Oppanna.com

ಅಂತರ್ವಾಣಿ

ಬರದೋರು :   ಗಣೇಶ ಮಾವ°    on   27/01/2011    17 ಒಪ್ಪಂಗೊ

ಗಣೇಶ ಮಾವ°

ಎಲ್ಲೋರಿಂಗೂ ನಮಸ್ಕಾರ!!!

ಶುದ್ಧಿ ಹೇಳದ್ದೇ ಸುಮಾರು ದಿನ ಆತು.ಇಷ್ಟು ದಿನ ಅಧ್ಯಾತ್ಮ ವಿಷಯಲ್ಲಿ ಶುದ್ಧಿ ಹೇಳಿದ್ದಿಲ್ಲೆ.ಹಾಂಗೆ ಈ ಸರ್ತಿ ಎನ್ನ ಅನುಭವದ ಒಂದು ವಿಷಯದ ಬಗ್ಗೆ ಶುದ್ಧಿ ಹೇಳ್ತೆ. ಆನು ಕಳುದ ತಿಂಗಳು ಒಂದು ಅಧ್ಯಾತ್ಮ ಶಿಬಿರಲ್ಲಿ ಭಾಗವಹಿಸಿತ್ತೆ.ಅದರಿಂದ ಆನು ಸುಮಾರು ಅನುಭವಂಗಳ ಪಡಕ್ಕೊಂಡಿದೆ.ಅದರ್ಲಿ ಒಂದು ವಿಷಯ “ಅಂತರ್ವಾಣಿ”.
ಪ್ರತಿ ಮನುಷ್ಯಂಗೂ ಅಂತರಾತ್ಮ ಇರ್ತು.
ಅಂತರಾತ್ಮ ಹೇಳುದರ ನಾವು ಕೃತಿಲಿ ಮಾಡ್ತು.ಇದು ಅಂತರ್ವಾಣಿ.
ಇದನ್ನೇ ಆಧ್ಯಾತ್ಮಲ್ಲಿ “ಆತ್ಮಪ್ರಬೋಧ”ಹೇಳಿ ಹೇಳ್ತವು.ಈ ನಿಕ್ಷಿಪ್ತ ಶಕ್ತಿ ಎಲ್ಲೋರಿಂಗೂ ಇರ್ತು.
ಇದರ ಗಮನಿಸೆಕ್ಕಾದ್ದು ಮುಖ್ಯ.ಗಮನಿಸಿದ ಮತ್ತೆ ಗಣನೆಗೆ ತೆಕ್ಕೊಳ್ಳೆಕ್ಕಾದ್ದು ಇನ್ನೂ ಮುಖ್ಯ.

ಇಷ್ಟೆಲ್ಲಾ ಹೇಳಿಯಪ್ಪಗ ಅಂತರ್ವಾಣಿ ಹೇಳಿರೆ ಎಂತರಪ್ಪಾ? ಅದು ಹೇಂಗೆ ಇರ್ತು?ಅದರ ಅನುಭವ ಹೇಂಗೆ ಹೇಳುವ ಪ್ರಶ್ನೆ ಬಪ್ಪದು ಸಹಜ.
ನಾವು ಕೆಲವು ಸರ್ತಿ ನವಗೆ ಗೊಂತಿಲ್ಲದ್ದೆ ಎನ್ನ ಮನಸ್ಸು ಹೀಂಗೆ ಹೇಳ್ತು ಹೇಳಿ ನಮ್ಮ ಅಭಿಪ್ರಾಯವ ಇನ್ನೊಬ್ಬನ ಹತ್ತರೆ ಹೇಳ್ತು.
ಈ ರೀತಿ ನಾವು ಅನುಸರಣೆ ಮಾಡುವ ಅತೀಂದ್ರಿಯ ಶಕ್ತಿಗೆ ಅಂತರ್ವಾಣಿ ಹೇಳಿ ಹೇಳ್ತವು..
ನಾವು ಕೆಲವು ಸರ್ತಿ ಈ ಅಂತರ್ವಾಣಿಯನ್ನೂ ಕೂಡಾ ನಿರ್ಲಕ್ಷ್ಯ ಮಾಡಿ ಮುಂದೆ ಹೋವ್ತು.ಮತ್ತೆ ಕೆಲಸ ಹಾಳಾದ ಮೇಲೆ ಛೆ!
ಆಗ ಹೀಂಗೆ ಮಾಡ್ಲೆ ಆವ್ತಿತು ಹೇಳಿ ಪಶ್ಚಾತ್ತಾಪ ಆವ್ತು. ಅಂಬಗ ಇದರ ನಾವು ಸರಿಯಾದ ರೀತಿಲಿ ಅನುಭವಿಸೆಕ್ಕಾರೆ ಎಂಥ ಮಾಡೆಕ್ಕು?
ಆ ಮೂಲಕ ನಮ್ಮ ಕಾರ್ಯಲ್ಲಿ ದೃಢನಿರ್ಧಾರವ ಯಾವ ರೀತಿ ಪಡಕ್ಕೊಂಬಲೆ ಎಡಿಗು? ಹೇಳುದರ ಬಗ್ಗೆ ರಜ್ಜ ನೋಡುವ.

ಈ ಅಂತರಾತ್ಮ ಅಥವಾ ಅಂತರ್ವಾಣಿಯನ್ನೇ ವೇದಂಗ ಪರಮಾತ್ಮನ ಒಂದು ಭಾಗ ಹೇಳಿ ಹೇಳ್ತು.
ಇದರ ಕಾಂಬಲೆ ಬೇಕಾಗಿ ಇಂದ್ರಾಣ ಯಾಂತ್ರಿಕ ಯುಗಲ್ಲಿ ನಾವು ಹಲವಾರು ಮಾರ್ಗವ ಕಂಡುಗೊಂಬಲೆ ಪ್ರಯತ್ನ ಮಾಡ್ತಾ ಇರ್ತು.
ಅಂಬಗ ನಾವು ನಮ್ಮಲ್ಲೇ ಹೀಂಗಿಪ್ಪ ಒಂದು ಅನುಭವವ ಅನುಭವಿಸುಲೆ ಯಾವ ರೀತಿ ಎಡಿಗು ಹೇಳುದರ ಬಗ್ಗೆ ಕೆಲವು ಸೂತ್ರಂಗಳ ಅನುಸರಿಸುದರ ಮೂಲಕ ನೋಡುವ.

  1. ಇರುಳು ಬೇಗ ಮನುಗಿ ಉದಿಯಪ್ಪಗ ಬೇಗ ಹೇಳಿರೆ ಸೂರ್ಯೋದಯದ ಮೊದಲು (ಅಂದಾಜು ೫.೩೦) ಏಳುದು ಒಳ್ಳೆದು.
  2. ಯೋಗ ವ್ಯಾಯಾಮ ಮಾಡುದರ ಮೂಲಕ ನಿತ್ಯ ಸಂಧ್ಯಾವಂದನೆ,ಹೆಮ್ಮಕ್ಕೊಗೆ ಶ್ಲೋಕ ಹೇಳುದರ ಮೂಲಕ ಮನಸ್ಸು ದೃಢ ಅಪ್ಪಲೆ ಮತ್ತೆ ಅಂದ್ರಾಣ ನಮ್ಮ ಕಾರ್ಯಂಗ ಎಂಥ ಇದ್ದೋ ಅದರ ಬಗ್ಗೆ ದೇವರತ್ರೆ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡುದು ಒಳ್ಳೆದು.(ಈ ಮೇಗಾಣ ಪ್ರತೀ ಕೆಲಸವ ೧೦ ನಿಮಿಷದ ಹಾಂಗೆ ಉಪಯೋಗಿಸಿಗೊಳ್ಳಿ)
  3. ತಿಂಡಿ ಎಲ್ಲಾ ಆದಮೇಲೆ ನಮ್ಮ ನಿತ್ಯ ಕೆಲಸಕ್ಕೆ ಹೆರಡೆಕ್ಕಾರೆ ಮದಲು ಅಂದು ಯಾವ ಕೆಲಸ ಆಯೆಕ್ಕು ಹೇಳುದರ ಬಗ್ಗೆ  ಒಂದು ದಿಕ್ಕೆ ಕೂದು ಐದು ನಿಮಿಷ ಆಲೋಚನೆ ಮಾಡಿ ಸ್ಪಷ್ಟ ನಿರ್ಧಾರ ತೆಕ್ಕೊಳ್ಳಿ.
  4. ಮನೆಂದ ಹೆರ ಹೆರಟ ಮೇಲೆ ನವಗೆ ನಾವೇ ಗುರು ಹೇಳುದರ ಬಗ್ಗೆ ನಮ್ಮ ಮೇಲೆಯೇ ಅಭಿಮಾನ ಬೆಳೆಸಿಗೊಳ್ಳಿ.ಆದಷ್ಟು ಅನುಕರಣೆಯ ಕಡಮ್ಮೆ ಮಾಡ್ಲೆ ಪ್ರಯತ್ನ ಮಾಡಿಹೀಂಗೆ ಮಾಡುದರಿಂದ ನಮ್ಮ ಬಗ್ಗೆ ಕೀಳರಿಮೆ ಕಡಮ್ಮೆ ಆವ್ತು.
  5.  ಆಫೀಸಿಲಿ ಅಥವಾ ಕಾಲೇಜಿಲಿ,ಹತ್ತು ಜೆನಂಗ ಇಪ್ಪಲ್ಲಿ ಮಾತಾಡುಗ ಮಧ್ಯ-ಮಧ್ಯ ವಿರಾಮ ತೆಕ್ಕೊಂಡು ಮಾತಾಡುದು ಒಳ್ಳೆದು. ಇದರಿಂದ ಮಾತಿನ ಮೇಲೆ ಹಿಡಿತ ಸಾಧುಸಲೆ ಎಡಿತ್ತು.
  6. ಆದಷ್ಟು ನಮ್ಮ ಬಗ್ಗೆ  ಹೊಗಳಿಕೆಗೆ ಆಸ್ಪದ ಕೊಡೆಡಿ.ಇದರಿಂದ ನಮ್ಮಲ್ಲಿಪ್ಪ ಅಹಂಕಾರ ಕಡಮ್ಮೆ ಆವ್ತು.
  7. ನಮ್ಮ ಕೆಲಸಂಗಳ ಮುಗಿಶಿ ಬಂದು ಆ ದಿನದ ಅನುಭವವ ಮನೆಯವು ಎಲ್ಲೋರು ಕೂದು ಉಂಬದಕ್ಕೆ  ಮೊದಲೇ ಚರ್ಚೆ ಮಾಡುದು ಒಳ್ಳೆದು. ಇದರಿಂದ ಮತ್ತೊಂದಿನ ನಮ್ಮ ಮನೆಯವು ಸೋಲುತ್ತವಿಲ್ಲೆ.
  8. ಮನುಗಿದ ಮೇಲೆ ಅಂದು ಮಾಡಿಯಾದ ಕೆಲಸದ ಬಗ್ಗೆ ಮತ್ತೊಂದರಿ ಮನನ ಮಾಡಿ.ಇದರಿಂದ ಮರುದಿನ ಮಾಡೆಕ್ಕಾದ ಕೆಲಸದ ಬಗ್ಗೆ ಸ್ಪಷ್ಟ ನಿರ್ಧಾರ ತೆಕ್ಕೊಂಬಲೆ ಆವ್ತು.

ಈ ಮೇಗಾಣ ಸೂತ್ರಂಗಳ ನಾವು ದಿನಚರಿಲಿ ಅಳವಡಿಸಿಗೊಂಡಪ್ಪಗ ನಮ್ಮಲ್ಲಿ ನವಗೇ ಹೆಮ್ಮೆ ಆವ್ತು.
ಇದಿಷ್ಟು ಅಪ್ಪಗ ನವಗೆ ನಮ್ಮ ಯಾವಯಾವ  ಕೆಲಸಂಗೊಕ್ಕೆ  ಹೇಂಗೆ ಹೋಯೆಕ್ಕು ಹೇಳುದರ ಬಗ್ಗೆ ನಮ್ಮ ಅಂತರ್ವಾಣಿ ಮುನ್ಸೂಚನೆ ಕೊಡ್ತು.ಹೀಂಗೆ ನಾವು ಅನುಭವಿಸುದರಿಂದ ನಮ್ಮಲ್ಲಿ ಗುರುತರ ಶಕ್ತಿ ಉದ್ದೀಪನ ಆವ್ತು.

                                     || ಸಹಸಾ ವಿದಧೀತ ನ ಕ್ರಿಯಾಂ ಅವಿವೇಕಃ ಪರಮಾಪದಾಂ  ಪದಂ  || 


17 thoughts on “ಅಂತರ್ವಾಣಿ

  1. ganesh maava. olledayidu lekhana. ravishankar gurujiya ‘art of living’ li adhyatmada bagge tumba class madtavanne.!! aa class ge hoda hange athu.

  2. ಅ೦ತರ್ಜಾಲಲ್ಲಿ ಮೂಡಿದ “ಅ೦ತರ್ವಾಣಿ” ಅ೦ತರ೦ಗಲ್ಲಿ ಅಳವಡಿಸಿಗೊ೦ಡರೆ ಬದುಕು ಬದಲಕ್ಕು. “ವಿಪಶನ” ಹೇಳುವ ಶಿಬಿರ೦ಗಳಲ್ಲಿಯೂ (ನಾಸಿಕ್ ಲಿ ಅಪ್ಪದು) ಧ್ಯಾನದ ಮೂಲಕ ಜೀವನ ಶೈಲಿಯ ಬದಲಾಯಿಸಿಗೊ೦ಡವರ ನೋಡಿ ಆಶ್ಚರ್ಯ ಆಯಿದೆನಗೆ.ಗಣೇಶ ಮಾವ,ಧನ್ಯವಾದ.

    1. ರಘುಮಾವಾ,ನಿಂಗಳ ಅನುಭವದ ಘಟನೆ ಒಪ್ಪಲ್ಲಿ ಹೇಳಿದ್ದಕ್ಕೆ ಧನ್ಯವಾದಂಗೋ!!ಹೀಂಗಿಪ್ಪ ವಿಷಯಂಗ ಇದ್ದರೆ ತಿಳಿಶಿಕ್ಕಿ…

  3. ಗಣೇಶ ಮಾವ°, ನಿಂಗಳ ಅಷ್ಟಸೂತ್ರ ಲಾಯ್ಕಿದ್ದು. ಅದು ಎಲ್ಲವುದೇ ನಮ್ಮ ಜೀವನಲ್ಲಿ ಅಳವಡ್ಸುಲೆ ಎಡಿಗಾದರೆ ತುಂಬಾ ಲಾಯ್ಕಲ್ಲಿ, ನೆಮ್ಮದಿಲಿ ಕಳಗು ಎಲ್ಲೋರ ಜೀವನ ಅಲ್ಲದಾ?

    1. ಅಪ್ಪು.ಖಂಡಿತಾ!!ಒಪ್ಪಕ್ಕೆ ಧನ್ಯವಾದ..

  4. ಗಣೇಶ ಭಾವಾ, ಈ ಅಂತರ್ವಾಣಿ ಹೇಳಿರೆ ಅಂಬಗ ಆರನೇ ಇಂದ್ರಿಯವೋ ? ಕೆಲವೊಂದರಿ ಅದು ಹೇಳಿದ ಹಾಂಗೆ ನಾವು ಹೋಗದ್ದೆ ಹೊಂಡಕ್ಕೆ ಬೀಳ್ತ ಕ್ರಮ ಇದ್ದು. ಅಪ್ಪದು. ನೀನು ಹೇಳಿದ ವಿಷಯಂಗೊ ಎಲ್ಲ ಒಳ್ಳೆದಿದ್ದು. ಒಳ್ಳೆ ಲೇಖನ. ವರ್ಮುಡಿ ಮಾವ ಹೇಳಿದ ಹಾಂಗೆ ನಮ್ಮ ನಿಜ ಜೀವನಲ್ಲಿ ತರೆಕಷ್ಟೆ. ಪ್ರಯತ್ನ ಮಾಡುವೊ.

    1. ಹಾಂಗೆ ಆದಿಪ್ಪಲೂ ಸಾಕು.ಅಂತೂ ಅದು ಸೂಚನೆ ಕೊಡುವದು ಸತ್ಯ.ಅದು ಅವಕ್ಕವಕ್ಕೆ ಅನುಭವ ಮಾತ್ರ.ವಿವರಣೆ ಮಾಡ್ಲೆ ಎಡಿತ್ತಿಲ್ಲೆ.ಒಪ್ಪೊಂಗೊಕ್ಕೆ ಧನ್ಯವಾದ..

  5. ವಾಹ್! ಗಣೇಶಮಾವಾ..!!
    ಪ್ರತಿ ಗೆರೆಯುದೇ ಚಿನ್ನಾಕ್ಷರಲ್ಲಿ ಬರದು ಮಡುಗೇಕಾದಂತಾದ್ದು!!
    ಕೊಶಿ ಆತು ಚೆಂದದ ಶುದ್ದಿ ಹೇಳಿದ್ದಕ್ಕೆ..
    ಎಲ್ಲೋರುದೇ ಇದರ ಜೀವನಲ್ಲಿ ಪಾಲುಸುವೊ°..

  6. ಹೇಳ್ಳೇನೂ ಇಲ್ಲೆ, ಅಳವಡ್ಸೆಕ್ಕು,
    ಲಾಯ್ಕಾಯಿದು.

  7. ಗುರುಗಳೇ,
    ಲಾಯಕಕ್ಕೆ ಬರದ್ದಿ. ನಿನ್ಗಳ ಲೇಖನಕ್ಕೆ ಕಾದುಗೊಂಡು ಇತ್ತಿದ್ದೆ. ಒೞೆ ವಿಶಯ.
    ಯಾವ ಶಿಬಿರ ಗುರುಗಳೇ? ಎಲ್ಲಿ ಇತ್ತಿದ್ದದು?

    1. ಏ ಮಾಣೀ,,ಆನು ಈ ರವಿಶಂಕರ್ ಗುರೂಜಿ ಅವರ ಸತ್ಸಂಗ ಕಾರ್ಯಕ್ರಮಲ್ಲಿ ಮೊನ್ನೆ ಪುತ್ತೂರಿಲಿ ಭಾಗವಹಿಸಿತ್ತೆ..ಎನಗೆ ತುಂಬಾ ಪ್ರಯೋಜನ ಹೇಳಿ ಅನಿಸಿದ್ದು.ಮಂಗ್ಲೂರಿಲಿ ಸದ್ಯವೇ ಇವರ ಶಿಬಿರ ಇರೆಕ್ಕು.ಒಳ್ಳೇದು ಇದ್ದು..

  8. ಒ೦ದೊಳ್ಳೆ ಲೇಖನ ಕೊಟ್ಟದಕ್ಕೆ ಗಣೇಶಮಾವ೦ಗೆ ಧನ್ಯವಾದ೦ಗೊ.
    ಇದೇ ವಿಶಯ ಎಷ್ಟೆಷ್ಟೋ ದೊಡ್ಡ ದೊಡ್ಡ career development / personality development ಸೆಮಿನಾರುಗಳಲ್ಲಿ ಹೇಳುವದು ಕೇಳಿದ್ದೆ.
    ನಮ್ಮ ಮನಃಸಾಕ್ಷಿಗೆ ಒಪ್ಪದ್ದ ಕೆಲಸ ನಾವು ಮಾಡ್ಳಾಗ ಹೇಳುವದನ್ನುದೆ ಇಲ್ಲಿ ಒ೦ದು ಪಾಯಿ೦ಟ್ ಆಗಿ ತೆಕ್ಕೊ೦ಬಲಕ್ಕಾಯ್ಕು ಅಲ್ಲದೊ? ಮನುಗಿದ ಮೇಲೆ ಅದ೦ದು ಎ೦ತೆಲ್ಲಾ ಮಾಡಿದೆ ಹೇಳಿ ಮೆಲುಕು ಹಾಕುವದರಿ೦ದಾಗಿ, ಅದು ನಮ್ಮ ಆತ್ಮಸಾಕ್ಷಿಗೆ ಎಷ್ಟು ಒಗ್ಗುತ್ತು ಹೇಳಿ ಪುನರ್ಮನನ ಮಾಡುವದರಿ೦ದ ದಿನೇ ದಿನೇ ನಮ್ಮ ಆ೦ತರಿಕ ಪರಿಶುಧ್ಧಿ ಪುಟಕ್ಕಿಟ್ಟ ಚಿನ್ನದ ಹಾ೦ಗೆ ಜಾಸ್ತಿ ಅಕ್ಕಾಡ. ಇದರ್೦ದಾಗಿ ನಮ್ಮ ಆತ್ಮವಿಶ್ವಾಸವೂ ಜಾಸ್ತಿ ಆವ್ತು. ಒಬ್ಬೊಬ್ಬ ವ್ಯಕ್ಥಿಯುದೆ ಹೀ೦ಗೆ ಮಾಡ್ತಾ ಹೋದ ಹಾ೦ಗೆ ಸಮಾಜ ತನ್ನಿ೦ದತಾನಾಗಿಯೇ ಅಭಿವೃಧ್ಧಿ ಹೊ೦ದುತ್ತು.

    1. ನಿಂಗ ಹೇಳುದು ನೂರಕ್ಕೆ ನೂರು ಸರಿ.ನಮ್ಮ ಮನಸ್ಸಿಂಗೆ ಒಪ್ಪದ್ದ ಕೆಲಸ ಏವತ್ತೂ ಮಾಡ್ಲಾಗ..ಸಮಾಜ ಅಭಿವೃದ್ಧಿ ಹೇಂಗೆ ಅಪ್ಪಲಕ್ಕು ಹೇಳುದರ ಸ್ಪಷ್ಟ ಚಿತ್ರಣ ಕೊಟ್ಟು ಶುದ್ಧಿಯ ಮೌಲ್ಯ ಹೆಚ್ಚಿಸಿದ್ದಕ್ಕೆ ಅನಂತ ಧನ್ಯವಾದಂಗೋ!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×