ಸುದ್ದಿಗಳ ಅಭಾವ

November 6, 2010 ರ 3:31 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲೊರು ಅಜ್ಜಕಾನ ಭಾವನೇ ಅಭಾವ ಆಯಿದ ಹೇಳಿದವಿದಾ ಓ ಮೊನ್ನೆ ಮಾಸ್ಟ್ರು ಮಾವನ ಸಣ್ಣ ಮಗನ ಮದುವೆಲಿ.
ಹೇಳುಲೆ ಉತ್ತರ ಇತ್ತಿಲ್ಲೆ.. ಸದ್ಯವೇ ಮತ್ತೆ ಶುರು ಆವುತ್ತು ಹೇಳಿದೆ.. ಆದರೆ ಎಂತ ಬರೆವದು ಹೇಳ್ತದು ಮೊದಲಿಂದಲೂ ಇದ್ದದ್ದೇ.. ಹಾಂಗೆ ಯೋಚಿಸಿಯೊಂಡಿಪ್ಪಗ ಈಗಾಣ ಮಾಧ್ಯಮಂಗಳ ಬಗ್ಗೆ ಬರೆವ ಹೇಳಿ ಶುರು ಮಾಡಿದ್ದು..

ಮೊದಲಿಂಗೆ ಎಲ್ಲರಿಂಗೂ ದೀಪಾವಳಿಯ ಶುಭಾಶಯಂಗೋ.. ಈ ಹಬ್ಬದ ಅಂಬ್ರೇಪಲಿ ಒಂದರಿ ಮೋರಿ ತೋರ್ಸಿ ಹೋಪ ಹೇಳಿ ಶುರು ಮಾಡಿದ್ದೆ.. ಜಾಸ್ತಿ ಬರವಲೆ ಪುರುಸೋತ್ತು ಇಲ್ಲೆ.. ಶ್ರೀ ಅಕ್ಕ ಪುಳಿಯೊಗರೆ ತಿಂಬಲೆ ಬಪ್ಪಲೆ ಹೇಳಿದ್ದು, ಗಣೆಶ ಮಾವ ಕಾದೋಂಡಿದ್ದ..

ಇದೆಂತರ ಈಗ ಗಳಿಗೆಗೊಂದು ರಾಜಕೀಯದ ಸುದ್ದಿ ಬತ್ತಾ ಇಪ್ಪಗ ಎಂತರ ಸುದ್ದಿಗಳ ಅಭಾವ ಯೋಚಿಸಿದಿರಾ, ಸುದ್ದಿಗೊ ಕಂಡಿತಾ ಇದ್ದು.. ಆದರೆ ನವಗೆ ಬೇಕಾದಸುದ್ದಿಗೋ ಸಿಕ್ಕುದು ಬಾರೀ ಕಷ್ಟ. ಎಲ್ಲವೂ ರಾಜಕೀಯಮಯ, ಇನ್ನೂ ಕೆಲವು ಇದ್ದು, ಕತ್ತಿ, ಲಾಂಗು ಸಿನೆಮಾಂದಲೂ ಜಾಸ್ತಿ ಇರ್ತು.. ಆನು ಹೇಳಿದ್ದು ಒಳ್ಳೆ ಸುದ್ದಿಗ ಅಭಾವ ಆಯಿದು ಹೇಳಿ. ಈ ಬಗ್ಗೆ ವಿವರವಾಗಿ ನೋಡುವೋ.

ಓ ಮೊನ್ನೆ ಕರ್ಣಾಟಲ್ಲಿ, ಅದೇ ಮೈಸೂರಿಲಿ ದಸರೆ ಸಂಬ್ರಮ ಇತ್ತಿದಾ.. ಕೊಳಚಿಪ್ಪು ಬಾವ ದಿನಾ ಗಲ್ಲಿ ಗಲ್ಲಿ ತಿರುಗುತ್ತಾ ಇತ್ತಿದ್ದ ಹೇಳಿ ಚೂರಿಬೈಲು ಮಾಣಿ ಹೇಳಿಯೋಡಿತ್ತಿದ್ದ, ನವಗರಡಿಯಾ..
ಪ್ರತಿ ವರ್ಷ ದಸರೆಯ ಪೂರ್ತಿ ತೋರ್ಸುತ್ತಿದ್ದವು.. ಈ ವರ್ಷಎಂತ್ಸೂ ಇಲ್ಲೆ, ಎಲ್ಲಾ ಹಾಳು ರಾಜಕೀಯ ಸುದ್ದಿ ಮಾಂತ್ರ ಇದು ಉದಾಹರಣೆ ಕೊಟ್ಟದ್ದು ಆನು.. ಇಂತಾ ತುಂಬಾ ಒಳ್ಳೆಯ ಸುದ್ದಿಗಳ ಬಿಟ್ಟು ಈ ಹಾಳು ಸುದ್ದಿಗಳೇ ಮಾಧ್ಯಮಲ್ಲಿ ಬತ್ತಾ ಇದ್ದುದಕ್ಕೆ ಹೇಳಿದ್ದು ಒಳ್ಳೆ ಸುದ್ದಿಗಳ ಅಭಾವ ಆಯಿದು ಹೇಳಿ..

ಮತ್ತೆ ಉತ್ತರದ ಗುಜರಾತಿಲಿ ನಡೆದ ಘಟನೆ ಈ ಸುದ್ದಿಗೆ ಪ್ರಸ್ತುತ ಕಾಣ್ತು.. ಅಲ್ಲಿ ದೇಶದ ಒಂದನೇ ನಂಬ್ರದ ಸುದ್ದಿವಾಹಿನಿ ಒಂದು ಮಾಡಿದ ಕಿತಾಪತಿ ಇದು..
ಅಲ್ಲಿ ಒಬ್ಬ ಸಾಯುತ್ತೆ ಹೇಳಿ ಹೊರಟನಡ, ಅವಾಗ ಎಂತ ಸುದ್ದಿ ಸಿಕ್ಕುತ್ತು ಹೇಳಿ ಕಾದೋಂಡಿದ್ದ ಒಬ್ಬ ಸುದ್ದಿಗ್ರಾಹಕ ತಲೆ ಓಡಿಸಿ ಅವಕ್ಕೆ ಒಂದು ಉಪಾಯ ಹೇಳಿದ, ಎಂತಪ್ಪಾ!
ಮಾರ್ಗ ಮಧ್ಯಲ್ಲಿ ಚಿಮಣಿ ಎಣ್ಣೆ ಹೊಯ್ಕೊಂಡು, ಕಿಚ್ಚು ಹತ್ತಿಸಿಕೊಂಬದು ಅದರ ವೀಡಿಯೊ ಮಾಡ್ತೆಯ ಮತ್ತೆ ನಿಂಗಳ ರಕ್ಷಣೆ ಮಾಡ್ತೆಯ ಹೇಳಿ ನಂಬಿಸಿದ ಜೆನ ವೀಡಿಯೋ ಮಾಡಿ ನೇರ ಪ್ರಸಾರ ಮಾಡುತ್ತರಲ್ಲೆ ಬಾಕಿ, ಈಚೆ ಜೆನ ಪಡ್ಚಾ..

ಎಂತ ಹೇಳೆಕ್ಕು ಇಂತದ್ದಕ್ಕೆಲ್ಲಾ.. ಅದಕ್ಕೆ ಹೇಳಿದ್ದು ಸುರುವಿಂಗೆ ಸುದ್ದಿಗಳ ಭಾವ ಆಯಿದು ಹೇಳಿ.. ಇವಕ್ಕೆಲ್ಲಾ ಯೇವಾಗ ಬುದ್ದಿ ಬಕ್ಕೋ.. ಅದಾ ಗಣೇಶ ಮಾವ ದಿನಿಗೇಳುತ್ತಾ ಇದ್ದಾ.. ನಿಂಗೊಗೆ ಮತ್ತೆ ಸಿಕ್ಕುತ್ತೆ ಆತೋ..

ನಿಂಗಳ ಪ್ರೀತಿಯ
ಅಜ್ಜಕಾನ ಭಾವ
ajjakana.bhava@gmail.com

ಸುದ್ದಿಗಳ ಅಭಾವ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಸುದ್ದಿಯ “ಅಭಾವ” ಆದಪ್ಪಗ ಹೀನ್ಗಿಪ್ಪ ಸುದ್ದಿಗಳೂ ಭಾರೀ ಪ್ರಾಮುಖ್ಯತೆ ತೆಕ್ಕೊಳ್ತು!

  (ಮಾರ್ಗ ಮಧ್ಯಲ್ಲಿ ಚಿಮಣಿ ಎಣ್ಣೆ ಹೊಯ್ಕೊಂಡು, ಕಿಚ್ಚು ಹತ್ತಿಸಿಕೊಂಬದು ಅದರ ವೀಡಿಯೊ ಮಾಡ್ತೆಯ ಮತ್ತೆ ನಿಂಗಳ ರಕ್ಷಣೆ ಮಾಡ್ತೆಯ ಹೇಳಿ ನಂಬಿಸಿದ ಜೆನ ವೀಡಿಯೋ ಮಾಡಿ ನೇರ ಪ್ರಸಾರ ಮಾಡುತ್ತರಲ್ಲೆ ಬಾಕಿ, ಈಚೆ ಜೆನ ಪಡ್ಚಾ)

  ಬೇರೆವರ ಕಷ್ಟಲ್ಲಿ ನಮ್ಮ ಸುಖ ಕಾಂಬ ಮೂರ್ಖರೂ ನಮ್ಮ ಸುತ್ತ-ಮುತ್ತ ಇದ್ದವು ಹೇಳುದು ಭಾರೀ ದುಃಖದ ಸಂಗತಿ! :(

  [Reply]

  VA:F [1.9.22_1171]
  Rating: +1 (from 1 vote)
 2. ಗಣೇಶ ಮಾವ°

  ಇದಾ ಭಾವಾ,ನೀನು ರಾಜಕೀಯ ಮಾತಾಡಲೇ ಹೆರಾಟರೆ ಶ್ರೀ ಅಕ್ಕನ ಪುಳಿಯೋಗರೆಯೂ ಸಿಕ್ಕ.ಬೇಗ ಹೋಪ!!ಅವರ ಗೆಬ್ಬಾಯಿಸಿಗೊಂಡು ಕೂದರೆ ನವಗೆ ಸಿಕ್ಕುದು ತಪ್ಪುಗು.

  [Reply]

  VN:F [1.9.22_1171]
  Rating: 0 (from 0 votes)
 3. ಸುವರ್ಣಿನೀ ಕೊಣಲೆ
  Suvarnini Konale

  ಈಗಾಣ ಮಾಧ್ಯಮಂಗಳಲ್ಲಿ ಬಪ್ಪ ಶುದ್ದಿ/ಕಾರ್ಯಕ್ರಮಂಗಳಲ್ಲಿ ನೋಡುಲೆ..ಕೇಳುಲೆ ಎಡಿಗಾದ ಹಾಂಗಿಪ್ಪದು ಕೇವಲ 25-30%..ದುಃಖದ ವಿಚಾರ :( ಟಿ.ಆರ್.ಪಿ. ಹೆಚ್ಚಿಸಿಗೊಂಬಲೆ ಎಂತೆಲ್ಲಾ ನಾಟಕ ಮಾಡ್ತವ್ವು !! ಆದರೂ ಕೆಲವು ಜೆನ ಉತ್ತಮ ಪತ್ರಕರ್ತರು ಇದ್ದವು ಹೇಳುದೇ ಸಂತೋಷ.

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ

  ಸುವರ್ಣಿನಿಯ ಅಭಿಪ್ರಾಯವೇ ಎನ್ನದು.ಕೇವಲ 15%ಮಾ೦ತ್ರ ನೋಡುತ್ತ ಹಾ೦ಗಿಪ್ಪದು ಹೇಳಿ ಒ೦ದು ವ್ಯತ್ಯಾಸ ಅಷ್ಟೆ.ಇದ್ದದರಲ್ಲಿ ದೂರದರ್ಷನವೇ ರಜ ಆರು ಮರ್ಯದೆ ಇಪ್ಪ ಕಾರ್ಯಕ್ರಮ ಕೊಡುತ್ತದು.ಆನ೦ತು ಕೇವಲ ವಾರ್ತೆ ಕೇಳ್ತದಕ್ಕೆ ಟಿ.ವಿ.ನೋಡ್ತದು ಹೇಳಿ ಮಾಡಿದ್ದೆ.(ನೋಡ್ಲೆ ಈ ರಾಜಕೀಯದವರ ಹೊಲಸು ಮೋರೆ ನೋಡೇಕಾವುತ್ತಿದ).ಅಜ್ಜಕಾನ ಭಾವ೦ ಎಲ್ಲಿಯಾರು ರುದ್ರ ಹೇಳ್ಲೆ ಕೂದು ಬಾಕಿ ಆದನೋ ಹೇಳಿ ಗ್ರಹಿಸಿಯೊ೦ಡಿತ್ತಿದ್ದೆ ಅ೦ತೂ ಕಾ೦ಬಲೆ ಸಿಕ್ಕಿತ್ತಾನೆ.ಸುದ್ದೀಗೆ ಒ೦ದು ಒಪ್ಪ ಭಾವ.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಭಾವಾ..
  ಶುದ್ದಿಗಳ ಅಭಾವದ ಬಗ್ಗೆ ಅ-ಭಾವ ಬರದ್ದದು ಪಷ್ಟಾಯಿದು.
  ಎನಗೂ ಎಷ್ಟೋ ಸರ್ತಿ ಕಾಂಬದಿದ್ದು – ಟೀವಿ ತಿರುಗುಸಿದಷ್ಟೂ ದಿನ ಒಂದೇ ಶುದ್ದಿ ಹೇಳ್ತವಲ್ಲದೋ -ಅವಕ್ಕೆ ಬೊಡಿತ್ತಿಲ್ಲೆಯೋ ಹೇಳಿಗೊಂಡು!!!

  :-)

  [Reply]

  VA:F [1.9.22_1171]
  Rating: 0 (from 0 votes)
 6. ಈಚ ಭಾವ
  ಈಶ್ವರಚಂದ್ರ

  ಏ ಅಜ್ಜಕಾನ ಭಾವ.. ಸುದ್ದಿಗೆ ಅಭಾವ ಹೇಳ್ತದಿದ್ದಾ… ಗೊಂತಿಲ್ಲೆ…!! ಒಪ್ಪಣ್ಣ ಹೇಳಿದ ಸುದ್ದಿಯೇ ಬೊಡಿತ್ತಿಲೆಯಾ ಕೇಳಿದ್ದ… ಕೆಲವು ಸರ್ತಿ ಅನಿವಾರ್ಯ ಆವ್ತು ಅವಕ್ಕೆ.. ಎಂತ ಮಾಡುದು…!!! ಮನೇಲಿ ಎರಡು ದಿನ ಹಾಗಲಕಾಯಿ ಹುಳಿ ಮಾಡಿದಾಂಗೆ…!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಸಂಪಾದಕ°ಗೋಪಾಲಣ್ಣಜಯಶ್ರೀ ನೀರಮೂಲೆಬೋಸ ಬಾವಬಟ್ಟಮಾವ°ಕೇಜಿಮಾವ°ಪಟಿಕಲ್ಲಪ್ಪಚ್ಚಿಕೊಳಚ್ಚಿಪ್ಪು ಬಾವರಾಜಣ್ಣvreddhiಜಯಗೌರಿ ಅಕ್ಕ°ಹಳೆಮನೆ ಅಣ್ಣಮಂಗ್ಳೂರ ಮಾಣಿಪುಣಚ ಡಾಕ್ಟ್ರುಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿಚೆನ್ನೈ ಬಾವ°ವಿನಯ ಶಂಕರ, ಚೆಕ್ಕೆಮನೆಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ಮುಳಿಯ ಭಾವಪ್ರಕಾಶಪ್ಪಚ್ಚಿಶ್ರೀಅಕ್ಕ°ವಸಂತರಾಜ್ ಹಳೆಮನೆಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ