Oppanna.com

ಗ್ರಹ – ಉಪಗ್ರಹ – 5

ಬರದೋರು :   ಪಟಿಕಲ್ಲಪ್ಪಚ್ಚಿ    on   14/11/2012    7 ಒಪ್ಪಂಗೊ

ಪಟಿಕಲ್ಲಪ್ಪಚ್ಚಿ

ಎಲ್ಲೋರಿಂಗು ದೀಪಾವಳಿ ಶುಭಾಶಯಂಗೊ. ನಾವು ರೋಕೇಟ್ ಪಟಾಕಿ ಹಾರ್ಸುವ ಬದಲು ನಿಜ ರೋಕೇಟ್ ಹಾರ್ಸುದು ಹೇಂಗೆ ತಿಳಿಯುವ ಪ್ರಯತ್ನವ ಮುಂದುವರೆಸುವೋ..

ರೋಕೆಟ್ಟಿಂದ ಹಾರಿಸಿದ ಉಪಗ್ರಹವ ಹೇಂಗೆ ನಾವು ಹೇಳಿದ ಹಾಂಗೆ ಕೇಳಿಸೊದು?  ಅದರ ಹತ್ತರೆ ಸಂಪರ್ಕ ಅಯೆಕ್ಕನ್ನೆ ಬೇರೆ ಎಂತ ಮಾಡೆಕಾದರೂ?

ಉಪಗ್ರಹದ ಸಂಪರ್ಕ ಮಾಡಿ, ಅದರ ಸ್ಥಿರವಾಗಿ ಚಲಿಸುವ ಹಾಂಗೆ ಮಾಡುವ ಕ್ರಮಂಗಳ ಈಗ ನೋಡುವ –

ಉಪಗ್ರಹ ಉಡಾವಣಾ ಕೇಂದ್ರಲ್ಲಿ ರೋಕೆಟ್ ನ ಒಳ ಕೂರಿಸಲ್ಪಟ್ಟ ಉಪಗ್ರಹ ಒಂದು ರೀತಿಲಿ ತಾಯಿಯ ಹೊಟ್ಟೆಲಿಪ್ಪ ಮಗುವಿನ ಹಾಂಗೇ. ಮಗುವಿನ ಚಲನ ವಲನ, ನಾಡಿ ಮಿಡಿತ ಇತ್ಯಾದಿಗಳ ಪರೀಕ್ಷೆ ಮಾಡಿ ಅದು ಸರಿ ಇದ್ದೋ ಹೇಳಿ ಡಾಕ್ಟರ್ ಗೊ ಅಂದಾಜಿ ಮಾಡುವ ಹಾಂಗೇ, ಹಾರಿಸೆಕ್ಕಾದರೇ ಮದಲೇ, ಲಾಂಚ್ ಸ್ಟೇಶನ್ ಲಿಪ್ಪಗಳೇ ಉಪಗ್ರಹದ ಸಂಕೇತ ಕಳಿಸುವ (telemetry) ಮತ್ತು ಸ್ವೀಕರಿಸುವ (tele-command) ಭಾಗಂಗಳ ಕೆಲಸ ಮಾಡುವ ಹಾಂಗೆ ಮಾಡುತ್ತವು.

ಹೀಂಗೆ ಉಪಗ್ರಹದ ನಾಡಿ (telemetry) ಮಿಡಿತವ ಉಡಾವಣಾ ಕೇಂದ್ರಲ್ಲಿಪ್ಪ ವಿಜ್ಞಾನಿಗ ವಿಶ್ಲೇಷಣೆ ಮಾಡಿ ಅದರ ಮೇಲೆ ಒಂದು ನಿಗಾ ಮಡಿಕ್ಕೊಂದಿಪ್ಪಗಳೇ, ಇನ್ನೊಂದು ಟೀಮ್ ನ ವಿಜ್ಞಾನಿಗೊ ರೋಕೆಟ್ಟಿನ ಗಮನಿಸುತ್ತಾ ಇರ್ತವು. ಎಷ್ಟು ಹೊತ್ತಿಂಗೆ  ಎಲ್ಲಿಂದ ಹಾರಿಸಿದರೆ (ಎಲ್ಲವೂ ಮೊದಲೇ ಲೆಕ್ಖ ಹಾಕಿದ ಹಾಂಗೇ ನಡೆದರೆ) ಯಾವ ಯಾವ ಭೂ ಕೇಂದ್ರದ ಮೇಲಂದ ಯಾವ ಯಾವ ಹೊತ್ತಿಂಗೆ ಉಪಗ್ರಹ ಹಾದು ಹೋವ್ತು ಮತ್ತು ಆಕಾಶಲ್ಲಿ ಯಾವ ಜಾಗೆಲಿ ಅದು ಹಾದು ಹೋಪದು ಹೇಳುವ ಮಾಹಿತಿ  (ಇದಕ್ಕೆ predictions ಹೇಳಿ ಹೆಸರು.) ಯ ತಯಾರು ಮಾಡಿ ಆ ಕೇಂದ್ರಂಗೊಕ್ಕೆ ಮದಲೇ ತಲುಪಿಸಿರುತ್ತವು. ಅವು ಅವರ tracking antenna ವ ಆ ದಿಕ್ಕಿಂಗೆ ತಿರುಗಿಸಿ ಕಾಯ್ತಾ ಇರ್ತವು.  ರೋಕೆಟ್ ಮೇಲೆ ಹಾರಿದ ನಂತರ ಒಂದು ರಜಾ ಹೊತ್ತು ಉಪಗ್ರಹದ ಸಂಪರ್ಕ ಕಡಿದು ಹೋವ್ತು. ಮತ್ತೆ ಮೊದಲ ಭೂ ಕೇಂದ್ರಲ್ಲಿ ಸಂಕೇತ ಸಿಕ್ಕಿದ ಕೂಡಲೇ ಉಪಗ್ರಹದ ಒಟ್ಟಿಂಗೆ ಸಂಪರ್ಕ.  ಆಯಾ  ಕೇಂದ್ರಲ್ಲಿ ಉಪಗ್ರಹದ ಸಂಕೇತ ಸಿಕ್ಕಿದ ಕೂಡ್ಲೇ ಮುಖ್ಯ ಕೇಂದ್ರಕ್ಕೆ ಆ ಸಂಕೇತವ ಕಳಿಸಿ ಕೊಡುತ್ತವು. ಅಲ್ಲಿ ಎಲ್ಲರೂ ಒಟ್ಟು ಸೇರಿ ಮುಂದಾಣ ಕಾರ್ಯ ಕ್ರಮಂಗಳ ತಯಾರು ಮಾಡ್ತವು.

ಒಂದು ವೇಳೆ ರೋಕೆಟ್ ಲೆಕ್ಕಂದ ಹೆಚ್ಚು ವೇಗಲ್ಲಿ ಹಾರಿದರೆ (over performance) ಅಥವಾ ಕಡಮ್ಮೆ ವೇಗಲ್ಲಿ ಹಾರಿದರೆ (under performance) ಅಥವಾ ಹಾರುವ ದಿಕ್ಕಿಲಿ ಸಣ್ಣ ಪ್ರಮಾಣದ ವ್ಯತ್ಯಾಸ ಆದರೆ ಪುನ: ವಿಜ್ಞಾನಿಗೊ ಹೊಸತಾಗಿ ಲೆಕ್ಖ ಹಾಕಿ predictions ನ ಎಲ್ಲಾ ಕೇಂದ್ರಕ್ಕೆ ಕಳಿಸಿ ಕೊಡುತ್ತವು. ಹೀಂಗೆ ಹಾಕಿದ ಲೆಕ್ಖ ಒಂದು ರೀತಿಲಿ ‘ಗೋಷ್ಪಾರಿ’ ಲೆಕ್ಖ. ಹುಟ್ಟಿದ ಕೂಡ್ಲೇ ‘ದಶಾ’ ಮತ್ತೆ ‘ಭುಕ್ತಿ’ ಲೆಕ್ಖ ಹಾಕಿದ ಹಾಂಗೆ.  ಅದು ಒಂದರಂದ ಐದು ದಿನಕ್ಕೆ ಉಪಗ್ರಹವ ಗಮನಿಸುವಷ್ಟರ ಮಟ್ಟಿಂಗೆ ಸರಿಯಾಗಿರ್ತು. ಅಷ್ಟರ ಒಳ ಇನ್ನೂ ನಿಖರವಾದ ಲೆಕ್ಖಾಚಾರ ನಡೆಸುತ್ತವು ಹೊಸತಾಗಿ ಬಂದ ಸಂಪರ್ಕ ಮಾಹಿತಿಗಳಿಂದ. ಸರಿಯಾದ ಹೊತ್ತು ವೇಳೆ ಕೊಟ್ಟು ಒಂದು ಒಳ್ಳೆ ಜೋಯಿಸರ ಹತ್ತರೆ ‘ಜಾತಕ’ ಬರೆಸಿದ ಹಾಂಗೆ.  ಆದರೆ ಉಪಗ್ರಹದ ಮಟ್ಟಿಂಗೆ ಮಾತ್ರ  ಇದು ಒಂದು ಸರ್ತಿ ಅಲ್ಲ – ನಿರಂತರ (ಉಪಗ್ರಹದ ಜೀವಿತದ ಕಾಲದುದ್ದಕ್ಕೂ) ನಡೆತ್ತಾ ಇಪ್ಪ ಒಂದು ಕೆಲಸ.

Telemetry ಯ ಮೂಲಕ ಉಪಗ್ರಹದ ಸ್ಥಿತಿ ಗತಿಯ ತಿಳುದು, ಎಲ್ಲಾ ಓ.ಕೆ. ಆದ ಮೇಲೆ,  ಹೊರಳಿಗೊಂಡು ಇಪ್ಪ ಉಪಗ್ರಹವ ‘ನೆಟ್ಟಗೆ ನಿಂಬ’ ಹಾಂಗೆ ಮಾಡುವ ಕೆಲಸ. ಇದಕ್ಕೆ ‘ಸ್ಥಿರೀಕರಣ‘ (stabilization) ಹೇಳಿ ಹೆಸರು. ಎರಡು ರೀತಿಯ ಸ್ಥಿರೀಕರಣ ಕ್ರಮಂಗ ಇದ್ದು. ಉಪಗ್ರಹದ ಉದ್ದೇಶಿತ ಉಪಯೋಗದ ಪ್ರಕಾರ ಎರಡರಲ್ಲಿ ಒಂದರ ಉಪಯೋಗ ಮಾಡಲಾವ್ತು. ಒಂದಕ್ಕೆ spin stabilization ಮತ್ತು ಇನ್ನೊಂದಕ್ಕೆ 3-axes stabilization ಹೇಳಿ ಹೆಸರು. ಹೀಂಗೆ ಕೊಡುವ ಆಜ್ಞೆಗಳ ಉಪಗ್ರಹಲ್ಲಿಪ್ಪ tele-command subsystem  ಸ್ವೀಕರಿಸಿ ಅದರ ಪ್ರಕಾರವೇ ಉಪಗ್ರಹ ನಡಕ್ಕೊಂಬ ಹಾಂಗೆ ಮಾಡ್ತು..

(1) Spin stabilization – ಇದರಲ್ಲಿ ಉಪಗ್ರಹ ತನ್ನ ಒಂದು ಅಕ್ಷದ ಸುತ್ತ ತಿರುಗುವ ಹಾಂಗೆ (ಬುಗರಿ ತಿರುಗುವ ಹಾಂಗೆ) ಮಾಡೊದು. ಅಷ್ಟಪ್ಪಗ ಅದರ ಹೊರಳಾಟ ನಿಂದು, ಅದು ಭೂಮಿಯ ಹಾಂಗೇ ತನ್ನ ಒಂದು ಅಕ್ಷದ ಸುತ್ತ ತಿರುಗಿಗೊಂಡು ಭೂಮಿಯ ಸುತ್ತ ಸುತ್ತುತ್ತಾ ಇರ್ತು. ಒಂದು ಸರ್ತಿ ಹೀಂಗೆ ಅದಕ್ಕೆ ಸ್ಥಿರತೆ ಬಂದ ಮೇಲೆ ಅದಕ್ಕೆ ತನ್ನ ಉದ್ದೇಶಿತ ಕೆಲಸ ಶುರು ಮಾಡುಲೆ ಆಜ್ಞೆ ಕೊಡುತ್ತವು.

(2) 3-axes stabilization – ಇದರಲ್ಲಿ ಉಪಗ್ರಹವ ಪರಸ್ಪರ ಲಂಬವಾಗಿಪ್ಪ ಮೂರು ಅಕ್ಷಂಗಳ ಸ್ಥಿರವಾಗಿಪ್ಪ ಹಾಂಗೆ  ಮಾಡುತ್ತವು. ಈ http://en.wikipedia.org/wiki/File:Rollpitchyaw.jpg   ಆ ಮೂರು ಅಕ್ಷಂಗಳ ನೋಡುಲಕ್ಕು:

ಯಾವ ಅಕ್ಷ ಭೂಮಿಯ ನಿರಂತರವಾಗಿ ನೋಡುತ್ತಾ ಇರ್ತು – ಆ ಅಕ್ಷಲ್ಲಿ ಉಪಗ್ರಹದ ಮುಖ್ಯ ಭಾಗವಾದ payload ನ ಸ್ಥಾಪನೆ ಮಡಿರ್ತವು. ಕೆಮರಾ, ಈಗಾಗಲೇ ವಿವರಿಸಿದ ಟ್ರಾನ್ಸ್ ಪೋಂಡರ್, VHRR ಇತ್ಯಾದಿಗೊ payload ಗೆ ಉದಾಹರಣೆಗೊ.

ಇನ್ನಾಣ ಕಂತಿಲಿ ಬೇರೆ ಹೊಸ ವಿಷಯದ ಬಗ್ಗೆ ಹೇಳುವ ಆಗದಾ?

 

7 thoughts on “ಗ್ರಹ – ಉಪಗ್ರಹ – 5

  1. {ಕೆಲವು ದಿನ not reachable ಆಗಿತ್ತಿದ್ದೆ.} ರಾಕೆಟಿನ ಒಟ್ಟಿ೦ಗೆ ಹಾರಿದ ಉಪಗ್ರಹದ ಹಾ೦ಗೆಯೋ ಅಪ್ಪಚ್ಚಿ?
    ಹೊಸತ್ತು ಕಲಿವ ಉಮೇದು ಕೊಟ್ಟತ್ತು ಈ ಶುದ್ದಿ.
    ಕೆಲವು ಸ೦ಶಯ೦ಗೊಅಪ್ಪಚ್ಚಿ,
    ಈ ಉಪಗ್ರಹ೦ಗೊಕ್ಕೆ ಜೀವಿತಾವಧಿ ಹೇಳಿ ಇದ್ದಲ್ಲದಾ?
    ಕಕ್ಷೆಲಿ ತಿರುಗೆಕ್ಕಾರೆ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಮಾ೦ತ್ರವೋ ಅಲ್ಲ ಬೇರೆ ಶಕ್ತಿಯೂ ಬೇಕೊ?
    ಉಪಗ್ರಹಲ್ಲಿಪ್ಪ ಕೆಮರ೦ಗೊಕ್ಕೆ ಬೆಟ್ರಿ ಬದಲ್ಸುಲೆ ಏರ್ಪಾಡು ಇದ್ದೊ?

  2. ಓದಿ ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗ. ನಾಳೆ ಮತ್ತೆ ಕಾಂಬ. ಕೆಲವು ದಿನ not reachable ಆಗಿತ್ತಿದ್ದೆ.

  3. ಅಂಬಗ ಮನೆಲಿ ಸ್ವಿಚ್ಚು ಒತ್ತಿದ ಕೂಡಲೇ ಟೀವಿ ಕಾಂಬಲೂ ಇಷ್ಟೆಲ್ಲ ಕೆಲಸೈದ್ದು ಅಪ್ಪೋ? 🙂
    ಭಯಂಕರ ಆತ..
    ಖುಶಿ ಆತು ಅಪ್ಪಚ್ಚೀ 🙂

  4. ಹೊಸ ಹೊಸ ಶುದ್ದಿಗೊ ಬತ್ತಾ ಇರಳಿ. ಹೊಸ ಹೊಸ ವಿಷಯಂಗೊ ಸುಲಾಭಲ್ಲಿ ಎಲ್ಲೊರಿಂಗೆ ಅರ್ಥ ಅಪ್ಪ ಹಾಂಗಾಗಲಿ.

  5. ಉಪಗ್ರಹವ ಹಾರಿಸಿದ ಮತ್ತೆ ಅದರ ಸ್ಥಿರವಾಗಿ ನಿಲ್ಲುತ್ತ ಹಾಂಗೆ ಮಾಡುವದು ಹೇಂಗೆ ಹೇಳಿ ತಿಳಿಶಿಕೊಟ್ಟದಕ್ಕೆ ಧನ್ಯವಾದಂಗೊ.
    ಉಪಗ್ರಹದ ಕಣ್ಣು ಭೂಮಿ ಮೇಲೆ ಇರೆಕಾರೆ ವಿಜ್ನಾನಿಗಳ ಕಣ್ಣು ಉಪಗ್ರಹದ ಮೇಗೆ ಇರೆಕು ಅಲ್ಲದಾ?

  6. ಯಬ್ಬೋ.. ಅದ್ಭುತ ವಹಿವಾಟಿನ ಜೆಂಬ್ರಪಾ ಇದು. ಒಂದು ವಸ್ತುವಿನ ಅಷ್ಟು ಎತ್ತರಕ್ಕೆ ಇಡುಕ್ಕಿ ಮತ್ತೆ ಇಲ್ಲಿಂದ ಹೇಳಿದಾಂಗೆ ಅದರ ಕೊಣುಶುಸ್ಸು…. ಗ್ರೇಶಿರೆ ತಲೆ ತಿರುಗುತ್ತು.

    ಅಷ್ಟು ದೊಡಾ ವಿಷಯವ ಸರಳವಾಗಿ ಇಲ್ಲಿ ಒಂದು ಮಟ್ಟು ಅರ್ಥ ಆವ್ತಾಂಗೆ ಸರಳ ಸುಲಭ ಹೋಲಿಕೆಯೊಟ್ಟಿಂಗೆ ದಶಾ ಭುಕ್ತಿ ಜಾತಕ ಜೋಯ್ಸ ಹೇದು ತಿಳಿಹಾಸ್ಯಯುಕ್ತವಾಗಿ ಪಟಿಕ್ಕಲ್ಲಪ್ಪಚ್ಚಿಯ ಶುದ್ದಿಗೆ ಹರೇ ರಾಮ. ಡಾಕುಟ್ರಕ್ಕೊ ಕ್ರಿಟಿಕಲ್ ಡೆಲಿವರಿ ಕೇಸಿನ ಹೇಂಡಲ್ ಮಾಡ್ತರಿಂದ ಎಷ್ಟೋ ಪಟ್ಟು ಮಂಡೆಬೆಶಿ ಕೆಲಸಪ್ಪೋ. ಇಲ್ಲಿ ಜೀವ, ಅಲ್ಲಿ ನಿರ್ಜೀವಕ್ಕೆ ಜೀವ. ರಾಮ ರಾಮ.

    ಹಾ° ಇನ್ನಾಣದ್ದು ಎಂತಾಯಿಕ್ಕೋ..!

    1. ಚೆನ್ನೈ ಬಾವ, ಓದಿ ಒಪ್ಪ ಕೊಟ್ಟ ನಿಂಗೊಗೆ ಧನ್ಯವಾದಂಗೊ. ಇನ್ನಾಣ ಕಂತಿಲಿ ವಿಶ್ವದ ಹುಟ್ಟು, ಬೆಳವಣಿಗೆ, ನಾಶ (?) ದ ಬಗ್ಗೆ ವಿಜ್ಞಾನಿಗೊ ಎಂತ ಹೇಳ್ತವು ಹೇಳುವ ವಿಷಯ ಅಕ್ಕು ಹೇಳಿ ಅಂದಾಜಿ. ಉಪಗ್ರಹದ ಬಗ್ಗೆ ಮತ್ತೆ ಇನ್ನೊಂದರಿ ವಿಚಾರ ಮಾಡುವೊ. ನಿಂಗಳ ಅಭಿಪ್ರಾಯ ಹೇಂಗೆ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×