ಗೋರ್ಮೆಂಟು ಶಾಲೆ ಅಪಥ್ಯ ಆದ್ದೆಂತ?

February 15, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 81 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ನುಷ್ಯಂಗೆ ಯಾವಾಗ ಪೈಸೆಯ ಹಾಂಕಾರ ಹೆಚ್ಚಾಗಿ, ‘ಪ್ರೆಸ್ಟೀಜ್’ ಹೇಳ್ತ ಭೂತ ಹಿಡ್ಕೊಂಡತ್ತೋ ಅಷ್ಟಪ್ಪಾಗಳೇ ಅವನ ಜೀವನ ಶೈಲಿ ಪೂರ್ತಿ ಬದಲಪ್ಪಲೆ ಶುರು ಆತು. ಮನೆಲಿಪ್ಪ ಪ್ರತಿಯೊಂದು ವಸ್ತುದೇ ತನ್ನ ಪ್ರತಿಷ್ಠೆಗೆ ಸರಿಯಾಗಿ ಇರೆಕ್ಕು ಹೇಳ್ತ ಭಾವನೆ ಬೆಳದತ್ತು. ಎಷ್ಟು ಹೇಳಿರೆ, ತನ್ನ ಮಕ್ಕಳ ವಿದ್ಯಾಭ್ಯಾಸವುದೇ ‘ಪ್ರತಿಷ್ಠಿತ’ ಶಾಲೆಲೇ ಆಯೆಕ್ಕು! ಎಷ್ಟು ಪೈಸೆ ಕರ್ಚಾದರೂ ಅಡ್ಡಿ ಇಲ್ಲೆ. ಶಾಲೆ ಫೀಸು ಹೆಚ್ಚಿದ್ದಷ್ಟೂ ಅದು ‘ಒಳ್ಳೆ’ ಶಾಲೆ ಹೇಳಿ ಲೆಕ್ಕ!!

ಅದು ಯಾವ ದೃಷ್ಟಿಲಿ ‘ಒಳ್ಳೆ’ದಾಗಿ ಕಾಣ್ತೊ ದೇವರಿಂಗೇ ಗೊಂತು. ಪೇಟೆಗಳಲ್ಲಿ ಅಳಂಬುಗಳ ಹಾಂಗೆ ಪ್ರೈವೇಟ್ ಶಾಲೆಗ ಬತ್ತಾ ಇದ್ದು. ಹಾಂಗೇಳಿ ಅಲ್ಲಿಗೆ ಹೋಪ ಮಕ್ಕ ಏನೂ ಕಮ್ಮಿ ಇಲ್ಲೆ. ಪ್ರತಿ ಶಾಲೆಲೂ ಕ್ಲಾಸುಗಳ ಕನಿಷ್ಟ ಎರಡಾದರೂ ವಿಭಾಗ ಮಾಡುವಷ್ಟು ಮಕ್ಕ ಇರ್ತವು. ಪರಿಣಾಮವಾಗಿ ಕಾಲಿ ಆವುತ್ತಾ ಇಪ್ಪದು ನಮ್ಮ ಗೋರ್ಮೆಂಟು ಶಾಲೆಗೊ. ಕೆಲವು ಶಾಲೆಗಳಲ್ಲಿ ಅಂತೂ ನಾಕು-ಐದು ಮಕ್ಕ ಮಾತ್ರ! ಈ ಪರಿಸ್ಥಿತಿಂದಾಗಿ ಎಷ್ಟು ಸರ್ಕಾರಿ ಶಾಲೆಗೊ ಮುಚ್ಚಿಹೋಯಿದಾ ಏನ!

ಒಂದು ವಿಷಯ ಗಮನುಸಲೇ ಬೇಕು. ಸರ್ಕಾರಿ ಶಾಲೆಲಿ ಟೀಚರಪ್ಪದು ಹೇಳಿರೆ ಸುಲಬದ ಮಾತಲ್ಲ. ಬಂಙ ಬಂದು ಬಿ.ಎಡ್ ಪಾಸು ಮಾಡಿ ಅರ್ಹತಾ ಪಟ್ಟಿಲಿ ಸೇರಿಗೊಂಬದು ಹೇಳಿರೆ ನೀರು ಕುಡುದಾಂಗಲ್ಲ. ಕ್ರಮಾಗತವಾಗಿ ಶಿಕ್ಷಣದ ವಿಧಾನಂಗಳ, ಮಕ್ಕಳ ಮನೋಸ್ಥಿತಿಯ, ಕಲಿಶುವ ಶೈಲಿಯ – ಎಲ್ಲವನ್ನೂ ಕಲ್ತು, ಪ್ರಾಯೋಗಿಕವಾಗಿ ಒಂದು ಶಾಲೆಲಿ ಕಲುಶಿ ಅನುಭವ ಪಡಕ್ಕೊಂಡು ಮತ್ತೆ ಕಲಿಶುಲೆ ಬತ್ತವು ನಮ್ಮ ಟೀಚರುಗೊ. ಅವ್ವೆಲ್ಲ ಕಲಿಕೆಯ ಕ್ರಿಯಾತ್ಮಕತೆಯ ಕಲ್ತವ್ವು.
ಆದರೆ, ಪ್ರೈವೇಟ್ ಶಾಲೆಲಿ ಕಲಿಶುತ್ತವಕ್ಕೆ ಬಿ.ಎಡ್ ಆಗಿರ್ತೂಳುವ ಗ್ಯಾರೆಂಟಿ ಇಲ್ಲೆ. ಬರೇ ಒಂದು ಡಿಗ್ರಿ ಮಾಡಿಕ್ಕಿ, ಅದುದೇ ಅಲ್ಲಿಂದಲ್ಲಿಗೆ ಪಾಸಾದ್ದಾಗಿಪ್ಪಲೂ ಸಾಕು, ಅಷ್ಟು ಮಾಡಿಕ್ಕಿ ‘ಕಲಿಶುಲೆ’ ಬತ್ತವು. ಅವಕ್ಕೆ ಈ ಮಕ್ಕಳ ಮನೋಸ್ಥಿತಿ ಆಗಲಿ, ಕಲಿಶುವ ಕ್ರಿಯೇಟಿವಿಟಿ ಆಗಲಿ ರಜ್ಜವೂ ಗೊಂತಿಲ್ಲದ್ದಿಕ್ಕು. ಅನುಭವ ಅಂತೂ ಮೊದಲೇ ಇರ.
ನಾವು ಇದರ ಎಲ್ಲ ಆಲೋಚನೆಯೇ ಮಾಡ್ತಿಲ್ಲೆ ಅಲ್ಲದಾ? ದೊಡ್ಡಹೆಸರಿನ ಪ್ರೈವೇಟು ಶಾಲೆ ಹೇಳಿಗೊಂಡು ಅದರ ಹೆಸರಿಂಗೆ ಮರುಳಾಗಿ ಮಕ್ಕಳ ಭವಿಷ್ಯವನ್ನೇ ಹಾಳುಮಾಡ್ತು.

ಈಗಂತೂ ಕ್ರಿಶ್ಚಿಯನ್ ಕಾನ್ವೆಂಟುಳ ಒಟ್ಟಿಂಗೆ ಬ್ಯಾರಿಗಳ ಎಜುಕೇಶನಲ್ ಇನ್ಸ್ಟಿಟ್ಯೂಟ್‌ಗಳೂ ಲೆಕ್ಕ ಇಲ್ಲದ್ದಷ್ಟು ಬತ್ತಾ ಇದ್ದು, ಬೆಳೆತ್ತಾ ಇದ್ದು. ಆಶ್ಚರ್ಯ ಹೇಳಿರೆ, ಆ ಶಾಲೆಗೊಕ್ಕೆ ನಮ್ಮ ಹಿಂದೂಗಳೇ ರಾವುಕಟ್ಟಿ ಹೋವುತ್ತಾ ಇದ್ದವು! ನಿಜವಾದ ಮೌಲ್ಯಯುತ ಶಿಕ್ಷಣವ ಬಿಟ್ಟು ಪೈಸೆಯ ಮೌಲ್ಯ ಹೆಚ್ಚಿಪ್ಪಲ್ಲಿಗೆ ಹೋವುತ್ತಾ ಇಪ್ಪದು ಬೇಜಾರದ ಸಂಗತಿ.

ಇಂಜಿನಿಯರಿಂಗ್ ಆಗಿಕ್ಕು, ಮೆಡಿಕಲ್ ಆಗಿಕ್ಕು, ಅಥವಾ ಯಾವುದೇ ಉನ್ನತ ಪದವಿ ಆಗಿಕ್ಕು – ಅಲ್ಲೆಲ್ಲ ಉತ್ತಮ ಸಾಧನೆ ಮಾಡುವವು ಗೋರ್ಮೆಂಟು ಶಾಲೆಲಿ ಕನ್ನಡ ಮೀಡಿಯಂಲಿ ಕಲ್ತವ್ವೇ. ಅಲ್ಲಿಯಾಣ ಅಡಿಪಾಯ ಅಷ್ಟು ಗಟ್ಟಿ ಇರ್ತು.
ಲೆಕ್ಕ ಕಲಿಶಿದ ದೇವಮ್ಮ ಟೀಚರು, ವಿಜ್ಞಾನ ಕಲಿಶಿದ ಬಾಗೀರಥಿ ಟೀಚರು, ಸಮಾಜ ಕಲಿಶಿದ ಉಮೇಶ ಮಾಷ್ಟ್ರ ಇವೆಲ್ಲ ಅಚ್ಚಳಿಯದ್ದೆ ನೆಂಪಿಪ್ಪಾಂಗೆ ಮೇತ್ಸು, ಸಯನ್ಸು, ಸೋಶಿಯಲಿನ ಮೇರಿ ಮತ್ತೊಂದು ಮೇಡಮ್ಮುಗೊ ನೆಂಪೊಳಿಗಾ?

ಈಗಂತೂ ಸರ್ಕಾರಿ ಶಾಲೆಗಳಲ್ಲಿ ಸವಲತ್ತುಗೊಕ್ಕೆ ಕಮ್ಮಿ ಏನೂ ಇಲ್ಲೆ. ಅಗತ್ಯ ಸೌಕರ್ಯಂಗೊ ಎಲ್ಲ ಅಚ್ಚುಕಟ್ಟಾಗಿ ಇದ್ದು.  ಅದರ ಉಪಯೋಗ ಪಡಕ್ಕೊಂಬಲೆ ಮಕ್ಕಳೇ ಇಲ್ಲದ್ದದು!
ಚೆ ಎಂತ ಅವಸ್ಥೆ ಅಲ್ಲದಾ?
ಪ್ರತಿಭಾವಂತ ಟೀಚರುಗಳ ಪ್ರತಿಭೆಯ ಸದುಪಯೋಗಕ್ಕೆ ಅವಕಾಶ ಇಲ್ಲೆ, ಪ್ರತಿಭಾವಂತ ಮಕ್ಕಳ ಪ್ರತಿಭೆ ಬೆಳಗುಲೆ ದಾರಿದೀಪವೇ ಇಲ್ಲೆ!

ಗೋರ್ಮೆಂಟು ಶಾಲೆ ಅಪಥ್ಯ ಆದ್ದೆಂತ?, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 81 ಒಪ್ಪಂಗೊ

 1. ಭಾಗ್ಯಲಕ್ಶ್ಮಿ

  ಅರ್ಗೆಂಟು ಮಾಣಿಯ ಪ್ರಶ್ನೆ ನೋಡಿ ಎನಗೆ ಕೇರಳದ ಸರಕಾರಿ ಶಾಲೆಯ ಪ್ರಶ್ನೆ ಪತ್ರಿಕೆಯ ನೆನಪ್ಪಾತು .ಅದರಲ್ಲಿ ಈ ತರದ ಒಂದು ವಿಷಯ ಕೊಟ್ಟು ಅದರ ಪ್ರಸ್ನೋಗೊಕ್ಕೆ ಉತ್ತರಿಸುಲೇ ಇರುತ್ತು .ಅದರಲ್ಲಿ ಅರ್ಗೆಂಟು ಮಾಣಿಯ ಹಾಂಗೆ ಒಬ್ಬ ಮಾನಿಯನ್ನೋ ಕೂಸನ್ನೊ ಹೆಸರಿಸಿರುತ್ತವು .ಅನುಶ್ರೀ ಎತ್ಹಿದ ವಿಷಯ ( ಪ್ರತಿಕ್ರಿಯೆಗಳ ಸಮೇತಆದರೆ )ಪ್ರಶ್ನೆಗೋ ಕೆಳ ಕಂಡ ಹಾಂಗೆ ಇರುತ್ತಿತು ‘
  ೧)ಅರ್ಗೆನ್ತುಮಾನಿಗೆ ಗೊಂದಲ ಅಪ್ಪಲೇ ಕಾರಣ ಎನ್ಥಾದಿಕ್ಕು ?
  ೨)ಅವ ಹೇಳಿದ ೪ ತರದ ಶಾಲೆಗಳಲ್ಲಿ ನಿಂಗಳ ಶಾಲೆ ಯಾವ ಗುಂಪಿನ್ಗೆ ಸೇರುತು?
  ೩) ನಿಂಗಳ ಪಂಚಾಯತಿಲಿ ಹೀನ್ಗಿಪ್ಪ ಎಷ್ಟು ಶಾಲಗೋ ಇದ್ದು ?
  ೪)ಅರ್ಗೆಂಟು ಮಾಣಿಯ ಗೊಂದಲಕ್ಕೆ ಕಾರಣ ಆದ ಪಾರವ ಗುರುತುಸಿ ಈ ವಿಷಯಲ್ಲಿ ನಿಂಗಳ ಅಭಿಪ್ರಾಯ ಬರೆರಿ
  .5)ಈ ವಿಷಯಕ್ಕೆ ಒಂದು ಉತ್ತಮ ತಲೆ ಬರಹ ಕೊಡಿ

  ನವಗೆ ಇದು ತಲೆ ಹರಟೆ ಪ್ರಶ್ನಗಳ ಹಾಂಗೆ ಕಾಣ್ತು ಆದರೆ ಶಿಕ್ಷಣ ತಜ್ಞರ ಪ್ರಕಾರ ಇದರಲ್ಲಿ ಮಕ್ಕೊಗೆ ಹಲವು ವಿಷಯಗಳ ಬಗ್ಗೆ ಚಿಂತನೆ ನಡೆತ್ತು.. ಶಾಲೆಗಳಲ್ಲಿ ಇಪ್ಪ ವಿಧ ,ಅವರ ಶಾಲೆ ಯಾವ ಪಂಚಾತಿನ್ಗೆ ಸೇರಿದ್ದು, ಅರ್ಗೆಂಟು ಮಾಣಿಗೆ ಗೊಂದಲ ಅಪ್ಪಲೆ ಕಾರಣ ಆದ ಪ್ರತಿಕ್ರಿಯೋಗೋ , ಮತ್ತೆ ಅವರ ಸ್ವಂತ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕುದು ಇತ್ಯಾದಿ . ಸೃಜನ ಶೀಲತೆಯ ಬಳಸಿಗೊಲ್ಲದ್ದೆ ಈ ಪ್ರಷ್ಣಗೊಕ್ಕೆ ಉತ್ತರ ಕೊಡ್ಲೇ ಇಡಿಯ
  .
  ಸುರುವನ ಪ್ರಶ್ನಗೊಕ್ಕೆ ಉತ್ತರನ್ಗೋ ಈ ರೀತಿ ಇಕ್ಕು

  ರಾಮ :ಗೆಂಟು ಮಾಣಿ ಗೆಂಟು ಮಾಡಿಗೊಂದು ಓದಿಕ್ಕು

  ಜೋನ್ :ಗೆಂಟು ಮಾಣಿ ಇಂಗ್ಲಿಷ್ ಶಾಲೇಲಿ ಕಲ್ತು ಅವಂಗೆ ಕನ್ನಡ ಅರ್ಥಾಯಿದಿಲ್ಲೇ

  ಶೀಲ : ಎನಗುದೆ ಅವನ ಹಾಂಗೆ ಗೊಂದಲ ಅಯಿದು

  ಕಮಲ: ಕೆಲನ್ದ ೩ ನೆ ಪಾರ ಓದಿ ಬಂದ ಪ್ರತಿಕ್ರಿಯಗೋ ಅವಂಗೆ ಗೊಂದಲ ಉಂಟು ಮಾಡಿದ್ದು
  .
  ಅಮ್ಮು ; ” ಇಂಜಿನಿಯರಿಂಗ್ ಆಗಿಕ್ಕು, ಮೆಡಿಕಲ್ ಆಗಿಕ್ಕು, ಅಥವಾ ಯಾವುದೇ ಉನ್ನತ ಪದವಿ ಆಗಿಕ್ಕು – ಅಲ್ಲೆಲ್ಲ ಉತ್ತಮ ಸಾಧನೆ ಮಾಡುವವು ಗೋರ್ಮೆಂಟು ಶಾಲೆಲಿ ಕನ್ನಡ ಮೀಡಿಯಂಲಿ ಕಲ್ತವ್ವೇ. ಅಲ್ಲಿಯಾಣ ಅಡಿಪಾಯ ಅಷ್ಟು ಗಟ್ಟಿ ಇರ್ತು”
  ಈ ವಾಕ್ಯನ್ಗೋ ಓದಿ ಜನ್ಗೋ ನೀಡಿದ ಪ್ರತಿಕ್ರಿಯೆಂದ ಅವಂಗೆ ಗೊಂದಲ ಅಯಿದು ‘

  ಈಗಣ ಶಿಕ್ಷಣ ನೀತಿಯ ಪ್ರಕಾರ ಇದರಲ್ಲಿ ಯಾವ ಉತ್ತರದೆ ತಪ್ಪಲ್ಲ. ಎಂಥದಕ್ಕೆ ಹೇಳಿದರೆ ಅವು ಅವವು ಬೆಳದ ಮನೆಯ ಪರಿಸರ , ಅವಕ್ಕೆ ಆ ಪ್ರಾಯಲ್ಲಿ ಸಿಕ್ಕಿದ exposure ,ಅವರ ಮಾನಸಿಕ, ಭೌಧಿಕ ಬೆಳವನಿಗೆ ಗೆ ಅನುಗುಣವಾಗಿ ಅವರ ಉತ್ತರ ಇರುತ್ತು
  ಮಾಸ್ತ್ರಕ್ಕೊಗೆ grade ಹಾಕುವ ನಿಯಮನ್ಗೊ ಇರುತ್ತು. ಬೇರೆ ಬೇರೆ ಪ್ರಸ್ನೋಗಕ್ಕೆ ಬೇರೆ ಬೇರೆ ವಿಧ ಇರುತ್ತು ( ಮೇಲೆ ಹೇಳಿದ್ದು ಎಲ್ಲಾ ಸೇರಿ ಒಂದು ಪ್ರಶ್ನೆ ) ಹೆಚ್ಹಿನ ವಿಷಯ ಮಾಸ್ತರ ಹತ್ತರೆ ಕೆಳಿಗೊಳ್ಳಿ( ಆನು ಅಮ್ಮ ಆಗಿ ಬರವದು )

  ಈ ಉದಾಹರಣೆ ಓದಿ ಅಪ್ಪಗ ನಿಂಗೋಗೆ ಸರಕಾರದ ಶಿಕ್ಷಣ ನೀತಿಯ ಬಗ್ಗೆ ಯಾವ ಅಭಿಪ್ರಾಯ ಬತ್ತು?

  ಬೈಲಿಲಿ ಕೆಲವರು ಉತ್ತಮ ಶಾಲೆಗಳ ತೋರಿಸಿ ಹೇಳಿ ಹೇಳಿದವು . ರಘು ಅಣ್ಣನ ಅಭಿಪ್ರಾಯವ , ಮಹೀಶಣ್ಣನ ಪ್ರಶ್ನಗಳ ಆನು ಅನುಮೊದುಸುತ್ತೆ . ಉತ್ತಮ ಶಾಲೆ ಹೇಳಿ ಹೇಳುವಲ್ಲಿ ಒಬ್ಬೊಬ್ಬನ ಮಾನದಂಡ ಒಂದೊಂದು ತರ ಇರುತ್ತು. ಹಂಗಾಗಿ ಬೇರೆಯೋರು ತೋರಿಸಿದ ಶಾಲಗೆ ನಾವು ನಮ್ಮ ಮಕ್ಕಳ ಕಳುಸುಲೇ ಆಗ . ನಮ್ಮ ಸೀಮಿತ ಪರಿದಿಲಿ — ಆರ್ಥಿಕ ವ್ಯವಸ್ಥೆ, ಶಾಲಗೆ ಕರಕ್ಕೊಂದು ಹೋಗಿ ಬಪ್ಪ ವ್ಯವಸ್ಥೆ, ನಮ್ಮ ಮನೆ , ಆಫೀಸು ಕೆಲಸಂಗಲೋತ್ತಿನ್ಗೆ ಶಾಲೆಯ ಹೊತ್ತಿಂಗೆ ಇಪ್ಪ ಹೊಂದಾಣಿಕೆ , ನವಗೆ ಮಕ್ಕೊಗೆ ಹೇಳಿ ಕೊಡಲೇ ಬೇಕಾದಸ್ತ್ತು ಸಮಯ, ಕೀಳು ಮಟ್ಟಕ್ಕೆ ಇಳಿಯದ್ದ ಪರಿಸರ ಎಲ್ಲಾ ಇದ್ದೋ ಹೇಳಿ ನೋದೆಕ್ಕು. ಎಲ್ಲೆದಕ್ಕಿಂಥ ಮುಕ್ಯವಾಗಿ ನಮ್ಮ ಶಿಕ್ಷಣ ನೀತಿಯ ತಿಳ್ಕೊಲೆಕ್ಕು. ಅದರ ತಿಳ್ಕೊಬಲೇ ಇಷ್ಟ ಇಪ್ಪೋರಿನ್ಗೆ ಇಲ್ಲಿದ್ದು ವಿಳಸ
  http://www.ncert.nic.in .ಇದರಲ್ಲಿ national curriculam frame ವರ್ಕ್ ೨೦೦೫ ಹೇಳಿ ಇದ್ದು. ಪುರುಸೋತು ಇಪ್ಪಗ ಮಾತ್ರ ನೋಡಲೇ ಹೋಗಿ .

  [Reply]

  ಭಾಗ್ಯಲಕ್ಶ್ಮಿ Reply:

  ಸುರುವಾಣ ಪ್ರಶ್ಣೆಗ್ಕ್ಕೊಕ್ಕೆ ಹೆಲಿ ಇಪ್ಪಲ್ಲಿ ೧ ನೆ ಪ್ರಶ್ಣೆಗೆ ಉತ್ತರ ಈ ರೀತಿ ಇಕ್ಕು ಹೆಲಿ ಆಯೆಕ್ಕು

  [Reply]

  VA:F [1.9.22_1171]
  Rating: 0 (from 0 votes)
  ಅರ್ಗೆ೦ಟು ಮಾಣಿ

  argentumaani Reply:

  ಯಬ್ಬೊ! ಅಡ್ಡ ಬೀಳ್ತಾ ಇದ್ದೆ ಚಿಕ್ಕಮ್ಮೊ! ಉತ್ತರನ್ಗೊ ಆಹಾ! ಪಶ್ಟಿ೦ಗೆ ನಿನ್ನ ಒಪ್ಪಕ್ಕೆ ಉತ್ತರ ಕೊಡೆಕ್ಕು ಹೆಳಿ ಆತು. ನಮೊನ್ನಮಹ!
  ಶರಿ ಆಗಿ ಯೆನ್ನ ಗೊನ್ದಲನ್ಗಳ ಪರಿಹರಿಸಿದ್ದೆ. ಎನ್ನ ಮಗಳ ಯೆವ ಶಾಲೆಗೆ ಕಳುಶೆಕ್ಕು ಹೆಳಿ ಗೊನ್ತಾತು.

  ಎನ್ನ ಗೆನ್ನ್ಡನತ್ರೆ ಇನ್ದೆ ಮಗಳ ಆ ಸರಿಯಾದ ಶಾಲೆಗೆ ಕಳುಶುತ್ತೆ!

  “ಉತ್ತಮ ಶಾಲೆ ಹೇಳಿ ಹೇಳುವಲ್ಲಿ ಒಬ್ಬೊಬ್ಬನ ಮಾನದಂಡ ಒಂದೊಂದು ತರ ಇರುತ್ತು.”
  “ಬೇರೆಯೋರು ತೋರಿಸಿದ ಶಾಲಗೆ ನಾವು ನಮ್ಮ ಮಕ್ಕಳ ಕಳುಸುಲೇ ಆಗ”

  ಪರಫೆಕ್ಟು!
  ಈನ್ನರಾರೂ ಯೆನಗಿತ್ತ ಗೊನ್ದಲವ ಹೆಹೆ…ಮುನ್ದುವರ್ಸುತ್ತಿಲ್ಲೆ!

  ನಮನಗಳು.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ನೀನು ಅರ್ಜೆಂಟು ಮಾಣಿಯೋ, ಅಲ್ಲ ಅರ್ಗೆಂಟು ಮಾಣಿಯೊ ?
  ಶರಿ ಆಗಿ ಯೆನ್ನ ಗೊನ್ದಲನ್ಗಳ ಪರಿಹರಿಸಿದ್ದೆ. ಎನ್ನ ಮಗಳ ಯೆವ ಶಾಲೆಗೆ ಕಳುಶೆಕ್ಕು ಹೆಳಿ ಗೊನ್ತಾತು.
  ಎನ್ನ ಗೆನ್ನ್ಡನತ್ರೆ ಇನ್ದೆ ಮಗಳ ಆ ಸರಿಯಾದ ಶಾಲೆಗೆ ಕಳುಶುತ್ತೆ!
  ಈ ಮಾತುಗೊ ಎಲ್ಲ ನಿನ್ನ ಸ್ವಗತವೊ ? ಅಥವ ಬೇರೆಯವರ ಮಾತಿನ ನೀನು ಹೇಳಿದ್ದೊ ?
  ಈ ಮಾತುಗೊ ನಿನ್ನದೇ ಆದರೆ, ನೀನು ಮಾಣಿಯೋ, ಅಪ್ಪನೊ, ಅಮ್ಮನೊ ಒಂದೂ ಗೊಂತಾವುತ್ತಿಲ್ಲೇನೆ. ಒಪ್ಪ ಕೊಡುವಗ, ಒಂದಾರಿ, ಟೈಪು ಮಾಡಿಕ್ಕಿ ಎಂತ ಟೈಪು ಮಾಡಿದ್ದೆ ಹೇಳಿ ನೋಡಿ ಸರಿ ಮಾಡಿಕ್ಕು ಮಾರಾಯ. ಅಷ್ಟೂ ಅರ್ಜೆಂಟು ಮಾಡಿರೆ ಹೇಂಗೆ ? ಹೇಳಿದೆ ಹೇಳಿ ಬೇಜಾರು ಮಾಡಿಕ್ಕೆಡ.

  [Reply]

  ಭಾಗ್ಯಲಕ್ಶ್ಮಿ Reply:

  ನಮಸ್ಕಾರನ್ಗಳ ಓದಿದ ಕೂದ್ಲೆ ಚಿಕ್ಕಮ್ಮ ಅದರ ಒಳ ಇಪ್ಪ ಕೆಶವನ್ಗೆ ರವ್ನಾನ್ಸಿತ್ತು. ಅಲ್ಲ್ಲಿನ್ದಲೆ ಆಶೀರ್ವಾದ ಬಕ್ಕು.

  ನಿನ್ನ ಗೊನ್ದಲ ಪರಿಹಾರ ಅಪ್ಪಗ ಬೈಲಿಲಿ ಕೆಲವರಿನ್ಗೆ ಗೊನ್ದಲ ಸುರು ಅಯಿದು . ಆಚ ಮನೆ ಕನ್ನದಡ ಪನ್ಡಿತರು ತಲೆ ಕೆರಕ್ಕೊನ್ದು ಹೇಳಿದವು…..” ಈ ಅರ್ಗೆನ್ತು ಮಾಣಿ ಸ್ತ್ರೀ ಲಿನ್ಗವೊ, ಪುಲ್ಲಿನ್ಗವೊ ಅಲ್ಲ ನಪುನ್ಸಕ ಲಿನ್ಗವೊ? ಒನ್ದು ಗೊನ್ಥವುತ್ತಿಲ್ಲೆನ್ನೆ. ಅಲ್ಲ ಗೊನ್ಥಗಿ ಎನ್ತ ಅಪ್ಪಲೆ ಹೊಪಲೆ ಇಲ್ಲೆ ” ಹೆಳಿ ಅವ್ವೇ ಮತ್ತೆ ಹೇಳಿದವು.(ಖುಶಾಲಿನ್ಗಡ)

  VA:F [1.9.22_1171]
  Rating: 0 (from 0 votes)
  ಚೆನ್ನೈ ಬಾವ°

  ಚೆನ್ನೈ ಭಾವ. Reply:

  ಹಿ.. ಹ್ಹಿ ಹ್ಹ್ಹ್ಹೀ..

  VA:F [1.9.22_1171]
  Rating: 0 (from 0 votes)

  ಭಾಗ್ಯಲಕ್ಶ್ಮಿ Reply:

  “ಯಬ್ಬೊ! ಅಡ್ಡ ಬೀಳ್ತಾ ಇದ್ದೆ ಚಿಕ್ಕಮ್ಮೊ! ಉತ್ತರನ್ಗೊ ಆಹಾ! ಪಶ್ಟಿ೦ಗೆ ನಿನ್ನ ಒಪ್ಪಕ್ಕೆ ಉತ್ತರ ಕೊಡೆಕ್ಕು ಹೆಳಿ ಆತು. ನಮೊನ್ನಮಹ!”

  ಇದರ ಓದಿದ ಕೂದ್ಲೆ ಚಿಕ್ಕಮ್ಮ ಅದರ ಒಳ ಇಪ್ಪ ಕೆಶವನ್ಗೆ ರವ್ನಾನ್ಸಿತ್ತು. ಅಲ್ಲ್ಲಿನ್ದಲೆ ಆಶೀರ್ವಾದ ಬಕ್ಕು.

  ನಿನ್ನ ಗೊನ್ದಲ ಪರಿಹಾರ ಅಪ್ಪಗ ಬೈಲಿಲಿ ಕೆಲವರಿನ್ಗೆ ಗೊನ್ದಲ ಸುರು ಅಯಿದು . ಆಚ ಮನೆ ಕನ್ನದಡ ಪನ್ಡಿತರು ತಲೆ ಕೆರಕ್ಕೊನ್ದು ಹೇಳಿದವು…..” ಈ ಅರ್ಗೆನ್ತು ಮಾಣಿ ಸ್ತ್ರೀ ಲಿನ್ಗವೊ, ಪುಲ್ಲಿನ್ಗವೊ ಅಲ್ಲ ನಪುನ್ಸಕ ಲಿನ್ಗವೊ? ಒನ್ದು ಗೊನ್ಥವುತ್ತಿಲ್ಲೆನ್ನೆ. ಅಲ್ಲ ಗೊನ್ಥಗಿ ಎನ್ತ ಅಪ್ಪಲೆ ಹೊಪಲೆ ಇಲ್ಲೆ ” ಹೆಲಿ ಅವ್ವೇ ಮತ್ತೆ ಹೇಳಿದವು.

  [Reply]

  ಗಣೇಶ ಪೆರ್ವ

  ಗಣೇಶ Reply:

  ಅರ್ಗೆನ್ತು ಮಾಣಿಯುದೆ ಭಾಗ್ಯಲಕ್ಹ್ಮಿ ಅಕ್ಕನುದೆ ಬರದ ಶೈಲೆ ನೋಡಿರೆ ಎ೦ತದೋ……………………….. ಸ೦ಶಯ…. ಇಬ್ರೂದೆ ರಕ್ತಸ೦ಬ೦ಧಿಗಳೋ ಹೇ೦ಗೆ? 😉 ಎರಡು ಬರಹ೦ಗಳಲ್ಲಿಯುದೆ ಎ೦ತದೋ ಸಾಮನ್ಯಧರ್ಮ ಇಲ್ಲೆಯೋ….? :-)

  ಅರ್ಗೆ೦ಟು ಮಾಣಿ

  argentumaani Reply:

  ಅದಾ… ಇದು ಅಕ್ಕಂಗೆ ಪ್ರಶ್ನೆ… (ಆನು ರಕ್ತ ದಾನ ಮಾಡಿದ್ದು ಲಾಷ್ಟು ಯೆವಾಗಪ್ಪೋ! ಬಾಕಿ ಯೆನಗೊಂತಿಲ್ಲೆ).

  ಭಾಗ್ಯಲಕ್ಶ್ಮಿ Reply:

  ರಕ್ತ ಸಂಭಂದಲ್ಲಿಪ್ಪ ವ್ರುನಾಥ್ಮಕ ಗುಣ ಕಂಡದೋ ,ಧನಾತ್ಮಕ ಗುಣ ಕಂಡದೋ?ಇದು ತಿಳ್ಕೊಂಡ ಮತ್ತೆ ಗನೀಶಂಗೆ ಉತ್ತರ ಕೊಡ್ತೆ ಆಗದೋ?

  VA:F [1.9.22_1171]
  Rating: 0 (from 0 votes)
  ಅರ್ಗೆ೦ಟು ಮಾಣಿ

  argentumaani Reply:

  hehehe :) akko ningala hatreye preshne keltaa iddovu!

  VN:F [1.9.22_1171]
  Rating: 0 (from 0 votes)
 2. ಅರ್ಗೆ೦ಟು ಮಾಣಿ
  argentumaani

  ಹೆಹೆ, ಅದು ಲಾಯ್ಕ ಆಯ್ದು ಮಾವ! ಸ್ವಾ(ಹ)ಗತ. (ಅದು ಬೊಸನ್ಗೆ)! ಆನು ಅರ್ಜೆಂಟು+ಅರ್ಗೆಂಟು ಮಾಣಿ,
  ಸುಮ್ಮನೆ ಹಾನ್ಗೆ ಬರದೆ! ಎನ್ತಾರೊನ್ದು ಹೆಳೆಕ್ಕನ್ನೆ ಲಕ್ಶ್ಮಕ್ಕನ್ಗೆ! ಮಗಳೊ, ಮಗನೋ, ಗೆನ್ಡನೊ, ಹೆನ್ದತಿಯೋ- ಬೈಲಿನ ಮನುಶ್ಯರಿನ್ಗೆ ಎಲ್ಲ ಓದಿ ಒನ್ದು ಧನ್ಯವಾದ ಹೆಳೆಕ್ಕೆ!
  ತಪ್ಪಿ ಹೊವ್ಥು, ಮೊನ್ನೆ ಶ್ರೀರಾಮುಲುವಿನ್ಗೆ ಆದ ಹಾನ್ಗೆ!

  [Reply]

  VN:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಅನುಶ್ರೀ..
  ಶುದ್ದಿಯ ಆಯ್ಕೆ ತುಂಬಾ ಹಿಡುಸಿತ್ತು.
  ಆರೂ ಗಮನ ಕೊಡದ್ದ ಒಂದು ವಿಶಯವ ತೆಕ್ಕೊಂಡು, ವಿವರಣೆ ಕೊಟ್ಟು ಇಡೀ ಬೈಲನ್ನೇ ಚಿಂತನೆಗೆ ಮಡಗಿದ್ದಿ ನಿಂಗೊ..
  ತುಂಬಾ ಕೊಶಿ ಆತು.

  ಸ್ವರವನ್ನೇ ಕೇಳುಸುತ್ತ ವಿನಿಯೋಗ ಪ್ರಯೋಗ ತುಂಬಾ ಇಷ್ಟ ಆತು.
  ಇನ್ನಾಣದ್ದರ ಕಾದೊಂಡಿದ್ದೆ :-)

  [Reply]

  VA:F [1.9.22_1171]
  Rating: +1 (from 1 vote)
 4. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಲೇಖನಂದಲೂ ಹೆಚ್ಚಿಗೆ, ಒಂದು ಒಳ್ಳೆ ಚರ್ಚೆ ಆದ್ದು ತುಂಬಾ ಖುಷಿ ಆತು. ಅಭಿಪ್ರಾಯ ತಿಳುಸಿ ಪ್ರೋತ್ಸಾಹಿಸಿದ ಎಲ್ಲೊರಿಂಗೂ ಧನ್ಯವಾದಂಗೊ.

  [Reply]

  Harish Kevala Reply:

  ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೊರತಾದ ಶಿಕ್ಷಣಕ್ಕೆ ಹೆಚ್ಹಿನ ಅಸ್ತೆ ಕೊಡಬೇಕಾದ ಕಾಲಗಟ್ಟವನ್ನು ನಾವೀಗಾಗಲೇ ತಲುಪಿದ್ದೇವೆ.
  ನಮ್ಮ ಕಣ್ಣೆದ್ರಿಗೆ ಬೆಳೆದು ನಿಂತ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಬಗ್ಗೆ ಚರ್ಚೆ ಅನಾವಶ್ಯ . ನಮ್ಮ ಮನೆಯಲ್ಲಿ ನಾವು ನಮ್ಮ ಮಗುವನ್ನು ಸಹಜ ಶಿಕ್ಷಣದಲ್ಲೇ ಬೆಳೆಸುತ್ತಾ ನಾವು ಬೆಳೆಯುತ್ತಿದ್ದೇವೆ. ಕೃಷಿ ಹೇಗೆ ಸಾವಯವ ಕೃಷಿಯತ್ತ ವಾಲುತ್ತಿದೆಯೋ, ಹಾಗೆಯೆ ನಮ್ಮ ಶಿಕ್ಷಣ ಕೂಡ ಸಹಜ ಶಿಕ್ಷಣದತ್ತ ವಾಲಬೇಕಿದೆ!
  ಶಿಕ್ಷಣವು ಪಾಲಕರು ಹಾಗೂ ಮನೆ ಕೇಂದ್ರಿತವಾಗಿರಬೇಕು. ಶಾಲಾ ಹಾಗೂ ಶಿಕ್ಷಕರ ಕೇಂದ್ರಿತ ವಾಗಿದ್ದೆ ದೊಡ್ಡ ದುರಂತ.
  ಮುಂದುವರೆದ E-ಜಗತ್ತಿನಲ್ಲಿ ಮನೆ ಶಿಕ್ಷಣ ಸುಲಬ ಸಾದ್ಯ ಕೂಡ ಆಗಿದೆ. ವಿದೇಶಗಳಲ್ಲಿ D-schooling ಅನ್ನೋ ಕಾನ್ಸೆಪ್ಟ್ ನಲ್ಲಿ ಮನೆ ಶಿಕ್ಷಣ ಪ್ರಾಯೋಗಿಕ ಹಂತ ದಾಟಿದೆ. ಪ್ರಾಜ್ಞರ ಮಾಗದರ್ಶನ ಈ ದಿಕ್ಕಿನಲ್ಲಿ ಅವಶ್ಯ ವಾಗಿದೆ.
  Idu enna obba bangalorili ippa havyaka friendna alochane, ava idanne avana magange impliment madidda..idara bagge hinde ondari tarangallu lekhana bandittu.

  [Reply]

 5. ಸುವರ್ಣಿನೀ ಕೊಣಲೆ
  Suvarnini Konale

  ಅಸಡ್ಡೆ ಭಾಷೆಯ ಬಗ್ಗೆಯೂ ಬೇಡ, ಶಾಲೆಯ ಬಗ್ಗೆಯೂ ಬೇಡ. ಸಣ್ಣಾದಿಪ್ಪಗಂದಲೇ ಇಂಗ್ಲೀಷು ಮಾಧ್ಯಮದ ಶಾಲೆಗೆ ಮಕ್ಕಳ ಕಳ್ಸುತ್ತರೆ ತಪ್ಪಲ್ಲ, ಆದರೆ ಮಕ್ಕೊಗೆ ನಮ್ಮ ಭಾಷೆ-ಸಂಸ್ಕೃತಿಯ ಮನೆಲಿ ಕಲುಶುದರ ಮರವಲಾಗ.
  ಮೂರು-ನಾಲ್ಕು-ಐದು ವರ್ಷ ಪ್ರಾಯದ ಪುಟ್ಟು ಮಕ್ಕಳ ಆಂಗ್ಲ ಮಾಧ್ಯಮದ ಶಾಲೆಗೆ ಕಳ್ಸಿರೆ ಅಪ್ಪ ಕೆಲವು ತೊಂದರೆಗಳ ಹೇಳ್ತೆ,
  • ಅಷ್ಟು ಸಣ್ಣ ಪ್ರಾಯಲ್ಲಿ ಮಕ್ಕೊ ಇನ್ನುದೇ ಮನೆ ಭಾಷೆಯ ಕಲಿತ್ತಾ ಇರತವಷ್ಟೆ, ಅಂಬಗ ಅವರ ಆಂಗ್ಲ ಮಾಧ್ಯಮಕ್ಕೆ ಸೇರ್ಸಿರೆ, ಅಲ್ಲಿ ಟೀಚರ್ ಇಂಗ್ಲೀಷಿಲ್ಲಿಯೇ ಮಾತಾಡಿಯಪ್ಪಗ ತಲೆಬುಡ ಅರ್ಥ ಆಗದ್ದೆ ಮಕ್ಕೊಗೆ ಗೊಂದಲ ಅಕ್ಕು. ಇದರಿಂದಾಗಿ ಮಕ್ಕೊಗೆ ಶಾಲೆಲಿ ಹೊಂದಿಗೊಂಬಲೆ ಕಷ್ಟ ಅಕ್ಕು, ಅಲ್ಲದ್ದೆ ಮಕ್ಕೊ ಶಾಲೆಗೆ ಹೋವ್ತಿಲ್ಲೆ ಹೇಳಿ ಹಠ ಮಾಡುಗು.
  • ಕೆಲವು ಶಾಲೆಲಿ ಇಂಗ್ಲೀಷು ಬಿಟ್ಟು ಬೇರೆ ಭಾಷೆ ಮಾತಾಡಿರೆ ಶಿಕ್ಷೆ ಕೊಡ್ತವು, ಹಾಂಗಿಪ್ಪಗ ಭಾಷೆ ಬಾರದ್ದ ಸಣ್ಣ ಮಕ್ಕೊ ಎಂತ ಮಾಡೆಕು? ಅಲ್ಲದ್ದೆ ಆ ಸಣ್ಣ ಮನಸ್ಸಿಲ್ಲಿ ’ಮಾತೃ ಭಾಷೆ ಮಾತಾಡುದೇ ದೊಡ್ಡ ತಪ್ಪು, ಇಂಗ್ಲೀಷು ಮಾತಾಡಿರೆ ಮಾಂತ್ರ ಗ್ರೇಟು’ ಹೇಳ್ತ ಭಾವನೆ ಬೆಳವಲೆ ಶುರು ಅಕ್ಕು. ಇದರಿಂದಾಗಿ ಮುಂದೆ ಮಾತೃ ಭಾಷೆಯ ಬಗ್ಗೆ ಅಸಡ್ಡೆ ತೋರ್ಸುಗು.
  • ಸಣ್ಣ ಮಕ್ಕೊಗೆ ಶಾಲೆಲಿ ಟೀಚರ್ ಹೇಳಿದ್ದೇ ವೇದವಾಕ್ಯ, ಹಾಂಗಿದ್ದ ಸಂದರ್ಭಲ್ಲಿ ಇಂಗ್ಲೀಷ್ ಮಾತಾಡದ್ದೆ ಇದ್ದರೆ ತಪ್ಪು ಅಥವಾ ಕೀಳು ಹೇಳ್ತ ಅಭಿಪ್ರಾಯವ ಮಕ್ಕಳ ಮನಸ್ಸಿಲ್ಲಿ ತುಂಬ್ಸಿರೆ ಅದು ಮಕ್ಕಳ ಮನಸ್ಸಿಂಗೆ ಹೆಚ್ಚು ನಾಟುಗು.

  ಇದಕ್ಕೆ ಪರಿಹಾರವೂ ಇದ್ದು:
  • ಮಕ್ಕಳ ಶಾಲೆಗೆ ಸೇರ್ಸುವಗ ಶಾಲೆಯ ಬಗ್ಗೆ ಸರಿಯಾಗಿ ಮಾಹಿತಿ ಪಡಕ್ಕೊಂಡು ಸೇರ್ಸುದು.
  • ಮನೆಲಿ ಮಕ್ಕೊಗೆ ಆಂಗ್ಲ ಭಾಷೆಯ ಶಬ್ದಂಗೊಯ ಮಾತೃಭಾಷೆಲಿ ಅರ್ಥ ಮಾಡ್ಸುದು. ಅವಕ್ಕೆ ಶಾಲೆಲಿ ತೋಮ್ದರೆ ಆಗದ್ದ ಹಾಂಗೆ ನೋಡಿಗೊಂಬದು.
  • ಶಾಲೆಲಿ ಆಂಗ್ಲ ಭಾಷೆ ಮಾತಾಡ್ತರೂ , ಮಾತೃಭಾಷೆಯ [ಕನ್ನಡ, ಹಿಂದಿ, ಮಲಯಾಳ ಇತ್ಯಾದಿ] ಮನೆಲಿ ಹೆತ್ತವ್ವು ಕಲುಶುದು. ಬೇರೆ ಬೇರೆ ರಾಜ್ಯಂಗೊಕ್ಕೆ ವರ್ಗ ಅಪ್ಪಂತಹ ಉದ್ಯೋಗಲ್ಲಿ ಇಪ್ಪೋರು ತಮ್ಮ ಮಕ್ಕೊಗೆ ನಮ್ಮ ಭಾಷೆಯ ಓದುಲೆ ಬರವಲೆ ಮನೆಲಿಯೇ ಕಲುಶುಲೆ ಯಾವ ಅಡ್ಡಿಯೂ ಇಲ್ಲೆನ್ನೆ?!!
  • ಏನೇ ಆಗಲಿ ಮಕ್ಕಳ ಜೀವನ ಹಾಳಪ್ಪಲಾಗ ಹೇಳ್ತದು ನಮ್ಮ ಉದ್ದೇಶ, ಹಾಂಗಾಗಿ ಅಂಬಗಂಬಗ ಶಾಲೆಗೆ ಹೋಗಿ ಟೀಚರಿನ ಹತ್ತರೆ ಮಕ್ಕಳ ಬಗ್ಗೆ ಮಾತಾಡುದು ಒಳ್ಳೆದು, ಇದರಿಂದಾಗಿ ನವಗೆ ಗೊಂತಾಗದ್ದ ಕೆಲವು ಅಂಶಂಗೊ ತಿಳಿವಲೆ ಸುಲಭ ಆವ್ತು.
  • ಹೆಚ್ಚು ಪೈಸೆ ಕೊಟ್ಟು ಶಾಲೆಗೆ ಸೇರ್ಸಿದ್ದೆ , ಎಲ್ಲ ಕಲುಶೆಕಾದ್ದು ಶಾಲೆಯವರ ಜವಾಬ್ದಾರಿ, ನಾವು ಮನೆಲಿ ಎಂತ ಮಾಡುವ ಅಗತ್ಯ ಇಲ್ಲೆ ಹೇಳಿ ಗ್ರೇಶುದು ಬೇಡ. ಹೆಚ್ಚು ಫೀಸು ಕಟ್ಟಿದ ಕೂಡ್ಲೆ ಶಲ್ಲೆ ಒಳ್ಳೆದು ಹೇಳುವ ಅರ್ಥ ಅಲ್ಲ, ಅಲ್ಲದ್ದೆ ನಮ್ಮ ಮಕ್ಕಳ ಜೀವನ ರೂಪ್ಸೆಕಾದ್ದು ನಾವು. ಬೇರೆಯವರ ಮೇಲೆ ಜವಾಬ್ದಾರಿ ಹಾಕಿ ಸುಮ್ಮನೆ ಕೂಬದು ತಪ್ಪು.

  ಭಾಷೆಯ ಬಗ್ಗೆ ಎಲ್ಲಕ್ಕಿಂತ ಮುಖ್ಯವಾಗಿ ಒಂದು ಮಾತು ಎಂತರ ಹೇಳಿರೆ ’ಎನ್ನ ಮಗ/ಮಗಳಿಂಗೆ ಮಾತೃಭಾಷೆ ಬತ್ತಿಲ್ಲೆ, ಇಂಗ್ಲೀಶು ಲಾಯ್ಕ ಬತ್ತು, ಕಲ್ತದು ದೆಹಲಿ/ ಮುಂಬೈಲಿ’ ಹೇಳ್ತದು ನಿಜವಾಗಿಯೂ ಹೆಮ್ಮೆಯ ವಿಷಯ ಅಲ್ಲ.
  ಹೆರಾಣ ರಾಜ್ಯ ದೇಶಲ್ಲಿ ಇದ್ದರೂ ನಮ್ಮ ಭಾಷೆಯ ಲಾಯ್ಕಕ್ಕೆ ಮಾತಾಡುಲೆ/ಬರವಲೆ/ಓದುಲೆ ಬತ್ತು ಹೇಳಿ ಹೇಳುವ ಹಾಂಗೆ ಆದರೆ ಅದು ನಿಜವಾಗಿಯೂ ಹೆತ್ತವಕ್ಕೆ ಹೆಮ್ಮೆಯ ವಿಷಯ.

  [Reply]

  ಗಣೇಶ ಪೆರ್ವ

  ಗಣೇಶ Reply:

  ನಿಜವಾಗಿಯೂ ಒಪ್ಪೆಕಾದ ಒಪ್ಪ.. ಅತ್ಯ೦ತ ನಿಖರವಾಗಿಯೂ ಸ್ಪಷ್ಟವಾಗಿಯೂ ಇದ್ದು. ಸತ್ವಯುತ ಒಪ್ಪ. ಅಭಿನ೦ದನೆಗೊ..

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಧನ್ಯವಾದ :)

  [Reply]

  VA:F [1.9.22_1171]
  Rating: 0 (from 0 votes)
 6. ಸುವರ್ಣಿನೀ ಕೊಣಲೆ
  Suvarnini Konale

  ಕಾಲ ಸಂದರ್ಭಂಗೊಕ್ಕೆ ತಕ್ಕ ಹಾಂಗೆ ಕೆಲವು ಬದಲಾವಣೆಗೊಕ್ಕೆ ಹೊಂದಿಗೊಳ್ಳೆಕಾದ್ದು ಅಗತ್ಯವೇ. ಆದರೆ….. ಬದಲಾವಣೆ ಬವಣೆ ಅಪ್ಪದು ಬೇಡ.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ತುಂಬಾ ಚೆಂದಕ್ಕೆ ಹೇಳಿದ್ದಿ ಅಕ್ಕ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 7. ಸುವರ್ಣಿನೀ ಕೊಣಲೆ
  Suvarnini Konale

  ಕನ್ನಡ ಮಾಧ್ಯಮ ಸರಕಾರಿ ಶಾಲೆಲಿ ಕಲ್ತ ಎನ್ನ ಒಬ್ಬ ತಮ್ಮ ಈಗ ದಿಸ್ಟಿಂಕ್ಷನ್ನಿಲ್ಲಿ MSc ಮಾಡಿ ಮುಗುಶಿದ್ದ !! ಪ್ರತಿಭೆ ಎಲ್ಲಿದ್ದರೂ ಪ್ರಜ್ವಲಿಸುತ್ತು.

  [Reply]

  ಗಣೇಶ ಪೆರ್ವ

  ಗಣೇಶ Reply:

  ಸತ್ಯ.. ಮಹೇಶಣ್ಣ ಕಲ್ತದು ನೀರ್ಚಾಲು ಶಾಲೆಲಿ ಅಲ್ಲದೊ? ಆನುದೆ ಕಲ್ತದು ನೀರ್ಚಾಲು ಶಾಲೆಲಿಯೇ.. ಅಚ್ಚ ಕನ್ನಡ ಮಾಧ್ಯಮಲ್ಲಿ…

  [Reply]

  VA:F [1.9.22_1171]
  Rating: 0 (from 0 votes)
 8. ದೊಡ್ಡಭಾವ

  ಬೈಲಿನ ಹೆಚ್ಚಿನ ಎಲ್ಲೋರುದೇ ಕನ್ನಡ ಮಾಧ್ಯಮ ಸರಕಾರಿ/ಅನುದಾನಿತ ಶಾಲೆಗಳಲ್ಲಿ ಕಲ್ತವು. ಇಷ್ಟು ಒಳ್ಳೆ ಪ್ರತಿಭೆಗೊ ನಮ್ಮತ್ರೆ ಇದ್ದು. ಅದರ ಒಳ್ಳೆದಿಲ್ಲೆ ಹೇಳುಲೆ ನವಗೆ ಧೈರ್ಯ ಆದರೂ ಹೇಂಗೆ ಬತ್ತು..? ನಾವು ಕಲ್ತದೇ ಸರಿ ಇಲ್ಲೆ ಹೇಳಿ ನವಗೆ ತೋರುಸ್ಸು ಎಂತಕೆ..? ನೀರ್ಚಾಲಿನ ಬಗ್ಗೆ ಒಳ್ಳೆ ಅಭಿಪ್ರಾಯ ಹೇಳಿದ ಎಲ್ಲೋರಿಂಗೂ ಧನ್ಯವಾದಂಗೊ…

  [Reply]

  VA:F [1.9.22_1171]
  Rating: 0 (from 0 votes)
 9. ಗಣೇಶ ಪೆರ್ವ
  ಗಣೇಶ

  ಬೈಲಿಲ್ಲಿ ಎಷ್ಟು ಜನ ಇ೦ದು ಉದಿಯಪ್ಪಗಾಣ ಸುವರ್ಣ ನ್ಯೂಸ್ ವಾರ್ತೆ ನೋಡಿದ್ದಿ ಗೊ೦ತಿಲ್ಲೆ, ನೋಡಿದವು ಒ೦ದು ಶಾಲೆಯ ಸುದ್ದಿ ಗಮನಿಸಿಪ್ಪಿ ಅಲ್ಲದೊ?
  ಕರ್ನಾಟಕದ ಒ೦ದು ಆ೦ಗ್ಲ ಮಾಧ್ಯಮ ಪ್ರೌಢ ಶಾಲೆ ಆಡ. ಎಸ್ ಎಸ್ ಎಲ್ ಸಿ ಪರೀಕ್ಷೆಯ ರಿಸಲ್ಟು ತಡೆಹಿಡಿದಿತ್ತವಾಡ, ೧೫ ದಿನ ಕಳುದು ಸುವರ್ಣ ನ್ಯೂಸ್-ನವರ ‘ಇ೦ಪ್ಯಾಕ್ಟ್’ -೦ದಾಗಿ ಈಗ ರಿಸಲ್ಟು ಬ೦ತಾಡ. ವಿಷಯ ಅದಲ್ಲ. ಶಾಲೆಗೆ ೧೦೦ ಪರ್ಸೆ೦ಟು ರಿಸಲ್ಟು ಸಿಕ್ಕಿದ್ದಾಡ (೯ ಜನ ಮಾ೦ತ್ರ ಪರೀಕ್ಷೆಗೆ ಬರದ್ದದು). ಈ ರಿಸಲ್ಟು ಬ೦ದದರ ಅಲ್ಲಿ ಕರಿಹಲಗೆಲಿ ದೊಡ್ಡಾಕೆ ಬರದು ಮಡುಗಿದ್ದವು, ಹೇ೦ಗೆ ಗೊ೦ತಿದ್ದೊ?
  congrats
  hetric achivments!! (hat trick achievement)
  100% resut!! (result)
  ಇಷ್ಟು ಬರದಪ್ಪಗಳೇ ಇಷ್ಟು ತಪ್ಪುಗೊ!!! ಅದುದೆ ಇ೦ಗ್ಲಿಷ್ ಮಾಧ್ಯಮ ಶಾಲೆ ಆಡ, ಇದರ ಎದುರೆ ನಿ೦ದ೦ಡು ಅಲ್ಲ್ಯಾಣ ಅಧ್ಯಾಪಕರು ಮಕ್ಕಳೂ ಎಲ್ಲರೂ ಸ್ವೀಟು ತಿ೦ದುಗೊ೦ಡು ಸ೦ಭ್ರಮಿಸಿಗೊ೦ಡು ಇತ್ತಿದ್ದವು. ಹಾ೦ಗಾರೆ ನಮ್ಮ ಶಿಕ್ಷಣಮಟ್ಟ ಎಲ್ಲಿಗೆ ಹೋವ್ತಾ ಇದ್ದು? ಇದರ ಓದಿ ಎನಗೆ ಒಟ್ಟಾರೆ ತಲೆ ಬೆಶಿ ಆತು, ಹಾ೦ಗಾಗಿ ಬೈಲಿಲ್ಲಿ ಹ೦ಚಿಗೊ೦ಬ ಹೇಳಿ ತೋರಿತ್ತು..

  ನಮ್ಮ ದೇಶವ ದೇವರು ರಕ್ಷಿಸಲಿ!!

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಬಂಡಾಡಿ ಅಜ್ಜಿಕೊಳಚ್ಚಿಪ್ಪು ಬಾವಅನು ಉಡುಪುಮೂಲೆದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಮಾಷ್ಟ್ರುಮಾವ°ಶ್ಯಾಮಣ್ಣವಿದ್ವಾನಣ್ಣಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿಕಜೆವಸಂತ°ಚೆನ್ನೈ ಬಾವ°ಪವನಜಮಾವಬೋಸ ಬಾವವೇಣೂರಣ್ಣಬಟ್ಟಮಾವ°ವೇಣಿಯಕ್ಕ°ವೆಂಕಟ್ ಕೋಟೂರುಶರ್ಮಪ್ಪಚ್ಚಿದೊಡ್ಡಮಾವ°ಡಾಮಹೇಶಣ್ಣಗೋಪಾಲಣ್ಣvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ