ಅದು ಜನರಲ್ ವಾರ್ಡ್ ಮಾರಾಯಾ….

April 5, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಯ್ಯಮ್ಮಾ..,
ಸುಮಾರು ದಿನ ಆತು ಮಾರಾಯಾ.
ಎಂತಾ ಅರ್ಜೆಂಟು ಕೆಲ್ಸ ಗೊತ್ತಿದ್ದ, ಒಂದು ಸ್ವಲ್ಪವೂ ಪುರುಸೊತ್ತು ಇಲ್ಲೆ. ಹಾಂಗೇ ಹೇಳಿ ಎಂತ ಕೆಲ್ಸ ಹೇಳಿ ಕೇಳಿರೆ ಎಂತದೂ ಇಲ್ಲೆ.
ಇದು ಈಗದ ಪರಿಸ್ಥಿತಿ ಭಾವಯ್ಯ. ಹೀಂಗೆ  ಮಾತು ಸುರುಮಾಡಿದ ಶಂಭಯ್ಯ ಭಾವಯ್ಯ.
ಅದಪ್ಪು ಭಾವಯ್ಯ. ಯಾಕೆ ಗೊತ್ತಿದ್ದ, ಕೆಲ್ಸ ಮಾಡಿ ಮಾಡಿ ಬಚ್ಚಿ ಅಪ್ಪಗ ಸ್ವಲ್ಪ ರೆಸ್ಟ್ ಬೇಡ್ದಾ.
ಅವಗ ಹಾಗೆಂಲ್ಲಾ ಕಾಣ್ತು. ನಿಜಕ್ಕೂ ನೀನು ಕೆಲ್ಸ ಮಾಡಿರ‍್ತೆ. ಆದ್ರೆ ಅದು ಗೊತ್ತಾಗ್ತಿಲ್ಲೆ ಅಷ್ಟೇ. ಅದು ಸಣ್ಣ ಕೆಲ್ಸವೂ ಆಗಿಕ್ಕು. ಅದರ ಔಟ್‌ಪುಟ್ ದೊಡ್ತೇ ಇರೆಕ್ಕು ಹೇಳಿ ಇಲ್ಲೆನೆ ಭಾವಯ್ಯ. ಹೇಳಿ ಅವಂಗೆ ಸಮಾಧಾನ ಮಾಡಿರೆ ,
ಅಂವ ಹೇಳ್ತಾ , ಇಲ್ಲೆ ಭಾವಯ್ಯ ಇದು ಎನ್ನ ಕತೆ ಅಲ್ಲ ಇಂದ್ರಾಣ ಲೋಕದ ಕತೆ ಹೇಳಿ ಹೇಳ್ತ.
ವಿಷಯ ಅಪ್ಪಲ್ದಾ?.
ಲೋಕಲ್ಲಿ ಇಧೇ ಅಪ್ಪುದಲ್ದಾ. ತಿಂಬುದು , ಉಂಬುದು , ಕೆಲ್ಸ ಕೆಲ್ಸ ಹೇಳಿ ಹೇಳುವುದು. ಎಂತ ಕೆಲ್ಸ ಆಗ್ತು ಹೇಳಿ ಮಾತ್ರಾ ಗೊತ್ತಿಲ್ಲೆ.
ಅದಿರ್ಲಿ ಈಗ ವಿಷಯ ಎಂತ ಗೊತ್ತಿದ್ದ ,
ಮೊನ್ನೆ  ಎನಿಗೆ ಈ ಆಸ್ಪತ್ರೆಯ ಒಳ ಸ್ವಲ್ಪ ದಿನ ಇಪ್ಪ ಪ್ರಸಂಗ ಬಂತು. ಅದೊಂದು ಪ್ರಸವದ ನೆಪಲ್ಲಿ.
ಅಬ್ಬಾ ಎಂತೆಲ್ಲಾ ಸಂಗತಿ ಇರ‍್ತು ಗೊತ್ತಿದ್ದ ಅಲ್ಲಿ. ಎನಿಗೆ ಅಲ್ಲಿ ಒಂದು ವಾರ ಅಲ್ಲಿ ಇದ್ದು ಅಯ್ಯಮ್ಮಾ ಹೇಳೀ ಅನ್ಸಿತ್ತು.
ಎಂಗೊಗೆ ಆ ಆಸ್ಪತ್ರೆಲಿ ಜನರಲ್ ವಾರ್ಡ್‌ನ  ಹತ್ರವೇ ರೂಂ ಸಿಕ್ಕಿತ್ತು. ಹಾಂಗಾಗಿ ಒಳ್ಳೆ ಅನುಭವ ಆತು. ಎಂತಾ ಅವಸ್ಥೆ ಮಾರಾಯಾ ಅದು. ಒಂದೊಂದು ಇರ್ತವು ಒಂದೊಂದು ಥರ.
ಒಂದು ಸೆಮ್ಮಿರೆ ಇನ್ನೊಂದು ಅಯ್ಯಮ್ಮಾ. .  ಹೇಳಿ ಹೇಳ್ತು , ಮತ್ತೊಂದು “ಅಂಚಿ ಪೋಯ. . ಓಡೆಗ್ ನಿನ್ನ ಸಾವ್ ಈಡೆಗ್ ಬತ್ತಂಡ್. .” ಹೇಳಿ ಬೈತ್ತು.
ರಾತ್ರಿ ಆದ ಮೇಲೆ ಇದೆಲ್ಲಾ ಬೇಕಾದ್ರೆ ಜೋರೇ. ಯಬ್ಬಾ. .  ಯಬ್ಬಾ .  . ಅವ್ಕೆ ಹೇಂಗೂ ನಿದ್ದೆ ಇಲ್ಲೆ.  ಈಚೆ ರೂ0ಲಿ ಇಪ್ಪವ್ಕೂ ನಿದ್ದೆ ಇಲ್ಲೆ.
ಅದಲ್ಲಾ ಆ ರೂಂಲಿ 10 -15 ಜನ ಇರ್ತವು. ಅವ್ಕೆ ಯಾರಿಗೂ ನಿದ್ದೆ ಅಂತೂ ಇರ ಅದು ಖಂಡಿತಾ.ಒಂದೆರಡು ಅನಾಸಿನ್‌ಗೋ ಇದ್ರಂತೂ ಹೊಸ ರೋಗವೇ ಸುರುವಾಕ್ಕು ಅಲ್ಲಿ.
ಆತು ರಾತ್ರಿ ಸುಮಾರು 11 – 12 ಗಂಟೆಯವರೆಗೇ ಇದೆ ರಗಳೆ ಆತು.  ಆ ನಂತರ ಬಂತದಾ ನರ್ಸಮ್ಮ , ಚೆಕ್ ಮಾಡ್ಲೆ . .  ಇದರ ಕರ್ಮ.  ನಿದ್ದೆ ಮಾಡ್ಲೂ ಬಿಡ ಅದು. ಆತು ಅದು ಹೋತು, ಹಾಂಗೇ  ನಿದ್ದೆ ಮಾಡುವ ಹೇಳೀ ಮನ್ಗಿರೆ ಟೊಂಯ್ ಹೇಳೀ ನುಸಿ ಉಗ್ರಗಾಮಿಗಳ ಹಾಂಗೆ ಒಳ ಬಂತದಾ . .ಕಚ್ಚುಲೆ ,  ಅಲ್ಲಿ ಪ್ಲಗ್ಗಿಗೆ ಒಂದು ಕಾಯಿಲ್ ಹಾಕಿದ್ದವು ಅದು ಲೆಕ್ಕಕ್ಕೇ ಇಲ್ಲೆ.
ಆತು ಗಂಟೆ ಅಷ್ಟಪ್ಪಗ 2 ಕಳ್ತು.. ಹಾಂಗೇ ನಿದ್ದೆ ಬಂತು ಹೇಳಿ ಅಪ್ಪಗ ಆಸ್ಪತ್ರಗೆ ಯಾರಾದ್ರೂ ಅರ್ಜೆಂಟ್ ಪೇಷಂಟ್‌ಗ ಬಪ್ಪುದು , ಆವಗ ಎಲ್ಲ ಆ ಕಡೆ ಈ ಕಡೆ ದಡಬಡ ಶಬ್ದ.
ಆತು ನಿದ್ದೆ ಹೋತು. ಆವಾಗ ಗಂಟೆ 3 ಆತು. ಮತ್ತೆ ಕಣ್ಣಿಗೆ ಹಾಂಗೆ ನಿದ್ದೆ ಬಂತು ಹೇಳಿ ಅಪ್ಪಗ ಬೆಳಗಿನ ಜಾವ ಆತು.
ಬಾಗಿಲು ಟಕ್ ಟಕ್ ಹೇಳೀ ಕುಟ್ಟಿದವದ ,  “ಬೆಚ್ಚ ನೀರ್ ಬೋಡಾ” ಹೇಳಿ ಕೇಳ್ತು ಅದೊಂದು . “ಬೆಚ್ಚ ಅಲ್ಲ ನಿನ್ನ ಕರ್ಮ” ಹೇಳೀ ಬೈಲೆ ಮಾತ್ರಾ ಬಾಕಿ.

ಹಾಂಗೆ ಬೈದ್ರೆ ನಮ್ಮ ಕೆಲ್ಸ ಆಗ್ತಾ. ತಾಳ್ಮೆ ಬೇಕಲ್ದಾ . , ಹಾಂಗಾಗಿ ಇರ‍್ಲಿ ಹೇಳಿ ಮನುಗಿರೆ ಬೆಳಗ್ಗೆ ಆತು. ಎದ್ದು ನೋಡಿದೆ ಗಂಟೆ ಆರು.

ಹಾಂಗೆ ಹೆರ ಹೋಗಿ ನೋಡಿರೆ ಒಂದು ಜವ್ವಂತಿ ಆಸ್ಪತ್ರೆಯ ವರಾಂಡಲ್ಲಿ ಬತ್ತಾ ಇತ್ತು , ವಿಕಾರ ಮೋರೆ , ಹೊಟ್ಟೆಗಿಲ್ಲ , ಬಟ್ಟೆಗಿಲ್ಲಾ ಏನಾದ್ರು ಕೊಡಿ ಹೇಳಿ ಕೇಳ್ತಾ ಇತ್ತು.
ಕ್ಞೈ ನೋಡಿರೆ ಡ್ರಿಪ್  ಹಾಕ್ಲೆ ಕೊಟ್ಟ ಸಿರಿಂಜ್ ಎಲ್ಲಾ ಹಾಂಗೇ ಇತ್ತು. ಅದು ಜನರಲ್ ವಾರ್ಡ್‌ನ ಹುಡುಗಿ. ಅಷ್ಟಪ್ಪಗ ನರ್ಸ್ ಬಂದು “ಪೋಪಾನ ಇಜ್ಯಾ” ಹೇಳಿ ಬೈತ್ತು. “ಪೋಪೆ ಪೋಪೆ ಮಾನ್ ಸೀದಾ ಪೋಪೆ” ಹೇಳಿ ಹೋತದ ಅದು.
ರಾತ್ರಿ ಇಡೀ ನಿದ್ರೆ ಇಲ್ಲೆ , ಇದರ ಎಡೆಲಿ ಇಂತದ್ದೊಂದು ಮಾರಿಗೋ ಹೇಳಿ ರೂಮಿಲಿ ತಣ್ಣೀರು ಸ್ನಾನ. ಯಾಕೆ ಹೇಳಿರೆ , ಬಿಸಿನೀರು ಕೊಡುದು ಪೇಷಂಟುಗೊಕ್ಕೆ ಮಾತ್ರಡ.  ಅಂತೂ ಮೀಲೆ ಹೋಗಿಯೂ ಆತು. ಕಾಫಿಯೂ ರೂಮಿಗೇ ಬತ್ತು.
ಅದ ಮತ್ತೆ ಜನರಲ್ ವಾರ್ಡ್ ಕಾಟ.  ಅಲ್ಲಿ ಎಂತಾ ಜಗಳ , ಎಂತಾ ಬೊಬ್ಬೆ , ಎನಿಗೆ ಅದರ ನೋಡೆಕ್ಕು ಹೇಳೀ ಅನ್ಸಿತ್ತು.  ವಾರ್ಡ್‌ನ ಹೆರ ನಿತ್ತು ನೋಡಿದೆ ,ಚಿತ್ರ ವಿಚಿತ್ರ ಜನಗೋ ಅದರೊಳ ಇತ್ತಿದ್ದವು.
ಎನ್ನ ಹತ್ರಾಣವ್ಕೆ ಉಪದ್ರ ಆಗ್ತು ಹೇಳುವ ಜ್ಞಾನವೇ ಇಲ್ಲದ್ದವ್ರ ಹಾಂಗೆ ಮಾಡ್ತಾ ಇದ್ದಿತ್ತವು ಅವು.ಒಂದು ಜನಕ್ಕೆ ಕಾಲು ಬೇನೆ ಇನ್ನೊಂದು ಜನಕ್ಕೆ ಸೊಂಟ ಬೇನೆ , ಮತ್ತೊಬ್ಬಂಗೆ ಹೊಟ್ಟೆ ಬೇನೆ ..
ಹೀಂಗೆ ಒಬ್ಬೊಬ್ಬನ ಸಮಸ್ಯೆ ಒಂದೊಂದು. ಅದ್ರ ಒಟ್ಟಿಗೆ ಈ ಪೇಷಂಟ್‌ಗಳ ಒಟ್ಟಿಗೆ ಒತ್ತವಲ್ದಾ ಅವು ಮನುಗುದು ಪೇಷಂಟ್‌ನ  ಮಂಚದ ಕೆಳ. ಹಿಂಗೇ ಒಂದೊಂದು ವಿಷಯ ಕೂಡಾ ಅಲ್ಲಿ ದಾಖಲಾರ್ಹವೇ.

ನಮ್ಗೆ ಹೀಂಗೇ ನೋಡಿರೆ ಅದೊಂದು ವಿಚಿತ್ರ ಕಾಣ್ತು. ಆದ್ರೆ ಅದರ ಒಳ ರೋಗಿಗೊ ಇರ್ತವಲ್ಲಾ ಅವ್ಕೆ ಹೇಂಗೆ ಅಕ್ಕು.
ನಿಜಕ್ಕೂ  ಅವರ ಕಷ್ಠ ನೋಡಿರೆ ಬೇಜಾರಾಗ್ತು. ಆದ್ರೆ  ಎನಿಗಂತೂ ಆ ಜನರಲ್ ವಾರ್ಡ್ ಹತ್ತ ಇದ್ದು ಒಂದು ವಾರ ನಿದ್ದೆ ಇಲ್ಲ , ಒಂದು ವಾರ ಅಪ್ಪಗ ಆನು ಒಂಥರಾ ಹುಚ್ಚನ ಹಾಂಗೆ ಆಗಿತ್ತಿದ್ದೆ.  ನಿದ್ದೆಯೂ ಇಲ್ಲೆ , ಶಬ್ದಗಳೂ ಬೇರೆ.

ಅಂತೂ ಒಂದು ವಾರಲ್ಲಿ ಎಂಗೋ ಆಸ್ಪತ್ರೆಂದ ಬಂದಿಯ.
ಆದ್ರೆ ಎನಿಗೆ ಅನ್ಸಿದ್ದು ಅದಲ್ಲ,  ಈ ಜನರಲ್ ವಾರ್ಡ್‌ನ ಡ್ಯುಟಿಲಿ ಇಪ್ಪ್ಲ ನರ್ಸ್‌ಗೋ ಯಾವಾಗೂ ಎಂತ ಮಾಡುಗು  ಹೇಳಿ.  ಅವು ಒಂಥರಾ ಮರ್ಲರೇ ಅಲ್ದಾ?
ಆದ್ರೆ ಒಂದು ವಿಷಯ, ಅವ್ಕೂ ಶಿಫ್ಟ್ ಇದ್ದಲ್ದಾ?.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಮಹೇಶಂಗೆ ಮಾಣಿ ಆದ್ದದು ಕೇಳಿ ಸಂತೋಷ ಆತು. ಜನರಲ್ ವಾರ್ಡ್ ಹತ್ರೆ ಇದ್ದ ಕಾರಣ ನವಗೆ ಒಂದು ಒೞೆ ಶುದ್ದಿ ಕೇಳಲೆ ಸಿಕ್ಕಿತ್ತು. ಜನರಲ್ ವ್ಬಾರ್ಡ್ ಹೀಂಗೇ ಇರ್ತದಡ್ಡ.

  [Reply]

  ಪುಚ್ಚಪ್ಪಾಡಿ ಮಹೇಶ

  ಪುಚ್ಚಪ್ಪಾಡಿ ಮಹೇಶ Reply:

  ಗೆಣಪ್ಪಣ್ಣ ಧನ್ಯವಾದಗೋ. .

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಮಹೇಶ ಭಾವ೦ಗೆ ಅಭಿನ೦ದನೆಗೊ.
  ಆಸ್ಪತ್ರೆಲಿ ಉದ್ಯೋಗ ಮಾಡುವ ಡಾಗುಟ್ರಕ್ಕಳ,ನರ್ಸುಗಳ ಸಹನೆಗೆ ಮೆಚ್ಚೆಕ್ಕು,ಅಲ್ಲದೋ? ಬಾಬೆಯ ನೋಡಿ ಸ೦ತೋಷಪಡುವದದರ ಒಟ್ಟಿ೦ಗೆ ಆಸ್ಪತ್ರೆಯ ಅನುಭವವನ್ನೂ ನೋಡಿ ಹ೦ಚಿದ್ದಕ್ಕೆ ಧನ್ಯವಾದ.ಬಾಬೆ ಕೂಸೊ ಮಾಣಿಯೊ ಗೊ೦ತಾತಿಲ್ಲೆನ್ನೆ.

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಕುಟುಂಬ ಮುಂದುವರಿತ್ತ ಸಂದರ್ಭಲ್ಲೇ ಜೆನಂಗೊ ಹೀಂಗಿದ್ದವು – ಹೇಳಿ ಗೊಂತಾದ್ದು ಒಳ್ಳೆ ಅಂಶವೇ..
  ಅಲ್ಯಾಣ ಸಹಜ ಚಿತ್ರಣವ ಸಹಜ ರೀತಿಲಿ ಕೊಟ್ಟು ಬೈಲಿನ ಎಲ್ಲೋರ ಗಮನ ಹರುಸಿದಿ.

  ಒಳ್ಳೆ ಶುದ್ದಿಗೆ ಒಪ್ಪಂಗೊ.
  ಅಪ್ಪ ಆದ ಲೆಕ್ಕಲ್ಲಿ ಚೀಪೆ ಎಂತಾರು ಕೊಡ್ಳಿದ್ದೋ, ಬೈಲಿಂಗೆ?? :-)
  ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಶೀಲಾಲಕ್ಷ್ಮೀ ಕಾಸರಗೋಡುಅಕ್ಷರದಣ್ಣಚೆನ್ನೈ ಬಾವ°ಅನು ಉಡುಪುಮೂಲೆಶ್ರೀಅಕ್ಕ°ಬಂಡಾಡಿ ಅಜ್ಜಿದೊಡ್ಡಮಾವ°ಡಾಮಹೇಶಣ್ಣವಿನಯ ಶಂಕರ, ಚೆಕ್ಕೆಮನೆಅಡ್ಕತ್ತಿಮಾರುಮಾವ°ನೆಗೆಗಾರ°ಬೊಳುಂಬು ಮಾವ°ದೊಡ್ಡಭಾವಸಂಪಾದಕ°ಬೋಸ ಬಾವಬಟ್ಟಮಾವ°ಕಾವಿನಮೂಲೆ ಮಾಣಿಒಪ್ಪಕ್ಕಶಾ...ರೀಕೊಳಚ್ಚಿಪ್ಪು ಬಾವಮಾಷ್ಟ್ರುಮಾವ°ಶ್ಯಾಮಣ್ಣಸುಭಗವಿಜಯತ್ತೆಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ