ಸಾರಡಿ ತೋಡ ಕರೇಲಿ ಒಂದು ಹೊತ್ತೋಪಗ..

May 15, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಮಂಜೇಶ್ವರ ಆಸುಪಾಸಿಲಿ ಜೋರು ನೆಡೆತ್ತಾ ಇಪ್ಪ “ಹೊಯಿಗೆ ಮಾಪಿಯಾ” ದ ಬಗ್ಗೆ ಕಾಳಜಿಪೂರ್ವಕ ಶುದ್ದಿ ಇದು.
ನಮ್ಮದೇ ಭೂಮಿಯ ದೋಚುವ ಗಣಿಗಾರಿಕೆಯ ಕರಾಳ ಮೋರೆಯ ಪ್ರತ್ಯಕ್ಷ ದರ್ಶನ ಮಾಡಸಿದ ಬೈಲಿನ ಹೆಮ್ಮೆಯ ಅಡ್ಕತ್ತಿಮಾರುಮಾವಂಗೆ ಅಭಿವಂದನೆಗೊ.

ಯಬ್ಬ ಎಂತಾ ಸೆಖೆ..  ಬೆಗರು ಬಿಚ್ಹುತ್ತು, ‘ಹೊಗಿ ತಣ್ಣೀರಿಲಿ ಮುಳುಗಿರೆ ಅಕ್ಕು’ ಹೇಳಿ ಆವುತ್ತು.

ಎಂಗೊ ಸಣ್ಣಾದಿಪ್ಪಗ ಹೀಂಗೆ ಕಂಡತ್ತು ಕಂಡರೆ ಇದ್ದನ್ನೆ, ಸೀತ ಹೋಗಿ ತೋಡಿಂಗೆ ಹಾರುದೆ.
ಹಾ ಎಂತಾ ತಂಪು ….ಛೆ…!
ಬಿಡುವ – ಈಗ ಅದರ ಹೇಳಿ ಎಂತ ಪ್ರಯೋಜನ?
ಅಲ್ಲ, ನವಗೆ ಒಂದೊಂದೆ ನೆಂಪಪ್ಪದು ಅಲ್ಲದಾ ?? ಆವಾಗ ಗ್ರೇಶಿ ಹೋವುತ್ತು..

ನಿನ್ನೆ ಹೋತ್ತೋಪಗ ಹಾಂಗೆ ಆತು. ಒಂದರಿ ತೋಡಕರೇಂಗೆ ಹೋಪ ಹೇಳಿ ಹೆರಟ್ಟತ್ತು…
ನಮ್ಮ ತೋಟಕ್ಕೆ ಅಖೇರಿಗೆ ನೀರು ತಪ್ಪದು ಅಲ್ಲಿಂದಲೇ ಅಲ್ಲದಾ?
ಅಲ್ಪ ಖರ್ಚಿ ಮಾಡಿ ಮೊಟಾರು ಕೂರ್ಸಿದ್ದು ಅಲ್ಲಿಂದ ಪೈಪು ಮಣ್ಣು ಹೇಳಿ ಸುಮಾರು ಪೈಸೆ ಮುಗಾತು; ಆದರೆ ಮೋಸ ಇಲ್ಲೆ ನೀರಿಂಗೆ ಈಗ ತೊಂದರೆ ಇಲ್ಲೆ ಹೇಳುವ….

ನಿಜವಾಗಿ ಹೇಳೆಕ್ಕುಹೇಳಿರೆ ನಾವು ಆ ಹೊಡೇಂಗೆ ಹೋಗದ್ದೆ ವರ್ಶ ಒಂದಕ್ಕೆ ಹತ್ತರೆ ಆತು…
ರಜ್ಜ ಕಾಲು ಬೇನೆ ಎಲ್ಲ ಇತ್ತಲ್ಲದ ಹಾಂಗಾಗಿ ಹೊಪಲೆ ಆಯಿದಿಲ್ಲೆ…
ಈಗ ನಾವ್ ಎಲ್ಲಿಗೆ ಹೋವುತ್ತರೂ ಕೆಮರ ಹೆಗಲಿಂಗೆ ಹಾಯಿಕ್ಕೊಂಡೆ ಹೋಪದಿದಾ, ಹಾಂಗೆ ರಜ ಕಾಪಿ ಕುಡುದು ಹೆರಟತ್ತು.

ಈ ಸೆಖಗೆ ನೀರು ಕುಡುದೆ ಸಾಕಾವುತ್ತು. ಹಾಂಗೆ ಹೋತು.
ಅಲ್ಲಿಗೆ ಎತ್ತಿ ಅಪ್ಪಗ ಎಂತಾರ ನೋಡುದು ನಮ್ಮ ಸಾರಡಿತೋಡೇ ಅಲ್ಲ ಅದು..!!
ಅಲ್ಲಿ ಇಪ್ಪ ಮಿಶನುಗಳೇ ಪಿಕ್ಕಪ್ಪುಗಳೇ, ಟಿಪ್ಪರುಗಳೇ, ದೊಡ್ಡ ದೊಡ್ಡ ಲೋರಿಗಳೇ – ಕತೆ ಹೇಳಿ ಸುಖ ಇಲ್ಲೆ…

ಅದೆಲ್ಲ ಬಿಡಿ ನಮ್ಮ ತೋಟದ ಕೆಲಸಕ್ಕೆ ಆಳುಗಳೇ ಇಲ್ಲೆ ಅಲ್ಲಿ ನೋಡಿದರೆ ಜನವೋ ಜನ..
ಹಿಂದಿ, ಮಲೆಯಾಳ,ತುಳು ,ಕನ್ನಡ ಎಲ್ಲಾ ಮಾತಾಡುವ ಜನಂಗ ಒಂದು ಹೊಯಿಗೆ ತೋಡುದು, ಒಂದು ಗಾಳುಸುದು ಒಂದು ತುಂಬುಸುದು!!
ಹೀಂಗೆ ಒಂದೂ ಹೇಳಿ ಸುಖ ಇಲ್ಲೆ…..

1 ವರ್ಶದ ಮೊದಲು ಸರಕಾರೀ ಅಧಿಕಾರಿಗ ಮಾರ್ಗಲ್ಲಿ ಅಲ್ಲಲ್ಲಿ ಕೂದು ಹೊಯಿಗೆ ಲೋರಿಗಳ ಹಿಡುದು ಪೈಸ ವಸೂಲಿ ಮಾಡಿಗೊಂಡಿತ್ತವು.
ಸರಕಾರಿ ಕಛೇರಿಗೆ ಹೋದರೆ ಅಲ್ಲಿ ಆರೂ ಇರವು ಎಲ್ಲಾ ಹೊಳೆ ಕರೆಲಿ ತೋಡಕರೆಲಿ ಇತ್ತವು..
ಈ ವರ್ಶ ಪರ್ಮಿಟ್ ಸುರು ಆಯಿದಡ – ಕಳುದ ವರ್ಶ 3000 ಇದ್ದ ಹೊಯಿಗಗೆ ಈ ವರ್ಶ ಕೇವಲ 8000!!
ಹೇಂಗಿದ್ದು ಲೆಕ್ಕ?

ಹೊಳೆಂದ ಬೇರೆ ಆರೂ ಹೊಯಿಗೆ ತೆಗವಲೆ ಆಗ. ಬೇಕಾದವ ಪರ್ಮಿಟ್ ಇಪ್ಪವ ಕೈಂದಲೇ ತೆಕ್ಕೊಳೆಕ್ಕು.
ಹಾಂಗೆ ಎಲ್ಲ ಕಡೆ ದೊಣ್ಣೆ ನಾಯಕರದ್ದೆ ಕಾರ್ಬಾರ್…

ನೈಸರ್ಗಿಕ ಸಂಪತ್ತಿನ ರಾಜಾರೋಷವಾಗಿ ದೋಚುವಗ, ಮನಸ್ಸಿಂಗೆ ಬೇಜಾರಾವುತ್ತಲ್ಲದಾ?
ಎಂತ ಹೇಳ್ತಿ ನಿಂಗೊ?

~
ಅಡ್ಕತ್ತಿಮಾರುಮಾವ°

ಮೊನ್ನೆ ತೋಡಕರೆಂಗೆ ಹೋಗಿಪ್ಪಗ ಧೈರ್ಯಮಾಡಿ ಕೆಲವು ಪಟ ತೆಗದ್ದೆ. ನೋಡಿಕ್ಕಿ:

ಸಾರಡಿ ತೋಡ ಕರೇಲಿ ಒಂದು ಹೊತ್ತೋಪಗ.., 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಅರ್ಗೆ೦ಟು ಮಾಣಿ

  ರೆಡ್ಡಿ ಬ್ರದರ್ಸ್ ಥರಾ ಹಲವು ಜನ ಇಲ್ಲಿ ಹೊಯ್ಗೆ ಬ್ರದರ್ಸ್ ಇದ್ದೊವನ್ನೆ! ಆರೆಲ್ಲ ಇದ್ದೊವೊ ಇಲ್ಲಿ…. ರಾಜ೦ಗೊ :(

  ಎನಗೊ೦ದು ಲೋಡು ಹೊಯ್ಗೆ ಬೇಕಿತ್ತನ್ನೆ, ಸಿಕ್ಕುಗೋ ಮಾವ?

  ಗೆ೦ಟ

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಛೆ., ಇದಕ್ಕೆ 8000/- ಕೊಡೆಕ್ಕನ್ನೇ! ಹೋಗಿ ಸಮುದ್ರಂದ ಬಾಚುತ್ತು ಬಿಟ್ಟು ನಮ್ಮ ತೋಡಿಂದ ಆ ತೋಟದೆಡಕ್ಕಿಲ್ಲಿ ಮಾರ್ಗ ಮಾಡಿ ಮರಂಗಳ ಕಡುದು ನಾಶ ನಾಶ.

  ಪಟ ಲಯಕ್ಕ ವಿವರಣೆ ಕೊಡುತ್ತು . ಚಿಂತನೀಯ. ಮಾವಂಗೆ ಒಪ್ಪ.

  [Reply]

  ಗೋಪಾಲಣ್ಣ

  Gopalakrishna BHAT S.K. Reply:

  ಸಮುದ್ರದ ಹೊಯಿಗೆ ಆವುತ್ತರೆ ಅದನ್ನೂ ಬಾಚಿ ಆವುತ್ತಿತ್ತು!ಅದರಲ್ಲಿ ಉಪ್ಪಿನ ಅಂಶ ಇದ್ದನ್ನೆ- ಬಾಕಿ ಮಡಿಗಿದ್ದವು.ಹಾಂಗಾಗಿ ನಾವು ಕರಾವಳಿಲಿ ಒಳ್ತು!

  [Reply]

  VA:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°

  ಸಮುದ್ರದ ಹೊಯಿಗೆ ಕೊಂಡು ಹೋಪಲೆ ಅಲ್ಲಿ ದೊಡ್ಡ ದೊಡ್ಡ ತಿಮಿಂಗಿಲಂಗ ಇದ್ದವು .. ಇಲ್ಲಿ ಈಗಸ್ಟ್ಟೆ ಸುರುಮಾಡಿದ ಹೆಗ್ಗಳಂಗ ಇಪ್ಪದು..ಇವು ರಜ್ಜ ಸಮಯ ಅಪ್ಪಗ ಆ ಮಟ್ಟಕ್ಕೆ ಎತ್ತುಗೂ…

  [Reply]

  VN:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ

  ಸಮುದ್ರದ ಹೊಯಿಗೆ ತೊಳದು ಉಪಯೋಗಿಸಲಾವ್ತು. ಆದರುದೆ ಅದು ತು೦ಬ ಸಣ್ಣ ಮತ್ತ್ತು ಅದರ ಅ೦ಚುಗೊ ಶಾರ್ಪ್ ಆಗಿ ಇಲ್ಲದ್ದ ಕಾರಣ ಕಾ೦ಕ್ರೀಟು ಕೆಲಸಕ್ಕೆ ಅದಕ್ಕಿ೦ತಲೂ ಒಳ್ಳೇದು ಹೊಳೆಯ ಹೊಯಿಗೆಯೇ. ಹೊಳೆಯ ಹೊಯಿಗೆಲಿ ಕೂಡ ಕೆಲವು ಸರ್ತಿ ಮಣ್ಣಿನ ಅ೦ಶ ಇರ್ತು. ಅದರನ್ನುದೆ ತೊಳದು ಉಪಯೋಗಿಸದ್ರೆ ಲೀಕ್ ಬಪ್ಪ ಚಾನ್ಸು ಇದ್ದು.
  ಹೊಯಿಗೆಯ ತೆಗವದು ಎಲ್ಲಾ ರೀತಿಲಿಯುದೆ ಕೆಟ್ಟದು ಹೇಳ್ಳೆ ಎಡಿಯ. ತೆಗೆಯಕಾದ ಹಾ೦ಗೆ ತೆಗೆದರೆ ಅದರಿ೦ದಾಗಿ ಗುಣ೦ಗಳೂ ಇದ್ದು. ನಿರ್ಮಾಣ ಕೆಲಸ೦ಗೊಕ್ಕೆ ಬೇಕಾದ ಹೊಯಿಗೆ-ಗೆ ಎಲ್ಲಿಗೆ ಹೋಪದು?
  ನಿರ್ಮಾಣ ಕೆಲಸ೦ಗಳಲ್ಲಿ, ಹಲವು ವಿಭಾಗ೦ಗಳಲ್ಲಿ ಹೊಯಿಗೆಯ ಬದಲು ಕ್ರಷರುಗಳಲ್ಲಿ ವೇಸ್ಟ್ ಆಗಿ ಸಿಕ್ಕುತ್ತ ಹೊಡಿಯ ಉಪಯೋಗಿಸಲೆ ಅಕ್ಕು. ಅದರಿ೦ದಾಗಿ ಖರ್ಚುದೆ ಕಮ್ಮಿ, ಹೊಯಿಗೆಯ ಉಪಯೋಗ ಕಮ್ಮಿ ಮಾಡ್ಲುದೆ ಆವ್ತು. ಇಲ್ಲಿ ಕೃತಕ ಹೊಯಿಗೆಯ ಕೂಡ ಉತ್ಪಾದನೆ ಮಾಡ್ತವು. (ಕ್ರಷ್ಡ್ ಸ್ಯಾ೦ಡ್). ನಮ್ಮಲ್ಲಿ ಎಲ್ಲೋರಿ೦ಗುದೆ ಮನೆ, ಕ೦ಪೌ೦ಡ್ ಕಟ್ಟುಸಲೆ ಹೊಯಿಗೆಯೇ ಆಯೆಕು, ಅದುದೆ ಎಡಿಗಾದಷ್ಟು ಕಮ್ಮಿ ಖರ್ಚಿಲ್ಲಿ ಸಿಕ್ಕೆಕು, ಹೊಯಿಗೆ ತೆಗದು ಮಾರ್ತವುದೆ ಎಷ್ಟು ಎಡಿಗೋ ಅಷ್ಟುದೆ ಲಾಭ ಹೊಡೆಯೆಕು ಹೇಳಿ ಆಲೋಚನೆ ಮಾಡಿರೆ ಹೊಳೆ೦ದ ಎಷ್ಟು ಸುಲಭ ರೀತಿಲಿ ತೆಗೆವಲೆ ಎಡಿಗೋ ಹಾ೦ಗೆ ಅವು ತೆಗೆಗು. ನಾಳ೦ಗೆ ನವಗೆ ಎ೦ತಾರು ಅಗತ್ಯ ಬ೦ದರೆ ನಾವು ಎಲ್ಲಿ೦ದ ಹೊಯಿಗೆ ತೆಗೆವದು? ಈ ಹೆಗ್ಗಳ೦ಗೊ ಅಲ್ಲದ್ದೆ ಬೇರೆ ಪರಿಹಾರ ಇದ್ದೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇದ ಭಾವ, ಮೊನ್ನೆ ಉಪ್ಪಿನಕ್ಕಾಯಿಗೆ ಅಂಗಡಿಂದ ಎರಡು ಕಿಲೋ ‘ಅನ್ನಪೂರ್ಣ’ ಉಪ್ಪು ತಂದದಾತೋ. ಎಂಗಳ ಊರಿಲ್ಲಿ ಅನ್ನಪೂರ್ಣ ಹೇಳಿರೆ ಭಾರೀ ಶುದ್ಧವಾದ, ಕಲಬೆರಕೆ ಇಲ್ಲದ್ದ ಶುದ್ಧೀಕರ್ಸಿದ ಸಾಮಾನು ಪ್ಯಾಕೆಟ್ ಲಿ ಬಪ್ಪದು ಹೇಳಿ ಭ್ರಾಂತು. ಮನಗೆ ತಂದು ಉಪ್ಪುನೀರು ಮಾಡಿಯಪ್ಪಗ ಅರ್ಧ ಮುಷ್ಠಿ ಹೊಯಿಗೆ ಅಡಿಲಿ ಶೇಖರಣೆ ಆಯ್ದು.! ಎಂತಾರು ಮೋಸ ಮಾಡದ್ದೇ ಕಚ್ಚೋಡ ಇಲ್ಲೆ ಅಪ್ಪೋ!

  ‘ಮೇರೇ ಭಾರತ್ ಮಹಾನ್’

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಡ್ಕತ್ತಿಮಾರು ಅಣ್ಣ-
  ಚಿಂತನಾರ್ಹ ಲೇಖನ
  ಹೊಯಿಗೆ ತೆಗವದು, ಮಾರುವದು ಇತ್ತೀಚೆಗೆ ಇದು ದೊಡ್ಡ ಒಂದು ದಂಧೆ ಆಯಿದು. ಇದಲ್ಲಿ ಹಲವಾರು ರಾಜಕಾರಿಣಿಗೊ ಈ ಪ್ರಾಕೃತಿಕ ಸಂಪತ್ತಿನ ಲೂಟಿ ಮಾಡ್ಲೆ ಪಾಲುಗಾರಕ್ಕೊ. ಎಲ್ಲಿ ವರೆಗೆ ಎತ್ತಿದ್ದು ಹೇಳಿರೆ, ಸರ್ಕಾರೀ ಅಧಿಕಾರಿಗೊ ಇವಕ್ಕೆ ವಿರುದ್ಧ ಹೋದರೆ ಅವರನ್ನೇ ಎತ್ತಂಗಡಿ ಮಾಡ್ತವು.

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ

  ಹೊಳೆ೦ದ ಹೊಯ್ಗೆ ತೆಗವಲಾಗ ಹೇಳಿ ಕಾನೂನು ತ೦ದು, ಬೇಡಿಕೆ ಮತ್ತೆ ಪೂರೈಕೆಯ ಮಧ್ಯ ದೊಡ್ಡ ಅ೦ತರವ ತಪ್ಪ ಕೆಲಸ ಮಾಡಿದರೆ ಮುಗಾತು. ಮತ್ತೆ ಮಣ್ಣಿ೦ದ ಹೊಯಿಗೆ ಗಾಳುಸಿ ಮಾರಾಟ ಮಾಡಿತ್ತದಾ.
  ಘಟ್ಟದ ಮೇಲೆ ಗೆದ್ದೆಗಳಿ೦ದಲೂ ಹೊಯಿಗೆ ಗಾಳುಸುವ ಕೆಣಿಯ೦ಗೊ ಇದ್ದವು ಮಾವ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಮಾಲಕ್ಕ°ಚುಬ್ಬಣ್ಣಪುತ್ತೂರುಬಾವಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿವೇಣಿಯಕ್ಕ°ಸರ್ಪಮಲೆ ಮಾವ°ನೆಗೆಗಾರ°ಕೇಜಿಮಾವ°ಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಪಟಿಕಲ್ಲಪ್ಪಚ್ಚಿಯೇನಂಕೂಡ್ಳು ಅಣ್ಣಮುಳಿಯ ಭಾವಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣಬೋಸ ಬಾವದೊಡ್ಮನೆ ಭಾವಸುಭಗಬಟ್ಟಮಾವ°ಅಜ್ಜಕಾನ ಭಾವಚೆನ್ನಬೆಟ್ಟಣ್ಣಪೆರ್ಲದಣ್ಣಅನುಶ್ರೀ ಬಂಡಾಡಿಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ