Oppanna.com

ಕಲೆ ಸಂಸ್ಕೃತಿ ಹುಟ್ಟಿದ್ದು; ನಾವು ಬೆಳೆಶಿರಾತು

ಬರದೋರು :   ಅನುಶ್ರೀ ಬಂಡಾಡಿ    on   07/03/2012    12 ಒಪ್ಪಂಗೊ

ಅನುಶ್ರೀ ಬಂಡಾಡಿ

ನಮ್ಮ ಬೈಲಿನ ಕೂಸು ಇಂದು ಸಪ್ತಪದಿ ತುಳುದು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡ್ತಾ ಇದ್ದು. ಕೂಸಿಂಗೆ ಸಕಲ ಸೌಭಾಗ್ಯಂಗ ಒಲಿದು ಬರಲಿ. ಬೈಲಿನ ಎಲ್ಲೋರ ಪ್ರೀತಿಯ ಆಶೀರ್ವಾದ ಇಂದ್ರಾಣ ಮದುಮಕ್ಕಳ ಮೇಲೆ ಇರಲಿ ಹೇಳಿ ಹಾರಯಿಕೆ. ಇಂದ್ರಾಣ ದಿನದ ಮದಿಮ್ಮಾಳು ಬೈಲಿಂಗೆ ಹೇಳುವ ಆತ್ಮೀಯ ಶುದ್ದಿ..

ಮೊನ್ನೆ ಆಚಮನೆಲಿ ಪೂಜೆ ಇತ್ತು. ಅಲ್ಲಿಗೆ ಬಂದಿದ್ದ ಒಬ್ಬ ಪುಟ್ಟುಮಾಣಿ, ಸುಮಾರು ಆರೇಳು ವರ್ಷದವ, ನಮ್ಮಲ್ಲಿಗೂ ಬಂದಿತ್ತಿದ್ದ.
ಒಟ್ಟಿಂಗೆ ಎನ್ನ ಮಾವನ ಮಗಳು, ಮೂರು ವರ್ಷದ ಚೂಟಿಪುಟ್ಟಕ್ಕನೂ ಸೊಕ್ಕಿಗೊಂಡು ಇತ್ತು.
ಅತ್ತಿತ್ತೆ ಓಡಿಗೊಂಡಿದ್ದ ಮಾಣಿಗೆ ಒಂದು ಕಡೆಲಿ ಮಡಿಕ್ಕೊಂಡಿದ್ದ ಯಕ್ಷಗಾನದ ಸೀಡಿಗ ಕಂಡತ್ತದ! ಹಾ.. ಅವನ ಖುಷಿ ನೋಡೆಕ್ಕಾತು ನಿಂಗ!
ಕೂಡ್ಳೆ ಅಪ್ಪನ ಬರುಸಿ ಒಂದು ಸೀಡಿ ತೆಗದು, ಹಾಕುಸಿಯೇ ಬಿಟ್ಟ.
ಎಂಗಳ ಚೂಟಿಪುಟ್ಟಕ್ಕಂಗೂ ಯಕ್ಷಗಾನ ಹೇಳಿರೆ ಜೀವ. “ಅದಾ ವೇಷ ಬಂತೂ..” ಹೇಳಿ ಬೊಬ್ಬೆಹೊಡಕ್ಕೊಂಡು ಹೋಗಿ ಅಲ್ಲಿ ಕೂಚಿತ್ತು.
ಇಬ್ರು ಮಕ್ಕಳೂ ತದೇಕಚಿತ್ತಲ್ಲಿ ಆಟದೊಳ ಬಾಕಿ!
“ಮನೆಗೆ ಹೋಪ ಬಾ ಮಾರಾಯ” ಹೇಳಿ ಆ ಮಾಣಿಯ ಅಮ್ಮ ಅತ್ಲಾಗಿಂದ ಬೊಬ್ಬೆಹೊಡದೇ ಬಾಕಿ!
ಗುತ್ತಿಗಾರಿಲಿಪ್ಪ ಇನ್ನೊಬ್ಬ ಮಾವಂಗೆ ಎರಡು ಪುಟ್ಟುಮಕ್ಕೊ. ಇಬ್ರುದೇ ಯಕ್ಷಗಾನ ಪ್ರಿಯರು. ಕಾರಿಲಿ ಎಲ್ಲಿಗಾರು ಹೋವುತ್ತರೆ ಆಟದ ಪದ ಹಾಕೆಕ್ಕೂಳಿ ಹಟ ಹಿಡಿಗಡ.
“ಇಪ್ಪ ಎರಡು ಸೀಡಿಗಳ ಕವುಂಚಿ ಮೊಗಚ್ಚಿ ಹಾಕಿ ಕೇಳ್ತವು. ಅದು ಎಂತ ಮೋಡಿ ಮಾಡಿದ್ದು ಗೊಂತಿಲ್ಲೆ” ಹೇಳಿ ಹೇಳಿಗೊಂಡಿರ್ತವು ಮಾವ.

ಅಪ್ಪಲೆ ತರವಾಡು ಮನೆ ವಿನುವಿಂಗೂ ಹಾಂಗೇಡ. ಸಣ್ಣದಿಪ್ಪಾಗ ಚೆಂಡೆಪೆಟ್ಟು ಕೇಳಿತ್ತೂಳಿರೆ ಕೆಮಿಕುತ್ತ ಅಕ್ಕಡ. ಇವ ಹೀಂಗೆ ಆಟದ ಮರುಳ ಆದರೆ ಹಾಳಾಗಿ ಹೋವುತ್ತ ಹೇಳಿ ವಿದ್ಯಕ್ಕ ಕೆಮಿಹಿಂಡಿತ್ತಡ.
ನಮ್ಮ ಸಂಸ್ಕೃತಿಯ ಸೊಗಡಿಪ್ಪ ಇಂಥ ಕಲೆಗಳ ಬಗ್ಗೆ ಆಸಕ್ತಿ ತೋರ್ಸಿರೆ ಹೇಂಗೆ ಹಾಳಾವುತ್ತವಪ್ಪ ಮಕ್ಕ ಹೇಳಿ ಎನಗರಡಿಯ.
ಅಲ್ಲ ಇನ್ನು ಯಕ್ಷಗಾನಕ್ಕೆ ಅದು ನೋಡ್ತ ಟೀವಿಲಿ ಏವದೇ ‘ಶೋ‘ ಆಗಲಿ ‘ಸ್ಪರ್ಧೆ’ ಆಗಲಿ ಬಾರದ್ದಿಪ್ಪ ಕಾರಣ ಅದು ಹಾಳು ಹೇಳಿ ಜಾನ್ಸಿತ್ತೊ ಏನೊ ಉಮ್ಮಪ್ಪ!

ಈಗಾಣ ಸುಮಾರು ಜನ ಮಕ್ಕಳಲ್ಲಿ ಹೀಂಗೆ ಆಸಕ್ತಿ ಇಪ್ಪೋರು ಇದ್ದವು.
ಅಪ್ಪು, ನಮ್ಮ ಕಲೆ ಸಂಸ್ಕೃತಿ ಕುರಿತಾದ ಆಸಕ್ತಿ ಮಕ್ಕೊಗೆ ಹುಟ್ಟಿಂದಲೇ ಬತ್ತು. ಅದು ನಮ್ಮ ಹಿರಿಯೋರ ನೆತ್ತರಿಂದ ಸುಪ್ತವಾಗಿ ಹರುದುಬತ್ತು.

ನಮ್ಮ ಮುಳಿಯಭಾವನ ಹಾಂಗೆ, ದೊಡ್ಡವ್ವು ಅದಕ್ಕೆ ಪ್ರೋತ್ಸಾಹ ಕೊಟ್ಟು ಸರಿಯಾದ ರೀತಿಲಿ ಬೆಳೆಶುಲೇ ಇಪ್ಪದು.
ಈಗಾಣ ಜನರೇಶನ್ ಗೆ ಹೊಂದಿಕೆ ಆಯೆಕ್ಕು ಹೇಳಿಗೊಂಡು, ಮಕ್ಕಳ ಶಾಸ್ತ್ರೀಯ ಕಲಿಕೆಂದ ದೂರ ಮಾಡಿ ಫಿಲ್ಮಿ ಡೇನ್ಸು, ಫಿಲ್ಮಿ ಸಾಂಗುಗಳ ಕ್ಲಾಸುಗೊಕ್ಕೆ ಕಳುಸಿ ಸಾರ್ಥಕ್ಯಭಾವ ಪಡಕ್ಕೊಂಬ ‘ದೊಡ್ಡವ್ವು’ ಸುಮಾರು ಜನ ಇದ್ದವು.
ಮತ್ತೆ ದೊಡ್ಡ ವೇದಿಕೆಲಿ ನಿಂದುಗೊಂಡು ನಮ್ಮ ಸಂಸ್ಕೃತಿ ಹಾಳಾವ್ತಾ ಇದ್ದು, ಕಲೆ-ಸಾಹಿತ್ಯ ಸಾಯ್ತಾ ಇದ್ದು ಹೇಳಿ ಭಾಷಣ ಬಿಗಿತ್ತವು.

ಹುಟ್ಟಿಂದ ಬಂದದರ ಬೆಳೆಶಿರೆ ಹೀಂಗೆ ಭಾಷಣ ಮಾಡ್ತ ಪ್ರಸಂಗವೇ ಬಾರ ಅಲ್ದಾ?

~*~*~

12 thoughts on “ಕಲೆ ಸಂಸ್ಕೃತಿ ಹುಟ್ಟಿದ್ದು; ನಾವು ಬೆಳೆಶಿರಾತು

  1. ಚಿಂತನೆಗೆ ಬೆಂಬಲ ಸೂಚಿಸುತ್ತೆ.ಶುಭಾಶಯಂಗೊ[ತಡವಾದ್ದಕ್ಕೆ ಕ್ಷಮೆ ಇರಲಿ]

  2. ಜೀವನದ ನಿಲ್ಲದ್ದ ಪಯಣಲ್ಲಿ ಹೊಸತ್ತೊಂದು ಮಾರ್ಗಲ್ಲಿ ಹೊಸ ಸಂಬಂಧಗಳೊಟ್ಟಿಂಗೆ ಹೊಸ ಉತ್ಸಾಹ..ಭಾವನೆಗಳೊಟ್ಟಿಂಗೆ ಹೊಸ ಜೋಡಿಯ ಹೆಜ್ಜೆ… ನಿಂಗಳ ಈ ಹೊಸ ಪಯಣ ಸಂತೋಷ, ಸಂತೃಪ್ತಿ, ಸಮೃದ್ಧಿಗಳಿಂದ ತುಂಬಲಿ. ಮನಃಪೂರ್ವಕ ಶುಭಹಾರೈಕೆಗೊ 🙂
    ಒಳ್ಳೆ ಒಂದು ವಿಚಾರದ ಬಗ್ಗೆ ಹೇಳಿದ್ದೆ ಅನುಶ್ರೀ, ಸಾವಿರಾರು ವರ್ಷಂದ ಇದ್ದ ನಮ್ಮ ಸಂಸ್ಕೃತಿಯ ನಾವು ಅರ್ಥಹೀನ, ಅಪ್ರಯೋಜಕ ಹೇಳಿ ನಿರ್ಧರಿಸುವ ಮೂರ್ಖತನ ಮಾಡ್ಲಾಗ.
    ಇಷ್ಟು ವರ್ಷಮ್ದ ನಮ್ಮ ವಿಕಸನಕ್ಕೆ ಸಹಾಯ ಮಾಡಿದ್ದು ಇದೇ ಆಚರಣೆಗಳೂ, ಕಲೆ-ಸಂಸ್ಕೃತಿಗೊ… ಇತ್ತೀಚೆಗೆ ಹೆಚ್ಚಾವ್ತಾ ಇಪ್ಪ ಎಲ್ಲ್ ಸಮಸ್ಯೆಗೂ ನಾವು ನಮ್ಮ ಸಂಸ್ಕೃತಿಯ ಬಿಟ್ತದೇ ಕಾರಣ ಅಲ್ಲದಾ?
    ಸೆಸಿ ನೆಟ್ಟಿದವ್ವು ನಮ್ಮ ಪೂರ್ವಜರು. ಅದು ಮರ ಆಯ್ದು.. ಒಣ್ಗುಲೆ ಬಿಡದ್ದೆ..ನೀರು ಗೊಬ್ಬರ ಹಾಕಿ..ಅದರ ಆಶ್ರಯಲ್ಲಿ ನಾವು ಬದುಕ್ಕೆಕು 🙂

  3. ಅನುಶ್ರೀ -ಲಾನ ದ೦ಪತಿಗೊಕ್ಕೆ ಶುಭ ಹಾರೈಕೆಗೊ.
    ಕಲೆ ಇಪ್ಪದು ವಿಲಾಸಕ್ಕೆ ಅಲ್ಲ , ಆತ್ಮವಿಕಾಸಕ್ಕೆ ಹೇಳ್ತ ಸತ್ಯವ ತಿಳುಕ್ಕೊ೦ಡು ನೆಡದರೆ ಜೀವನ ಸಾರ್ಥಕ .

  4. ಅನುಶ್ರೀ ಹಾಂಗೂ ಲಕ್ಷ್ಮೀನಾರಾಯಣ ಅವರ ಮದುವೆಯ ಶುಭದಿನ ಇಂದು. ಅವರ ದಾಂಪತ್ಯ ಜೀವನ ಸುಖಮಯವಾಗಿರಳಿ ಹೇಳ್ತ ಹಾರೈಕೆಗೊ.
    ಮಕ್ಕೊ ನಮ್ಮ ಸಂಸ್ಕೃತಿ ಬಗ್ಗೆ ಒಲವು ತೋರುಸುತ್ತಾ ಇಪ್ಪದು ಸಂತೋಷದ ವಿಷಯ. ಅದಕ್ಕೆ ನೀರುಕೊಟ್ಟು ಗೊಬ್ಬರ ಹಾಕಿ ಪೋಷಿಸೆಕಾದ್ದು ಹಿರಿಯರಾದ ನಮ್ಮ ಕರ್ತವ್ಯ. ಈ ಲೇಖನ ಓದುತ್ತಾ ಇಪ್ಪಗ, ನಮ್ಮ ದೊಡ್ಡಭಾವಯ್ಯನ ಮಗ, ಪುಳ್ಳಿಮಾಣಿ, ಧನ್ವಿ, ಇತ್ತೀಚೆಗೆ ಕುಮಾರ ಮಂಗಲಲ್ಲಿ ಯಕ್ಷಗಾನ ಆಗೆಂಡಿಪ್ಪಗ ಸಭೆಲಿ ಕೊಶಿಲಿ ಕೊಣುಕ್ಕೊಂಡಿದ್ದದು ನೆಂಪಾತು.

  5. ಒಳ್ಳೇದಾಯಿದು.
    ವೈವಾಹಿಕ ಜೀವನಕ್ಕೆ ಶುಭ ಹಾರೈಕೆಗೊ.

  6. ಒಳ್ಳೆ ಚಿಂತನೆ.
    ನಿಂಗಳ ವೈವಾಹಿಕ ಜೀವನಕ್ಕೆ ಶುಭ ಹಾರೈಕೆಗೊ.

  7. ನಿಂಗಳ ವೈವಾಹಿಕ ಜೀವನಕ್ಕೆ ಶುಭ ಹಾರೈಕೆಗಳು…….

    ಒಳ್ಳೆ ಶುದ್ದಿಯೇ ಹೇಳಿದ್ದಿ. ಮಕ್ಕ ಕಾರ್ಟೂನ್ ನೋಡಿಗೊಂಡು, ಮೊಬೈಲಿಲಿ ಗುರುಟಿಗೊಂಡು, ಕಂಪ್ಯೂಟರು ಕುಟ್ತಿಗೊಂಡು ಇಪ್ಪ ಬದಲು ಆ ಸಮಯಲ್ಲಿ ಯಕ್ಷಗಾನ ನೋಡಿದರೆ ಮಕ್ಕೊಗೆ ಪುರಾಣದ ಜ್ನಾನ ಬಕ್ಕು.ನಮ್ಮ ಕಲೆಗಳಲ್ಲಿ ಆಸಕ್ತಿ ಹುಟ್ತುವ ಹಾಂಗೆ ಮಾಡೆಕ್ಕು.
    ಟಿವಿಲಿ ಕೆಲವು ರಿಯಾಲಿಟಿ ಶೋ ಬತ್ತು ಅದರ ಮನೆಯವ್ವೆಲ್ಲ ಒಟ್ತಿಂಗೆ ಕೂದು ನೋಡ್ಲೆ ಎಡಿಯ….! ಅದಕ್ಕೆ ಮಾರ್ಕ್ ಹಾಕುಲೆ ಬಪ್ಪವರ ಅವತಾರ ನೋಡಿದರೆ ವಸ್ತ್ರಕ್ಕೆ ದರಿದ್ರ ಇಪ್ಪ ಹಾಂಗೆ ಕಾಣುತ್ತು…! ಸಣ್ಣ ಸಣ್ನ ಮಕ್ಕೊಗೆ ಹಾಕ್ಸುವ ಡ್ರೆಸ್ಸುಗಳೂ ಹಾಂಗೆ….ಮಾಡುವ ಡೇನ್ಸೂ ಹಾಂಗೆ…..ಇದೇ ಮಕ್ಕೊ ನಾಳೆ ದೊಡ್ದ ಆದ ಮತ್ತೆ ಎಂತ ಮಾಡುಗು….?
    ಹಾಂಗಿಪ್ಪಗ ನಾವು ದೊಡ್ದವ್ವು ಮಕ್ಕೊಗೆ ಸಂಸ್ಕಾರ ಕಲಿಶೆಕ್ಕು….

  8. ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುತ್ತಾ ಇಪ್ಪ ಅನುಗೆ ತುಂಬು ಹೃದಯದ ಅಶೀರ್ವಾದಂಗ…

    ಅತ್ಯುತ್ತಮವಾದ ಚಿಂತನೆ. ನಿನ್ನ ಹಾಂಗೆ ಚಿಂತನೆ ಮಾಡುವ ಕೂಸುಗಳಿಂದ,ಅಮ್ಮಂದಿರಿಂದ, ಹೆಮ್ಮಕ್ಕಳಿಂದ ಮಾಂತ್ರ ಇಂದು ಸಮಾಜವ ಸರಿ ದಾರಿಗೆ ತಪ್ಪಲೆ ಎಡಿಗಷ್ಟೆ…

    ಇಂದು ನಿಜವಾಗಿಯೂ ಕಾಲ ಅತಿ ಪಕ್ವ ಆಗಿದ್ದು. ಸಮಾಜಲ್ಲಿ ಸ್ತ್ರೀ, ಪುರುಷ ಹೇಳುವ ಬೇದ ಭಾವ ಇಲ್ಲೇ… ಜಾತಿ,ಮತ ಹೇಳುವ ಬೇದ ಭಾವ ಇಲ್ಲೇ… ಹಿರಿಯರು,ಕಿರಿಯರು ಹೇಳುವ ಬೇದ ಭಾವ ಇಲ್ಲೇ… ಬಡವ, ಶ್ರೀಮಂತ ಹೇಳುವ ಬೇದ ಭಾವ ಇಲ್ಲೇ… ಮೇಲು,ಕೀಳು ಹೇಳುವ ಬೇದ ಭಾವ ಇಲ್ಲೇ… ಎಲ್ಲ ಕಡೆ ಸಮಾನತೆ…ಪ್ರೀತಿ ಒಂದೇ ಬಂಡವಾಳ ಆಯಿದು… ಹಲವು ಸಮಸ್ಯೆಗೋ,ಅನಿವಾರ್ಯತೆ ಗಳಿಂದಾಗಿ ಇಂತಹ ಒಂದು ಕಾಲ ಒದಗಿ ಬಯಿಂದು… ಈಗ ನಾವು ಈ ಕಾಲವ ಸದುಪಯೋಗ ಪಡಿಸಿಗೊಲ್ಳೆಕ್ಕು… “ಹೊಸ ಆಕಾರವ ಪಡವಲೆ ತಯಾರಾದ ಹಸಿ ಮಣ್ಣಿನ” ಹಾಂಗೆ ಇಪ್ಪ ಸಮಾಜವ ಸರಿ ದಾರಿಗೆ ಕೊಂಡು ಹೊಯೇಕ್ಕು… ಇಲ್ಲಿ ಪ್ರಧಾನ ಪಾತ್ರ ವಹಿಸುದು ಅಮ್ಮನ್ದ್ರು… ಅಥವಾ ಪ್ರತಿಯೊಬ್ಬನೂ ಅಮ್ಮನ ದ್ರುಷ್ಟಿಂದ ಆಲೋಚನೆ ಮಾಡೆಕ್ಕು…

    ಹೊಸ ಜೀವನಕ್ಕೆ ಕಾಲಿಡುತ್ತ ಇಪ್ಪ ನಿಂಗೊಗೆ ಅತ್ಯಂತ ಶುಭವಾಗಲಿ…

  9. ಚಿಂತನೆ ಶುದ್ದಿ ಲಾಯಕ ಆಯ್ದು ಹೇಳಿ ಸುರುವೊಂದು ಒಪ್ಪ.

    ನಿಂಗಳ ವೈವಾಹಿಕ ಜೀವನ ಸದಾ ಸಂತೋಷದಿಂದ ಕೂಡಿರಲಿ ಹೇಳಿಗೊಂಡು ನಿಂಗೊಗೆ https://oppanna.com/?p=16321 ನೆಂಪು ಮಾಡುತ್ತಾ ಇದ್ದು – ‘ಚೆನ್ನೈವಾಣಿ’

  10. “ಹುಟ್ಟಿಂದ ಬಂದದರ ಬೆಳೆಶಿರೆ ಹೀಂಗೆ ಭಾಷಣ ಮಾಡ್ತ ಪ್ರಸಂಗವೇ ಬಾರ ಅಲ್ದಾ?’ ನಿಜವಾಗಿಯೂ ಅಪ್ಪು.” ನಿ೦ಗಳ “ವೈವಾಹಿಕ ಜೀವನ ಭವ್ಯವೂ ಭಾಗ್ಯಪೂರ್ಣವೂ ಆಗಿರಲಿ.ದಾ೦ಪತ್ಯವಲ್ಲರಿ ಹಬ್ಬಿಹ೦ದರವಾಗಿ ಸು೦ದರ ಸುಮದುರ ಹೂ ಬಿಡಲಿ” ಹೇಳಿ ಎ೦ಗಳ ಹಾರೈಕೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×