ಬಲ್ನಾಡು ಮಾಣಿಯ ಬಲ್ಲ-ನಾಡು!

ಬಲ್ನಾಡುಮಾಣಿಯ ಬೈಲಿಂಗೆ ಪರಿಚಯ ಮಾಡ್ತದು ಸುಮ್ಮನೇ!
ಎಂತಕೇ ಹೇಳಿತ್ತುಕಂಡ್ರೆ, ಅವ ಎಲ್ಲೋರಿಂಗೂ ಅರಡಿಗಾದ ವೆಗ್ತಿ.
ಆದರೆ; ಪರಿಚಯ ಮಾಡುಸು ಮಿನಿಯಾ – ಹೇಳಿ ಗುರಿಕ್ಕಾರ್ರು ಹೇಳಿಕ್ಕಿ ಹೋಯಿದವು. ಮಾಡದ್ರೆ ಸಮ ಆಗ.

ಹ್ಮ್, ಎಲ್ಲಿಂದ ಸುರು ಮಾಡ್ತದು?!
ಪುತ್ತೂರಿನ ಒತ್ತಕ್ಕೆ ಇಪ್ಪ ಬಲ್ನಾಡಿಲಿ ಮನೆ.
ಸಣ್ಣ ಇಪ್ಪಗಾಣ ಶಾಲೆಯ, ಅದರಿಂದ ಮತ್ತಾಣ ಕೋಲೇಜಿನ ಎಲ್ಲ ಅಳಿಕೆಲಿ ಕಲ್ತದು.
ಅಳಿಕೆಲಿಪ್ಪಗ ಬರೇ ಪುಸ್ತಕದ್ದು ಮಾಂತ್ರ ಕಲ್ತದಲ್ಲ, ಬದಲಾಗಿ ದೈವಭಗ್ತಿ, ಸಂಸ್ಕಾರ, ವಿದ್ಯೆ, ಬುದ್ಧಿ – ಎಲ್ಲವನ್ನೂ ಕಲ್ತುಗೊಂಡಿದ.
ಇಂದಿಂಗೂ ಅದರ ಅಂಶ ಇಪ್ಪದು ಅಂದಾಜಿ ಆವುತ್ತು, ಕೋರ್ಟುರೋಡಿಲಿಪ್ಪ ದೇವಸ್ಥಾನಕ್ಕೆ ಸಾಯಿ ಭಜನೆಗೆ ಹೋಪದು ಕಾಂಬಗ!
ಅದಿರಳಿ,

ಬಲ್ನಾಡುಮಾಣಿ - ಜೇನನಕ್ಕಿದ್ದು!

ಅವ ಕಾಂಬಲೆ ಅಷ್ಟು ಸಪುರ ಸಪುರವಾಗಿ ಇದ್ದರೂ – ಮಾಣಿಯ ಆಸಗ್ತಿ ತುಂಬ ಅಗಲವಾಗಿ ಇದ್ದು.
ಪದ್ಯ ಹೇಳ್ತದೋ, ಕಂಪ್ಯೂಟರು ಕುಟ್ಟುದೋ, ಕೃಷಿ ಮಾಡುದೋ, ಹಾಲು ಕರೆತ್ತದೋ – ಎಲ್ಲವುದೇ!
ಇಷ್ಟು ಆಸಗ್ತಿ ಇದ್ದಾಗ್ಯೂ, ಮಾಣಿಗೆ ಪ್ರಾಯ ಬರೇ ಸಣ್ಣ ಇದಾ! 🙂

ಹ್ಮ್, ಉದಿ ಆದರೆ ಸಮೆ, ತಮ್ಮನ ರಾಮಜ್ಜನ ಕೋಲೇಜಿಂಗೆ ಬಿಡ್ತ ನೆಪಲ್ಲಿ ಬಿಡ್ಳೆ ಹೋಪಲಿದ್ದು!
ಇಷ್ಟೂ ಸಣ್ಣ ಮಾಣಿ, ಕಪ್ಪು ಬೈಕ್ಕಿನ ಕಾಲೆಡಕ್ಕಿಲಿ ಸಿಕ್ಕುಸಿಗೊಂಡು, ಹಿಂದಾಣ ಸೀಟಿಲಿ ತಮ್ಮನನ್ನೂ ಕೂರುಸಿಗೊಂಡು, ಪೆರೆಪೆರೆ ಹೋರುನು ಬಡ್ಕೊಂಡು ಹೋಪಗ ಎಷ್ಟು ದೊಡ್ಡವನೂ ದಾರಿ ಬಿಟ್ಟಿಕ್ಕುಗು! 😉
ದಾರಿ ಬಿಟ್ಟಷ್ಟೂ ಸಾಕಪ್ಪಲಿಲ್ಲೆ ಈ ಮಾಣಿಗೆ! ಅದು ಬೇರೆ ವಿಶಯ.. 😉

ಹಗಲಿಡೀ ಹೊತ್ತಿಲಿ ಈ ಮಾಣಿಗೆ ಹವ್ಯಾಸ ಎಂತರ?
ಹತ್ತು ಹಲವು ಹವ್ಯಾಸಂಗಳಲ್ಲಿ ಮುಖ್ಯವಾದ್ದು ಅಂತರ್ಜಾಲ!
ಅಪ್ಪು, ಬಲ್ಲವರ ನಾಡಿಲಿ ಎಂತರ ಹೊಸತ್ತು ಸಿಕ್ಕುತ್ತು ಹೇಳಿ ಹುಡ್ಕುತ್ತದು ಈ ಬಲ್ನಾಡುಮಾಣಿಯ ನೆಚ್ಚಿನ ಹವ್ಯಾಸಂಗಳಲ್ಲಿ ಒಂದು.
ಬೇರೆ ಬೇರೆ ಬೈಲಿಂಗೆ ಹೋಗಿ – ಅಲ್ಲಿ ಎಂತಾರು ಮಾಹಿತಿ ಸಿಕ್ಕುತ್ತೋ – ಹೇಳಿ ನೋಡ್ತದು.

ಸುಮಾರೊರಿಷಂದ ಇಂಟರುನೆಟ್ಟಿಲಿಯೇ ಗುರುಟಿದ ಅನುಭವ ಇಪ್ಪ ಈ ಮಾಣಿ, ಬೈಲಿಂಗೆ ಅದರ ಬಗ್ಗೆಯೇ ಶುದ್ದಿ ಹೇಳಿರೆ ಹೇಂಗಕ್ಕು?
ಮೊನ್ನೆ ಸಿಕ್ಕಿಪ್ಪಗ ಕೇಳಿಯೇ ಬಿಟ್ಟೆ –
– ಸಂತೋಷಲ್ಲಿ ಒಪ್ಪಿ ’ಅಕ್ಕು, ನೋಡುವೊ’ ಹೇಳಿದ.
ಹಾಂಗೆ, ಬಲ್ನಾಡು ಮಾಣಿಯ ಶುದ್ದಿಗೊ ಇನ್ನು ಬೈಲಿಲಿ ಸುರು ಆವುತ್ತು.
ಶುದ್ದಿಗಳಲ್ಲಿ – ಇಂಟರುನೆಟ್ಟಿನ ಬಲ್ಲವರ ನಾಡಿನ ಸುತ್ತ ತಿರುಗುಸುಗು ನಮ್ಮ..
ಹೊಸತ್ತಿದ್ದರೆ ನಾಡಿನಾಡಿ ಹೇಳಿಕೊಡುಗು..

ಬನ್ನಿ,
ಬಲ್ನಾಡುಮಾಣಿಯ ಬಲ್ಲನಾಡಿನ ಶುದ್ದಿಗಳ ನೋಡಿ, ಕಲ್ತುಗೊಂಬ.
ನಮ್ಮ ಜ್ಞಾನವ ಹೆಚ್ಚಿಸಿಗೊಂಬ.
ಬೇರೆ ಬೈಲುಗಳಲ್ಲಿ ಹೊಸತ್ತೆಂತರ ಬಯಿಂದು ಹೇಳ್ತದ ನೋಡಿ ಕಲಿವೊ.
ಎಂತ ಹೇಳ್ತಿ?
~
ಒಪ್ಪಣ್ಣ.

ಬಲ್ನಾಡುಮಾಣಿಯ ಚೆಂಙಾಯಿಪುಟಂಗೊ:
ಮೋರೆ ಪುಟ: ಸಂಕೊಲೆ
ಓರುಕುಟ್ಟುತ್ತ ಪುಟ: ಸಂಕೊಲೆ
ನೆರೆಕರೆ ಪುಟ: ಸಂಕೊಲೆ

ಬಲ್ನಾಡುಮಾಣಿಯ ಶುದ್ದಿಗೊ ಸದ್ಯಲ್ಲೇ ಸುರು ಆವುತ್ತು.
ಕಾದೊಂಡಿರಿ.
~
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

23 Responses

 1. ರಘುಮುಳಿಯ says:

  ಬಲ್ನಾಡ ಮಾಣಿಗೆ ಸ್ವಾಗತ !!ನಿನ್ನ ಬರಹ೦ಗೋ ಬೈಲಿನೋರ ಮನೋಬಲವನ್ನೂ ಹೆಚ್ಚಿಸಲಿ.

 2. ರಘುಮಾವಾ! ನಿಂಗಳ ಪ್ರೋತ್ಸಾಹ ಎನ್ನ ಮನೋಬಲ ಹೆಚ್ಸಿತ್ತು! ಧನ್ಯವಾದಂಗೋ!!

 3. Krishnamohana Bhat says:

  ಒಪ್ಪಕು೦ಞಿ ಮಾಷ್ಟ್ರು ಮಾವ೦ ಅವರತ್ರೆಲ್ಲ ಒ೦ದೊ೦ದು ಬೆತ್ತವೂ ಕೊಟ್ಟಿದವಾಡ ಚೋಕ್ಲೇಟು ತಿ೦ದೊ೦ಡು ಶಾಲಗೆ ಕಳ್ಳ ಕಟ್ಟುತ್ತ ಮಕ್ಕೋಗೆಲ್ಲ ಚೋಕ್ಲೇಟಿನೊಟ್ಟಿ೦ಗೆ ಅದರಲ್ಲಿ ಒ೦ದೊ೦ದು ಕೊಡೇಕು ಹೇಳಿದ್ದವಾಡ.ನೀನು ಒಪ್ಪ ಮಾಣಿ ರಜ ಬಿ೦ಗಿ ಅಷ್ಟೆ.ನಾಳೆ೦ದ ಶಾಲಗೆ ಸರೀ ಹೋಗಿ ಕಲಿ ಆತೊ ಅಪ್ಪನೋ ಅಮ್ಮನೋ ಚೋಕ್ಲೇಟೊ ಐಸ್ಕ್ರೀಮೋ ಕೊಟ್ಟರೆ ತಿ೦ದರೆ ಸಾಕು ಆತೊ.ಒ೦ದು ಒಪ್ಪ ಒಪ್ಪ ಕೊಡ್ತೆ ಆತೊ ಒಪ್ಪ೦ಗಳೊಟ್ಟಿ೦ಗೆ.

 4. ಸುಬ್ಬಯ್ಯ ಭಟ್ಟ ವರ್ಮುಡಿ says:

  =
  ಈ ಮಾಣಿ ಹೇಳಿದ್ದಲ್ಲದ್ದೇ ಸುರುಮಾಡ್ತ ಹಾಂಗೆ ಕಾಣ್ತಿಲ್ಲೆ ಹೇಳಿ ಗ್ರೇಶಿಗೊಂಡಿತ್ತಿದ್ದೆ. ಸುರುಮಾಡ್ತ° ಹೇಳಿ ಗೊಂತಾಗಿ ಕೊಶಿ ಆತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *