Oppanna.com

ಅಹಾ ಹಲಸು

ಬರದೋರು :   ಕೇಜಿಮಾವ°    on   20/03/2011    18 ಒಪ್ಪಂಗೊ

ಕೆಲಸದವಕ್ಕೆ ಅಡಿಗೆ ಮಾಡಿ ಹಾಕಿ ಬೊಡುದೇ ಹೋತಪ್ಪಾ ಹೇಳಿಯೊಂಡೇ ಬಂತು ಶಾರದೆ.
ಬಚ್ಚಿತ್ತಪ್ಪ,ಅಕ್ಕಿ ಕಡದ್ದೇ ಆಯೆಕ್ಕು,ಒಂದು ದಿನ ಅವಲಕ್ಕಿಯೋ ಉಂಡೆಯೋ ಮಾಡಿರೆ ತಿಂತವೂ ಇಲ್ಲೆ,ಮರದಿನ ಕೆಲಸಕ್ಕೆ ಜನವೂ ಇಲ್ಲೆ.
ಮನೆಯವಕ್ಕಾದರೆ ಅವಲಕ್ಕಿಸಜ್ಜಿಗೆಯೋ ಅಲ್ಲ ಹೆಜ್ಜೆ ಚಟ್ನಿ ಮಾಡಿರೂ ಮಾತಾಡವು. ನಿನ್ನೆ ಹಲಸಿನಕಾಯಿ ಬೆಂದಿ ಮಾಡಿತ್ತಿದ್ದೆ “ಉಂದೆಂಚಿನ ಅಕ್ಕೆ,ಪೆಲಕ್ಕಾಯಿ ಪಿತ್ತ ಅತ್ತೋ, ಎಂಕ್ ಆಪುಜ್ಜಿ” ಹೇಳಿಯೇ ಬಿಟ್ಟತ್ತು ಎಂಗಳ ಅಡಕ್ಕೆ ಹೆರ್ಕುತ್ತ ಆಳು ಹೇಳಿ ಬಜಕ್ಕನೆ ಕೂದತ್ತು.

ಹಲಸಿನ ಕಾಯಿ ಬೆಂದಿ ಹೇಳುವಗ ನೆಂಪಾತು. ಯಾವಗಂದಲೋ ಯೋಚನೆ ಮಾಡಿಯೊಂಡಿತ್ತಿದ್ದೆ ಆನು.ನಾವು ತೆಂಗಿನ ಮರವ ಅಲ್ಲ, ‘ಹಲಸಿನ ಮರ’ವ ಕಲ್ಪ ವೃಕ್ಷ ಹೇಳೆಕ್ಕಾದ್ದೋ ಏನೋ ಹೇಳ್ತ ವಿಚಾರ.
ಹಲಸಿನ ಮರಕ್ಕೆ ಇಂದು ಚಿನ್ನದ ಕ್ರಯ. ಕಡಿವಲೆ ಮನಸು ಬಾರ, ಅದು ಅಲಾಯದ.
ಸೊಪ್ಪಿನ ಕೊಟ್ಟೆ ಹೇಳಿರೆ ಕೊಂಕಣಿಗೊ ಜೀವ ಬಿಡುಗು, ಒಂದಕ್ಕೆ ಒಂದು ರುಪಾಯಿಯಡ ಈಗ ಪೇಟೆಲಿ.
ನಾವೇ ಮಾಡ್ಸಿದ ತೆಂಗಿನ ಎಣ್ಣೆಲಿ ಮಾಡಿದ ಕುಜುವೆ ತಾಳು ತಿಂದದು ಇನ್ನೂ ಮರದ್ದಿಲ್ಲೆ, ಈಗ ಅಂಗ್ಡಿಂದ ತಂದ ಎಣ್ಣೆ ಪರಿಮ್ಮಳ ಬಾರ.
ಸಪುರ ಆಯೆಕ್ಕು,ಅಶನ ಕಮ್ಮಿ ತಿನ್ನೆಕ್ಕು ಹೇಳ್ತ ಅಗತ್ಯ ಇಪ್ಪವಕ್ಕೆ ಇದರಿಂದ ಒಳ್ಳೆ ಕ್ರಮ ಇನ್ನೊಂದಿರ. ರುಚಿಗೂ ಕಮ್ಮಿ ಇಲ್ಲೆ,ಕ್ಯಾಲರಿಯೂ ಕಮ್ಮಿ.
ನಮ್ಮ ಹಾಂಗೆ ಸಸ್ಯಾಹಾರಿಗೊಕ್ಕೆ “ಎ” ವಿಟಮಿನ್ ಕುಜುವೆಲಿ ಸಿಕ್ಕಿದಷ್ಟು ಬೇರೆಲ್ಲಿಯೂ ಸಿಕ್ಕ.(ಹಸಿ ಎಣ್ಣೆ ಬೆರ್ಶಿ ತಿಂದ ನೆಂಪಿದ್ದೋ?)

ರಜಾ ಬೆಳದ್ದೋ?  ಬೇಳೆಚೆಕ್ಕೆ ತಾಳು ಆರಿಂಗೆ ಆಗದ್ದು? ಅದರಲ್ಲಿಪ್ಪ ಎಳತ್ತು ಬೇಳೆಗೂ ಬೀಜದ ಬೊಂಡಿಂಗೂ ರುಚಿಲಿ ಹೆಚ್ಚು ವ್ಯತ್ಯಾಸ ಇಲ್ಲೆಹಾಂಗೆ ಹೇಳಿ ಬೀಜದ ಬೊಂಡಿಲ್ಲಿಪ್ಪ ಕೊಬ್ಬಿನ ಸಮಸ್ಯೆಯೂ ಇಲ್ಲೆ.
ಅಮ್ಮ ಮಾಡ್ಯೊಂಡಿದ್ದ ಬೆಂದಿಯ ಉಂಡದು ಕೈಂದ ಪರಿಮ್ಮಳ ಇನ್ನೂ ಹೋದ ಹಾಂಗೇ ಕಾಣ್ತಿಲ್ಲೆ.
ಹಲಸಿನ ಕಾಯಿಯ ವಿಷಯ ಹೇಳುದೇ ಬೇಡ. ಸೊಳೆ ಹೊರ್ದು(ಡಾಕ್ಟ್ರಕ್ಕೊ ಆಗ ಹೇಳುಗು)ಹಪ್ಪಳ, ತಾಳು,ಬೆಂದಿ,ಮೇಲಾರ! ಎಂತ ಮಾಡ್ಳಕ್ಕು ಆಗ ಹೇಳುದು ನಮ್ಮ ಕಲ್ಪನೆಗೆ ಬಿಟ್ಟದು.

ದೋಸೆಯ ವಿಷಯ ಮಾತಾಡದ್ದಿಪ್ಪದೇ ಒಳ್ಳೆದು. ಕೈಲಿ ಕಾವಲಿಗೆಗೆ ಹಿಟ್ಟು ಮೆತ್ತಿ ದೋಸೆ ಮಾಡಿರೆ ಪೇಪರಿನಷ್ಟು ತೆಳ್ಳಂಗಕ್ಕು.
ರಜಾ ತೆಂಗಿನೆಣ್ಣೆ ಹಾಕಿ ಕಾಯಿ ಚಟ್ನಿಯೊಟ್ಟಿಂಗೆ ಒಂದು ಹತ್ತೋ ಹನ್ನೆರಡೋ ತಿಂಬಲಕ್ಕು.ಬೋಸ ಬಾವ ಹೇಳುಗು ಜೇನ ಆಯೆಕ್ಕು ಹೇಳಿ, ಅಲ್ಲದ್ದಲ್ಲ. ಮ್..

ಶಾಲೆಂದ ಬಂದು ಜಾಲ ಕರೆಲಿಪ್ಪ ತುಳುವನ ಮರ ಹತ್ತಿ ಅಣ್ಣ ಎಳದು ಹಾಕಿದ ತುಳುವನ ಹಣ್ಣು ತಿಂಬ ಗಮ್ಮತ್ತೇ ಬೇರೆ ಇತ್ತದಾ.
ನವಗೆ ಮರ ಹತ್ತಲೆ ಹೆದರಿಕೆ, ಹಾಂಗಾಗಿ ಅಣ್ಣ ಬೇಕಿತ್ತು. ಕೈಂದ ಮೇಣ ಹೋಗದ್ದೆ ಚಿಮಿಣಿ ಎಣ್ಣೆ ಹಾಕಿ ಕಾಯಿಸೊಪ್ಪಿಲ್ಲಿ ತಿಕ್ಕಿ ಕೈ ಉರ್ದದು ಇನ್ನೂ ಮರದ್ದಿಲ್ಲೆ. ತುಳುವನ ಹಣ್ಣಿನ ಇಡ್ಳಿಯೂ ಮರದಿನಕ್ಕೆ ಖಂಡಿತ.ಅದಕ್ಕದರೆ ಜೇನ ಬೇಕೇ ಬೇಕು.
ಬರಿಕ್ಕ ತಿಂಬದರಲ್ಲಿ ನಾವೇನೂ ಕಮ್ಮಿ ಇಲ್ಲೆ.ಅದರ ಕೊರವದು ಒಂದು ಕೆಲಸ ಅದಾ.

ಅಂದರೂ ಪಾಯಸವೋ, ಅಜ್ಜನ ತಿಥಿಗೆ ಸುಟ್ಟವೋ ಮಾಡದ್ದೆ ಬಿಡುಗೋ?
ಒಂದೇ ದಿನ ಹಣ್ಣು ಮುಗಿಯದ್ದಷ್ಟು ಸಿಕ್ಕಿರೆ ಬೆರಟಿ ಮಾಡುಗು,ರಜೆಲಿ ಆದರೆ ನಾವುದೇ ಬೆರಟಿ ಕಾಸಿದ್ದಿಕ್ಕು. ಗಟ್ಟಿ ಮಾಡಿ ಕಾಸಿರೆ ಮಳೆ ಕಾಲಲ್ಲಿ ಪಾಯಸಕ್ಕೆ ರುಚಿಯೇ ಬೇರೆ. ಆರು ತಿಂಗಳಾದರೂ ಬೆರಟಿ ಹಾಳಾಗ.

ದೊಡ್ಡ ಪರೀಕ್ಷೆ ಕಳುದು ರಜೆ ಸಿಕ್ಕಿರೆ ಹಪ್ಪಳ ಮಾಡುವ ಗೌಜಿಲಿ ನಾವುದೇ ಸಿಕ್ಕಿ ಬೀಳುಗು.
ನೀರ್ಸೊಳೆ ಹಾಕಲೆ ಸುರು ಮಾಡಿರೆ ಜಾಲಿಡೀ ಮೇಣ. ನವಗೆ ಗುಡ್ಡೆ ಗುಡ್ಡೆ ತಿರುಗುಲೂ ಗೊಂತಿಲ್ಲೆ.
ಮೆಟ್ಟುಕತ್ತಿ ಮಡಗಿ ಹಲಸಿನ ಕಾಯಿ ಕೊರದು ಕೊಡ್ಳೆ ನಾವು ತಯಾರೇ.(ಹೊತ್ತೊಪ್ಪಗ ರಜ ಸೊಳೆ ಹೊರಿಯದ್ದರೆ ಸಮಧಾನ ಆಗ.ಈಗ ಕೊಲೆಸ್ಟ್ರೋಲ್ ಹೇಳಿ ನಾವು ತಿಂತಿಲ್ಲೆ.ಮಾಡುದೂ ಕಷ್ಟವೇ.ಕೊಡೆಯಾಲಲ್ಲಿ ಪೇಕೇಟಿಲ್ಲಿ ಸಿಕ್ಕುಗು,ಆದರೆ ಮನೆಲಿ ಮಾಡಿದ ಪರಿಮ್ಮಳ ಇಲ್ಲೆ ಅದಕ್ಕೆ.ಕೊರ್ಸಾಂಡಿ ಎಣ್ಣೆಲಿಯೂ ಮಾಡುಗು ಈ ವ್ಯಾಪಾರದವು.)
ಪುನರ್ಪುಳಿ ಸೊಪ್ಪು ಹಾಕಿ ಮಡಗಿರೆ ಆರು ತಿಂಗಳಾದರೂ ಸೊಳೆ ಹಾಳಾಗ ಹೆಳಿ ನಮ್ಮ ಕಳುಸುಗು ತಪ್ಪಲೆ.
ಅಲ್ಲೇ ಹತ್ತರಿಪ್ಪ ಮಾವಿನ ಮರದ ಅರೆ ಹಣ್ಣು ಸಿಕ್ಕುಗು ಹೇಳ್ತ ಆಶೆಲಿ ಹೋಪ ಗಮ್ಮತ್ತೇ ಬೇರೆ ಅದ. ಈಗಾಣ ಮಕ್ಕೊಗೆ ಈ ಅನುಭವಂಗೊ ಇಲ್ಲೆನ್ನೇ ಹೇಳಿ ಸಂಕಟ ಆವುತ್ತು ನವಗೆ ಕೆಲವು ಸರ್ತಿ.
ಮಳೆಕಾಲಕ್ಕೆ ಸೊಳೆ ಬೆಂದಿಯೋ,ತಾಳೋ ಮಾಡೆಕ್ಕಲ್ಲದೋ?ಈಗಾಣ ಹಾಂಗೆ ಪೇಟೆಂದ ನೆಟ್ಟಿಕಾಯಿ ತಪ್ಪಲಿಲ್ಲೆ. ಸಿಕ್ಕಲೂ ಸಿಕ್ಕ ಅಂಬಗಾಣ ಕಾಲಲ್ಲಿ.
ಹೊತ್ತೊಪ್ಪಗ ಶಾಲೆಂದ ಬಪ್ಪಗ ಎಣ್ಣೆಯ ಪರಿಮ್ಮಳ ಬಂದರೆ ಉಂಡ್ಳಕಾಳು ಆವುತ್ತಾ ಇದ್ದು ಹೇಳಿ ಲೆಕ್ಕ.
ಸಣ್ಣಕೆ ತುಂಡು ಮಾಡಿ ಒಣಗಿದ ಕೊಪ್ಪರ ಹಾಕಿ ಹೊರಿವಗ ಮೈಲು ದೂರಕ್ಕೆ ಗೊಂತಕ್ಕು ಹೊರಿವ ವಿಷಯ. ಇಂದು ಮಾಡ್ಳೆ ಗೊಂತಿದ್ದರೂ ಸೊಳೆ ಎಲ್ಲಿದ್ದು?

ಎಂಗಳ ದೆಯ್ಯರ ಅಂಗ್ಡಿಲಿ ಸಿಕ್ಲೂ ಸಾಕು. ಕೇಳಿದ್ದಿಲ್ಲೆ. ಮಣ್ಣು ಮೆತ್ತಿ ಮಡಗಿದ ಬೇಳೆಗೂ ಅಂಬಗ ಗಿರಾಕಿ ಇಕ್ಕು. ಸಣ್ಣ ಸಣ್ಣ ಅಳಗೆ ತೆಕ್ಕೊಂಬಲೆ ಪೈಸ ಅಲ್ಲ, ಬೇಳೆ ಕೊಡುಗು ಎನ್ನಮ್ಮ.
ಮಳೆಕಾಲದ ರಜೆಲಿ ಸಾಂತಾಣಿ ತಿಂಬ ಮಜ ನಿಂಗೊಗೆ ಗೊಂತಿದ್ದೋ, ಈಗ ಮಳೆಕಾಲಲ್ಲಿ ರಜೆಯೂ ಇಲ್ಲೆ ಸಾಂತಾಣಿಯೂ ಇಲ್ಲೆ.

ಅರುವತ್ತರ ದಶಕಲ್ಲಿ ಅಹಾರ ಧಾನ್ಯಂಗಳ ಅಭಾವ ಇದ್ದ ಕಾಲ. ಕೆಲಸದವು ಹಲಸಿನ ಕಾಯಿಯ ಕಾಲಲ್ಲಿ ಮನಗೆ ಬಂದು ತೆಕ್ಕೊಂಡು ಹೋಕು.
ಸೊಳೆ ಹಾಕಿ ಮಡಗ್ಗು. ಸೊಳೆಯೂ ತೆಕ್ಕೊಂಡು ಹೋಕು. ಎಷ್ಟೋ ಜೆನ ಕೂಲಿ ಕೆಲಸದವು ಒಂದು ಹೂತ್ತು ಸೊಳೆ ಬೇಶಿ ತಿಂದೊಂಡಿದ್ದದು ನವಗೆ ನೆಂಪಿದ್ದದ.
ಅಂಬಗ ಅನಿವಾರ್ಯವಾಗಿ ತಿಂದ ನೆಂಪು ಅವಕ್ಕೆ ಇನ್ನೂ ಹೋಯಿದಿಲ್ಲೆ. ಹಾಂಗಾಗಿ ನಾವು ಹಲಸಿನ ಬೆಂದಿ ಮಾಡಿರೆ ಅದು ತಾಪು ಹೇಳಿ ಅವಕ್ಕೆ ಕಂಡ್ರೆ ಆಶ್ಚರ್ಯ ಇಲ್ಲೆ ಹೇಳಿ ಶಾರದೆಗೆ ಹೇಳೆಕ್ಕಾರೆ ಇಷ್ಟೆಲ್ಲ ರಾಮಾಯಣ ಆತು.

ಎಂತದೇ ಇರಳಿ.
ಹಲಸಿನ ಕಾಯಿಯ ನಾವು ಒಳ್ಳೆದಲ್ಲ ಹೇಳಿ ಹಾಳು ಮಾಡುದು ಸರ್ವಥಾ ತಪ್ಪು.
ಆರೋಗ್ಯಕ್ಕೆ ಹಾಳು ಹೇಳ್ತ ಸಂಗತಿ ಅದರ್ಲಿ ಇಪ್ಪಲೇ ಇಲ್ಲೆ.

ಕೇಜಿಮಾವ°
Latest posts by ಕೇಜಿಮಾವ° (see all)

18 thoughts on “ಅಹಾ ಹಲಸು

  1. ಹಲಸಿನ ಕಾಯಿ ತುಂಬಾ ಉಪಕಾರಿ.ಎಷ್ಟೊ ಬಡವರಿಂಗೆ ಹೊಟ್ಟೆ ತುಂಬಿಸಲೆ ಇದರಿಂದ ಸಾಧ್ಯ ಆಯಿದು-ಮೊದಲಾಣ ಕಾಲಲ್ಲಿ.
    ಈಗ ಇದರ ಮಾರುಕಟ್ಟೆಯ ಪ್ರಯತ್ನ ಸಾಲ.ಇನ್ನೂ ಬೇರೆ ಊರುಗೊಕ್ಕೆ ಇದರ ಉತ್ಪನ್ನಂಗೊ ಹೋಯೆಕ್ಕು,ವಿದೇಶಕ್ಕೂ ಕೂಡ ಹೋದರೆ ಇದಕ್ಕೆ ಒಳ್ಲೆ ಭವಿಷ್ಯ ಇದ್ದು.
    ಎಲ್ಲರಿಂಗೂ ಇದರ ಪರಿಚಯಿಸುವ ಪ್ರಯತ್ನ ಆಯೆಕ್ಕು.

  2. ಆಹಾ! ಹಲಸಿನ ಹುಲುಸಾದ ವಿವರಂಗೊ ಇಪ್ಪ ಲೇಖನ!

    ಹಲಸಿನ ಬಗ್ಗೆ ಎಲ್ಲರು crazy ಅಪ್ಪಾಂಗೆ ಬರದ್ದವು ಕೇಜಿ ಮಾವ.

    ಬೇರೆ ಯಾವುದೇ ತರಕಾರಿ/ಹಣ್ಣಿಲ್ಲಿ ಹಲಸಿನಕಾಯಿಲಿ ಸಿಕ್ಕುವಷ್ಟು ‘ಭಾಗಂಗೊ’ ಸಿಕ್ಕ ಹೇಳ್ತದೂ ಒಂದು ವಿಶೇಷ. ರಚ್ಚೆ, ಗೂಂಜು, ಸೊಳೆ, ಸಾರೆ, ಮುಗು, ಅಂತ್ರ (ಅಂತರ), ಬೇಳೆ, ಹೊದಿಗೆಂಡೆ, ಕಾಸೆ… ಅಬ್ಬಬ್ಬ ಎಷ್ಟು ಭಾಗ ಆತು! ಅಲ್ಲದೊ? 😉

  3. ಕೇಜಿ ಮಾವನ ಲೇಖನ ಓದಿ ಕೊದಿ ಆತು.ಎನಗೆ ಹಲಸು ತು೦ಬಾ ಇಷ್ಟ.(ಸತ್ಯ ಹೇಳ್ತರೆ ತಿ೦ಬದು ಹೇಳಿರೆ ಇಷ್ಟ.) ಈ ಮಾವ ಹಲಸಿನ ಎಲ್ಲಾ ತಿ೦ಡಿಗಳ ಒಟ್ಟಿ೦ಗೆ ನೆನಪ್ಪುಸಿ ಎನ್ನ ಊರಿ೦ಗೆ ಒ೦ದು ಓಟ ಓಡುಸುತ್ತವೋ ಎ೦ತ ಕತೆಯೋ?ಕಾಯ್ತಾ ಇದ್ದೆ ಮಕ್ಕಳ ಪರೀಕ್ಷೆ ಮುಗಿವಲೆ !!

  4. ಬಾಯಿಲಿ ನೀರು ಬಂತು…!
    ಒಂದು ಎರದು ಕೇಜಿ ಸೊಳೆ ಕಳುಸುಲೆ ಎಡಿಗೊ..ಕುಜುವೆ ಸಿಕ್ಕುತ್ತು ಬೆಂಗ್ಲುರಿಲಿ…ಆದರೆ ಕೊರವಗ ಮೇಣ ಹಿಡಿತ್ತು..ಹಾಂಗಾಗಿ..
    ಒಂದು ವಾರ ಬೆಂದಿಗೆ ಬೇರೆಂತ ಬೇಕಾಗಿ ಬಾರ.

  5. ಎಳತ್ತು ಕುಜುವೆಗೆ ಪಿತ್ತ ಇಲ್ಲೆ. ಹಲಸಿನಕಾಯಿಯ ಉಪಯೋಗ್ಸಿ ಸುಮಾರು ವ್ಯಂಜನಂಗಳ ಮಾಡ್ಲಾವುತ್ತು. ಮುಂದಾಣ ದಿನಂಗಳಲ್ಲಿ ಹಲಸನ್ನೇ ಕಲ್ಪವೃಕ್ಷ ಹೇಳ್ತ ಸಾಧ್ಯತೆ ಕಾಣ್ಸುತ್ತು.

  6. ಹಲಸಿನ ವೈವಿಧ್ಯವ ಎಲ್ಲರಿಂಗೂ ನೆಂಪು ಮಾಡಿ ಕೊಟ್ಟದು ಲಾಯಿಕ ಆತು. ಬಾಲ್ಯ ಕಾಲಕ್ಕೆ ಹೋದ ಹಾಂಗೆ ಆತು.
    ಇನ್ನು ಹೇಂಗಿದ್ದರೂ ಹಲಸಿನ ಸಮಯ.
    ಪೇಟೆಲಿ ಸೊಳೆ ಲೆಕ್ಕಲ್ಲಿ ಪೈಸ ಕೊಟ್ಟು ತಪ್ಪವಕ್ಕೆ ಇದೆಲ್ಲಾ ಮಾಡ್ಲೆ ಪೂರೈಸ. ಹಳ್ಲಿಲಿ ಹಲಸು ಹೆಳಿರೆ ರೆಜಾ ಸಸಾರವೇ.

  7. ಹಾ೦ಗೆ ನೀರ್ಸೊಳೆಯ ಬೋಳುಬೆ೦ದಿ(ಬೋಳು ಕೊದಿಲು) ಭಾರೀ ಲಾಯಿಕ್ಕ ಆವುತ್ತು(ಬೆಳ್ಲುಳ್ಲಿ ಒಗ್ಗರಣೆ ಹಾಕಿ). ಮತ್ತೆ ಅದರ ತಾಳು ದೆ ಲಾಯಿಕ್ಕಾವುತ್ತು, ಉದ್ದ್ದಕ್ಕೆ ಕೊರದು ಃ).ಮತ್ತೆ ಗುಜ್ಜೆಯ ಮುಳ್ಲು ಮಾತ್ರ ಇಡ್ಕುದು ಎನ್ನ ಅಮ್ಮ. ಬೇರೆ೦ತ ವೇಸ್ಟ್ ಇಲ್ಲೆ ಅದರಲ್ಲಿ .

  8. ಪಸುಟ್ಟಾಯಿದು ಮಾವ ಬರದ್ದು.. ಆನು ಶ್ರೀಅಕ್ಕನತ್ರೆ ಹೇಳಿ ಕೊಟ್ಟಿಗೆ ಮಾಡಿಮಡುಗಲೆ ಹೇಳ್ತೆ..
    ಲಾಯ ಕಾಯಿ-ಬೆಲ್ಲ ಹಾಕಿ.. 😉 ಎ೦ತ ಹೇಳ್ತೆ ಪೆ೦ಗಣ್ಣೊ,ನೆಗೆಗಾರ ಮತ್ತೆ ಅರ್ಜೆ೦ಟು ಮಾಣಿ ? ಆಗದೋ? 😉
    ನಾವು ಪುನ ಹೋಪಲ್ಲಕ್ಕಿದ ಅಕ್ಕ ನಲ್ಲಿಗೆ ಸಮಾ ತಿ೦ಬಲೆ… ಏ??

    1. ಕೊಟ್ಟಿಗೆ ಒಂದು ಬರವಲೆ ಬಿಟ್ಟತ್ತು.ಗೆಣಸಲೆಯೂ ಮಾಡುಗಲ್ಲದೋ ಹಲಸಿನ ಹಣ್ಣಿನ ಕೊಟ್ಟಿಗೆಯೊಟ್ಟಿಂಗೆಃ)

  9. ಇಲ್ಲಿ ಹಲಸಿನಕಾಯಿಗೆ ನೂರೈವತ್ತು ರೂಪಾಯಿ ! ಆದರೂ ಕೊದಿ ಬಿಡ ! ತಂದರೆ, ಅರ್ಧಂದ ಹೆಚ್ಚು ಖಾಲಿ !
    ಆತೋ , ಇನ್ನು ರುಚಿಯೂ ನಮ್ಮ್ದಕ್ಕೆ ಬಾರ ಈ ದೇವನಹಳ್ಲಿ ಹಲಸಿನಕಾಯಿಗೆ! ಇನ್ನು ರಾಮನಗರದ್ದೂ ಅಷ್ತೇ ! ಮೇಣ ರಜಾ ಕಮ್ಮಿ , ರಾಮನಗರದ ಹಲಸಿನ ಕಾಯಿಲಿ. ತಾಳು , ಕೊದಿಲು , ಬೆಂದಿಗೊಕ್ಕೆ, ನಮ್ಮದೇ ಸರಿ.
    ಹಣ್ಣು ಎಂತು ಇಲ್ಲದ್ದಕೆ, ಆವುತ್ತು !

    ಏನೇ ಆಗಲಿ, ಓದಿಯಾದ್ರೂ ಹಳೇ ರುಚಿ ಮೆಲುಕು ಹಾಕಲೆಡಿಗಾತು !

  10. ಎಂತ ಡಾಗುಟ್ರ ಬಾವಾ ಎಲ್ಲೋರೀಂಗೂ ಕೊದಿ ಬರುಸುತ್ತ ಹಾಂಗೆ ಬರದ್ದಿ??ನಿಜವಾಗಿಯೂ ಹಲಸಿನ ಗುಣವೇ ಹಾಂಗೆ ಸಾದಾರಣ ನಮ್ಮ ಪ್ರಾಯದೋರು ಎಲ್ಲೋರ ಬಾಲ್ಯಲ್ಲಿ ನಡದ ಸವಿ ನೆನಪುಗ ಅಲ್ಲದಾ..??ಬಾರೀ ಪಸ್ಟ್ಟಾಇದು ಒನ್ದು ಒಪ್ಪ..

    1. ನವಗೆ ಹಲಸಿನ ಕಾಯಿಯ ಏವದೇ ಬೆಂದಿ,ತಾಳು ಇತ್ಯಾದಿ ಇದ್ದರೆ ಬೇರೇನೂ ಉಂಬ ಕ್ರಮವೇ ಇಲ್ಲೆದಾ.ಹಸಿ ಎಣ್ಣೆ ಮಾಂತ್ರ ಬೇಕು ತಾಳಿಂಗೆ.

  11. ಲೇಖನ ಓದಿಯಪ್ಪಗ ಬಾಯಿಲಿ ನೀರು ಬಂತು ಕೇಜಿಮಾವ.
    {ಪುನರ್ಪುಳಿ ಸೊಪ್ಪು ಹಾಕಿ ಮಡಗಿರೆ ಆರು ತಿಂಗಳಾದರೂ ಸೊಳೆ ಹಾಳಾಗ…}
    ಪುನರ್ಪುಳಿ ಸೊಪ್ಪಿನ ಉಪ್ಪಿನ ಒಟ್ಟಿಂಗೆ ಸೊಳೆ ಮಂಡಗೆಗೆ ಹಾಕುದಾ…? ಎನಗೆ ಗೊಂತಿಲ್ಲೆ. ಅದಕ್ಕೆ ಕೇಳಿದ್ದು.
    ಒಪ್ಪಂಗಳೊಟ್ಟಿಂಗೆ….

    1. ಸೊಳೆ ಉಪ್ಪಿಲ್ಲಿ ಹಾಕಿ ಅದರ ಮೇಲಂಗೆ ಪುನರ್ಪುಳಿ ಸೊಪ್ಪು ಹಾಕಿ ಗಟ್ಟಿ ಮುಚ್ಚಿ ಮಡಗುಸ್ಸು.ಬಹುಶಃ ಅದರ ಹುಳಿಗೆ ಹಾಳಾಗ.

  12. ಈ ಲೇಖನ ಓದಿ ಆನು ಒ೦ದು ೧೦ ಕೇಜಿ ಹಲಸು ತಪ್ಪಲೆ ಹೇಳಿದ್ದೆ ರಾಮಣ್ಣನತ್ರೆ. ತೂಪೆ ತಿಕ್ಕು೦ಡೊ ಹೇಳಿ ಹೊಯ್ದ.. ಮತ್ತೆ ಹೇಳ್ತೆ ಆತ.

    1. ಇದಾ.. ಸೊಳೆ ತ೦ದರೆ ಅಕ್ಕು… ಆನು ಇದ್ದೆ.. ತಿ೦ಬಲೆ.. 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×