ನಿರ್ವಾಹಕನ ನಿರ್ವಹಣೆ

March 1, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಬಸ್ಸಿನ ಪ್ರಯಾಣ ಸಾಮಾನ್ಯ ಎಲ್ಲೊರಿಂಗೂ ಇಪ್ಪ ಅನುಭವ.
ಪೇಟೆಲಿಪ್ಪವಕ್ಕೆ ಅಂತೂ ಉದಿಯಪ್ಪಾಗ ಎದ್ದು ಗಡಿಬಿಡಿಲಿ ಹೆರಟುಗೊಂಡು, ಸಿಟಿ ಬಸ್ಸು ಹತ್ತಿ ಕೆಲಸಕ್ಕೋ, ಕೋಲೇಜಿಂಗೋ ಹೋಪದು ಹೇಳಿರೆ ಒಂದು ದೊಡ್ಡ ಗೌಜಿ. ಎಷ್ಟೇ ಬೇಗ ಹೆರಟ್ರುದೇ ಬಸ್ಸು ನಮ್ಮಂದ ಮೊದಲು ಬಂದು, ನಾವು ಬಸ್ಸಿನ ಹಿಂದೆ ಓಡಿ ಓಡಿ ಹತ್ತೆಕ್ಕಾದ ಪರಿಸ್ಥಿತಿ. ಪೇಟೆಲಿಪ್ಪವಕ್ಕೆ ಇದು ದೈನಂದಿನ ವೈವಾಟು. ಹಳ್ಳಿಲಿಪ್ಪವಕ್ಕೆ ಬಸ್ಸು ಇಪ್ಪದೇ ಅಪುರೂಪಲ್ಲಿ. ಅದರ ಸಮಯಕ್ಕೆ ಹೆರಟು ಹೋದರೆ ಆತು, ಇಲ್ಲದ್ದರೆ ಮತ್ತೆ ಒಂದೋ ಎರಡೋ ಗಂಟೆ ಕಾಯೆಕ್ಕು. ಪೇಟೆಲಿ ನಿಮಿಶಕ್ಕೊಂದು ಬಸ್ಸು ಇದ್ದರುದೇ, ಎಲ್ಲಾ ಬಸ್ಸುಗಳೂ ತುಂಬಿ ಸಮಲುಗು! ಅದ್ರಲ್ಲಿ ನಿಂದುಗೊಂಡು ಹೋಪದೇ ಒಂದು ಸರ್ಕಸ್ಸು. ಯಾವಾಗಳೂ ಹೋಪೋರಿಂಗೆ ಕಾಯಮಿನ ಒಂದು ಬಸ್ಸು ಇರ್ತು. ಮಾತಾಡುವಾಗೆಲ್ಲ ಅದು ‘ಎನ್ನ ಬಸ್ಸು’ ಹೇಳುವಷ್ಟು ಅಭಿಮಾನವೂ ಬೆಳದಿರ್ತು. ಅಕಸ್ಮಾತ್ ಆ ಬಸ್ಸು ತಪ್ಪಿರೆ ಬೇಜಾರವೂ ಆವುತ್ತು.

ಈಗ ಇಷ್ಟೆಲ್ಲ ಪೀಟಿಕೆ ಹಾಕಿದ್ದು ಎಂತಕೆ ಹೇಳಿರೆ, ಬಸ್ಸಿನ ನಿರ್ವಾಹಕ (ಕಂಡಕ್ಟರ್) ಬಗ್ಗೆ ರಜ್ಜ ಮಾತಾಡುವ ಹೇಳಿ. ಉದೀಯಪ್ಪಗ ಐದೂವರೆ-ಆರು ಗಂಟೆಂದ ಇರುಳು ಹತ್ತು ಗಂಟೆ ವರೆಗೆಲ್ಲ ನಿಂದುಗೊಂಡೇ ಇದ್ದು, ಬೊಬ್ಬೆ ಹೊಡಕ್ಕೊಂಡು, ರಶ್ಶಿಲಿ ನುಗ್ಗಿ ಟಿಕೇಟು ಕೊಟ್ಟುಗೊಂಡು, ವಿಪರೀತ ರಶ್ಶಿದ್ದರೆ ಫುಟ್ಟುಬೋರ್ಡಿಲಿ ನೇತುಗೊಂಡು ಕೆಲಸ ಮಾಡ್ತವನ್ನೆ! ಅಬ್ಬ ಹೇಳುವಾಗಳೇ ಬಚ್ಚುತ್ತು. ಅವರದ್ದು ಎಷ್ಟು ಶ್ರಮದ ಕೆಲಸ ಅಲ್ಲದಾ? ಎಲ್ಲಾ ಕೆಲಸಲ್ಲೂ ಶ್ರಮ ಇದ್ದೇ ಇದ್ದು ಹೇಳುವ, ಅದು ಬೇರೆ. ಆದರೆ ಈ ಕಂಡೆಕ್ಟ್ರಕ್ಕಳದ್ದು ವಿಶೇಷ ಶ್ರಮ. ಅದರಲ್ಲೂ ಸಿಟಿ ಬಸ್ಸಿನ ಕಂಡೆಕ್ಟ್ರಂಗೊಕ್ಕೆ ಅಸಾಧಾರಣ ಸಾಮರ್ಥ್ಯ ಇರೆಕ್ಕಾವುತ್ತು.

ಶಾಲೆ ಮಕ್ಕಳದ್ದು ಒಂದು ಕ್ರಮ ಇದ್ದು. ಬಸ್ಸಿಲಿ ಯಾವ ಕಂಡೆಕ್ಟ್ರ ಇದ್ದು ಹೇಳಿ ನೋಡಿಗೊಂಡು ಬಸ್ಸು ಹತ್ತುದು. ಕೆಲವು ಕಂಡೆಕ್ಟ್ರಕ್ಕ ಜೋರಿರ್ತವು, ಅರ್ದ ಟಿಕೇಟು ಕೊಡ್ಳೆ ಚೊರೆ ಮಾಡ್ತವು. ಹಾಂಗಿಪ್ಪ ಕಂಡೆಕ್ಟ್ರ ಇದ್ದರೆ ಆ ಬಸ್ಸಿಂಗೆ ಹತ್ತುಲೇ ಇಲ್ಲೆ! 😀
ಕಂಡೆಕ್ಟ್ರಕ್ಕಳ ಬಗ್ಗೆ ಸವಿವರ ಮಾಹಿತಿ ಶಾಲೆಮಕ್ಕಳ ಹತ್ತರೆ ಇರ್ತು. ಯಾವ ಕಂಡೆಕ್ಟ್ರ ಹೇಂಗೆ ಹೇಳಿ ಅವರತ್ತರೆ ಕೇಳಿ ತಿಳ್ಕೊಂಬಲಕ್ಕು.

ಇನ್ನು, ಚಿಲ್ಲರೆಗೂ ಕಂಡೆಕ್ಟ್ರಂಗೂ ಅನನ್ಯ ಅನುಬಂಧ. ಟಿಕೇಟು ಕೇಳುವಾಗಳೇ ‘ಚಿಲ್ರೆ ಕೊಡಿ’ ಹೇಳಿಯೇ ಕೇಳುಗು. ನಾವು ಅದರಿಂದ ಚಾಣಾಕ್ಷರು. ಕಂಡೆಕ್ಟ್ರ ಹೇಳಿರೆ ‘ಚಿಲ್ಲರೆ ಖಜಾನೆ’ ಹೇಳಿ ನಮ್ಮ ಲೆಕ್ಕ. ಟಿಕೇಟಿಂಗೆ ದೊಡ್ಡ ನೋಟನ್ನೇ ಕೊಟ್ಟು, ‘ಚಿಲ್ರೆ ಇಲ್ಲ’ ಹೇಳಿ ಮೋರೆ ತಿರುಗುಸಿ ನಿಂದರಾತು. ಹೇಂಗಾರು ಮಾಡಿ ಚಿಲ್ಲರೆ ಮಾಡ್ಸಿ ಕೊಡ್ತು ಪಾಪದ ಕಂಡೆಕ್ಟ್ರ. ಒಂದು ವೇಳೆ ಅದು ಜೋರಿದ್ದರೆ ನವಗೆ ಸಹಸ್ರ ನಾಮಾರ್ಚನೆಯೂ ಅಕ್ಕು.
ನಾವು ಬೇರೆ ಕಡೆಲೆಲ್ಲ ಚಿಲ್ಲರೆ ಸರಿಯಾಗಿ ವಾಪಾಸು ಸಿಕ್ಕದ್ರೂ ಅಷ್ಟೆಂತ ಮಂಡೆಬೆಶಿ ಮಾಡ್ತಿಲ್ಲೆ. ಆದರೆ, ಕಂಡೆಕ್ಟ್ರ ಒಂದು ಐವತ್ತು ಪೈಸೆ ಕೊಡ್ಳೆ ಬಾಕಿ ಮಡಿಗಿದ್ದರುದೇ ನವಗೆ ತಡಕ್ಕೊಂಬಲೆ ಎಡಿತ್ತಿಲ್ಲೆ. ಜೋರು ಮಾಡಿ, ಜಗಳ ಮಾಡಿ ಆ ಐವತ್ತು ಪೈಸೆಯ ತೆಕ್ಕೊಂಡರೇ ನವಗೆ ಸಮಾಧಾನ! ಒಂದು ಮಹಾಯುದ್ಧ ಗೆದ್ದ ಸಂಭ್ರಮ! ‘ಸೂಜಿ ಹೋಪಲ್ಲಿ ಭಾರೀ ಜಾಗ್ರತೆ ಮಾಡುದು, ಕುಂಬ್ಳಕಾಯಿ ಹೋಪಲ್ಲಿ ಧಸಾನೆ ಹೋದರುದೇ ಗುಮನ ಇಲ್ಲೆ’ ಹೇಳುವ ಹಾಂಗೆ.
ಕೆಲವು ಕಂಡಕ್ಟ್ರಕ್ಕಳೂ ಅಷ್ಟೇ ಜೋರಿರ್ತವು. ಇಪ್ಪತ್ತೈದು ಪೈಸೆಯನ್ನೂ ಬಿಡದ್ದೆ ತೆಕ್ಕೊಳ್ತವು. ಆ ಟಿಕೇಟಿಲಿ ಎಷ್ಟು ಗೀಚುತ್ತವೋ ದೇವರಿಂಗೂ ಓದುಲೆಡಿಯ! ರಪರಪನೆ ಬರದು ಇಡ್ಕಿದ ಆ ಟಿಕೇಟಿನ ಹಿಡಿವಲೆ ಹೋದರೆ ನಾವು ಅಡಿಮೊಗಚ್ಚಿ ಬೀಳುಗು. ಪುಣ್ಯಾತ್ಮ ಸರಿಯಾಗಿಯೇ ಬರದಿಕ್ಕು ಹೇಳಿ ಗ್ರೇಶಿಗೊಂಡು ಸುಮ್ಮನೆ ನಿಂದರೇ ನಾವು ಕ್ಷೇಮ. ಸಣ್ಣ ಮಕ್ಕೊ ಎಲ್ಲ ಟಿಕೇಟಿನ ನಿರೀಕ್ಷೆ ಮಾಡುವ ಹಾಂಗೆಯೇ ಇಲ್ಲೆ ಬಿಡಿ. ಆ ಚಿಲ್ಲರೆ ಪೈಸೆ ಎಲ್ಲ ಸೀದ ಕಂಡೆಕ್ಟ್ರನ ಕಿಸೆಗೆ. ಕಂಡೆಕ್ಟ್ರ ಸರಿಯಾಗಿ ಟಿಕೇಟು ಬರದು ಕೊಡ್ತಾ ಇದ್ದು ಹೇಳಿ ಆದರೆ, ಎದೂರಾಣ ಸೀಟಿಲಿ ಓನರು ಕಳುಸಿದ ಉರಿಮುಸುಡಿನ ಚೆಕ್ಕಿಂಗು ಜನ ಇದ್ದು ಹೇಳಿ ಲೆಕ್ಕ. ಇಲ್ಲದ್ದರೆ ಪ್ರೈವೇಟು ಬಸ್ಸಿಲಿ ಟಿಕೇಟು ಸರಿಯಾಗಿ ಸಿಕ್ಕುದು ಕನಸಿನ ಮಾತೇ ಸರಿ!

ಅದಿರಳಿ. ಈ ಕಂಡೆಕ್ಟ್ರಿಂಗಿಪ್ಪ ಇನ್ನೊಂದು ಮಂಡೆಬೆಶಿ ಹೇಳಿರೆ, ಹತ್ತಿದ ಜನಂಗಳ ಸರಿಯಾಗಿ ನಿಲ್ಸುದು. ಅಲ್ಲಿಯೇ ಇಪ್ಪದು ನಿರ್ವಾಹಕನ ‘ನಿರ್ವಹಣೆ’.
ಎದುರಂದ ಹತ್ತುವವಕ್ಕೆ ‘ಪಿರವು ಪೋಲೆ’ ಹೇಳಿಯೂ, ಹಿಂದಂದ ಹತ್ತುವವಕ್ಕೆ ‘ದುಂಬು ಪೋಲೆ’ ಹೇಳಿಯೂ ಹೇಳುದರ ಕೇಳಿಯಪ್ಪಗ ನೆಗೆಗಾರಂಗೆ ಕನ್ಫ್ಯೂಸು ಬಪ್ಪದಡ. ನಡುಕೆ ಇದ್ದವ್ವು ಅಜ್ಜಿ ಮಾಡಿದ ಚಟ್ನಿಂದಲೂ ನೊಂಪಕ್ಕಾ ಏನ!
ಲೆಕ್ಕಂದ ಹೆಚ್ಚಿಗೆ ಜನ ಬಂದಪ್ಪಾಗ ಅವಾದರೂ ಎಂತ ಮಾಡುದು ಬೇಕೆ. ಹೇಂಗೋ ಅತ್ತಿತ್ತೆ ನಿಲ್ಲುಸಿ ಸುದಾರುಸುತ್ತವು. ಬಸ್ಸಿಂಗೆ ಕೈ ಹಿಡುದ ಜನಂಗಳ ಆದಷ್ಟು ಕೈ ಬಿಡದ್ದೇ ಹತ್ತುಸಿಗೊಳ್ತವು.

ಕೆಲವು ಪಿತ್ತಹೆಚ್ಚಾದ ಗೆಂಡುಮಕ್ಕೊ ಹೆಮ್ಮಕ್ಕೊಗೆ ಉಪದ್ರ ಅಪ್ಪಾಂಗೆ ನಿಂಬದು ಈ ಬಸ್ಸುಗಳಲ್ಲಿ ಸಾಮಾನ್ಯ. ಹಾಂಗಿಪ್ಪವರ ಬೈದು ಅಟ್ಟುವ ಕಂಡೆಕ್ಟ್ರಕ್ಕಳ ನೋಡುವಾಗ ಕುಶೀ ಆವುತ್ತು. ಮುಂದಾಣ ಬಾಗಿಲಿಂದ ಗೆಂಡುಮಕ್ಕಳ ಹತ್ತುಲೇ ಬಿಡ್ಳಿಲ್ಲೆ. ಒಂದು ವೇಳೆ ರಶ್ಶು ಜಾಸ್ತಿ ಆಗಿ ಹತ್ಸೆಕ್ಕಾದ ಪರಿಸ್ಥಿತಿ ಬಂದರೂ ಎಲ್ಲಾ ಗೆಂಡುಮಕ್ಕಳೂ ಎಡದ ಹೊಡೆಲೇ ನಿಂಬಾಂಗೆ ನೀಟಾಗಿ ನೋಡಿಗೊಳ್ತವು. ಅದೇ ನಿಯಮ ಹೆಮ್ಮಕ್ಕೊಗೂ ಅನ್ವಯಿಸುಗು. ಎಲ್ಲಾ ಹೆಮ್ಮಕ್ಕಳೂ ಬಲದ ಹೊಡೆಲೇ ನಿಲ್ಲೆಕ್ಕು. ಈ ರೀತಿ ವ್ಯವಸ್ಥಿತ ರೀತಿಲಿ ನೋಡಿಗೊಂಬ ನಿರ್ವಾಹಕನ ಬಗ್ಗೆ ಅಭಿಮಾನ ಬತ್ತು.

ಎಡಿಯದ್ದವ್ವು, ಅಜ್ಜಿಯಕ್ಕೊ, ಸಣ್ಣ ಮಕ್ಕಳ ಎತ್ತಿಗೊಂಡಿಪ್ಪವ್ವು ಎಲ್ಲ ಬಂದಪ್ಪಾಗ ಅವಕ್ಕೆ ಸೀಟು ಮಾಡ್ಸಿ ಕೊಡುವ ಕಂಡಕ್ಟ್ರಕ್ಕಳೂ ಇದ್ದವು. ಇವ್ವು ನಮ್ಮ ಸಮಾಜಲ್ಲಿ ಇನ್ನೂ ‘ಒಳ್ಳೆತನ’ ಇದ್ದು ಹೇಳುದರ ಪ್ರತಿಬಿಂಬ.

ಹ್ಮ್. ನಿರ್ವಾಹಕ ಹೇಳಿದರೆ ಅಂತೆ ಅಲ್ಲ.
ಬಸ್ಸಿಲಿಪ್ಪ ಅಷ್ಟೂ ಜನರ ಉಸ್ತುವಾರಿ ನೋಡಿಗೊಳ್ಳೆಕ್ಕು, ಎಲ್ಲೊರಿಂಗೂ ಟಿಕೇಟಾತ ಹೇಳಿ ವಿಚಾರುಸಿಗೊಳ್ಳೆಕ್ಕು, ಎಡಕ್ಕಿಲಿ ಎಂತಾರು ತಾಪತ್ರಯ ಆದರೆ ಅದನ್ನೂ ಸರಿ ಮಾಡ್ಳೆ ನೋಡೆಕ್ಕು, ಕಂಬಕ್ಕೇ ನೇತುಗೊಂಡು ರಾಶಿ ಬೀಳುವ ಜನಂಗಳ ಅಚ್ಚುಕಟ್ಟಾಗಿ ನಿಲ್ಸೆಕ್ಕು – ಹೀಂಗೆ ಹತ್ತುಹಲವು ಜವಾಬ್ದಾರಿಗೊ.
ನಾವು ಸರಿಯಾಗಿ ಗಮನ್ಸಿದರೆ ಅವರ ಕೆಲಸ ನಿರ್ವಹಣೆಯ ಕ್ರಮಲ್ಲಿ ನಮ್ಮ ಜೀವನಕ್ಕೆ ಬೇಕಾದ ಆದರ್ಶ ಇದ್ದು ಅಲ್ಲದಾ?

ನಿರ್ವಾಹಕನ ನಿರ್ವಹಣೆ, 4.3 out of 10 based on 3 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಓದಿ ನೋಡಿದೆ, ಕೇಳಿ ನೋಡೆಕಷ್ಟೆ!! ಓದಿಸಿಗೊ೦ಡು ಹೋತು, ಒಳ್ಳೆ ಲೇಖನ..

  [Reply]

  VA:F [1.9.22_1171]
  Rating: 0 (from 0 votes)
 2. ಸುಭಗ
  ಸುಭಗ

  ಆನು ಕೇಳಿಂಡು ಓದಿದೆ! 😉

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ನಿರ್ವಾಹಕನ ನಿರ್ವಹಣೆ ಬಗ್ಗೆ ನಿರಂತರವಾಗಿ ಮಾತಾಡಿ, ಅವನ ಜವಾಬ್ದಾರಿಯ ಬಗ್ಗೆ ಒಳ್ಳೆ ಪ್ರಶಂಸೆ ಮಾಡಿದ್ದು ಅನುಶ್ರೀ. ಅವನ ಕೆಲಸ ನಿರ್ವಹಣೆಯ ನಮ್ಮ ಜೀವನಕ್ಕೂ ಹೋಲುಸಿದ್ದು ಲಾಯಕಾಯಿದು. ಕೆಲವೊಂದು ನಿರ್ವಾಹಕಂಗಳ ಒಳ್ಳೆತನದ ಒಟ್ಟೊಟ್ಟಿಂಗೆ ಕೆಟ್ಟತನವೂ ಇರ್ತಾನೇ ಹೇಳಿ ಬೇಜಾರು ಆವುತ್ತು.
  ಲೇಖಕರ ಭಾವನೆಗೊ, ಹೀಂಗ್ರುತ್ತ ನುಡಿ ಲೇಖನಲ್ಲಿ ಓದುತ್ತವಂಗೆ/ಕೇಳುತ್ತವಂಗೆ ಸರಿ ಆಗಿ ಅರ್ಥ ಅಕ್ಕು ಹೇಳಿ ಎನ್ನ ಅಂದಾಜು.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  :-)
  ಧನ್ಯವಾದಂಗೊ ಬೊಳುಂಬು ಮಾವ. ನಿಂಗಳೂ ನುಡಿಲೇಖನ ಬರದರೆ ಎಂಗ ಎಲ್ಲ ಕುಶೀಲಿ ಕೇಳುವೆಯ.
  ‘ಸಿಂಹಗಳ ನಡುವೆ ಕನ್ನಡದ ಕಲರವ’ ಲ್ಲಿ ಬಂದ ಅಜ್ಜಿಯ ನುಡಿಲೇಖನ ಪಷ್ಟಕ್ಕು.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ನಿನ್ನ ಹಾಂಗೆಲ್ಲ ಎನಗೆ ಅರಡಿಯಪ್ಪ. ರಿಕಾರ್ಡು ಆರು ಮಾಡ್ತು ಹೇಳಿ ಬೇಕಾನೆ ?

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಹು೦..ನಿರ್ವಾಹಕನ ನಿರ್ವಹಣೆ ನೋಡಿ ಕಲಿವಲೆ ಸುಮಾರು ಇದ್ದಪ್ಪಾ.
  ಇಲ್ಲಿ,ಬೆ೦ಗ್ಳೂರಿಲಿ ನಿರ್ವಾಹಕ೦ಗೊ ನಿಜಕ್ಕೂ ಘಟ್ಟ ಹತ್ತಿದವ್ವು.ಅವು ಟಿಕೆಟಿನೊಟ್ಟಿ೦ಗೆ ಚಿಲ್ಲರೆ ಕೊಡುವ ಕ್ರಮ ಇಲ್ಲೆ.ಟಿಕೆಟಿನ ಹಿ೦ದೆ ಕೊಡುಲೆ ಬಾಕಿ ಇಪ್ಪ ಪೈಸೆಯ ಗೀಚಿ ನಮ್ಮ ಕೈಗೆ ಕೊಡೊದು.ನಾವೋ,ಇಳಿವಲಪ್ಪಗ ಈ ಚಿಲ್ಲರೆ ವಿಷಯ ಮರದಾಗಿರುತ್ತು.ಮತ್ತೆ,ಚೆಕ್ಕಿ೦ಗಿನವು ಇಲ್ಲೆ ಹೇಳಿ ಗೊ೦ತಿದ್ದರೆ,ಪೈಸೆ ತೆಕ್ಕೊ೦ಡು ಕಿಸೆಗೆ ಹಾಕುಗು, ಟಿಕೆಟು ಕೊಡವು.
  ಏನೇ ಆಗಲಿ,ಜೀವನ ಹೇಳ್ತ ಪ್ರಯಾಣಲ್ಲಿ ಮು೦ದೆ ಇಪ್ಪೋರ ಹಿ೦ದ೦ಗೂ,ಹಿ೦ದೆ ಇಪ್ಪೋರ ಮು೦ದ೦ಗೂ ಕಳುಸಿ,ನೆಡೂಕೆ ಎಲ್ಲೋರ ಒಟ್ಟು ಸೇರುಸಿ,ಸಮಾಜ ಹೇಳ್ತ ಬಸ್ಸಿಲಿ ಆದಷ್ಟು ಹೆಚ್ಚು ಜೆನ೦ಗ ಒಟ್ಟಾಗಿ,ವ್ಯವಸ್ಥಿತವಾಗಿ ಸಾಗುವ ಹಾ೦ಗೆ ಸೇವೆ ಮಾಡುವ ನಿರ್ವಾಹಕರು ನಾವಾಯೆಕ್ಕು ಹೇಳಿ ಗ್ರೇಶೆಕ್ಕೋ?ಈ ಪ್ರಯಾಣಲ್ಲಿ ಟಿಕೆಟು ತೆಗವಲಿರ,ಅಲ್ಲದೋ?ಚಿಲ್ಲರೆ ಇಲ್ಲೆ ಇದಾ..ನೋಟು ಮದಲೇ ಇಲ್ಲೆ !

  {ಟಿಕೇಟಾತ ಹೇಳಿ ವಿಚಾರುಸಿಗೊಳ್ಳೆಕ್ಕು} ನಾವು ಆಸರಿ೦ಗಾತಾ ಹೇಳಿ ವಿಚಾರ್ಸಿದ ಹಾ೦ಗೆಯೋ?

  [Reply]

  vinaya Reply:

  ಈ ಕಮೆ೦ಟು ಬಾರಿ ಒಳೇದಾಯಿದು

  [Reply]

  VA:F [1.9.22_1171]
  Rating: 0 (from 0 votes)
  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  [ಸಮಾಜ ಹೇಳ್ತ ಬಸ್ಸಿಲಿ ಆದಷ್ಟು ಹೆಚ್ಚು ಜೆನ೦ಗ ಒಟ್ಟಾಗಿ,ವ್ಯವಸ್ಥಿತವಾಗಿ ಸಾಗುವ ಹಾ೦ಗೆ]
  ಲಾಯ್ಕಲ್ಲಿ ವಿವರ್ಸಿದ್ದಿ ಅಣ್ಣ. :)

  [Reply]

  VA:F [1.9.22_1171]
  Rating: +1 (from 1 vote)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಈ ಪ್ರಯಾಣಲ್ಲಿ ಟಿಕೆಟು ತೆಗವಲಿರ,ಅಲ್ಲದೋ?
  ಅಪ್ಪು ಭಾವಯ್ಯ,
  ಟಿಕೆಟ್ಟು ತೆಗವಲಿದ್ದು. ಕಡೆಂಗೆ, ಪ್ರಯಾಣ ಎಲ್ಲ ಮುಗಿಯಲಪ್ಪಗ… ಮತ್ತೆ !!!

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹ.ಹ್ಹಾ..ಅದಪ್ಪು ಮಾವ.ಇಳಿವಲಪ್ಪಗ ಅಲ್ಲದೋ?ಎಲ್ಲಿ,ಯೇವಾಗ ಹೇಳಿಯೇ ಗೊ೦ತಿಲ್ಲದ್ದ ಸ್ಟೋಪಿಲಿ !!

  [Reply]

  VA:F [1.9.22_1171]
  Rating: 0 (from 0 votes)
 5. ಅಡ್ಕತ್ತಿಮಾರುಮಾವ°

  ಅನುಶ್ರೀ ಬರದ್ದು,ಮಾತಾಡಿದ್ದು ಬಾರೀ ಒಳ್ಳೆದಾಯಿದು..ಸುರುವಿಂಗೆ ಕೇಳಿದೆ ಮತ್ತೆ ಓದಿದೆ…ನಮ್ಮ ಜಾತಿಯೋರ ಕೂಡಾ ಮುಂದೆ ಹೋಗಿ ಹೇಳುದು ಅವು ಮಾಂತ್ರ…!! ಬಾಕಿ ಎಲ್ಲೋರೂ ಹಿಂದೆ ತಳ್ಳುವೋರೆ ಇಪ್ಪದು ಅಲ್ಲದಾ..?? ಹಾಂಗಾಗಿ ಅವಕ್ಕೊಂದು ದನ್ಯವಾದ ಕೊಡುವ ಆಗದಾ?

  [Reply]

  ಸುಭಗ

  ಸುಭಗ Reply:

  ಕಮಲಾಸನ ಒಂದು ಹಳೆ ಕನ್ನಡ ಸಿನೆಮಲ್ಲಿ ದೊಡ್ಡ ಮೀಸೆಬಿಟ್ಟ ಕಂದಕ್ಟ್ರನ ವೇಷಹಾಕಿಂಡು “ಮುಂದೆ ಬನ್ನಿ..ಮುಂದೆ ಬನ್ನಿ..” ಹೇದು ಪದ ಹೇದ್ದು ನೆಂಪಾವ್ತು.

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಅಪ್ಪು ಅಣ್ಣ. ಭಾರಿ ಚೆಂದದ ಪದ್ಯ ಅದು. ನೆಂಪುಮಾಡಿದ್ದಕ್ಕೆ ಧನ್ಯವಾದಂಗೊ.
  ‘ಬೆಂಕಿಯಲ್ಲಿ ಅರಳಿದ ಹೂವು’ ಸಿನೆಮದ್ದಾಳಿ ಕಾಣ್ತು.

  [Reply]

  VA:F [1.9.22_1171]
  Rating: 0 (from 0 votes)
  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  “ನಮ್ಮ ಜಾತಿಯೋರ ಕೂಡಾ ಮುಂದೆ ಹೋಗಿ ಹೇಳುದು ಅವು ಮಾಂತ್ರ”
  ಅದಪ್ಪು. ಸರಕಾರದ ಸೌಲಭ್ಯಂಗೊ ಸಿಕ್ಕುವಲ್ಲಿ ನಾವೇ ‘ಹಿಂದುಳಿದವ್ವು’ ಆಯಿದೆಯ. :(

  [Reply]

  VA:F [1.9.22_1171]
  Rating: +1 (from 1 vote)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಜೀವನಲ್ಲಿ ಅವಕಾಶಂಗೊ ಬಪ್ಪದು ಹೇಳಿರೆ ಹಳ್ಳಿ ಬಸ್ಸಿನ ಹಾಂಗೆ ಅಲ್ಲ್ದದಾ?
  ಬಪ್ಪಗ ಓಡಿ ಹೋಗಿ ಹಿಡ್ಕೊಂಡವ ಗೆದ್ದ. ಉದಾಸೀನ ಮಾಡಿದವ ಸೋತ.
  ಬಸ್ಸಿನ ನಿರ್ವಹಣೆ ಮಾಡ್ತ ನಿರ್ವಾಹಕನ ಹಾಂಗೆ ನಾವು ಜೀವನ ನಿರ್ವಹಣೆ ಮಾಡೆಕ್ಕಾವ್ತು. ಬಪ್ಪ ಎಡರು ತೊಡರುಗಳ ನಿಭಾಯಿಸಿಂಡು, ಸಂಬಂಧಿಕರೊಟ್ಟಿಂಗೆ ಬಾಂಧವ್ಯ ಒಳುಶಿಂಡು ಸಂಸಾರ ನಿರ್ವಹಣೆ ಕೂಡಾ ಹೀಂಗೆ ಅಲ್ಲದಾ.
  ಅನುಶ್ರೀ ಬರದ್ದು, ಓದಿ ಹೇಳಿದ್ದು ಎರಡರನ್ನೂ ಲಾಯಿಕಲಿ ನಿರ್ವಹಿಸಿದ್ದೆ. ಧನ್ಯವಾದಂಗೊ

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ಧನ್ಯವಾದ ಶರ್ಮಪ್ಪಚ್ಚಿ. :)

  [Reply]

  VA:F [1.9.22_1171]
  Rating: 0 (from 0 votes)
 7. savithri

  ನಿಜ ಅನು,ಇಡೀ ದಿನ ನಿಂದುಗೊಂಡು ಕೆಲಸ ಮಾಡುವ ಅವರ ಶ್ರಮಜೀವನಲ್ಲಿಯೂ ನಾವು ಕಲಿವಲಿದ್ದು.
  ಎನ್ನ ಮಗಳು ಒಂದರಿ ಕೋಪಲ್ಲಿ ಹಿಂದೆ ಹೋಗಿ ಕೂದ್ದಕ್ಕೆ ಒಂದು lady conductor ಹಾಂಗೆಲ್ಲ ಕೂಸುಗೊ ಹಿಂದೆ ಕೂಪಲಾಗ ಹೇಳಿತ್ತಿದ್ದು.ಅದುದೇ ಒಂದು ಪಾಠವೇ ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 8. ಅಕ್ಷರ°

  ಅನುಶ್ರೀ ಅಕ್ಕ, ಲಾಯ್ಕ ಆಯ್ದು. ನಾವು ಹೋದಲ್ಲೆಲ್ಲಾ ಒಬ್ಬೊಬ್ಬರಿಂದ ಒಂದೊಂದು ವಿಷಯ ಕಲಿವಲೆ ಸಿಕ್ಕುತ್ತು. ಎಷ್ಟೋ ಸರ್ತಿ ಬೇರೆಯವರಲ್ಲಿಪ್ಪ ಕೆಟ್ಟ ಗುಣಂಗಳ ನೋಡಿ ನಾವು ನಮ್ಮಲ್ಲಿ ತಪ್ಪಿಯೂ ಆ ಗುಣ ಬಾರದ್ದ ಹಾಂಗೆ ಜಾಗ್ರತೆ ಮಾಡುಲಾದರೂ ಆವ್ತು. ಆನು ಹೀಂಗಿಪ್ಪದೇ ಬಸ್ ಚಾಲಕನ ಬಗ್ಗೆ ಬರದಿತ್ತಿದೆ.
  ಅದರ ಲಿಂಕ್ ಇಲ್ಲಿ ಕೊಟ್ಟಿದೆ,

  http://aksharanaaksharagalu.blogspot.com/2010/09/blog-post_21.html

  ಅಕ್ಷರ

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  ನಿನ್ನ ಬ್ಲಾಗ್ ಓದಿದೆ ಅಕ್ಷರ. ಆ ಡ್ರೈವರಿನ ಸ್ವಗತವ ತುಂಬಾ ಲಾಯ್ಕಕ್ಕೆ ಬರದ್ದೆ ನೀನು. :)
  ಬಸ್ಸಿನ ಡ್ರೈವರು ತುಂಬ ವೇಗಲ್ಲಿ ಹೋದರೆ ‘ಅಯ್ಯೊ ಇದೆಂತ ನಮ್ಮ ಯಮಲೋಕಕ್ಕೆ ಕೊಂಡೋಗಿಬಿಡ್ತಾ’ ಹೇಳಿ ಬಯ್ತು. ನಿಧಾನಕ್ಕೆ ಹೋದರೆ ‘ಇದೆಂತರ ಇಷ್ಟು ಮೆಲ್ಲಂಗೆ ಹೋಪದು. ಎರುಗುದೇ ಸಾಯ’ ಹೇಳಿ ಪರಂಚುತ್ತು. ಹಾಂಗೆಯೇ ಜೀವನದ ಏಳು-ಬೀಳುಗಳಲ್ಲಿ ಸುಮಾರು ಬಗೆಯ ಅಪನಿಂದೆಗಳ ಕೇಳೆಕ್ಕಾವ್ತು ನಾವು. ಅಲ್ಲದಾ?
  ಧನ್ಯವಾದಂಗೊ.

  [Reply]

  ಅಕ್ಷರ°

  ಅಕ್ಷರ ದಾಮ್ಲೆ Reply:

  ನಿಂದನೆ ಮತ್ತೆ ಶ್ಲಾಘನೆ ಎರಡೂ ಯಾವ ಕ್ಷೇತ್ರಕ್ಕೆ ಹೋದರೂ ಇದ್ದದೆ. ನಾವು ನಮ್ಮ ಕೆಲಸವ ನಿಷ್ಠೆಯಿಂದ ಮಾಡಿಕೊಂಡು ಹೋದರಾತು. ಅಲ್ದಾ ಅಕ್ಕ??

  [Reply]

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಮಾವ Reply:

  ನಿನ್ನ ಡ್ರೈವರನ ಲೇಖನ ಓದಿದೆ. ಬರದ ಶೈಲಿ ಚೆಂದ ಆಯಿದು. ವಿಷಯವುದೆ ಅಪ್ಪು.

  [Reply]

  ಅಕ್ಷರ°

  ಅಕ್ಷರ ದಾಮ್ಲೆ Reply:

  ಧನ್ಯವಾದಂಗೊ ಮಾವ.

  [Reply]

  VA:F [1.9.22_1171]
  Rating: 0 (from 0 votes)
 9. ಚೆನ್ನೈ ಬಾವ°
  ಚೆನ್ನೈ ಭಾವ

  ನೈಜ ಚಿತ್ರಣ. ನಿಂಗಳ ನಿರ್ವಾಹಕಂಗೆ ಬಲು ದೊಡ್ಡ ಹೊಣೆಯೇ ಸರಿ. ಎಲ್ಲಾ ಕಂಡೆಕ್ಟರುಗೊ ಕಂಡೆಕ್ಟರ ಹಾಂಗೇ ವರ್ತಿಸಿ ಪ್ರಯಾಣಿಕರ ಮನಗೆ ಬಂದ ಅತಿಥಿ ಹಾಂಗೇ ನೋಡಿಗೊಂಡರೆ ಪ್ರಯಾನಿಕರಿಂಗೂ ಸಂತೋಷ ತೃಪ್ತಿ. ಎನ್ನ ಬಸ್ ಹೇಳಿಗೊಂಬಷ್ಟು ಹೆಮ್ಮೆಯೂ.

  ಬೇಕ ಬಲ್ಲೆ ಹೇಳಿ ಪೀ ಪೀ ಹೇಳಿ ಬಿಗಿಲು ಊದಿ ಹರಟೆ ಮಾಡಿ ದ್ರೋಹ ಕೊಡ್ತವನ್ನೆಪ ನಿಂಗಳ ಮಂಗಳೂರ ಸಿಟಿ ಬಸ್ ಕಂಡೆಕ್ಟರ.

  ಇನ್ನು ಕೆಲವು ಟಿಕೆಟ್ , ಚಿಲ್ಲರೆ ನೋಟು ನಕ್ಕಿ ಕೊಡೋದು ಇದ್ದನ್ನೆ?! ನಿಂಗೊಗೆ ಸಿಕ್ಕಿದ್ದಿಲ್ಲ್ಯೋಪಾ?! ಬಂಡಾಡಿ ಅಜ್ಜಿ ಪುಣ್ಯ!!

  [Reply]

  ಅನುಶ್ರೀ ಬಂಡಾಡಿ

  ಅನುಶ್ರೀ ಬಂಡಾಡಿ Reply:

  “ಬಂಡಾಡಿ ಅಜ್ಜಿ ಪುಣ್ಯ”
  ಆದಿಕ್ಕು :)
  ಹಾಂಗೆ ರಜ್ಜ ಪೆದಂಬು ಬುದ್ಧಿಯವ್ವೂ ಇರ್ತವು. ನಾವು ಒಳ್ಳೆದರ ಮಾತ್ರ ತೆಕ್ಕೊಂಡ್ರಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನೈ ಬಾವ°ಯೇನಂಕೂಡ್ಳು ಅಣ್ಣಅಜ್ಜಕಾನ ಭಾವಶೀಲಾಲಕ್ಷ್ಮೀ ಕಾಸರಗೋಡುಬೋಸ ಬಾವಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿಜಯಶ್ರೀ ನೀರಮೂಲೆವಾಣಿ ಚಿಕ್ಕಮ್ಮಮಂಗ್ಳೂರ ಮಾಣಿವಿಜಯತ್ತೆಹಳೆಮನೆ ಅಣ್ಣವಿದ್ವಾನಣ್ಣಗಣೇಶ ಮಾವ°ಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಶಾಂತತ್ತೆಅಕ್ಷರ°ಸಂಪಾದಕ°ಬಂಡಾಡಿ ಅಜ್ಜಿಅನಿತಾ ನರೇಶ್, ಮಂಚಿದೇವಸ್ಯ ಮಾಣಿತೆಕ್ಕುಂಜ ಕುಮಾರ ಮಾವ°ದೊಡ್ಡಭಾವಶ್ರೀಅಕ್ಕ°ನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ