ಗ್ರಹ – ಉಪಗ್ರಹ – 2

October 25, 2012 ರ 7:04 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊಶಿ ಅಕ್ಕಿ ಸೇಮಗೆ, ಬೆಲ್ಲ-ಕಾಯೆಲು ಸೇರಿಸಿ ಗಡದ್ದು ತಿಂದಿಕ್ಕಿ ಚಾವಡಿಲಿ ಕೂದುಗೊಂಡು ಇಪ್ಪಗ ಮತ್ತೆ ಮಾತುಕತೆ ಸುರುವಾತು.

ಅಜ್ಜ, ರಾಕೆಟ್ ತಯಾರಿಸೊದು ಒಂದಿಕ್ಕೆ, ಹಾರಿಸೊದು ಇನ್ನೊಂದಿಕ್ಕೆ ಹೇಳಿದ್ದಿ ನಿಂಗೊ. ಅದೆಂತಕೆ. ರಜಾ ವಿವರಿಸಿ ಎನಗೆ.

 ಈಗ ನೋಡು, ದೀಪಾವಳಿ ಹಬ್ಬಕ್ಕೆ ನಾವು ಹಾರ್ಸುವ ರೋಕೆಟ್ಟೇ ಒಂದೊಂದು ಸರ್ತಿ, ಎಲ್ಲೆಲ್ಲೋ ಹೋಗಿ, ಅಡಿಗೆ ಮನೆಲಿ, ಚಾವಡಿಲಿ ನೋಡಿಗೊಂದಿಪ್ಪವರ ಮೈ ಮೇಲೆ ಬೀಳೊದೂ ಇದ್ದಲ್ಲದ? ಅದಕ್ಕೇ ಅಲ್ಲದಾ ನಾವು ಸುಡುಮದ್ದು ಹೊಸ್ಸೊಗ ಆದಷ್ಟೂ ಜಾಗ್ರತೆ ಮಾಡೆಕ್ಕು ಹೇಳೊದು. ಅದರಲ್ಲೂ ಕಣ್ಣಿನ, ಮೋರೆಯ ಬಗ್ಗೆ ಇನ್ನೂ ಹೆಚ್ಚು ಜಾಗ್ರತೆ ಮಾಡೆಕ್ಕು. ಹಾಂಗೇ ಈ ಉಪಗ್ರಹವ ಆಕಾಶಲ್ಲಿ ಬಿಡುವ ರೋಕೆಟ್ ಹಾರ್ಸೊಗ ಕೂಡಾ. ಅದು ನಾವು ಹಬ್ಬಕ್ಕೆ ಹೊಸ್ಸುವ ರೋಕೆಟ್ ಗಿಂತ ಸಾವಿರಾರು ಪಾಲು, ಲಕ್ಷ ಪಾಲು ಹೆಚ್ಚು ದೊಡ್ಡ ಅದು. ಅದುದೇ ಒಂದೊಂದು ಸರ್ತಿ ನಾವು ನೆನಸಿದ ಹಾಂಗೇ ಹೋಕು ಹೇಳುಲೆ ಆವ್ತಿಲ್ಲೆ. ‘ಕಿಚ್ಚು’ ಕೊಟ್ಟ ಕೂಡ್ಲೇ  ಇದ್ದ ಜಾಗೆಲೇ ಹೊಟ್ಟೊದೂ ಇದ್ದು. ಅಥವಾ ಕೆಲವು ಸರ್ತಿ ಮೇಲೆ ಎದ್ದ ಮತ್ತೆ, ದಿಕ್ಕು ಬದಲಿಸಿ ಬಂದು ಎಲ್ಲೆಲ್ಲಿಯೋ ಬೀಳೊದೂ ಇದ್ದು. ಅದರಂದಾಗಿ ಸುತ್ತ ಮುತ್ತ ಇಪ್ಪ ಜೆನಂಗೊಕ್ಕೆ, ಕಟ್ಟಡಂಗೊಕ್ಕೆ ಹಾನಿ ಅಪ್ಪಲಾಗ ಹೇಳುವ ಕಾರಣಂದ ಹಾಂಗಿಪ್ಪ ರೋಕೆಟ್ ಗಳ ಮನುಷ್ಯರ ವಾಸ ಇಲ್ಲದ್ದಲ್ಲಿ ಹಾರ್ಸೊದು. ರೋಕೆಟ್ ತಯಾರ್ಸಿದ ಜಾಗೆಲೇ, ಅಥವಾ ಪೇಟೆ, ಹಳ್ಳಿಗಳಲ್ಲಿ ಹಾರ್ಸುತ್ತವಿಲ್ಲೆ. ಹೆಚ್ಚಾಗಿ ಸಮುದ್ರ ಕರೆಲಿ, ಒಂದು ಹೊಡೆಲಿ ಸಮುದ್ರ, ಇನ್ನೊಂದು ಹೊಡೆಲಿ ಜೆನೆಂಗ ಇಲ್ಲದ್ದ ಖಾಲಿ ಜಾಗೆಯ ಹುಡುಕ್ಕಿ ಅಲ್ಲಿ ಒಂದು ಸ್ಪೆಷಲ್ ವ್ಯವಸ್ಥೆ ಮಾಡ್ತವು. ಅದಕ್ಕೆ ಇಂಗ್ಲಿಶಿಲಿ ಲಾಂಚ್ ಸ್ಟೇಶನ್ ಹೇಳ್ತವು.

 –          ಹಾಂಗಾದರೆ ಅದರ ಹಾರ್ಸೊದು ಆರು? ಜೆನಂಗ ಇಲ್ಲದ್ದಲ್ಲಿಂದ ಹಾರ್ಸುಲೆ ಆರಾರು ಬೇಕನ್ನೆ?

 ಒಳ್ಳೆ ಪ್ರಶ್ನೆ ಪುಟ್ಟಾ, ಹೇಳ್ತೆ ಕೇಳು. ಈ ಹಾರ್ಸುವ ಜಾಗೆಗೆ ಇಪ್ಪ ಒಟ್ಟಾರೆ ಪ್ರದೇಶಕ್ಕೆ ಲಾಂಚ್ ಕೋಂಪ್ಲೆಕ್ಸ್ ಹೇಳ್ತವು. ಅಲ್ಲಿ ರೋಕೆಟ್ ನ ಸರ್ತ ನಿಲ್ಸುಲೆ ಒಂದು ಟವರ್ ಇರ್ತು. ನಾವು ದೀಪಾವಳಿ ರೋಕೆಟ್ ನ ಬಾಟ್ಲಿಲಿ ಮಡುಗುತ್ತಲ್ಲದಾ, ಹಾಂಗೇ ಈ ಟವರ್ ಗೆ ರೋಕೆಟ್ಟಿನ ಕಟ್ಟಿ ಮಡುಗಿರ್ತವು. ಆ ಟವರಿಂಗೆ ಲಾಂಚ್ ಟವರ್ ಹೇಳ್ತವು. ಅದಕ್ಕೆ ಬೇಕಾದ ಸೂಚನೆಗಳ, ಆಜ್ಞೆಗಳ ಸುಮಾರು ಒಂದು ಏಳು … ಎಂಟು ಕಿಲೋ ಮೀಟರ್ ದೂರಲ್ಲಿಪ್ಪ ಕಂಟ್ರೋಲ್ ರೂಮ್ ಹೇಳುವಲ್ಲಿ ಇಪ್ಪ ವಿಜ್ಞಾನಿಗ ಕೊಡ್ತವು. ಟವರಿನ ಹತ್ತರೆ ಒಂದು ನೆಲ ಮಾಳಿಗೆಯ ಹಾಂಗಿಪ್ಪಲ್ಲಿ ಕೆಲವೇ ಕೆಲವು ಅತೀ ಮುಖ್ಯ ಜೆನಂಗ ಇರ್ತವು. ತುಂಬ ದಪ್ಪದ ಕೋಂಕ್ರೀಟ್ ಬ್ಲೋಕ್ ಗಳಿಂದ ಈ ನೆಲ ಮಾಳಿಗೆಯ  ಕಟ್ಟಿಪ್ಪ ಕಾರಣ ಅದಕ್ಕೆ ಬ್ಲೋಕ್ ಹೌಸ್ ಹೇಳಿಯೂ ಹೆಸರು. ರೋಕೆಟ್ ಬಿದ್ದರೂ ಹೊಡಿ ಆಗದ್ದ ಹಾಂಗೆ ಇರ್ತು ಈ ಬ್ಲೋಕ್ ಹೌಸ್.

 –          ಮತ್ತೆ ಕಿಚ್ಚು ಕೊಡೊದು ಹೇಂಗೆ ಆ ರೋಕೆಟ್ಟಿಂಗೆ?

 ನೀರು ಬೆಶಿ ಮಾಡುವ ಕರೆಂಟಿನ ಕೋಯ್ಲಿನ ಹಾಂಗೇ ಇಪ್ಪದರ ಮೂಲಕ ‘ಬೆಶಿ ಮಾಡಿ’ ಹೇಳಿ ಮಡಿಕ್ಕ ಸದ್ಯಕ್ಕೆ.

 –          ಅದರ ಒಳ ತುಂಬುಸುವ ಸುಡು ಮದ್ದು ಎಂತರದ್ದು?

 ನಾವು ಹಬ್ಬಕ್ಕೆ ಹಾರ್ಸುವ ರೋಕೆಟ್ಟಿಂಗೆ ತುಂಬಿಸುವ ಮದ್ದು ಆವ್ತಿಲ್ಲೆ ಉಪಗ್ರಹ ಹಾರ್ಸುಲೆ ಇಪ್ಪ ರೋಕೆಟ್ಟಿಂಗೆ. ಅದಕ್ಕೆ ಸಾಮಾನ್ಯವಾಗಿ ಘನ ಮತ್ತೆ ದ್ರವ ರೂಪಲ್ಲಿಪ್ಪ ಎರಡು ರೀತಿಯ ರಾಸಾಯನಿಕ ಮದ್ದು ಉಪಯೋಗ ಮಾಡ್ತವು. ಈ ಮದ್ದಿಂಗೆ ಇಂಧನ ಹೇಳಿ ಹೆಸರು ಕನ್ನಡಲ್ಲಿ. ಘನ ರೂಪಲ್ಲಿಪ್ಪ ಇಂಧನಕ್ಕೆ ಸೋಲಿಡ್ ಪ್ರೊಪೆಲ್ಲೆಂಟ್ ಹೇಳಿಯೂ, ದ್ರವ ರೂಪದ್ದಕ್ಕೆ ಲಿಕ್ವಿಡ್ ಪ್ರೊಪೆಲ್ಲೆಂಟ್ ಹೇಳಿಯೂ ಹೆಸರು. ನಿನಗೆ ವಿಜ್ಞಾನಲ್ಲಿ ವಸ್ತುವಿನ ಮೂರು ರೂಪಂಗ ಘನ, ದ್ರವ ಮತ್ತು ಅನಿಲ ಹೇಳಿ ಇದ್ದಲ್ಲದಾ? ಅದೇ ಘನ ಹೇಳಿದರೆ ಗಟ್ಟಿ, ದ್ರವ ಹೇಳಿದರೆ ನೀರಿನ ಹಾಂಗೆ ತೆಳು. ಕೇರಳದ ತಿರುವನಂತಪುರಲ್ಲಿ ಘನ ರೂಪದ ಇಂಧನವ ಉಪಯೋಗ ಮಾಡುವ ರೋಕೆಟ್ ತಯಾರ್ಸೊದು. ತಮಿಳು ನಾಡಿನ ಮಹೇಂದ್ರಗಿರಿಲಿ ದ್ರವ ಇಂಧನದ ರೋಕೆಟ್. ಅದಕ್ಕೆ ಅದಕ್ಕೆ ಬೇಕಾದ ಯಂತ್ರಂಗಳ, ಸಲಕರಣೆಗಳ ಆಯಾ ಜಾಗೆಲಿ ವ್ಯವಸ್ಥೆ ಮಾಡಿಗೊಂಡಿದವು.

 –          ಮೇಲಾಣ ಮನೆಯ ಸುಹಾಸ ಬಂದ. ಎಂಗ ರಜ್ಜ ಆಟ ಆಡಿಕ್ಕಿ ಬತ್ತೆಯ. ಮತ್ತೆ ನಿಂಗಳ ಹತ್ತರೆ ಮಾತಾಡ್ತೆ, ಆಗದಾ?

ಹಾಂಗಾಗಿ ಮತ್ತೆ ಮುಂದುವರಿತ್ತು ಎಂಗಳ ಮಾತುಕತೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹೇಳಿದ್ದಷ್ಟು ಮಂಡಗೆ ಹೊಕ್ಕತ್ತು ಅಪ್ಪಚ್ಚಿ. ಇನ್ನು ಎಂತ ಆಯ್ಕು ಹೇಳಿ ಬಾಯೊಡಕ್ಕೊಂಡು ಓದುವಾಗ ಆ ಸುಹಾಸ ಮಾಣಿ ಬಂದ° ನೋಡಿ. ಅವ° ದಸರ ರಜಗೆ ಅಜ್ಜನ ಮನಗೆ ಹೋಯ್ದನಿಲ್ಲೆಯಾ ಅಂಬಗ?!!. ಅಪ್ಪಚ್ಚಿ, ಇನ್ನು ಅವ° ಒರಗಿಪ್ಪಗ ನಿಂಗೊ ಬಂದು ಹೇಳಿ ಆತಾ

  [Reply]

  VA:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಮಕ್ಕಳ ಆಟ ಬೇಗ ಮುಗಿಯಾನ್ನೆ ? ಕಸ್ತಲೆ ಆದ ಮೇಲೆ ಹೇಳಿ ಅಪ್ಪಚ್ಚಿ.

  [Reply]

  VA:F [1.9.22_1171]
  Rating: +1 (from 1 vote)
 3. ಮಾನೀರ್ ಮಾಣಿ
  ಮಾನೀರ್ ಮಾಣಿ

  ಧನ್ಯವಾದ ಅಪ್ಪಚ್ಚಿ.
  ಆ ಸುಹಾಸನ್ನೂ ಕೂರ್ಸ್ಕ೦ಡು ಮು೦ದುವರಿಸಿ.. 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಅನು ಉಡುಪುಮೂಲೆಪೆಂಗಣ್ಣ°ವೆಂಕಟ್ ಕೋಟೂರುಸುಭಗಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿವಿದ್ವಾನಣ್ಣಪುಣಚ ಡಾಕ್ಟ್ರುಎರುಂಬು ಅಪ್ಪಚ್ಚಿಅಜ್ಜಕಾನ ಭಾವಚೆನ್ನಬೆಟ್ಟಣ್ಣನೀರ್ಕಜೆ ಮಹೇಶದೊಡ್ಮನೆ ಭಾವಬಟ್ಟಮಾವ°ನೆಗೆಗಾರ°ವೇಣಿಯಕ್ಕ°ಕಜೆವಸಂತ°ಚೂರಿಬೈಲು ದೀಪಕ್ಕಶಾ...ರೀಮಾಷ್ಟ್ರುಮಾವ°ಬಂಡಾಡಿ ಅಜ್ಜಿಶೀಲಾಲಕ್ಷ್ಮೀ ಕಾಸರಗೋಡುಒಪ್ಪಕ್ಕಡೈಮಂಡು ಭಾವರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ