Oppanna.com

ಹವ್ಯಕ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡೆಕು

ಬರದೋರು :   ಅರ್ತಿಕಜೆ ಮಾವ°    on   03/04/2014    5 ಒಪ್ಪಂಗೊ

ಹವ್ಯಕ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡೆಕು

 
ಒಪ್ಪಣ್ಣ ಬೈಲು ಹವ್ಯಕ ಭಾಷೆಯ ಸೇವೆ ಮಾಡ್ತದು ಅರ್ತು ತುಂಬಾ ಕೊಶಿ ಆತು. ಬೈಲಿನ ಬಗ್ಗೆ ಉಡುಪುಮೂಲೆ ರಘುರಾಮಣ್ಣ ಕೆಲವು ಸಮಯ ಮದಲಿಂದಲೇ ಎನ್ನತ್ತರೆ ಹೇಳಿಗೊಂಡಿತ್ತಿದ್ದವು , ಬೈಲಿಂಗೆ ಬರೆಕು ಹೇದೂ ಒತ್ತಾಯ ಮಾಡಿಗೊಂಡಿತ್ತಿದ್ದವು. ಚೆನ್ನೈ ಭಾವನೂ ಕಾಂಬಗೆಲ್ಲಾ ಬೈಲಿಂಗೆ ಬನ್ನಿ ಹೇದು ಹೇದುಗೊಂಡೇ ಇತ್ತಿದ್ದವು. ಬೈಲಿನ ಪುಸ್ತಕಂಗಳನ್ನೂ ಚೆನ್ನೈ ಭಾವ° ಕೊಟ್ಟಿತ್ತಿದ್ದವು.   ಆದರೆ ಎನಗೆ ಕಂಪ್ಯೂಟ್ರಿನ ತಲೆಬುಡ ಅರಡಿಯದ್ದ ಕಾರಣ ಉದಾಸನ ಮಾಡಿಗೊಂಡಿತ್ತಿದ್ದೆ. ಇತ್ತೀಚಗೆ ಚೆನ್ನೈ ಭಾವ° ಮನಗೆ ಬಂದು  ‘ನಿಂಗೊ ಕೊಂಬುಗಿಂಡಿ ಹಿಡ್ಕೊಂಡು ನಿಂದರಾತು ಮಾವ°, ಭವಂತಃ ಸರ್ವಜ್ಞಾಃ ಕ್ಕೆ ಏರ್ಪಾಡು ಮಾಡುವೊ°’  ಹೇದು ಹೇದಪ್ಪಗ ಎನ ಬೇರುಬಿಟ್ಟಲ್ಲಿಂದ ಹಂದದ್ದೆ ಉಪಾಯ ಇಲ್ಲದ್ದೆ ಆತು. ಹಾಂಗಾಗಿ ಅವು ಎಳಕ್ಕೊಂಡು ಬಂದಾಂಗೆ ಬೈಲಿಂಗೆ ಬಂದೆ. ಇಲ್ಲಿಪ್ಪೋರ ನಿಂಗಳೆಲ್ಲೋರ ಕಂಡಪ್ಪಗ ಕೊಶಿ ಆತು, ಆನೇ ಬಂದದು ತಡವಾತು ಹೇದು ಕಂಡತ್ತು. ಇಲ್ಲಿಪ್ಪ ಶುದ್ದಿಗಳ ಕೆಲವು ನೋಡಿಯಪ್ಪಗ ಬೈಲು ಲಾಯಕ ಬೆಳೆತ್ತ ಇದ್ದು, ಎಷ್ಟೋ ಜೆನ ಇದರ್ಲಿ ಹುರುಪಿಂದ ಪಾಲ್ಗೊಳ್ತ ಇಪ್ಪದರ ಕಂಡು ಸಂತೋಷ ಆತು.
ಹವ್ಯಕ ಸಾಹಿತ್ಯಲ್ಲಿ ಈ ಮದಲೇ ಅನೇಕ ಹೆರಿಯೋರು ಸಾಹಿತ್ಯ ಕೃಷಿ ಮಾಡಿದ್ದವು ಹೇಳ್ತದು ಹೆಮ್ಮೆಯ ಶುದ್ದಿ. ಕನ್ನಡದ ಸುರೂವಾಣ ಸಾಮಾಜಿಕ ನಾಟಕ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ ಮುಖ್ಯವಾಗಿ ಹವ್ಯಕ ಭಾಷೆಲಿ ರಚಿತವಾದ್ದು. ಇದರ ಕರ್ತೃ ಸೂರಿ ವೆಂಕಟರಮಣ ಶಾಸ್ತ್ರಿಗೊ. ಹವ್ಯಕ ಭಾಷೆಯ ಅನೇಕ ಪ್ರಾದೇಶಿಕ ವೈವಿಧ್ಯಂಗಳ ಅವು ಇದರ್ಲಿ ಬಳಸಿದ್ದವು. ಅದರಿಂದ ಮತ್ತೆ ಹವ್ಯಕ ಭಾಷೆಯ ಕುರಿತಾಗಿ ರಜಾ ಅಧ್ಯಯನಂಗಳೂ ನಡದ್ದು. ಪ್ರಕಟಿತ ಹಾಂಗೂ ಅಪ್ರಕಟಿತ ಪ್ರಬಂಧ ಮಹಾಪ್ರಬಂಧಂಗಳೂ ಇದ್ದು. ಸಾಕಷ್ಟು ಪ್ರೋತ್ಸಾಹ ಸಿಕ್ಕದ್ದ ಕಾರಣ ಅಲ್ಲಲ್ಲಿಯೇ ಅದು ಮುದುಡಿತ್ತು. ದಿ|ಪ್ರೊ| ಮರಿಯಪ್ಪ ಭಟ್ಟರೂ ಹವ್ಯಕ ವಿಚಾರಲ್ಲಿ ರಜಾ ಸಾಹಿತ್ಯ ಅಧ್ಯಯನ ಮಾಡಿಪ್ಪದು ಗಮನಾರ್ಹ. ಪ್ರೊ. ಟಿ.ಕೇಶವ ಭಟ್ಟರ ಹವ್ಯಕ ಪದ ಸಂಚಯ 1972ರಲ್ಲಿ ಪ್ರಕಟವಾಯ್ದು. ಈ ನಿಘಂಟು ಹವ್ಯಕ ಕಂದ ಪದ್ಯಲ್ಲಿ ರಚಿತವಾಗಿದ್ದು ಪದ್ಯಂಗೊ ಅಕಾರಾದಿಯಾಗಿದ್ದು ಹೇಳ್ವದು ವಿಶೇಷ. ದಿ|ಮರಿಯಪ್ಪ ಭಟ್ಟರು ರಚಿಸಿದ ಹವ್ಯಕ-ಇಂಗ್ಲೀಷು ನಿಘಂಟು ಅವರ ಕಾಲ ಕಳುದಮತ್ತೆ ಅವರ ಮಗಳು ಶ್ರೀಮತಿ ಶಾರದಾ ಜಯಗೋವಿಂದ ಬಾಕಿದ್ದೋರ ಸಹಕಾರಂದ 1983ರಲ್ಲಿ ಪ್ರಕಟಿಸಿದ್ದವು. ಎಲ್.ಆರ್. ಹೆಗಡೆ,  ವಿ.ಬಿ ಹೊಸಮನೆ ಮುಂತಾದೋರು ಸೇರಿ ಸಂಗ್ರಹಿಸಿದ ಹವ್ಯಕ ಹಾಡುಗಳು ಹೇಳ್ವ ಕೃತಿಯ ಪ್ರಕಟಿಸಿದ್ದೆಯೊ. ಆನುದೆ ಡಾ. ಹರಿಕೃಷ್ಣ ಭರಣ್ಯ ಸೇರಿ ಸಂಗ್ರಹಿಸಿದ ಹವ್ಯಕ ಹಾಡುಗಳ ಸಂಕಲನ ಪ್ರಕಟಣಗೆ ಇದೀಗ ಸಿದ್ಧವಾಗಿದ್ದು. ಪ್ರೊ| ಟಿ. ಕೇಶವ ಭಟ್ ಹವ್ಯಕ ಶೋಭಾನೆಗಳ ಸಂಗ್ರಹಿಸಿ, ಸಂಪಾಲುಸಿ ಪ್ರಕಟಿಸಿದ್ದವು. ಪಡಾರು ಮಹಾಬಲೇಶ್ವರ ಭಟ್ ಹೆಮ್ಮಕ್ಕಳ ಹಾಡುಗೊ ಮತ್ತೆ ಹವೀಕ, ಚೆನ್ನೈ ಭಾವ° ಕಳುದವಾರ ಎನ್ನ ಪರಿಚಯಲ್ಲಿ ಹೇಳಿಪ್ಪ ಎನ್ನ ಕೃತಿಗೊ ಹವ್ಯಕ ಸಾಹಿತ್ಯ ಕ್ಷೇತ್ರಲ್ಲಿ ಎನ್ನ ಸಣ್ಣ ಒಂದು ಅಳಿಲ ಸೇವೆ.  ಅಣ್ಣ ವಿ.ಬಿ. ಅರ್ತಿಕಜೆಯವರ ಕೃತಿ ‘ಜೇನಹನಿ’  ಹವ್ಯಕ ಹನಿಗವನಗಳ ಸಂಕಲನಲ್ಲಿ ಹವ್ಯಕರ ನಡೆ-ನುಡಿ, ಆಚಾರ-ವಿಚಾರ, ಊಟ-ಉಪಚಾರ, ನಂಬಿಕೆ, ಆಟ-ಕೂಟ ಮುಂತಾದ ವಿಷಯಂಗ ಪ್ರತಿಬಿಂಬಿತವಾಯ್ದು. ಕೆ.ವಿಶ್ವವಿನೋದ ಬನಾರಿ ರಚಿಸಿದ ‘ದಕ್ಷಾಧ್ವರ’ ಹವ್ಯಕ ಭಾಷೆಯ ಯಕ್ಷಗಾನ ಪ್ರಸಂಗ. ಡಾ.ಹರಿಕೃಷ್ಣ ಭರಣ್ಯ ರಚಿಸಿದ ‘ಹೀಂಗೊಂದು ಮದುವೆ’, ‘ಬದ್ಧ’ ನಾಟಕಂಗೊ, ‘ದೊಡ್ಡಜಾಲು’ ಹೇಳ್ವ ಕಾದಂಬರಿ, ಶಂ.ನಾ ಖಂಡಿಗೆ ಅವರ ‘ಹದಿಮೂರೆಸಳು’… ಹೀಂಗೆ ಇನ್ನೂ ಅನೇಕ ಮಂದಿಗಳ ಹವ್ಯಕ ಕೃತಿಗೊ ಪುಸ್ತಕ ರೂಪಲ್ಲಿ ಪ್ರಕಟ ಆಯ್ದು. ಅಪ್ರಕಟಿತ ರಚನೆಗೊ ಅದೆಷ್ಟೋ ಇದ್ದು. ಪತ್ರಿಕೆ-ಸಂಚಿಕೆ ಇತ್ಯಾದಿಗಳಲ್ಲಿ ಪ್ರಕಟಿತ ಲೇಖನಂಗೊ, ಕವಿತೆ, ಚುಟಕಂಗೊ, ಕತೆಗಳೂ ಹಲವಾರು.  ಹೀಂಗೆ ಹವ್ಯಕ ಸಾಹಿತ್ಯ ಕೃಷಿ ಬೆಳಕ್ಕೊಂಡಿಪ್ಪದು ಗಮನಾರ್ಹವೂ ಸಂತೋಷಕರವೂ ಆಗಿಪ್ಪ ವಿಷಯ.
ಹವ್ಯಕಲ್ಲಿ ಆಧುನಿಕ ಸಾಹಿತ್ಯ ಇನ್ನಷ್ಟು ಬೆಳೆಕು, ಕೇವಲ ಸಾಹಿತ್ಯ ರಚನೆ ಆದರೆ ಸಾಲ, ಪ್ರಕಟವಾಗಿ, ಮಾರಾಟವಾಗಿ ಎಲ್ಲೋರು ತೆಕ್ಕೊಂಡು ಓದುವಾಂಗೆ ಆಯೆಕು ಹೇಳ್ವ ಆಶಯಲ್ಲಿ –
ಹವ್ಯಕ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡೆಕು
ಬರದು ಮಡುಗಿರೆ ಸಾಲ ಪ್ರಕಟುಸುವವು ಬೇಕು
ಮಲ್ಲಿಗೆ ಮಾಲೆ ಕಟ್ಟಿರೆ ಸಾಲ ಸೂಡುವವು ಬೇಕು
ರುಚಿಯಡಿಗೆ ಮಾಡಿದರೆ ಸಾಕೊ ಉಂಬವುದೆ ಬೇಕು
ಪುಸ್ತಕ ಪ್ರಕಟಿಸಿರೆ ಸಾಕೊ ಮಾರುವವು ಬೇಕು
ಅದರಿಂದಲೂ ಹೆಚ್ಚು ಮುಖ್ಯ ತೆಕ್ಕೊಂಡು ಓದುವವು ಬೇಕು ||
ಮುಕ್ಯವಾಗಿ ಹವ್ಯಕ ಸಾಹಿತ್ಯ ಪ್ರಕಟಣಗೆ ಪ್ರೋತ್ಸಾಹ ದೊರೆಕು. ಸಮಗ್ರವಾದ ಹವ್ಯಕ ಸಾಹಿತ್ಯಿಕ ಪತ್ರಿಕೆ ಬರೆಕು ಹೇಳ್ತದು ನಮ್ಮ ಅಭಿಪ್ರಾಯ.
ಕಲ್ಲುಸಕ್ಕರೆ ಹಾಂಗೆ ಚೀಪಿದರೆ ಮತ್ತಷ್ಟು ಸೀವು
ಜೇನಹನಿ ಹಾಂಗೆ ಬಾಯಿಗೆ ಸೀವು ಮೈಗೆ ಹಿತವು
ಹಣ್ಣುತುಪ್ಪದ ಹಾಂಗೆ ಅದರ ಗುಣ ಮಧುರ
ಮನಸಿನಾರೋಗ್ಯಕ್ಕೆ ಅದು ಎರಟಿ ಮಧುರ
ತಿಂದಷ್ಟು ತಿನ್ನೆಕ್ಕು ಹೇಳ್ವ ಗೆಣಸಲೆ ಹಾಂಗೆ
ಹವ್ಯಕ ಭಾಷೆ ಸಾಹಿತ್ಯದ ಸೊಬಗು ಸೊಬಗೆ ||
 
ಹವ್ಯಕ ಭಾಷೆಲಿ ಒಳ್ಳೆಳ್ಳೆಯ ಸಾಹಿತ್ಯ ಕೃತಿಗೊ ಮೂಡಿ ಬರಲಿ, ಒಳ್ಳೆಯ ಪ್ರೋತ್ಸಾಹ ಸಿಕ್ಕಲಿ, ಒಪ್ಪಣ್ಣ ಬೈಲು ಇನ್ನಷ್ಟು ಬೆಳದು ರಂಜಿಸಲಿ ಹೇಳ್ವ ಸದಾಶಯದೊಟ್ಟಿಂಗೆ ಹರೇ ರಾಮ.
 

**

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

5 thoughts on “ಹವ್ಯಕ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡೆಕು

  1. ಒಲವಿನ ಪವನಜ ನಿನ್ನ ಕಳಕಳಿಯ ನೋಡಿದೆ ಮಹಾರಾಯ.ಆ ಬಗೆಗೆ ಎನಗೆ ಆಸಕ್ತಿಯೇನೋ ಇದ್ದು.ಆದರೆ ಆನೆ೦ತ ಮಾಡೆಕು ಹೇಳು;ಪ್ರಯತ್ನ ಮಾಡುತ್ತೆ. ಆ ಕುರಿತು ವೈಯಕ್ತಿಕವಾಗಿ ಬರವಲೆ ಸಾಧ್ಯವಾದರೆ ಎನ್ನ ಜಿ.ಮೈಲಿ೦ಗೆ ವಿವರವಾಗಿ ಬರೆದರೆ ಪ್ರಯತ್ನ ಮಾಡ್ಲೆ ಆವುತ್ತೋ ನೋಡುವೊ°.ಯಥೋಚಿತ ಬರೆ.ನಮಸ್ತೇ.

  2. ಹರೇರಾಮ, . ಅರ್ತಿಕಜೆ ಮಾವ ಬಯಲಿಂಗೆ ಬಂದದು ಒಳ್ಲೆದಾತು, ಇನ್ನು ಇವರ ಹಾಂಗೇ ಇನ್ನೊಬ್ಬ ಇದ್ದವು. ಅವೇ ಭರಣ್ಯದ ಮಾವ{ಎನಗೆ ಅಳಿಯ ಆಯೆಕ್ಕು}. ಅವುದೆ ಬಯಲಿಂಗೆ ಬರ್ಲಿ. ಎಂತ ಹೇಳ್ತಿ?

    1. ಇ೦ದು ಹೊಟ್ಟೆ ತು೦ಬಿತ್ತು ಅರ್ತಿಕಜೆ ಶ್ರೀಕೃಷ್ಣಣ್ಣ ! ತು೦ಬು ಹೃದಯದ ಸ್ವಾಗತ+ಧನ್ಯವಾದ+ ಅಭಿನ೦ದನಗೊ ನಿ೦ಗಳ ಈ ಲೇಖನಕ್ಕೂ ಅಭಿನ೦ದನಗೊ.ವಿಜಯಕ್ಕನ ಅಭಿಪ್ರಾಯವ ಅನುದೆ ಅನುಮೋದುಸುತ್ತೆ.ಆದಷ್ಟು ಬೇಗ ನಮ್ಮ ಭರಣ್ಯಣ್ಣನುದೆ ಬೈಲಿ೦ಗೆ ಇಳಿಯಲಿ.ಅವಕ್ಕುದೆ ಬೈಲಿನ ಪರವಾಗಿ ಆತ್ಮೀಯ ಸ್ವಾಗತ.

  3. ಮತ್ತೆ ಮತ್ತೆ ಬರೆತ್ತೆ. ಕನ್ನಡ ವಿಕಿಪೀಡಿಯಲ್ಲಿ ಹವ್ಯಕ -ಜನಾಂಗ, ಭಾಷೆ, ಸಂಸ್ಕೃತಿ, ಹಬ್ಬಂಗೊ -ಎಲ್ಲದರ ಬಗ್ಗೆ ಹಾಕುಲೆ ತುಂಬ ಬಾಕಿ ಇದ್ದು. ಈ ಪುಟ ನೋಡಿ. ಅದರಲ್ಲಿ ಕೆಂಪು ಬಣ್ಣಲ್ಲಿ ಕಾಂಬ ಲಿಂಕ್‌ಗಳ ಬಗ್ಗೆ ಲೇಖನ ಇನ್ನೂ ಆಯಿದಿಲ್ಲೇಳಿ ಅರ್ಥ. ಇಪ್ಪ ಲೇಖನಂಗಳೂ ಹೆಚ್ಚಿನವು ಅರ್ಧಂಬರ್ದ ಇದ್ದಷ್ಟೆ. ಆನು ತುಂಬ ಸರ್ತಿ ಹೇಳಿತ್ತಿದ್ದೆ -ಆನು ಟ್ರೈನಿಂಗ್ ಕೊಡುಲೆ ತಯಾರಿದ್ದೇಳಿ. ಆದರೆ ಆರೂ ಮುಂದೆ ಬೈಂದವೇ ಇಲ್ಲೆ. ಹಾಂಗಾಗಿ ಆನು ಹೇಳೊದು ಬಿಟ್ಟೆ.

  4. ಬಿರು ಬೇಸಗೆಯ ನೆಡುಕೆ ಮಳೆ ಬ೦ದು ತ೦ಪಾಗಿ
    ಬೈಲ ಸುತ್ತಲು ಮಲ್ಲಿಗೆಯು ಅರಳುವಾ೦ಗೆ
    ಕೃಷಿ ಕಾಯಕದ ಬ೦ಧು ವರ್ಗಕ್ಕೆ ಹೊಸ ಹುರುಪು
    ಬಕ್ಕು ನಿ೦ಗಳ ಕ೦ಡು ಅರ್ತಿಕಜೆ ಮಾವ..
    ಹವ್ಯಕ ಸಾಹಿತ್ಯದ ಬೆಳವಣಿಗೆಗೆ ಅರ್ತಿಕಜೆ ಮಾವನ ಶುದ್ದಿಗೊ ದಾರಿದೀಪವಾಗಲಿ ಹೇಳಿ ಹಾರೈಕೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×