ಅಗಾಧ ಸಂಗೀತ….ಅತೀತ ಸಂಗೀತ…..ಅನಾದಿ/ಅನಂತ ಸಂಗೀತ

ಸುಮ್ಮನೆ ಬರವಾ° ಹೇಳಿ ಅನ್ಸಿತ್ತು. ಇದು ಎನ್ನ ಮೊದಲ ಲೇಖನ ಇಲ್ಲಿ.

ಎನಾರೂ ಬರೆಕು ಹೇಳುವಗ….ನಮ್ಮ ಕರ್ನಾಟಕ ಸಂಗೀತದ ಬಗ್ಗೆ ಬರವಾ ಹೇಳಿ ಆಶೆ ಆತು.

ಆನೊಬ್ಬ ಸಂಗೀತ ಕೇಳುಗ° ಮತ್ತೆ ಅರೆ-ಬರೆ ಹಾಡುಗಾರ° ಕೂಡಾ. ಬೆಂಗಳೂರಿನ ಅರ್ಜೆಂಟ್  ಜೀವನಲ್ಲಿ ಸಿಕ್ಕಿದ ಸಮಯಲ್ಲಿ ಸಂಗೀತ ಕಲಿತ್ತಾ ಇದ್ದೆ (ಸೀನಿಯರ್ ವೋಕಲ್)

ವಿಷಯಕ್ಕೆ ಬಪ್ಪ°…..

ನಮ್ಮ ಸಂಸ್ಕೃತಿಗೊ, ಮೂಲ ಪರಂಪರೆಗೊ ಪಾಶ್ಚಾತ್ಯ ಸಂಸ್ಕೃತಿಯ ಬಿರುಗಾಳಿಗೆ ಸಿಕ್ಕಿ ನಾಶ ಆವ್ತಾ ಇಪ್ಪ ಆತಂಕದ ನಡುವೆಯೇ ಅಲ್ಲಿ ಇಲ್ಲಿ,

ಆಸಕ್ತ ಕಲಾವಿದರು ಹುಟ್ಟುತ್ತಾ ಇಪ್ಪದು ಆಶಾದಾಯಕ ಸಂಗತಿಯೇ.

ತಲೆಮಾರುಗಳಲ್ಲಿ ನಾಶ ಆಗದ್ದೇ ಬೆಳೆತ್ತಾ ಇಪ್ಪ ಕಲೆಗಳಲ್ಲಿ ನಮ್ಮ ಶಾಸ್ತ್ರೀಯ ಸಂಗೀತವೂ ಒಂದು…..

ವೀಣೆ -  ಸಂಗೀತದ ಒ೦ದು ಜೀವಾಳ

ವೀಣೆ - ಸಂಗೀತದ ಒ೦ದು ಜೀವಾಳ

ನಮ್ಮ ಸಂಗೀತದ ಪಕ್ಷಿನೋಟಃ

ಸರಿಸುಮಾರು ಒಂದು ಸಾವಿರ ವರ್ಷಂಗಳ ಹಿಂದೆ ನಮ್ಮಲ್ಲಿದ್ದ ಪದ್ಧತಿ ಒಂದೇ…ಅದು ಭಾರತೀಯ ಸಂಗೀತ ಪದ್ಧತಿ….ಅದಕ್ಕಿದ್ದ ಶಾಸ್ತ್ರಾಧಾರ ಹೇಳಿರೆ ಸಾರಂಗ ದೇವನ “ಸಂಗೀತ ರತ್ನಾಕರ”.

ಮೊಘಲ್, ಅರಬ್ ಸಂಸ್ಕೃತಿಯ ಪ್ರಭಾವದ ಕಾರಣ ಬಹುತೇಕ ಉತ್ತರ ಭಾರತಲ್ಲಿ ಸಂಗೀತದ ಒಂದು ಹೊಸ ಗಾಳಿಯೇ ಬೀಸಲೆ ಶುರುವಾತು.

ಹೀಂಗಾಗಿ ಉತ್ತರಾದಿ, ದಕ್ಷಿಣಾದಿ ಸಂಗೀತದ ನಡುವೆ ಒಂದು ಅಂತರ ಬಪ್ಪಲೆ ಶುರುವಾತು.

ಎಂತದೇ ಆಗಲೀ….ಅದೂ ಚೆಂದ….ಇದೂ ಚೆಂದ….

ಕೇಳಿ ಆರಾಧಿಸುವ ಮನಸ್ಸಿದ್ದರೆ ಉತ್ತರಾದಿಯೂ ದಕ್ಷಿಣಾದಿಯೂ ಒಂದು ಸಮನ್ವಯ…

ಇರಳಿ…

ನಮ್ಮ ದಕ್ಷಿಣಾದಿ ಸಂಗೀತದ ಬಗ್ಗೆ ಹೇಳುದಾದರೆ ಅದೊಂದು ಸಾಗರ. ನಿಜಕ್ಕೂ ಅದೊಂದು ರತ್ನಾಕರ

ನಮ್ಮ ಸಂಗೀತಕ್ಕೆ ಮೊಟ್ಟ ಮೊದಲಿಂಗೆ ಒಂದು ರೂಪು ರೇಷೆ ಕೊಟ್ಟ ಮಹಾನುಭಾವ ಹೇಳಿರೆ ಪುರಂದರ ದಾಸ°.

ಮಕ್ಕಳಾದಿಯಾಗಿ ಹಾಡಲೆ ಸುಲಭ ಆಗಲಿ ಹೇಳಿ ಈ ಕೆಳಾಣ ಒಂದು ಹಂದರ ತಯಾರು ಮಾಡಿದವ್ವು.

– ಸರಳ ವರಸೆ

– ಜಂಟೆ ವರಸೆ

– ದಾಟು ಸ್ವರ

– ಸಪ್ತ ಸೂಳಾದಿ ಅಲಂಕಾರ

– ಗೀತೆ

ಎಲ್ಲವನ್ನೂ ಸುಲಭವಾಗಿ ಹಾಡಲೆ ಅನುಕೂಲ ಆಗಲಿ ಹೇಳಿ ಇವೆಲ್ಲವುದರ ಮಾಯಾ ಮಾಳವ ಗೌಳ ರಾಗಲ್ಲಿ ನಿಬದ್ಧಿಸಿದ್ದವ್ವು.

ಮಾಯಾ ಮಾಳವ ಗೌಳ ಎಲ್ಲರಿಂಗೂ ಸುಲಭವಾಗಿ ಅರಗಿಸಿಕೊಂಬಲೆ ಸುಲಭವಾಗಿಪ್ಪ ರಾಗ.

ಗೀತೆ ಕಲಿವಲೆ ಶುರುವಪ್ಪಗ ನೆಂಪಪ್ಪದೇ “ಲಂಬೋದರ ಲಕುಮಿಕರ”. ಮಾಯಾ ಮಾಳವದ ಜನ್ಯರಾಗ ಮಲಹರಿಲಿ ಇದು ನಿಬದ್ಧ ಆಯ್ದು.

ಜಗತ್ತೇ ದಾಸರ “ಕರ್ನಾಟಕ ಸಂಗೀತ ಪಿತಾಮಹ” ಹೇಳಿ ಕೊಂಡಾಡ್ತು…

ಹೀಂಗೆ ಅಲ್ಲಿಂದ ಸಂಗೀತದ ನದಿ ಒಂದು ತಿರುವು ಪಡಕ್ಕೊಂಡು ಒಂದು ಹೊಸ ರೂಪ ಪಡಕ್ಕೊಂಡು ಇನ್ನಷ್ಟು ವೇಗ ಪಡಕ್ಕೊಂಡು ಸಾಗುತ್ತಾ ಇಪ್ಪಗ…..

……

……

ಅಲ್ಲಿ ತಮಿಳುನಾಡಿಲಿ ಕಾವೇರಿ ನದಿ ತಟಲ್ಲಿ….ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳ ಜನ್ಮ ಆವ್ತು.

ಇವ್ವು ಮೂರು ಜನ ಜನ್ಮದಾರಭ್ಯ ಸಂಗೀತದ ಬಗ್ಗೆ ಅತೀವ ಆಸಕ್ತಿ ಬೆಳಸಿಯೊಂಡು ತೆಲುಗು, ತಮಿಳು, ಸಂಸ್ಕೃತಲ್ಲಿ ಅಪಾರ ಸಂಖ್ಯೆಯ ಕೀರ್ತನೆ, ಕೃತಿಗಳ ರಚನೆ ಮಾಡಿದವ್ವು.

ಇವರ ಜೀವನ ಚರಿತ್ರೆ ಬಗ್ಗೆ ಬರವಲೆ ಕೂದರೆ ಒಂದು ಪುಸ್ತಕವೇ ಅಕ್ಕು.

ಕೃತಿಗಳ ಒಟ್ಟಿಂಗೇ ಅನೇಕ ರಾಗಂಗೊ ಹುಟ್ಟಿದವ್ವು. ಇಂದು ನಮ್ಮ ಸಂಗೀತಲ್ಲಿ ೨೨,೦೦೦ಕ್ಕೂ ಹೆಚ್ಚು ರಾಗಂಗೊ ಇದ್ದವ್ವು ಹೇಳಿರೆ ನಮ್ಮ ಸಂಗೀತ ಒಂದು ಸಾಗರ ಹೇಳಲಕ್ಕಲದಾ ?.

ಇನ್ನೊಂದು ಆಶ್ಚರ್ಯ ಹೇಳಿರೆ ಈ ಮೂರು ಜನ ಒಂದೇ ಊರಿಲಿ ಇತ್ತಿದವ್ವು. ಅದರ ಹೆಸರು ತಿರುವಯ್ಯಾರು.

ಇಂದಿಂಗೂ ಅಲ್ಲಿ ಪ್ರತಿ ವರ್ಷ ತ್ಯಾಗರಾಜರ ಆರಾಧನೆ ನಡತ್ತು. ಅಪಾರ ಸಂಖ್ಯೆಲಿ ಸಂಗೀತಗಾರರು, ಆಸಕ್ತರು ಬಂದು ಇಲ್ಲಿ ಹಾಡ್ತವ್ವು, ಕೇಳ್ತವ್ವು.

ಇನ್ನೂ ತುಂಬಾ ಇದ್ದು ಬರವಲೆ. ಒಂದೇ ಸರ್ತಿ ಬರದು ನಿಂಗೊಗೆಲ್ಲಾ ಬೋರ್ ಹೊಡಶುವುದು ಬೇಡ.

ಮತ್ತೊಂದರಿ ಕಾಂಬ°..

ಅಲ್ಲಿವರೆಗೆ……. “ಎಂದರೋ ಮಹಾನುಭಾವುಲು…ಅಂದರಿಕಿ ವಂದನಮು…..”

– ಗಿರಿ.

ಗಿರಿಪ್ರಸಾದ

   

You may also like...

13 Responses

  1. ಗಿರಿ ಪ್ರಸಾದ್ says:

    ಸಾಕಷ್ಟು ಪ್ರೋತ್ಸಾಹ, ಉತ್ತೇಜನ ತೋರ್ಸಿದ ಎಲ್ಲರಿಂಗುದೇ ಎನ್ನ ಧನ್ಯವಾದಂಗೋ.ಇನ್ನಷ್ಟು ವಿಷಯ ಹೊತ್ತೊಂಡು ಮತ್ತೆ ಬತ್ತೆ.ಅಲ್ಲಿವರೆಗೂ ನಮಸ್ಕಾರ.

  2. ಎಸ್.ಕೆ.ಗೋಪಾಲಕೃಷ್ಣ ಭಟ್ says:

    ತುಂಬಾ ಲಾಯ್ಕ ಆಯಿದು.ಮುಂದಾಣ ಕಂತಿನ ನಿರೀಕ್ಷೆಲಿದ್ದೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *