ಗ್ರಹ – ಉಪಗ್ರಹ – 1

ಬೈಲಿಂಗೆ ಪಟಿಕ್ಕಲ್ಲಪ್ಪಚ್ಚಿ ಹೇಳಿ ಪರಿಚಯ ಆವ್ತ ಇವರ ಹೆಸರು ಪಟಿಕಲ್ಲು ಶಂಕರ ಭಟ್. ಮುಡಿಪು ಕುರ್ನಾಡಿನ ಕೊಡಕಲ್ಲು ಇವರ ಮನೆ. ಕೊಡೆಯಾಲಲ್ಲಿ ಡಿಗ್ರಿ ಮಾಡಿ ಅಂದ್ರಾಣ ಮೈಸೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ  ಕೊಣಾಜೆ ಕಾಲೇಜಿಲಿ 1976ರಲ್ಲಿ ಲೆಕ್ಕಲ್ಲಿ ಎಂ ಎಸ್ಸಿ ಮಾಡಿ ಮೊದಲ ರೇಂಕು ಪಡದವು. ನಂತ್ರ  ಇನ್ಫ಼ಾರ್ಮೇಶನ್ ಟೆಕ್ನೋಲೆಜಿಲಿ ಕೂಡ ಎಂಎಸ್ಸಿ ಮಾಡಿದ್ದವು. ಕಲಿಯುವಿಕೆ ನಂತ್ರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಸೇರಿ 1978ರಿಂದ 1995ರವರೆಗೆ ವಿವಿಧ ಹುದ್ದೆಗಳ ಅಲಂಕರಿಸಿದವು. ಐಆರ್‍ಎಸ್ 1ಸಿ(IRS-1C) ಉಪಗ್ರಹ ನಿರ್ಮಾಣದ ಪ್ರೊಜೆಕ್ಟ್ ಮ್ಯಾನೇಜರ್ (ಡಾಟಾ ಪ್ರೊಸೆಸಿಂಗ್) ಆಗಿತ್ತವು. ಇಸ್ರೋದ “ಇಸ್ರೋ ಸೋಪ್ಟ್ ವೇರ್ ಇಂಜಿನಿಯರಿಂಗ್ ಗೈಡ್‍ಲೈನ್” ಪುಸ್ತಕದ ಸಹಕತೃ ಕೂಡಾ.

1996ರಲ್ಲಿ ಅಮೇರಿಕಕ್ಕೆ ಹೋಗಿ ಅಲ್ಲಿ ಹಿರಿಯ ಸೋಪ್ಟ್ ವೇರ್ ಇಂಜಿನಿಯರ್ ಆಗಿ 2000ದವರೆಗೆ ಕೆಲಸ ಮಾಡಿದವು. 2001ರಲ್ಲಿ ಭಾರತಕ್ಕೆ ಬಂದ ನಮ್ಮ ಗುರುಗಳ ಅಶಯಲ್ಲಿ ಆರಂಭ ಆದ ಶ್ರೀ ಭಾರತೀ ಕಾಲೇಜಿನ ಪ್ರಿನ್ಸಿಪಾಲ್ ಆಗಿ 2006ರವರೆಗೆ ಒಳ್ಳೆಯ ರೀತಿಲಿ ಮುನ್ನಡೆಸಿದ್ದವು. ಪ್ರಸ್ತುತ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪೆನಿಗೆ ಸೋಪ್ಟ್ ವೇರ್ ಕನ್ಸಲ್ಟೆಂಟ್ ಆಗಿ ವಾರಕ್ಕೆ ಮೂರು ದಿನ ಕೆಲಸ ಮಾಡಿರೆ ಉಳುದ ದಿನ ಊರಿನ ಕೃಷಿ ಭೂಮಿಲಿ ಕೃಷಿ ಮಾಡ್ತ, ಅಪ್ಪ ಅಮ್ಮ ಹೆಂಡತಿಯೊಟ್ಟಿಂಗೆ ಜೀವನ ಮಾಡ್ತಾ ಇದ್ದವು. ಶರಾವತಿ, ಗಂಗಾ ಹೇಳ್ವ ಇಬ್ರು ಮಕ್ಕಳ ಒಳ್ಳೆ ಮನೆಗೆ ಮದುವೆ ಮಾಡಿಕೊಟ್ಟು ಅಜ್ಜನೂ ಆಯಿದವು. ತತ್ವಶಾಸ್ತ್ರ, ಬ್ರಹ್ಮಜ್ಞಾನ, ಸಂಗೀತಲ್ಲಿ ಆಸಕ್ತಿ ಇಪ್ಪ ಇವು ಅಗತ್ಯ ಬಿದ್ದರೆ ಚೆಂಡೆ – ಮದ್ದಳೆ ಕೂಡಾ ಬಾರ್ಸುಗು.

ಇವರತ್ರೆ ಬೈಲಿಂಗೆ ಬಂದು ಬಾಹ್ಯಾಕಾಶ ವಿಜ್ಞಾನ, ವಿಜ್ಞಾನ ವಿಷಯಂಗಳ ಬಗ್ಗೆ ಮಾಹಿತಿ ಕೊಡೆಕ್ಕು ಹೇಳಿ ಕೇಳಿಯೊಂಡಪ್ಪಗ ಕೊಶಿಲಿ ಒಪ್ಪಿ ಬೈಲಿಂಗೆ ಬತ್ತಾ ಇದ್ದವು. ಯೇವತ್ತಿನಾಂಗೆ ಇವಕ್ಕೂ ನಿಂಗಳ ಪ್ರೋತ್ಸಾಹ ಇರಳಿ°

~
ಗುರಿಕ್ಕಾರ°

~~

ಮಾರ್ನೆಮಿ ರಜೆಲಿ ಬಂದ ಪುಳ್ಳಿ ಪ್ರಣವ ನಿನ್ನೆ ಇರುಳು ಎನ್ನೊಟ್ಟಿಂಗೇ ಮನುಗಿತ್ತಿದ್ದ. ಕಥೆ ಕೇಳಿಯೊಂಡು ಒರಗುದು ಅವಂಗೆ ಇಷ್ಟ. ಹಾಂಗೇ ಭಗೀರಥನ ಕಥೆ ಹೇಳಿ ಒರಗಿಸಿತ್ತಿದ್ದೆ. ಎದ್ದ ಕೂಡ್ಲೇ ಕೇಳಿದ – ಅಜ್ಜ, ನಿಂಗೊ ಉಪಗ್ರಹ ಕೇಂದ್ರಲ್ಲ್ಲಿ ಕೆಲಸ ಮಾಡಿದ್ದಿ ಹೇಳಿ ಅಮ್ಮ ಹೇಳಿಯೊಂಡಿತ್ತು. ಈ ಗ್ರಹ, ಉಪಗ್ರಹ ಹೇಳಿದರೆ ಎಂತ? ಈ ಬಗ್ಗೆ ಎನಗೂ ಅವಂಗೂ ನಡೆದ ಮಾತುಕತೆಗೊ-

ಅಜ್ಜ: ಗ್ರಹ ಹೇಳಿದರೆ ಸೂರ್ಯಂಗೆ ಸುತ್ತು ಬಪ್ಪ ಭೂಮಿ, ಮತ್ತು ಭೂಮಿಯ ಹಾಂಗೇ ಇಪ್ಪ ಶುಕ್ರ, ಮಂಗಳ ಎಲ್ಲ. ಅವರ ಇಂದು ಇರುಳು ನಿನಗೆ ತೋರಿಸುತ್ತೆ.

ಪ್ರ: ಮತ್ತೆ ಚಂದ್ರ?

ಚಂದ್ರಂಗೆ ಉಪಗ್ರಹ ಹೇಳ್ತವು. ಸೂರ್ಯಂಗೆ ಸುತ್ತು ಬಪ್ಪವಕ್ಕೆ ಗ್ರಹ ಹೇಳಿಯೂ, ಯಾವುದೇ ಗ್ರಹಕ್ಕೆ ಸುತ್ತು ಬಪ್ಪವಕ್ಕೆ ಉಪಗ್ರಹ ಹೇಳಿಯೂ ಹೆಸರು. ಮನುಷ್ಯರು ಮಾಡಿ ಹಾರಿಸಿ ಬಿಟ್ಟ – ಭೂಮಿಗೆ ಸುತ್ತು ಬತ್ತಾ – ಇಪ್ಪ ಯಂತ್ರಂಗೊಕ್ಕೆ ಕೃತಕ ಉಪಗ್ರಹ ಹೇಳಿಯೂ ಹೇಳ್ತವು.

ಪ್ರ: ಎಲ್ಲ ಒಂದೊಂದೇ ವಿವರ್ಸಿ ಅಜ್ಜ. ಈಗ ನಾವು ಎಷ್ಟೇ ಎತ್ತರಕ್ಕೆ ಕಲ್ಲು ಇಡುಕ್ಕಿದರೂ ಕೆಳ ಬೀಳ್ತು. ಅದು ಹೇಂಗೆ ಉಪಗ್ರಹ ವಾಪಸ್ ಬೀಳದ್ದೆ, ಭೂಮಿಗೆ ಸುತ್ತು ಬಪ್ಪದು?

ತನ್ನ ಸುತ್ತ ಇಪ್ಪ ಎಲ್ಲವನ್ನೂ ಭೂಮಿ ಕೆಳಂಗೆ ಎಳೆತ್ತ ಕಾರಣವೇ, ತೆಂಗಿನ ಕಾಯಿ ಕೆಳ ಬೀಳುದು. ಭೂಮಿಯ ಆ ಶಕ್ತಿಗೆ ಗುರುತ್ವಾಕರ್ಷಣ ಶಕ್ತಿ ಹೇಳ್ತವು. ನಾವು ಮೇಲಂಗೆ ಇಡುಕ್ಕುವಗ ತುಂಬಾ ಶಕ್ತಿ – ಹೇಳಿರೆ – ಭೂಮಿಯ ಎಳೆತವನ್ನೂ ಮೀರುವಷ್ಟು ಶಕ್ತಿ ಹಾಕಿ ಹೈ-ಸ್ಪೀಡಿಲಿ ಇಡುಕ್ಕಿದರೆ ಆ ಕಲ್ಲೂ ಕೂಡ ಕೆಳ ಬೀಳದ್ದೆ, ಅಲ್ಲೇ ಸುತ್ತುಗು ಅಥವಾ ಭೂಮಿಂದ ದೂರ, ದೂರ ಹೋಯಿಕ್ಕೊಂಡೇ ಇಕ್ಕು – ಅದರ ಸ್ಪೀಡಿನ ಹೊಂದಿಯೊಂಡು.

ಪ್ರ: ಆ ಸ್ಪೀಡಿನ ಲೆಕ್ಕಕ್ಕೆ ನಿಂಗಳ ಗಣಿತ ಬೇಕಾವ್ತಾಯಿಕ್ಕಲ್ಲದ. ನಿಂಗೊ ಗಣಿತಲ್ಲಿ ಭಾರೀ ಉಶಾರಿ ಹೇಳ್ತವು. ಎನಗೂ ಗಣಿತ ಹೇಳಿದರೆ ಬಾರೀ ಖುಶಿ. ಹೆಚ್ಚಾಗಿ 100 ಕ್ಕೆ 100 ಸಿಕ್ಕುತ್ತು ಎನಗೆ ಪರೀಕ್ಷೆಗಳಲ್ಲಿ. ಅದು ಬಿಡಿ, ಈಗ ವಿಷಯಕ್ಕೆ ಬಪ್ಪ, ಅಷ್ಟು ಶಕ್ತಿ ಹಾಕಿ ಉಪಗ್ರಹವ ಹಾರಿಸೊದು ಹೇಂಗೆ? ಅದರ ಹೇಳಿ.

ಅದಕ್ಕೆ ಉಪಯೋಗ ಅಪ್ಪ ವಾಹನಕ್ಕೆ ರೋಕೆಟ್ ಹೇಳ್ತವು. ನಮ್ಮ ದೇಶಲ್ಲಿ ಕೇರಳದ ತಿರುವನಂತಪುರಲ್ಲಿಯೂ, ಇನ್ನೊಂದು ದಿಕ್ಕೆ ತಮಿಳು ನಾಡಿನ ಮಹೇಂದ್ರಗಿರಿ ಹೇಳುವಲ್ಲಿಯೂ ಅದರ ತಯಾರಿಸುತ್ತವು. ನಾವು ದೀಪಾವಳಿ ಹಬ್ಬಕ್ಕೆ ರೋಕೆಟ್ ಹಾರಿಸುತ್ತಲ್ಲದಾ? ಇದೂ ಹಾಂಗೇ ತುಂಬ ದೊಡ್ಡ್…ಡ ರೋಕೆಟ್. ಅದರ ಹಾರಿಸೊದು ಮಾತ್ರ ಬೇರೆ ಜಾಗೆಲಿ.

ಪ್ರ: ಅದೆಂತಕೆ ಬೇರೆ ಜಾಗೆಲಿ? ಇಲ್ಲಿಂದ, ಕೊಡಕ್ಕಲ್ಲಿಂದ – ನಮ್ಮ ಮನೆಂದ – ಹಾರಿಸುಲಕ್ಕ? ದೊಡ್ಡ ಹೇಳಿದರೆ ಎಷ್ಟು ದೊಡ್ಡ? ಆ ರೋಕೆಟ್ಟಿನ ಒಳ ಎಂತ ಮದ್ದು ತುಂಬುಸುತ್ತವು?

ಈ ನಾಲ್ಕೂ ಪ್ರಶ್ನೆಗೊಕ್ಕೆ ಉತ್ತರ ಹೇಳ್ತೆ. ನೀನೀಗ ಜಾಣ ಅಲ್ಲದಾ? ಮದಾಲು ಹಲ್ಲು ತಿಕ್ಕಿ, ಮೋರೆ ತೊಳದಿಕ್ಕಿ, ಟಾಯ್ಲೆಟ್ಟಿಂಗೆ ಹೋಗಿ ಬಾ.

ಪ್ರ: ಆತಜ್ಜಾ. ಮತ್ತೆ ಹೇಳೆಕ್ಕು ನಿಂಗೊ. ತಪ್ಪಿಸುಲಾಗ.

ಅವ ಬರೆಕ್ಕಾರೆ, ಒಂದು ಕಪ್ಪು ಕಾಫಿ ಕುಡಿವ ಹೇಳಿ ಅಡಿಗೆ ಮನೆಗೆ ಓಡಿದೆ. ಮತ್ತೆ ಕಾಂಬ.

ಪಟಿಕಲ್ಲಪ್ಪಚ್ಚಿ

   

You may also like...

24 Responses

 1. ಪಟಿಕ್ಕಲ್ಲಪ್ಪಚ್ಚಿ says:

  ಲೇಖನ ಮೆಚ್ಚಿದ ಎಲ್ಲೋರಿಂಗೂ ಕೃತಜ್ಞತೆಗ. ಎರಡನೇ ಭಾಗ ತಯಾರಾವ್ತಾ ಇದ್ದು.

 2. ಉಡುಪುಮೂಲೆ ಅಪ್ಪಚ್ಚಿ says:

  ಬಾರಿ ಲಾಯಕಾಗಿ ಬಯಿ೦ದಪ್ಪಚ್ಚಿ ಅಜ್ಜ- ಪುಳ್ಳಿಯ ಸ೦ಭಾಷಣೆ. ಈ ನೆಪಲ್ಲಿ ಬೈಲಿ೦ಗೆ ಇಳಿಶಿದ ಪುಳ್ಳಿಗೂ ನಿ೦ಗಗು ಒಟ್ಟಿ೦ಗೆ ಧನ್ಯ ವಾದ ಹೇಳ್ತಾ ಇದ್ದೆ.ಮತ್ತೆ ಮು೦ದಾಣ ಕ೦ತಿನ ಕಾಯ್ತಾ ಇದ್ದಿಯೊ°.

 3. ಬೆಟ್ಟುಕಜೆ ಮಾಣಿ says:

  ಬೈಲಿಂಗೆ ಸ್ವಾಗತ..ಹೀಂಗೆ ಉಪಯುಕ್ತ ಮಾಹಿತಿಗ ಬರ್ತಾ ಇರಲಿ….

 4. ಶರ್ಮಪ್ಪಚ್ಚಿ says:

  ಪಟಿಕ್ಕಲ್ಲು ಅಣ್ಣಂಗೆ, ಬೈಲಿಂಗೆ ಸ್ವಾಗತ
  ಸಂಭಾಷಣಾ ರೀತಿಲಿ ಪ್ರಸ್ತುತ ಪಡಿಸಿದ್ದು ಲಾಯಿಕ ಆಯಿದು. ಮುಂದಾಣದ್ದಕ್ಕೆ ಕಾಯ್ತಾ ಇದ್ದೆಯೊ°

 5. ಮಾನೀರ್ ಮಾಣಿ says:

  ಪಟಿಕಲ್ಲಪ್ಪಚ್ಚಿಗೆ ಬೈಲಿ೦ಗೆ ಸ್ವಾಗತ. ಬರಹದ ಶೈಲಿ ಚೊಲೋ ಆಯ್ದು.
  ನಿ೦ಗಳ ಬಗ್ಗೆ ತಿಳಿದದ್ದೂ ಬಹಳ ಖುಷೀ ಆಯ್ದು. ಹಾ೦ಗೇ ಐನ್ ಸ್ಟೀನ್ ಹೇಳಿದ ಒ೦ದು ಮಾತು ನೆನಪಾತು “ಧರ್ಮವಿಲ್ಲದ ವಿಜ್ನಾನ ಹೆಳವನ೦ತೆ, ವಿಜ್ನಾನವಿಲ್ಲದ ಧರ್ಮ ಕುರುಡನ೦ತೆ”. ನಿಮ್ಮಿ೦ದ ಎರಡೂ ಬಗೆಯ ಜ್ನಾನ ಪಡೆವ ಕಾತುರದಲ್ಲಿ – ಮಾನೀರ್ ಮಾಣಿ” 🙂

  • ಪಟಿಕಲ್ಲಪ್ಪಚ್ಚಿ says:

   ನಿಂಗಳ ಮೆಚ್ಚುಗೆಯ ಮಾತುಗೊಕ್ಕೆ ಧನ್ಯವಾದಂಗ. ಮತ್ತೆ ಕಾಂಬ.

 6. ಮಾವಾ°..
  ಲಾಯಿಕಾಯಿದು.. ಧನ್ಯವಾದ 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *