ಬರದೋರು :   ಅರ್ತಿಕಜೆ ಮಾವ°    on   05/06/2014    5 ಒಪ್ಪಂಗೊ

 
 
ಇವ° ಆರು ಹೇಳಿ ಗೊಂತಿದ್ದೊ ನಿಂಗೊಗೆ?
ಇಲ್ಲೆ, ಗೊಂತಿದ್ದು ಎನಗೆ
ಇವ° ಬೇರಾರು ಅಲ್ಲ, ಇವ° ಇವನೇ
ಇವನ ಹಾಂಗೆ ಬೇರಾರುದೆ ಇಲ್ಲೆ
ಇವಂಗೆ ಸಮ ಮತ್ತಾರುದೆ ಇಲ್ಲೆ
ಸಮಾಜಸೇವೆ ಹೇಳಿ ದೇಶಸೇವೆ ಹೇಳಿ
ದಿನಾ ಚೆರ್ಪು ತಳವವ°
ಸಂಘಸಂಸ್ಥೆಗಳಲ್ಲಿ ಅಧಿಕಾರ ದುರುಪಯೋಗ ಮಾಡಿ
ಪೈಸೆ ಒಳಹಾಕಿದವ° ಇವ° ಹೇಳ್ತೀರೋ?
ನಿಸ್ವಾರ್ಥಸೇವೆ ಹೇಳಿ ಮಾಡಿ ಶುದ್ಧಿ ಇಲ್ಲದ್ದೆ
ಕಿಸೆ ತುಂಬಿಸಿಗೊಂಡವ° ಇವ° ಹೇಳ್ತೀರೋ
ಛೆ! ಛೆ! ಇವಂಗೂ ಅವಂಗೂ ಏವ ಸಂಬಂಧವೂ ಇಲ್ಲೆ
ಇವ° ಇವ°ನೇ, ಅವ° ಅವ°ನೇ
ದೇವರು ಧರ್ಮ ಹೇಳಿರೆ ಇವಂಗಾಗ
ಹಾಂಗೆ ಹೇಳಿ ಇವ° ನಾಸ್ತಿಕ° ಅಲ್ಲ
ಆಸ್ತಿಕ ಅಂತೂ ಅಲ್ಲೇ ಅಲ್ಲ
ಧಾರ್ಮಿಕಸಮ್ಮೇಳನಲ್ಲಿ ಇವ°ನದ್ದೇ ಅಧ್ಯಕ್ಷತೆ
ಇವನ್ನದ್ದೇ ಧಾರ್ಮಿಕಭಾಷಣ
ಇವ° ಇಲ್ಲದ್ದೆ ನಮ್ಮೂರ ಏವ ದೇವರಿಂಗೂ
ಕುಂಭಾಭಿಷೇಕ, ಬ್ರಹ್ಮಕಲಶ
ನಡದ್ದಕ್ಕೆ ದಾಖಲೆ ಇಲ್ಲೆ
ಜಾತಿ ನೀತಿ ಮೇಲು ಕೀಳು
ಹೇಳುವ ತಾರತಮ್ಯವೆ ಇವಂಗಿಲ್ಲೆ
ಆದರೂ ತಮ್ಮವು ಹೇಳಿರೆ
ರಜ ಹೆಚ್ಚು ಅಭಿಮಾನ ಪ್ರೀತಿ ಅಷ್ಟೆ
ಎದುರು ಸಿಕ್ಕಿರೆ ಸಾಕು, ನಮ್ಮ ತಲೆ ತಿಂಗು
ಮಾತಿಲೇ ತಲೆ ಹಾಳುಮಾಡುಗು
ಇವಂಗೆಮಾತುಶುರುಮಾಡಲೆಗೊಂತಿದ್ದು
ನಿಲ್ಲುಸಲೆ ಗೊಂತಿಲ್ಲೆ
ಅವನ ಸಮಯದಬೆಲೆಯೇ ಅವಂಗೆ ಗೊಂತಿಲ್ಲೆ
ಮತ್ತೆ ನಮ್ಮ ಸಮಯದ ಬೆಲೆ ಅವಂಗೆ ಗೊಂತಿಕ್ಕೊ
ಇವ° ಧಾರಳ ಖರ್ಚು ಮಾಡುತ್ತ°
ಬೇರೆಯವರ ಸಂಘಸಂಸ್ಥೆಗಳ ಪೈಸೆಯ
ಇವನ ಉಳಿತಾಯಯೋಜನೆ ಬಗ್ಗೆ ಹೇಳದ್ದೆ ಕಳಿಯ
ಇವ° ಪೈಸೆ ಕೊಟ್ಟು ಪತ್ರಿಕೆ ತೆಕ್ಕೊಂಡು ಓದಿದವ° ಅಲ್ಲ
ಪೈಸೆ ಕೊಟ್ಟು ಸಿಗರೇಟು ಎಳದವ° ಅಲ್ಲ
ಆದರೂ ಬೇರೆಯವರ ಪೈಸೆಲೆ ಬದುಕ್ಕುವವ°
ಇವನದ್ದು ಅತ್ಯಾಧುನಿಕ ವಿಚಾರಧಾರೆ
ಸ್ವಭಾವ ನಡೆ ನುಡಿ ಎಲ್ಲ ಬೇರೆ
ಇವನತ್ತರೆ ಏವ ವಿಷಯ ಹೇಳಿರೂ
ಎಲ್ಲ ಗೊಂತಿದ್ದವನ ಹಾಂಗೆ ಮಾತಾಡ್ತ°
ತಾನೇ ಸರ್ವಜ್ಞ° ಹೇಳಿ ಭಾವುಸುತ್ತ°
ಸ್ವರ್ಗಕ್ಕೇ ದಾರಿ ತೋರುಸುತ್ತ°
ಇವಂಗೆನಿತ್ಯ ಅದಿಲ್ಲದ್ದೆ
ಇದು ಆಗದ್ದೆ ಒರಕ್ಕು ಬಾರ
ಹಾಂಗಾರೆಇವ° ಆರು ?
ಈಗಳಾದರೂ ಗೊಂತಾತೊ
ಇಲ್ಲೆ
ಇವನ ಜಾತಕಹಣೆ ಬರಹ
ಇವನ ಒಳಹೆರ
ಅಂತರಂಗದ ಅಂತರ್ಯ
ನಿಂಗೊಗೆ ಗೊಂತಿದ್ದೋ?
ಇಲ್ಲೆ, ನಿಂಗೊಗೆ ಗೊಂತಿಲ್ಲೆ
ಎನಗೆ ಗೊಂತಿದ್ದು
ಇವನ ಬಗ್ಗೆ ಹೇಳುತ್ತರೆ
ಇನ್ನೂ ಎಷ್ಟೋ ಇದ್ದು
ಇಂದಿಂಗೆ ಇಷ್ಟು ಸಾಕು
 
~~~
ಇವ° ಆರು?
(ರಚನೆ: ಅರ್ತಿಕಜೆ ಮಾವ°)
~~~~~

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

5 thoughts on “ಇವ° ಆರು?

  1. ತೆಕ್ಕುಂಜ ಕುಮಾರ ಮಾವಂಗೆ ಧನ್ಯವಾದಂಗೊ. ಏತಡ್ಕ ನರಸಿಂಹಣ್ಣನ ಒಪ್ಪ ಓದಿ ಕೊಶಿ ಆತು. ಭಾಗ್ಯಕ್ಕಂಗೆ ಧನ್ಯವಾದಂಗೊ. ಲಕ್ಷ್ಮಿಯಕ್ಕನ ಒಪ್ಪ ಲಾಯಕ ಅತು. ಎಲ್ಲೊರಿಂಗೂ ಹೃತ್ಪೂರ್ವಕ ಧನ್ಯವಾದಂಗೊ. ನಿಂಗೊ ಎಲ್ಲೋರ ಒಟ್ಟಿಂಗೆ ಬೈಲಿಲಿ ಇಪ್ಪಲೆ ಕೊಶಿ ಆವ್ತು. ಹೇಳಿದಾಂಗೆ ಅಂಬಗ ಇವ ಆರು ಹೇಳಿ ಹೇಳೆಕ್ಕ ಆನು ಇಲ್ಲಿ ….-
    ಇವ ಅಲ್ಲೂ ಇದ್ದ ಇಲ್ಲೂ ಇದ್ದ
    ಎಲ್ಲೆಲ್ಲೂ ಇದ್ದ
    ಇವ ಆರು ಹೇಳಿ ಹೇಳಿರೆ
    ಗುಟ್ಟು ರಟ್ಟಕ್ಕು
    ಹಾಂಗಾಗಿ
    ಇವ ಆರು ಹೇಳಿ ನಿಂಗಳೇ ಊಹಿಸಿಗೊಳ್ಳಿ.
    ಇವ

  2. ಎನಗೆ ಗೊಂತಿಲ್ಲೆ ಇವ ಆರು
    ಇದ್ದವು ಇವನಂತೋವು ಸಾವಿರಾರು
    ಬಾಯಿಲಿ ದೇಶ ಭಕ್ತಿಯ ಮಂತ್ರ
    ಎಲ್ಲವೂ ಪೈಸೆಗಾಗಿ ತಂತ್ರ

  3. ಗುರುತಿಸಿದ್ದು ಸರಿಯಾತೊ ಗೊಂತಿಲ್ಲೆ ಎನಗೆ
    ಅರ್ತಿಕಜೆ ಮಾವನೇ ಹೇಳೆಕ್ಕಷ್ಟೆ
    ಹೇಳೆಕ್ಕೋ ….. ?

  4. ಇವ ದೇಶಭಕ್ತ ಹೇಳಿದರೆ ದೇಶಕ್ಕೆ ಅವಮಾನ
    ಈಶಭಕ್ತ ಹೇಳಿದರೆ ದೇವರಿಂಗೆ ಅವಮಾನ
    ಎಲ್ಲ ಬಿಟ್ಟವ ಹೇಳಿದರೆ ಎಲ್ಲರಿಂಗು ಅವಮಾನ
    ಇವ ಅವನೇ ಹೇಳಿ ಎಲ್ಲರ ಅನುಮಾನ

  5. ಎನಗೆ ಗೊಂತಿಲ್ಲೆ . ಇವ ಆರು..?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×