ಆನು ಎಂತಕೆ ಬೆಂಗಳೂರಿಂಗೆ ಬಂದೆ?!!

“ಹಲೋ ಅಣ್ಣಾ, ಹೇಂಗಿದ್ದೆ?”, ಉದಿಯಪ್ಪಗ ಎಂಟು ಗಂಟೆ ಹೊತ್ತಿಂಗೆ ಅಣ್ಣನ ಮೊಬೈಲಿಂಗೆ ಕಾಲ್ ಮಾಡಿತ್ತಿದ್ದೆ.
ಅಣ್ಣ ಎಂಜಿನಿಯರಿಂಗ್ ಕಲ್ತು, ಬೆಂಗಳೂರಿಲಿ ಕೆಲಸಕ್ಕೆ ಸೇರಿ ರಜ್ಜ ಸಮಯ ಆಗಿತ್ತಷ್ಟೇ. ಅವ ಬೆಂಗಳೂರಿಂಗೆ ಹೋಪ ಮೊದಲು ಒಟ್ಟಿಂಗೆ ಇದ್ದ ಕಾರಣ, ಉದಾಸಿನ ಆಯ್ಕೊಂಡಿತ್ತು.
ಆದರೆ, ಅಣ್ಣ ತುಂಬಾ ಸೀರಿಯಸ್ ಆಗಿ “ಎಂತ ವಿಷಯ? ಬೇಗ ಹೇಳು” ಹೇಳಿ ಹೇಳಿದ.
“ಅರೇ! ವಿಷಯ ಎಂತರ?!! ಹೀಂಗೇ ಫೋನ್ ಮಾಡಿದ್ದು, ನೀನು ಹೇಂಗಿದ್ದೆ ಹೇಳಿ ಕೇಳ್ವ ಹೇಳಿ ಆತು” ಹೇಳಿ ಹೇಳಿದೆ.
“ನಿನಗೀಗ ಪುರ್ಸೊತ್ತಾದ್ದ?! ಮಡುಗು ಫೋನ್” ಹೇಳಿ ಅಣ್ಣ ಕಾಲ್ ಕಟ್ ಮಾಡಿದ.
“ಯಬ್ಬಾ!! ತಮ್ಮನತ್ರೆ ಮಾತಾಡ್ಳೂ ಪುರ್ಸೊತ್ತಿಲ್ಲದ್ದೆ ಆತ ಇವಂಗೆ?!” ಹೇಳಿ ಆಗ ಗ್ರೇಶಿತ್ತಿದೆ.
ಅಮ್ಮನತ್ರೆ “ಅಣ್ಣ ಫೋನ್ ಕಟ್ ಮಾಡಿದ” ಹೇಳಿ ಹೇಳಿದೆ. “ಅವ ಬ್ಯುಸಿ ಇಕ್ಕು ಮಗ. ಹೊತ್ತಪ್ಪಗ ಮಾತಾಡುವ” ಹೇಳಿ ಅಮ್ಮ ಎನ್ನ ಸಮಾಧಾನ ಮಾಡಿದವು.
ಆಗ ಆರು ಎಷ್ಟು ಸಮಾಧಾನ ಮಾಡಿದರೂ ಎನಗೆ ಅನಿಸಿಕೊಂಡಿತ್ತು, “ಮನುಷ್ಯರತ್ರೆ ಮಾತಾಡ್ಳೂ ಪುರ್ಸೊತ್ತಿಲ್ಲದ್ದದು ಇದೆಂಥಾ ಬ್ಯುಸಿ?” ಹೇಳಿ.
ಆದರೆ ಈಗ ಐದು ವರ್ಷದ ಮತ್ತೆ, ಬೆಂಗಳೂರಿಂಗೆ ಬಂದಿಪ್ಪಗ ಅರ್ಥ ಆವ್ತು, ಬೆಂಗಳೂರಿಲಿ ಜನ ಎಂತಕೆ ಬ್ಯುಸಿ ಹೇಳಿ!

ಇತ್ತೀಚೆಗಂತೂ ಸಣ್ಣ ಮಕ್ಕಳಿಂದ ಹಿಡಿದು, ಪ್ರಾಯ ಆದವರವರೆಗೆ ಎಲ್ಲರೂ ಬ್ಯುಸಿಯೇ (ಕೆಲವರು ಸುಮ್ಮನೆ ಬ್ಯುಸಿ ಇದ್ದೆಯ ಹೇಳಿ ಹೇಳ್ತವು. ಅದು ಬೇರೆ ವಿಷಯ).
ಅದೂ ಬೆಂಗಳುರಿನಂತಹ ಮಹಾನಗರಂಗಳಲ್ಲಿ ಜನಕ್ಕೆ ಒಂದು ಕಡೆಂದ ಇನ್ನೊಂದು ಕಡೆಗೆ ಹೋಪಲೇ ಸುಮಾರು ಹೊತ್ತು ಬೇಕಾವ್ತು.
ಸಿಕ್ಕಾಪಟ್ಟೆ ಟ್ರಾಫಿಕ್ ಇಪ್ಪ ಕಾರಣ, ಮನೆಂದ ಹೆರಟ ಕೂಡ್ಳೇ ಯಾವಾಗ ತಲುಪುತ್ತೋ ಹೇಳಿ ಚಿಂತೆ ಸುರು ಆವ್ತು.
ಬಸ್ಸಿಲಿ ಹೋಪದಾದರೆ ಸೀಟು ಸಿಕ್ಕುಗಾ, ಇಲ್ಯಾ ಹೇಳಿ ಚಿಂತೆ, ನಮ್ಮ ಸ್ವಂತ ಗಾಡಿಲ್ಲಿ ಹೋಪದಾದರೆ, ಆ ರಷ್‌ಲಿ ಗಾಡಿ ಓಡಿಸುದು ಹೇಳಿದರೆ ಟೆನ್ಷನ್ ಕಟ್ಟಿಟ್ಟ ಬುತ್ತಿ.
ಆಚೆ ಹೊಡೆಂದಲೂ ಗಾಡಿಗ ಬತ್ತಾ ಇರ್ತು – ಈಚೆ ಹೊಡೆಂದಲೂ ಗಾಡಿಗ ಬತ್ತಾ ಇರ್ತು. ಅವುಗಳೆಡೆಲಿ ಹೋಪದು ಹೇಳಿದರೆ ಸಾಕುಸಾಕಾವ್ತು.
ಹೀಂಗಿಪ್ಪಗ, ಅವರವರ ಜಾಗ್ರತೆ ಮಾಡಿಕೊಂಬದರಲ್ಲೇ ಜನಂಗ ಬ್ಯುಸಿ.
ಹಾಂಗಾಗಿ ಆರಿಂಗೂ ಪುರುಸೊತ್ತೇ ಇಲ್ಲೆ.

ಪೇಟೆಮಾಣಿಯ ತಲೆಬೆಶಿ (ಚಿತ್ರಕೃಪೆ: ಅಂತರ್ಜಾಲ)

ಉದಿಯಪ್ಪಗ ಮನೆಂದ ಕೆಲಸಕ್ಕೆ ಹೆರಟರೆ, ಮತ್ತೆ ಮನೆಗೆತ್ತುವಾಗ ಇರುಳಾವ್ತು.
ಬೆಂಗಳೂರಿಲಿಪ್ಪದು ಹೇಳಿದರೆ, ಪುರಂದರ ದಾಸರು ಹೇಳಿದ ಹಾಂಗೆ, “ಅನುಗಾಲವೂ ಚಿಂತೆ”.
ಹೀಂಗಿಪ್ಪ ಪರಿಸ್ಥಿತಿಲ್ಲಿಯೂ ನಮ್ಮಲ್ಲೇ ತುಂಬಾ ಜನ ಎಂತಕೆ ಹಳ್ಳಿಂದ ಹೋಗಿ ಬೆಂಗಳೂರಿಲಿ ಸೆಟ್ಲ್ ಆವ್ತವು?
ತಲೆ ಒಡದು ಹೋಪಷ್ಟು ಟೆನ್ಷನ್ ಮಡಿಕ್ಕೊಂಡು ಎಂತಕೆ ಹೆಣಗಾಡ್ತವು?
ಹಳ್ಳಿಲ್ಲಿ ಅಥವಾ ಸಣ್ಣ ಪೇಟೆಲ್ಲಿಪ್ಪ ಮಾನಸಿಕ ನೆಮ್ಮದಿಯ ಬಿಟ್ಟು ಎಂತಕೆ ಹೋವ್ತವು?
– ಕಾರಣಂಗ ತುಂಬಾ ಇಕ್ಕು.

ಅವುಗಳ ಬೆಂಗಳೂರಿಲಿ ಸೆಟ್ಲ್ ಆಗದ್ದ ಆನು ಹೇಳುದಕ್ಕಿಂತ ಸೆಟ್ಲ್ ಆದ ಒಪ್ಪಣ್ಣನ ಬೈಲಿಲಿಪ್ಪವು ಹೇಳುದು ಒಳ್ಳೆದು. ಅಲ್ದಾ?!

ಅಕ್ಷರ°

   

You may also like...

33 Responses

 1. ಬೊಳುಂಬು ಮಾವ says:

  ಸತ್ಯದ ಮೋರೆಗೆ ಬಡುದ ಹಾಂಗೆ ವಿವರುಸಿ, ಒಂದು ಸತ್ಯ ಸಂಗತಿಯ ಬರದ್ದ ಅಕ್ಷರ. ಏವದೂ ನಮ್ಮ ಕೈಲಿ ಇಲ್ಲೆ. ಎಲ್ಲೋರು ಹಳ್ಳಿಲಿ ಇರೆಕು ಹೇಳಿರು ಕಷ್ಟವೇ. ಹಳ್ಳಿಯೂ ಬೇಕು, ಪೇಟೆಯೂ ಬೇಕು. ಒಂದು ಸಮತೋಲನ ಮಾಡ್ಯೊಂಡು ಹೋಯೆಕಷ್ಟೆ. ನಿನ್ನ ಹೊಸ ಹೊಸ ಲೇಖನಂಗೊ ಬತ್ತಾ ಇರಳಿ.

  • ತುಂಬಾ ಧನ್ಯವಾದಂಗೊ ಮಾವ.. ನಿಂಗಳೆಲ್ಲರ ಆಶೀರ್ವಾದ ಎನ್ನ ಮೇಲಿರಲಿ…..
   ಅಕ್ಷರ

 2. ಬೆಂಗಳೂರಿನ ತಾತ್ಕಾಲಿಕ ವೆವಸ್ಥೆಯ ಬಗ್ಗೆ ಒಳ್ಳೆ ಚಿತ್ರಣ ಕೊಟ್ಟಿದಿ.ಸೌಮ್ಯಕ್ಕ ಹೇಳಿದ ಹಾಂಗೆ ಹೆಚ್ಚಿನವುದೇ ಅನಿವಾರ್ಯ ಹೇಳಿ ಇಲ್ಲಿ ಇಪ್ಪದು ಸತ್ಯ..ಆದರೂ ನಮ್ಮ ಸಂಸ್ಕೃತಿಯ ನಾವು ಒಳಿಶಿಗೊಂಡು ಹೋಪದು ನಮ್ಮ ಕರ್ತವ್ಯ..ಈ ನಿಟ್ಟಿಲಿ ಒಪ್ಪಣ್ಣನ ಬೈಲು ಸಾರ್ಥಕತೆಯ ಪಡದ್ದು..ಒಳ್ಳೆ ಲೇಖನ.. ಧನ್ಯವಾದಂಗೋ…

 3. ಶರ್ಮಪ್ಪಚ್ಚಿ says:

  ಅಕ್ಷರ,
  ಪೇಟೆಯ ವಾಸ್ತವ ಚಿತ್ರಣ ಕೊಟ್ಟು, ಜೆನಂಗಳ ಅಭಿಪ್ರಾಯಕ್ಕೆ ಪ್ರಚೋದನೆ ಕೊಟ್ಟ ಲೇಖನ.
  ನಿನ್ನ ಅಕ್ಷರ ಕೃಷಿ ಹೀಂಗೆ ಮುಂದುವರಿಯಲಿ
  ಧನ್ಯವಾದಂಗೊ

 4. ರಘುಮುಳಿಯ says:

  2001 ರಲ್ಲಿ ಆನು ಬೆಂಗಳೂರಿ೦ಗೆ ಬಪ್ಪಗ ಭಾರಿ ಕೊಶಿ ಆಗಿತ್ತು.ಈಗ ಆನೂ ಇದೆ ಪ್ರಶ್ನೆ ಕೇಳುತ್ತಾ ಇದ್ದೆ ,ಎಂತಗಾರೂ ಆನು ಇಲ್ಲಿಗೆ ಬಂದೆ??ಅಕ್ಷರನ ಪ್ರವೇಶ ರೈಸಿತ್ತದಾ..

  • ಹಹಾ, ಚೆಂಡೆ ಬಡುದ್ದು ನಿಂಗಳೇ ಅಲ್ದಾ ರಘು ಅಣ್ಣ??!! ಎನ್ನ ಒಪ್ಪಣ್ಣಕ್ಕೆ ಪರಿಚಯ ಮಾಡ್ಸಿದ ದಿನ ಭಾರಿ ಲಾಯ್ಕ ಕಮೆಂಟ್ ಮಾಡಿತ್ತಿರಿ…..

   ಅಕ್ಷರ

 5. ಮಹೇಶ says:

  ಅಕ್ಷಯನ ಪ್ರಶ್ನೆ ಒಂದು ಯಕ್ಷ ಪ್ರಶ್ನೆಯ ಹಾಂಗಿಪ್ಪದು!

  ಉದ್ಯೋಗ ಅತೀ ಮುಖ್ಯವಾದ ಅಂಶ ಜೀವನಲ್ಲಿ. ಉದ್ಯೋಗ ಇಲ್ಲದ್ದಿಪ್ಪದು ಶ್ರೇಯಸ್ಕರ ಅಲ್ಲ ಹೇಳುವದು ಎಲ್ಲೋರಿಂಗುದೆ ಗೊಂತಿದ್ದು. (ಉದ್ಯೋಗ ಹೇಳಿರೆ ಎಂತದು ಹೆಂಗಿಪ್ಪದು ಹೇಳುವದು ವಿಚಾರಾರ್ಹ ವಿಷಯ!)
  ಉದ್ಯೋಗ ಹೇಳುವದಕ್ಕೆ ನಮ್ಮಲ್ಲಿ ಕೆಲಸ ಹೇಳಿ ಒಂದು ಪದ ಇದ್ದು.
  ಊರಿಲ್ಲಿ ಮನೆಲ್ಲಿದ್ದು ಕೃಷಿ ಮಾಡಿಯೊಂಡು ಇದ್ದವನ ಬಗ್ಗೆ “ಅವಂಗೆ ಕೆಲಸ ಇಲ್ಲೆ, ಅವ ಮನೆಲ್ಲೇ ಇಪ್ಪದು” ಹೇಳುವದು ನಮ್ಮ ಊರಿಲ್ಲಿ ಬಹಳವಾಗಿ ಬಳಕೆ ಅಪ್ಪ ಮಾತು.
  ಕೃಷಿಯ ಒಂದು ಉದ್ಯೋಗ ಹೇಳಿ ಆರ (ಹೆಚ್ಚಿನವರ) ಬಾಯಿಲ್ಲಿಯುದೆ ಬತ್ತಿಲ್ಲೆ. “ಅವ ಮನೆಲ್ಲಿ ಕೂದ್ದದು/ ಅವನ ಕೆಲಸಕ್ಕೆ ಹೋಗೆಡ ಹೇಳಿ ಮನೆಲ್ಲಿ ಕೂರುಸಿದ್ದದು, ಕೃಷಿಯ ನಂಬಿರೆ ಉದ್ಧಾರ ಆಗ” ಹಿಂಗಿಪ್ಪ ಮಾತುಗೋ ಕಮೆಂಟುಗೊ ಯುವಕರ/ಯುವತಿಯರ ಮೇಲೆ ಪರಿಣಾಮ ಬೀರುತ್ತು. ನಾವು ನಮ್ಮ ಬಗ್ಗೆ ಮಾತಾಡಿಗೊಂಬದರ ಬಗ್ಗೆಯೂ ಜಾಗ್ರತೆ ಇರೆಕು!
  ನಗರಲ್ಲಿ ಬೆಳವಣಿಗೆಗೆ (ಕೆಲವು ರೀತಿಯ) ಅವಕಾಶಂಗ ಹೆಚ್ಚು ಹೇಳುವದುದೆ ನಿಜ. ನಗರಜೀವನದ ಬಗ್ಗೆ ಇಪ್ಪ ಆಕರ್ಷಣೆ ಇಂದು ನಿನ್ನೆಯದ್ದಲ್ಲ.

  • ಸುಬ್ಬಯ್ಯ ಭಟ್ಟ ವರ್ಮುಡಿ says:

   ಮನೇಲೇ ಕೂದವಕ್ಕೆ ಕ್ರಿಶಿ ಮಾಡುವವಕ್ಕೆ ಅವರವರ ಅಪ್ಪಂದ್ರೂ ಬೆಲೆ ಕೊಡ್ತವಿಲ್ಲೆ ಮಹೇಶಣ್ಣೋ!

 6. ಅಕ್ಷರಣ್ಣೋ, ಚೆಂದ ಬರದ್ದೆ.. ಆನು ಮುಂದೆ ದೊಡ್ಡಾದ ಮತ್ತೆ ಬೆಂಗ್ಲೂರಿಂಗೆಲ್ಲ ಹೋಪಲಿಲ್ಲೆ.. ಆನು ಮಾಷ್ಟ್ರಪ್ಪದು. ಎನಗೆ ಹೇಳಿಕೊಡುದು ಹೇಳಿರೆ ತುಂಬಾ ಇಷ್ಟ.. ಆರು ಬೆಂಗ್ಳೂರಿಂಗೋಗಿ ಮತ್ತೆ ಸುಮ್ಮನೆ ಅಲ್ಲಿ ಹೊಗೆ ಧೂಳು ತಿಂಬದೂ! ಚಾಕ್ಲೇಟು ತಿಂಬದಾದರೆ ಅಕ್ಕಪ್ಪ! 😉

 7. ಅಕ್ಷರನ ಬರಹ ಲಾಯ್ಕಾಯಿದು. ಪೇಟೆ ಜೀವನಲ್ಲಿ ಬ್ಯುಸಿಯಾಗಿಪ್ಪದೇ ಒಂದು ಕೊಶಿ. ಹಳ್ಳಿ ಜೀವನಲ್ಲಿ ಬ್ಯುಸಿಯಾಗಿದ್ದೆ ಹೇಳಿ ಹೇಳ್ತವನ ಆನಂತೂ ಕಂಡಿದಿಲ್ಲೆ. ನಿಜವಾಗಿ ನೋಡ್ತರೆ ಈ ಟ್ರಾಫಿಕ್ ಇತ್ಯಾದಿಗಳಲ್ಲಿಪ್ಪಗ ‘ಆನು ಬ್ಯುಸಿ’ ಹೇಳುದರ ಬದಲು ಹಳ್ಳಿಲಿಪ್ಪವ° ‘ತೋಟಲ್ಲಿ ಕೆಲಸ ಮಾಡ್ತಾ ಇದ್ದೆ’ ಹೇಳುದೇ ನಿಜವಾದ ಬ್ಯುಸಿ ಹೇಳಿ ಎನಗೆ ತೋರ್ತು. ಟ್ರಾಫಿಕ್ ಸೃಷ್ಟಿ ಮಾಡಿದ್ದು ಆರು? ನಾವೇ ಅಲ್ಲದಾ? ರಜ್ಜ ಸಮಯ (ಎರಡು-ಮೂರು ತಿಂಗಳು) ಬೆಂಗ್ಳೂರಿಲ್ಲಿ ಇತ್ತಿದ್ದ ಕಾರಣ ಎನಗೂ ಬೆಂಗ್ಳೂರಿನ ‘ಬ್ಯುಸಿ ಲೈಫ್’ ಗೊಂತಿದ್ದು. ಎನ್ನ ಗೆಳೆಯರೇ ಕೆಲವು ಸರ್ತಿ ಹೇಂಗಿಪ್ಪ ಬ್ಯುಸಿ ಹೇಳಿ ನೋಡಿಯಪ್ಪಗ ಎನಗೂ ಬೆಂಗ್ಳೂರು ಸಾಕಾತು… ಅದು 3 ವರ್ಷ ಹಳೇ ಸಂಗತಿ. ಈಗಾಣ ಬ್ಯುಸಿ ಲೈಫ್ ಇನ್ನೂ ಬ್ಯುಸಿಯಾಗಿದ್ದಡ.

 8. ಒಳ್ಳೆದಾಯಿದು ಬರದ್ಸು.
  ಅಕ್ಷರಣ್ಣಂಗೆ ಸ್ವಾಗತ. ಎನ್ನ ಗುರ್ತ ಇದ್ದಲ್ಲದೋ? 🙂

  { ಆನು ಎಂತಕೆ ಬೆಂಗಳೂರಿಂಗೆ ಬಂದೆ?!!}
  ಬೋಸಬಾವಂಗೂ ಕೆಲವು ಸರ್ತಿ ಇದೇ ನಮುನೆ ಸಂಶಯ ಬತ್ತು…
  ಆನೆಂತಕೆ ಇಲ್ಲಿಗೆ ಬಂದೆ? – ಹೇಳಿ ಕೇಳ್ತ°, ಎಂಗಳಲ್ಲಿಗೆ ಬಂದಾದ ಮತ್ತೆ!
  ಇದುದೇ ಅದೇ ನಮುನೆಯ ಸಂಶಯವೋ ಹೇಳಿ ಗ್ರೇಶಿದೆ ಒಂದರಿ! 😉

 9. ಇದೆಲ್ಲದರ ಪಾರಿಹಾರಿಕ ಉದಯವೇ ಗ್ರಾಮರಾಜ್ಯ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *