ಅದೆಲ್ಲ ಬಿಡಿ, – ಇದೇಂಗೆ ಅಕ್ಕು ಹೇಳಿ.

February 9, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮದೇ ಊರಿನ ಅಜಕ್ಕಳ ಶ್ರೀ ರಾಮಕೃಷ್ಣ ಭಟ್ – ಇವು, ದೂರದ ಚೆನ್ನೈಲಿ ಕೂದಂಡು ‘ಚೆನ್ನೈ ಭಾವ’ ಆದ್ಸು ನವಗೆಲ್ಲಾ ಗೊಂತಿಪ್ಪದೇ.

ಬದಿಯಡ್ಕ, ಸುಳ್ಯ ಪರಿಸರಲ್ಲಿ ವಿದ್ಯಾಭ್ಯಾಸ ಮಾಡಿ, ಈಗ ಕಳೆದ ಹತ್ತಿಪ್ಪತ್ತೊರಿಶಂದ ಮೆಡ್ರಾಸಿಲಿ ಇದ್ದವು. ಸಂಗೀತದ ಧ್ವನಿಮುದ್ರಿಕೆಗಳ ಮಾಡಿ ಸಂಗೀತಾಸಕ್ತರಿಂಗೆ ಹಂಚುತ್ತ ಇವರ ವ್ಯವಹಾರದ ಎಡೆಲಿಯೂ ಬೈಲಿಂಗೆ ಬಂದು ಪ್ರೋತ್ಸಾಹಿಸುತ್ತವು.
ಪಶ್ಚಿಮ ಸಮುದ್ರ ಕರೆಂದ ಪೂರ್ವಸಮುದ್ರ ಕರೆಂಗೆ ಹೋಗಿ, ಜೀವನ ಮಾಡ್ತ ಇವರ ಜೀವನಾನುಭವಂಗಳ ನಮ್ಮೊಟ್ಟಿಂಗೆ ಹಂಚುತ್ತಾ ಇದ್ದವು.
ಇವರ ಸಂಪರ್ಕಪುಟಂಗೊ:
ನೆರೆಕರೆ ಪುಟhttp://oppanna.com/nerekare/bhatchennai
ಓರುಕುಟ್ಟುತ್ತ ಪುಟ: http://www.orkut.co.in/Main#Profile?uid=14108712154328162976
ಮೋರೆಪುಟ: http://www.facebook.com/profile.php?id=100000563880276
ವ್ಯವಹಾರದ ಬೈಲು: http://www.sangeethamusic.com

ಬನ್ನಿ, ಇವರ ಕೈಲಿ ಶುದ್ದಿ ಕೇಳುವೊ°.
ಒಳ್ಳೆ ಶುದ್ದಿಗೊಕ್ಕೆ ಒಪ್ಪ ಕೊಡುವೊ°..

~
ಗುರಿಕ್ಕಾರ°

ಅದೆಲ್ಲ ಬಿಡಿ, ಇರಲಿ. ಈಗ ಇದರ ಹೇಳಿ.

ನಮ್ಮ ಹವ್ಯಕ ಸಂಸ್ಕೃತಿ, ಆಚಾರ ವಿಚಾರ ಬಹು ಶೂಕ್ಷ್ಮ. ಚೊಕ್ಕ – ಲಾಯಕ್ಕ.  ಇದಕ್ಕೆ ಬೇರೆ ಯಾವುದೂ ಸರಿ ಬಾರ. ಬಟ್, ಹಾಂಗೆ ನಡೆತ್ತಾ ಇಲ್ಲೆನ್ನೇ ಕರ್ಮ.
ಈಗ ನೋಡಿ, – ನಮ್ಮ ಅನುಪತ್ಯಂಗೋ, ಜೆಂಬಾರಂಗೊ ಒಳ್ಳೆಯ ಕ್ರಮಲ್ಲಿ ನಡೆಕ್ಕಪ್ಪಂತದ್ದು. ಆದರೆ ಹಾಂಗೆ ನಡೆತ್ತಿಲ್ಲೆನ್ನೇ.
ಒಂದು ಪೂಜೆ , ಮದುವೆ , ಉಪನಯನ, ಪುಣ್ಯಾಯ, ಬಾರಸ, ಹೇದು ಹಲವಾರು ಜೆಂಬ್ರಂಗೊ ನಿತ್ಯ ಹೇಳ್ತಾಂಗೆ  ಹತ್ತು ಹಲವು ದಿಕ್ಕೆ ನಡೆತ್ತು.
ಆದರೆ, ಈ ಜೆಂಬ್ರಂಗೊ ಹೇಂಗೆ ಸುರುಮಾಡಿ ಅಕೇರಿವರೇಗೆ ಚೆಂದಲ್ಲಿ ಕೊಂಡೋವುತ್ಸು ಹೇಳುವುದರ ಚಿಂತನೆ ಮಾದೆಕು.
ಜೆಂಬಾರಾ ನಿಗಂಟು ಮಾಡುತ್ಸು ಹೇಂಗೆ, ಆರತ್ರೆ ಎಲ್ಲ ವಿಚಾರ್ಸಿಕೊಳ್ಳೆಕು ಮನೇಲಿ ಮದಾಲು ಹೇಳಿ ಗೊಂತಿರೆಕು.

ಭಟ್ರಿಂಗೆ ಮದಾಲು ತಿಳಿಸಿ ಒಪ್ಪಿಗೆ ಪಡಕ್ಕೊಂಡು ಬೇಕು ಮತ್ತೆ ನೆರೆಕರೆ ನೆಂಟರುಗೋಕ್ಕೆ ಹೇಳಿಕೆ ಹೇಳಲೆ.
ಜೆಂಬ್ರಕ್ಕೆ ಬಂದ ಆಮಂತ್ರಿತರ ಅತಿಥಿಗಳ ಬರಮಾಡಿ ಉಪಚರ್ಸುವ ಕ್ರಮ ಅದು ನಮ್ಮಲ್ಲಿ ಇಪ್ಪಸ್ಟು ಚೆಂದ ಬೇರೆ ಎಲ್ಲಿಯೂ ಕಾಂಬಲೆ ಸಿಕ್ಕ.
ಆದರೆ, ಅದೆಲ್ಲ ಈಗ ಮಾಯವಾಗಿ ಹೊವ್ತಾ ಬತ್ತಾ ಇದ್ದು – ಖೇದ.

ನಾವು ಬಪ್ಪಲೆ ಹೇಳುತ್ಸು ಜೆಂಬ್ರಕ್ಕೆ. ಸಕಾಲಕ್ಕೆ ಬಂದು ಚಂದಕಾಣಿಸಿ ಕೊಡೆಕು ಹೇದು. ಊಟಕ್ಕೆ ಬರೆಕು ಹೇದು ಅಲ್ಲ.
ಈಗ ಬಪ್ಪದು ಬರೇ ಊಟಕ್ಕೇ ಹೇದು ಆವ್ತು. ಉಂಡಕೂಡಲೇ ಪದರಾಡು. ಬಾಕಿ ಬಂದವಕ್ಕೆ ಊಟ ಆತೋ, ಸಕಾಯ ಮಾಡೆಕೋ ಹೇಳುವ ಗೊಡವೆಯೇ ಇಲ್ಲೆ.
ಒಂದು ಜೆಂಬಾರ ಹೇಳಿರೆ ಬೆಂದಿಗೆ ಕೊರವದು, ಸುಧರಿಕೆ ಮಾಡೊದು, ಚಂದಲ್ಲಿ ನಡೆಸಿ ಕೊಡೆಕ್ಕಪ್ಪದು ಇತರರ ಕರ್ತವ್ಯ. ತನ್ನತನವ ಮರೆತು, ಲೋಪವ ತಿದ್ದಿಗೊಂಡು ಬೇಕಾದಾಂಗೆ ಮಾಡಿಸಿ ಕೊದೆಕು ಹೇಳಿ ಅಪ್ಪದು ಹೇಳಿಕೆ.

ನಮ್ಮದು ಬ್ರಹ್ಮ ಸಭೆ. ಸಂತೆ ಗೆದ್ದೆಯೋ, ಜಾತ್ರೆಯೋ ಅಲ್ಲ.
ಸಭೆಲಿ ಕೂದೊಂಡು ಸಭಾ ಮರ್ಯಾದೆ ಕಾಪಾಡೆಕು.
ಸಭೆಲಿ ಕೂದೊಂಡು ಕಾಟಂಗೋಟಿ ಮಾತಾಡಿಗೊಂದಿದ್ದರೆ ಅಲ್ಲಿ ಒಬ್ಬ ಭಟ್ಟ ಹೇದೊಂಡು ಪರಂಚಿಯೊಂಡು ಕೂದೊಂಡಿಪ್ಪದು ಅವಂಗೆ ಬೇರೆ ಕೆಲಸ ಇಲ್ಲದ್ದಕ್ಕೋ.
ಹಾಂಗೆ, ಗುರಿಕ್ಕಾರ, ಜೋಯಿಸ, ವೈದಿಕರು ಹೇಳಿ ಸಭೆಲಿ ಇರ್ತವು. ಅವಕ್ಕೂ ಉಪದ್ರ ಅವತ್ತು ಹೇಳ್ವದರ ಅರ್ಥ ಆಯೆಕು.

ಮತ್ತೆ ಇದಾ , ಭಟ್ರಿಂಗೂ ಗುರಿಕ್ಕಾರಂಗೂ ನಡುವ ನಡೆವ ಸಂವಾದ ಕೇಳುಲೆ ಭಾರೀ ಚಂದ ಇರ್ತು. ಈಗಾಣ ಕಾಲಲ್ಲಿ ಅದೆಲ್ಲ ಕೈ ಭಾಷೆಲಿಯೇ ಮುಗಿತ್ತು ಈ ಸಭೆಯ ಹರಟೆಯಿಂದಾಗಿ. ಹಾಂಗೇ ವಚನಂ – ಪ್ರತಿವಚನಂ  ಕೇಳೆಕ್ಕಾದ ರುಚಿಕರ ಸಂಭಾಷಣೆ ಅದು.

ಹಾಂಗಾಗ್ಗಿ, ಇದಾ ಭಟ್ತಮಾವ, ಗುರಿಕ್ಕಾರ ಅಪ್ಪಚ್ಚಿ, ಹತ್ತು ಸಮಸ್ತರತ್ರೆ ಆನು ಈ ಮೂಲಕ ಕೇಳಿಕೊಮ್ಬದು – ಈ ಜೆಂಬಾರ (ಅನುಪತ್ಯ)ಗಳ ಮಹತ್ವ, ಅದರಲ್ಲಿಪ್ಪ ವಿಷಯ-ವಿಚಾರ, ಸಭೆ, ಆ ಸಭೆಲಿ ನಡೆವಂತ (ನಡೆಕ್ಕಾದಂತ) ಕುತೂಹಲಕಾರಿ (ಅದೇ- ಮೇಗೆ ಹೇಳಿದಾಂಗಿಪ್ಪ) ಸನ್ನಿವೇಶ ಕುರಿತು ವಿವರವಾಗಿ ಪುರುಸೋತ್ತು ಮಾಡಿಗೊಂಡು ಬರದು ತಿಳಿಸೆಕು. ಎನ್ನಾಂಗಿಪ್ಪ ಆರಾರು ಅಭಿರುಚಿ ಇಪ್ಪವು ಓದಿ ತಿಳ್ಕೊಂಬಲೆ ಅನುಕೂಲ ಮಾಡಿಕೊಡೆಕು ಹೇಳಿ ವಿನಮ್ರ ವಿಜ್ಞಾಪನೆ.

ಹಾಂಗೇ, ಈ ಒಪ್ಪಣ್ಣನಲ್ಲಿ ನಮ್ಮ ಶ್ರೀ ಮಠದ ಪೂರ್ವಾಪರ ಪರಿಚಯ ಮತ್ತು ಮೂಲಂದ ಈಗಿಪ್ಪಲ್ಲಿವರೆಗಿನ (ಎಲ್ಲ) ಗುರುಗಳ ಚಿತ್ರ ಇಷ್ಟು ಮೂಡಿಬರೆಕು ಹೇಳಿಯು ಕೇಳಿಕೆ.
ಎಂಬುದಕ್ಕೆ ಇಂತು ನಿಂಗಳ
–  ಚೆನ್ನೈ ಭಾವ.

ಅದೆಲ್ಲ ಬಿಡಿ, - ಇದೇಂಗೆ ಅಕ್ಕು ಹೇಳಿ., 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಬಲ್ನಾಡುಮಾಣಿ

  ನಮಸ್ತೇ ಮಾವ! ನಿಂಗಳೂ ನಮ್ಮ ಬೈಲಿಲಿ ಶುದ್ದಿ ಹೇಳಿದ್ದು ಕೊಶಿ ಆತು.. ಈಗಾಣ ಜೆಂಬ್ರಂಗಳಲ್ಲಿ ಬೌಷ ಪೌರೋಹಿತ್ಯದ ಬಟ್ರಿಂದ ಹಿಡುದು ಅಡಿಗೆಯೋರು, ಮನೆಯೋರು, ಜೆಂಬ್ರದ ಮುಂಚೂಣಿಲಿಪ್ಪೋರು, ಬಪ್ಪೋರು, ಹೋಪೋರು ಎಲ್ಲೋರುದೆ ಅಂಬೆರ್ಪಿಲಿಯೇ ಇಪ್ಪದು.. ಊಟಕ್ಕಪ್ಪಗ ಬಂತು, ಉಂಡಿಕ್ಕಿ ನಿಂಗ ಹೇಳಿದಾಂಗೆ ಪದ್ರಾಡು! ಕೈತೊಳವಲೂ ಪುರುಸೊತ್ತಿಲ್ಲೆ ಕೆಲವು ಸತ್ತಿ.
  ಮೇಲಾರಕ್ಕೆ ಕೊರೆತ್ತ ಗೌಜಿ ಎಲ್ಲ ಕಮ್ಮಿ ಆಯ್ದು, ಎಲ್ಲಾರುದೆ “ಬಿಸಿ” ಅಲ್ಲದೋ, ನಮ್ಮನ್ನೂ ಸೇರ್ಸಿ.. ನಮ್ಮ ಸಂಸ್ಕೃತಿಯ ಬಗ್ಗೆ ಎಲ್ಲ ಪರಿಚಯ ನಮ್ಮ ಬೈಲಿಲಿ ಖಂಡಿತಾ ಆಯೆಕ್ಕು, ನಿಂಗಳ ವಿಜ್ಞಾಪನೆಗೆ ಎನ್ನ ಸಂಪೂರ್ಣ ಸಹಮತ ಇದ್ದು, ಗುರಿಕ್ಕಾರ್ರು ಈ ವಿಷಯಲ್ಲಿ ಖಂಡಿತಾ ಚಿಂತನೆ ಮಾಡುಗು.. ಸಕಾಲಿಕ ಬರಹ! ಸುಂದರ ನಿರೂಪಣೆ! ಧನ್ಯವಾದಂಗೋ!! :)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬಲ್ನಾಡು ದನಿಗಳಿಂಗೆ ನಮಸ್ಕಾರ ಹೇಳಿತ್ತಿಲ್ಲಿಂದ.

  ನಿಂಗಳೂ ಬಿಸಿ ಬಿಸಿ ಹೇಳಿಕ್ಕಿ ಹೋದರಾಗ.

  ಇದಾ ರಜಾ ಕೂದು ಸುಧಾರಣೆ (ಭೂಸುಧಾರಣೆ ಅಲ್ಲ)ಮಾಡ್ಲೆ ಎಡಿತ್ತೋ ನೋಡುವೊ. ನಿಂಗಳೂ ಬನ್ನಿ. ಬಪ್ಪಗ ಇಬ್ಬರ ಹಿಡ್ಕೊಂಡು ಬನ್ನಿ. ಬಂದವರ ಸುಲಭಲ್ಲಿ ಬಿಟ್ಟಿಕ್ಕೆಡಿ.

  ಅಂಬೆರ್ಪಿನ ಕಾರ್ಯಕ್ಕೆ ಎಂತಕೆ ನಾವು ಇಟ್ಟು ಖರ್ಚು ಮಾಡುತ್ಸಪ್ಪಾ!

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಚೆನ್ನೈ ಭಾವಯ್ಯನ ಕಳಕಳಿ ಅರ್ಥ ಆತು. ಜೆಂಬಾರಲ್ಲಿ ಕಂಡು ಬತ್ತ ನಿಜ ಸಂಗತಿಯ ಸರಿಯಾಗಿ ಹೇಳಿದ್ದವು. ನಮ್ಮ ಸಂಸ್ಕೃತಿ, ನಮ್ಮ ಜೆಂಬಾರಂಗಳ ಮಹತ್ವ, ಅಲ್ಲಿ ನೆಡವ ತಮಾಷೆ ಇವೆಲ್ಲವುಗಳನ್ನು ಸೇರಿಸೆಂಡು, ಮಾಹಿತಿ ಹಾಂಗೂ ರಂಜನೆ ಕೊಡುತ್ತ ಹಾಂಗಿಪ್ಪ ಒಪ್ಪಣ್ಣನ ಎಲ್ಲಾ ಹಳೆ ಲೇಖನಂಗಳನ್ನುದೆ ಬೈಲಿಂಗೆ ಹೊಸತ್ತಾಗಿ ಬಂದವು ಪುರುಸೊತ್ತು ಮಾಡಿ ಒಂದರಿ ಓದೆಕು. ಹಳತ್ತಿಂಗೆ ಮಡಗಿದ್ದಕ್ಕೆ, ಬೆಲೆ ಜಾಸ್ತಿ ಹೇಳಿ ನವಗೆಲ್ಲ ಗೊಂತಿದ್ದು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಬೊಳುಂಬು ಮಾವಂಗೆ ನಮಸ್ಕಾರ ಇಲ್ಲಿಂದಲೆ ಮಾಡಿಕೊಳ್ತು.

  ನಮ್ಮ ಸಂಸ್ಕೃತಿ, ಆಚಾರ ವಿಚಾರ ಪದ್ಧತಿ, ಸೀಮೆಂದ ಸೀಮೆಗಿಪ್ಪ ಚಿಕ್ಕಪುಟ್ಟ ನಡವಳಿಕೆ, ವ್ಯತ್ಯಾಸಂಗೋ , ಹಾಂಗೇ , ಅನುಪತ್ಯ ಕ್ರಮಂಗೋ – ಈ ಬಗ್ಗೆ ತಿಳುದವು ಒಂದೊಂದೇ ಮಂಡನೆ ಮಾಡೆಕು ಇಲ್ಲಿ ಹೇಳಿ ಎನ್ನ ಕೇಳಿಕೆ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಚೆನ್ನೈ ಭಾವ೦ಗೆ ಸ್ವಾಗತ.ನಮ್ಮ ಸಭಾ ಸೂಕ್ಷ್ಮ೦ಗಳ ಚೊಕ್ಕಕೆ ಬರದ್ದಿ. ಈಗ ಅನುಪ್ಪತ್ಯಕ್ಕೆ ಊಟಕ್ಕಪ್ಪಗ ಹಾಜರಿಗೆ ಹೋಪದು,ಬೈಪ್ಪಣೆ ಊಟ ಮುಗುಶಿಕ್ಕಿ ಕಾಪಿ ಕುಡುದಿಕ್ಕಿ ಹೆರಡೊದು ಈ ಅಭ್ಯಾಸ ಬೆಳೆತ್ತ ಇಪ್ಪದು ಬೇಜಾರದ ಸ೦ಗತಿ.ಹ೦ತಿಲಿ ಬಳುಸುಲೂ ನವಗೆ ಉದಾಸೀನ ಬಿಡುತ್ತಿಲ್ಲೆಯೊ ಅಲ್ಲ ಸೊ೦ಟ ಬಗ್ಗುತ್ತಿಲ್ಲೆಯೋ?ಅಲ್ಲದೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಮುಳಿಯ ಭಾವಂಗೆ ವಂದನೆ ಇದ್ದು.

  ಪ್ರತಿಕ್ರಿಯೆಗೆ ಧನ್ಯವಾದಂಗೋ.

  ಬೈಲು ಇನ್ನೂ ಒಪ್ಪಕ್ಕೆ ಮೂಡಿ ಬರೆಕು ಹೇಳಿ ಆಶಿಸೋಣ. ಶ್ರೀ ಗುರುಗಳ ಆಶೀರ್ವಚನದಂತೆ ಒಪ್ಪಣ್ಣನ ಮೂಲಕ ಒಂದು ಕ್ರಾಂತಿ ಆಯೆಕು ಹೇಳಿ ಎನ್ನದೂ ಅಭಿಲಾಷೆ.

  [Reply]

  VA:F [1.9.22_1171]
  Rating: 0 (from 0 votes)
 4. ದೊಡ್ಡಭಾವ

  ಒಪ್ಪಣ್ಣ ಪರಿಚಯ ಹೇಳುವಗ,
  ಮೊದಲಾಣ ಗಾಂಧಿ, ಗಾಂಧಿ ಅಲ್ಲದ್ದೆ ಆದ್ಸರ ಹೇಳುಲೆ ಎಂತ್ಸಕೆ ಬಿಟ್ಟದೋ…?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಆ ಹೆಸರಿನ್ಗೆ ರಾಶಿ ಇಲ್ಲೆ. ಅದರ ಬಿಟ್ಟು ಭಟ್ಟ ಹೇಳಿ ಮಾಡಿಕ್ಕೊಂಡಿದು ಕಾನೂನು ಪ್ರಕಾರವಾಗಿಯೇ.

  ಓ, ದೂರದ ನಿಂಗಳ ನೆಮ್ಪಿನ್ಗೆ ಧನ್ಯವಾದಂಗೋ

  [Reply]

  VA:F [1.9.22_1171]
  Rating: 0 (from 0 votes)
 5. ಯೇನಂಕೂಡ್ಳು ಅಣ್ಣ
  kishor yenankudlu

  Aanude dodda bhava heliddanne alochane madyonditthe parichaya nodvaga, aarappa chennai bhava heli … eega gonthathida… swagatham

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಅದೇ., ನಿಂಗಳ ಹಳೆ ಅಪರಾಧಿ

  [Reply]

  VA:F [1.9.22_1171]
  Rating: 0 (from 0 votes)
 6. ಸುಬ್ಬಯ್ಯ ಭಟ್ಟ ವರ್ಮುಡಿ

  {ನಮ್ಮದು ಬ್ರಹ್ಮ ಸಭೆ. ಸಂತೆ ಗೆದ್ದೆಯೋ, ಜಾತ್ರೆಯೋ ಅಲ್ಲ.
  ಸಭೆಲಿ ಕೂದೊಂಡು ಸಭಾ ಮರ್ಯಾದೆ ಕಾಪಾಡೆಕು.
  ಸಭೆಲಿ ಕೂದೊಂಡು ಕಾಟಂಗೋಟಿ ಮಾತಾಡಿಗೊಂದಿದ್ದರೆ ಅಲ್ಲಿ ಒಬ್ಬ ಭಟ್ಟ ಹೇದೊಂಡು ಪರಂಚಿಯೊಂಡು ಕೂದೊಂಡಿಪ್ಪದು ಅವಂಗೆ ಬೇರೆ ಕೆಲಸ ಇಲ್ಲದ್ದಕ್ಕೋ.
  ಹಾಂಗೆ, ಗುರಿಕ್ಕಾರ, ಜೋಯಿಸ, ವೈದಿಕರು ಹೇಳಿ ಸಭೆಲಿ ಇರ್ತವು. ಅವಕ್ಕೂ ಉಪದ್ರ ಅವತ್ತು ಹೇಳ್ವದರ ಅರ್ಥ ಆಯೆಕು.}

  =
  “ಅತಿ ಪರಿಚಯಾತ್ ಅವಜ್ಞತ್ವಂ”
  ಅಲ್ಲದೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಮಾವ, ಚೆಂದಕ್ಕೆ ಹೇಳಿದಿ.

  [Reply]

  VA:F [1.9.22_1171]
  Rating: 0 (from 0 votes)
 7. Putta

  Hello ,

  Ninga hezluva vishaya ella sari iddu. Aadare bari 30% jana mathra polisudu idara. Anthe shanka oodekkaste. Hezlidare bejarakku aadare nija vishaya ippadu heengeye.

  Regards,
  Putta

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ನಾವೇ ಮಾಡಿಯೊಂಡದು ಹೀಂಗೆ. ನಾವೇ ಸರಿಮಾಡಿಗೊಳ್ಳೆಕು ಹೇಳಿ ಆವ್ತು ಎನ್ನ ಹೇಳಿಕೆ.

  ಶ್ರೀ ಗುರುಗಳು ಹೇಂಗೆ ಶಿಷ್ಯ ವೃಂದವ ಒಟ್ಟುಸೇರುತ್ತಾಂಗೆ ಮಾಡಲೆ ಪ್ರಯತ್ನಪಟ್ಟು ಮುಂದೆ ಸಾಗುತ್ತವೋ ಹಾಂಗೆ ಅದರ ದಾರಿದೀಪವಾಗಿ ಗ್ರೆಷ್ಯೊಂಡು ಒಗ್ಗೂಡಿ ಹೇರಟರೆ ಹೆರಾಣವಾರೂ ನಮ್ಮ ಬಂದು ತಡೆಯವು. ಬೇಕು ಹೇಳ್ತ ಭಾವನೆ ಬರೆಕು .

  ಇದು ಎನ್ನ ಅಭಿಪ್ರಾಯ. ಮತ್ತೆ “ಲೋಕೋ ಭಿನ್ನ ರುಚಿ:”. ಜೆನಿವಾರವು ಆಣಿಲಿ ತೂಗಿ ಮಡುಗುವೆ , ಪೆಟ್ಟಿಗೆಲಿ ಇರಲಿ ಹೇಳ್ತವರ ಹಿಡ್ಕೊಂಡು ಎಂತ ಮಾಡ್ಲೆ ಎಡಿಗು ಅಪ್ಪೋ!!

  [Reply]

  VA:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮೊದಲನೆದಾಗಿ ವಿಚಾರಂಗಳ ಹೇಳಿದ ಚೆನ್ನೈ ಭಾವಂಗೆ ಸ್ವಾಗತ (ಹೇಳುವಾಗ ರೆಜ ಲೇಟ್ ಆತು, ಕ್ಷಮೆ ಇರಳಿ).
  ಜೆಂಬ್ರಂಗೊಕ್ಕೆ ಊಟಕ್ಕೆ ಅಪ್ಪಗ ಹೋವ್ತ ಕ್ರಮ ಹೆಚ್ಚಾಗಿ ಪೇಟೆಲಿ ಕಂಡೊಡ್ಂದು ಇತ್ತಿದ್ದದು, ಈಗ ಹಳ್ಳಿಗೂ ಎತ್ತಿದ್ದು. ಸ್ವಂತ ವಾಹನಲ್ಲಿ ಊಟಕ್ಕ್ಕಪ್ಪಗಾದರೂ ಹಾಜರು ಹಾಕಿಕ್ಕುವೊ ಹೇಳಿ ಒಂದು ಅಭಿಪ್ರಾಯ ಆದರೆ, ಒಂದೇ ದಿನ ಹಲವಾರು ಕಾರ್ಯಕ್ರಮಂಗಳೂ ಇಪ್ಪದು ಇನ್ನೊಂದು ಕಾರಣ.
  ಸುದರಿಕೆ ಬಗ್ಗೆ ಹೇಳುವದಾದರೆ, ಪೇಟೆ ಕಾರ್ಯಕ್ರಮಂಗೊಕ್ಕೆ, ಬೆಂದಿಗೆ ಕೊರವಲೆ ಬೇಕಾಷ್ಟು ಜೆನ ಮುನ್ನಾ ದಿನ ಇರುಳಿಂಗೆ ಸೇರುತ್ತವು. ಮರುದಿನ ಕಾರ್ಯಕ್ರಮಕ್ಕೆ ಬಪ್ಪಲೆ ಎಡಿಯದ್ದವೂದೆ, ಆಪೀಸು ಬಿಟ್ಟು ಸುದರಿಕೆ ಮಾಡಿಕ್ಕಿ, ನಾಳೆ ಕಾಂಬೊ ಹೇಳಿಕ್ಕಿ ಹೋದರೆ, ಮರುದಿನ ಬಂದು ಮೋರೆ ತೋರಿಸಿರೂ ಆತು ಇಲ್ಲದ್ದರೂ ಆತು. ಇದು ಎನ್ನ ಅನುಭವ. ಈ ಜೆನಂಗ್ಗೊ, ಜೆಂಬಾರದ ದಿನ ಸುದರಿಕೆಗೆ ಸಿಕುತ್ತವಿಲ್ಲೆ.
  ಸಭಾ ಮರ್ಯಾದೆ ಬಗ್ಗೆ ಹೇಳಿದಿ ಅಲ್ಲದಾ.? ನಮ್ಮಲಿ ಪೂಜೆ ಅಪ್ಪಗಳೂ, ನಾವೆಲ್ಲಾ ನೋಡುತ್ತು. ಎಷ್ಟು ಜೆನ ಅದರ ಬಗ್ಗೆ ತಿಳ್ಕೊಂಬಲೆ ಪ್ರಯತ್ನ ಮಾಡ್ತವು , ಇಲ್ಲದ್ದರೆ, ಭಟ್ರು ಮಂತ್ರ ಹೇಳುವಾಗ, ಅಥವಾ ಪೂಜೆಯ ಕತೆ ಹೇಳುವಾಗ ಕೆಮಿ ಕೊಟ್ಟು ಕೇಳುವವು ಎಷ್ತು ಜೆನಂಗೊ ಇದ್ದವು. ಎಲ್ಲರೂ ಸಿಕ್ಕಿದ್ದೇ ಅಪರೂಪ ಹೇಳಿ ಲೋಕಾಭಿರಾಮ ಮಾತಾಡಿಗೊಂಡು ಇರ್ತವು.
  ಇತ್ತೀಚೆಗಿನ ಜೆಂಬ್ರಂಗಳಲ್ಲಿ ಪೂರ್ತಿ ಕಾಣೆ ಆದ ಒಂದು ಅಂಶ ಹೇಳಿರೆ, ಉಡುಗೊರೆ ಕೊಟ್ಟಪ್ಪಗ, ಮನೆ ಯಜಮಾನನ ಪರವಾಗಿ ಭಟ್ರು ಉಪಚಾರ ಹೇಳ್ತ ಕ್ರಮ

  [Reply]

  VA:F [1.9.22_1171]
  Rating: +1 (from 1 vote)
 9. ಚೆನ್ನೈ ಬಾವ°
  ಚೆನ್ನೈ ಭಾವ.

  ನಿಂಗಳೂ ಬರದ್ದಕ್ಕೆ ಧನ್ಯವಾದಂಗಳು ಶರ್ಮಪ್ಪಚ್ಚಿ.

  ಚಪ್ಪರ ಜೆಂಬ್ರ ಹೋಗಿ ಮಂಟಪ ಜೆಂಬ್ರ ಹೆಚ್ಚಾವ್ತಾ ಇಪ್ಪದು, ಈಗಾಣ ಪ್ರತಿಯೊಬ್ಬನ ನಿತ್ಯ ವ್ಯವಹಾರ ತಲೆಬಿಶಿ , ಆವ್ವವಕ್ಕೆ ಅವ್ವವ್ವರ ದಾರಿ ಮದಾಲು ಇವೆಲ್ಲವೂ ಕಾರಣಂಗಳೆ.

  ಎಲ್ಲೋರೂ ಸುಧಾರಿಕೆ ಮಾಡ್ಲೆ ಹೆರಟರೆ ಅದೂ ಕಷ್ಟವೇ. ಗುರಿಕ್ಕಾರ ಕೊಯಂಙಿಕ್ಕುಗು. ಹತ್ರಾಣ ನೆಂಟ್ರು, ನೆರೆಕರೆಯವು ಇದ್ದು , ಇದು ನಮ್ಮ ಭಾವನ ಮನೆ ಜೆಂಬಾರ – ನಮ್ಮ ಜೆಂಬಾರ ಹೇಳುವ ಭಾವನೆ ಬರೆಕು. ಬಂದವಕ್ಕೂ ಅದೇ ಭಾವನೆ – ತೃಪ್ತಿ ಸಿಕ್ಕೆಕು. ಒಟ್ಟಾರೆ ಆನೂ ಹೋಯಿದೆ – ಹಾಜರಾಕಿದ್ದೆ ಹೇಳುವಾಂಗೆ ಅಪ್ಪಲಾಗ ಹೇಳಿ ಎನ್ನ ಅಭಿಪ್ರಾಯ.

  ಇಲ್ಲಿ ಆರ ಮೇಗೂ ತಪ್ಪು ಹೊರ್ಸೋದು ಎನ್ನ ಉದ್ದೇಶ ಅಲ್ಲವೇ ಅಲ್ಲ. ಅಟ್ಟಕ್ಕೆಲ್ಲಾ ನಾವಾಯ್ದಿಲ್ಲೆಪ.

  ಬಟ್, ಆನು ಈ ಲೇಖನಲ್ಲಿ ಎನ್ನ ಬಯಕೆ ಎಂತ ಹೇಳಿ ಎತ್ತಿ ಒತ್ತಿ ಹೇಳುವಲ್ಲಿ ಅಸಫಲ ಆಗಿ ಬಿಟ್ಟನೋ?!.

  ಎನ್ನ ಈ ಕಿರು ಲೇಖನದ ಮೂಲ ಉದ್ದೇಶ -‘ಸುಧರಿಕೆ’ ಹೇಳುವದು ಮಾತ್ರ ಅಲ್ಲ ಇಲ್ಲಿ ವಿಷಯ. ಒಟ್ಟು (ಯಾವುದೇ) ಒಂದು ಜೆಂಬಾರದ (ಅನುಪತ್ಯದ – ಕಾರ್ಯಕ್ರಮದ) ರೂಪುರೀಖೆಂದ ಹಿಡುದು ಅಖೇರಿ ವರೆಗಿನ ಪ್ರತಿಯೊಂದು ಮಜಲಿನ ಮೇಲೆ ಒಂದು ಕನ್ನ್ನೋಟ. ಸ್ಪಂದನ – ಪ್ರತಿಸ್ಪಂದನ , ಸಂವಾದ – ಪ್ರತಿಕ್ರಿಯೆ ಕಾಣೆಕ್ಕಪ್ಪದು -ಇದರ ಬಗ್ಗೆ ತಿಳುದವು ತಿಳಿಯಪಡುಸೇಕು ಹೇಳಿ ಆವ್ತು. “…………ಭಟ್ತಮಾವ, ಗುರಿಕ್ಕಾರ ಅಪ್ಪಚ್ಚಿ, ಹತ್ತು ಸಮಸ್ತರತ್ರೆ ಆನು ಈ ಮೂಲಕ ಕೇಳಿಕೊಮ್ಬದು – ಈ ಜೆಂಬಾರ (ಅನುಪತ್ಯ)ಗಳ ಮಹತ್ವ, ಅದರಲ್ಲಿಪ್ಪ ವಿಷಯ-ವಿಚಾರ, ಸಭೆ, ಆ ಸಭೆಲಿ ನಡೆವಂತ (ನಡೆಕ್ಕಾದಂತ) ಕುತೂಹಲಕಾರಿ (ಅದೇ- ಮೇಗೆ ಹೇಳಿದಾಂಗಿಪ್ಪ) ಸನ್ನಿವೇಶ ಕುರಿತು ವಿವರವಾಗಿ ಪುರುಸೋತ್ತು ಮಾಡಿಗೊಂಡು ಬರದು ತಿಳಿಸೆಕು. ಎನ್ನಾಂಗಿಪ್ಪ ಆರಾರು ಅಭಿರುಚಿ ಇಪ್ಪವು ಓದಿ ತಿಳ್ಕೊಂಬಲೆ ಅನುಕೂಲ ಮಾಡಿಕೊಡೆಕು ಹೇಳಿ ವಿನಮ್ರ ವಿಜ್ಞಾಪನೆ.”

  ಒಪ್ಪಣ್ಣ.ಕಾಂ ಇದಕ್ಕೆ ಪ್ರಶಸ್ತ ವೇದಿಕೆ ಹೇಳಿ ಗ್ರೇಶುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 10. ಒಪ್ಪಣ್ಣ

  ಚೆನ್ನೈಭಾವನ ಕಳಕಳಿಗೊ ಎಲ್ಲವೂ ಕೊಶಿ ಆತು.
  ಬನ್ನಿ, ನೆರೆಕರೆಲಿ ಸೇರುವೊ, ಎಲ್ಲೋರು ಕೂಡಿ ಪಕ್ವ ಮಾಡುವೊ°.

  ಒಂದೊಂದೇ ವಿಶಯಂಗಳ ಸೇರುಸಿಗೊಂಡು ಹೋಪೊ°.
  ಆತೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಡಾಗುಟ್ರಕ್ಕ°ದೇವಸ್ಯ ಮಾಣಿವೇಣೂರಣ್ಣಅಕ್ಷರ°ಪುಣಚ ಡಾಕ್ಟ್ರುಕಳಾಯಿ ಗೀತತ್ತೆವಾಣಿ ಚಿಕ್ಕಮ್ಮಪೆಂಗಣ್ಣ°ಶಾಂತತ್ತೆಮಾಷ್ಟ್ರುಮಾವ°ವಿದ್ವಾನಣ್ಣಕಾವಿನಮೂಲೆ ಮಾಣಿನೆಗೆಗಾರ°ಚುಬ್ಬಣ್ಣದೊಡ್ಮನೆ ಭಾವಶ್ರೀಅಕ್ಕ°ಶರ್ಮಪ್ಪಚ್ಚಿರಾಜಣ್ಣಕೆದೂರು ಡಾಕ್ಟ್ರುಬಾವ°ಶೇಡಿಗುಮ್ಮೆ ಪುಳ್ಳಿಕಜೆವಸಂತ°ಮಂಗ್ಳೂರ ಮಾಣಿಒಪ್ಪಕ್ಕಚೂರಿಬೈಲು ದೀಪಕ್ಕಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ