ಗ್ರಹ – ಉಪಗ್ರಹ – 6

‘ದನವಂ ಕಡಿ ಕಡಿದು ಬಸದಿಗೊಯ್ಯುತ್ತಿರ್ದರ್’ – ಇದು ಹೇಂಗೆ ಸಾಧ್ಯ?  – ಹತ್ತರಾಣ ಮನೆಯ ಸುಜಯ ಕೇಳಿದ.

ಇದು ‘ಪಂಪ ಕಂತಿಯರ ಸಂವಾದ ‘ ಲ್ಲಿ ಬಪ್ಪ ಸಮಸ್ಯೆ ಅಲ್ಲದಾ? ನಿಂಗೊಗೆ ಕನ್ನಡ ಪಾಠಲ್ಲಿ ಬಂದದಾ? ಅದರ ಹಿಂದಾಣ ಸಾಲಿಲಿ ಚಂ- ಹೇಳಿ ಬತ್ತ ಕಾರಣ ಅದು ‘ಚಂದನವಂ ಕಡಿ ಕಡಿದು ಬಸದಿಗೊಯ್ಯುತ್ತಿರ್ದರ್’ ಆವ್ತು ಹೇಳಿದೆ.  ಇದೇ ರೀತಿ ಉಪಗ್ರಹಂದ ಬಪ್ಪ ಸಿಗ್ನಲ್ ಕೂಡಾ ಎಲ್ಲಿಂದ ಶುರು ಆವ್ತು ಹೇಳಿ ತಿಳ್ಕೊಳ್ಳದ್ದೆ ವಿಶ್ಲೇಷಣೆ ಮಾಡಿದರೆ ಅನರ್ಥಕ್ಕೆ ದಾರಿ ಅಕ್ಕು. ಅದಕ್ಕಾಗಿ ಒಂದು ‘ಕೆಣಿ’ ಮಾಡ್ತವು.

ಆ ಕೆಣಿ ಯಾವದು?  – ಅವನ ಪ್ರಶ್ನೆ.

ಉಪಗ್ರಹ ತನ್ನ ಕಡೆಂದ ಸಿಗ್ನಲ್-ಗಳ ಮತ್ತೆ ಮತ್ತೆ ಕಳ್ಸುತ್ತಾ ಇರ್ತು. ಆದರೆ, ಒಂದು ವಿಶೇಷ ಸಂಕೇತವ ಪ್ರತಿ ‘ವಾಕ್ಯ’ (ಪದ ಪುಂಜ) – ದ ಶುರುವಿಲೂ ಸೇರಿಸಿ (ಯಾವದೇ ಮಂತ್ರ ಶುರು ಮಾಡೊಗ ‘ಓಂ’ ಹೇಳುವ ಹಾಂಗೆ) ಕಳ್ಸುತ್ತು. ಭೂ ಕೇಂದ್ರಲ್ಲಿ ಉಪಗ್ರಹದ ಸಿಗ್ನಲ್ -ಲಿ ಅದರ ವಿಶೇಷ ಸಂಕೇತ ಸಿಕ್ಕುವ ವರೆಗೆ ಕಾಯ್ತವು. ಅಲ್ಲಿಂದ ಮುಂದಾಣ ಪದ ಪುಂಜವ ಉಪಯುಕ್ತ ಮಾಹಿತಿ ಹೇಳಿ ಸಂಗ್ರಹ ಮಾಡಿ store ಮಾಡುತ್ತವು. ಹೀಂಗೆ ಬಪ್ಪ ಸಂಕೇತಂಗಳಲ್ಲೂ ಎರಡು ವರ್ಗ ಇದ್ದು. ಒಂದು – ಉಪಗ್ರಹದ ಸ್ಥಿತಿ-ಗತಿ (ಆರೋಗ್ಯವಾಗಿದ್ದಾ ಇತ್ಯಾದಿ) ತಿಳಿಸಿದರೆ, ಇನ್ನೊಂದು ಉಪಗ್ರಹ ಸಂಗ್ರಹ ಮಾಡಿದ ದತ್ತಾಂಶಂಗಳ (data) ತಿಳಿಸುತ್ತು. – ಈ ದತ್ತಾಂಶಲ್ಲಿ ಉಪಗ್ರಹದ ಉದ್ದೇಶಿತ ಉಪಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿ (ಹವಾಮಾನ, TV, Mobile ಸಂಕೇತಂಗ) ಇರ್ತು. ಇವು ಎರಡು  ಬೇರೆ ಬೇರೆ ಚಾನೆಲ್ (ತರಂಗಾಂತರ) ಗಳಲ್ಲಿ ಬಪ್ಪ ಕಾರಣ ಒಂದು ಇನ್ನೊಂದರ ಒಟ್ಟಿಂಗೆ ಮಿಕ್ಸ್ ಆಗಿ ತಪ್ಪು ಮಾಹಿತಿ ಆಗಿ ತಲುಪುವ ಸಾಧ್ಯತೆ ಇಲ್ಲೆ. ಇದು ರೇಡಿಯೋ ಮತ್ತೆ ಟೀವಿ ಕಾರ್ಯಕ್ರಮಂಗ ಒಂದಕ್ಕೊಂದು ತೊಂದರೆ ಮಾಡದ್ದ ಹಾಂಗೇ ಇಪ್ಪ ಒಂದು ವ್ಯವಸ್ಥೆ.

ಈಗ ಈ ಎರಡೂ ರೀತಿಯ ಮಾಹಿತಿಯ ಬಗ್ಗೆ ಹೆಚ್ಚು ವಿಚಾರ ಮಾಡುವ.

ಉಪಗ್ರಹದ ಸ್ವಾಸ್ಥ್ಯದ ಮಾಹಿತಿ

ಈಗ ನಮ್ಮ ಆರೊಗ್ಯದ ಬಗ್ಗೆ ಕೂಡಾ ಕೆಲವು ವಿಷಯಂಗಳ ಕುರಿತು ಆಗಾಗ ಗಮನ ಮಡಿಕೊಳ್ಳೆಕ್ಕು. ನಮ್ಮ ಉಸಿರಾಟ, ಜೀರ್ಣ ಕ್ರಿಯೆ ಎಲ್ಲ ದಿನಾಗಳು ಸರಿಯಾಗಿ ನಡೆಯೆಕ್ಕಾದ ವಿಷಯಂಗ ಆದರೆ ನಮ್ಮ ಶುಗರ್, ಬೀಪಿ, ಈ ಕೆಲವರ ವರ್ಷಕ್ಕೆ ಎರಡು ಸರ್ತಿ ಚೆಕ್-ಅಪ್ ಮಾಡುದಲ್ಲದಾ? ಅದೇ ರೀತಿ ಉಪಗ್ರಹ ಕೂಡಾ ತುಂಬಾ ಮುಖ್ಯ ಮಾಹಿತಿಗಳ ಪ್ರತೀ ವಾಕ್ಯಲ್ಲೂ ಹೇಳಿದರೆ, ಇನ್ನು ಕೆಲವರ ಪ್ರತಿ 8 ವಾಕ್ಯಂಗೊಕ್ಕೆ ಒಂದು ಸರ್ತಿ ಹೇಳ್ತು. ಪ್ರತೀ ವಾಕ್ಯದ ಶುರುವಿಂಗೂ ಆಯಾ ವಾಕ್ಯದ ‘ಕ್ರಮ ಸಂಖ್ಯೆ’ ಸೇರಿಸಿಯೇ ಕಳಿಸುವ ಕಾರಣ ಭೂಮಿಲಿಪ್ಪ ಕಂಪ್ಯೂಟರ್ -ಗ ಅದರ ಸರಿಯಾದ ರೀತಿಲಿ ವಿಶ್ಲೇಷಣೆ ಮಾಡಿ ಪರದೆಲಿ ವಿಜ್ಞಾನಿಗೊಕ್ಕೆ ತೋರಿಸುತ್ತವು.

ಇನ್ನು ನಿಜವಾದ ಉಪಯೋಗಕ್ಕಿಪ್ಪ ಮಾಹಿತಿ

ಈ ಸಂಕೇತಂಗಳ ಪ್ರಮಾಣ ಸ್ವಾಸ್ಥ್ಯ ಮಾಹಿತಿಯ ಪ್ರಮಾಣಕ್ಕಿಂತ ಎಷ್ಟೋ ಪಾಲು ಹೆಚ್ಚು. ಬಪ್ಪ ವೇಗವೂ ಹೆಚ್ಚು. ಸಾವಿರಾರು ಟೆಲಿಫೋನ್ ಕರೆಗಳ, ನೂರಾರು TV ಪ್ರೋಗ್ರಾಂಗಳ ಹೊತ್ತು ತಪ್ಪ ಈ ವ್ಯವಸ್ಥೆಗೆ ಹೆಚ್ಚಿನ ಸಾಮರ್ಥ್ಯ ಇಪ್ಪ ತರಂಗಾಂತರ ಬೇಕಾವ್ತು. (2G ತರಂಗ ಹಂಚಿಕೆ ಹೇಳುವ ಪ್ರಕರಣ ಇಂಥಾ ತರಂಗಂಗಳ ಕುರಿತೇ ನಡದ್ದು.)

ಅಷ್ಟೆಲ್ಲಾ ಮಾಹಿತಿಗಳ ಮಹಾಪೂರವನ್ನೇ ಏಕ ಕಾಲಕ್ಕೆ ಅದು ಹೇಂಗೆ ಉಸ್ತುವಾರಿ ಮಾಡುತ್ತು?

ಈಗ ಉಪ್ಪಿನ ಒಂದು ಕಡೆಂದ ಇನ್ನೊಂದು ಕಡೆಗೆ ಸಾಗಿಸುಲೆ ಒಂದು ಕಾಲ್ಪನಿಕ ವ್ಯವಸ್ಥೆಯ ಹೀಂಗೆ ಮಾಡುಲಕ್ಕು – ಆ ಉಪ್ಪಿನ ನೀರಿಲಿ ಕರಗಿಸಿ, ಆ ಉಪ್ಪುನೀರಿನ ಪೈಪ್ ಮೂಲಕ ಬೇಕಾದಲ್ಲಿಗೆ ಸಾಗಿಸಿ, ಅಲ್ಲಿ ಪುನ: ನೀರಿನ ಆವಿ ಮಾಡಿದರೆ ಅಲ್ಲಿ ಉಪ್ಪು ಸಿಕ್ಕುತ್ತು. ಹೀಂಗೇ ಕಳ್ಸೆಕ್ಕಾದ ನಿಜವಾದ ಸಂಕೇತವ (ಮಾತು, ಸಂಗೀತ, ಚಿತ್ರ, ಚಲನಚಿತ್ರ)ವ ಒಂದು ಮೂಲಭೂತವಾದ ತರಂಗ (ಅದಕ್ಕೆ ವಾಹಕ ತರಂಗ – carrier signal ಹೇಳ್ತವು). ಈ ವಾಹಕ ತರಂಗದ ಮೇಲೆ ನಿಜವಾದ ತರಂಗವ ಆರೋಪ ಮಾಡಿ ಅದರ ಗುರಿ ಮುಟ್ಟಿದ ಮೇಲೆ ಮೂಲಭೂತ ತರಂಗವ ‘ಸೋಸಿ’ ನಿಜವಾದ ತರಂಗವ ಮಾತ್ರ ಉಪಯೋಗ ಮಾಡ್ತವು. ಇದಕ್ಕೆ ಮೋಡ್ಯುಲೇಶನ್ (modulation) ಹೇಳಿ ಹೆಸರು.

ಮತ್ತೆ ಇಬ್ರಿಬ್ರು ಮಾತಾಡಿದ್ದು ಒಂದಕ್ಕೊಂದು ಮಿಶ್ರ ಆವ್ತಿಲ್ಲೆ ಏಕೆ?

ಇದು ಎರಡು ಹಂತಲ್ಲಿ ಕೆಲಸ ಮಾಡ್ತು – ಒಂದು ರೀತಿಲಿ ‘ಅಷ್ಟಾವಧಾನ’ ಮಾಡಿದ ಹಾಂಗೆ ಎಲ್ಲರ ಮಾತನ್ನೂ ಒಂದು ಚೂರು ಹೊತ್ತು ಸ್ವೀಕರಿಸಿ ಮತ್ತಾಣ ಕ್ಷಣಲ್ಲಿ ಇನ್ನೊಬ್ಬನ ಮಾತಿಂಗೆ ಗಮನ ಕೊಟ್ಟ ಹಾಂಗೆ ಇದೂ ಕೂಡಾ. ಇದು ಒಂದು ಹಂತ.

ಅದಲ್ಲದ್ದೆ, ಇನ್ನೊಂದು ಹಂತಲ್ಲಿ ಆ ರೀತಿಯ ಎಷ್ಟೋ ಜನಂಗಳ ಮಾತುಗಳ ಏಕ ಕಾಲಕ್ಕೆ ಸಾಗಿಸುಲೆ ಇಪ್ಪ ಏರ್ಪಾಡು. ಈ ಸಾಮರ್ಥ್ಯಕ್ಕೆ band width ಹೇಳುದು. ದೊಡ್ಡ ಬಸ್ಸಿಲಿ ಹೆಚ್ಚು ಜೆನ ಹೋಪಲೆ ಎಡಿಗಾದ ಹಾಂಗೆ. 

ಈ ತರಂಗ, ತರಂಗಾಂತರ ಇವುಗಳ ಬಗ್ಗೆ ಇನ್ನೊಂದು ಸಂದರ್ಭಲ್ಲಿ ಮಾತಾಡುವ.

ಪಟಿಕಲ್ಲಪ್ಪಚ್ಚಿ

   

You may also like...

7 Responses

 1. ಚೆನ್ನೈ ಭಾವ° says:

  [ ‘ಚಂದನವಂ ಕಡಿ ಕಡಿದು], [ ‘ಓಂ’ ಹೇಳುವ ಹಾಂಗೆ], [ಶುಗರ್, ಬೀಪಿ, ] [ ಮಾತು, ಸಂಗೀತ, ಚಿತ್ರ, ಚಲನಚಿತ್ರ] ‘ಅಷ್ಟಾವಧಾನ’ ….. – ಅಪ್ಪಚ್ಚಿ ರೈಸಿದ್ದು. ಸರಳವಾಗಿ ನಿಂಗೊ ವಿವರುಸುವ ಕ್ರಮ ಚಿಂದ ಆಯ್ದು ಹೇಳ್ವದಕ್ಕಿಂತ ಸುಲಭಕ್ಕೆ ಅರ್ಥ ಆವ್ತ ಹಾಂಗೆ ಇದ್ದು. ಕೋಲೇಜಿಲ್ಲಿ ಅರ್ಥಶಾಸ್ತ್ರಕ್ಕೆ ಲೆಕ್ಚರ್ ಒಬ್ಬ ಇತ್ತಿದ್ದ…. ಹೀಂಗೇ.. ಇಡೀ ದೇಶದ ಅರ್ಥಿಕ ವ್ಯವಸ್ಥೆಯ ವಿವರುಸುವಾಗ ನಮ್ಮ ಮನೆ ತೋಟ ಗೆದ್ದೆ ಭೂಮಿ ಆದಾಯ.. ಅನ್ವಯಿಸಿ ಪಾಠ ಮಾಡುಗು. ಎಂಗೊಗೂ ಆವಳಿಕೆ ಬಪ್ಪದೋ.. ಒರಕ್ಕು ತೂಗೊದು ಆಗ್ಯೊಂಡಿತ್ತಿದ್ದಿಲ್ಲೆ.

  ನಮೋ ನಮಃ ಅಪ್ಪಚ್ಚಿ. ಬಪ್ಪ ಬುಧವಾರಕ್ಕೆ ಇನ್ನು 7 ದಿನ ಕಾಯೆಕು.

 2. ಗೋಪಾಲ ಬೊಳುಂಬು says:

  ಅದಾ, ಆನು ಹೇಳೆಕಾದ್ದರ ಎಲ್ಲವನ್ನೂ ಚೆನ್ನೈ ಭಾವಯ್ಯನೇ ಹೇಳಿ ಬಿಟ್ಟ. ಪ್ರತಿ ಸೂಕ್ಷ್ಮ ವಿಷಯಂಗವಕ್ಕು ಉದಾಹರಣೆ ಕೊಟ್ಟು ವಿವರುಸಿ ಹೇಳಿದ ಅಪ್ಪಚ್ಚಿ ಬರೆತ್ತ ಶೈಲಿ ಅದ್ಭುತ. ಲೇಖನವ ಸುರು ಮಾಡಿದ ಬಗೆಯೇ ಚೆಂದ. ಒಳ್ಳೆ ಮಾಹಿತಿ ಕೊಟ್ಟತ್ತು ಲೇಖನ. ಧನ್ಯವಾದಂಗೊ ಅಪ್ಪಚ್ಚಿ.

 3. ಪಟಿಕ್ಕಲ್ಲಪ್ಪಚ್ಚಿ says:

  ಚೆನ್ನೈ ಭಾವ, ಬೊಳುಂಬು ಗೋಪಾಲಣ್ಣ, ನಿಂಗಳ ಉತ್ತೇಜನದ ಮಾತುಗೊಕ್ಕೆ ಧನ್ಯವಾದಂಗ.

 4. ಶರ್ಮಪ್ಪಚ್ಚಿ says:

  2G, 3G ಹೇಳಿ ಮಾತಾಡ್ತು. ಟೀವಿ ನೋಡುತ್ತು, ಫೋನಿಲ್ಲಿ, ಮೊಬೈಲಿಲ್ಲಿ ಮಾತಾಡುತ್ತು.
  ಈಗ ಅದರ ಸಿಗ್ನಲ್ ನವಗೆ ಬತ್ತ ಬಗ್ಗೆ ಮಾಹಿತಿ ಸಿಕ್ಕಿತ್ತು.
  ಎಲ್ಲರಿಂಗೂ ಅರ್ಥ ಆವ್ತ ಹಾಂಗೆ ಸರಳವಾಗಿ, ಉದಾಹರಣೆ ಮೂಲಕ ವಿವರಿಸಿದ್ದು ಲಾಯಿಕ ಆಯಿದು

 5. ತೆಕ್ಕುಂಜ ಕುಮಾರ ಮಾವ° says:

  ವಿಜ್ಞಾನ ಸಾಹಿತ್ಯ ಎರಡರ ಮಿಲನದೊಟ್ಟಿಂಗೆ ನಿರೂಪಣೆ ತುಂಬ ಲಾಯಿಕಿದ್ದು.

 6. ಪಟಿಕ್ಕಲ್ಲಪ್ಪಚ್ಚಿ says:

  ಶರ್ಮಪ್ಪಚ್ಚಿಗೂ, ತೆಕ್ಕುಂಜ ಕುಮಾರ ಮಾವಂಗೂ ಧನ್ಯವಾದಂಗ.

 7. sharavathi says:

  ಭಾರೀ ಲಾಯ್ಕಾಯ್ದು ಅಪ್ಪ(ಚ್ಚಿ)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *