ಗುರಿಕ್ಕಾರ್ರೆ ಮಡುಗಲಕ್ಕಡ ಸಭಗೆ ನೀರು (ಚೂರ್ಣಿಕೆ ಧಾಟಿಲಿ ವೃತ್ತಂಗೊ)

May 15, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೂರ್ಣಿಕೆ ಧಾಟಿಲಿ ವೃತ್ತಂಗೊ

(ಸಂಗ್ರಹ ಹಾಡುಗೊ)

(ಸಂಗ್ರಹ : ಅರ್ತಿಕಜೆ ಮಾವ°)

 

 

1

ಗುರಿಕ್ಕಾರ್ರೆ ಮಡುಗಲಕ್ಕಡ ಸಭಗೆ ನೀರಡಿಗೆಯೋರಡ್ಡಿಲ್ಲೆಡಾ

ಬರಲಿ ಸುಧಾರಿಕೆ ಮಾಡುವರೆಲ್ಲೊರು ಹಿಡಿತೆಕ್ಕೊಂಡುಡುಗೆಕ್ಕಡಾ

ಎರಡೆರಡೇ ಎಲೆ ಹಾಕ್ಸಿಕ್ಕಿ ಸೀವ್ಸುರಿಯೆಗುಟ್ಟೆಕ್ಕಡಾ

ಕೊರತೆ ಹೇಳ್ಸದ್ದೆ ಹೇಂಗಪ್ಪಾ ಕಳುಸುದೂ ಸಾಕಪ್ಪ ಈ ಮದುವೆಯೂ

 

2

ಸಾರು ನೀರಿನ್ಹಾಂಗಾಯಿದೂ ರುಚಿ ಇಲ್ಲೆ ಅದು ಚೆಪ್ಪೆಯೇ

ಕಾರ ಆಯ್ದು ಬದನೆಕಾಯಿ ಕೊದಿಲಯ್ಯ ಹೇಂಗುಂಬದು?

ಕ್ಷೀರಕ್ಕೆ ಸಕ್ಕರೆ ಬೇಕಾತು ಪಾಯಸಕ್ಕೆ ಚೂರು ಸೀವು ಕಮ್ಮಿಯೇ

ಮೇಲಾರಕ್ಕೆ ಹುಳಿ ಹೆಚ್ಚಿಗೆ ನೀರು ನೀರೇ ಮಜ್ಜಿಗೇ

 

3

ಸಾರಿಂಗೊಪ್ಪಿದ ತುಪ್ಪ ಪಲ್ಯ ಹುಳಿಲೇ ಗಮ್ಮತ್ತು ಮಾಡಿಕ್ಕೆಡಾ

ಓರೆ ನೋಡೆಡ ಹಿಂದೆ ಹಸರು ಕಡ್ಳೆ ಬಂತೀಗ ಬಿಟ್ಟಿಕ್ಕೆಡಾ

ಭಾರೀ ಹೋಳಿಗೆ ಲಾಡು ಚಕ್ಕುಲಿಯ ನೋಡಲ್ಲಿ ಮರದಿಕ್ಕೆಡಾ

ಮೂರುಕಣ್ಣಿನ ದೇವರೇ ಹುಳಿಮಜ್ಜಿಗ್ಗೆ ಇನ್ನೆಲ್ಲಿ ಹೇಳ್ಜಾಗೆಯೇ

 

4

ಎಷ್ಟು ಗಮ್ಮತ್ತಿನೂಟವೋ ಶಿವಶಿವಾ.. ಆರಪ್ಪ ಅಡಿಗೆ ಮಾಡಿದವೂ

ಕಿಟ್ಟು ಪುಟ್ಟನೂ ಲಾಡು ಹೋಳಿಗೆಗಳ ಅಟ್ಟಟ್ಟಿ ಬಳುಸಿದವೂ

ಹೊಟ್ಟೆ ಮೂಗು ನೋಡುತ್ತು ಏಳಲೆಡಿಯ ಕೂದಲ್ಲಿಂದ

ಬಿಟ್ಟಿ ಸಿಕ್ಕಿತ್ತು ಹೇಳಿ ತಿಂದಿಗಿದೆ ಕೈಗೊಟ್ಟೇಳಿಸು ಕಿಟ್ಟಭಟ್ಟಾ

 

~**~

 

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹರಿಃ ಭೋಜನ ಕಾಲೇ….

  ಹ್ಹ…ಹ್ಹ.ಹ್ಹ್ಹಾ…ಚೂರ್ಣಿಕೆ ಪಷ್ಟಿದ್ದು.

  [Reply]

  ಅರ್ತಿಕಜೆ ಮಾವ° Reply:

  ತೆಕ್ಕುಂಜ ಕುಮಾರ ಮಾವಂಗೆ ಧನ್ಯವಾದಂಗೊ. ನಿಂಗಳ ಕೊಶಿ ಕಂಡು ನವಗೂ ಕೊಶಿ ಆತು.

  ಚೂರ್ಣಿಕೆ ಹೇಳುತ್ತ ಉಂಡರೆ ಇನ್ನಷ್ಟು ಉಂಬಲಕ್ಕು
  ಅನುಭವಿಸಿ ಉಂಡರೆ ಬಹಳ ರುಚಿಯಕ್ಕು
  ನಮ್ಮ ರೀತಿನೀತಿ ಪದ್ಧತಿಯ ನಾವು ಒಳುಶೆಕ್ಕು
  ನಡೆನುಡಿಲಿ ಎಲ್ಲೋರ ಸಂತೋಷ ಪಡುಸೆಕ್ಕು

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅಂಬಗ, ಗೋವಿಂದ ಹೇಳಿಕ್ಕುದೋ…ಗೋವಿಂದಾರಿ ಗೋವಿಂದಾ…. ಈ ಊಟ ಗಡದ್ದಾತದಾ.. ಅರ್ತಿಕಜೆ ಅಣ್ಣಾ

  [Reply]

  ಅರ್ತಿಕಜೆ ಮಾವ° Reply:

  ಬಾಲಣ್ಣಂಗೂ ಪ್ರೀತಿಯ ನಮಸ್ಕಾರಂಗೊ.

  ಒಲವಿನ ಬಂಧು ಬಾಲಣ್ಣ ಮಧುರಕಾನನ
  ಬಲುದೊಡ್ಡದು ನೋಡಿ ನಿಂಗಳ ಅಭಿಮಾನ
  ಬಲುಮಧುರ ನಿಂಗಳ ನುಡಿಮುತ್ತು
  ಮಾತುಬರಹವೆ ಅಲ್ಲದೊ ನಮ್ಮ ಸಂಪತ್ತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕvreddhiಚೆನ್ನಬೆಟ್ಟಣ್ಣಪುಣಚ ಡಾಕ್ಟ್ರುಹಳೆಮನೆ ಅಣ್ಣಸುಭಗವಸಂತರಾಜ್ ಹಳೆಮನೆತೆಕ್ಕುಂಜ ಕುಮಾರ ಮಾವ°ಗಣೇಶ ಮಾವ°ಬೊಳುಂಬು ಮಾವ°ಪ್ರಕಾಶಪ್ಪಚ್ಚಿಗೋಪಾಲಣ್ಣಕೇಜಿಮಾವ°ಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ದೊಡ್ಮನೆ ಭಾವಚೆನ್ನೈ ಬಾವ°ಜಯಶ್ರೀ ನೀರಮೂಲೆಅನು ಉಡುಪುಮೂಲೆಶರ್ಮಪ್ಪಚ್ಚಿವೇಣೂರಣ್ಣಬೋಸ ಬಾವವಿದ್ವಾನಣ್ಣವೆಂಕಟ್ ಕೋಟೂರುಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ