Oppanna.com

ಆಹಾ! ಉಪ್ಪಿನಕಾಯಿ!

ಬರದೋರು :   ಅನುಶ್ರೀ ಬಂಡಾಡಿ    on   02/01/2014    5 ಒಪ್ಪಂಗೊ

ಅನುಶ್ರೀ ಬಂಡಾಡಿ

ದಿನ ಉದಿ ಆದರೆ ಇಂದು ಅಡಿಗೆ ಎಂತರ ಮಾಡುದು ಹೇಳಿ ಮಂಡೆಬೆಶಿ ಎಲ್ಲಾ ಮನೆ ಹೆಮ್ಮಕ್ಕೊಗೂ ಇದ್ದದೇ. ಮನೆಲಿ ಆರತ್ರಾರು ಕೇಳಿರೆ, “ಎಂತದೂ ಅಕ್ಕು” ಹೇಳ್ತ  ಉತ್ತರ ಬಕ್ಕು. ಹಾಂಗೆ ಹೇಳಿಗೊಂಡು  ಎಂತಾರು ಮಾಡಿರೆ “ಇದುವಾ? ಬೇರೆಂತಾರು ಮಾಡ್ಳಾವುತಿತ್ತಿಲ್ಲೆಯಾ…” ಹೇಳ್ತ ಉದ್ಗಾರ ಬಕ್ಕು. ಎಂತ ಅಡಿಗೆ ಮಾಡಿರೂ ಅದರ್ಲಿ ಎಂತಾರು ಒಂದು ಕೊರತೆ ಕಾಂಬದು ನಿತ್ಯ ಇದ್ದದೇ. ಹೇಂಗಿಪ್ಪ ನಳಪಾಕವೇ ಆದರೂ ನಾಕು ಸರ್ತಿ ಉಂಡಪ್ಪಗ ಬೊಡಿಯದ್ದೇ ಇರ. ಆದರೆ ಈ ಎಲ್ಲಾ ನಮುನೆಯ ಕೊರತೆಗಳಿಂದ ಅತೀತವಾದ ಒಂದು ಪದಾರ್ಥ ಇದ್ದು. ಅದುವೇ ’ಉಪ್ಪಿನಕಾಯಿ!’
DSC_7098ಅದ! ಉಪ್ಪಿನಕಾಯಿಯ ಹೆಸರು ಕೇಳುವಾಗಳೇ ಬಾಯಿಲಿ ನೀರು ಬಪ್ಪಲೆ ಸುರು ಆತು. ಎಷ್ಟು ಸರ್ತಿ ಉಂಡರೂ ಬೊಡಿಯದ್ದ ಪದಾರ್ಥ ಹೇಳ್ತ ಹೆಗ್ಗಳಿಕೆ ಇಪ್ಪ ಈ ಉಪ್ಪಿನಕಾಯಿಲಿ ಹಲವು ಬಗೆಗೊ ಇದ್ದು. ಹಸಿಕೆತ್ತೆ, ಹೊರುದು ಕೂಡಿದ್ದು, ಮೆಡಿ, ಅಂಬಟೆ, ಇಡ್ಕಾಯಿ ಇತ್ಯಾದಿ ಇತ್ಯಾದಿ. ಒಂದೊಂದು ನಮುನೆಯ ಉಪ್ಪಿನಕಾಯಿಗೂ ಅದರದ್ದೇ ಆದ ವಿಶೇಷ ರುಚಿ! ಉಪಿನಕಾಯಿ ಮಾಡ್ಳೆ ಹೇಳಿಯೇ ಇಪ್ಪ ಮಾವಿನಕಾಯಿಗೊ ಹಲವಿದ್ದು. ಕೆಲವು ಮಾವಿನಕಾಯಿಗಳ ಕೆತ್ತೆ ಉಪ್ಪಿನಕಾಯಿ ರುಚಿ ಆದರೆ, ಮತ್ತೆ ಕೆಲವು ಮೆಡಿ ಹಾಕುಲೆ ಸೂಕ್ತ, ಇನ್ನೂ ಕೆಲವು ಇಡ್ಕಾಯಿಗೆ ಲಾಯ್ಕಕ್ಕು.
ಇಡ್ಕಾಯಿ ಉಪ್ಪಿನಕಾಯಿಯ ಗೊರಟಿನ ಒಡದು ಕೋಗಿಲೆ ತಿಂಬದು ಎಂದಿಂಗೂ ಮರೆಯ. ಗೊರಟಿನ ಕಚ್ಚಿ ಒಡದು, ಹಲ್ಲು ಎಷ್ಟು ಬೇನೆ ಆದರೂ ತೊಂದರಿಲ್ಲೆ. ಕೋಗಿಲೆ ತಿಂದು ನೀರು ಕುಡಿವದೊಂದು ಖುಷಿಯೇ ಬೇರೆ.
ಬರಣಿಲಿ ಹಾಕಿದ ಮೆಡಿಯ ರುಚಿಗೆ ಮೆಡಿಯೇ ಸಾಟಿ!
ಇನ್ನು ಅಂಬಟೆ ಮೆಡಿ ಉಪ್ಪಿನಕಾಯಿದೇ ಬಲುರುಚಿ. ಬೆಳದ ಅಂಬಟೆದು ಹೊರುದು ಕೂಡಿದ ಉಪ್ಪಿನಕಾಯಿ ಅಂತೂ ಇನ್ನೂ ರುಚಿ. ಅದರ ಗೊರಟಿನೊಳಂದ ಉಪ್ಪುನೀರು ಹೀರಿದಷ್ಟೂ ಬಂದೊಂಡೇ ಇಕ್ಕು.
DSC_7088ಮಾವು, ಅಂಬಟೆ  ಅಲ್ಲದ್ದೆ  ಕರಂಡೆ, ಕಣಿಲೆ, ಮುಂಡಿಗೆಂಡೆ, ಬಾಳೆದಂಡು, ನೆಲ್ಲಿಕಾಯಿ, ತೊಂಡೆಕಾಯಿ, ಬೀಂಪುಳಿ, ಸೌತ್ತೆ, ಗುಜ್ಜೆ, ಮಾಂಗನಾರು, ನಿಂಬೆಹುಳಿ, ದುಡ್ಲೆಹುಳಿ ಉಪ್ಪಿನಕಾಯಿಗಳೂ ನಮ್ಮ ಹೊಡೆಲಿ ಪ್ರಸಿದ್ದ. ಅಂಬೆರ್ಪು ಆದರೆ ಅಡಿಗೆ ಸತ್ಯಣ್ಣ, ಇದ್ದ ತರಕಾರಿಗಳನ್ನೇ ಕೊಚ್ಚಿ ಹಾಕಿ ದಿಢೀರ್ ಉಪ್ಪಿನಕಾಯಿ ಮಾಡುಗದ.
ಹುಳಿ ಉಪ್ಪಿನಕಾಯಿಗೊ ಬಾಯಿರುಚಿ ಇಲ್ಲದ್ದೋರಿಂಗೆ ಹೇಳಿದ ಮದ್ದು. ಇನ್ನೊಳುದ ಉಪ್ಪಿನಕಾಯಿಗಳೂ ’ಉಪ್ಪಿನಕಾಯಿ’ಯಷ್ಟೇ ತಿಂದರೆ  ಆರೋಗ್ಯಕರವೇ. ರುಚಿ ಆವುತ್ತು ಹೇಳಿಗೊಂಡು ಅದರ್ನೇ ತಾಳ್ಳಿನ ಹಾಂಗೆ ಉಂಬಲಾಗ ಅಷ್ಟೆ.
ಮೂಲತಃ ಆಹಾರವ ಸಂಸ್ಕರಣೆ ಮಾಡುವ ಉದ್ದೇಶಂದ ಮೂಡಿಬಂದ ಈ ಉಪ್ಪಿನಕಾಯಿ ನಿಜಕ್ಕೂ ನಮ್ಮ ಹೆರಿಯೋರ ದೊಡ್ಡ ಕೊಡುಗೆ. ನವಗಂತೂ ಉಪ್ಪಿನಕಾಯಿ ಇಲ್ಲದ್ದೆ ಉಂಡದು ಉಂಡಾಂಗಾಗ. ’ಬ್ರಾಹ್ಮರಿಂಗೆ ಮಜ್ಜಿಗೆ, ಉಪ್ಪಿನಕಾಯಿ ಇದ್ದರೆ ಊಟ ಆತು’ ಹೇಳ್ತ ಮಾತಿಲೇ ಗೊಂತಾವುತ್ತು ಈ ಉಪ್ಪಿನಕಾಯಿಯ ಮಹತ್ವ. ಎಂತ ಹೇಳ್ತಿ?

5 thoughts on “ಆಹಾ! ಉಪ್ಪಿನಕಾಯಿ!

  1. ಉಪ್ಪಿನಕಾಯಿ ವಿಷಯಲ್ಲಿ ಬಂಡಾಡಿ ಅಜ್ಜಿಯ ರಸಭರಿತ ಶುದ್ದಿ ಓದಿ ಎಲ್ಲೋರಿಂಗು ಬಾಯಿಲಿ ನೀರು ಹರುದತ್ತದ. ವಾಹ್ ! ಉಪ್ಪಿನಕಾಯಿ ಮಸರು ಇದ್ದರೆ ಮತ್ತೆಂತ ಬೇಕು ?

  2. ಅಬ್ಬ!! ಬಂಡಾಡಿ ಅಜ್ಜಿ ಲಾಯಕ ಕಲಿಶಿದ್ದವು ನಿಂಗೊಗೆ!!!. ಅಂತೂ ಬರಣಿಯುದೇ ಎರಡು ಬಾಗವುದೇ ಇಲ್ಲಿ ತೋರ್ಸಿ ಬಾಯಿಲಿ ನೀರು ಹರುಶಿದಿ

  3. ಬಂಡಾಡಿ ಅಜ್ಜಿ ಭರಣಿಯೊಳ ತುಂಬುಸಿ ಮಡುಗಿದ ಉಪ್ಪಿನಕಾಯಿಯ ಬಂಡಾಡಿ ಪುಳ್ಳಿ ಎಲೆಗೆ ಬಳುಸಿತ್ತು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×