Oppanna.com

ಮಗಳಿಂಗೆ ಬುದ್ಧಿ ಹೇಳುವ ಹಾಡು

ಬರದೋರು :   ಅರ್ತಿಕಜೆ ಮಾವ°    on   10/07/2014    11 ಒಪ್ಪಂಗೊ

ಮುದ್ದು ಮಗಳೆ ನೀನು
ಶ್ರದ್ಧೆಲಿ ಕೇಳು ಮರೆ
ಯದ್ದೆ ಆನು ಹೇಳ್ವ ಮಾತೆಲ್ಲಾ
ಬುದ್ಧಿಗಿಪ್ಪದು ಹೇಳಿ
ತಿದ್ದಿ ನೀ ನಡತೆಯ
ಶುದ್ಧ ಪುತ್ಥಳಿಯಾಗು ಮೋಳೇ ||೧||

ಗೆಂಡನ ಮನೆಲಿ ನೀ
ನುಂಡು ಸುಮ್ಮನೆ ಕೂದು
ಗೊಂಡು ನೀ ದಿನ ಕಳಿಯೇಡ
ಗೆಂಡನಾಜ್ಞೆಯ ಮೀರಿ
ಚಂಡಿ ನೀನಾಗೇಡ
ಕೊಂಡಾಟ ಮಾಡುಲೆ ಬಿಡೆಡ ||೨||

ನೆರೆಕರೆ ಮನ ಹೋಗಿ
ಹರಟೆ ಮಾತಿಲಿ ನಿನ್ನಾ
ವರ ಸುದ್ದಿ ಹೇಳ್ಳಾಗ
ಹಿರಿಯರ ಮಾತಾಪಿ
ತರ ಹಾಂಗೆ ಮಕ್ಕಳು
ಕಿರಿಯೋವು ಹೇಳಿ ನೀ ತಿಳುಕ್ಕೊ ||೩||

ಅತ್ತೆ ಮಾವಂಗೆದು
ರುತ್ತರ ಕೊಡೆಡನೀ
ನತ್ತಿಗೆ ನಾದಿನಿಯರಲಿ
ನಿತ್ಯ ಪ್ರೀತಿಯ ಮಾಡು
ಮತ್ತೆ ಮೈದುನ ಭಾವಂ
ಗೆರಡೆಣಿಸೇಡ ಮಗಳೆ ||೪||

ಹರಿಯುವ ಹೊಳೆ ನೀರು
ಭರಿತವಾದರೆ ದಡಾ
ವೆರಡು ಕರಗಿ ಹೋಪ ಹಾಂಗೆ
ಹಿರಿಯರಾಜ್ಞೆ ಮೀರ್ವ
ಗರುವದ ಹೆಣ್ಣು ತ
ನ್ನೆರಡು ಕುಲಕಪಕೀರ್ತಿತಕ್ಕು ||೫||

ಅರಿತಾರು ಗುಣವಾ
ಚರಿಸುತ್ತ ಸುಖದಿಂದ
ಹೊರಟು ಹೊಕ್ಕ ಮನೆಗಳ ಬೆಳಗು
ವರಸುಮಂಗಲಿಯಾಗಿ
ಗುರುನಂದಿಗೇಶನ
ಕರುಣೆಯಿಂದಿರು ನಿತ್ಯಮಗಳೆ ||೬||

~~~

[ಮಗಳಿಂಗೆ ಬುದ್ಧಿ ಹೇಳುವ ಹಾಡು
ಸಂಗ್ರಹ : ಅರ್ತಿಕಜೆ ಮಾವ]

ಅರ್ತಿಕಜೆ ಮಾವ°
Latest posts by ಅರ್ತಿಕಜೆ ಮಾವ° (see all)

11 thoughts on “ಮಗಳಿಂಗೆ ಬುದ್ಧಿ ಹೇಳುವ ಹಾಡು

  1. ಅಣ್ಣಾ ಇದರ ನಿ೦ಗೊ ಎಲ್ಲಿ೦ದ ಸ೦ಗ್ರಹಿಸಿದ್ದು ? “ಗುರು ನ೦ದಿಗೇಶ ” ಹೇಳುವದು ಕವಿಯ/ ಕವಯತ್ರಿಯ- “ಅ೦ಕಿತದ ಹಾ೦ಗೆ ತೋರ್ತು.ಇದೇ ಅ೦ಕಿತದ ಇನ್ನಷ್ಟು ಹಾಡುಗೊ ನಿ೦ಗಳ ಸ೦ಚಿಲಿ ಇದ್ದಿಕ್ಕು.ಕಡೆ೦ಗೋಡ್ಲು ಕುಟು೦ಬದವಕ್ಕೆಲ್ಲ ನ೦ದಿಗೇಶ್ವರ ಮನೆ ದೇವರಡ.ಉಡುಪುಮೂಲೆ ಅಜ್ಜ ಹಾ೦ಗೆ ಹೇಳಿದ ನೆ೦ಪಾವುತ್ತಿದ.ಅವುದೇ ಅದೇ ಕುಟು೦ಬದ ಶಾಖೆಯಡ. ಹಾ೦ಗೆ ಪೈಕ್ಕಾನ,ಅ೦ಬೆಮೂಲೆ ಮದಲಾದವೆಲ್ಲ ಇದೇ ಮನೆತನದವು ಹೇದು ಅಜ್ಜ ಹೇಳಿದ ನೆ೦ಪು.ಈ ಅ೦ಕಿತವ ನೋಡಿರೆ ಆ ಕುಟು೦ಬದ ಹೆರಿಯವಾರಾದರೂ ಬರದಿಪ್ಪಲೆ ಸಾಕು ಹೇದು ಎನ್ನದೊ೦ದು ಊಹೆ.ಆ ಮನೆತನದ ಹಳಬರ ವಿಚಾರಿಸಿರೆ ಗೊ೦ತಪ್ಪಲೆಡೆ ಇದ್ದು.ಈ ಪದ್ಯಲ್ಲಿ ನಮ್ಮ ಪ್ರಾಚೀನರ ಸದಾಶಯ೦ಗೊ ಬಾರೀ ಲಾಯಕಕೆ ಬಯಿ೦ದು.ಇ೦ದ್ರಾಣ ಸಮಾಜಲ್ಲಿ ಈ ವಿಚಾರವ ಹಸಿ ಮಡ್ಲಿನ ಸೂಟೆ ಮಾಡಿ ಹುಡ್ಕೆಕಕ್ಕು! ನಮ್ಮ ಪ್ರಾಚೀನ ಹಾಡಿನ ಸ೦ಪತ್ತಿನ ಕಷ್ಟಲ್ಲಿ ಸ೦ಗ್ರಹಿಸಿ ಹೀ೦ಗೆ ಒಳುಶಿಗೊ೦ಡು ಬಪ್ಪ ಈ ಸತ್ಕಾರ್ಯಕ್ಕೆ ಹಾರ್ದಿಕ ಅಭಿನ೦ದನ೦ಗೊ.ನಮ್ಮ ಹವ್ಯಕರ ಪ್ರಾಚೀನ ಸ೦ಸ್ಕೃತಿಯ ಮು೦ದಾಣ ಪೀಳಿಗಕ್ಕೊ ಅರಿತುಗೊ೦ಬಲೆ ನಿ೦ಗ ಮಾಡುವ ಈ ಕಾರ್ಯ ತು೦ಬಾ ಸಕಾಯಆವುತ್ತು.ಹೇಳುವದ ರಲ್ಲಿ ಎರಡು ಮಾತಿಲ್ಲೆ. ಇ೦ಥ ಸಾರ್ಥಕ ಕೆಲಸವ ಮಾಡ್ತ ಇಪ್ಪ ನಿ೦ಗೊಗೆ ಮತ್ತೊ೦ದಾರಿ ಧನ್ಯವಾದ ಹೇಳುತ್ತಾ ಒ೦ದೊಪ್ಪ.ನಮಸ್ತೇ.

    1. ಗುರು ನಂದಿಕೇಶ ಹೇಳುದು ಕವಿಯ ಅಂಕಿತ ಆದಿಕ್ಕು. ಈ ಅಂಕಿತ ಇಪ್ಪ ಪದ್ಯವ ಸುಮಾರು ಎಂಟತ್ತು ವರ್ಷಂಗಳ ಹಿಂದೆ ಸಂಗ್ರಹಿಸಿ ಕೊಟ್ಟದು ವಿಜಯಾ ಸುಬ್ರಹ್ಮಣ್ಯ ಕುಂಬಳೆ. ಇದರ ಮೂಲ ಇನ್ನೂ ಬೆಣಚ್ಚಿಂಗೆ ಸಿಕ್ಕಿದ್ದಿಲ್ಲೆ. ನಿಂಗೊ ಹೇಳಿದಾಂಗೆ ನಿಂಗಳ ಊಹೆ ಸರಿಯಾಗಿಪ್ಪಲೂ ಸಾಕು.

      ಶುದ್ದಿಯ ಓದಿ ಒಪ್ಪಕೊಟ್ಟು ಪ್ರೋತ್ಸಾಹಿಸುವ ಉಡುಪುಮೂಲೆ ಅಪ್ಪಚ್ಚಿಗೆ ಕೃತಜ್ಞತೆಗೊ. ಹರೇ ರಾಮ.

  2. ತುಂಬಾ ಲಾಯಕ ಇದ್ದು ಮಾವ .
    ಹರಿಯುವ ಹೊಳೆ ನೀರು
    ಭರಿತವಾದರೆ ದಡಾ
    ವೆರಡು ಕರಗಿ ಹೋಪ ಹಾಂಗೆ – ಎಷ್ಟು ಅರ್ಥಪೂರ್ಣ ಹೋಲಿಕೆ .. ನಮ್ಮ ಸಂಸ್ಕಾರದ ಒಟ್ಟಿ೦ಗೆ ಭಾಷೆಯೂ ಎಷ್ಟು ಸಂಪದ್ಭರಿತ ಹೇಳಿ ಹೆಮ್ಮೆ ಆತು .ಧನ್ಯವಾದ.

    1. ನಮ್ಮ ಹಳ್ಳಿಯ ಅಜ್ಜಿಯಕ್ಕಳ ಜನಪದ ಹಾಡುಗಳಲ್ಲಿ ಎಷ್ಟೊಂದು ಅರ್ಥ ಇರ್ತು ಹೇಳಿ ನವಗೆ ಆಶ್ಚರ್ಯ ಆವುತ್ತು. ಕೆಲವು ಜೆನ ಹಳ್ಳಿಯ ಹಾಡುಗಳ ಕಡೆಗೆಣುಸುತ್ತವು. ನಮ್ಮ ಸಂಸ್ಕೃತಿ, ಆಚರ ವಿಚಾರ, ಪದ್ಧತಿ, ನಿಯಮ ನಡವಳಿಕೆ ಎಲ್ಲ ಈ ಜನಪದ ಹಾಡುಗಳಲ್ಲಿ ತುಂಬಿಪ್ಪದು ಕಾಂಬಲಕ್ಕು. ಇದರಿಂದ ನಮ್ಮ ಅಭಿಮಾನವೂ ಹೆಚ್ಚುತ್ತು. ಮುಳಿಯ ಭಾವನ ಒಪ್ಪಕ್ಕೆ ಧನ್ಯವಾದಂಗೊ

  3. “ಹೊಕ್ಕ ಮನೆಗಳ ಬೆಳಗು ವರಸುಮಂಗಲಿಯಾಗಿ”- ಎಲ್ಲರೂ ಅನುಸರಿಸೆಕ್ಕಾದ ಮಾತು. ಇಲ್ಲಿ ಸಂಗ್ರಹಿಸಿ ಕೊಟ್ಟ ಅರ್ತಿಕಜೆ ಮಾವಂಗೆ ಧನ್ಯವಾದಂಗೊ.
    ಗುರುನಂದಿಗೇಶ ಹೇಳುವದು ಆರದ್ದಾರೂ ಕಾವ್ಯನಾಮ ಆಗಿಕ್ಕು ಅಲ್ಲದೋ?
    ಮಕ್ಕೊಗೆ ಬುದ್ಧಿವಾದ ಹೇಳ್ತ ಇದೆ ನಮೂನೆಯ ಒಂದು ಪದ್ಯದ ಆಶಯ ಎನ್ನ ನೆಮ್ಪಿನ್ಗೆ ಬಂತು. (ಪದ್ಯ ಸರೀ ನೆಂಪು ಇಲ್ಲೇ )
    ಬೇರೆಯವರ ಮನಗೆ ಹೋಗೆಡ, ಹೋದರು ತೊಂದರೆ ಇಲ್ಲೇ, ಅಲ್ಲಿ ಹೋಗಿ ಎಂತನ್ನು ತಿನ್ನೆಡ, ತಿಂದರು ತೊಂದರೆ ಇಲ್ಲೇ, ಆದರೆ ಅದರ ಮನೇಲಿ ಹೇಳದ್ದೆ ಇರೆಡ.. ಈ ರೀತಿಯಾಗಿ

    1. ಒಂದೇ ಅಭಿಪ್ರಾಯ ಇಪ್ಪ ಬೇರೆ ಬೇರೆ ಪದ್ಯಂಗೊ ಇದ್ದು. ಅದರ ನಿಂಗೊ ಗಮನಿಸಿ ತಿಳಿಶಿದ್ದಕ್ಕೆ ಧನ್ಯವಾದಂಗೊ. ಗುರುನಂದಿಕೇಶ° ಹೇಳ್ವದು ನಿಂಗೊ ಹೇಳಿದ ಹಾಂಗೆ ಕವಿಯ ಕಾವ್ಯನಾಮವೇ ಆಗಿಪ್ಪಲು ಸಾಕು. ನೆಂಪುಮಾಡಿ ನಿಂಗಳೂ ಹಲವು ಪದ್ಯಂಗಳ ತಿಳಿಶಿದ್ದಿ. ಕೊಶಿಯಾತು.

    2. ಆ ಪದ್ಯ ಹೀಂಗೆ ತೋರುತ್ತು –
      ಚಿಕ್ಕ ಮಕ್ಕಳು ಯಾವಾಗಲೂ ಹೆರವರ ಮನೆಗೆ ಹೋಗಬಾರದು
      ಹೋದರೆ ಹೋಗಿಕೊಳ್ಳಿ ಮತ್ತೊಂದು ಹೇಳುತ್ತೇನೆ | ಅಲ್ಲಿ ನೀವು ಏನನ್ನೂ ತಿನ್ನಬಾರದು
      [ಪೂರ್ತಿ ಬತ್ತಿಲ್ಲೆ]

  4. ಆಹಾ ..! ಒಳ್ಳೆ ಸಂಗ್ರಹ ಮಾವ.

    1. ನಿಂಗೊಗೆ ಮೆಚ್ಚಿಗೆ ಆದ್ದು ಎನಗೂ ಸಂತೋಷ ಆತು.

  5. ಹಳಬರ ಜೋಳಿಗೆಯ ಸಂಗ್ರಹವ ಹೆರ ಹಾಕುತ್ತಾ ಇಪ್ಪ ನಿಂಗಳ ಕಾರ್ಯ ಶ್ಲಾಘನೀಯ ಅರ್ತಿಕಜೆ ಅಣ್ಣ.

    1. ನಿಂಗಳ ಪ್ರೋತ್ಸಾಹಕ್ಕೆ, ಒಪ್ಪಣ್ಣ ಬೈಲು ಅವಕಾಶ ಕೊಟ್ಟದಕ್ಕೆ ,ಚೆನ್ನೈ ಭಾವ° ಸಹಕಾರ ಕೊಟ್ಟದಕ್ಕೆ ಋಣಿಯಾಗಿದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×