ಅಹಾ ಹಲಸು

March 20, 2011 ರ 6:02 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಲಸದವಕ್ಕೆ ಅಡಿಗೆ ಮಾಡಿ ಹಾಕಿ ಬೊಡುದೇ ಹೋತಪ್ಪಾ ಹೇಳಿಯೊಂಡೇ ಬಂತು ಶಾರದೆ.
ಬಚ್ಚಿತ್ತಪ್ಪ,ಅಕ್ಕಿ ಕಡದ್ದೇ ಆಯೆಕ್ಕು,ಒಂದು ದಿನ ಅವಲಕ್ಕಿಯೋ ಉಂಡೆಯೋ ಮಾಡಿರೆ ತಿಂತವೂ ಇಲ್ಲೆ,ಮರದಿನ ಕೆಲಸಕ್ಕೆ ಜನವೂ ಇಲ್ಲೆ.
ಮನೆಯವಕ್ಕಾದರೆ ಅವಲಕ್ಕಿಸಜ್ಜಿಗೆಯೋ ಅಲ್ಲ ಹೆಜ್ಜೆ ಚಟ್ನಿ ಮಾಡಿರೂ ಮಾತಾಡವು. ನಿನ್ನೆ ಹಲಸಿನಕಾಯಿ ಬೆಂದಿ ಮಾಡಿತ್ತಿದ್ದೆ “ಉಂದೆಂಚಿನ ಅಕ್ಕೆ,ಪೆಲಕ್ಕಾಯಿ ಪಿತ್ತ ಅತ್ತೋ, ಎಂಕ್ ಆಪುಜ್ಜಿ” ಹೇಳಿಯೇ ಬಿಟ್ಟತ್ತು ಎಂಗಳ ಅಡಕ್ಕೆ ಹೆರ್ಕುತ್ತ ಆಳು ಹೇಳಿ ಬಜಕ್ಕನೆ ಕೂದತ್ತು.

ಹಲಸಿನ ಕಾಯಿ ಬೆಂದಿ ಹೇಳುವಗ ನೆಂಪಾತು. ಯಾವಗಂದಲೋ ಯೋಚನೆ ಮಾಡಿಯೊಂಡಿತ್ತಿದ್ದೆ ಆನು.ನಾವು ತೆಂಗಿನ ಮರವ ಅಲ್ಲ, ‘ಹಲಸಿನ ಮರ’ವ ಕಲ್ಪ ವೃಕ್ಷ ಹೇಳೆಕ್ಕಾದ್ದೋ ಏನೋ ಹೇಳ್ತ ವಿಚಾರ.
ಹಲಸಿನ ಮರಕ್ಕೆ ಇಂದು ಚಿನ್ನದ ಕ್ರಯ. ಕಡಿವಲೆ ಮನಸು ಬಾರ, ಅದು ಅಲಾಯದ.
ಸೊಪ್ಪಿನ ಕೊಟ್ಟೆ ಹೇಳಿರೆ ಕೊಂಕಣಿಗೊ ಜೀವ ಬಿಡುಗು, ಒಂದಕ್ಕೆ ಒಂದು ರುಪಾಯಿಯಡ ಈಗ ಪೇಟೆಲಿ.
ನಾವೇ ಮಾಡ್ಸಿದ ತೆಂಗಿನ ಎಣ್ಣೆಲಿ ಮಾಡಿದ ಕುಜುವೆ ತಾಳು ತಿಂದದು ಇನ್ನೂ ಮರದ್ದಿಲ್ಲೆ, ಈಗ ಅಂಗ್ಡಿಂದ ತಂದ ಎಣ್ಣೆ ಪರಿಮ್ಮಳ ಬಾರ.
ಸಪುರ ಆಯೆಕ್ಕು,ಅಶನ ಕಮ್ಮಿ ತಿನ್ನೆಕ್ಕು ಹೇಳ್ತ ಅಗತ್ಯ ಇಪ್ಪವಕ್ಕೆ ಇದರಿಂದ ಒಳ್ಳೆ ಕ್ರಮ ಇನ್ನೊಂದಿರ. ರುಚಿಗೂ ಕಮ್ಮಿ ಇಲ್ಲೆ,ಕ್ಯಾಲರಿಯೂ ಕಮ್ಮಿ.
ನಮ್ಮ ಹಾಂಗೆ ಸಸ್ಯಾಹಾರಿಗೊಕ್ಕೆ “ಎ” ವಿಟಮಿನ್ ಕುಜುವೆಲಿ ಸಿಕ್ಕಿದಷ್ಟು ಬೇರೆಲ್ಲಿಯೂ ಸಿಕ್ಕ.(ಹಸಿ ಎಣ್ಣೆ ಬೆರ್ಶಿ ತಿಂದ ನೆಂಪಿದ್ದೋ?)

ರಜಾ ಬೆಳದ್ದೋ?  ಬೇಳೆಚೆಕ್ಕೆ ತಾಳು ಆರಿಂಗೆ ಆಗದ್ದು? ಅದರಲ್ಲಿಪ್ಪ ಎಳತ್ತು ಬೇಳೆಗೂ ಬೀಜದ ಬೊಂಡಿಂಗೂ ರುಚಿಲಿ ಹೆಚ್ಚು ವ್ಯತ್ಯಾಸ ಇಲ್ಲೆಹಾಂಗೆ ಹೇಳಿ ಬೀಜದ ಬೊಂಡಿಲ್ಲಿಪ್ಪ ಕೊಬ್ಬಿನ ಸಮಸ್ಯೆಯೂ ಇಲ್ಲೆ.
ಅಮ್ಮ ಮಾಡ್ಯೊಂಡಿದ್ದ ಬೆಂದಿಯ ಉಂಡದು ಕೈಂದ ಪರಿಮ್ಮಳ ಇನ್ನೂ ಹೋದ ಹಾಂಗೇ ಕಾಣ್ತಿಲ್ಲೆ.
ಹಲಸಿನ ಕಾಯಿಯ ವಿಷಯ ಹೇಳುದೇ ಬೇಡ. ಸೊಳೆ ಹೊರ್ದು(ಡಾಕ್ಟ್ರಕ್ಕೊ ಆಗ ಹೇಳುಗು)ಹಪ್ಪಳ, ತಾಳು,ಬೆಂದಿ,ಮೇಲಾರ! ಎಂತ ಮಾಡ್ಳಕ್ಕು ಆಗ ಹೇಳುದು ನಮ್ಮ ಕಲ್ಪನೆಗೆ ಬಿಟ್ಟದು.

ದೋಸೆಯ ವಿಷಯ ಮಾತಾಡದ್ದಿಪ್ಪದೇ ಒಳ್ಳೆದು. ಕೈಲಿ ಕಾವಲಿಗೆಗೆ ಹಿಟ್ಟು ಮೆತ್ತಿ ದೋಸೆ ಮಾಡಿರೆ ಪೇಪರಿನಷ್ಟು ತೆಳ್ಳಂಗಕ್ಕು.
ರಜಾ ತೆಂಗಿನೆಣ್ಣೆ ಹಾಕಿ ಕಾಯಿ ಚಟ್ನಿಯೊಟ್ಟಿಂಗೆ ಒಂದು ಹತ್ತೋ ಹನ್ನೆರಡೋ ತಿಂಬಲಕ್ಕು.ಬೋಸ ಬಾವ ಹೇಳುಗು ಜೇನ ಆಯೆಕ್ಕು ಹೇಳಿ, ಅಲ್ಲದ್ದಲ್ಲ. ಮ್..

ಶಾಲೆಂದ ಬಂದು ಜಾಲ ಕರೆಲಿಪ್ಪ ತುಳುವನ ಮರ ಹತ್ತಿ ಅಣ್ಣ ಎಳದು ಹಾಕಿದ ತುಳುವನ ಹಣ್ಣು ತಿಂಬ ಗಮ್ಮತ್ತೇ ಬೇರೆ ಇತ್ತದಾ.
ನವಗೆ ಮರ ಹತ್ತಲೆ ಹೆದರಿಕೆ, ಹಾಂಗಾಗಿ ಅಣ್ಣ ಬೇಕಿತ್ತು. ಕೈಂದ ಮೇಣ ಹೋಗದ್ದೆ ಚಿಮಿಣಿ ಎಣ್ಣೆ ಹಾಕಿ ಕಾಯಿಸೊಪ್ಪಿಲ್ಲಿ ತಿಕ್ಕಿ ಕೈ ಉರ್ದದು ಇನ್ನೂ ಮರದ್ದಿಲ್ಲೆ. ತುಳುವನ ಹಣ್ಣಿನ ಇಡ್ಳಿಯೂ ಮರದಿನಕ್ಕೆ ಖಂಡಿತ.ಅದಕ್ಕದರೆ ಜೇನ ಬೇಕೇ ಬೇಕು.
ಬರಿಕ್ಕ ತಿಂಬದರಲ್ಲಿ ನಾವೇನೂ ಕಮ್ಮಿ ಇಲ್ಲೆ.ಅದರ ಕೊರವದು ಒಂದು ಕೆಲಸ ಅದಾ.

ಅಂದರೂ ಪಾಯಸವೋ, ಅಜ್ಜನ ತಿಥಿಗೆ ಸುಟ್ಟವೋ ಮಾಡದ್ದೆ ಬಿಡುಗೋ?
ಒಂದೇ ದಿನ ಹಣ್ಣು ಮುಗಿಯದ್ದಷ್ಟು ಸಿಕ್ಕಿರೆ ಬೆರಟಿ ಮಾಡುಗು,ರಜೆಲಿ ಆದರೆ ನಾವುದೇ ಬೆರಟಿ ಕಾಸಿದ್ದಿಕ್ಕು. ಗಟ್ಟಿ ಮಾಡಿ ಕಾಸಿರೆ ಮಳೆ ಕಾಲಲ್ಲಿ ಪಾಯಸಕ್ಕೆ ರುಚಿಯೇ ಬೇರೆ. ಆರು ತಿಂಗಳಾದರೂ ಬೆರಟಿ ಹಾಳಾಗ.

ದೊಡ್ಡ ಪರೀಕ್ಷೆ ಕಳುದು ರಜೆ ಸಿಕ್ಕಿರೆ ಹಪ್ಪಳ ಮಾಡುವ ಗೌಜಿಲಿ ನಾವುದೇ ಸಿಕ್ಕಿ ಬೀಳುಗು.
ನೀರ್ಸೊಳೆ ಹಾಕಲೆ ಸುರು ಮಾಡಿರೆ ಜಾಲಿಡೀ ಮೇಣ. ನವಗೆ ಗುಡ್ಡೆ ಗುಡ್ಡೆ ತಿರುಗುಲೂ ಗೊಂತಿಲ್ಲೆ.
ಮೆಟ್ಟುಕತ್ತಿ ಮಡಗಿ ಹಲಸಿನ ಕಾಯಿ ಕೊರದು ಕೊಡ್ಳೆ ನಾವು ತಯಾರೇ.(ಹೊತ್ತೊಪ್ಪಗ ರಜ ಸೊಳೆ ಹೊರಿಯದ್ದರೆ ಸಮಧಾನ ಆಗ.ಈಗ ಕೊಲೆಸ್ಟ್ರೋಲ್ ಹೇಳಿ ನಾವು ತಿಂತಿಲ್ಲೆ.ಮಾಡುದೂ ಕಷ್ಟವೇ.ಕೊಡೆಯಾಲಲ್ಲಿ ಪೇಕೇಟಿಲ್ಲಿ ಸಿಕ್ಕುಗು,ಆದರೆ ಮನೆಲಿ ಮಾಡಿದ ಪರಿಮ್ಮಳ ಇಲ್ಲೆ ಅದಕ್ಕೆ.ಕೊರ್ಸಾಂಡಿ ಎಣ್ಣೆಲಿಯೂ ಮಾಡುಗು ಈ ವ್ಯಾಪಾರದವು.)
ಪುನರ್ಪುಳಿ ಸೊಪ್ಪು ಹಾಕಿ ಮಡಗಿರೆ ಆರು ತಿಂಗಳಾದರೂ ಸೊಳೆ ಹಾಳಾಗ ಹೆಳಿ ನಮ್ಮ ಕಳುಸುಗು ತಪ್ಪಲೆ.
ಅಲ್ಲೇ ಹತ್ತರಿಪ್ಪ ಮಾವಿನ ಮರದ ಅರೆ ಹಣ್ಣು ಸಿಕ್ಕುಗು ಹೇಳ್ತ ಆಶೆಲಿ ಹೋಪ ಗಮ್ಮತ್ತೇ ಬೇರೆ ಅದ. ಈಗಾಣ ಮಕ್ಕೊಗೆ ಈ ಅನುಭವಂಗೊ ಇಲ್ಲೆನ್ನೇ ಹೇಳಿ ಸಂಕಟ ಆವುತ್ತು ನವಗೆ ಕೆಲವು ಸರ್ತಿ.
ಮಳೆಕಾಲಕ್ಕೆ ಸೊಳೆ ಬೆಂದಿಯೋ,ತಾಳೋ ಮಾಡೆಕ್ಕಲ್ಲದೋ?ಈಗಾಣ ಹಾಂಗೆ ಪೇಟೆಂದ ನೆಟ್ಟಿಕಾಯಿ ತಪ್ಪಲಿಲ್ಲೆ. ಸಿಕ್ಕಲೂ ಸಿಕ್ಕ ಅಂಬಗಾಣ ಕಾಲಲ್ಲಿ.
ಹೊತ್ತೊಪ್ಪಗ ಶಾಲೆಂದ ಬಪ್ಪಗ ಎಣ್ಣೆಯ ಪರಿಮ್ಮಳ ಬಂದರೆ ಉಂಡ್ಳಕಾಳು ಆವುತ್ತಾ ಇದ್ದು ಹೇಳಿ ಲೆಕ್ಕ.
ಸಣ್ಣಕೆ ತುಂಡು ಮಾಡಿ ಒಣಗಿದ ಕೊಪ್ಪರ ಹಾಕಿ ಹೊರಿವಗ ಮೈಲು ದೂರಕ್ಕೆ ಗೊಂತಕ್ಕು ಹೊರಿವ ವಿಷಯ. ಇಂದು ಮಾಡ್ಳೆ ಗೊಂತಿದ್ದರೂ ಸೊಳೆ ಎಲ್ಲಿದ್ದು?

ಎಂಗಳ ದೆಯ್ಯರ ಅಂಗ್ಡಿಲಿ ಸಿಕ್ಲೂ ಸಾಕು. ಕೇಳಿದ್ದಿಲ್ಲೆ. ಮಣ್ಣು ಮೆತ್ತಿ ಮಡಗಿದ ಬೇಳೆಗೂ ಅಂಬಗ ಗಿರಾಕಿ ಇಕ್ಕು. ಸಣ್ಣ ಸಣ್ಣ ಅಳಗೆ ತೆಕ್ಕೊಂಬಲೆ ಪೈಸ ಅಲ್ಲ, ಬೇಳೆ ಕೊಡುಗು ಎನ್ನಮ್ಮ.
ಮಳೆಕಾಲದ ರಜೆಲಿ ಸಾಂತಾಣಿ ತಿಂಬ ಮಜ ನಿಂಗೊಗೆ ಗೊಂತಿದ್ದೋ, ಈಗ ಮಳೆಕಾಲಲ್ಲಿ ರಜೆಯೂ ಇಲ್ಲೆ ಸಾಂತಾಣಿಯೂ ಇಲ್ಲೆ.

ಅರುವತ್ತರ ದಶಕಲ್ಲಿ ಅಹಾರ ಧಾನ್ಯಂಗಳ ಅಭಾವ ಇದ್ದ ಕಾಲ. ಕೆಲಸದವು ಹಲಸಿನ ಕಾಯಿಯ ಕಾಲಲ್ಲಿ ಮನಗೆ ಬಂದು ತೆಕ್ಕೊಂಡು ಹೋಕು.
ಸೊಳೆ ಹಾಕಿ ಮಡಗ್ಗು. ಸೊಳೆಯೂ ತೆಕ್ಕೊಂಡು ಹೋಕು. ಎಷ್ಟೋ ಜೆನ ಕೂಲಿ ಕೆಲಸದವು ಒಂದು ಹೂತ್ತು ಸೊಳೆ ಬೇಶಿ ತಿಂದೊಂಡಿದ್ದದು ನವಗೆ ನೆಂಪಿದ್ದದ.
ಅಂಬಗ ಅನಿವಾರ್ಯವಾಗಿ ತಿಂದ ನೆಂಪು ಅವಕ್ಕೆ ಇನ್ನೂ ಹೋಯಿದಿಲ್ಲೆ. ಹಾಂಗಾಗಿ ನಾವು ಹಲಸಿನ ಬೆಂದಿ ಮಾಡಿರೆ ಅದು ತಾಪು ಹೇಳಿ ಅವಕ್ಕೆ ಕಂಡ್ರೆ ಆಶ್ಚರ್ಯ ಇಲ್ಲೆ ಹೇಳಿ ಶಾರದೆಗೆ ಹೇಳೆಕ್ಕಾರೆ ಇಷ್ಟೆಲ್ಲ ರಾಮಾಯಣ ಆತು.

ಎಂತದೇ ಇರಳಿ.
ಹಲಸಿನ ಕಾಯಿಯ ನಾವು ಒಳ್ಳೆದಲ್ಲ ಹೇಳಿ ಹಾಳು ಮಾಡುದು ಸರ್ವಥಾ ತಪ್ಪು.
ಆರೋಗ್ಯಕ್ಕೆ ಹಾಳು ಹೇಳ್ತ ಸಂಗತಿ ಅದರ್ಲಿ ಇಪ್ಪಲೇ ಇಲ್ಲೆ.

ಅಹಾ ಹಲಸು, 5.0 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಸುಭಗ
  ಸುಭಗ

  ಆಹಾ! ಹಲಸಿನ ಹುಲುಸಾದ ವಿವರಂಗೊ ಇಪ್ಪ ಲೇಖನ!

  ಹಲಸಿನ ಬಗ್ಗೆ ಎಲ್ಲರು crazy ಅಪ್ಪಾಂಗೆ ಬರದ್ದವು ಕೇಜಿ ಮಾವ.

  ಬೇರೆ ಯಾವುದೇ ತರಕಾರಿ/ಹಣ್ಣಿಲ್ಲಿ ಹಲಸಿನಕಾಯಿಲಿ ಸಿಕ್ಕುವಷ್ಟು ‘ಭಾಗಂಗೊ’ ಸಿಕ್ಕ ಹೇಳ್ತದೂ ಒಂದು ವಿಶೇಷ. ರಚ್ಚೆ, ಗೂಂಜು, ಸೊಳೆ, ಸಾರೆ, ಮುಗು, ಅಂತ್ರ (ಅಂತರ), ಬೇಳೆ, ಹೊದಿಗೆಂಡೆ, ಕಾಸೆ… ಅಬ್ಬಬ್ಬ ಎಷ್ಟು ಭಾಗ ಆತು! ಅಲ್ಲದೊ? 😉

  [Reply]

  VN:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  Gopalakrishna BHAT S.K.

  ಹಲಸಿನ ಕಾಯಿ ತುಂಬಾ ಉಪಕಾರಿ.ಎಷ್ಟೊ ಬಡವರಿಂಗೆ ಹೊಟ್ಟೆ ತುಂಬಿಸಲೆ ಇದರಿಂದ ಸಾಧ್ಯ ಆಯಿದು-ಮೊದಲಾಣ ಕಾಲಲ್ಲಿ.
  ಈಗ ಇದರ ಮಾರುಕಟ್ಟೆಯ ಪ್ರಯತ್ನ ಸಾಲ.ಇನ್ನೂ ಬೇರೆ ಊರುಗೊಕ್ಕೆ ಇದರ ಉತ್ಪನ್ನಂಗೊ ಹೋಯೆಕ್ಕು,ವಿದೇಶಕ್ಕೂ ಕೂಡ ಹೋದರೆ ಇದಕ್ಕೆ ಒಳ್ಲೆ ಭವಿಷ್ಯ ಇದ್ದು.
  ಎಲ್ಲರಿಂಗೂ ಇದರ ಪರಿಚಯಿಸುವ ಪ್ರಯತ್ನ ಆಯೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. shivakumar

  ಕ್ಜ್ಲ್

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಪಟಿಕಲ್ಲಪ್ಪಚ್ಚಿಅಕ್ಷರ°ನೆಗೆಗಾರ°ಅಕ್ಷರದಣ್ಣಶ್ಯಾಮಣ್ಣಒಪ್ಪಕ್ಕದೇವಸ್ಯ ಮಾಣಿಶುದ್ದಿಕ್ಕಾರ°ವಿದ್ವಾನಣ್ಣವೇಣಿಯಕ್ಕ°ಮಾಷ್ಟ್ರುಮಾವ°ಶ್ರೀಅಕ್ಕ°ಕಜೆವಸಂತ°ಸುಭಗಸಂಪಾದಕ°ಸುವರ್ಣಿನೀ ಕೊಣಲೆಚೂರಿಬೈಲು ದೀಪಕ್ಕದೊಡ್ಡಭಾವಅಜ್ಜಕಾನ ಭಾವವಸಂತರಾಜ್ ಹಳೆಮನೆಶರ್ಮಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಮುಳಿಯ ಭಾವಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ