ಸುಖ ಜೀವನದ ದಾರಿ

 

ಪ್ರೀತಿಯೆ ಬದುಕ್ಕಿನ ಸೌಖ್ಯದ ಬಂಗಾರ

ಅದುವೇ ಮದುಮಕ್ಕಳ ಮದುವಗೆ ಸಿಂಗಾರ

ಬಂದವಕ್ಕೆ ಮಾಡಿರೆ ಪ್ರೀತಿಯ ಉಪಚಾರ

ದೂರ ತೊಲಗುಗು ಒದಗಿದ ಗ್ರಹಚಾರ

 

ಗೆಂಡ ಹೆಂಡತ್ತಿಯರ ಪ್ರೀತಿಯೆ ಪ್ರೇಮ

ಗೆಳೆಯ° ಗೆಳತಿಯರ ಪ್ರೀತಿಯೆ ಸ್ನೇಹ

ಅಪ್ಪ ಅಮ್ಮಂದ್ರಿಂಗೆ ಮಕ್ಕಳ ಮೇಲಿಪ್ಪ

ಮುದ್ದಿನ ಪ್ರೀತಿಯೆ ಅದು ವಾತ್ಸಲ್ಯ

 

ಸಣ್ಣವಕ್ಕೆ ದೊಡ್ಡವರ ಮೇಲಿಪ್ಪ ಮರ್ಯಾದೆ

ಶಿಷ್ಯಂಗೆ ಗುರುವಿನ ಮೇಲಿಪ್ಪ ಗೌರವ

ಭಕ್ತಂಗೆ ದೇವರ ಮೇಲಿಪ್ಪ ಪ್ರೀತಿ

ಅದುವೇ ಭಕ್ತಿ ಸನ್ಮುಕ್ತಿಗೆ ದಾರಿ

 

ಪ್ರೀತಿ ಇಲ್ಲದ್ದ ಮಾತು ಪರಿಮ್ಮಳ ಇಲ್ಲದ್ದ ಹೂಗು

ಪ್ರೀತಿಲಿ ಕೊಟ್ಟರೆ ನೀರೇ ಅಮೃತ ಅಕ್ಕು

ಪ್ರೀತಿಗೆ ಆರಿಂಗು ಬೆಲೆಕಟ್ಟಲೆಡಿಯ

ಪ್ರೀತಿ ಇಲ್ಲದ್ದೆ ನಮ್ಮ ಜೀವನ ನಡೆಯ

 

ಪ್ರೀತಿಯ ಹಿಂದೆ ಇರೆಕ್ಕು ತ್ಯಾಗ

ಮರೆಯೆಕ್ಕು ಎಲ್ಲ ಭೌತಿಕ ಭೋಗ

ಮೋಸವಂಚನೆ ಸ್ವಾರ್ಥ ಇಪ್ಪಲೆ ಆಗ

ನಂಬಿಕೆ ಇಲ್ಲದ್ದೆ ಎಂದಿಂಗು ಬಾಳುವೆ ಸಾಗ

 

ದ್ವೇಷಲ್ಲಿ ನಡೆಯದ್ದು ಪ್ರೀತಿಲಿ ನಡಗು

ಲೋಕ ಮೂರನ್ನು ಗೆಲ್ಲಲೆ ಎಡಿಗು

ಮಾತಿಲಿ ನಡತೆಲಿ ತೋರ್ಸಿದ ಪ್ರೀತಿ

ಶಾಶ್ವತ ಶಾಂತಿ-ನೆಮ್ಮದಿ ಕೊಡುಗು

 

ಕೊಟ್ಟು ತೆಕ್ಕೊಳ್ಳೆಕ್ಕು ಹಂಚ್ಯೊಂಡು ತಿನ್ನೆಕ್ಕು

ಎಲ್ಲೋರು ಸಮ ಹೇಳ್ವ ತತ್ತ್ವವೆ ಮುಂದಾಗಿ

ಪರಸ್ಪರ ಹೊಂದ್ಯೊಂಡು ಸುಖ ದುಃಖ ಹಂಚ್ಯೊಂಡು

ಬಾಳೆಕ್ಕು ನಾವು ಪ್ರೀತಿಲಿ ಒಂದಾಗಿ.

 

*** ***

 

ಸುಖ ಜೀವನದ ದಾರಿ

ರಚನೆ : ಅರ್ತಿಕಜೆ ಮಾವ°

ಅರ್ತಿಕಜೆ ಮಾವ°

   

You may also like...

2 Responses

 1. K.Narasimha Bhat Yethadka says:

  ಪ್ರೀತಿಗಿದ್ದು ಅಲ್ಪ ಹೆಸರು
  ಎಲ್ಲದರೊಳ ಇಪ್ಪದೊಂದೇ ಎಸರು
  ಇದರ್ಲಿದ್ದು ಬಾಳಿನ ರಹದಾರಿ
  ಸಮರಸವೆ ಸುಖ ಜೀವನದ ದಾರಿ
  -ಲಾಯಕಾಯಿದು ಅರ್ತಿಕಜೆ ಅಣ್ಣ.

 2. GOPALANNA says:

  ಸಮರಸವೆ ಜೀವನ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *