ವಿಶ್ವಹಿತವೇ ಸೀಮೋಲ್ಲಂಘನ

September 12, 2011 ರ 8:00 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೋಕರ್ಣದ ಅಶೋಕೆಲಿ ಹದಿನೆಂಟನೇ ಚಾತುರ್ಮಾಸ್ಯವ್ರತದ ಸೀಮೋಲ್ಲಂಘನವನ್ನು ಮಾಡಿಕ್ಕಿ ಶ್ರೀ ಸಂಸ್ಥಾನ,”ಜಗತ್ತಿಲಿ ಧರ್ಮ ಬೆಳೆಯಲಿ ಹೇಳಿ ಪೀಠ ಸ್ಥಾಪನೆ ಮಾಡಿ ಅಪ್ಪಗ ಹೇಳಿದವ್ವು ಶಂಕರಾಚಾರ್ಯರು.
ಆಚಾರ್ಯರು ನವಗೆ ನಿತ್ಯ ಚೈತನ್ಯರೂಪಿ ರಾಮನ ಕೊಟ್ಟಿದವು. ಮೂವತ್ತಮೂರನೇ ಯತಿಗಳಾದ ಹಿರಿಯ ರಾಘವೇಶ್ವರ ಭಾರತೀ ಸ್ವಾಮಿಗಳು ಕೊಟ್ಟ ಕಡೆಯಾಣ ಮಾತು “ರಾಮಮುದ್ರೆಯ ನಂಬಿ” ಹೇಳಿ.
ಎರಡು ಗೆಂಟು ಹಾಕಿದರೆ ಭದ್ರ! ಕಳುದ ವರ್ಷದ ಚಾತುರ್ಮಾಸ್ಯ ಒಂದನೇ ಗೆಂಟು. ಇದು ಎರಡನೇ ಗೆಂಟು. ಇನ್ನು ಇದು ಸಡಿಲೂ ಆಗ. ಬಿಟ್ಟುದೇ ಹೋಗ. ಅಷ್ಟು ಭದ್ರ! ನಮ್ಮೆಲ್ಲರ ಒಂದುಗೂಡ್ಸಿದ್ದು ಅಶೋಕೆ. ನಾವು, ನಮ್ಮ ಹಿರಿಯೋರು ನೋಡದ್ದ ಅಶೋಕೆಯ ನೋಡಿದ್ದೆಯ°. ಈ ಗೆಂಟು, ಈ ನೆಂಟು ನಮ್ಮ ಒಂದು ಮಾಡ್ತಾ ಇಪ್ಪದು. ಅಶೋಕೆಗೆ ಬಂದು ನೆಮ್ಮದಿ ಕಂಡೋರಿದ್ದವು. ಅಶೋಕೆ ಧರ್ಮಸಾಮ್ರಾಜ್ಯವಾಗಿ ಬೆಳೆಯೆಕ್ಕು. ಅಶೋಕೆ ಅಯೋಧ್ಯೆ ಎರಡೂ ಒಂದೇ!
ಅಯೋಧ್ಯೆ ಶ್ರೀ ರಾಮನ ಕಾಲಲ್ಲಿ ವಿಶ್ವದ ರಾಜಧಾನಿ. ಅಶೋಕೆ ಧರ್ಮಸಾಮ್ರಾಜ್ಯದ ರಾಜಧಾನಿ ಆಗಿ ಬೆಳೆಯೆಕ್ಕು.
ಚಾತುರ್ಮಾಸ್ಯ ಹೇಳಿದರೆ ಸೀಮಿತ. ಸೀಮೆಯ ಒಳ ಇರೆಕ್ಕು. ನದಿಗೋ ಸಮುದ್ರದ ಕಡೆಂಗೆ ಹರಿತ್ತವು. ಹಾಂಗೇ, ಶಿಷ್ಯಂಗೋ ಗುರುವಿನ ಕಡೆಂಗೆ ಬಪ್ಪಲೆ ಚಾತುರ್ಮಾಸ್ಯ ಪ್ರಶಸ್ತ ಸಮಯ. ಇದು ಒಂದು ಅವಕಾಶ. ಇಲ್ಲಿ ಬಂದೋರೆಲ್ಲ ಅಶೋಕೆಯ ಸವಿ ಉಂಡಿದಿ. ನಮ್ಮೆಲ್ಲರ ಎರಡು ಸರ್ತಿ ಒಂದುಗೂಡುಸಿದ ಮಾಹಾಚೈತನ್ಯ ಅಶೋಕೆ. ರಾಮಕಥೆ, ಸಾವಯವ ಆಹಾರ ಮತ್ತೆ ಧಾರ್ಮಿಕ ಕಾರ್ಯಕ್ರಮಂಗೋ ಈ ಚಾತುರ್ಮಾಸ್ಯದ ವಿಶೇಷಂಗೋ. ವಿವಿಧ ಯಾಗಂಗೋ ನಡದ್ದು. ಗೋಕರ್ಣದ ಉಪಾಧಿವಂತ ಮಂಡಲದವ್ವು ಸ್ವಪ್ರೇರಣೆಂದ, ಸ್ವಖರ್ಚಿಂದ ಕಾರ್ಯಕ್ರಮವ ನಡೆಶಿದ್ದವು. ಸಹಸ್ರ ಚಂಡಿಕಾ ಯಾಗದೇ ಮಾಡಿದ್ದವು. ಅದಕ್ಕೆ ಹೇಳಿ ನಿರ್ಮಾಣ ಮಾಡಿದ ಹೋಮಕುಂಡಲ್ಲಿ ನೀರು ಬಂತು. ಒಂದು ಮಾತಿದ್ದು. ನೀರಿಲಿ ಮಾಡುವ ಹೋಮ ಹೇಳಿ!!
ಈ ಚಾತುರ್ಮಾಸ್ಯಲ್ಲಿ ಅದುದೇ ಆತು. ಇದು ಅಶೋಕೆ. ಇದು ರಾಮಚಂದ್ರಾಪುರ ಮಠ. ಇದು ಮಹಾಬಲೇಶ್ವರ. ಇದು ಶ್ರೀರಾಮ. ಇಲ್ಲಿ ನೀರು, ಅಗ್ನಿ ಒಟ್ಟಿಂಗೇ ಇರ್ತವು. ಅಶೋಕೆಲಿ ಎಂತಕ್ಕೆ ನೀರಿಲಿ ಚಂಡಿಕಾಯಾಗ ಆತು?
ಒಂದು ಕಾಲಲ್ಲಿ ಇಲ್ಲಿ ಹುಲಿ, ಜಿಂಕೆ ಒಟ್ಟಿಂಗೆ ಇದ್ದ ಜಾಗೆ. ಹಾಂಗೆ ಇಪ್ಪಗ, ಅಗ್ನಿ ಮತ್ತೆ ನೀರು ಒಂದಪ್ಪದು ಅದಕ್ಕಿಂತಲೂ ಮೇಲಿಂದು.

ಇಂದು ಸಿದ್ಧೇಶ್ವರದ ಕೆಂಗಳಾ ಪರಮೇಶ್ವರೀ ದೇವಸ್ಥಾನಕ್ಕೆ ಸೀಮೋಲ್ಲಂಘನವ ಮಾಡಿದೆಯಾ°.
ಅಲ್ಲಿಗೆ ಹೋಪಗ ಹನುಮಂತನ ಪಲ್ಲಕ್ಕಿಯ ದರ್ಶನ ಆಯೆಕ್ಕು ಹೇಳಿ ಇತ್ತು. ಹಾಂಗೆ ಹೋಪಗ ಭದ್ರಕಾಳಿಯ ದೇವಸ್ಥಾನಕ್ಕೂ ಹೋಯೆಕ್ಕಾಗಿ ಬಂದು ಅಮ್ಮನ ದರ್ಶನವೂ ಆತು. ಅನಿರೀಕ್ಷಿತವಾಗಿ ಗ್ರಾಮ ದೇವತೆ ಭದ್ರಕಾಳಿಯ ಸನ್ನಿಧಿಗೆ ಹೋದ ಕಾರಣ ಅಲ್ಲಿ ಯಾವ ತಯಾರಿಯೂ ಇದ್ದತ್ತಿಲ್ಲೆ.
ಆದರೂ ಅಮ್ಮನ ದರ್ಶನ ಅಪ್ಪ ಹೊತ್ತಿಂಗೆ ಅಬ್ಬೆಯ ಆಶೀರ್ವಾದಪೂರ್ವಕ ಹೂಗು ಬಿದ್ದು ಪ್ರಸಾದ ಸಿದ್ಧಿ ಆತು.
ಗೋಕರ್ಣದ ಭದ್ರಕಾಳಿ ಸಂಗ್ರಾಮದ ವಿಜಯದ ಸಂಕೇತ. ಈ ಎರಡು ಅಮ್ಮನೋರ ಸಾನ್ನಿದ್ಯ ಹೇಳಿದರೆ ಸೀಮೋಲ್ಲಂಘನದ ಸಂಕೇತ.
ಒಂದು ಸಂಸಾರ ಮಾಡಿದರೆ ಅದು ಸೀಮೋಲ್ಲಂಘನ. ಒಂದು ಜೀವಿಯ ಬಗ್ಗೆ ಆಲೋಚನೆ ಮಾಡುದೂ, ಸಹಕಾರ ಮಾಡುದೂ ಸೀಮೋಲ್ಲಂಘನ. ಇದು ಅದ್ವೈತ. ನಾವು, ಜಾನುವಾರುಗೋ, ಆಳುಕಾಳುಗೋ, ಸಂಬಂಧಿಕರು, ಊರೋರು ಹೇಳಿ ಎಲ್ಲ ಒಂದು ಬೇಲಿಯ ಒಳ ಇರ್ತು.
ಅದರ ಮೀರಿ ನಾವು ಯೋಚನೆ ಮಾಡಿ ವಸುದೈವ ಕುಟುಂಬಕಮ್ ಹೇಳಿ ವಿಶ್ವ ಕುಟುಂಬವ ಆಲೋಚನೆ ಮಾಡಿದರೆ ಅದು ಒಂದು ಸೀಮೋಲ್ಲಂಘನೆ.
ಪ್ರಪಂಚದ ಆರೂ ಸೇವೆ ಮಾಡ್ಲೆ ಎಡಿಗಪ್ಪಂಥ, ಮಾಡ್ಲೇ ಇಪ್ಪಂಥ ವಿಶ್ವಹಿತಮ್ ಕೂಡಾ ಒಂದು ಸೀಮೋಲ್ಲಂಘನವೇ!! ಎಲ್ಲಾ ಬಗೆಯ ಪರೋಪಕಾರಂಗಳಲ್ಲಿಯೂ, ಲೋಕಚಿಂತನೆಗಳಲ್ಲಿಯೂ ಸೀಮೋಲ್ಲಂಘನ ಇದ್ದು. ಇಲ್ಲಿ ಎಲ್ಲವೂ ಮಾಯೆ. ಮಾಯೆಯೇ ಮುಂದರುದರೆ ಅಂತಿಮ ಸೀಮೋಲ್ಲಂಘನ. ಮಾಯೆ ಹೇಳಿದರೆ ಅಮ್ಮ. ಅಬ್ಬೆಯ ಕೃಪೆ ಇಲ್ಲದ್ದೆ ಸೀಮೋಲ್ಲಂಘನ ಸಾಧ್ಯ ಇಲ್ಲೆ. ಭದ್ರಕಾಳಿ ಅದರ ಪ್ರತೀಕ.
ಸೀಮೋಲ್ಲಂಘನದ ವ್ಯಾಪ್ತಿ ಸಂಸಾರಂದ ಸುರು ಆಗಿ ಪರಮಾತ್ಮನ ವರೆಂಗೆ. ಸಂಸಾರಂದ ಸಮಾಜ, ಸಮಾಜಂದ ವಿಶ್ವ ಸೇವೆ, ವಿಶ್ವಸೇವೆಂದ ಸೀಮೋಲ್ಲಂಘನ ಮಾಡೆಕ್ಕು.

ರಾಮಕಥೆ ಅದ್ಭುತ ಕಾರ್ಯಕ್ರಮ. ಒಂದುವೇಳೆ ಖರ್ಚು ಆತು ಹೇಳಿ ಗ್ರೇಶಿದರೆ ಅದು ರಾಮಂಗೆ ಅರ್ಪಣೆ.
ಇದು ರಾಮತತ್ವದ ಪ್ರಚಾರಕ್ಕಾಗಿ. ರಾಮಕಥೆಯ ಬೇರೆ ಹೇಳಿ ಗ್ರೇಶೆಡಿ. ಇದು ಒಂದೇ ನಿಂಗಳನ್ನೂ, ಗೋವನ್ನೂ, ಮಠವನ್ನೂ, ಎಲ್ಲವನ್ನೂ ಸಾಂಕುಗು, ಸಲಹುಗು.
ರಾಮಕಥೆಯ, ರಾಮತತ್ತ್ವವ ಪಸರಿಸದ್ದೆ ಇದ್ದರೆ ರಾಮಚಂದ್ರಾಪುರ ಮಠ ಹೇಳಿ ಹೆಸರೆಂತಕೆ ಇಪ್ಪದು? ರಾಮಾಯಣವ ಒಂದು ಜಾಡ್ಯ ಹೇಳುವೋರು ಇದ್ದವು.
ಕಾದಂಬರಿಯ ಒಂದೆರಡು ಸರ್ತಿ ಓದುಲೆಡಿಗು. ಸಿನೆಮಾವ ಎರಡುಮೂರು ಸರ್ತಿ ನೋಡುಲೆಡಿಗು. ಆದರೆ ರಾಮಾಯಣ ಎಷ್ಟು ಸಮಯಂದ ಇದ್ದು? ಯುಗ ಯುಗಂದಲೇ ಇದ್ದು.
ನಮ್ಮ ಜೀವನಲ್ಲಿ ನಾವು ಎಷ್ಟು ಸರ್ತಿ ಓದಿಕ್ಕು? ಟಿ. ವಿ ಲಿ ಎಷ್ಟು ಸರ್ತಿ ನೋಡಿಕ್ಕು? ರಾಮಕಥೆ ಸಾವಿಲ್ಲದ್ದ ತತ್ತ್ವ. ಅದು ಅಮರ.

ಅಶೋಕೆಂದ ಬಿಟ್ಟು ಹೋಪದು ಬೇಜಾರದ ಸಂಗತಿ. ನಮ್ಮ ಜೀವನಕ್ಕೆ ಅಶೋಕೆ ಚೈತನ್ಯವ ಕೊಡುತ್ತಿರಲಿ.. ಎಲ್ಲರೂ ಬಂದು ತೆಕ್ಕೊಂಡು ಹೋಗಿ ಒಳ್ಳೆಯ ಕಾರ್ಯಂಗಳ ಮಾಡಿ.
ದಶರಥ ರಾಮಂಗೆ ವಿನಯವಂತ° ಆಗು ಹೇಳಿ ಹೇಳ್ತ, ಆದರೆ ವಿನಯವಂತ° ರಾಮಂಗೇ ಅದೆಂತಕ್ಕೆ? ಹೇಳಿದರೆ ಅಪ್ಪ° ಆಗಿ ಆನು ಹೇಳೆಕ್ಕಪ್ಪದು ಇದು ಹೇಳ್ತನಡ.
ಹಾಂಗೇ ಎಲ್ಲೊರೂ ಇನ್ನೂ ಒಳ್ಳೆಯ ಕೆಲಸ ಮಾಡಿ. ರಾಮನ ಮುದ್ರೆಯ ನಂಬಿ. ರಾಮನ ಕಾರ್ಯವ ಮಾಡುವ°. ಎಲ್ಲರ ಬದುಕಿಲಿ ಸೀಮೋಲ್ಲಂಘನ ಆವುತ್ತಾ ಇರಲಿ.. ಸಮಾಜ ಸೀಮೋಲ್ಲಂಘನ ಮಾಡಲಿ.. ವಿಶ್ವವ್ಯಾಪಿಯಾಗಿ ಬೆಳೆಯಲಿ..: ಹೇಳಿ ಎಲ್ಲ ಶಿಷ್ಯರ ಆಶೀರ್ವದಿಸಿದವು.

ಚಾತುರ್ಮಾಸ್ಯ ವ್ರತ ಸಮಾಪ್ತಿಯ ಸೀಮೋಲ್ಲಂಘನೆಯ ಶುಭ ಸಂದರ್ಭದಲ್ಲಿ, ಶ್ರೀ ಧರ್ಮಚಕ್ರ ಟ್ರಸ್ಟ್ ನ ಅಂತರ್ಜಾಲ ತಾಣ ವಿಶ್ವಹಿತಮ್ ಕೂಡಾ ಶ್ರೀ ಶ್ರೀ ಗಳಿಂದವಿಶ್ವ ಸಮರ್ಪಣೆ ಆಯಿದು.
ಧರ್ಮಸಭೆಲಿ ಗಂವ್ಹಾರ ಪಾಂಡುರಂಗಣ್ಣ ಮಾತಾಡಿ, “ಶ್ರೀಗುರುಗೋ ಭಕ್ತರ ಮನೋಭಿಲಾಷೆ ಪೂರೈಸುಲೇ ಬಯಿಂದವು. ಇಂದ್ರಾಣ ಸೀಮೋಲ್ಲಂಘನ ನಿಜರೂಪಲ್ಲಿ ಆಯಿದು. ಇಹಲೋಕಂದ ‘ಭಾ’ಲೋಕಕ್ಕೆ ಆಯಿದು.
ನಮ್ಮ ಸಮಯಂಗಳ ಶ್ರೀ ಗುರುಗೊಕ್ಕೆ ಸಮರ್ಪಿಸಿದರೆ ನಾವು ಧನ್ಯರಪ್ಪಲಕ್ಕು” ಹೇಳಿ ಹೇಳಿದವು.

ಈ ಸರ್ತಿಯ ಚಾತುರ್ಮಾಸ್ಯ ಪ್ರಶಸ್ತಿಯ ರಾಣಿಬೆನ್ನೂರಿನ ಶ್ರೀ ವಾಸುದೇವ ಹೆಬ್ಬಾರರು, ಇವಕ್ಕೆ ಹೋಟೆಲ್ ಉದ್ಯಮದ ಮೂಲಕ ಸಮಾಜ ಸೇವೆ ಮಾಡಿದ್ದದಕ್ಕೆ ಕೊಟ್ಟು ಗೌರವ ಸಮರ್ಪಣೆ ಮಾಡಲಾತು.
ಇವು ಸುಮಾರು ಕಾರ್ಯಕ್ರಮಂಗಳ ನೇತೃತ್ವ ವಹಿಸಿ, ಕಾರ್ಯೋನ್ಮುಖರಾಗಿಪ್ಪವ್ವು. ಗೋಸೇವೆ, ಗೋಶಾಲೆಲಿ ಪೂರ್ಣ ಜವಾಬ್ದಾರಿಲಿ ಕೆಲಸ ಮಾಡಿದವ್ವು.
ಶ್ರೀ ಸವಾರಿಗೆ ವಾಹನ ಕೊಟ್ಟು ಮಠದ ಮೇಲಿನ ಶ್ರದ್ಧಾ ಭಕ್ತಿ ಪ್ರಕಟ ಮಾಡಿದ್ದವು. ಶ್ರೀ ಹೆಬ್ಬಾರರು ಸನ್ಮಾನ ಸ್ವೀಕರುಸಿ ಮಾತಾಡಿ, ” 19 ಇಂಚು ಉದ್ದಕ್ಕೆ ಗಾಯ ಮಾಡಿ ಕಾನ್ಸರ್ ನ ಶಸ್ತ್ರಕ್ರಿಯೆ ಮಾಡಿದರೂ, ಶ್ರೀ ಗುರುಗಳ ಆಶೀರ್ವಾದಂದಾಗಿ ಆರೋಗ್ಯಲ್ಲಿ ಇದ್ದೆ.
ಉತ್ತರಕನ್ನಡದ ಎಲ್ಲಾ ಶಿಷ್ಯರ ಸಹಕಾರಂದ ಎಲ್ಲಾ ಕೆಲಸ ಸಾಧ್ಯ ಆಯಿದು. ಶ್ರೀಗಳ ಆಶೀರ್ವಾದ ಇದ್ದ ಕಾರಣವೇ ಗೋಶಾಲೆಯ ನೋಡಿಗೊಂಬಲೆ ಎಡಿಗಾತು.” ಹೇಳಿ ಹೇಳಿದವು.

ಪರಿವಾರದ ಅಣ್ಣ ಕೊಂಡಿಬೈಲು ಶ್ರೀ ಹರ್ಷಣ್ಣ ಚಾತುರ್ಮಾಸ್ಯದ ಅನಿಸಿಕೆಗಳ ಹೇಳಿದವು.
ಚಾತುರ್ಮಾಸ್ಯದ ಅವಲೋಕನ ಶ್ರೀ ಎಂ . ಕೆ ಹೆಗಡೆ ಇವರಿಂದ ನಡದತ್ತು. ಈ ಸಂದರ್ಭಲ್ಲಿ, ಮಾಣಿ ವಲಯದವರಿಂದ ‘ಕುಟುಂಬ ದರ್ಶನ’ ಹೇಳ್ತ ಸಾಫ್ಟ್ ವೇರ್ ಸಮರ್ಪಣೆ ಆಯಿದು.
‘ಶ್ರೀ ಆರ್ಯಪ್ರಭ’ ಹೇಳ್ತ ವಿಶೇಷ ಸಂಚಿಕೆ ಬಿಡುಗಡೆ ಆಯಿದು.

ಸೀಮೋಲ್ಲಂಘನದ ಕೆಲವು ಸಂದರ್ಭಂಗೊ:

ವಿಶ್ವಹಿತವೇ ಸೀಮೋಲ್ಲಂಘನ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

  1. ಸುಭಗ

    ಪ್ರಭು ಶ್ರೀರಾಮಭದ್ರ, ಮಾತೆ ಭದ್ರಕಾಳಿ ಈ ಇಬ್ಬರ ಅನುಗ್ರಹದ ಭದ್ರತೆಯ ಶ್ರೀಗುರುಗೊ ನವಗೆ ದಯಪಾಲಿಸಿಪ್ಪಗ ನಮ್ಮ ಜೀವನಲ್ಲಿ ಯಾವೊಂದು ಅಭಾವವೂ ಬಾರ!

    [Reply]

    VN:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ವಿದ್ವಾನಣ್ಣದೊಡ್ಡಮಾವ°ಒಪ್ಪಕ್ಕಶಾಂತತ್ತೆಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಪುತ್ತೂರುಬಾವಯೇನಂಕೂಡ್ಳು ಅಣ್ಣದೊಡ್ಮನೆ ಭಾವಕೇಜಿಮಾವ°ಮಾಲಕ್ಕ°ವೇಣಿಯಕ್ಕ°ಸುವರ್ಣಿನೀ ಕೊಣಲೆಬಟ್ಟಮಾವ°ಡೈಮಂಡು ಭಾವಕೆದೂರು ಡಾಕ್ಟ್ರುಬಾವ°ಕಜೆವಸಂತ°ಸಂಪಾದಕ°ಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಪಟಿಕಲ್ಲಪ್ಪಚ್ಚಿಪುಟ್ಟಬಾವ°ರಾಜಣ್ಣಕಳಾಯಿ ಗೀತತ್ತೆಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ