ಬನ್ನಿ ಮುಂದೆ

June 12, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬನ್ನಿ ಮುಂದೆ ಬನ್ನಿ ಮುಂದೆ ಬನ್ನಿ ಮುಂದೆ ಮುಂದೆ
ನಿಲ್ಲೆಡಿ ನಿಂಗೊ ಆರುದೆ ಹಿಂದೆ ಬನ್ನಿ ಬೇಗ ಮುಂದೆ
ನಿಂದರೆ ಹಿಂದೆ ನಿಂಗೊಗೆ ಮತ್ತೆ ಬಪ್ಪಲೆ ಕಷ್ಟ ಮುಂದೆ
ಎಲ್ಲ ಕ್ಷೇತ್ರಲ್ಲು ಬರೆಕು ಮುಂದೆ ಅದರ ತಿಳ್ಕೊಳ್ಳಿ ಇಂದೆ
ಎಲ್ಲದರಲ್ಲು ಬರೆಕ್ಕು ಮುಂದೆ ಅದರ ತಿಳ್ಕೊಳ್ಳಿ ನಿಂಗೊ ಇಂದೆ
ಅತ್ತೆ ಇತ್ತೆ ನೋಡೆಡಿ ಹಿಂದೆ ಮುಂದೆ ಬಗ್ಗೆಡಿ
ಮೇಲೆ ಕೆಳ ತಿರುಗೆಡಿ ಸಂಕೋಚ ಏನೂ ಮಾಡೆಡಿ
ನಿಂಗೊ ರಜವೂ ಹೆದರ್ಲಾಗ ಹೆದರಿರೆ ನಮ್ಮ ಕೆಲಸ ಸಾಗ
ಮನಸ್ಸು ಗಟ್ಟಿ ಮಾಡಿ ನಾವು ಹೋಯೆಕ್ಕು ಮುಂದೆ ಬೇಗ
ಎಲ್ಲಿ ಹೋದರು ಮುಂದೆಯೇ ಕೂಪೋ° ಹಿಂದಾಣ ಬೆಂಚಿ ಬೇಡ
ಕಷ್ಟದ ಹೊಳೆಯ ದಾಂಟುಲೆ ಸಂಕ ಗಟ್ಟಿ ಇದ್ದರೆ ಆಡ
ಮುಂದೆ ಇಪ್ಪೋರ ದೂಡುಗು ಹಿಂದೆ ಹೋಪಲೆ ಮುಂದೆ ಬಿಡವು
ಹಿಂದೆ ಇಪ್ಪೋರ ಮುಂದೆ ತಪ್ಪಲೆ ಪ್ರಯತ್ನವ ಆರುದೆ ಮಾಡವು
ತಡವು ಮಾಡಿರೆ ಮತ್ತೆ ನವಗೆ ಕೂಪಲೆ ಜಾಗೆಯೆ ಸಿಕ್ಕ
ಹೊತ್ತಿಂಗೆ ಸರಿಯಾಗಿ ಹೋಗದ್ದರೆ ಮತ್ತೆ ನವಗೆ ಏನೂ ದಕ್ಕ
ಆಚಮನೆ ಶಂಭಟ್ಟ ಭಾವ° ಈಚಮನೆ ಸುಬ್ರಾಯ ಭಾವ°
ಮೇಗಾಣ ಮನೆ ನರಸಿಂಹ ಭಾವ° ಕೆಳಾಣ ಮನೆ ಕಿಟ್ಟಣ್ಣ ಭಾವ°
ಮೂಡುಮನೆ ಗೋಪಾಲ ಭಾವ° ತೆಂಕಮನೆ ವೆಂಕಪ್ಪ ಭಾವ°
ಭೇದಭಾವ ಏನೇ ಇದ್ದರು ಒಂದೇ ಆಗಿರಲಿ ಮನಸಿನ ಭಾವ
ಸಿಕ್ಕಿದ್ದಕ್ಕೆ ಮುಟ್ಟಿದ್ದಕ್ಕೆ ಲಡಾಯಿ ಮಾಡಿ ಕೋರ್ಟು ಮೆಟ್ಳು ಹತ್ತೆಡಿ
ಸಣ್ಣ ಸಣ್ಣ ವಿಷಯಕ್ಕೆ ನಂಬ್ರ ಮಾಡುವ ಕೆಟ್ಟ ಅಭ್ಯಾಸವ ಬಿಟ್ಟುಬಿಡಿ
ಒಬ್ಬಂಗೊಬ್ಬಂಗೆ ತಾಂಟ್ಸಿ ಹಾಕಿ ಚೆಂದ ನೋಡುಗು ಕೆಲವು ಜೆನ
ಏನಾರು ಕಾರಣ ಹುಡುಕ್ಕಿ ನೆರೆಕರೆಲಿ ಹರ್ಕತ್ತು ಮಾಡುಗು ಪ್ರತಿದಿನ
ಕೂಪಲೆ ಬಿಡವು ನಿಂಬಲೆ ಬಿಡವು ಉಂಬಲೆ ಬಿಡವು ಈ ಶಕುನಿಗೊ
ಹೋಪಲೆ ಬಿಡವು ಬಪ್ಪಲೆ ಬಿಡವು ಒರಗಲೆ ಬಿಡವು ಈ ಶೆನಿಗೊ
ನಾವುದೆ ಮನುಷ್ಯರು ಉಂಬದು ಅಶನ ಹೇಳ್ವದು ಇವಕ್ಕೆ ಗೊಂತಿಲ್ಲೆ
ಈ ಶೆನಿಗಳ ಕಾಟವ ತಪ್ಪುಸಿ ನಾವು ನಡದರೆ ಮತ್ತೆ ಚಿಂತಿಲ್ಲೆ
ನಮ್ಮ ಸಂಸ್ಕಾರ ಗುಣವಿದ್ವತ್ತೆಲ್ಲ ಬೆಲೆಯಿಪ್ಪದು ಹೇಳಿ ತಿಳಿಯೆಕ್ಕು
ತಗ್ಗದ್ದೆ ಬಗ್ಗದ್ದೆ ತಲೆನೆಗ್ಗಿ ನಾವು ಬಪ್ಪ ಕಷ್ಟವ ಎದುರುಸೆಕ್ಕು
ತಾರತಮ್ಯ ಎಷ್ಟೇ ಇದ್ದರೂ ನಮ್ಮ ಯೋಚನೆ ಒಂದೇ ಆಯೆಕ್ಕು
ನಮ್ಮ ಸಮಾಜದ ಸಂಸ್ಕ್ಟತಿ ಒಳುಶೆಕ್ಕಾದರೆ ಒಂದಾಗಿ ನಾವು ಗೈಯೆಕ್ಕು

[ ಬನ್ನಿ ಮುಂದೆ
ರಚನೆ: ಅರ್ತಿಕಜೆ ಮಾವ]

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಮಂಗ್ಳೂರ ಮಾಣಿ

  ನಮ್ಮ ಸಂಸ್ಕಾರ ಗುಣವಿದ್ವತ್ತೆಲ್ಲ ಬೆಲೆಯಿಪ್ಪದು ಹೇಳಿ ತಿಳಿಯೆಕ್ಕು
  ತಗ್ಗದ್ದೆ ಬಗ್ಗದ್ದೆ ತಲೆನೆಗ್ಗಿ ನಾವು ಬಪ್ಪ ಕಷ್ಟವ ಎದುರುಸೆಕ್ಕು!!!

  ವಾಹ್!

  ಎಂಥಾ ಮಾತು…! ಒಪ್ಪ :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿದೊಡ್ಡಭಾವಚೆನ್ನಬೆಟ್ಟಣ್ಣಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿದೇವಸ್ಯ ಮಾಣಿಸರ್ಪಮಲೆ ಮಾವ°ಅಡ್ಕತ್ತಿಮಾರುಮಾವ°ಶ್ಯಾಮಣ್ಣಕೇಜಿಮಾವ°ದೀಪಿಕಾವಿನಯ ಶಂಕರ, ಚೆಕ್ಕೆಮನೆಶಾ...ರೀತೆಕ್ಕುಂಜ ಕುಮಾರ ಮಾವ°ವೇಣೂರಣ್ಣಶಾಂತತ್ತೆಕಜೆವಸಂತ°ನೀರ್ಕಜೆ ಮಹೇಶವಾಣಿ ಚಿಕ್ಕಮ್ಮಜಯಶ್ರೀ ನೀರಮೂಲೆvreddhiಅಜ್ಜಕಾನ ಭಾವಬೋಸ ಬಾವಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ