ಅದೊಂದು ದಿನ……

February 25, 2011 ರ 6:07 pmಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಆನಿನ್ನು ನಿನಗೆ ಫೋನೇ ಮಾಡ್ತಿಲ್ಲೆ. ಕೋಪ”. ಕಾಲ್ ಕಟ್ ಮಾಡಿ, ಮೊಬೈಲ್ ನ ಅತ್ತೆ ಮಡುಗಿದೆ.
ಮನಸ್ಸಿಲಿ ರಜ್ಜ ಕೋಪ ಇತ್ತಿದು. ಸುಮ್ಮನೆ ಕುರ್ಚಿಲ್ಲಿ ಕೂದುಕೊಂಡೆ. ಮೇಜಿನ ಮೇಲೆ ರೆಕಾರ್ಡುಗ, ಅಸ್ಸೈನ್ ಮೆಂಟ್ ಗಳ ಬರವಲೆ ಹೇಳಿ ತೆಗೆದು ಮಡಿಗಿದ ಕಾಗದದ ಹಾಳೆಗ, ರೆಫರ್ ಮಾಡ್ಲೆ ಬೇಕಾದ ಪುಸ್ತಕಂಗ ಎಲ್ಲ ಕಣ್ಣಿಂಗೆ ಬಿದ್ದತ್ತು.
ಹ್ಮ್… ಎಷ್ಟು ಕೆಲಸ….. ಇದರೆಡೆಲ್ಲಿ ಮನಸ್ಸು ವ್ಯಾಕುಲವಾದರೆ, ಎಲ್ಲಾ ಹಾಳು. ಇಡೀ ದಿನವೇ ಹಾಳು!!!
ಸಂಜೆ ೬ ಗಂಟೆ ಆಗಿತ್ತಿದಷ್ಟೇ. ಒಂದರಿ ಹೆರ ವಾಕಿಂಗ್ ಹೋಯ್ಕೋಂಡು ಬಪ್ಪ. ಅಷ್ಟಪ್ಪಗ ರಜ್ಜ ಮೂಡ್ ಸರಿ ಆವ್ತು. ಮತ್ತೆ ಎನ್ನ ಕೆಲಸಂಗಳ ಕಡೆಗೆ ಪೂರ್ತಿ ಗಮನ ಕೊಡ್ಳಕ್ಕು ಹೇಳಿ, ವಾಕಿಂಗ್ ಹೆರಟೆ.
ತಲೇಲ್ಲಿ ಫೋನಿಂದೇ ವಿಷಯ ತಿರುಗುತ್ತಾ ಇತ್ತಿದ್ದು…..
ಅಷ್ಟಕ್ಕೂ, ಎನಗೆ ಅಕ್ಕನತ್ರೆ ಕೋಪ ಬಂದದೆಂತಕೆ?! ಆನು ಫೋನ್ ಮಾಡ್ಯಪ್ಪಗ, ಮೆಸೇಜ್ ಮಾಡ್ಯಪ್ಪಗ ಉತ್ತರಿಸಿತ್ತಿಲ್ಲೆ.
ಮತ್ತೆರಡು ದಿನ ಬಿಟ್ಟು ಪುನಃ ಫೋನ್ ಮಾಡ್ಯಪ್ಪಗ “ಮೊನ್ನೆ, ಬ್ಯುಸಿ ಇತ್ತಿದೆ ಪುಟ್ಟ” ಹೇಳಿ ಹೇಳಿತ್ತು.
ಅಷ್ಟಪ್ಪಗ ಎನಗೆ ಕೋಪ ಬಂತು. “ಅಂಬಗ ಆನು ಬ್ಯುಸಿ ಇಲ್ಲೆಯ?! ಎನಗೂ ಬೇಕಾದಷ್ಟು ಕೆಲಸಂಗ ಇದ್ದು. ಆದರೂ ಎನಗೆ ನಿನ್ನ ನೆನಪ್ಪಾವ್ತು. ನಿನಗೆ ಮಾತ್ರ ಎನ್ನ ನೆನಪ್ಪೇ ಇಲ್ಲೆ. ಕಾಲ್ ಅಟ್ಟೆಂಡ್ ಮಾಡ್ಲಾಗದ್ರೆ ಹೋಗಲಿಯಪ್ಪ. ಮೆಸೇಜ್ ಆದರೂ ಮಾಡ್ಲಕ್ಕನ್ನೇ?! ಎರಡು ದಿನಲ್ಲಿ ಮೆಸೇಜ್ ಮಾಡ್ಲೆ ಬೇಕಾದ ಒಂದು ನಿಮಿಷದಷ್ಟೂ ಪುರುಸೊತ್ತು ಸಿಕ್ಕಿದ್ದಿಲ್ಯಾ?” ಹೇಳಿ ಎನ್ನ ತರ್ಕ.
ಅದಕ್ಕೆ “ಮತ್ತೆ ಮೆಸೇಜ್ ಮಾಡ್ವ ಹೇಳಿ ಇತ್ತಿದೆ. ಮತ್ತೆ ಮರತ್ತು ಹೋತು” ಹೇಳಿ ಹೇಳಿತ್ತು.
“ಅದನ್ನೇ ಆನು ಹೇಳಿದ್ದು, ನಿನಗೆ ಎನ್ನ ನೆನಪ್ಪಿಲ್ಲೆ ಹೇಳಿ” ಹೇಳಿದೆ. ಎನ್ನೊಟ್ಟಿಂಗೆ ವಾದ ಮಾಡ್ವ ಆಸಕ್ತಿ ಅಕ್ಕಂಗಿತ್ತಿಲ್ಲೆ. ಮತ್ತೆ ಎಷ್ಟು ಚರ್ಚೆ ಮಾಡಿದರೂ ಆನು ಎನ್ನ ಪಟ್ಟು ಸಡಿಲಿಸುವ ಲಕ್ಷಣ ಇತ್ತಿಲೆ.
“ಸಾರಿ ಪುಟ್ಟ” ಹೇಳಿ ಹೇಳಿತ್ತು. ಕೋಪ ಬಂದು ಕಾಲ್ ಕಟ್ ಮಾಡಿತ್ತೆ.
ಈಗ ಕಾಣ್ತು, ಆನೆಂತಕೆ ಇಷ್ಟೆಲ್ಲಾ ಎಕ್ಸ್ ಪೆಕ್ಟ್ ಮಾಡುದು?!
ಆನು ಎಲ್ಲರಿಂಗೂ ಬೇಕು, ಎನ್ನ ಗೆಳೆಯರೆಲ್ಲಾ ಎನಗೆ ಮೆಸೇಜ್ ಮಾಡಿಕೊಂಡಿರೆಕ್ಕು ಹೇಳಿ ಎಂತಕೆ ಗ್ರೇಶುದು?!
ಸಣ್ಣದಿಪ್ಪಗ, ಮೊಬೈಲೆಲ್ಲಾ ಇತ್ತಿದೇ ಇಲ್ಲೆ.
ಅಕ್ಕನ ಭೇಟಿ ಅಪ್ಪದೇ ವರ್ಷಕ್ಕೊಂದರಿ, ರಜೆಲ್ಲಿ. ಆದರೂ ಯಾವುದೇ ಜಗಳ ಇಲ್ಲದ್ದೆ ಎಷ್ಟು ಚೆಂದಕ್ಕೆ ಇರ್ತಿತ್ತೆಯ!
ದೊಡ್ಡ ಅಪ್ಪಗ, ನಾವು ಹೆಚ್ಚು ಮೆಚೂರ್ ಆಯೆಕ್ಕೇ ಹೊರತು ಹೀಂಗೆ ಸಣ್ಣ ಸಣ್ಣ ವಿಷಯ ಹಿಡ್ಕೊಂಡು ಜಗಳ ಮಾಡಿ, ಮನಸ್ಸು ಹಾಳು ಮಾಡಿಕೊಂಬದೆಂತಕೆ?!!
ನಾವು ಪರಸ್ಪರರ ಹೆಚ್ಚು ಅರ್ಥ ಮಾಡಿಕೊಳ್ಳೆಕ್ಕು. ಎಲ್ಲರೂ ಒಟ್ಟಿಂಗೆ ಸೇರಿಕೊಂಡು, ಯಾವುದೇ ಇಗೋ ಸಮಸ್ಯೆ ಬಾರದ್ದ ಹಾಂಗೆ ನೋಡಿಕೊಂಡು ಮುಂದುವರಿಯೆಕ್ಕು. ಅಲ್ದಾ?!
ಕೂಡ್ಲೇ ಅಕ್ಕಂಗೆ ಕಾಲ್ ಮಾಡಿ ಆನೇ ಕ್ಷಮೆ ಕೇಳಿದೆ.
ಪುನಃ ಲೊಟ್ಟೆ ಪಟ್ಟಾಂಗ ಸುರು ಆತು…. :)
ಮನೆಗೆ ತಲುಪಿದ ಮೇಲೆ ಎನ್ನ ಕೆಲಸಂಗಳಲ್ಲಿ ಗಮನ ಕೊಡ್ಲೆ ಸಾಧ್ಯ ಆತು. ಮನಸ್ಸು ಹಗುರ ಆತು. :) :) :)
ಅದೊಂದು ದಿನ...... , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಅಪ್ಪಾದ ಸಂಗತಿಯೇ. ಬರೇ ಫೋನಿನ ವಿಷಯಲ್ಲಿ ಮಾತ್ರ ಅಲ್ಲ, ಪೇಟೆಂದ ಅಪ್ಪನತ್ರ ಎಂತಾರು ತಪ್ಪಲೆ ಹೇಳಿಕ್ಕಿ ಕಾದೊಂಡಿಪ್ಪಾಗ ಅವು ಅವರ ಗಡಿಬಿಡಿಲಿ ಮರತ್ತಿಕ್ಕಿ ಬಂದರೆ, ಆರಾರು ನೆಂಟ್ರು ಬತ್ತವೂಳಿ ಕಾದೊಂಡಿಪ್ಪಾಗ ಬಾರದ್ದೇ ಇದ್ದರೆ – ಹೀಂಗೆ ಸುಮಾರು ಸಂದರ್ಭಂಗಳಲ್ಲಿ ನಿರೀಕ್ಷೆ ಇದ್ದು ನಿರಾಸೆ ಆಗ್ಯಪ್ಪಾಗ ಹೀಂಗಾವುತ್ತು. ಕಾರಣವ ಕಂಡುಗೊಂಬ ತಾಳ್ಮೆಯ ಬೆಳೆಶಿಗೊಂಬದೇ ಇಪ್ಪದು. ಅದುವೇ ಕಷ್ಟ ಅಪ್ಪದು.

  [Reply]

  ಅಕ್ಷರ°

  ಅಕ್ಷರ ದಾಮ್ಲೆ Reply:

  ಅಪ್ಪು….. ನಮಗೆ ಯಾವಾಗಳೂ ನಾವು ಸರಿ ಹೇಳಿಯೇ ಮನಸ್ಸಿಲ್ಲಿರ್ತು. ಎನ್ನ ಕಡೆಂದಲೂ ಎಂತಕೆ ತಪ್ಪಾಗಿಪ್ಪಲಾಗ ಹೇಳಿ ಯೋಅನೆ ಮಾಡಿದರೆ, ಸರಿ ಆವ್ತು. ಃ) ಅಲ್ದಾ?!!

  [Reply]

  VA:F [1.9.22_1171]
  Rating: 0 (from 0 votes)
 2. savithri

  ಅಪ್ಪು ಅಕ್ಷರ,ಎನಗುದೇ ಹಾಂಗೆ ಕಂಡಿದು ಎಷ್ಟೋ ಸರ್ತಿ.ಆದರೆ ಈ ಮನಸ್ತಿತಿ ಎಷ್ಟು ಜನಕ್ಕೆ ಇದ್ದು ಹೇಳು.ಶರೀರಕ್ಕೆ ಪ್ರಾಯ ಆವ್ತು ಅಷ್ಟೆ.ಮಾನಸಿಕವಾಗಿ ಪ್ರಬುದ್ಧತೆ ಬೆಳೆಯೆಕ್ಕಲ್ಲದಾ?ನೀನು ಇಷ್ಟು ಸಣ್ಣ ಪ್ರಾಯಲ್ಲಿ ಹೀಂಗೆ ಯೋಚನೆ ಮಾಡ್ತೆ ಹೇಳಿದರೆ ತುಂಬಾ ಖುಶಿ ಆವುತ್ತು ನಿನ್ನ ಬಗ್ಗೆ.ಮತ್ತೆ ನಿನ್ನ ಪ್ರತಿಭೆಯ ಬಗ್ಗೆ.

  ಹೇಳಿಬಾಂಗೆ ಮೊನ್ನೆ ನಿಂಗಳ ಶಾಲೆಲಿ ನಡದ ಏಕಾಂಕ ನಾಟಕ ಭಾರೀ ಲಾಯಕಾಗಿತ್ತು.

  ನಿಂಗೊ ನಿಂಗಳ ಅಮ್ಮಂಗೆ ಹೂಗು ಕೊಟ್ಟು ಕಾಲು ಮುಟ್ಟಿ ನಮಸ್ಕಾರ ಮಾಡುವಾಗ ಎನಗೆ ದುಖ ಬಂತು.ಎಂತಗೇಳಿ ಗೊಂತಿಲ್ಲೆ.

  ಅಪ್ಪಂಗೆ 60 ವರುಷ ಅಪ್ಪಾಗ ಯಾವ ಕಾರ್ಯಕ್ರಮ ಮಾಡುವ plan ಇದ್ದು?

  [Reply]

  VA:F [1.9.22_1171]
  Rating: 0 (from 0 votes)
 3. ಅಕ್ಷರ°

  ಓಹ್!! ನಿಂಗ ಎಂಗಳತ್ರೆ ಮಾತಾಡಿದ್ದೇ ಇಲ್ಲೆ!!! ಃ( ಆದರೂ ಕಾರ್ಯಕ್ರಮಕ್ಕೆ ಬಂದದಕ್ಕೆ ತುಂಬಾ ಧನ್ಯವಾದಂಗೊ. ಅಪ್ಪನ ಅರುವತ್ತನೇ ವರ್ಷದ ಆಚರಣೆ ಮತ್ತೆ ಅಮ್ಮನ ಐವತ್ತನೇ ವರ್ಷಾಚರಣೆ ಲೆಕ್ಕಲ್ಲಿ ಬೇರೆ ಕಾರ್ಯಕ್ರಮಂಗ ಮಾಡಿದೆಯ. ಎರಡು ಸಂಗೀತ ಕಚೇರಿಗ ಆತು. ರಾಮಚಂದ್ರಾಪುರ ಮಠದ ಮೇಳದ ಆಟ ಇತ್ತು. ಒಂದು ತಾಳಮದ್ದಳೆದೆ ಆಗಿತ್ತು. ಹಾಂಗೆ ಬೇರೆ ಬೇರೆ ಕಾರ್ಯಕ್ರಮಂಗ ಮಾಡಿತ್ತೆಯ. ಃ) ಇನ್ನು ಸದ್ಯ ಕಾರ್ಯಕ್ರಮಂಗ ಇಲ್ಲೆ… ಪರೀಕ್ಷೆ ಎಲ್ಲ ಹತ್ತಿರ ಬಂತಲ್ಲದಾ… ಹಾಂಗೆ….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ವೇಣೂರಣ್ಣಕಳಾಯಿ ಗೀತತ್ತೆಗೋಪಾಲಣ್ಣಅಡ್ಕತ್ತಿಮಾರುಮಾವ°ಪುತ್ತೂರುಬಾವಮಂಗ್ಳೂರ ಮಾಣಿಶಾಂತತ್ತೆಶಾ...ರೀದೇವಸ್ಯ ಮಾಣಿದೊಡ್ಡಭಾವಪೆರ್ಲದಣ್ಣಸುವರ್ಣಿನೀ ಕೊಣಲೆದೊಡ್ಮನೆ ಭಾವವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆನೆಗೆಗಾರ°ವಾಣಿ ಚಿಕ್ಕಮ್ಮಸಂಪಾದಕ°ಬೋಸ ಬಾವಕಜೆವಸಂತ°ಅಜ್ಜಕಾನ ಭಾವಚುಬ್ಬಣ್ಣಶೇಡಿಗುಮ್ಮೆ ಪುಳ್ಳಿಚೆನ್ನೈ ಬಾವ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ