ಸಮಯದ ಅಭಾವ

February 21, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಭಾವದ ಹಿಂದಾಣ ಪುಟಂಗಳಲ್ಲಿ ಸಂಸ್ಕೃತಿ, ಕಲೆ, ಸಮಾಜ ಸೇವೆಯ ಬಗ್ಗೆ ಹೇಳಿದ್ದೆ. ಮುಂದೆಂತರ ಹೇಳಿ ಯೋಚಿಸಿಯೊಂದಿಪ್ಪ್ಪಗ ಒಪ್ಪಣ್ಣ ಹೇಳಿದ್ದು ನೆಂಪಾತು. ಹಾಂಗೆ ಅಭಾವದ ಮುಂದಾಣ ಪುಟಕ್ಕೆ ಸಂಪರ್ಕ ಇಪ್ಪ ವಿಶ್ಯವೇ ಸಿಕ್ಕಿತ್ತು. ಅದುವೆ “ಸಮಯದ ಅಭಾವ”.

ಒಪ್ಪಣ್ಣನ ಬೈಲಿನ ಜೆನಂಗಳ ಸಮಯದ ಬಗ್ಗೆ ಮೊದ್ಲು ತಿಳ್ಕೊಂಬ ಆಗದಾ. ಒಪ್ಪಣ್ಣಂಗೆ ಒಪ್ಪಣ್ಣ.ಕೋಮ್ ನ ಹೊಸತ್ತು ಮಾಡುಲೆ,  ಮಾಸ್ಟ್ರು ಮಾವಂಗೆ ವೈಚಾರಿಕ ವಿಷಯಂಗಳ ವಿವರ್ಸುಲೆ, ಮಾಸ್ಟ್ರತ್ತೆಗೆ ಮಕ್ಕೊಗಿಪ್ಪದರ ಹೇಳುಲೆ, ಆಚೆಕರೆ ಮಾಣಿಗೆ ಪುಟ್ಟಕ್ಕನ ಫೋಟೊ ತೆಗೆವಲೆ, ಪುಟ್ಟಕ್ಕಂಗೆ ಹೊಸ ರೀತಿಲಿ ಪಾಠ ಮಾಡುದೇಂಗೆ ಹೇಳಿ ಕಲಿವಲೆ ಮಾಣಿಗೆ ಬಯ್ಯುಲೆ, ಬಂಡಾಡಿ ಅಜ್ಜಿಗೆ ಹೊಸ  ಹೊಸ ತಿಂಡಿ ಮಾಡುಲೆ, ಪುಳ್ಯಕ್ಕಳ ಆಡುಸುಲೆ, ಎಲೆ ಗುದ್ದುಲೆ, ಮರೆವಲೆ, ಗಣೇಶ ಭಾವಂಗೆ ಎಲ್ಲದಕ್ಕೂ, ಗುಣಾಜೆ ಮಾಣಿ ಯಡ್ಯೂರಪ್ಪನ ಬೇಟಿ ಮಾಡುಲೆ, ಪೆರ್ಲದಣ್ಣಂಗೆ ಕಂಪ್ಯೂಟರ್ ಗುರುಟುಲೆ, ಬೀಸ್ರೋಡು ಮಾಣಿಗೆ ಫೋಟೋ ತೆಗವಲೆ, ಒರಗುಲೆ, ದೀಪಕ್ಕಂಗೆ ಕ್ರೋಟನ್ ಗಿಡು ನೆಡುಲೆ, ರೂಪಕ್ಕಂಗೆ ಸುದ್ದಿ ಹೇಳುಲೆ, ಬಿಂಗಿ ಮಾಣಿ ಕೂಸುಗೊಕ್ಕೆ ಬಿಂಗಿ ಮಾಡುಲೆ, ಕೆದೂರು ಡಾಕ್ಟ್ರಿಂಗೆ ಪೇಶೆಂಟು ನೋಡುಲೆ, ಒಪ್ಪಕ್ಕಂಗೆ ಪರೀಕ್ಷೆಗೆ ಓದುಲೆ, ಮಾಡವಜ್ಜಂಗೆ ಅಡಕ್ಕೆ ಕೆರೆಸುಲೆ, ದೊಡ್ಡ ಭಾವಂಗೆ ತಿರುಗಾಡುಲೆ … ಪುರೊಸೊತ್ತು ಇದ್ದು ಅವರವರ ಕೆಲ್ಸ ಮಾಡಿಯೊಂಬಲೆ.

ಹಾಂಗಾರೆ ಇಲ್ಲಿ ಸಮಯದ ಅಭಾವ ಹೇಂಗೆ ಬಂತು ಹೇಳಿ ನಿಂಗಳ ಪ್ರಶ್ನೆಯಾ…? ಇದೆಲ್ಲ ಮೊನ್ನೆ ಬೆಂಗ್ಲೂರಿಂಗೆ ಕಾರ್ಯನಿಮಿತ್ತ ಹೋಗಿಪ್ಪಗ ಸುಮಾರು ಜೆನ ಒಪ್ಪಣ್ಣಂಗಳ ಪರಿಚಯ ಮಾಡ್ಸಿತ್ತಿದ್ದ, ಅವಾಗ ನೆಂಪಾದ್ದು. ಅವರತ್ರೆ ಮಾತಾಡುವಾಗ ನಿಂಗೆಲ್ಲ ಸಮಾಜಸೇವೆ, ಮಠ, ಸಂಘಂಗಳ ಕಾರ್ಯಲ್ಲಿ ಭಾಗವಹಿಸುತ್ತಿಲ್ಲೆಯ ಹೇಳಿ ಕೇಳಿದೆ. ಅವಾಗ ಬಂದ ಉತ್ತರವೇ “ಸಮಯದ ಅಭಾವ”, ಭಾವ ಹಾಂಗಾಗಿ ಹೋಪಲೆ ಆವುತ್ತಿಲ್ಲೆ ಹೇಳಿ. ಸುರುವಾಣ ದಿನ ಸಿಕ್ಕಿದಿದಾ ಅದುದೆ ಶುಕ್ರವಾರ, ಆತು ಆಯಿಕ್ಕು ಇರುಳು ಹಗಲು ಕೆಲ್ಸ ಮಾಡುವ ಜೆನ ಇದಾ ಸಮಯ ಇರ ಹೇಳುತ್ತ ಯೋಚನೆ ಮಾಡಿದೆ. ನಿಜಕತೆ ಗೊಂತಾದ್ದು ಮರುದಿನ ’ಶನಿ’ವಾರ.

ಶನಿವಾರ ನಿತ್ಯಕರ್ಮ ಮುಗ್ಸಿಯಪ್ಪಗ ಪೆರ್ಲದಣ್ಣ ಹೇಳಿದ ಇಂದು ನಾವು ಪೇಟೆ ಸುತ್ತುವ ಭಾವ ನೀನು ನೋಡದ್ದ ಜಾಗೆ ಸುಮಾರು ಇದ್ದು ಹೇಳಿ. ಆತು ಹೇಳಿ ಹೆರಟತ್ತು. ಮೊದಲು ಎಂತದೋ “ಮಾಲು” ಅಡಾ (ಬೈಲಿಲಿ ಹಾಂಗೆ ಹೇಳಿರೆ ಬೇರೆ ಅರ್ಥ ಇದ್ದಿದಾ..!), ನಾವು ಕೋಂಪ್ಲೆಕ್ಷ್ ಹೇಳ್ತಿಲ್ಲೆಯಾ ಅದಕ್ಕೆ ಅಲ್ಲಿ ಮಾಲು ಹೇಳುದಡ. ಅಲ್ಲಿ ಗೌಡನ ದಿನಸಿ ಅಂಗಡಿ, ಶೆಟ್ಟಿಯ ನೆಟ್ಟಿ ಅಂಗಡಿ, ಮಮ್ಮದೆಯ ಬೂಡ್ಸಿನ ಶೋಪು, ಜೋಸೆಪ್ಪಿನ ಬೇಗಿನ ಗಿಫ್ಟ್ ಸೆಂಟರ್ ಎಲ್ಲಾ ಇತ್ತು. ಮತ್ತೆ ಸಿನೆಮಾ ಟೆಂಟ್, ಹೋಟೆಲ್ದೆ ಇತ್ತು.

ಒಂದೊಂದನ್ನೆ ನೋಡಿಯೊಂಡು ಹೋವುತ್ತಾ ಇಪ್ಪಗ ಆರೋ ಪರಿಚಯದವು ಆಂಜಿದ ಹಂಗೆ ಆತು, ನೋಡುತ್ತೆ ನಿನ್ನೆ ಸಿಕ್ಕಿದ ಒಪ್ಪಣ್ಣಂಗ ಮಮ್ಮದೆಯ ಬೂಡ್ಸಿನ ಶೋಪಿಗೆ ಹೋವುತ್ತಾ ಇದ್ದವು. ಆಚೆ ನೋಡೀರೆ ಒಪ್ಪಕ್ಕಂಗ ಜೋಸೆಪ್ಪಿನ ಗಿಫ್ಟ್ ಸೆಂಟರಿಲಿ ಇದ್ದವು. ಪೆರ್ಲದಣ್ಣಂಗೆ ಗುರ್ತ ಇದಾ ಎಂತ ಇಲ್ಲಿ ಕೇಳಿದ. ಒಪ್ಪಣ್ಣಂಗ ಬೂಡ್ಸ್ ತೆಗವಲೆ, ಒಪ್ಪಕ್ಕಂಗ ವೇನಿಟಿ ಬೇಗು ತೆಗವಲೆ ಬಂದದ್ದಡ, ರಜೆ ಅಲ್ಲದಾ ಹಾಂಗೆ ಒಂದು ಸಿನೆಮಾ ನೋಡಿ ಮನೆಗೆ ಹೋಗಿ ವರಗುದು ಹೇಳಿದವು.

ಅವಾಗ ಎನಗೆ ಅಂದಾಜು ಆತು, ಸಮಯದ ಅಭಾವ ಆದ್ದಲ್ಲ. ಸಂಸ್ಕೃತಿಯ, ಮನಸ್ಸಿನ ಅಭಾವ ಹೇಳಿ. ಸಮಾಜಸೇವೆ, ಮಠ, ಸಂಘಂಗಳ ಕಾರ್ಯ ಮಾಡ್ತದು ಹೇಳಿರೆ ರಜಾ ಅಜೀರ್ಣ ಹೇಳಿ. ಅವರ್ತ್ರೆ ಆತು ಹೇಳಿ ಎನ್ನತ್ರೆ ತಿರುಗಿದ ಪೆರ್ಲದಣ್ಣ. ನವಗೆ ಇಲ್ಲಿ ಕೆಲ್ಸ ಎಂತ ಇಲ್ಲೆ ರಜಾ ಎಡಪ್ಪಾಡಿ ಅಣ್ಣನ ಮಾತಾಡ್ಸೆಕ್ಕು ಮಠಕ್ಕೆ ಹೋಗಿ ಮನೆಗೆ ಹೋಪ ಹೇಳಿದೆ.

ಅಭಾವ ಆದ್ದರ ಅರದ್ದು.

ಸಮಯದ ಅಭಾವ ಹೇಳ್ತದು ಎಲ್ಲರೂ ಹೇಳುವುದೇ. ನಾವು ಅದರ ಸರಿಯಾಗಿ ಉಪಯೋಗಿಸಿಯೋಂಡರೆನವಗೆ ಸಮಯ ಉಳಿಗು. ಒಳ್ಳೆ ಕಾರ್ಯಕ್ಕೆ ಉಪಯೋಗಿಸುವುದಕ್ಕಿಂತ ಅನಗತ್ಯ ಕಾರ್ಯಕ್ಕೆ ಉಪಯೋಗಿಸಿರೆ ಅಭಾವ ಇಕ್ಕೇ ಇಕ್ಕು. ಹಾಂಗಾಗಿ ನಾವೆಲ್ಲ ಸರಿಯಾದ ದಾರಿಲಿ ನಡೆದು ನಮ್ಮತನವ, ಸಂಸ್ಕೃತಿಯ, ಸಮಾಜವ ಉಳಿಸಿ ಬೆಳೆಶುವ.

ಸಮಯ ಎಂದೂ ಅಭಾವ ಆಗ. ಸಕಾಲಕ್ಕೆ ಸುಕಾರ್ಯ ಮಾಡಿಯೊಂಡು ಸಮಾಜವ ಬೆಳೆಸುವ. ಅವಾಗ ಎವದಕ್ಕೂ “ಅಭಾವ” ಇರ ಅಲ್ಲದೋ…?

ಸಮಯದ ಅಭಾವ, 4.1 out of 10 based on 11 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಮಿ೦ಚಿ ಹೋದ ಸಮಯ ಪುನಃ ನವಗೆ ಸಿಕ್ಕ ಅಲ್ದಾ?…ಸಮಯದ ಸದುಪಯೋಗ ಮಾದ್ಸುದೇ ಅದಕ್ಕಿಪ್ಪ ಪರಿಹಾರ…

  [Reply]

  VA:F [1.9.22_1171]
  Rating: 0 (from 0 votes)
 2. ಅನುಶ್ರೀ ಬಂಡಾಡಿ

  ಅಪ್ಪು, ಅಮೂಲ್ಯ ಸಮಯದ ಸದುಪಯೋಗ ಮಾಡಿಗೊಂಬ ಚಾಕಚಕ್ಯತೆ ಎಲ್ಲೊರಿಂಗೂ ಇರ. ಕೆಲವೊಂದು ಸರ್ತಿ ನಮ್ಮ ಸ್ವಂತ ಕೆಲಸಕ್ಕೇ ಪುರುಸೊತ್ತಿಲ್ಲದ್ದ ಹಾಂಗಾಗಿ ಬಿಡ್ತು. ಆದರೆ ನಿಜವಾಗಿ ನೋಡಿರೆ, ನಿಂಗ ಹೇಳಿದಾಂಗೆ, ಸರಿಯಾದ ಯೋಜನೆ ಇಲ್ಲದ್ದೆ ನಾವು ಸೋಲುದು.
  ಯಾವದೇ ಕೆಲಸ ಸ್ವಇಚ್ಛೆಂದ ಮಾಡುದಾದರೆ ಅದಕ್ಕೆ ಸಮಯ ಸಿಕ್ಕಿಯೇ ಸಿಕ್ಕುತ್ತು.

  [Reply]

  VA:F [1.9.22_1171]
  Rating: +2 (from 2 votes)
 3. ಡಾಮಹೇಶಣ್ಣ
  ಮಹೇಶ

  ನಮ್ಮ ಆದ್ಯತೆಗೆ ಅನುಗುಣವಾಗಿ ನವಗೆ ಸಮಯ ಇದ್ದೋ ಇಲ್ಲೆಯೋ ಹೇಳಿ ನಿರ್ಣಯ ಅಪ್ಪದು.

  ನಮ್ಮ ಸಂಸ್ಕೃತಿಯ ಒಳುಶೇಕು ಹೇಳಿ ಕಂಡರೆ, ತಾನುದೆ ಅದರ ಒಂದು ಅಂಗ ಹೇಳಿ ಗೊಂತಾದರೆ….. ನಮ್ಮ ಭಾಗವಹಿಸುವಿಕೆಯ ಆವಶ್ಯಕತೆ ಗೊಂತಕ್ಕು, ಸಮಯ ಸಿಕ್ಕುಗು.

  [Reply]

  VA:F [1.9.22_1171]
  Rating: 0 (from 0 votes)
 4. ಡೈಮಂಡು ಭಾವ

  ಕರೆಕ್ಟಾಗಿ ಬರದ್ದೆ ಬಾವ….ನಿನ್ನ ಮಾತಿಂಗೆ ಸಂಪೂರ್ಣವಾದ ಎನ್ನ ಸಹ ಮತ ಇದ್ದು…

  [Reply]

  VA:F [1.9.22_1171]
  Rating: +1 (from 1 vote)
 5. Ramprashanth

  Cool Anna…

  [Reply]

  VA:F [1.9.22_1171]
  Rating: 0 (from 0 votes)
 6. ಪಟಿಕಲ್ಲಪ್ಪಚ್ಚಿ
  ಪಟಿಕಲ್ಲಪ್ಪಚ್ಚಿ

  ಅಜ್ಜಕಾನ ಭಾವಂಗೆ ನಮಸ್ಕಾರಂಗ. ಸರಿಯಾದ ಮಾತು.
  ಮತ್ತೆ ಮಾಡಿದರಾತು, ನಾಳೆ ಮಾಡಿದರಾತು ಹೇಳಿ ಮುಖ್ಯ ಕಾರ್ಯಂಗಳ ಅಂತೇ ಮುಂದೂಡಿ ಕಾರ್ಯಕ್ಕೆ ಬಾರದ್ದದರಲ್ಲಿ ಸಮಯ ಕಳವದು ಎನ್ನ ಸಮಯದ ಅಭಾವಕ್ಕೆ ಕಾರಣ. ಮನಸ್ಸಿದ್ದರೆ ಮಾರ್ಗ ಹೇಳುದು ಗಾದೆ ಮಾತಾದರೆ, ಗಂಗಾಧರ ಬೆಳ್ಳಾರೆ ಹೇಳುವ ಹಾಂಗೆ ಬಹುಶ: ಎನ್ನದು ‘ಮನಸ್ಸು ಇಲ್ಲದ ಮಾರ್ಗ’.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಡಾಮಹೇಶಣ್ಣವಿನಯ ಶಂಕರ, ಚೆಕ್ಕೆಮನೆಶ್ರೀಅಕ್ಕ°ಅನು ಉಡುಪುಮೂಲೆಗಣೇಶ ಮಾವ°ಕೇಜಿಮಾವ°ಜಯಗೌರಿ ಅಕ್ಕ°ಅನಿತಾ ನರೇಶ್, ಮಂಚಿಚೆನ್ನೈ ಬಾವ°ವಾಣಿ ಚಿಕ್ಕಮ್ಮದೊಡ್ಮನೆ ಭಾವಡಾಗುಟ್ರಕ್ಕ°ರಾಜಣ್ಣvreddhiಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಕಜೆವಸಂತ°ವೆಂಕಟ್ ಕೋಟೂರುಬೋಸ ಬಾವಕಳಾಯಿ ಗೀತತ್ತೆಬಟ್ಟಮಾವ°ಸುಭಗಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ