Oppanna.com

ಅಷ್ಟಾವಧಾನದ ಅಪೂರ್ವ ಅನುಭವ

ಬರದೋರು :   ಅನುಶ್ರೀ ಬಂಡಾಡಿ    on   24/04/2013    18 ಒಪ್ಪಂಗೊ

ಅನುಶ್ರೀ ಬಂಡಾಡಿ

ಪುತ್ತೂರಿಲಿ ಬೈಲಿನ ಲೆಕ್ಕದ ಅಷ್ಟಾವಧಾನ ಇದ್ದು ಹೇಳಿ ಗೊಂತಾಗಿಯಪ್ಪಗಳೇ ನಾವು ಕೊಡಿಕಾಲಿಲಿ ಹೆರಟು ನಿಂದಾಗಿತ್ತು. ಕಾರ್ಯಕ್ರಮದ ತಾರೀಕು ಗೊಂತಾದ ಕೂಡ್ಳೆ ರೈಲಿನ ಟಿಗೇಟುದೇ ತೆಕ್ಕೊಂಡಾಗಿತ್ತು. ಆದರೆಂತ ಮಾಡುದು.. ಕರ್ನಾಟಕ ಬೇಂಕಿನವು ಈ ವರ್ಷದ ಬೇಂಕು ಎಕ್ಸಾಮು ಅದೇ ದಿನ ಮಡುಗೆಕ್ಕೊ?!! ಪುಣ್ಯಕ್ಕೆ ಅದು ಉದಿಯಪ್ಪಗ ಇದು ಮಧ್ಯಾನ್ಮೇಲೆ ಇದ್ದದು ಅನುಕೂಲ ಆತು. ಪರೀಕ್ಷೆ ಕಟ್ಟಿದ್ದಕ್ಕೆ ಬರದಿಕ್ಕುವೊ ಹೇಳಿ ಬರವಲೆ ಹೋದೆ ಮೊದಾಲಿಂಗೆ. ಬೇಗ ಪರೀಕ್ಷೆ ಬರದು ಮುಗಿಶಿ ಹೆರಡೆಕ್ಕು ಹೇಳಿ, ಕೋಲೆಜಿನ ಬಾಗಿಲು ತೆಗವ ಮೊದಲೇ ಅಲ್ಲಿ ಹೋಗಿ ಕೂದೆ. ಆದರೆಂತ, ಎನಗೆ ಬೇಕಾಗಿ ಪರೀಕ್ಷೆ ಬೇಗ ಸುರು ಮಾಡ್ತವಾ! ಒಂಬತ್ತೂಕಾಲರಿಂದ ಹನ್ನೊಂದೂಕಾಲರವರೆಗೆ ಹೇಳಿ ಇದ್ದ ಪರೀಕ್ಷೆ, ಅಲ್ಯಾಣ ವೆವಸ್ತೆ ಎಲ್ಲ ಅಪ್ಪಗ ಹತ್ತು ಗಂಟೆಂದ ಹನ್ನೆರಡು ಗಂಟೆ ವರೆಗೆ ಹೇಳಿ ಆತು! “ಈ ಬೇಂಕಿನವಕ್ಕೆ ಎನಗಿಂದು ಅಷ್ಟಾವಧಾನಕ್ಕೆ ಹೋಪಲಿದ್ದು ಹೆಳಿ ಅರಡಿಯದೊ.. ಛೆ.. ಸುಮ್ಮನೆ ಪಕ್ಕ ಪರೀಕ್ಷೆ ಮಾಡಿ ಮುಗಿಶುಲಾಗದ..” ಹೇಳಿ ಮನಸ್ಸಿಲೆ ಪರಂಚಿಗೊಂಡು, ಪರೀಕ್ಷೆ ಬರೆತ್ತ ಕಂಪ್ಯೂಟ್ರಿನ ಮುಂದೆ ಹೂಗಿ ಕೂದೊಂಡತ್ತು. ಎರಡು ಗಂಟೆಲಿ ನೂರಾಎಪ್ಪತ್ತೈದು ಪ್ರಶ್ನೆಗೊಕ್ಕೆ ಉತ್ತರ ಒತ್ತೆಕ್ಕು ಕಂಪ್ಯೂಟ್ರಿಲಿ. ಹನ್ನೊಂದು ಗಂಟೆಗೆ ಹೆರಟು ಹೋಯೆಕ್ಕೂಳಿ ಗ್ರೇಶಿಗೊಂಡಿದ್ದೋಳಿಂಗೆ ಹನ್ನೊಂದೂವರೆ ಆದರೂ ಪ್ರಶ್ನೆಗೊ ಮುಗಿತ್ತೇ ಇಲ್ಲೆ ಪರೀಕ್ಷೆಲಿ. ಅದೂ ಒಂದರಿ ಓದಿರೆ ಅರ್ತಪ್ಪಂತ ಪ್ರಶ್ನೆಗೊ ಏನೂ ಅಲ್ಲ. ಆ ಪ್ರಶ್ನೆಗಳ ನೋಡುವಾಗ, ಹೀಂಗಿದ್ದ ಪ್ರಶ್ನೆಗೊಕ್ಕೆಲ್ಲ ಉತ್ತರ ಬರದು ಪಾಸಾಗಿ ಬೇಂಕಿನೊಳ ಕೂದೊಂಡು ಪೈಸೆಣುಸಿಗೊಂಡಿಪ್ಪ ನಮ್ಮ ಬೊಳುಂಬುಮಾವನ ನೆಂಪಾಗಿ, ಅವು ನಿಜಕ್ಕೂ ಗ್ರೇಟ್ ಹೇಳಿ ಅನುಸಿತ್ತು! ಬೊಳುಂಬು ಮಾವನ ನೆಂಪಾಗಿ, ಬೈಲಿನ ನೆಂಪಾಗಿ, ಅಷ್ಟಾವಧಾನದ ನೆಂಪಾತು. “ಓಹ್! ಈ ಪ್ರಶ್ನೆಗೊಕ್ಕೆ ಈಗ ಉತ್ತರ ಬರೆತ್ತಷ್ಟು ತಾಳ್ಮೆಯೂ, ಲೆಕ್ಕಾಚಾರ ಮಾಡ್ತಷ್ಟು ಬುದ್ಧಿಯೂ ಇಲ್ಲೆ. ಪರೀಕ್ಷೆ ಆದರೆ ಬಪ್ಪೊರ್ಷ ಬಕ್ಕು. ಆದರೆ ಈ ಅಷ್ಟಾವಧಾನ ಇನ್ನೊಂದರಿ ಸಿಕ್ಕ” ಹೇಳಿ ಗ್ರೇಶಿಗೊಂಡು, ಕೆಲವು ಪ್ರಶ್ನೆಗಳ ಓದದ್ದೇ ಉತ್ತರ ಕ್ಲಿಕ್ಕು ಮಾಡಿ ಹೇಂಗಾರು ಮುಗಿಶಿ ಅಲ್ಲಿಂದ ಹೆರಟೆ.

ಅದಾಗಿ ಹೊಂಡತೋಡಿನ ರೋಡುಗಳಲ್ಲಿ, ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಬೇಕೋ ಬೇಡದೋಳಿ ನಿಧಾನಕ್ಕೆ ಸಾಗುತ್ತ ಬಸ್ಸುಗಳಲ್ಲಿ, ಬಸ್ಸಿನ ಡ್ರೈವರನ ಮೇಲೆ ಉಕ್ಕಿ ಬತ್ತಾ ಇದ್ದಿದ್ದ ಕೋಪವ ಕಂಟ್ರೋಲು ಮಾಡಿಗೊಂಡು, ಬಂದು ಪುತ್ತೂರಿನ ಜೈನಭವನಕ್ಕೆ ಎತ್ತುವಾಗ ಗಂಟೆ ಮೂರು! ಅದಾಗಲೇ ಬೈಲಿನ ಲೆಕ್ಕದ ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಆಗಿ, ಅಷ್ಟಾವಧಾನ ಕಾರ್ಯಕ್ರಮಕ್ಕೆ ಅವಧಾನಿಗಳೂ, ಪೃಚ್ಛಕರೂ ವೇದಿಕೆಲಿ ಕೂದು, ಅವಧಾನಿಗಳ ಕೈಗೆ ಮೈಕ್ಕ ಬಂದಾಗಿತ್ತು.. ಯೇನಂಕೂಡ್ಳಣ್ಣನೂ, ಡೈಮಂಡು ಭಾವನೂ, ಅಕ್ಷರದಣ್ಣನೂ ನೆಗೆನೆಗೆ ಮಾಡಿಗೊಂಡು ಸ್ವಾಗತ ಮಾಡಿ, ರಿಜಿಸ್ತ್ರಿ ಮಾಡ್ಸಿಗೊಂಡು ಬರಮಾashTavadhanaಡಿಗೊಂಡವು.

ಅದಾ! ಜೈನಭವನ ತುಂಬ ಜೆನ ತುಂಬಿ ಸಮಲುಲೆ ಸುರು ಆಗಿತ್ತು. ಲೇಟಾಗಿ ಹೋದ ತಪ್ಪಿಂಗೆ ಹಿಂದಾಣ ಸಾಲಿನ ಸೀಟಿಂಗೇ ಸಮಾಧಾನ ಮಾಡಿಗೊಳ್ಳೆಕ್ಕಾತು. ಅದಾದರೂ ಸಿಕ್ಕಿತ್ತನ್ನೇ ಹೇಳಿ ಗಟ್ಟಿ ಕೂದೊಂಡತ್ತು. ಮತ್ತೆ ಬಂದ ಜನಕ್ಕೆ ಸೀಟಿಲ್ಲದ್ದೆ ಪುನ ನೂರು ಕುರ್ಶಿ ತರುಸಿ ವೆವಸ್ತೆ ಮಾಡಿದ್ದಡ, ದೊಡ್ಡಾಭಾವ ಹೇಳಿದವು.

ಶತಾವಧಾನಿ ಆರ್. ಗಣೇಶ್‌ರ ಸರಳ ಸುಂದರ ಪೀಠಿಕೆಂದ ಅಷ್ಟಾವಧಾನ ಕಾರ್ಯಕ್ರಮ ಸುರು ಆತು. ಅಷ್ಟ್ರೊರೆಗೆ ಜೊಂಯ್ ಜೊಂಯ್ ಹೇಳಿಗೊಂಡಿದ್ದ ಭವನ ಪೂರ್ತಿ ಸ್ತಬ್ಧ ಆತು. ಅವಧಾನಿಗೊ ಪೃಚ್ಛಕರೆಲ್ಲೊರ ಕಿರುಪರಿಚಯ ಮಾಡ್ಸಿದವು. ಅವಧಾನ ಕಲೆಯ ಕಂಪು ನಿಧಾನಕ್ಕೆ ಸಭೆಲಿಡೀ ಪಸರುಸಿತ್ತು.

 

ಚಿತ್ರಕವಿತೆ-ಯುಗಳ ಸರ್ಪಬಂಧ
ಚಿತ್ರಕವಿತೆ-ಯುಗಳ ಸರ್ಪಬಂಧ

ಶ್ರೀ ರಾಮಚಂದ್ರ ಕೆಕ್ಕಾರು ಇವು ಕೊಟ್ಟ – ತಲೆದಿಂಬೊದ್ದೆಯಾದುದಂ ತಿಳಿಯುತುಂ ಕಣ್ಣೀರ ತಾ ಸೂಸುವಳ್ – ಹೇಳ್ತ ಸಮಸ್ಯಾಪೂರಣ, ಶ್ರೀ ಅಂಬಾತನಯ ಮುದ್ರಾಡಿ ಇವು ಕೊಟ್ಟ –
ನಲ್ಗಾಡಿ, ಬೀಸು, ವಾಯ್ವಾಯ್, ಅವಧಾನಿ ಹೇಳ್ತ ನಾಲ್ಕಕ್ಷರಂಗಳ ದತ್ತಪದಿ, ಬೆಂಗ್ಳೂರಿನ ಡಾ. ಶಂಕರರು ಕೊಟ್ಟ ಯುಗಳ ಸರ್ಪಬಂಧಲ್ಲಿಪ್ಪ ಶಿವಸ್ತುತಿಯ ಚಿತ್ರಕವಿತೆ, ಅಕ್ಷರಕ್ಷರಕ್ಕೂ ನಿಷೇಧ ಮಾಡಿಗೊಂಡಿದ್ದಿದ್ದ ಡಾ. ಪಾದೇಕಲ್ಲು ವಿಷ್ಣುಭಟ್ರು ಕೊಟ್ಟ ಸಂಧ್ಯಾವಂದನೆ ಕುರಿತಾದ ಮಹಾಸ್ರಗ್ಧರಾ ವೃತ್ತಲ್ಲಿಪ್ಪ ವರ್ಣನೆ, ಡಾ. ಚಂದ್ರಶೇಖರ ದಾಮ್ಲೆಯವು ಕೊಟ್ಟ ಸಂಖ್ಯಾಬಂಧ, ಎಡಕ್ಕೆಡಕ್ಕಿಲಿ ಅಪ್ರಸ್ತುತ ಪ್ರಸಂಗ ತೆಗದು ಮಾತಾಡ್ಸಿಗೊಂಡಿದ್ದ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂಗೆ ಅಷ್ಟೇ ನವಿರಾಗಿ ಒಂದೊಂದು ಉತ್ತರದ ಬಾಣ, ಶ್ರೀ ಸೋಮಶೇಖರ ಶರ್ಮರು ಕೊಟ್ಟ, ರಾಮಾಯಣದ ಎರಡು ಪಾತ್ರಂಗಳಾದ ಶಬರಿಯನ್ನೂ ಮಂಥರೆಯನ್ನೂ ಹೋಲುಸಿ ಬರೆಯೆಕ್ಕಾದ ಆಶುಕವಿತೆ, ಮತ್ತೆ ಶ್ರೀ ಚಂದ್ರಶೇಖರ ಕೆದ್ಲಾಯರ ಸುಮಧುರ ಕಂಠಲ್ಲಿ ಹೊಮ್ಮಿದ ಕಾವ್ಯವಾಚನಕ್ಕೆ ಸರಿಯಾಗಿ ಅದು ಆರು ಬರದ್ದು, ಯಾವ ಕಾವ್ಯ, ಯಾವ ಛಂದಸ್ಸು ಇತ್ಯಾದಿ ಎಲ್ಲಾ ವಿವರಂಗಳ ಅದೇ ರಾಗಲ್ಲಿ ಪದ್ಯರೂಪಲ್ಲಿ ಉತ್ತರ – ಇಷ್ಟೆಲ್ಲವನ್ನೂ ನಿರರ್ಗಳವಾಗಿ ಒಂದರ ಹಿಂದೊಂದು ಹೇಳಿಗೊಂಡು ಹೋದ ಅವಧಾನಿಗಳ ಪಾಂಡಿತ್ಯಕ್ಕೆ ಸಾವಿರ ಚಪ್ಪಾಳೆಗಳ ಪ್ರಶಂಸೆ.. ಅಬ್ಬ! ನಿಜಕ್ಕೂ ಅದ್ಭುತಲ್ಲಿ ಅದ್ಭುತ ಪಾಂಡಿತ್ಯ. ’ತುಂಬಿದ ಕೊಡ ತುಳುಕ’ದ್ದ ಹಾಂಗಿಪ್ಪ ವ್ಯಕ್ತಿತ್ವ! ಸರಸ್ವತೀಪುತ್ರರ ಈ ಅಮೋಘ ಪಾಂಡಿತ್ಯವ ಸವಿವಲೆ ಅವಕಾಶ ಮಾಡಿಕೊಟ್ಟ ಬೈಲಿನ ಸಂಘಟಕರೆಲ್ಲೋರಿಂಗೂ ಅನಂತಾನಂತ ವಂದನೆಗೊ. ನೇರವಾಗಿ ಬಂದು ನೋಡ್ಳಾಗದ್ದೋರಿಂಗೆ ಇಂಟರ್ನೆಟ್ಟಿಲಿ ನೇರಪ್ರಸಾರವೂ ಇದ್ದದು ವಿಶೇಷ.

ಕಾರ್ಯಕ್ರಮ ಮುಗಿಶಿಕ್ಕಿ, ಲಘೂಪಹಾರ ತೆಕ್ಕೊಂಡು, ಬೈಲಿನ ನೆಂಟ್ರ ಎಲ್ಲೊರ ಕಂಡು ಮಾತಾಡುಸಿಯಪ್ಪಗ ಮತ್ತೂ ಖುಷಿ ಆತು. ಇಂಥ ಒಂದು ಯಶಸ್ವಿ ಕಾರ್ಯಕ್ರಮಕ್ಕೆ ವೆವಸ್ತೆ ಮಾಡ್ಳೆ ಬೇಕಾಗಿ ಎಷ್ಟೋ ದಿನಂದ ಹಗಲಿರುಳು ದುಡುದ ಅವರೆಲ್ಲೋರ ಮೋರೆಲಿ ಒಂದು ಸಾರ್ಥಕತೆ ಕಂಡೊಂಡಿತ್ತು. ಒಗ್ಗಟ್ಟಿಲಿ ಬಲ ಇದ್ದು ಹೇಳುದು ಇದಕ್ಕೇ ಅಲ್ಲದಾ?

ಎಂಗಳ ಪ್ರಿನ್ಸುವಾಲು ರಜೆ ಕೊಡ್ಳೆ ಪೀಂಟುಕಟ್ಟುತ್ತ ಕಾರಣದೊಟ್ಟಿಂಗೆ ಬೇಂಕು ಪರೀಕ್ಷೆಯೂ ಸೇರಿ, ಈ ಕಾರ್ಯಕ್ರಮದ ಸುಧಾರಿಕೆಲಿ ಎನಗೆ ಸೇರ್ಲಾಯಿದಿಲ್ಲೆ ಹೇಳ್ತ ಬೇಜಾರಿದ್ದು. ಇನ್ನಾಣ ಕಾರ್ಯಕ್ರಮಕ್ಕೆ ಕೈಜೋಡ್ಸುವ ಅವಕಾಶ ದೇವರೊದಗುಸಿ ಕೊಡುಗು ಹೇಳ್ತ ಭರವಸೆಯೊಟ್ಟಿಂಗೆ ಅಷ್ಟಾವಧಾನದ ಅವಿಸ್ಮರಣೀಯ ಅನುಭವಂಗಳ ಮೆಲುಕು ಹಾಕುತ್ತಾ ಇದ್ದು. ಬೈಲಿಲಿ ಹೀಂಗೆಯೇ ಒಳ್ಳೊಳ್ಳೆ ಕಾರ್ಯಕ್ರಮಂಗ ಆವುತ್ತಾ ಇರಳಿ ಹೇಳಿ ಹಾರೈಕೆಗೊ.

18 thoughts on “ಅಷ್ಟಾವಧಾನದ ಅಪೂರ್ವ ಅನುಭವ

  1. {ಎಂಗಳ ಪ್ರಿನ್ಸುವಾಲು ರಜೆ ಕೊಡ್ಳೆ ಪೀಂಟುಕಟ್ಟುತ್ತ ಕಾರಣದೊಟ್ಟಿಂಗೆ ಬೇಂಕು ಪರೀಕ್ಷೆಯೂ ಸೇರಿ, ಈ ಕಾರ್ಯಕ್ರಮದ ಸುಧಾರಿಕೆಲಿ ಎನಗೆ ಸೇರ್ಲಾಯಿದಿಲ್ಲೆ ಹೇಳ್ತ ಬೇಜಾರಿದ್ದು. ಇನ್ನಾಣ ಕಾರ್ಯಕ್ರಮಕ್ಕೆ ಕೈಜೋಡ್ಸುವ ಅವಕಾಶ ದೇವರೊದಗುಸಿ ಕೊಡುಗು }
    ಖಂಡಿತ. ನಿಂಗೊಗೆ ಆ ಭಾಗ್ಯ ಸಿಕ್ಕಲಿ, ಎಂಗೊಗುದೇ ನಿಂಗಳೊಟ್ಟಿಂಗೆ ಸೇರಿ ಕೆಲಸ ಮಾಡ್ತ ಭಾಗ್ಯ ಬೇಗ ಬರಲಿ.

  2. ಇನ್ನಾಣ ಕರ್ಯಕ್ರಮಕ್ಕೆ ಬಂಡಾದಿ ಅಜ್ಜಿ ಸುದರಿಕೆ ಮಾಡ್ಲೆ ಬೇಕು..ನವಗೆ ಅಜ್ಜಿ ಹತ್ರ ಮಾತಡ್ಲೆ ಅಯ್ದಿಲ್ಲೆ..

    1. ಅಕ್ಕು ಖಂಡಿತ. ಅವರನ್ನೂ ಕರಕ್ಕೊಂಡು ಬತ್ತೆ. 🙂

  3. ವರದಿ ಚೆನ್ನಾಗಿದೆ. ಧನ್ಯವಾದಗಳು
    ಸೋಮ

  4. ಅಷ್ಟಾವಧಾನದ ವಿವರಣೆ ಲಾಯ್ಕಾಯಿದು ಅನುಶ್ರೀ. ಬ್ಯಾಂಕು ಪರೀಕ್ಷೇಲಿ ಒಳ್ಳೆ ರಿಸಲ್ಟ್ ಬರಲಿ.

    1. ಧನ್ಯವಾದಂಗೊ ಶ್ರೀಪ್ರಭ 🙂

  5. ಬ್ಯಾಂಕ್ ಪರೀಕ್ಷೆಯನ್ನೂ ಒಂದು ಅವಧಾನ ಹೇಳಿ ಗ್ರೇಶಿ ಬರದಿದ್ರೆ ಬಂಡಾಡಿ ಪುಳ್ಳಿಗೆ ಪರೀಕ್ಷೆಲಿ ಖಂಡಿತಾ ಯಶಸ್ಸು ಸಿಕ್ಕುಗು.
    ಯಶಸ್ಸು ಸಿಕ್ಕಲಿ.
    ಅಂತೂ ಗಡಿಬಿಡಿ ಮಾಡಿ ಓಡಿ ಬಂದು ಪೂರ್ತಿ ಕಾರ್ಯಕ್ರಮವ ನೋಡ್ಲಾತನ್ನೆ. ನಿಜಕ್ಕು ಒಂದು ಒಳ್ಳೆ ಕಾರ್ಯಕ್ರಮ, ಸಾಹಿತ್ಯಪ್ರಿಯರಿಂಗೆ ರಸದೌತಣ.

    1. ನಿಂಗಳ ಹಾರೈಕೆಗೆ ಧನ್ಯವಾದಂಗೊ ಬೊಳುಂಬು ಮಾವ. 🙂

    1. ಧನ್ಯವಾದಂಗೊ ರಾಮಚಂದ್ರಣ್ಣ. 🙂

  6. ಅನುಶ್ರೀ ಹೇಳಿದ್ದು ಅಕ್ಷರಶಃ ಸತ್ಯ. ಆನುಮಜ್ಜಾನವೇ ಹೋದೆ .ಊಟ ಒಂದು ಮದುವೆಯೂಟವೇ ಸರಿ. ಬಹುಮಾನ ತೆಕ್ಕಂಬನ್ನಾರ ಮುಂದೆ ಕೂದಂಡಿದ್ದಿದ್ದೋಳು ಬೇಗ ಹೆರಡುವ ಉದ್ದೇಶಂದ ಅಷ್ಟಾವಧಾನ ಸುರುವಪ್ಪಗ ಹಿಂದಾಣ ಸಾಲಿಂಗೆ ಬಂದೆ[ಮದ್ಯಲ್ಲಿ ಎದ್ದು ಹೋಪೋರು ಎದುರೆ ಕೂಬ್ಬದು ಸಂಸ್ಕಾರ ಅಲ್ಲನ್ನೆ] ಮತ್ತೆ ನೋಡಿರೆ, ಹಿಂದೆ ನಿಂಬಲೂ ಜಾಗ ಇಲ್ಲೆ! ಐದು ಗಂಟಗೆ ಆನು ಹೆರಟಿದೆ . ಕಾರಣ ಎನಗೆ ಕತ್ತಲಾಯೆಕ್ಕಾರೆ ಕುಂಬಳೆ ಎತ್ತಲೇ ಬೇಕು. ಮರುದಿನ ಎನ್ನಬ್ಬೆ ಮಾಸಿಗ. ಎನ್ನಲ್ಲಿಗೆ ಎನ್ನ ತಮ್ಮ[ಭದ್ರಾವತಿಂದ]ಬತ್ತನುದೆ. ಅಂತೂಪೂರ್ಣ ಆಸ್ವಾದನೆ ಪಡೆಕಾತು ಹೇಳಿ ಆಗೆಂಡಿತ್ತು ಇನ್ನೊಂದಾರಿ ಅವಕಾಶ ಸಿಕ್ಕುಗು ಹೇಳ್ತ ಭರವಸೆ.

    1. ಅನುಶ್ರೀಯಕ್ಕನ ಅನ್ನಿಸಿಕೆಗೆ ಎನ್ನದು ಪೂರ್ತಿ ಓಟು. ಅದೇ ಅನುಭವ ಎನ್ನದುದೆ. ಅ೦ದು ಉದಿಯಪ್ಪಗಳೇ ಪುತ್ತೂರಿ೦ಗೆ ಹೆರಡೆಕು ಹೇದು ಮುನ್ನಾಣ ದಿನವೇ ಹೆರ್ಪಯಣ ಮಾಡಿದ್ದೆನೋ ನಿಜ. ಆದರೆ ಅಷ್ಟೊತ್ತಿ೦ಗೆ ದೂರವಾಣಿ ಕೂಗಲೆ ಸುರು ಮಾಡೆಕೋ!ತೆಗದು ಕೇಳಿರೆ ಎನ್ನ ಚಿಕ್ಕಮ್ಮನ ಮಗ ಆಣ್ಣನದ್ದು.“ ನಾಳ೦ಗೆ ಮದ್ವೆ ಮಕ್ಕಳ ಕರಕ್ಕೊ೦ಡು ನಿ೦ಗಳಲ್ಲಿಗೆ ಬತ್ತ್ಯೋ°. ಸರಿ ಅ೦ತೂ ಪುತ್ತೂರಿ೦ಗೆ ಉದಿಯಪ್ಪಗ ಹೋಪದರ ಮು೦ದೆ ಹಾಕಿ ಮದ್ಯಾನ ಬೇಗ ಹೆರದುವದು ಹೇದು ತೀರ್ಮಾನ ಮಾಡಿತ್ತಿದಾ. ಮಧ್ಯಾನ ಅವು ಬಪ್ಪಗಳೆ ಗ೦ಟೆ ೧೧ ಕಳ್ದತ್ತು.ಇನ್ನುಉ೦ಡು ಹೆರಟಪ್ಪಗ ಗ೦ಟೆ ೨ ಆತು. ಅ೦ತೂ ಜೈನಮ೦ದಿರದ ಒಳ ಶೇರಿಯಪ್ಪಗ ೩.೩೦! ಅಷ್ಟಾವ್ಧಾನ ಸುರುವಾಗಿತ್ತಷ್ಟೆ.ಅ೦ತು ಒ೦ದು ಮಾತು ಸತ್ಯ “ ಬಯಸಿದ್ದು ಸಿಕ್ಕ; ಬಗದ್ದದು ತಪ್ಪ ” ಕಾಲು ಹಾಕಲೇ ಜಾಗೆ ಇಲ್ಲದ್ದ ಸಮಯಲ್ಲಿ ದೇವರ ಹಾ೦ಗೆ ನಮ್ಮ ಶ್ರೀಯಕ್ಕ ಎದುರೇ ಸಿಕ್ಕಿ ಎನಗೂ ಎನ್ನ ಅರ್ಧಾ೦ಗಿಗೂ ಎರಡು ಆಸನ ವೆವಸ್ತೆ ಮಾಡಿದ್ದರ ಮರವಲೆಡಿಯ. ಇ೦ಟ ಒಳ್ಳೆ ಕಾರ್ಯಕ್ರಮ೦ಗ ಸದಾ ನೆಡೆಯಲಿ ಹೇಳ್ತ ಹಾರೈಕಗ. ನಮಸ್ತೇ. ಶುದ್ದಿ ಹೇಳಿದ ಅನುಶ್ರೀಯಕ್ಕ೦ಗೆ ಧನ್ಯವಾದ೦ಗೊ.ಹರೇ ರಾಮ.

  7. ಅನುಶ್ರೀ ಅಕ್ಕ ಬರದ ಹಾಂಗೆ ಕಾರ್ಯಕ್ರಮ ಭಾರೀ ಚೆಂದಕ್ಕೆ ಆಯಿದು.ಎಂಗ್ಪ್ಪೊಬಪ್ಪಾಗ ಅನಿವಾರ್ಯವಾಗಿ ತಡವಾತು.ಎನಗುದೆ ಎಲ್ಲೋರ ಪರಿಚಯ ಮಾಡಿಗೊಂಡು ಸರಿಯಾಗಿ ಮಾತಾಡ್ಲೆ ಆಯಿದಿಲ್ಲೆ ಹೇಳ್ತ ಬೇಜಾರಿದ್ದು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×