ಶಿವಪುರದ ಮೃತ್ಯುಂಜೇಶ್ವರ ದರ್ಶನಕ್ಕೆ ಬನ್ನಿ…

May 21, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗ್ಳೂರಿಂದ ಕಾಸರಗೋಡಿನ ಹೊಡೆಂಗೆ ಹೋಪಗ ಮಂಜೇಶ್ವರ ಸಿಕ್ಕುತ್ತು.
ಮಂಜೇಶ್ವರಲ್ಲಿ ಎಡತ್ತಿಂಗೆ ಐದು ಕಿಲೋಮೀಟರು  ದೂರ ಹೋಪಗ ಪಾವೂರು ಹೇಳ್ತ ಒಂದು ಊರು ಸಿಕ್ಕುತ್ತು.
ಇಲ್ಲಿ ಆಡುಭಾಶೆ ತುಳು ಇಪ್ಪ ಜನಸಂಖ್ಯೆ ಜಾಸ್ತಿ. ತುಳುಭಾಶೆಯ ಇಂಗ್ರೋಜು (ಚರ್ಚು) ಇಲ್ಲೇ ಇಪ್ಪದು. ನಿಂಗೊಗೆ ಗೊಂತಿಕ್ಕು.
ಪುರ್ಬುಗಳ ಏಕಸ್ವಾಮ್ಯವೂ ಕೆಲವು ದಿಕ್ಕೆ ಇದ್ದು ಹೇಳಿರೆ ತಪ್ಪಲ್ಲ.

ಈ ಪಾವೂರಿಲಿ ಒಂದು ಶಿವಲಿಂಗದ ವಿಶಯಲ್ಲಿ ಕ್ರಾಂತಿ ಆವುತ್ತಾ ಇಪ್ಪದು ಬೈಲಿಂಗೆ ಗೊಂತಿದ್ದಾ?
ಈ ಶಿವಲಿಂಗದ, ಅದರ ಸುತ್ತುಮುತ್ತಾಣ ಕತೆ ಹೇಳಿರೆ ಅದೊಂದು ಅಯೋಧ್ಯೆಯ ಕತೆಯ ಹಾಂಗೇ ಅಕ್ಕು.

ಕಲ್ಲಿನ ಈ ಶಿವಲಿಂಗ ಸುಮಾರು ಒಂದಾಳೆತ್ತರ ಇದ್ದು. ಇದರ್ಲಿ ಒಂದು ಜೆನಿವಾರದ ರಚನೆಯೂ ಇಪ್ಪದು ವಿಶೇಷ.
ಶಿವಲಿಂಗ ಬೆಳೆತ್ತು, ವರ್ಷಂದ ವರ್ಷಕ್ಕೆ ಬೆಳದು ಗಾತ್ರ ಹೆಚ್ಚಾವುತ್ತು ಹೇಳಿ ಪ್ರತೀತಿ ಇದ್ದು.
ಸುಮಾರು ಐನೂರು ವರ್ಷ ಹಿಂದಾಣ ಶಿವಲಿಂಗ ಹೇಳಿ ಅಷ್ಟಮಂಗಲಲ್ಲಿ ಕಂಡು ಬಯಿಂದು.
ಈ ಶಿವಲಿಂಗಲ್ಲಿಪ್ಪ ಶಿವನ ಅಂಶಕ್ಕೆ “ಮೃತ್ಯುಂಜೇಶ್ವರ” ಹೇಳಿ ಹೆಸರಡ.
ಶಿವಲಿಂಗ ಇದ್ದ ಮೂಲಜಾಗೆ ಈಗ ಒಂದು ಸೋಜನ (ಕ್ರಿಶ್ಚಿಯನ್ ನ) ಹೆಸರಿಲಿ ಇದ್ದು. ಧರ್ಮ ಯಾವದೇ ಆದರೂ  ಆ ಜನಕ್ಕೆ ಒಳ್ಳೆ ಮನಸ್ಸು ಇದ್ದತ್ತು.
`ಶಿವಲಿಂಗ ಇದ್ದ ಜಾಗೆಯ ದೇವಸ್ಥಾನ ಕಟ್ಳೆ ಕೊಡ್ತೆ’ ಹೇಳಿ ಒಪ್ಪಿದ್ದತ್ತು ಸುರುವಿಂಗೆ.

ಅಷ್ಟಪ್ಪಗ ಅಲ್ಲಿಗೆ ಬಂದವು ಹುಳು ರಾಜಕಾರಣಿಗೊ. ಅಂತೇ ಕುತ್ತಿಕೊಟ್ಟು ಆ ಸೋಜನ ತಲೆ ತಿರುಗುಸಿದವು. ಅದಕ್ಕೆ ಎಂತ ಅನ್ಸಿತ್ತಾ ಏನಾ – ಜಾಗೆ ಕೊಡ್ತಿಲ್ಲೆ ಹೇಳಿತ್ತು.
ಅದು ಊರವಕ್ಕೆ ಬೇಜಾರವೂ – ಕೋಪವೂ ಬಪ್ಪಲೆ ಕಾರಣ ಆತು.
ರಾಜಕಾರಣಿಗೊ ಅಷ್ಟಕ್ಕೇ ಬಿಟ್ಟಿದವಿಲ್ಲೆ. ಒಂದು ಇರುಳು ಈ ಶಿವಲಿಂಗವ ಪೊರ್ಪಿ, ಸುಮಾರು ಐವತ್ತು ಮೀಟರು ದೂರ ಎಳಕ್ಕೊಂಡು ಹೋಗಿ, ಒಂದು ತೆಂಗಿನ ಗುಂಡಿಲಿ ಹುಗುದು ಮಡುಗಿದವು.
ಅಷ್ಟು ಮಾಂತ್ರ ಅಲ್ಲದ್ದೆ, ಶಿವಲಿಂಗ ಇದ್ದ ಜಾಗೆಲಿ ಪೀವೀಸಿ (PVC) ಪೈಪ್ ಉಪಯೋಗುಸಿ ಶಿವಲಿಂಗದ ಹಾಂಗೇ ಇದ್ದ ಒಂದು ರಚನೆ ಮಾಡಿದವು.
ಆದರೆ ಮರದಿನವೇ ಅದು ಆಸ್ತಿಕರಿಂಗೆ ಗೊಂತಾಗಿ, ಶಿವಲಿಂಗವ ಎಳಕ್ಕೊಂಡು ಹೋದ ಗುರ್ತವ ಅನುಸರುಸಿಯೊಂಡು, ಗುಂಡಿಂದ ಒಕ್ಕಿ ಪುನಃ ತಂದು ಮೊದಲಿದ್ದಲ್ಲೇ (ಪ್ರತಿಷ್ಟೆ ಮಾಡಿದವು) ನಿಲ್ಲುಸಿದವು.
ಆ ದಿನಂದ ಮತ್ತೆ ಆ ಜಾಗೆಲಿ ಭಕ್ತರ ನಿತ್ಯ ಕಾವಲು ಇದ್ದು.

ಪರವಶಲ್ಲಿ ಇಪ್ಪ ಆ ಜಾಗೆಲಿ ಎಂತೂ ಮಾಡ್ಳೆ ಎಡಿತ್ತಿಲ್ಲೆ. ಆದರೆ ಆ ಜಾಗೆಯ ಕಣ್ಣಳತೆಯಷ್ಟು ಹತ್ತರೆ ಆ ಸೋಜನ ಪೈಕಿದೇ ಪರಧರ್ಮ ಸಹಿಷ್ಣು ಒಂದು ಸೋಜ ಇದ್ದು.
ಆ ಜನ ರಜ್ಜ ಸ್ಥಳಾವಕಾಶ ಭಕ್ತರಿಂಗಾಗಿ ಬಿಟ್ಟುಕೊಟ್ಟಿದು. ಅಲ್ಲಿ ನಿತ್ಯ ಭಜನೆ, ಅನ್ನದಾನ, ಮಂಗಳಾರತಿ – ಹೀಂಗೆ ಸುಮಾರು ಧಾರ್ಮಿಕ ಕಾರ್ಯಕ್ರಮಂಗಳೂ ಆವುತ್ತಾ ಇದ್ದು.
ಈಗ ಆ ಜಾಗೆಗೆ “ಶಿವಪುರ” ಹೇಳಿ ಹೆಸರು ಮಡುಗಿದ್ದವು.
ಪೇಜಾವರ ಸ್ವಾಮಿಗೊ –ಇತ್ಯಾದಿ ಮಠಾಧೀಶರು ಬೈಂದವು. ಕೆಲವು ಜನನಾಯಕರು ಬಂದು ಶಿವನ ದರ್ಶನ ಮಾಡಿ ಹೋಯಿದವು.
ಈಗ ನಿತ್ಯವೂ ಸುಮಾರು ಜನ ಬಂದು ಈ ವಿಶೇಷ ಶಿವಲಿಂಗವ ದರ್ಶನ ಮಾಡಿಕ್ಕಿ ಹೋವುತ್ತವು.
ಒಂದು ಚೆಂದದ ದೇವಸ್ಥಾನ ಕಟ್ಟಿ ಶಿವನ ಪುನಃಪ್ರತಿಷ್ಠೆ ಮಾಡಿ ಪೂಜೆ ಮಾಡೆಕ್ಕು ಹೇಳಿ ಊರೋರಿಂಗೆ ಇದ್ದು.
ಆದರೆ ಆ ಶಿವಲಿಂಗ ಇಪ್ಪ ಜಾಗೆ ನಮ್ಮದಲ್ಲದ್ದೆ ಆಯಿದು. ಆ ವಿಶಯಕ್ಕೆ ಶಿವನೇ ಪರಿಹಾರ ಕೊಟ್ರೆ ಕೂಡ್ಳೇ ಕೆಲಸ ಅಕ್ಕು.
ಹೋರಾಟ ನಮ್ಮ ಕೆಲಸ. ಫಲ ಕೊಡುದು ಅವನ ಕೆಲಸ. ಅಲ್ದಾ?

ಶಿವಪುರದ ಮೃತ್ಯುಂಜೇಶ್ವರನ ದರ್ಶನಕ್ಕೆ ಬೈಲಿಂದಲೂ ಒಂದರಿ ಹೋಪನಾ?
~
ಶಿವಪುರ ಮೃತ್ಯುಂಜೇಶ್ವರನ ಕೆಲವು ಪಟಂಗೊ ಇಲ್ಲಿದ್ದು. ನೋಡಿ:

ಶಿವಪುರದ ಮೃತ್ಯುಂಜೇಶ್ವರ ದರ್ಶನಕ್ಕೆ ಬನ್ನಿ…, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಚುಬ್ಬಣ್ಣ
  ಚುಬ್ಬಣ್ಣ

  ಓಹೊ..!!.. ಹುಳು ರಾಜಕಾರಣಿಗೊ ಏನೇ ಮಾಡ್ಲಿ.. ದೈವಶಿಕ್ತಿಯ ಮು೦ದೆ ಅವ್ವು ತಲೆ ತಗ್ಗುಸಲೇ ಬೇಕು..!!
  ಸರ್ವ ಶಕ್ತನಾದ ಶಿವ ಎಷ್ಟು ಕರುಣಾಮಯಿಯೋ..!! ಅವನ ಸ್ಥಾನಲ್ಲಿ ಏನೇ ಹೀ೦ಗಿಪ್ಪಾ ಕೆಟ್ಟ ಅಥವ ದುರುದ್ದೇಶದ ಕೆಲಸ ಮಾಡ್ಲೆ ಶಿವ ಬಿಡ..!! ಮತ್ತೆ ಅವಕ್ಕೆ ದೋಶಕಾ೦ಗು.. ಅಲ್ಲದ ಮಾವ??

  ಹಾ ಪಟಲ್ಲಿ ಆನು ಒ೦ದು ಕೇಳೆಕು ಜೆನೆವಾರದ ಬಗ್ಗೆ- ಅದೂ ಬಲತ್ತಿ೦ದ ಎಡತ್ತು ಹೇಳಿ ಕಾಣ್ತು.. ಅಪ್ಪೋ??

  [Reply]

  ವೆಂಕಟೇಶ

  Venkatesh Reply:

  ಅದು ಶಿವಲಿಂಗದ ಬೆನ್ನಿನ ಪಟ, ಹೂಗಿನ ಎದುರುಹೊಡೆಗೆ ಹಾಕಿದ್ದವು

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  ಹಾ..!! ಆ ಪಟ, ಹಿ೦ದಣಾ ದಿಕ್ಕಿದ ತಗದ ಪಟ ಆದರೆ ಸರಿ.. :)

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಈ ಸಂಗತಿ ಎನಗೆ ಗೊಂತಿತ್ತಿಲ್ಲೆ.ತಿಳಿದು ಆಶ್ಚರ್ಯ ಆತು.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಳ್ಳೆ ಮಾಹಿತಿ. ಇಷ್ಟು ದೊಡ್ಡ ಶಿವಲಿಂಗ ಹತ್ರೆ ಎಲ್ಲಿಯೂ ಇಲ್ಲೆ ಕಾಣುತ್ತು. ಸರಿಯಾದ ಒಂದು ವೆವಸ್ಥೆ ಆಯೆಕು ಇದಕ್ಕೆ.
  ಒಡದು ಆಳುವ ನೀತಿಯ ನಮ್ಮ ರಾಜ ಕಾರಿಣಿಗೊ ಸರಿಯಾಗಿ ಉಪಯೋಗಿಸಿಗೊಳ್ತವು. ಇಲ್ಲದ್ರೆ, ಪುರ್ಬಿನ ಮನಸ್ಸು ಬದಲಾಯಿಸಿ ಆದರೂ, ಶಿವಂಗೆ ಜಾಗೆ ಕೊಡೆ ಹೇಳ್ತದು ಯಾವ ನೀತಿ? ಜೆನಂಗಳೇ ಬುದ್ಧಿ ಕಲ್ಸೆಕ್ಕು

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಸ್ಥಳೀಯ ಪೇಪರಿಲಿ ಇದರ ಶುದ್ದಿ ಓದಿದ್ದು ನೆಂಪಾತು ಅಡ್ಕತ್ತಿಮಾರುಮಾವಾ.
  ಈಗ ಎನಗೂ ಕಾಂಬದು, ಬೈಲಿಂದ ಏಕೆ ಒಂದರಿ ಹೋಪಲಾಗ?

  [Reply]

  VN:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಎನಗೆ ಇದುವರೆಗೆ ಗೊಂತಿತ್ತಿಲ್ಲೆ. ಓದಿ ವಿಸ್ಮಯ ಆತು. ಇಶಯ ಬೈಲಿಲಿ ಹಂಚಿದ್ದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಮಾವಾ,
  ಹೊಸ ವಿಷಯದ ಮಾಹಿತಿ ಸಿಕ್ಕಿತ್ತು.ಧರ್ಮದ ಅಡ್ಡಗೋಡೆಯ ಕಟ್ಟಿದ ರಾಜಕಾರಣಿಗೊ ಉ೦ಟುಮಾಡಿದ ಸಮಸ್ಯೆಗೆ ದೇವರೇ ಪರಿಹಾರ ಕೊಡೆಕ್ಕಷ್ಟೆ.

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಮಾವ

  ಹೊಸತ್ತಾದ ಒಂದು ವಿಶೇಷ ವಿಷಯ ಗೊಂತಾತು. ಊರಿಂಗೆ ಹೋಪಾಗ ಒಂದರಿ ಅತ್ಲ್ಯಾಗಿ ಹೋಯೆಕು. ದೊಡ್ಡವು ಮನಸ್ಸು ಮಾಡಿರೆ ಸಮಸ್ಯೆ ಪರಿಹಾರ ದೊಡ್ಡದೇನಲ್ಲ. ಬೇಗನೆ ಆ ಜಾಗ ಪ್ರಸಿದ್ದಿ ಪಡೆಯಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣವಾಣಿ ಚಿಕ್ಕಮ್ಮಪೆರ್ಲದಣ್ಣಸುಭಗವಿದ್ವಾನಣ್ಣವೇಣೂರಣ್ಣಶಾಂತತ್ತೆಗೋಪಾಲಣ್ಣನೀರ್ಕಜೆ ಮಹೇಶಡಾಮಹೇಶಣ್ಣದೇವಸ್ಯ ಮಾಣಿದೊಡ್ಮನೆ ಭಾವಅನು ಉಡುಪುಮೂಲೆಒಪ್ಪಕ್ಕಡೈಮಂಡು ಭಾವಶರ್ಮಪ್ಪಚ್ಚಿಹಳೆಮನೆ ಅಣ್ಣಕಜೆವಸಂತ°ಚೆನ್ನಬೆಟ್ಟಣ್ಣದೊಡ್ಡಮಾವ°ಶೀಲಾಲಕ್ಷ್ಮೀ ಕಾಸರಗೋಡುವಿಜಯತ್ತೆಶುದ್ದಿಕ್ಕಾರ°ಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ