ಸಾಧನೆಯ ಛಲ – ಅತ್ಯುತ್ತಮ ಅಮ್ಮನಾಗುವ ಆಸೆ

ನೀರಮೂಲೆ ಜಯಶ್ರೀಅಕ್ಕನ ಗೊಂತಿದ್ದೋ?  ಅವರ ಮೂಲ ನೀರಮೂಲೆ ಆದರೂ, ಸದ್ಯಕ್ಕೆ ಕೊಡೆಯಾಲಲ್ಲಿ ಇದ್ದವು.
ಯೆಜಮಾನ್ರು ಕೊಡೆಯಾಲಲ್ಲೇ ವ್ಯವಹಾರಗಾರರು. ದೊಡ್ಡ ಮಗ ಶ್ರೀಚರಣಂಗೆ ಒಂದು ತಂಗೆ ಹುಟ್ಟಿದ್ದು – ಮೊನ್ನೆ ಹದಿನೈದು ದಿನಗಳ ಹಿಂದೆ!
ಸಂತೃಪ್ತ ಕುಟುಂಬಕ್ಕೆ ಹೊಸ ಜೆನರ ಸೇರ್ಪಡೆಯ ಕೊಶಿ ಅವರ ನೆಮ್ಮದಿಯ ನೂರ್ಮಡಿ ಮಾಡಿದ್ದು.!

ಬೈಲಿನ ಮೇಲೆ ಅಗಾಧ ಪ್ರೀತಿ, ವಿಶ್ವಾಸ ಇಪ್ಪ ನಮ್ಮದೇ ಬೈಲಿನ ಅಕ್ಕ°.
ಬೈಲಿನ ಕೆಲವು ಶುದ್ದಿಗೊಕ್ಕೆ ಒಪ್ಪ ಪ್ರೋತ್ಸಾಹ ಕೊಟ್ಟು ಬೆನ್ನುತಟ್ಟುದರ ನಾವು ಕಂಡಿದು. ಈಗ ಅವ್ವೇ ಬೈಲಿಂಗೆ ಬತ್ತಾ ಇದ್ದವು!!

ಅಪ್ರತಿಮ ಗುರುಭಕ್ತಿ ಇಪ್ಪ ಜಯಶ್ರೀಅಕ್ಕ, ಗುರುಗಳ ಸಮಾಜಮುಖಿ ಬೈಲು http://hareraama.in ಲಿ ಸಕ್ರಿಯವಾಗಿ ಪ್ರತಿಕ್ರಿಯೆ ಕೊಡ್ತವು.
ಜಯಶ್ರೀ ಅಕ್ಕ ಅವರ ಅನುಭವಂಗಳ, ಅವರ ಚಿಂತನೆಗಳ, ಅವರ ಯೋಚನೆಗಳ ಬೈಲಿಂಗೆ ಹಂಚುತ್ತಾ ಇದ್ದವು.
ಎಲ್ಲೋರುದೇ ಚೆಂದಕೆ ಪ್ರೋತ್ಸಾಹ ಮಾಡಿ ಸಹಕರುಸೇಕು ಹೇಳ್ತದು ನಮ್ಮ ಹಾರಯಿಕೆ.
~
ಗುರಿಕ್ಕಾರ°

ಬಾಲ್ಯದಿಂದಲೂ ಕಲಿಯುವಿಕೆಲಿ ಅತ್ಯಂತ ಮುಂದೆ ಇದ್ದ ಎನಗೆ ಏನೋ ಒಂದು ಮಹತ್ತರವಾದ್ದು ಸಾಧಿಸುವ ಛಲ.
ಗಣಿತ, ಭೌತಶಾಸ್ತ್ರಗಳಲ್ಲಿ ಆಸಕ್ತಿ ಜಾಸ್ತಿ ಇದ್ದ ಕಾರಣ ಅತುತ್ತಮ ವಿಜ್ಹಾನಿ ಅಪ್ಪ ಕನಸು ಕಂಡೆ. ವಿಧಿ ಆ ಹಾದಿಲ್ಲಿ ಎನ್ನ ಮುನ್ನಡೆಸಿದ್ದಿಲ್ಲೇ.
ಮುಂದೆ ಸಾಫ್ಟ್ ವೇರ್ ಲಿ ಆಸಕ್ತಿ ಬೆಳದತ್ತು. ಕಂಪೆನಿಯ ಸೀನಿಯರ್ ಉದ್ಯೋಗಿಗಕ್ಕೂ ಅಚ್ಚರಿಗೊಳಿಸುವಂತಹ  ಸಾಫ್ಟ್ ವೇರ್ ಎನ್ನ ಕೈಲಿ ಮೂಡಿ ಬತ್ತ ಇತ್ತಿದ್ದು.
ಹಾಂಗೆ ಆ ಕ್ಷೇತ್ರಲ್ಲಿ ಮಹತ್ತರವಾದ್ದು ಸಾಧಿಸುವ ಕನಸು ಕಂಡೆ. ವಿಧಿ ಆ ಮಾರ್ಗಂದಲೂ ಎನ್ನ ಹಿಂದೆ ಕರಕ್ಕೊಂಡು ಬಂತು. ಕೊನೆಗೆ ವಿಧಿ ಎನಗೆ ಕೊಟ್ಟದು ಅಮ್ಮನಾಗುವ ಅವಕಾಶ.

ಸುಖೀ ಸಂಸಾರದ ಅಮ್ಮ

ಸಾಧನೆಯ ಹುಚ್ಚು ಇತ್ತಿದ್ದ ಕಾರಣ ಆಲೋಚನೆ ಮಾಡಿದೆ. ಇದೂ ಸಾಧನೆಗೆ ಒಂದು ಒಳ್ಳೆ ಅವಕಾಶ.
ಭಾರತಲ್ಲಿ ಇಂದು ಮನುಷ್ಯನ ಕಂಪ್ಯೂಟರ್ ಆಗಿ ಬೆಳೆಶುವ, ಬುದ್ದಿ ಜೀವಿ ಮಾಂತ್ರ ಆಗಿ ಬೆಳೆಶುವ  ಅಮ್ಮಂದಿರು ತುಂಬಾ ಜೆನ ಇದ್ದವು.
ಆದರೆ ಮನುಷ್ಯನ ಮನುಷ್ಯನಾಗಿ,ಹೃದಯ ಜೀವಿಯಾಗಿ ಬೆಳೆಸುವ ಅಮ್ಮಂದಿರು ಎಷ್ಟು ಜೆನ ಇದ್ದವು?
ಎಲ್ಲಿ ಕೊರತೆ ಇದ್ದೋ ಅಲ್ಲಿ ಸಾಧನೆಗೆ ಒಳ್ಳೆ ಅವಕಾಶ ಅಲ್ಲದ? ಇಂದು ಆನು ಅತ್ಯಂತ ಖುಷಿಲಿ ಹೇಳುತ್ತೆ ವಿಧಿ ಎನಗೆ ಸರಿಯಾದ ದಾರಿಯನ್ನೇ ತೋರ್ಸಿದ್ದು.
ತಂಗಿಯಂದಿರೆ…
ಆನು ಈ ಹಾದಿಲ್ಲಿ ಹೆಜ್ಜೆ ಹಾಕುತ್ತ ಇದ್ದೆ. ತುಂಬಾ ಖುಷಿಲಿ ಇದ್ದೆ. ನಿಂಗಳುದೆ ಒಂದರಿ ಸರಿಯಾಗಿ ಆಲೋಚನೆ ಮಾಡಿ ಎನ್ನ ಹಾದಿಲ್ಲಿ ಬತ್ತಿರಾ?

ಜಯಶ್ರೀ ನೀರಮೂಲೆ

   

You may also like...

12 Responses

  1. ಸುಭಗ says:

    ನೀರಮೂಲೆ ಜಯಕ್ಕಂಗೆ ಹಾರ್ದಿಕ ಸ್ವಾಗತ. ಪರಿಪೂರ್ಣ ಮಾತೃತ್ವದ ನಿಂಗಳ ಕನಸು ನನಸಾಗಲಿ. ಶುಭಾಶಯಂಗೊ.

  2. jayashree.neeramoole says:

    ಎಲ್ಲರಿಂಗೂ ಧನ್ಯವಾದಂಗ… ಇಂದಿನ ಆಧುನಿಕ ಜಗತ್ತಿಲ್ಲಿ ಇದು ಎಷ್ಟು ಕಷ್ಟದ ಕೆಲಸ ಹೇಳಿ ನಿಂಗೊಗೆಲ್ಲ ಗೊಂತಿದ್ದು… ನಿಂಗಳೆಲ್ಲರ ಸಹಕಾರಂದ ಮಾಂತ್ರ ಇದು ಸಾಧ್ಯ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *