ಸಂಸ್ಕೃತಿ ಒಟ್ಟಿಂಗೆ ಕಲೆ

February 7, 2010 ರ 9:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಭಾವ ಶುರು ಮಾಡಿದ್ರು ಆರಂಭ ಶೂರತನ ಆಯಿದಷ್ಟೆ. ಎಂತ ಬರೆವದು ಹೇಳಿ ಚಿಂತೆ. ಹಾಂಗೆ ಯೋಚಿಸಿಯೋಂಡಿಪ್ಪಗ ರಜ್ಜ ಹಿಂದಾಣದ್ದು ನೆಂಪಾತು. ಅಭಾವ ಶುರು ಮಾಡಿದ್ದು ಸಮಾಜ ಸೇವೆಂದ. ಕಾರಣ ಇದ್ದು. ಎಂತ ಹೇಳಿರೆ ಗುರುಗಳ ಆಶೀರ್ವಚನ ಕೇಳಿದ್ದಿ ಅಲ್ಲದಾ. ನಮ್ಮ ಸಂಸ್ಕೃತಿ ಸಮಾಜ ಎಂದೆಂದಿಗು ಹಾಳಪ್ಪಲಾಗ. ಅದಕ್ಕೆ ಒಂದು ಮಾದರಿ ಸಮಾಜ ಕಟ್ಟುವ ಆಶೆಯೊಟ್ಟಿಂಗೆ ಒಪ್ಪಣ್ಣ ಶುರು ಮಾಡಿದ್ದರ ನಾವು ಮುಂದುವರೆಶುಲೆ ಹೆರಟದ್ದನ್ನೆ. ಮಾದರಿ ಸಮಾಜ ಕಟ್ಟೆಕ್ಕಾದರೆ ಎಂತ ಮಾಡೆಕ್ಕು ಹೇಳಿ ಯೋಚಿಸಿಯೋಂಡಿಪ್ಪಗ ನೆಂಪಾದ್ದೆ ಸಮಾಜ ಸೇವೆ. ಶುರುವಾದ್ದು ನಿಂಬಲಾಗ ಇದು ಒಪ್ಪಣ್ಣ ಯಾವಾಗ್ಲೂ ನೆಂಪು ಮಾಡ್ತ ವಿಶ್ಯ. ಮೊನ್ನೆ ಮಠದ ಮೇಳದ ಆಟ ನೋಡ್ತ ಅವಕಾಶ ಸಿಕ್ಕಿತ್ತು ಪೆರ್ಲದಣ್ಣನ ಬೇಟಿಗೆ ಬೆಂಗಳೂರಿಂಗೆ ಹೋಗಿಪ್ಪಗ [ಪೆರ್ಲದಣ್ಣನ ಕೆಲವು ಫೋಟೋಂಗಳೂ ಇದ್ದು ಒಪ್ಪಣ್ಣ ಚಿತ್ರ ಪುಟಲ್ಲಿ ಹಾಕುತ್ತೆ ಹೇಳಿದ್ದ]. ಎಂತದೋ ಕಲಿತ್ತ ವಿದ್ಯಾರ್ಥಿಗೊಕ್ಕೆ ಸಹಾಯ ಮಾಡ್ತ ಉದ್ದೇಶಂದ ನಡೆಸಿದ್ದಡ. ನೋಡಿ ಬಂದವಂಗೆ ಒಂದು ವಿಷ್ಯ ಸಿಕ್ಕಿತ್ತು. ಅದೇ ಸಂಸ್ಕೃತಿ ಒಟ್ಟಿಂಗೆ ಕಲೆ.

ಒಂದು ತಲೆಮಾರಿನ ಹಿಂದಾಣದ್ದರ ಈಗಾಣ ತಲೆಮಾರಿನ ಜೊತೆಗೆ ತುಲನೆ ಮಾಡಿ ಬರೆದ್ರೆ ದೊಡ್ಡ ಕಾದಂಬರಿಯೇ ಅಕ್ಕು. ದೂರದರ್ಶನದವಕ್ಕೆ ಹೇಳಿರೆ ೧೦ ವರ್ಷಕ್ಕೆ ಧಾರಾವಾಹಿ ಮಾಡುಗು. ಅಜ್ಜಕಾನ ಭಾವಂಗೆ ಸಣ್ಣಗಾಗಿಪ್ಪ್ಪಗ ಮಾಡಿಯೊಂಡಿತ್ತ ನಾಟಕ, ಪ್ರಹಸನ ನೆಂಪಾತು. ನಮ್ಮಸಂಸ್ಕೃತಿಯ ಅವಿಭಾಜ್ಯ ಅಂಗ ಆಗಿತ್ತು ಕಲೆ. ಸಂಸ್ಕೃತಿಯ ಬಗ್ಗೆ ಜಾಸ್ತಿ ಹೇಳುತ್ತಿಲ್ಲೆ ಆನು, ಅದರ ಒಪ್ಪಣ್ಣಂಗೆ ಬಿಟ್ಟಿದೆ. ಹಾಂಗೆ ನಮ್ಮ ಸಂಸ್ಕೃತಿಯ ಒಟ್ಟಿಂಗೆ ನಮ್ಮವು ಬೆಳಶಿದ ಕಲೆಯ ಬಗ್ಗೆ ಮಾತಾಡ್ತ ಯೋಚನೆ ಮಾಡಿದ್ದು.

ಹಿಂದಾಣದ್ದು

ಬಾಲವಾಡಿಗೆ ಹೋಪಲೆ ಶುರು ಮಾಡಿದ ಮಕ್ಕೊಳ (ಒಪ್ಪಣ್ಣನ ಚೆಂಬಾಯಿಗೊ) ಅಜ್ಜಿಯಕ್ಕ ಹೊತ್ತಪ್ಪಗ ಕೂರುಸಿಯೊಂಡು ಭಾಗವತ, ರಾಮಾಯಣ, ಭಾರತದ ಕತೆ ಹೇಳುಗು. ಆ ಕತೆ ಕೇಳಿ ಅದರ ನೀತಿ ತಿಳ್ಕೊಂಡು ಬೆಳೆಗು ಮಕ್ಕ. ಅದರ ಒಟ್ಟಿಂಗೆ ಶಾಲೆಯ ಪಾಠಂಗ, ಸನಾತನ ಕಾಲ ನಿರ್ಣಯ ಮಾಡುತ್ತತಿಂಗಳು, ನಕ್ಷತ್ರ, ಸಂವತ್ಸರ ಇತ್ಯಾದಿಗಳ ಕಲಿಗು.

ಇನ್ನು ಒಂದನೆಗೊ, ಎರಡೆನೆಗೊ ಹೋಪವಕ್ಕೆ ಇದರೊಟ್ಟಿಂಗೆ ಸಂಗೀತ, ನಾಟಕ, ಆಟ ಕಲ್ಸುಗು, ಮಕ್ಕಳೂ ಕಲಿಗು. ಹಾಂಗೆ ಬೆಳೆದ ಮಕ್ಕ ನಮ್ಮ ಸಂಸ್ಕೃತಿಯೊಟ್ಟಿಂಗೆ ಕಲೆಯನ್ನು ಬೆಳೇಶುಗು. ಹಳೆ ಆಟ ನೋಡಿದವಕ್ಕೆ ಶೇಣಿ ಅಜ್ಜನೊ, ಗೋವಿಂದಪ್ಪಚ್ಚಿ ಮಾಡಿದ ವೇಶಂಗಳ ನೋಡಿದವಕ್ಕೆ
[ಚೆನ್ನೆಬೆಟ್ಟಣ್ಣನತ್ರ ವೀಡಿಯೋ, ಫೋಟೊ ಇದ್ದು.] ನಿನ್ನೆ ಇರುಳು ನೋಡಿದ ಹಾಂಗೆ ಅಕ್ಕು.

ಇಂದಾಣದ್ದು.

‘ಬಾಲವಾಡಿ’ ಹೇಳಿರೆ ಎಂತ ಹೇಳಿ ಕೇಳುಗು ಈಗಾಣ ಮಕ್ಕೊ. ಎಲ್ಲರೂ ಕೇಜಿ ತೂಗುದಿದಾ. ಎಲ್ಲಾಕೇಜಿ ಊಕೇಜಿ ಹೇಳಿ ಅಡಾ. ಹಾಂಗಾಗಿ ಅಕ್ಷರ ಕಲಿವಲೆ ಶುರು ಮಾಡುದೇ ಎ ಫಾರ್ ಆಪಲ್, ಬಿ ಫಾರ್ ಬ್ಯಾಟ್.. ಒಂದು ತಿಂಬದು ಇನ್ನೊಂದು ಹೊಡಿವದು..  ಒಂದನೆ ಕ್ಲಾಸಿಂಗೆ ಹೋಪವಕ್ಕೆ ರೈಮ್ಸ್ ಇತ್ಯಾದಿಗೊ. ಒಟ್ಟಿಂಗೆ ಮಣಗಟ್ಟಲೆ ತೂಕದ ಪುಸ್ತಕಂಗ. ಹೊತ್ತಪ್ಪಗ ಮನೆಗೆ ಬಂದವು ಹೋಮ್ ವರ್ಕ್ (ಮನೆ ಕೆಲಸ) ಹೇಳಿ ಕೂದರೆ ಉಂಡರೆ ಉಂಡವು ಇಲ್ಲದ್ರೆ ಹಾಂಗೆ ವರಗುಗು. ಇನ್ನೆಲ್ಲಿ ಅಜ್ಜಿಯಕ್ಕ ಕತೆ ಹೇಳುದು, ಮಕ್ಕ ಕೇಳುದು. ಇನ್ನು ಸಂಗೀತ ನೃತ್ಯ ರಜ್ಜ ಜೆನ ಕಲಿಗು. ಅದು ಶಾಸ್ತ್ರೀಯವಾಗಿ ಅಲ್ಲ. ಈ ಟಿ.ವಿ.ಲಿ ಬತ್ತಲ್ಲದ ಸ್ಟಾರ್ ಸಿಂಗರ್, ಸೈ, ಇಂತದ್ದಕ್ಕೆ ಬೇಕಾದ ಸಿನೆಮಾ ಪದ್ಯ ನಾಟ್ಯಂಗಳ ಕಲಿಗಷ್ಟೆ.

ಎಂತ ಬದಲಾವಣೆ ಬಂದಿದಲ್ಲದ. ಒಂದೇ ತಲೆಮಾರಿನ ಅಂತರಲ್ಲಿ. ಇದರ ಕಾಲ ನಿರ್ಣಯ ಹೇಳೆಕ್ಕೊ, ಪಾಶ್ಚ್ಯಾತ್ಯರ  ಗುಂಗಿಲಿ ನಾವು ನಮ್ಮತನವ ಕಳಕೊಂಡದ್ದ್ದು ಹೇಳಿ ಹೇಳೇಕ್ಕೊ ಗೊಂತಾವುತ್ತಿಲ್ಲೆ. ಆಟ ಮುಗಿಸಿ ಬಪ್ಪಗ ಆಟಲ್ಲೂ ಸುಮಾರು ಬದಲಾವಣೆ ಆದ್ದು ಗೊಂತಾತು. ರಾತ್ರಿ ಪೂರಾ ಇರ್ತಿದ್ದದ್ದು. ನಾಕು ಗಂಟೆಗೆ ಇಳುದ್ದು. ನೋಡುಲೆ ಜೆನ ಇಲ್ಲದ್ರೆ ಮೇಳದವು ಎಂತ ಮಾಡೂದು ಅಲ್ಲದೋ. ಪ್ರತಿ ವರ್ಷ ಊರಿಲಿ ಸಂಗೀತ ಶಾಲೆ ವಾರ್ಷಿಕೋತ್ಸವಕ್ಕೆ ಸಂಗೀತ ಕಛೇರಿ ಆವುತಿತ್ತು. ಈ ವರ್ಷ ಅದೂ ಇಲ್ಲೆಡ. ಸಂಗೀತ ಕಲಿತ್ತ ಮಕ್ಕ ಇಲ್ಲೆಡ. ಹಾಂಗೆ ಶಾಲೆಯು ಬಂದ್. ಇದೆಲ್ಲ ಕಲೆಯ ಅವನತಿಗೆ ಕಾರಣ ಆತೋ ಹೇಂಗೆ.

ನಾವು ಎಲ್ಲರೂ ಒಟ್ಟಿಂಗೆ ಆದಷ್ಟು ಜೆನಕ್ಕೆ ತಿಳೀ ಹೇಳಿ ನಮ್ಮ ಸಂಸ್ಕೃತಿ, ಕಲೆಯ ಉಳಿಶಿಗೊಂಬ ಆಗದಾ.. ಶಾಂತತ್ತೆ ಮಕ್ಕೊಗಿಪ್ಪದರ ಹೇಳಿಕೊಡುಲೆ ಶುರು ಮಾಡಿದ್ದವು. ಆನುದೇ ಎನ್ನ ಅಜ್ಜಿ ಹೇಳಿಯೋಂಡಿತ್ತ ಏಕೈಕ ಭಾಗವತದ  ಪಠನ ಸಂಕೋಲೆಯ ಇಲ್ಲಿ ಹಾಕಿದ್ದೆ ಕೇಳಿ. ಎಲ್ಲಾ ಮುಂದಾಣ ತಲೆಮಾರಿನವಕ್ಕೆ ಹೀಂಗೊಂದು ಇದ್ದು ಹೇಳಿ ತಿಳಿವಲೆ ಬೇಕಲ್ಲದಾ..?

ಸಂಕೋಲೆ:

ಅಭಾವ ಆದ್ದರ ಅರದ್ದು:

ಮೊದಲೆ ಹೇಳಿದ್ದೆ ಈ ವಿಷ್ಯವ ಬರವಲೆ ಶುರು ಮಾಡಿದ್ರೆ ಕಾದಂಬರಿ ಅಕ್ಕು ಹೇಳಿ. ಸೂಚ್ಯವಾಗಿ ನಶಿಸಿ ಹೋವುತ್ತಿಪ್ಪ ಕೆಲವು ವಿಚಾರಂಗಳ ಇಲ್ಲಿ ಪ್ರಸ್ತಾಪ ಮಾಡಿದ್ದೆ. ಇದರ ಒಳಿಶಿ, ಬೆಳೆಶುದು ನಮ್ಮ ಕರ್ತವ್ಯ ಹೇಳಿ ಶುರು ಮಾಡುವ.

ನಮ್ಮ ಮುಂದಾಣ ಪೀಳಿಗೆಗೆ ನಮ್ಮ ಸಂಸ್ಕೃತಿ ಒಟ್ಟಿಂಗೆ ಕಲೆ ಅಭಾವ ಆಗದ್ದ ಹಾಂಗೆ ನೋಡಿಕೊಂಬ! ಎಂತ ಹೇಳುತ್ತಿ..?

ಸಂಸ್ಕೃತಿ ಒಟ್ಟಿಂಗೆ ಕಲೆ, 4.5 out of 10 based on 2 ratings
ಶುದ್ದಿಶಬ್ದಂಗೊ (tags): , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಅನುಶ್ರೀ ಬಂಡಾಡಿ

    ಅಪ್ಪು. ನಮ್ಮ ಅಜ್ಯಕ್ಕೊಳ ಜ್ಞಾನಸಂಪತ್ತು ಅಗಾಧ. ಅಂಥಾ ಒಂದು ಅಮೂಲ್ಯ ಆಸ್ತಿಯ ಹಂಚಿಗೊಂಡಿದಿ. ಧನ್ಯವಾದಂಗೊ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಶಾ...ರೀಡಾಗುಟ್ರಕ್ಕ°ಚೆನ್ನೈ ಬಾವ°ವಾಣಿ ಚಿಕ್ಕಮ್ಮಚೂರಿಬೈಲು ದೀಪಕ್ಕದೊಡ್ಡಮಾವ°ಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುವೇಣೂರಣ್ಣvreddhiದೇವಸ್ಯ ಮಾಣಿಕಳಾಯಿ ಗೀತತ್ತೆವಸಂತರಾಜ್ ಹಳೆಮನೆಒಪ್ಪಕ್ಕಶ್ಯಾಮಣ್ಣಯೇನಂಕೂಡ್ಳು ಅಣ್ಣಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶಾಂತತ್ತೆಪುಟ್ಟಬಾವ°ಮುಳಿಯ ಭಾವಸುಭಗರಾಜಣ್ಣದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ