ಅಪಹಾಸ್ಯಕ್ಕೆ ಹಿಂದೂ ಸನ್ಯಾಸಿಗಳೇ ಬೇಕಾ?

March 29, 2011 ರ 10:00 pmಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ನಮ್ಮ ಸಂಸ್ಕೃತಿ, ಧರ್ಮ, ಆಚರಣೆಗೊ, ನಂಬಿಕೆಗೊ ಎಲ್ಲವೂ ಪ್ರಪಂಚಲ್ಲೇ ಶ್ರೇಷ್ಠ ಹೇಳುದಕ್ಕೆ ಎರಡು ಮಾತಿಲ್ಲೆ. ಅದರ ಮಹತ್ವವ ಮತ್ತಷ್ಟು ಪ್ರಚಾರ ಮಾಡ್ಳೆ ಬೇಕಾದಷ್ಟು ಸಾಧು-ಸಂತರು ಬಂದು, ಜೀವಮಾನ ಪೂರ್ತಿ ಅದಕ್ಕೋಸ್ಕರವೇ ಬದುಕ್ಕಿದ್ದವು. ನಮ್ಮ ಶ್ರೀಮಂತ ಸಂಸ್ಕೃತಿಯ ಸಿರಿವಂತಿಕೆಯ ದ್ವಿಗುಣ ಮಾಡಿದ್ದವು. ಆದರೆ ಈಗಾಣ ಮನೋರಂಜನಾ ಮಾಧ್ಯಮಂಗಳಲ್ಲಿ ಆವುತ್ತ ಇಪ್ಪದೆಂತರ? ರಜ್ಜ ನೋಡುವ.

ಮನೋರಂಜನೆಗೇಳಿ ಆದರೂ ಸಿನೆಮಾ ಹೇಳುದು ನಮ್ಮ ನಿತ್ಯಜೀವನದ ಪ್ರತಿಬಿಂಬವೇ ಅಷ್ಟೆನ್ನೆ! ಅಲ್ಲಿ ಬಪ್ಪ ಒಂದೊಂದು ಪಾತ್ರಂಗ ನಮ್ಮಲ್ಲೇ ಆರಾರು ಒಬ್ಬನ ಪ್ರತಿರೂಪ ಆಗಿಕ್ಕು. ಆ ಕಥೆಯ ಬರದವನ ಜೀವನಾನುಭವದ ಸಾರ ಅದಾಗಿರ್ತು. ಅವನ ದೃಷ್ಟಿಲಿ ಈ ಪ್ರಪಂಚ ಹೇಂಗೇಳುದರ ತೋರ್ಸುತ್ತು. ಹೀಂಗೆ ಒಬ್ಬೊಬ್ಬನ ದೃಷ್ಟಿಗೆ ಅವಲಂಬಿತವಾಗಿ ಬೇರೆ ಬೇರೆ ಅಭಿರುಚಿಯ ಸಿನೆಮಂಗೊ ಬತ್ತು. ಆದರೆ ನೂರಕ್ಕೆ ತೊಂಬತ್ತೊಂಬತ್ತು ಸಿನೆಮಂಗಳಲ್ಲಿ ಇದೊಂದು ಸನ್ನಿವೇಶ, ಪಾತ್ರ ಮಾತ್ರ ಒಂದೇ ಭಾವನೆಯ ಅವಲಂಬಿಸಿರ್ತು. ಅದೆಂತರ ಹೇಳಿರೆ, ‘ಕಳ್ಳ ಸನ್ಯಾಸಿ’ ಅಥವಾ ‘ಕಪಟ ಸನ್ಯಾಸಿ’ಯ ಪಾತ್ರ. ಅದು ಯಾವತ್ತೂ ಕಾವಿವಸ್ತ್ರಧಾರಿ ಹಿಂದೂಸನ್ಯಾಸಿಯೇ!

ನಮ್ಮ ಸಮಾಜಲ್ಲಿ ಅಂಥಾ ಜನಂಗೊ ಇಲ್ಲೊಂದು ಅಲ್ಲೊಂದು ಇಕ್ಕು, ಇಲ್ಲೇಳಿ ಅಲ್ಲ. ಪ್ರಪಂಚಲ್ಲಿ ಒಳ್ಳೆ ಜನಂಗೊ ಇಪ್ಪಾಂಗೆ ಕೆಟ್ಟ ಜನಂಗೊ ಇಪ್ಪದು ಸಹಜವೇ. ಆದರೆ ಅದು ನಮ್ಮ ಧರ್ಮಕ್ಕೆ ಮಾತ್ರ ಸೀಮಿತವಾ? ಒಳುದವರಲ್ಲಿ ಸಜ್ಜನರಂದ ಹೆಚ್ಚು ಹೀಂಗಿಪ್ಪ ಕಪಟ ಮನಸ್ಸಿನವೇ ಜಾಸ್ತಿ ಇರ್ತವು! ಅದರ ಎಂತಕೆ ತೋರ್ಸುತ್ತವಿಲ್ಲೆ? ನಮ್ಮ ಧರ್ಮವನ್ನೇ ಎಂತಕೆ ಟಾರ್ಗೆಟ್ ಮಾಡುದು? ಕೆಟ್ಟ ಗುಣದ ಸನ್ಯಾಸಿ ಹೇಳಿದರೆ ಹಿಂದೂಸನ್ಯಾಸಿಯೇ ಹೇಳ್ತ ಕಲ್ಪನೆ ಬಪ್ಪಾಂಗೆ ಮಾಡುದೆಂತಕೆ?

ಇದು ವರ್ಷಾನುವರ್ಷಂದ ಹೀಂಗೇ ನಡಕ್ಕೊಂಡು ಬತ್ತಾ ಇದ್ದು. ಆದರೆ ಈ ಬಗ್ಗೆ ಯಾವುದೇ ರೀತಿಯ ಪ್ರತಿಭಟನೆ ಆಗಲಿ, ವಿರೋಧ ಆಗಲಿ ದೊಡ್ಡಮಟ್ಟಿಂಗೆ ಆಯಿದೇ ಇಲ್ಲೆ! ಯಾವುದಾದರೂ ಪಾದ್ರಿಯನ್ನೋ, ಬಾಂಗು ಹೊಡೆತ್ತ ಬ್ಯಾರಿಯನ್ನೋ ಆ ಪಾತ್ರಲ್ಲಿ ತೋರ್ಸಿದ್ದಿದ್ದರೆ ಮರದಿನವೇ ಆ ನಿರ್ದೇಶಕ ಜೀವಲ್ಲಿರ್ತಿತಿಲ್ಲೆ! ನವಗೆ ನಾಚಿಕೆ ಆಯೆಕ್ಕು. ಅವಕ್ಕಿಪ್ಪಷ್ಟು ಧರ್ಮಾಭಿಮಾನ ನವಗಿಲ್ಲೆ! ಧರ್ಮಕ್ಕೆ ಚ್ಯುತಿ ಬಂದಪ್ಪಾಗ ಅವಕ್ಕೆ ಅಪ್ಪಾಂಗೆ ನಮ್ಮ ನೆತ್ತರು ಕೊದಿತ್ತಿಲ್ಲೆ! ನಿನ್ನೆ ಮೊನ್ನೆ ಬಂದವ್ವು, ನಮ್ಮ ಅರ್ಧದಷ್ಟೂ ಇಲ್ಲದ್ದವ್ವು ನಮ್ಮ ಮೆಟ್ಟಿನಿಂಬಷ್ಟು ಗಟ್ಟಿಗೆ ಬೆಳದ್ದವು. ಅನುಮಾನವೇ ಬೇಡ, ನಾಳೆ ನಮ್ಮ ಡಬ್ಬಲ್ ಆವುತ್ತವು.

ನವಗೆ ಕರುಣೆ, ದಯೆ, ಕ್ಷಮಾಗುಣ ಎಲ್ಲ ಜಾಸ್ತಿ ಇದಾ. ಹಾಂಗೆ ಎಂತ ಹೇಳಿರೂ, ಎಂತ ಆದರೂ ‘ಮಾಡಿಗೊಳ್ಳಲಿ ಬಿಡಿ’ ಹೇಳಿ ಸುಮ್ಮನೆ ಕೂಪದು. ಇಲ್ಲದ್ರೆ ಆಚವ ಆರಾರು ಪ್ರತಿಭಟನೆ ಮಾಡುಗು, ನವಗೆಂತಕೆ ಸುಮ್ಮನೆ ತಲೆಬೇನೆ ಹೇಳಿ ಗುಡಿಹೆಟ್ಟಿ ಒರಗುದು. ಇಷ್ಟೇ ಮಾಡುದು ನಾವು.

ಅಂತೆ ಅಲ್ಲ ನಮ್ಮ ಹಿರಿಯೋರು ಹೇಳಿದ್ದು, ಪೆಟ್ಟು ತಿಂಬಷ್ಟು ಸಮಯ ಪೆಟ್ಟು ಕೊಡುವವ್ವು ಇರ್ತವು. ಒಂದರಿ ತಿರುಗಿ ನಿಂದು ನೋಡುವ. ನವಗಿಪ್ಪಷ್ಟು ಶಕ್ತಿ, ಯುಕ್ತಿ ಬೇರೆಯವಕ್ಕೆ ಬಪ್ಪಲೆ ಸಾಧ್ಯವೇ ಇಲ್ಲೆ. ಇನ್ನಾದರೂ ಹೀಂಗಿಪ್ಪದರ ವಿರೋಧುಸುಲೆ ನೋಡುವ ಆಗದಾ?

ಅಪಹಾಸ್ಯಕ್ಕೆ ಹಿಂದೂ ಸನ್ಯಾಸಿಗಳೇ ಬೇಕಾ?, 4.8 out of 10 based on 6 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ಸುವರ್ಣಿನೀ ಕೊಣಲೆ

  ಬರಹ ಮತ್ತೆ ವಿಷಯ ಎರಡೂ ಲಾಯ್ಕಿದ್ದು. ಈ ವಿಷಯದ ಬಗ್ಗೆ ಯಾವಗಲೂ ಮನಸ್ಸಿಲ್ಲಿ ಆಲೋಚನೆ ಬತ್ತು. ಹಲವು ಸರ್ತಿ ಮನೆಲಿ ಅಥವಾ ಸಮಾನ ಮನಸ್ಕರೊಟ್ಟಿಂಗೆ ಚರ್ಚಿಸಿದ್ದೂ ಇದ್ದು. ಆದರೆ ಇಡೀ ಸಮಾಜ ಒಗ್ಗಟ್ಟಾಗದ್ದೆ ಈ ನಿಟ್ಟಿಲ್ಲಿ ಹೆಚ್ಚು ಕೆಲಸ ಕಷ್ಟವೇ. ಆದರೆ ಪ್ರತಿಯೊಂದೂ ಮಹತ್ತರ ಕಾರ್ಯಗಳ ಮೂಲವೂ ಹೀಂಗಿದ್ದ ಒಂದು ಸಣ್ಣ ಆಲೋಚನೆ ಅಥವಾ ಒಂದು ಸಣ್ಣ ಹೆಜ್ಜೆ. ಹಾಮ್ಗಾಗಿ ಮುಂದೊಂದು ದಿನ ಎಲ್ಲವೂ ಸರಿ ಅಕ್ಕು ಹೇಳುವ ಧನಾತ್ಮಕ ಭಾವಲ್ಲಿ ಇರೆಕು.
  ನಾವು ಹಾಂಗಿದ್ದದಕ್ಕೆ ಸಪೋರ್ಟ್ ಮಾಡದ್ದೆ ಇಪ್ಪದು ಕೂಡ ನಾವು ಮಾಡೆಕಾದ ದೊಡ್ಡ ಕೆಲಸ ಅಥವಾ ಜವಾಬ್ದಾರಿ.
  ಸ್ವರ ಕೇಳುಲೆ ಎಡಿಗಾತಿಲ್ಲೆ. ಲೇಖನ ಓದಿದೆ :)

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದಂಗೊ ಅಕ್ಕ.
  ಅಂದ್ರಾಣ ’ಸ್ವರ’ದ್ದು ಸಂಕೊಲೆ ಕಡುದಿತ್ತು. ಈಗ ಕೇಳುಲಾವುತ್ತು ನೋಡಿ. :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ದೊಡ್ಡಮಾವ°ಅಕ್ಷರ°ವೇಣೂರಣ್ಣದೊಡ್ಡಭಾವಕಜೆವಸಂತ°ಮುಳಿಯ ಭಾವvreddhiವೇಣಿಯಕ್ಕ°ಮಂಗ್ಳೂರ ಮಾಣಿಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿಸುವರ್ಣಿನೀ ಕೊಣಲೆಚೂರಿಬೈಲು ದೀಪಕ್ಕವಿಜಯತ್ತೆನೆಗೆಗಾರ°ಅಜ್ಜಕಾನ ಭಾವಶ್ಯಾಮಣ್ಣಶಾ...ರೀವಿದ್ವಾನಣ್ಣಶುದ್ದಿಕ್ಕಾರ°ಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆಪುತ್ತೂರುಬಾವಬಟ್ಟಮಾವ°ದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ