ಅಜಿತನ ಬೇಸಗೆ ರಜೆ

April 17, 2010 ರ 10:16 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಜಿತನ ಪ್ರಾಯ ಈಗ ೧೩ ಕಳುದು ೧೪ ಆತಷ್ಟೇ… 7ನೇ ಕ್ಲಾಸು ಪರೀಕ್ಷೆ ಮುಗಿಸಿ ರಜೆಯ ಮಜಾ ಸವಿಯುವ ಪ್ರಯತ್ನಲ್ಲಿ ಇತ್ತಿದ್ದ .
ಈ ಬೇಸಿಗೆ ಮಂತ್ರ ಪಾಠ,ಕೋಚಿಂಗ್ ಕ್ಲಾಸ್ ಸುತರಾಂ ಅವಂಗೆ ಇಷ್ಟ ಇಲ್ಲೆ.
ಪುಣ್ಯವಶಾತ್ ಅಪ್ಪ-ಅಮ್ಮoಗೂ ಈ ಸಮಯಲ್ಲಿ ಇವನ ಎಲ್ಲಿಗಾದರೂ ಕಳುಸಿ ಹುಷಾರು ಮಾಡೆಕ್ಕು ಹೇಳಿ ಕಂಡದು ಈಗ..
ಈಗ ಅವನ ಮನೇಲಿ ಎಲ್ಲೋರಿಂಗಿಪ್ಪ ಇಪ್ಪ ಯಕ್ಷ ಪ್ರಶ್ನೆ ಈ 2 ತಿಂಗಳ ರಜೆಯ ಕಳವದು ಹೇಂಗೆ ?
ಅವನ ದೋಸ್ತಿಗ ಎಲ್ಲ ನೆಂಟರ ಮನೆ ವಿಶೇಷವಾಗಿ ಅಜ್ಜನಮನೆಲಿ ಕಳವ ಪ್ಲಾನ್ . ಆದರೆ ಇವ ಎಂಥ ಮಾಡಲಿ?
ಅಜ್ಜನಮನೆ ಖಾಲಿ ಹೊಡೆತ್ತಲ್ದಾ!!!. ಇಷ್ಟು ವರ್ಷದ ಬೇಸಗೆ ರಜೆಯ ಅಜ್ಜಿ ಇದ್ದ ಕಾರಣ
ಹೇoಗೋ ಹದಿನೈದಿಪ್ಪತ್ತು ದಿನ ಕಳಕ್ಕೊಂಡಿತ್ತಿದ್ದ . ಈಗ ಆ ಭಾಗ್ಯವೂ ಇಲ್ಲೆ.

ಹಮ್…. ರಜಾ ಫ್ಲ್ಯಾಷ್ ಬ್ಯಾಕ್ ಗೆ ಹೋಗಿ ಬಪ್ಪ…..
ಅಜಿತನ ಅಮ್ಮoಗೆ ಇಪ್ಪದೊಂದು ಅಕ್ಕ ಮತ್ತೆ ಅಮ್ಮ ಮಾತ್ರ . ಅಜ್ಜ ಇವನ ಅಪ್ಪ ಮದುವೆ ಆಯೆಕ್ಕಾದರೆ ಮೊದಲೇ ತೀರಿ ಹೋಯಿದವಡ.
ಅಪ್ಪನ ಮಾತಿಲೇ ಹೇಳ್ತಾರೆ ಅಪ್ಪಂಗೆ “ಮಾವ” ಹೇಳುವ ಶಬ್ದಲ್ಲಿ ಎಷ್ಟು ಅಕ್ಷರ ಇದ್ದು ಹೇಳುವದೂ ಗೊಂತಿಲ್ಲೆಡ ಪಾಪ. ಅಜಿತನೂ ಸೂಕ್ಷ್ಮವಾಗಿ ಕೆಲವು ಸರ್ತಿ ಅಪ್ಪನ ಗಮನಿಸಿದ್ದದೂ ಇದ್ದು..
ಅಪ್ಪನ ದೋಸ್ತಿಗ ಎಲ್ಲ ಮಾವನ ಮನೆಯ ಬಗ್ಗೆ ಪಟ್ಟಾಂಗ ಹೊಡವಾಗ ಅಪ್ಪನ ಮೋರೆ ಮಾತ್ರ ನೋಡಲೇ ಎಡಿಯ ಅವಂಗೆ .
ಮಾವ ಭಾವಂದ್ರ ಆ ರಾಜೋಪಚಾರದ ಕೊರತೆ ಅಪ್ಪoಗೆ ಇಲ್ಲದ್ದೆ ಇಪ್ಪದು ಅಜಿತ ಶಾಲೆಗೆ ಹೋಪಲೆ ಸುರು ಮಾಡಿದ ಸಮಯಲ್ಲೇ ಗೊಂತಾಯಿಗೊಂಡಿತ್ತು .
ಅಮ್ಮoಗೂ ಪ್ರತಿ ಹಬ್ಬಕ್ಕೆ ದಿನುಗೋಳಿ ಕಳಿಸಿ ಕೊಡುವ ಅಣ್ಣoದ್ರ ಕೊರತೆಯೆನೋ ಹೇಳಿ ಅಜಿತನ ಭಾವನೆ.
ಅಪ್ಪoಗೆ ಮಾವನ ಮನೆ ಹೇಳಿದರೆ ಅತ್ತೆ ಹಾoಗೂ ಅಪರೂಪಕ್ಕೆಸಿಕ್ಕುವ ಅಜಿತನ ದೊಡ್ಡಪ್ಪ ದೊಡ್ಡಮ್ಮ.
ಕಾರಣ ಅವಂಗೂ ಬಾಲ್ಯದ ಅತಿ ಸಂತೋಷದ ಕ್ಷಣoಗ ರಜೆಯ ಅಜ್ಜನ ಮನೇಲಿ ಕಳವ ಬಯಕೆ ಈಡೇರಿದ್ದಿಲ್ಲೆ.                                                                                                                  

ಅಜ್ಜನ ಮನೇಲಿ ಭಾವನ್ದ್ರು ಕಣ್ಣಾಮುಚ್ಚಾಲೆ,ಉಪ್ಪಿನ ಗೋಣಿ ಅಥವಾ ಹೊಳೆಲಿ ಈಜುವ ಪ್ರಯತ್ನ, ಗಂಟೆಗಟ್ಟಲೆ ಬೇಸಗೆಯ ಸಮಯಲ್ಲಿ ತೋಟಕ್ಕೆ ನೀರು ಹಾಕುವ ಕೊಷಿ, ಅ
ಜ್ಜನ ಕಪಾಟಿoದ ಗೊಂತಾಗದ್ದೆ ಕಲ್ಕಂಡಿ , ಖರ್ಜೂರ ತಿಮ್ಬದು “ಉಹುಂ” ಒಂದೂ ಗೊಂತಿಲ್ಲೆ.
ಆಚಕರೆಯ ತೋಟಕ್ಕೆ ಹೋಪದೋ ಸೈಕಲ್/ಬೈಕ್ ಲಿ ಮಾವಂದ್ರ ಹಿಂದೆ ಕೂದುಗೊಂಡು ಹಾಲು ತೆಕ್ಕೊಂಡು ಹೋಪ ಆ ಮಜ ಕೂಡ ಅವಂಗೆ
ಆ ಸವಿ ಸಿಕ್ಕಿದ್ದಿಲ್ಲೆ. ಮಾವನ ಮಗ /ಮಗಳ ಜೊತೆ -ಪೋಕ್ರಿ ಬುದ್ದಿ ಮಾಡಿಗೊಂಡು, ಮಾವಿನಹಣ್ಣು ಪೇರಳೆಗೆ ಬೇಕಾಗಿ ಬಡ್ಕೊoಬದು, ಹೀಂಗಿಪ್ಪದು ಅವಂಗೆ ಕನಸಿನ ಮಾತು..
ಬೇಸಗೆ ರಜೆ ಮುಗಿಸಿ ಬಂದ ದೋಸ್ತಿಗ ಎಲ್ಲ ಅವರವರ ಅಜ್ಜನಮನೆಯ ಸಾಹಸಮಯ ರಸಮಯ ಕಥಾನಕವ ಬಿಚ್ಚಿ ಹೇಳುವಾಗ ಇವಂಗೆ ಮನಸ್ಸಿoಗೆ ಏಕೋ ಕಸಿವಿಸಿ.
ಅಪ್ಪ ಒಂದೊಂದರಿ ಅವರ ಬಾಲ್ಯದ ನೆಂಪಿನ ಅವರ ಅಜ್ಜನಮನೆಯ ನೆನಪಿನ ಬುತ್ತಿ ತೆಗದಪ್ಪಗಲೂ ಅಷ್ಟೆ, ಮನಸ್ಸೆಂಬ ಕನ್ನಡಿಗೆ ಧೂಳು ಆವರಿಸಿದ ಹಾoಗೆ.
ಅಜಿತನ ಅಪ್ಪ ಎರಡೂ ಕಡೆoದ ದೊಡ್ಡ ಪುಳ್ಳಿ.

ಅಮ್ಮನ ಅಪ್ಪ ಮತ್ತೆ ಸ್ವಂತ ಅಜ್ಜ (ಅಪ್ಪನ ಅಪ್ಪ)….

ಅಜಿತನ ಮನಸ್ಸಿಲಿ ಬೇನೆ ಇದ್ದರೂ ಪಟಕ್ಕೆ ನೆಗೆ ಮಾಡುವದು
ಅಜಿತನ ಮನಸ್ಸಿಲಿ ಬೇನೆ ಇದ್ದರೂ ಪಟಕ್ಕೆ ನೆಗೆ ಮಾಡುವದು

ಅಪ್ಪನ ಅಜ್ಜನಮನೆ ಅಪ್ಪಂಗೆ ಬೇಸಿಗೆ ಅರಮನೆ!
ಆ ಅಜ್ಜ ಉಗ್ರ ನರಸಿಂಹನ ಅಪರಾವತಾರಡ . ಆದರೆ ಪುಳ್ಳಿಯ ಎದುರು “ಉಹುಂ” ಆಟ ನಡೆಯ.
ಅಜ್ಜನ ನೆರಳ ಕಂಡರೇ ನಡುಗುವ ಅ ಮನೆಯಲಿ ಅಜಿತನ ಅಪ್ಪ ಕೊಂಗಾಟದ ಪುಳ್ಳಿ ಅಡ.. ಅಪ್ಪoಗೆ ಅಜ್ಜನ ತಿಜೋರಿoದ ಪೈಸೆ ತೆಗೆವಷ್ಟು ಸ್ವಾತಂತ್ರ್ಯಡ .
ಇನ್ನು ಮಾವನ್ದ್ರು ಅವರ ಮಕ್ಕಳ ಜೊತೆ ಏನೂ ಕೊರತೆಯೇ ಇಲ್ಲೆಡ…
ಅವನ ಅಪ್ಪನೇ ಹೇಳುವ ಹಾಂಗೆ ಅಜ್ಜನಮನೆಲಿ ಅವಕ್ಕಿದ್ದ ಒಂದೇ ಒಂದು ಕೊರತೆ ಎಂಥಾ ಹೇಳಿದರೆ ಮಾವನ ಮಗಳು!!
ಅಪ್ಪoಗೆ ಮಾವನ ಪ್ರಥಮ ಕುಡಿ ಗಂಡು ಮಗು ಅಪ್ಪಗ ಎರಡನೆಯದಾದರೂ ಹೆಣ್ಣು ಅಕ್ಕು ಹೇಳಿ ಮನಸ್ಸಿನ ಮೂಲೆಲಿ ಆಸೆ ಇತ್ತಡ .
ಆದರೆ ಅಜಿತಂಗೆ ?, ಮಾವನೇ ಇಲ್ಲೆ.. ಇನ್ನು ಮಗಳೆಲ್ಲಿಂದ ಬಂತು?

ಅವನ ಅಪ್ಪನ ಅಖೆರಿಯಾಣ ಅಜ್ಜ ಅಜ್ಜಿ ಅಜಿತಂಗೆ ರಜ ಹತ್ತರೆ . “ಅಜ್ಜನಮನೆ”ಯ ಕೊರತೆ ಅವು ನೀಗಿಸುವಲ್ಲಿ ಇವರದ್ದು ಸಿಂಹಪಾಲು.
ಇವನ ಈ ದುಗುಡಕ್ಕೆ ಆರನ್ನೂ ದೂಷಣೆ ಮಾಡುವ ಹಕ್ಕು ನವಗಿಲ್ಲೆ ..
ಆದರೂ ಎಂತಕೋ ಒಂದರಿ ಮನಸ್ಸಿನ ಮೂಲೆಲಿ “ಅಜ್ಜನಮನೆ” ನೆಮ್ಪಾವ್ತು. ಈ ದುಗುಡ ತೀರ ತ್ರಾಸದಾಯಕ ಅಪ್ಪಗ ಎನ್ನ ರೂಮಿಲಿ ಕೂದು ಕೂಗುವ ಕ್ರಮ
ಇಂದಿಂಗೂ ತಪ್ಪಿದ್ದಿಲ್ಲೇ ಹೇಳಿ ಅಜಿತ ಒಪ್ಪಣ್ಣ ನ ಹತ್ರೆ ಹೇಳಿದ .
ಅದಕ್ಕೆ ಒಪ್ಪಣ್ಣ ಅವಂಗೆ ಬೇಕಾದ ಹಾಂಗೆ ಸಮಾಧಾನ ಮಾಡಿದ.ಆ ಸಮಾಧಾನಂದಲೂ ಅಜಿತ ಕೆಲವು ಸರ್ತಿ ಅಜ್ಜಕಾನ ಭಾವನ ಹತ್ರೆ ಹೇಳುವ ಕ್ರಮ ಇದ್ದು.
“ಈ ಹಾಳಾದ್ದು ಕೂಗುವ ಕ್ರಮ ಹಾಲು ಕಾಯಿಸಿದ ಹಾoಗೆ. ಕಣ್ಣೀರ ಧಾರೆ ಹಾಂಗೆ ಕೆಲವು ಸರ್ತಿ ಮರ್ಕಟ ಮನಸ್ಸಿನ ಹತೋಟಿಗೆ ತಪ್ಪಲೆ ವ್ಯರ್ಥ ಪ್ರಯತ್ನ ನಡೆಸುತ್ತಾ ಇದ್ದೆ..ಹೀoಗೆ ಇರ್ತೆ.
ಮಾವ… ನಿಂಗಳ ಹತ್ರೆ ಹೇಳಿಯಪ್ಪಗ ಎನ್ನ ಮನಸ್ಸು ರಜಾ ಹಗುರ ಅಕ್ಕು ಹೇಳಿ ನಿಂಗಳ ಹತ್ರೆ ಹೇಳಿದೆ…
ಅಷ್ಟೊತ್ತಿಂಗೆ ಅಜ್ಜಕಾನ ಭಾವ ” ನಿನ್ನ ಹಾಂಗೆ ಎನ್ನದೂ ಕಥೆ ಅಷ್ಟೇ ಮಾಣಿ.”
ಹೇಳಿ ಅಜ್ಜಕಾನ ಭಾವ ಸಮಾಧಾನ ಮಾಡಿದ.

ಹೀಂಗೆ ಅಜಿತನ ಕಥೆ ಎಲ್ಲ ನೋಡಿಯಪ್ಪಗ ಅವನ ಅಪ್ಪ ಅಮ್ಮಂಗೆ ಅಜ್ಜನ ಮನೆಗೆ ಕಳ್ಸುವದು ಬೇಡ ಹೇಳಿ ಕಂಡತ್ತು… ಮತ್ತೆ ಮದೂರಿಲಿ ನೆಡವ ವೇದಪಾಟಕ್ಕೆ ಕಳ್ಸಿದವು..
ಅಲ್ಲಿ ದೊಡ್ದೊಟ್ಟೆ ಚಾಮಿಯ ಅನುಗ್ರಹಂದ ಅಜಿತ ಒಳ್ಳೆ ಅನುಭವ ಪಡದು ಬರಲಿ ಹೇಳಿ ಬೈಲಿನವರ ಹಾರೈಕೆ.

ಅಲ್ದೋ?

ಅಜಿತನ ಬೇಸಗೆ ರಜೆ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಶೈಲಕ್ಕ

  “ajjana mane” hELire adakkippa bele yE bere. varShakkoMdari hoykodu irtitteyo aanu matte tamma dodda raje banda koodale. enna ajjana mane manenda ondu dina daari haangaagi aagaga hopale edittaagikondittille. aadare maava nottige sokkiddu ella atyanta madhura kShanango.. odida koodale tumbaa nenappaatu enage.. bhaari laayka aaydu baraddu

  -uShai.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣವಿಜಯತ್ತೆರಾಜಣ್ಣದೊಡ್ಡಭಾವವೇಣೂರಣ್ಣಒಪ್ಪಕ್ಕಅಕ್ಷರದಣ್ಣಶರ್ಮಪ್ಪಚ್ಚಿಅಜ್ಜಕಾನ ಭಾವಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ಸುಭಗಅಕ್ಷರ°ಶ್ಯಾಮಣ್ಣಬಂಡಾಡಿ ಅಜ್ಜಿಜಯಶ್ರೀ ನೀರಮೂಲೆಪೆರ್ಲದಣ್ಣದೊಡ್ಮನೆ ಭಾವಸಂಪಾದಕ°ವಿದ್ವಾನಣ್ಣವೆಂಕಟ್ ಕೋಟೂರುಕೇಜಿಮಾವ°ಸರ್ಪಮಲೆ ಮಾವ°ಶ್ರೀಅಕ್ಕ°ಪುಟ್ಟಬಾವ°ಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ