ಗ್ರಹ – ಉಪಗ್ರಹ – 4

ಮಕ್ಕೊ ಪ್ರಣವ, ಸುಹಾಸ ಎಲ್ಲ ರಜೆ ಮುಗುದು ಅವರವರ ಶಾಲೆ, ಕೋಲೇಜುಗೊಕ್ಕೆ ಹೋದ ಕಾರಣ ಮನೆ, ಮನಸ್ಸು ಖಾಲಿ, ಖಾಲಿ ಆಗಿತ್ತು. ಬಹುಶ ಎನ್ನ ಹೆಂಡತ್ತಿಗೂ ಹಾಂಗೇ ಆತು. ಆನು ISRO ಬಿಟ್ಟು ಅಮೆರಿಕಕ್ಕೆ ಹೋಪಗ, ಅದರ ಬಿಟ್ಟು ವಾಪಸ್ಸು ಬಂದು ಕೋಲೇಜಿಲಿ ಪ್ರಿನ್ಸಿಪಾಲ್ ಅಪ್ಪಗ, ಅದರ ಬಿಟ್ಟು ಪುನ: ಬೆಂಗಳೂರಿಂಗೆ ಕನ್ಸಲ್ಟೆಂಟ್ ಆಗಿ ಹೋಪಲೆ ಸುರು ಮಾಡುವಗ  ಕಳೆದ ಮೂವತ್ಮೂರು ವರ್ಷಂಗಳಲ್ಲಿ ಎನ್ನ ಯಾವದಕ್ಕೂ ಪ್ರಶ್ನೆ ಮಾಡದ್ದ ಜೆನ ಇಂದು ಬಂದು ಕೇಳಿತ್ತು –

ಉಪಗ್ರಹಂಗಳ ಉಪಯೋಗ ಇನ್ನೊಂದರಿ ಹೇಳ್ತೆ ಹೇಳಿದ್ದಿ, ಅದೆಂತದು ಎನಗೆ ರಜಾ ಹೇಳಿ –

ಕಳೆದ ಸರ್ತಿ ಆನು ವಿವರಿಸಿದ ಉಪಗ್ರಹಂಗೊ ಭೂಮಿಗೆ ಸುತ್ತು ಹಾಕುವ ವರ್ಗದೋವು. ಇನ್ನು ಒಂದು ವರ್ಗ ಇದ್ದು – ಅವು ನಮ್ಮ ದೃಷ್ಟಿಗೆ ಇದ್ದಲ್ಲೇ ಇದ್ದ ಹಾಂಗಿಪ್ಪವು. ಅವುದೇ ಸುತ್ತು ಹಾಕುತ್ತವು. ಆದರೆ ಭೂಮಿಯ ಒಟ್ಟಿಂಗೇ ಅದೇ 24 ಘಂಟೆಲಿ ಭೂಮಿಗೆ ಒಂದು ಸುತ್ತು ಹಾಕುವ ಕಾರಣ ಭೂಮಿಲಿ ಇಪ್ಪ ನವಗೆ ಸಾಪೇಕ್ಷವಾಗಿ ಇದ್ದಲ್ಲೇ ಇದ್ದ ಹಾಂಗೆ ಕಾಣುತ್ತು. ಅದಕ್ಕಾಗಿ ಅವಕ್ಕೆ ‘ಭೂ ಸ್ಥಿರ  ಉಪಗ್ರಹ‘ (geo-stationary satellite) ಹೇಳಿಯೂ ಈ ಮದಲು ಹೇಳಿದವಕ್ಕೆ ‘ಪರಿಭ್ರಮಣ ಉಪಗ್ರಹ‘ (orbitting satellite) ಹೇಳಿಯೂ ವಿಜ್ಞಾನಿಗ ನಾಮಕರಣ ಮಾಡಿದ್ದವು.

ಈ ಭೂ ಸ್ಥಿರ ಉಪಗ್ರಹಂಗಳದ್ದು ಇನ್ನೊಂದು ಚೋದ್ಯ ಎಂತ ಹೇಳಿದರೆ ಅವು ಭೂಮಿಗೆ ಸುತ್ತು ಹಾಕುತ್ತಾ ಇದ್ದ ಹಾಂಗೇ ತಮ್ಮ ಸುತ್ತಲೂ ಒಂದು ದಿನಕ್ಕೆ ಒಂದು ಸುತ್ತು ಬಪ್ಪ ಕಾರಣ, ಒಂದು ಜಾಗೆಲಿ ನಿಂದು ನೋಡುವ ನವಗೆ ಆ ಉಪಗ್ರಹದ ಒಂದು ಹೊಡೆ ಮಾತ್ರ ಕಾಣುತ್ತು ಯಾವಾಗಳೂ, ಇನ್ನೊಂದು ಭಾಗ ಭೂಮಿಗೆ ವಿಮುಖವಾಗಿಯೇ ಇರ್ತು. ಹೇಂಗೆ ಚಂದ್ರ ಹತ್ತರೆ ಹತ್ತರೆ 29 ದಿನಲ್ಲಿ ಒಂದು ಸರ್ತಿ ತನ್ನ ಸುತ್ತುತ್ತಾ ಅದೇ ಅವಧಿಲಿ ಭೂಮಿಯ ಸುತ್ತಲೂ ಒಂದು ಸುತ್ತು ಬಪ್ಪ ಕಾರಣ ನವಗೆ ಚಂದ್ರನ ಒಂದೇ ಹೊಡೆ ಕಾಣೊದು. ಇನ್ನೊಂದು ಹೊಡೆ ಯವತ್ತೂ ಕಾಣ್ತಿಲ್ಲೆ – ಹಾಂಗೇ ಈ ಉಪಗ್ರಹ ಕೂಡಾ. ಇದು ಉದ್ದೇಶ ಪೂರ್ವಕ ಮಾಡಿಗೊಂಡ ಏರ್ಪಾಡು ನಾವು ಈ ಜಾತಿಯ ಉಪಗ್ರಹಂಗಳಲ್ಲಿ.

ಅದೆಂತಕೆ?

ಎಂತಕೆ ಹೇಳಿದರೆ – ಈ ಏರ್ಪಾಡಿಂದಾಗಿ ನವಗೆ ಸದಾ ಕಾಂಬ ಹೊಡೆಲಿ ಸಂಪರ್ಕ ಸಾಧನಂಗಳ ಅಳವದಿಸಿ ದಿನದ 24 ಘಂಟೆಯೂ ಅದರ ಸೌಕರ್ಯ ಸಿಕ್ಕುವ ಹಾಂಗೆ ಮಾಡುಲಾವ್ತು. ಅದಕ್ಕಾಗಿ ಈ ಉಪಗ್ರಹವ ಭೂಮಿಂದ ಸುಮಾರು 36000 ಕಿಲೋಮೀಟರ್ ದೂರಲ್ಲಿ ಆಕಾಶಲ್ಲಿ ಸ್ಥಾಪನೆ ಮಾಡೆಕ್ಕಾವ್ತು. ಮತ್ತು ಅಲ್ಲಿ ಅದು ಭೂಮಧ್ಯ ರೇಖೆಗೆ ಸಮಾನಾಂತರವಾಗಿ ಸುತ್ತು ಹಾಕೆಕ್ಕಾವ್ತು. ಆ ಒಂದು ವೃತ್ತಲ್ಲಿ 36000 ಕಿಲೋಮೀಟರ್ ದೂರಲ್ಲಿ ಯಾವ ಯಾವ ದೇಶ ಎಷ್ಟೆಷ್ಟು ವಿಸ್ತೀರ್ಣದ ಜಾಗೆಯ  ಆಕ್ರಮಿಸಿಗೊಂಬಲೆ ಅಕ್ಕು ಹೇಳಿ ನಿಗಂಟು ಮಾಡುವ ಒಂದು ಜಾಗತಿಕ ಆಡಳಿತ ಮಂಡಳಿ ಇದ್ದು. ಅದರ ಅನುಮತಿಯ ಹಾಂಗೇ ಎಲ್ಲಾ ದೇಶಂಗಳೂ ಅಲ್ಲಿ ಉಪಗ್ರಂಗಳ ಸ್ಥಾಪನೆ ಮಾಡೆಕ್ಕಾವ್ತು.

ಒಂದು ರೀತಿಲಿ ಜಾಗತಿಕ ಸರ್ಕಾರಂದ ‘ದರ್ಖಾಸ್ತು’ ತೆಕ್ಕೊಂಡ ಹಾಂಗೆ ಅಲ್ಲದಾ?

ಅಪ್ಪು ಹಾಂಗೇ. ಅಲ್ಲಿ ಏನಾದರೂ ಕಿತಾಪತಿ ಮಾಡಿದರೆ ಅಂತವರ ಶಿಕ್ಷಿಸುವ ಅಧಿಕಾರವೂ ಇದ್ದು ಅವಕ್ಕೆ.

ಹೀಂಗೆ ಯಾವಗಲೂ ಭೂಮಿಯನ್ನೇ ದಿಟ್ಟಿಸಿ ನೋಡುತ್ತಾ ಇಪ್ಪ ಉಪಗ್ರಹದ ಆ ಹೊಡೆಲಿ ಇಪ್ಪ ಉಪಕರಣಕ್ಕೆ “ಟ್ರಾನ್ಸ್ ಪೋಂಡರ್” ಹೇಳಿ ಹೆಸರು. ಭೂಮಿಂದ ಬಂದ ಸಂಕೇತವ ಒಂದು ರೀತಿಯ ‘ಪರಿವರ್ತನೆ‘ ಮಾಡಿ ವಾಪಾಸು ಭೂಮಿಗೆ ಕಳ್ಸೊದು ಅದರ ಕೆಲಸ.  ಫೋನಿಲಿ ನಾವು ಮಾತಾಡಿದ ಸ್ವರ, ಟೀವಿ ಕೇಂದ್ರಂದೋವು ಕಳುಸಿದ ವಾರ್ತೆ ಮತ್ತು ಸಿನೆಮಾ, ಮೊಬೈಲಿಲಿ ಕಳಿಸಿದ ಮಾತು, ಮೆಸೇಜು, ಚಿತ್ರ, ಸಂಗೀತ, ಇತ್ಯಾದಿ ಬೇರೆ ಬೇರೆ ರೀತಿಯ ಮಾಹಿತಿಗ ಎಲ್ಲ ಜಗತ್ತಿನ ಒಂದು ಜಾಗೆಂದ ಇನ್ನೊಂದು ಜಾಗೆಗೆ ರವಾನೆ ಆಯೆಕಾದರೆ ಹೀಂಗಿಪ್ಪ ಉಪಗ್ರಹಂಗಳಿಂದ ಸಹಾಯ ಬೇಕಾವ್ತು. ಕೇರಂ ಆಡೊಗ ‘ರಿಬ್ಬೌಂಡು’ ಬಡುದು ಕಾಯಿಯ ನವಗೆ ಬೇಕಾದ ಜಾಗೆಗೆ ನೂಕಿದ ಹಾಂಗೆ ಈ ಟ್ರಾನ್ಸ್ ಪೋಂಡರ್ ಗಳ ಉಪಯೋಗ ಆವ್ತು.

ಮತ್ತೆ ಅಲ್ಲಿ ಹಾಂಗೆ ಉಪಗ್ರಹ ಮಡುಗಿದ ಮೇಲೆ ನಿಂಗೊಗೆ – ಹೇಳಿದರೆ ನಿಂಗಳ ಹಾಂಗಿಪ್ಪ ಬೇರೆ ಬೇರೆ ವಿಜ್ಞಾನಿಗೊಕ್ಕೆ – ಎಂತ ಕೆಲಸ?

ಸುಮಾರಿದ್ದು –

1) ಅದು ತನ್ನ ಸುತ್ತಲೂ, ಭೂಮಿಯ ಸುತ್ತಲೂ ಸುತ್ತುವ ವೇಗವ ಕಾಪಾಡಿಗೊಂಬ ಹಾಂಗೆ ನೋಡಿಗೊಂಬದು.

2) ಉಪಗ್ರಹಕ್ಕೆ ಬೇಕಾದ ಕರೆಂಟಿನ ಉತ್ಪಾದನೆ ಮಾಡುವ ಸೌರ ಕೋಶಂಗಳ ಸಮೂಹ (array of solar cells) ಸರಿಯಾಗಿ ಸೂರ್ಯ ಕಿರಣಕ್ಕೆ ಎದುರಾಗಿಪ್ಪ ಹಾಂಗೆ ಇಪ್ಪ ಸ್ವಂಚಾಲಿತ ವ್ಯವಸ್ಥೆಯ ಮೇಲೆ ಗಮನ ಮಡುಗೊದು.

3) ಸೌರ ಕೋಶಂಗಳಂದ ಬಂದ ವಿದ್ಯುತ್ತಿನ ಮಡಿಕ್ಕೊಂಬ ಬ್ಯಾಟರಿಯ ಚಾರ್ಜು, ಉಷ್ಣತೆ ಇತ್ಯಾದಿ ಸರಿಯಾಗಿದ್ದ ಹೇಳಿ ನಿಗಾ ವಹಿಸೊದು. ಈ ಬ್ಯಾಟರಿ ಸತ್ತರೆ ಉಪಗ್ರಹದ heart fail ಆದ ಹಾಂಗೇ. ಮತ್ತೆ ಅದು ಜೀವ ಅಪ್ಪ ಛಾನ್ಸೇ ಇಲ್ಲೆ.

ಮತ್ತೆ ಹವಾಮಾನಕ್ಕೂ ಈ ಉಪಗ್ರಹದ ಉಪಯೋಗ ಆವ್ತು ಹೇಳಿದ್ದಿ. ಅದು ಹೇಂಗೆ?

Very High Resolution Radio Meter (VHRR)  ಹೇಳ್ತ – ಒಂದು ವಿಶೇಷ ಉಪಕರಣವ ನಮ್ಮ ಇನ್ಸಾಟ್ ಉಪಗ್ರಹಲ್ಲಿ ಅಳವಡಿಸಿದ್ದವು.. ಅದು ಭೂಮಿಯ ಅದರಲ್ಲೂ ಭಾರತದ ವಾತಾವರಣದ ಪಟ ತೆಗದು ದಿನಕ್ಕೊಂದರಿ ಕಳಿಸೊದರ ದೂರದರ್ಶನಲ್ಲಿ ‘ಹವಾಮಾನ ವರದಿ‘ ಕಾರ್ಯಕ್ರಮಲ್ಲಿ ತೋರುಸುತ್ತವು. ಅದರಲ್ಲಿ ಯಾವ ಬಾಗಲ್ಲಿ ಮೋಡ ಇದ್ದು ಇತ್ಯಾದಿ ಮಾಹಿತಿ ಇರ್ತು. ಅದರೊಟ್ಟಿಂಗೆ ಇತರ ಮೂಲಂಗಳಂದ ಸಂಗ್ರಹ ಮಾಡಿದ ಮಾಹಿತಿಯನ್ನೂ ಸೇರಿಸಿ ‘ಭಾರತೀಯ ಹವಾಮಾನ ಇಲಾಖೆ‘ ಮುಂದೆ 24 ಘಂಟೆಗಳಲ್ಲಿ ಎಂತಕ್ಕು ಹೇಳುವ ವರದಿ ತಯಾರು ಮಾಡ್ತು. ಅದರ ನವಗೆ ಬಿತ್ತರ ಮಾಡ್ತವು.

ರೋಕೆಟ್ಟಿಂದ ಹಾರಿಸಿದ ಉಪಗ್ರಹವ ಹೇಂಗೆ ನಾವು ಹೇಳಿದ ಹಾಂಗೆ ಕೇಳಿಸೊದು?  ಅದರ ಹತ್ತರೆ ಸಂಪರ್ಕ ಅಯೆಕ್ಕನ್ನೆ ಬೇರೆ ಎಂತ ಮಾಡೆಕಾದರೂ?

ಒಳ್ಳೆ ಪ್ರಶ್ನೆ ಕೇಳಿದ್ದೆ. ಈಗ ತಾನೇ ಹುಟ್ಟಿದ ಮಗು ಸುರುವಿಂಗೆ ಹೊರಳುಲೆ ಸುರು ಮಾಡಿ ಮತ್ತೆ ನಡೆವ ಹಾಂಗೇ ಈ ಉಪಗ್ರಹಂಗಳೂ ರೋಕೆಟ್ಟಿಂದ ಹೆರಂಗೆ ಹಾರಿದ ಮೇಲೆ ಸುರುವಿಂಗೆ ಹೊರಳಿಗೊಂಡಿರ್ತವು. ಅವು ನೆಟ್ಟಗೆ ನಿಂಬ ಹಾಂಗೆ ಮಾಡುವ ಬೇರೆ ಬೇರೆ ವಿಧಾನ ಮತ್ತು ಹಂತಂಗಳ ವಿವರಣೆಯ ನಾಳೆ ನೋಡುವ.

ಪಟಿಕಲ್ಲಪ್ಪಚ್ಚಿ

   

You may also like...

13 Responses

 1. ಚೆನ್ನೈ ಭಾವ° says:

  ಹಂತಹಂತವಾಗಿ ಚೋದ್ಯವೂ ಉತ್ತರವೂ ಲಾಯಕಕ್ಕೆ ಮೂಡಿ ಬತ್ತಾ ಇದ್ದು. ಸ್ವಾರಸ್ಯವಾಗಿ ಓದಿಗೊಂಡೋಪಲೆ ಆವ್ತು ಅಪ್ಪಚ್ಚಿ. ಹರೇ ರಾಮ. ನಾಳೆ ಕಾಂಬೊ.

  • ಪಟಿಕಲ್ಲಪ್ಪಚ್ಚಿ says:

   ನಿಂಗಳ ಪ್ರೋತ್ಸಾಹದ ಮಾತುಗೊ ಮುಂದಾಣ ಭಾಗವ ತಯಾರು ಮಾಡುಲೆ ಹುಮ್ಮಸ್ಸು ಕೊಡ್ತು. ಧನ್ಯವಾದಂಗ ಚೆನ್ನೈ ಭಾವ.

 2. ತೆಕ್ಕುಂಜ ಕುಮಾರ ಮಾವ° says:

  ಅದಾ..ಅದಾ..ಚಿಕ್ಕಮ್ಮ ಇಲ್ಲಿ ಸರಿಯಾಗಿ ಹಿಡ್ಕೊಂಡವು. {ರೋಕೆಟ್ಟಿಂದ ಹಾರಿಸಿದ ಉಪಗ್ರಹವ ಹೇಂಗೆ ನಾವು ಹೇಳಿದ ಹಾಂಗೆ ಕೇಳಿಸೊದು} – ಅಪ್ಪಚ್ಚಿ ಬರ್ಲಿ ಉತ್ತರ ನಿಂಗಳದ್ದು.

  • ಪಟಿಕ್ಕಲ್ಲಪ್ಪಚ್ಚಿ says:

   ಉತ್ತರ ತಯಾರು ಮಾಡುತ್ತಾ ಇದ್ದೆ. ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ.

 3. ಗೋಪಾಲ ಬೊಳುಂಬು says:

  ಪಟಿಕಲ್ಲಣ್ಣನ ಗ್ರಹ ಉಪಗ್ರಹ ಲೇಖನ ಮಾಲೆಯ ನಾಕು ಕಂತುಗಳನ್ನು ಒಟ್ಟಿಂಗೆ ಓದಿದೆ. ಪ್ರಶ್ಣೆ ಉತ್ತರಂಗೊ ತುಂಬಾ ಚೆಂದಕೆ ಬತ್ತಾ ಇದ್ದು. ಒಳ್ಳೆ ಆಸಕ್ತಿ ಹುಟುಸುತ್ತು. “ರಿಕ್ಷಾ ಯಾನ”ದ ಬಗ್ಗೆ ಮಾಂತ್ರ ನವಗೆ ಗೊಂತಿಪ್ಪದು, ಅಂತರಿಕ್ಷ ಯಾನದ ಬಗೆಗಿನ ಮಾಹಿತಿ ಬೈಲಿಂಗೆ ವಿಶೇಷ. ಬರಳಿ, ಬತ್ತಾ ಇರಳಿ ಪಟಿಕಲ್ಲಣ್ಣನ ಹೊಸ ಹೊಸ ವೈಜ್ನಾನಿಕ ಶುದ್ದಿಗೊ ಬೈಲಿಂಗೆ.

  • ಪಟಿಕ್ಕಲ್ಲಪ್ಪಚ್ಚಿ says:

   ನಿಂಗಳ ಮೆಚ್ಚುಗೆಯ ಮಾತುಗೊಕ್ಕೆ ಧನ್ಯವಾದಂಗ

 4. ISHWARA BHAT says:

  antariksha yana lekhana layakalli mudibatha iddu . ooduvavara kuthuhala keralusuthu .

 5. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಭಾರೀ ಲಾಯ್ಕ ಆಯಿದು.ಅಂತರಿಕ್ಷಕ್ಕೆ ಮಕ್ಕಳೊಟ್ಟಿಂಗೆ ನಮ್ಮನ್ನೂ ಕರಕ್ಕೊಂಡು ಹೋವುತ್ತ ಅಪ್ಪಚ್ಚಿಗೆ ಧನ್ಯವಾದ.ನಿಂಗೊ ಕವನ ಬರೆದಿದ್ದರೆ, ಬೈಲಿಂಗೆ ಹಾಕಿ ಹೇಳಿ ವಿನಂತಿ.

  • ಪಟಿಕ್ಕಲ್ಲಪ್ಪಚ್ಚಿ says:

   ಧನ್ಯವಾದಂಗ ಗೋಪಾಲಣ್ಣ. ಇಲ್ಲಿ ವರೆಗೆ ಕಥೆ, ಕವನ ಬರದ್ದಿಲ್ಲೆ. ಮುಂದೆ ಬರದರೆ ಖಂಡಿತ ಹಾಕುತ್ತೆ.

 6. ಶರ್ಮಪ್ಪಚ್ಚಿ says:

  ಒಳ್ಳೆ ಮಾಹಿತಿ ಕೊಡ್ತಾ ಇಪ್ಪ ಲೇಖನ ಮಾಲೆ.
  ನಮ್ಮ ಭಾಷೆಲಿಯೇ ಹೀಂಗಿಪ್ಪ ವಿಶಯಂಗಳ ತಿಳ್ಕೊಂಬಲೆ ತುಂಬಾ ಕೊಶೀ ಆವ್ತು.
  ಕುತೂಹಲದ ನಿರೀಕ್ಷೆಲಿ ಮುಂದಾಣ ಕಂತಿಂಗೆ ಕಾಯ್ತಾ ಇದ್ದೆಯೊ

 7. ಪಟಿಕ್ಕಲ್ಲಪ್ಪಚ್ಚಿ says:

  ಧನ್ಯವಾದಂಗ ಶರ್ಮಪ್ಪಚ್ಚಿ.

  • ಉಡುಪುಮೂಲೆ ಅಪ್ಪಚ್ಚಿ says:

   ಅಪ್ಪಚ್ಚಿ, ನಮಸ್ತೇ.
   ಕುತೂಹಲ ಕೆರಳ್ಸುವಾ೦ಗಿದ್ದು ವಿವರಣಗ. ಒಳ್ಳೆ ಮಾಹಿತಿ ತು೦ಬಿದ ಲೇಖನ. ಕೊಶಿಯಾವುತ್ತು ಓದಲೆ. ನಿ೦ಗಳ ಈ ಕ೦ತು ಬೇಗ ಬೇಗ ಬರಲಿ ಹೇದು ಅನ್ಸುತ್ತು.ಸರಾಗವಾಗಿ ಓದುವ ಹಾ೦ಗೆ ಮಾಡುವ ನಿರೂಪಣಾ ಶೈಲಿ ತು೦ಬಾ ಹಿಡ್ಸಿತ್ತು.ಈ ಬಗಗೆ ನಿ೦ಗೊಗೆ ಹಾ೦ಗೂ ಒಪ್ಪಣ್ಣ೦ಗೆ ಅದೆಷ್ಟು ಧನ್ಯವಾದ ಹೇಳಿರೂ ಕಡಮ್ಮೆಯೇ!

   • ಪಟಿಕ್ಕಲ್ಲಪ್ಪಚ್ಚಿ says:

    ಅಪ್ಪಚ್ಚಿ ನಮಸ್ತೇ, ನಿಂಗಳ ಮೆಚ್ಚುಗೆಗೆ, ಪ್ರೋತ್ಸಾಹಕ್ಕೆ ಧನ್ಯವಾದಂಗ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *