ಅಡ್ಕತ್ತಿಮಾರಿನ ಕೆಮರಕ್ಕೆ ಹಳೆಅಡಕ್ಕೆಂದಲೂ ಕ್ರಯ ಜಾಸ್ತಿ!!

ಅಡ್ಕತ್ತಿಮಾರಿಲಿ ಹಳೆಕಾಲಲ್ಲೇ ಒಂದು ಕೆಮರ ಇತ್ತು.
ಮಾವಂಗೆ ಅದರ ದಿನಕ್ಕೊಂದರಿ ಆದರೂ ಹಿಡಿಯದ್ರೆ ಒರಕ್ಕು ಬಾರಡ!
ಆ ಕೆಮರಲ್ಲಿ ಈಗಾಣ ಕೆಮರದ ಹಾಂಗೆ – ಈಗತೆಗದ್ದು ಈಗ ಕಾಂಬಾಂಗೆ – ಇಲ್ಲೆ. ಬದಲಾಗಿ,
ಕೆಮರದ ಬೆನ್ನಿನ ಬಿಚ್ಚಿ, ಒಳದಿಕೆ ರೀಲು ಹಾಕಿ, ಪಟ ತೆಗದು, ಅದರ ಪುತ್ತೂರು ಆಶಲ್ಲಿ ತೊಳೆಶಿ, ಮತ್ತೆ ಪ್ರೇಮು ಹಾಕಿ ಮಡಗುದು.
ಈಗಾಣ ಹಾಂಗೆ ಕೆಂಪುಕೆಂಪು ಬತ್ತಿಲ್ಲೆ ಅದು! ಒಂದೋ ಮೇರ್ತಿ, ಅಲ್ಲದ್ರೆ ಬಟ್ಟೆತ್ತಿ! 🙂 (Black and White)

ಅವಕ್ಕೆ ಒಳ್ಳೆತ ವಿದ್ಯೆ ಆಯಿದು! ಇಂಗ್ಳೀಶು ಓದಲೆ ಅಂಬಗಳೇ ಅರಡಿಗು!
ಮದಲಿಂಗೆ, ನಾವೆಲ್ಲ ಹುಟ್ಟೆಕ್ಕಾರೆ ಅವು ರಾಮಜ್ಜನ ಕೋಲೇಜಿಂಗೆ ಹೋಯ್ಕೊಂಡಿತ್ತಿದ್ದವಡ!
ಇವು ಕೋಲೇಜಿಂಗೆ ಹೋಪಗ ರೈಲುಮಾರ್ಗಲ್ಲಿ ನೆಡಕ್ಕೊಂಡು ಹೋಕಡ!
ಅಷ್ಟಪ್ಪಗ ರೈಲು ಮಾರ್ಗದ ಕೆಲಸ ಸುರುಮಾಡಿ, ಅಗಳಿನಾಂಗೆ ಮಣ್ಣು ಗರ್ಪಿತ್ತಿದ್ದವಡ.
ವಾರಕ್ಕೊಂದರಿ ಮನಗೆ ಬಂದಿಪ್ಪಗ ಅಮ್ಮನ ಕೈಲಿ ಬೈಗಳು ಸಿಕ್ಕುಗಡ, ಒಸ್ತ್ರಕ್ಕೆ ಚೋರು ರಟ್ಟುಸಿಗೊಂಡದಕ್ಕೆ!

ಈಗ, ಸುಮಾರು ಮೂವತ್ತೊರಿಶ ಕಳುದು, ಮಗಳ ಪೀಸು ಕಟ್ಳೆ ಬಪ್ಪಗ ಆ ಮಣ್ಣಿನ ಮೇಗೆ ಜಲ್ಲಿ ಹಾಕಿ, ಕೋಂಗ್ರೇಟು ತುಂಡುಗಳ ಅಡ್ಡಡ್ಡ ಮಡಗಿ, ಕಬ್ಬಿಣದ ಸಲಕ್ಕೆಗಳ ಚೆಂದಕೆ ಜೋಡುಸಿ ಮಡಗಿತ್ತಿದ್ದವಡ – ರೈಲು ಹೋಪಲೆ!
ಅದರ ಮೇಗೆ ಒಂದು ಸಂಕ ಕಟ್ಟಿದ್ದ ಕಾರಣ ಒಸ್ತ್ರಕ್ಕೆ ಚೋರು ರಟ್ಳಿಲ್ಲೆ ಇದಾ!
ಈ ಚೆಂದವ ಪಟ ತೆಗೇಕು ಕಂಡತ್ತಡ. ಶಾಲಗೆ ತಡವಾತು ಹೇಳಿ ಮಗಳು ಪರಂಚಿದ ಕಾರಣ ಸೀತ ಹೋದವು!!

ಅಡ್ಕತ್ತಿಮಾರುಮಾವಂಗೆ ಮುಗುಳುನೆಗೆ ಬಪ್ಪದು..

ಅಡ್ಕತ್ತಿಮಾರುಮಾವಂಗೆ ಮುಗುಳುನೆಗೆ ಬಪ್ಪದು..

ಕಲ್ಮಡ್ಕಅತ್ತೆ ಆಪೀಸಿಂಗೆ ಸೇರಿದ ಸಮೆಯಲ್ಲಿ ಇವು ಕೋಲೇಜಿಂಗೆ ಸೇರಿ ಪೀಸು ಕಟ್ಟಿಗೊಂಡಿತ್ತಿದ್ದವು!
ಕಲ್ಮಡ್ಕತ್ತೆ ಕೋಲೇಜು ಬಿಡ್ತ ಸಮೆಯಲ್ಲಿ ಇವರ ಮಗಳ ಪೀಸು ಕಟ್ಳೆ ಬಂದವು!!
ಊರೇ ಬದಲಿದ್ದು – ಹೇಳಿ ಅವಕ್ಕೆ ಆಶ್ಚರ್ಯ ಅಪ್ಪದು!!

ಅದಿರಳಿ,
ಈ ಊರು ಬದಲುವ ಸನ್ನಿವೇಶ ಇದ್ದಲ್ಲದೋ – ಅಷ್ಟಪ್ಪಗಳೇ ಅವರ ಕೆಮರ ಕೆಲಸ ಮಾಡಿಗೊಂಡು ಇತ್ತು.
ನಮ್ಮ ಹಳೆಮನೆ ಅಣ್ಣ, ಯೇನಂಕೂಡ್ಳಣ್ಣ ಎಲ್ಲ ಚೆಂದ ಪಟ ತೆಗೆತ್ತವು; ಈಗಾಣ ಜೀವನದ್ದು.
ಈ ಅಡ್ಕತ್ತಿಮಾರು ಮಾವನೂ ಪಟ ತೆಗೆತ್ತವು.
ಈಗಾಣ ಜೀವನದ್ದು ಹೇಂಗಾರೂ ತೆಗೆತ್ತವನ್ನೇ, ಅದರೊಟ್ಟಿಂಗೆ ಎಷ್ಟೋ ಹಳೆ ಪಟಂಗೊ ಇದ್ದು ಅವರತ್ರೆ!
ಕಪ್ಪು ಬೆಳಿ!
– ಅಂಬಗಾಣ ಎಲ್ಲ ಕೆಮರಂಗಳೂ ಹಾಂಗೇ ಬಂದುಗೊಂಡಿದ್ದಡ, ಅಪ್ಪೋ – ಉಮ್ಮಪ್ಪ! ಒಪ್ಪಣ್ಣಂಗರಡಿಯ!!

ಅದು ಅವರ ಹವ್ಯಾಸ ಆಗಿತ್ತಡ.
ಒಂದು ರೀಲು ಪೇಟೆಂದ ತಂದು, ಮನಸ್ಸಿಂಗೆ ಕೊಶಿ ಕಂಡದರ ಪಟತೆಗದು, ರೀಲು ಪೂರ್ತಿ ಅಪ್ಪಗ ಪೇಟಗೆ ಬಂದು ತೊಳೆಶಿ, ಪಟ ಮಾಡಿಗೊಂಡು, ಮನೆಗೋಪಗ ಇರುವಾರ ಒಂದು ರೀಲು ಕೊಂಡೋಪದು!
ಈ ಶುದ್ದಿ ಕೇಳಿ ಒಪ್ಪಣ್ಣಂಗೆ ಆಸೆ ಆಗಿ ತಡೆಯ! ಬೈಲಿಂಗೆ ತೋರುಸುತ್ತಿರಾ ಮಾವಾ – ರಾಗ ಎಳದೆ.
ಈಗ ಬೇಡ ಒಪ್ಪಣ್ಣೋ, ಮಳೆಗಾಲ ಬೆಶ್ಚಂಗೆ ಹಳೆಡಕ್ಕೆ ಒಟ್ಟಿಂಗೆ ಮಡಗಿದ್ದೆ. ಈಗ ತೆಗದರೆ ಬೂಸುರು ಬಕ್ಕು, ಮಳೆ ರಜ ದೂರ ಹೋಗಲಿ, ಮತ್ತೆ ತೋರುಸುವೊ – ಹೇಳಿದವು.
ಅಕ್ಕಂಬಗ -ಹೇಳಿದೆ.
ಅಂಬಗ ಅವರ ಹವ್ಯಾಸ ಆಗಿಂಡು, ಆತ್ಮತೃಪ್ತಿಗಾಗಿ ತೆಗದ ಪಟಂಗೊ! ಈಗ ಆ ಪಟಂಗಳ ಹಳೆಡಕ್ಕೆಂದಲೂ ಜಾಗ್ರತೆಲಿ ಮಡಿಕ್ಕೊಳ್ತವು!
ಆ ಪಟಂಗೊ ಹೇಂಗಿಕ್ಕು? ಅಂಬಗಾಣ ಜೀವನವ ತೋರುಸುತ್ತಾಯಿಕ್ಕು! ಹಾಂಗಿಕ್ಕು, ಹೀಂಗಿಕ್ಕು – ಹೇಳಿ ಸುಮಾರು ಅನುಸಿ ಹೋತು.
ಅವರ ಪಟ ತೆಗೆತ್ತ ಆಸಕ್ತಿಗೆ ಪೂರಕವಾಗಿ ಅವರ ಮಗ, ಬೆಂಗುಳೂರಿಂದ ಊರಿಂಗೆ ಬಪ್ಪಗ ಹೊಸಾ ಒಂದು ಕೆಮರ ತಂದು ಕೊಟ್ಟಿದವಡ! ಅದರ್ಲಿ ಕಪ್ಪುಬೆಳಿ ಅಲ್ಲ, ಕೆಂಪುಕೆಂಪು – ಚೆಂದ ಬತ್ತಡ.
(ಅದರ್ಲಿ ತೆಗದ ಸುಮಾರು ಪಟಂಗೊ ಅವರ ಓರುಕುಟ್ಟುತ್ತ ಪುಟಲ್ಲಿ ಹಾಕಿದ್ದವಡ. )
ಕೃಷಿ, ಪರಿಸರ, ಕುಂಡೆಚ್ಚ, ಕುದನೆ – ಇದರದ್ದೆಲ್ಲ ಆರೂ ಕಾಣದ್ದ ಕೋನಲ್ಲಿ ನೋಡಿ, ಚೆಂದ ಬಪ್ಪಾಂಗೆ ಪಟ ತೆಗೆತ್ತವಡ!

ಮಳೆದೂರ ಹೋದ ಕೂಡ್ಳೇ ಹಳೆ ಕಪ್ಪುಬೆಳಿ ಪಟಂಗಳ ತೋರುಸುತ್ತವಡ.
ಅಷ್ಟ್ರೊರೆಂಗೆ ಈಗಾಣ ಹೊಸ ಕೆಮರಲ್ಲಿ ತೆಗದ ಕೆಂಪುಕೆಂಪು ಪಟ ತೋರುಸುತ್ತವಡ.

ಬನ್ನಿ, ಎಲ್ಲೊರುದೇ ಅಡ್ಕತ್ತಿಮಾರಿನ ಕೆಮರದ ಪಟಂಗಳ ನೋಡುವೊ°.
ಮಾವನ ಉತ್ಸಾಹವ ಇನ್ನೂ ಜಾಸ್ತಿ ಮಾಡುಸುವೊ°..

ಆಗದೋ? ಏ°?
~
ಒಪ್ಪಣ್ಣ

ಅಡ್ಕತ್ತಿಮಾರುಮಾವ° ತೆಗದ ಪಟಂಗೊ “ಅಡ್ಕತ್ತಿಮಾರು” ಅಂಕಣಲ್ಲಿ ಸದ್ಯವೇ ಬತ್ತು.
ಕಾದೊಂಡಿರಿ..
~
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

15 Responses

 1. ಒಹ್ಹೋ! ಇದು ನಿಜವಾಗಿ ಒಪ್ಪ ಕೊಡೆಕ್ಕಾದ ಶುದ್ದಿ ಇದಾ,, ಹಳೆಕಾಲದ ಪಟ ತೆಗವ ಕಲೆ, ಅದರ ಗತ್ತೇ ಬೇರೆ,.. ಅದಕ್ಕೆ ಬೇಕಾದ ಕೌಶಲ್ಯವು ಅಂಥಾದ್ದೆ.. ಈಗಾಣ ಕೆಮರಲ್ಲಿ ಎನ್ನ ಹಾಂಗಿಪ್ಪ ಸರಿ ಕೆಮರ ಹಿಡಿವಲೆ ಬಾರದ್ದವರು ಪಟ ತೆಗದರುದೆ, ತೆಗವವ ಮಾಡಿದ ಹೆಚ್ಚಿನ ತಪ್ಪಿಗಳ ಕೆಮರ ಸರಿ ಮಾಡ್ಯೊಂಡು ತೋರ್ಸುತ್ತಡ,, 🙂 ರೀಲು ಹಾಕುವ ಕೆಮರ ಎನಗೆ ಮುಟ್ಟಲೆ ಹೆದರಿಕೆ ಆವುತ್ತು,, ಸಣ್ಣಾಗಿಪ್ಪಾಗ ಆನು ಸುಮಾರು ರೀಲು ಖಾಲಿ ಮಾಡಿತ್ತಿದ್ದೆ ಎನ್ನ ಅಣ್ಣನ ಕೆಮರಲ್ಲಿ. 🙂 ಎಂತ ತೆಗದ್ದು ಹೇಳಿ ಕೇಳೆಡಿ..ಕೆಲವು ರೀಲು ಇಡಿ ಕಪ್ಪು ಬಯಿಂದಡ,, 😛 ಅಡ್ಕತ್ತಿಮಾರಿನ ಪಟಂಗ್ ಬೇಗನೆ ಬರ್ಲಿ !! 🙂

 2. ನೀರ್ಕಜೆ ಅಪ್ಪಚ್ಚಿ says:

  ಪಟಂಗ ಎಲ್ಲ ಕಾಣುತ್ತಿಲ್ಲೆನ್ನೆ?? ಅದರ ಪ್ರೈವೇಟ್ ಹೇಳಿ ಮಡುಗಿದ್ದವೋ ಎಂತ?

 3. ಓಹ್………………….! ಹಳೆಕಾಲದ ಪಟಂಗೊ ನೋಡ್ಲೆ ಸಿಕ್ಕುತ್ತು ಹೇಳುವಾಗ ಭಾರೀ ಕುಶಿ ಆತು. ಅಡ್ಕತ್ತಿಮಾರಿನ ಕೆಮರಲ್ಲಿ ತೆಗದ ಪಟಂಗೊ ಬೇಗ ಬರಳಿ.

 4. Sudarshan Undemane says:

  How do I register in this blog? help required!

  • u can sign up for the newsletter which is below the log in section. Log in options is meant for the authors 🙂 as i know 🙂 contact oppanna@oppanna.com if u want to write something !

   • ಗುರಿಕ್ಕಾರ° says:

    ಚೆ ಚೆ! ಎಂತ ಮಕ್ಕಳೇ ಇದು!
    ಎಂಗೊಗೆಲ್ಲ ಇದು ಅರ್ತವೇ ಆವುತ್ತಿಲ್ಲೆ! 😉 🙁
    ಚೀಪೆ, ಚೆಂದದ ನಮ್ಮ ಹವ್ಯಕ ಬಾಶೆಲಿ ಮಾತಾಡಿರೋ°..

    • ದಯಮಾಡಿ ಕ್ಷಮಿಸೆಕ್ಕು 🙂 ಅವ ಕೇಳಿದ ಭಾಷೆಲಿ ಆನು ಉತ್ತರ ಕೊಟ್ಟೆ.. 🙂 ನಮ್ಮ ಭಾಷೆಲಿ ಹೇಳಿರೆ ಗೊಂತಾಗದ್ರೆ ಹೇಳಿ.. 🙂

     • ಯೇ ಆದರ್ಶೋ..
      ಅವಂಗೆ ಏಕೆ ಗೊಂತಾಗದ್ದೆ,
      ಅವ° ಉಂಡೆಮನೆಮಾಣಿ ಅಲ್ಲದೋ? ಷೆ ಷೆ!
      ’ನಿನಗೆ ಹವ್ಯಕ ಅರ್ತ ಆವುತ್ತಿಲ್ಲೆಯೋ’ – ಕೇಳಿ ನೋಡು, ಪಿಸುರಿಲಿ ಎರಡು ಮಡಗಿರೆ, ಬೀಗಿ ನೀನು ಉಂಡೆಮಾಣಿ ಅಪ್ಪೆ! 😉 🙁

  • Shyamanna says:

   ಅಪ್ಪೋ ಸುದರ್ಶನ… ನೀನು ಉಂಡೆಮನೆ ನಾರಾಯಣ ಭಾವನ ಮಗ ಸುದರ್ಶನನಾ?

   • ಏ,, ಎಂತ ಮಾರಾಯ ಒಪ್ಪಣ್ಣ,, 🙂 ಮಾರಣಾಂತಿಕ ಉಪಾಯಂಗಳ ಕೊಡ್ತೆನ್ನೆ! 🙂 ಆನು ಮೊದಲೇ ಬಾರಿ ಸಪೂರ, ಇನ್ನು ಅವ ಒಂದು ಮಡುಗಿರೆ ಮತ್ತೆ ನಾಳೆಯಾಣ ಪೇಪರ್ಲಿ ಪಟ ಬಕ್ಕು ! 🙂 ಹಿ ಹಿ ಹಿ

 5. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಆಡ್ಕತ್ತಿಮಾರು ಅಣ್ಣ ತೆಗದ ಪಟಂಗೊ ಓರ್ಕುಟ್ಟಿಲ್ಲಿ ನೋಡಿದ್ದೆ. ತುಂಬಾ ಲಾಯಿಕು ತೆಗೆತ್ತವು. ಒಂದೊಂದು ವಿಷಯದ ಬಗ್ಗೆ ತೆಗದ ಪಟಂಗೊ ತುಂಬಾ ಮಾಹಿತಿ ಕೊಡ್ತು. ಬಯಲಿಲ್ಲಿ ಎಲ್ಲರಿಂಗೂ ಅದರ ಅನುಭವ ಖಂಡಿತಾ ಅಕ್ಕು.

 6. Dr.K.G.Bhat says:

  ಅಂಬಗ ತೆಗದ ಪಟಂಗಳ ಸ್ಕಾನ್ ಮಾಡಿ ಮಡಗಿರೆ ಹೊಸತ್ತಿಂಗೆ ಹೊಸತ್ತು,ಹಳತ್ತು ಹಾಂಗೆ ಒಳಿಗು,ಬೂಸರು ಬಾರ ಇದ.

 7. ಒಪ್ಪ ಕೊಟ್ಟೊರಿಂಗೆಲ್ಲ ಧನ್ಯವಾದಂಗ…ಸದ್ಯಲ್ಲಿ ನಿರೀಕ್ಶಿಸಿ.

  • ಬೀಡುಬೈಲು ಮಾಣಿ says:

   ಮಾವಂಗೆ ಈ ಮಳೆಗಾಲಲ್ಲಿ ಹಳೆ ಪಟಂಗಳ ಬೂಸರು ತೆಗವಲೆ ಕೆಲವು ದಿನ ಹಿಡಿಗೋ ಹೇಳಿ…!! 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *