲೆ ಇಪ್ಪಷ್ಟು.
ತುಂಬಾ ಒಳ್ಳೆ ಕಾರ್ಯ ಮಾಡ್ತ ಇದ್ದವಡ. ಹೆಚ್ಚಿನ ವಿವರಕ್ಕೆ www.avalambana.org ನೋಡಿ) ಬಾರಿ ಕಷ್ಟ ಪಟ್ಟು ಜೆನ ಮಾಡಿತ್ತು, ಎಲ್ಲೊರುದೇ – ಎಡಪ್ಪಾಡಿ ಅಣ್ಣನಷ್ಟು ಉಶಾರಿ ಇಲ್ಲೆ ಇದಾ. ೧೦ ದಿನಲ್ಲಿ ಅಯೆಕ್ಕಾದ್ದು ೨೦ ದಿನವು ಆವುತ್ತು.

ಇನ್ನು ಧನ ಸಂಗ್ರಹ ಆಯೆಕ್ಕು. ಅದರ ಒಟ್ಟಿಂಗೆ ಪ್ರಚಾರ, ಉಳ್ದ ವ್ಯವಸ್ಥೆ ಆಯೆಕ್ಕು.
ಅದಕ್ಕೆ ಬೇರೆ ಬೇರೆ ವಿಭಾಗಂಗಳ ಮಾಡಿ ನಾಕು ನಾಕು ಜೆನರ ತಂಡ ಮಾಡಿ, ಒಂದರಿಯಂಗೆ ಎಲ್ಲ ಕೆಲ್ಸಗಳ ಮುಗುಸ್ಸುವ ಯೋಚನೆ ಮಾಡಿತ್ತು.
ಏಕೆ ಹೇಳಿರೆ ಸಂಚಾಲಕ ಒಂದೆ ವರ್ಶಲ್ಲಿ ಹೆಚ್ಚು ಕೆಸ್ಲ ಮಾಡೆಕ್ಕನ್ನೆ. ಜೆನ ಅವನ ಬಗ್ಗೆ ಜಾಸ್ತಿ ಮಾತಾಡೆಕ್ಕನ್ನೆ. ಎಲ್ಲರು ಒಟ್ಟಿಂಗೆ ಸೇರಿ ಕೆಲ್ಸ ಮಾಡಿದ ಕಾರಣ ಭಾರೀ ಯಶಸ್ಸು ಸಿಕ್ಕಿತ್ತು ಮಾಡಿದ ಕಾರ್ಯಕ್ಕೆ.
ಅವಗ ಶುರುವಾತಿದಾ ‘ಸೈತಾನ ಪ್ರಕೃತಿ’…

ಇಡಿ ಭೂಮಂಡಲಕ್ಕೆ ಪಸರಿಸಿದ ವ್ಯಾಧಿ ಅದು.
ಒಬ್ಬ ಮೇಲೆ ಬಪ್ಪದರ ನೋಡಿದ ಇನ್ನೊಬ್ಬ ಕಾಲೆಳೆವಲೆ ಶುರು ಮಾಡ್ತ ವ್ಯಾಧಿ ಇದು.
ಎಲ್ಲರಿಂಗು ಗೊಂತಿಪ್ಪದೇ, ಆರುದೆ ತಡವಲೆ ಹೊವುತ್ತವಿಲ್ಲೆ – ಹಾಂಗಾಗಿ ಇದಕ್ಕೆ ಮದ್ದೆ ಇಲ್ಲೆ ಹೇಳುವನ!
ಇಲ್ಲಿ ಎಂತ ಆವುತ್ತು ಹೇಳಿರೆ, ಒಂದು ಸಂಸ್ಥೆಗೆ ರಜ್ಜ ಹೆಸರು ಬಂತು  ಹೇಳಿಯಪ್ಪಗ ಅದರ ಆನು’ ಮಾಡಿದ್ದು ಹೇಳ್ತವು ಇರ್ತವು ಬಿಟ್ಟರೆ ‘ಎಂಗ’ ಮಾಡಿದ್ದು ಹೇಳ್ತವು ಬೆರಳಿಲಿ ಎಣಿಸುವಷ್ಟು ಜೆನ ಇರ್ತವಷ್ಟೆ.
ಏಕೆ ಹೇಳಿರೆ ಎನ್ನ ಹೆಸರು ಎಲ್ಲರ ಬಾಯಿಲಿ ಬರೆಕ್ಕನ್ನೆ.

ನಾವು ಉದ್ದಾರ ಅಪ್ಪದೆಲ್ಲಿ!? ಅಂತು ವರ್ಷ ಪೂರ್ತ ಸಾಧಿಸಿದ್ದು ನಿಮಿಷಲ್ಲಿ ಹೊಂಡಲ್ಲಿ ಬಿದ್ದಾಂಗೆ ಆತು.
ಆದರೆ ಎಂತ ಮಾಡುದು ಅಳಿದುಳಿದವರ ಸೇರಿಸಿಯೊಂಡು ಮತ್ತೆ ಒಂದಪ್ಪಲೆ ಹೆರಡುತ್ತವು ಕೆಲವು ಜೆನ.
ಹೀಂಗೆ ಸಂಘಂಗ ಹಲವು ಕಾರ್ಯ ಮಾಡ್ತು, ಕೆಲವರ ಹೆಸರು ಎಲ್ಲರ ಬಾಯಿಲಿ ಬತ್ತದು ಮತ್ತೆ ಮತ್ತೆ ನಡೆತ್ತ ಇರುತ್ತು. ಎಲ್ಲವು ಒಂದೇ ಹೆಸರಿಲಿ ಅದುವೇ “ಸಮಾಜ ಸೇವೆ”..!

ಅಭಾವ ಆದ್ದರ ಅರದ್ದು:
ಎಲ್ಲವು ಸರಿಯಾಗಿ ನಡೆತ್ತ ಸಂಘಂಗ ಕೆಲವು ಇಕ್ಕು.
ಅದಿಪ್ಪದು ಆನು ಹೇಳುವಲ್ಲಿ ಎಂಗ ಹೇಳುತ್ತಲ್ಲಿ.
ಇಲ್ಲೆ ಹೇಳಿರೆ ಕಾಲೆಳೆಯುವುದು ಮಾತ್ರ ಉಳಿತ್ತು. ಇಲ್ಲಿ ಬರೆದ್ದರ ಉದ್ದೇಶ ಎಂತ ಹೇಳಿರೆ “ಎಂಗ ಎಲ್ಲಾ ಸೇರಿ ಮುಂದೆ ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವ, ಆನು ಹೇಳ್ತದಕ್ಕೆ ಇಲ್ಲಿ ಪ್ರವೇಶ ಕೊಡ್ತದು ಬೇಡ”.

‘ಆನು’ ಹೋಪಲ್ಲಿವರೆಗೆ ಏನೂ ಇಲ್ಲೆ.
‘ಎಂಗ’ ಇಪ್ಪಲ್ಲಿವರೆಗೆ ಎಲ್ಲವೂ ಇಕ್ಕು.

‘ಎಂಗ’ ಉದ್ದಾರ ಅಪ್ಪ ಆಗದೋ?
ಮುಂದಿನ ಪೀಳಿಗೆಗೆ ನಮ್ಮತನ ‘ಅಭಾವ’ ಆಗದ್ದ ಹಾಂಗೆ ನೋಡಿಕೊಂಬ ಆಗದೋ?

ಸಮಾಜ ಸೇವೆ, 5.0 out of 10 based on 1 rating

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಪುತ್ತೂರಿನ ಪುಟ್ಟಕ್ಕಬೋಸ ಬಾವಹಳೆಮನೆ ಅಣ್ಣಶರ್ಮಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಸುವರ್ಣಿನೀ ಕೊಣಲೆಪುತ್ತೂರುಬಾವಮಾಲಕ್ಕ°ಅನಿತಾ ನರೇಶ್, ಮಂಚಿದೊಡ್ಮನೆ ಭಾವಡಾಗುಟ್ರಕ್ಕ°ಡಾಮಹೇಶಣ್ಣವೆಂಕಟ್ ಕೋಟೂರುಕೊಳಚ್ಚಿಪ್ಪು ಬಾವಶುದ್ದಿಕ್ಕಾರ°ದೊಡ್ಡಮಾವ°ವಿಜಯತ್ತೆವಿನಯ ಶಂಕರ, ಚೆಕ್ಕೆಮನೆಪೆಂಗಣ್ಣ°ವಿದ್ವಾನಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಮಂಗ್ಳೂರ ಮಾಣಿಜಯಗೌರಿ ಅಕ್ಕ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ