ಬೈಲಿಲಿ ಒಂದು ಗಡದ್ದಿನ ಮದುವೆ…

September 4, 2010 ರ 11:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಸ್ ಬ್ರೇಕ್ ಹಾಕಿ ಅಪ್ಪಗ ಧಡಕ್ಕನೆ ಎಚ್ಚರ ಆಗಿ ಒಂದರಿಯೇ ಕಣ್ಣು  ಬಿಟ್ಟು ಹೆರ ನೋಡಿದೆ.
ಗುಡ್ಡೆಯ ಇಳಿಜಾರುಗಳಲ್ಲಿ ನಸು ಮೈಂದಿನೊಟ್ಟಿಂಗೆ ನಕ್ಷತ್ರಂಗಳ ಹಾಂಗೆ ಮಿಣ್ಕಿಗೊಂಡಿಪ್ಪ ಲೈಟುಗಳ ನೋಡಿ ಅಪ್ಪಗ ಅಂದಾಜಿ ಆತು, ಸಕಲೇಶಪುರ ಬಂತು ಹೇಳಿ.

ಮುಂದೆ ನೋಡಿರೆ ಬಸ್ಟಾಂಡು ಕಂಡತ್ತು. ಎಲ..ಇದುವರೆಗೆ ಬೆಂಗಳೂರಿಂದ ಊರಿಂಗೆ ವರುಷಕ್ಕೆ ನಾಲ್ಕೈದು ಸರ್ತಿ ದಂಡಯಾತ್ರೆ ತೆಗದ್ದೆ, ಅದೂ ಈ ಸರ್ತಿ ಐರಾವತಲ್ಲಿ  ದೇವೇಂದ್ರನ ಹಾಂಗೆ ಹೆರಟಿದೆ, ಇದುವರೆಗೆ ಯಶವಂತಪುರದ  ರೈಲ್ವೆ ಸ್ಟೇಶನ್ ಕಳುದಪ್ಪಗ ಒರಗಿದರೆ ಬಿ.ಸಿ.ರೋಡಿಂದ ಮೊದಲು (ಕೆಲವು ಸರ್ತಿ ಪಂಪುವೆಲ್ಲುವರೆಗೂ) ಎಚ್ಚರ ಆದದ್ದು ಹೇಳಿ ಇಲ್ಲೆ . ಇದೆಂತಪ್ಪ ಇಷ್ಟು ಬೇಗ ಒರಕ್ಕು ಬಿರುದತ್ತು ಹೇಳಿ ಮಂಡೆ ತೊರುಸಿದೆ. ಒತ್ತಕ್ಕೆ ಕೂದ ಮನುಷ್ಯ  ಒಳ್ಳೆ ಘಾಟಿ ಹತ್ತುವ ಮರದ ಲೋಡು ತುಂಬಿದ ಲಾರಿಯ ಹಾಂಗೆ ಗೊರಕೆಲಿತ್ತು. ಬಹುಶಃ ಬೆಂಗಳೂರಿಂದ ಇಲ್ಲಿಯವರೆಗೆ ಎಂಗಳ ದ್ವಂದ್ವ ರೈಸಿಕ್ಕು ಹೇಳಿ ಗ್ರೇಶಿ ನೆಗೆಯೂ ಬಂತು, ಬಸ್ಸಿಲಿ ಕೂದ ಒಳುದ ಬಡಪಾಯಿಗಳ ಅವಸ್ತೆ ಎಂತಾಗಿಕ್ಕು ಹೇಳಿ ತಲೆಬೆಶಿಯೂ ಆತು. ಈ ಮನುಷ್ಯ ಮದಲು ಅಮೆರಿಕಲ್ಲಿತ್ತ  ಎಂತದಾ! ಮಧ್ಯಪ್ರದೇಶವ ವಿಶಾಲವಾಗಿ ಹರಗಿ ಅದರ ಸೀಟು ಸಾಕಾಗದ್ದೆ ಅರ್ಧ ಎನ್ನ ಗಡಿಯನ್ನೂಆಕ್ರಮಣ ಮಾಡಿದ್ದು ಮಹರಾಯ. ಊರಿಂದ,ಮೊಬೈಲಿಲಿ ತುಳು ಮಾತಾಡೋದು ಬೆಂಗಳೂರಿಲಿ ಬಸ್ಸು ಹತ್ತಿ ಅಪ್ಪಗ ಕೇಳಿತ್ತಿದ್ದೆ. ರಜಾ ಉರಿಮುಸುಂಟ ಆದ ಕಾರಣ ಗುರ್ತ ಮಾಡಿ ಮಾತಾಡುಲೆ ಹೆರಟಿತ್ತಿದ್ದಿಲ್ಲೆ.
ಅಂತೂ ಈ ಆಸಾಮಿಯ ದೆಸೆಂದ ಆನು ನರಪೇತಲಾಸನಲ್ಲಿ ಒರಗಿ ಮೈ ಕೈ ಬೇನೆ  ಸಣ್ಣಕೆ ಸುರು ಆತೋ ಹೇಳಿ.
ಒಟ್ಟಿ೦ಗೆ,ಒರಕ್ಕು ಬಿರಿವಲೆ ಕಾರಣ  ಗೊಂತಾಗದ್ದೆ  ತಲೆಬೇನೆಯೂ ಸೇರಿಗೊಂಡು ಇದು ಈಗ ಒಂದರಿ ಕೆಳ ಇಳಿಯದ್ದೆ ಆಗ ಹೇಳಿಗೊಂಡು ಒಳುದ ಜೆನಂಗಳೊಟ್ಟಿ೦ಗೆ ಅಂಬ್ರೆಪು  ಮಾಡಿಗೊಂಡು ಇಳುದೆ ಅದಾ..

ಹೆರ ನೋಡಿರೆ ಪಿರಿಪಿರಿ ಮಳೆ ಬತ್ತಾ ಇದ್ದು. ಮೈಮುರುಕ್ಕೊಂಡು ಹತ್ತರೆ ಇದ್ದ ಬಸ್ಸ್ಟೇ೦ಡಿ೦ಗೆ ಬೀಸ ನಡೆದೆ.
ಪ್ಲಾಸ್ಟಿಕ್  ಗ್ಲಾಸಿಲಿ ಬೆಶಿ  ಬೆಶಿ  ಚಾಯ  ಸಿಕ್ಕಿತ್ತು  ಅಲ್ಲಿ. ಮಲೆಯಾಳಿಯ ಚಾಯಕ್ಕದ. ಇಲ್ಲಿ  ಎಂತಗೆ  ಚಂದ್ರಲೋಕಲ್ಲಿಯೂ  ಇವ್ವೆ  ಇಕ್ಕಷ್ಟೇ  ಕಚ್ಚೋಡ ಮಾಡುಲೆ .
ಎಲಾ.. ಆನು  ಹೆರಟದು   ನಾಳ್ತು  ಚೆನ್ನಬೆಟ್ಟಣ್ಣನ  ಸಟ್ಟುಮುಡಿ  ಸುಧಾರುಸುಲೇ. ಅವಂಗೆ  ಇಂದಿರುಳು  ಒರಕ್ಕು  ಬಾರದ್ದರೆ  ವಿಶೇಷ  ಎಂತ  ಇಲ್ಲೆ. ಹೊಸ  ಜೀವನ  ಸುರು  ಆವುತ್ತು..
ಸುಮಾರು  ಕನಸು  ಯೋಚನೆ ,ಯೋಜನೆ  ಇಕ್ಕನ್ನೇ  ಮದಿಮ್ಮಾಯಂಗೆ. ಎನ್ನ  ಹಾಂಗಿರ್ತವಕ್ಕೋ ,.. ಇನ್ನೊಬ್ಬ  ಬಕ್ರ  ಎಂಗಳ  ಪಕ್ಷಕ್ಕೆ ಸೇರ್ಪಡೆ ಆವುತ್ತ ಹೇಳಿಗೊಂದು ಒಂದು ಉಮೇದಿಲಿ  ಒರಕ್ಕು  ಬರೆಕ್ಕಾತು.
ಒಂದು  ಮುಕ್ಕುಳಿ  ಚಾಯ ಗೆಂಟಲಿಂಗೆ ಇಳುದಪ್ಪಗ  ಟ್ಯೂಬುಲೈಟು  ಹೊತ್ತಿತ್ತು.
ಮಧ್ಯಾಹ್ನ  ಜಯನಗರಲ್ಲಿ ಜೆಂಬ್ರದ ಪಾಯಸ  ಸುರುದು, ಹೋಳಿಗೆ  ಕಟ್ಟಿ  ಮಧ್ಯಾಂತಿರುಗಿ   ಮನೆಗೆ  ಬಂದು  ಗಡದ್ದು  – ಪವಡಿಸೋ  ಪರಮಾತ್ಮಾ – ಆದ  ಕಾರಣ  ಇಷ್ಟು   ಬೇಗ  ಎಚ್ಚರಿಗೆ   ಆದ್ದದು  ಹೇಳಿ.

ಚೆನ್ನಬೆಟ್ಟಣ್ಣನ  ಭೇಟಿ  ಅಪ್ಪೊದು  ಎಲ್ಲಿಯಾದರೂ  ಆಟಲ್ಲಿಯೇ.
ಅಲ್ಲದ್ದರೆ  ಫೋನಿಲಿ  ಮಾತುಕತೆ. ನಾಕು  ತಿಂಗಳು  ಮೊದಲು  ಒಂದು  ಆಟಲ್ಲಿ  ಸಿಕ್ಕಿಪ್ಪಗ  ಹೇಳಿತ್ತಿದ್ದ, ಜುಲೈ ತಿಂಗಳಿಲಿ  ಕೋಟೆಕಾರಿಲಿ ಬಲಿಪ್ಪಜ್ಜಂದೂ, ತೆ೦ಕಬೈಲು  ಮಾವಂದೂ  ದ್ವಂದ್ವ  ಯಕ್ಷಗಾನ ವೈಭವ  ಏರ್ಪಾಡು  ಮಾಡುತ್ತ  ಇದ್ದೆ  ಹೇಳಿ.
ಎಂತ  ವಿಶೇಷ  ಹೇಳಿ  ಕೇಳಿ  ಅಪ್ಪಗ  ಹೇಳಿದ  ಸಟ್ಟುಮುಡಿ  ಇದ್ದು  ಹೇಳಿ. ಆರದ್ದು  ಹೇಳಿ  ಕೇಳಿ  ಅಪ್ಪಗ ಮಹಾರಾಯನ  ಉತ್ತರ  ಬಂತು. ಎನ್ನದೆ ಹೇಳಿ.
ಹೀಂಗಿಪ್ಪ  ಹೇಳಿಕೆ  ಕೊಡೆಕ್ಕಾದರೆ  ಅವ  ಹೇಂಗಿಪ್ಪ  ಆಟದ  ಮರುಳ  ಹೇಳಿ  ಗೊಂತಕ್ಕನ್ನೆ. ಅಲ್ಲಾ..ಬೇರೆ  ಎಲ್ಲಾ  ವಿಷಯಕ್ಕೂ  ಹವ್ಯಾಸ  ಹೇಳುವವು  ಈ  ಆಟ  ನೋಡೋದಕ್ಕೆ  ಮರುಳು ಹೇಳಿ  ಎಂತಗೆ  ಸೇರಿಸಿದ್ದವಪ್ಪಾ..
ಮರುಳು  ಹೇಳುವವಕ್ಕೆ ನವಗಲ್ಲ ..ಬಿಡಿ.

ಕೆಮರದ ಪಟಕ್ಕೆ ಮದುಮ್ಮಾಯನ ಪೋಸು...

ಎಂತದೆ ಇರಲಿ, ಬೈಲಿಲಿಒಪ್ಪಣ್ಣ  ಹೇಳಿದ್ದ  ಇಲ್ಲೆಯ, ಒಂದು  ಬಾಳೆ ಎಲೆ  ಕಟ್ಟಿಕ್ಕು, ಎರಡು  ಹೋಳಿಗೆ ಮಡಿಸಿಕ್ಕು  ಹೇಳಿ.
ಅದರಿಂದ  ಹೆಚ್ಚಾಗಿ , ಬಲಿಪ್ಪಜ್ಜನ  ಭಾಗವತಿಕೆ  ಸಿಕ್ಕಾಗ  ಬಿಡುಲೆ  ಸಾಧ್ಯ  ಇದ್ದಾ  ಹೇಳಿ  ಹೆರಟದಿದಾ . ಈ  ಚೆನ್ನಬೆಟ್ಟಣ್ಣನ  ಯೋಗ  ನೋಡಿ , ಒಳ್ಳೆ  ಆದಿತ್ಯವಾರ  (ತುಳುವಿಲಿ  ಎಡ್ಡೆ  ಐತ್ತಾರ) ಮದುವೆ  ಮುಹೂರ್ತ.
ಸಟ್ಟುಮುಡಿಗೆ  ಸಾಲದ್ದಕ್ಕೆ  ಇಡೀ  ದೇಶಕ್ಕೆ  ಬಂದ್  ಹೇಳಿ  ರಜೆ  ಕೊಡಿಸಿದ್ದ, ಮನಮೋಹನಜ್ಜನ  ಹತ್ತರೆ  ಮ್ಯಾಚ್  ಫಿಕ್ಸಿಂಗ್  ಮಾಡಿ, ಪೆಟ್ರೋಲ್  ಕ್ರಯ  ಏರಿಸಿ .. ಇನ್ನು  ಮದುವೆಗೆ  ಹೋಪಲೆಡಿಯದ್ದರೆ ಸಟ್ಟುಮುಡಿ ಆದರೂ  ಸುಧಾರುಸೆಕ್ಕು ಹೇಳಿ.
ಮತ್ತೆ  ಹೋಗದ್ದೆ  ಇದ್ದರೆ  ಇನ್ನಾಣ ಆಟಲ್ಲಿ  ಅವನ  ಸಿಕ್ಕಿ ಅಪ್ಪಗ ಮೋರೆ ನೋಡೆಡದ? ಎಂತಗೆ  ಮದುವಗೆ  ಬೈಂದಿಲ್ಲೇ   ಹೇಳಿ  ಅವ೦ ಕೇಳಿರೆ  ಎನ್ನ  ಹತ್ತರೆ  ಎಂತ  ಉತ್ತರ  ಇದ್ದು ?
ಯಾವ  ಲೊಟ್ಟೆಯೂ  ಅವನ  ಹತ್ತರೆ ನಡೆಯ  ಇದಾ ..

ಬಸ್ಸು  ಹೆರಟು  ಘಟ್ಟ  ಇಳಿವಲೆ  ಸುರು  ಆತು.
ಕರೆಯಾಣ  ಅಸಾಮಿಯ  ಸಂಗೀತವೂ  ಬೆಳಿ ಎರಡಕ್ಕೆ ಇಳುದ್ದು .
ಎನಗೂ  ರಜಾ  ಕಣ್ಣು  ಅಡ್ಡ  ಹೋತು. ಅದರ ಸಂಗೀತ ಆನು ಮುಂದುವರಿಸಿದೆನಾ ಗೊಂತಿಲ್ಲೆ.

ಉದಿಯಪ್ಪಗ ಮಂಗಳೂರಿಲಿ ಬಸ್ಸಿಂದ ಇಳುದು ಮನೆಗೆ ಹೋದೆ. ಎಂಗಳ ಒಪ್ಪಣ್ಣ ( ಎನ್ನ  ಅಣ್ಣನೂ ಒಪ್ಪಣ್ಣನೆ ) ಎದ್ದು ವ್ಯಾಯಾಮ ಮಾಡುತ್ತ  ಇತ್ತಿದ್ದ.
ಅತ್ತಿಗೆ ಪತ್ರಡೆ ಮಾಡಿ ಮಡುಗಿತ್ತಿದ್ದು, ಆನು ಬತ್ತೆ ಹೇಳಿ. ಅಬ್ಬೆ ತೆಳ್ಳವು ಎರವಲೆ  ಶುರು  ಮಾಡಿತ್ತಿದ್ದವು. ರವೆ ಬೆಶಿ ಆಯಿಕ್ಕೊಂಡು ಇತ್ತು.

ಎನ್ನ ಸಣ್ಣಾಗಿಪ್ಪಾಗ ರವೆ ಭಟ್ಟ ಹೇಳಿ ಅಬ್ಬೆ ದೆನಿಗೇಳುಗು.
ಒರಗಿ ಅಪ್ಪಗ  ನಿನ್ನ ಎರುಗು ಹೊತ್ತುಗೊಂಡು ಹೋಕು ಹೇಳಿ ಹೆದರ್ಸುಗು. ಆದರೆ, ಬದುಕ್ಕುಲೆಡಿಗೋ ರವೆ ಇಲ್ಲದ್ದೆ ?
ಎಂಗ ಎಲ್ಲೋರು(ಅಪ್ಪನ ಚತುರ್ಭುಜಂಗೊ)  ಒಟ್ಟು ಸೇರಿರೆ ಅಬ್ಬೆ ಕಾಪಿ ಕಟಾರಲ್ಲಿಯೇ ಮಾಡೆಕ್ಕಷ್ಟೇ.
ದನ  ಅಕ್ಕಚ್ಚು ಕುಡಿತ್ತ  ಹಾಂಗೆ ನಡೆತ್ತು ಎಂಗಳ ಕಾಪಿ ಸೇವನೆ !!

ಇರುಳು  ಬೇಗ  ಒರಗಿ  ಮರದಿನ  ಬೆಣಚ್ಚಿ  ಬಿಡುವ  ಮದಲೇ  ಮನೆ  ಬಿಡೆಕ್ಕಿದ.
ಚೆನ್ನಬೆಟ್ಟಣ್ಣನ  ಸಟ್ಟುಮುಡಿಗೆ   ಹೋಪ  ದಾರಿಲಿ  ಬಂದು ಮಾಡುವ ಎರೆಪ್ಪುಗೋ ಚೊರೆಮಾಡಿ ಅಡ್ಡ  ನಿಲ್ಲುಸಿರೆ  ಅರ್ಧಲ್ಲಿಯೇ  ಬಾಕಿ  ಅಕ್ಕದಾ.
ಉದೆಕಾಲಕ್ಕೆ  ಹೋದರೆ  ಅವಂಗೂ  ಸಂತೋಷ  ಅಕ್ಕು ,ದಿನ  ಮುಂದಾಗಿ  ಬರೆಕ್ಕು  ಹೇಳಿದ್ದ .ಒಂದು  ಹೊತ್ತು  ಮೊದಲಾದರೂ  ಹೋದರೆ  ಅವಂಗೂ  ಸಮಾಧಾನ   ಅಕ್ಕು, ಕಾರಿನ್ಗೆ  ಕಲ್ಲು  ಬೀಳುವ  ಹೆದರಿಕೆಯೂ  ತಪ್ಪಿತ್ತು  ಹೇಳಿ  ಆಲೋಚನೆ.
ಹಾಂಗೆ  ಉದಿಯಪ್ಪಗಳೇ  ಮನೆ  ಬಿಟ್ಟು  ಮನುಷ್ಯರೇ  ಇಲ್ಲದ್ದ  ಮಾರ್ಗಲ್ಲಿ  ಬೇಗಹೋಗಿ  ಕೋಟೆಕಾರಿಲಿ  ಕಲ್ಯಾಣಮಂಟಪಕ್ಕೆ  ಸೇರಿದೆಯ೦.

ಮದಿಮ್ಮಾಯನ  ಆಯಿತ ಆಯೆಕ್ಕಷ್ಟೇ .
ಮಾತಾಡ್ಸಿ  ಅತ್ಲಾಗಿ  ನೋಡೋಗ , ಬಲಿಪ್ಪಜ್ಜನ  ತಲೆ  ಆಂಜಿತ್ತು . ಬಲಿಪ್ಪಜ್ಜ   ನಾಲ್ಕು  ಗಂಟೆಗೆ  ಹೆರಟು  ಬಾಡಿಗೆ  ಕಾರಿಲಿ  ಐದೂವರೆಗೆ  ಬಂದು  ಸೇರಿದ್ದವದ.
ಮದಿಮ್ಮಾಯನ  ಅಪ್ಪ  ದಿನನಿತ್ಯದ  ಹಾಂಗೆ  ಉದೆಕಾಲಕ್ಕೆ  ಎದ್ದಿದವು , ಎದುರ್ಗೊಂಡು  ವ್ಯವಸ್ಥೆ  ಎಲ್ಲ  ಮಾಡಿದ್ದವು ,ಬಲಿಪ್ಪಜ್ಜಂಗೆ.
ಹೇಳಿದ  ಹಾಂಗೆ ,ದಿಬ್ಬಣ  ನಿನ್ನೆಯೇ  ಇಲ್ಲಿಗೆ  ಎತ್ತಿದ್ದು ,ಬಂದಿನ  ಹೆದರಿಕೆಲಿ.
ಮದುವೆ ಪಳ್ಳತ್ತಡ್ಕಲ್ಲಿ ಅಲ್ಲದಾ – ಕೇರಳದ ಬಂದು  ಹೇಳಿರೆ ಕೇಳೆಕ್ಕಾ? ವಾರಲ್ಲಿ  ಎರಡು ದಿನ ಆದರೂ ಹರತಾಳ ಬೇಕಪ್ಪ, ಕಾರಣ ಎಂತಾದರೂ ಸಿಕ್ಕುತ್ತು, ಸಿಕ್ಕದ್ದರೆ ಸೃಷ್ಟಿ ಮಾಡುತ್ತವು!

ಇಡ್ಲಿ, ವಡೆ, ಕ್ಷೀರ ಸೇವನೆ ಆತು.
ಬಳುಸುತ್ತವು ಕಾಪಿ ಹೇಳಿ ಚಾಯ ಎರೆಶಿದವು. ಒಂದು ಮುಕ್ಕುಳಿ ಕುಡುದು, ಕಾಪಿ ಇದ್ದರೆ ಒಳ್ಳೆದಿತ್ತು ಭಾವ ಹೇಳಿದೆ, ಅವರತ್ತರೆ.
ಅವಕ್ಕೂ ಗೊಂತಾತು ಕೈಲಿದ್ದದು ಕಾಪಿ ಅಲ್ಲ ಚಾಪಿ ಹೇಳಿ.

ಉದಿಯಪ್ಪಗಳೇ ಜೆನ ಸುಮಾರು ಸೇರಿದ್ದವು.
ದಿಬ್ಬಣ ಎದುರ್ಗೊಂಬ ಗೌಜಿಯೇ ಬೇರೆ. ಕಜೆ ಡಾಕ್ಟ್ರು ಇದ್ದವು ಹೇಳಿರೆ ಕೇಳೆಕ್ಕಾ. ಬೆಂಗಳೂರಿಲಿ ನಮ್ಮೋರ ಎಲ್ಲ ಒಟ್ಟು ಸೇರಿಸಿ ವರ್ಷಕ್ಕೊಂದರಿ ಪಿಕ್ನಿಕ್ ಏರ್ಪಾಡು ಮಾಡಿಗೊಂಡಿದ್ದವು ,ಕೆಲವು ವರುಶಂದ.

ಅವರ ಕ್ಲಿನಿಕ್ಕಿನ ದಶಮಾನೋತ್ಸವದ ಗೌಜಿ ಈ ಜೀವನಲ್ಲಿ ಮರೆಯ.
ಭಾರಿ ಒಳ್ಳೆ ಸಂಘಟಕ ಮತ್ತೆ ಕಲಾಪ್ರೋತ್ಸಾಹಕ. ಅವರ ನಾಯಕತ್ವಲ್ಲಿ ಜವ್ವನಿಗರು
ಉಲ್ಲಾಸ್ ಮಹಾರಾಜ ಕಿ ಜೈ
ಅಶ್ವಿನಿ ಮಹಾರಾಣಿ ಕಿ ಜೈ

ಹೇಳಿ ಸ್ವಾಗತ ಮಾಡಿ ಆತು.
ಮದಿಮ್ಮಾಯ ಮದಿಮ್ಮಾಳು ಮಂಟಪಕ್ಕೆ ಬಂದು ಕೂದು ಸ್ವಾಗತ ಆಯಿಕ್ಕೊಂಡಿಪ್ಪಗ ಘೋಷ ಕೇಳಿತ್ತು.

ರಾಜಾಧಿರಾಜ ರಾಜ ಮಾರ್ತಾಂಡ ಅರಬಿಸಮುದ್ರ ತೀರ ವಾಸಿ ಶ್ರೀಶೈಲ ನಿವಾಸಿ ಬೆಂಗಳೂರು ನಗರ ವಾಸಿ ಬಲಿಪ್ಪಜ್ಜ ಪ್ರಿಯ ಐ.ಟಿ.ತಂತ್ರಜ್ಞ ಉಲ್ಲಾಸ ಮಹಾಪ್ರಬ್ಹೋ – ಬ್ಜೋಪರಾಕ್! ಹೇಳಿ.

ಹಳೆ ಸಂಪ್ರದಾಯದೊಟ್ಟಿ೦ಗೆ ಒಂದು ಹೊಸತನ,ಉತ್ಸಾಹ ಇದ್ದರೆ ಸಿಕ್ಕುವ ಸಂತೋಷವೇ ಬೇರೆ, ಅಲ್ಲದಾ.

ಎಡೆಲಿ, ಮನೇಲಿ ಹೊಸ್ತಿಲುಪೂಜೆ ಕಳಿಶಿಕ್ಕಿ ತಿರುಗಿ ಬಂದ ದಂಪತಿಗೊಕ್ಕೆ ಬಂದ ಸಭೆ ಮಂತ್ರಾಕ್ಷತೆಯೊಟ್ಟಿ೦ಗೆ  ಆಶೀರ್ವಾದದ ಉಡುಗೊರೆ ಎಲ್ಲಾರು ಕೊಟ್ಟು ಊಟಕ್ಕೆ ಕೂದವು.
ಅಡಿಗೆ ಊಟ ಲಾಯಿಕ್ಕಿತ್ತು. ಹೋಳಿಗೆ ತಿಂಬಗ, ಮೂಗು ನೆತ್ತಿಲಿತ್ತಿದ್ದರೆ ಒಳ್ಳೇದಿತ್ತು ಹೇಳಿ ಕಂಡತ್ತು, ಎರಡು ಹೋಳಿಗೆ ಹೆಚ್ಚು ಕಟ್ಟುಲೆಡಿಗನ್ನೇ, ಮೂಗಿನ ಮುಟ್ಟ ತಿಂದರುದೆ!!

ಒಪ್ಪಣ್ಣನೊಟ್ಟಿ೦ಗೆ ಅಶನಕ್ಕೆ ಹಿಡುದು ಸೊಂಟ ಸೋಬಾನೆ ಆತು ಎರಡನೇ ಹಂತಿಗೆ!!
ಊಟ ಕಳುದು ಯಕ್ಷಗಾನ ವೈಭವ ರೈಸಿತ್ತು.
ಬಲಿಪ್ಪಜ್ಜನೂ,ತೆಂಕಬೈಲು ಮಾವನೂ, ಸಮರ್ಥ ಹಿಮ್ಮೇಳಲ್ಲಿ ಎರಡು ಘಂಟೆ ಹೋದ್ದದೆ ಗೊಂತಾಯಿದಿಲ್ಲೆ.

ಅಂತೂ ಹೋದ ಎನಗೆ ಹೊಟ್ಟೆಯೂ ತುಂಬಿತ್ತು, ಮನಸ್ಸೂ ತುಂಬಿತ್ತು. ಓದಿದ ನಿಂಗೊಗೆ ??

ಬೈಲಿಲಿ ಒಂದು ಗಡದ್ದಿನ ಮದುವೆ..., 4.0 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಅಜ್ಜಕಾನ ಭಾವ

  {ಅಂತೂ ಹೋದ ಎನಗೆ ಹೊಟ್ಟೆಯೂ ತುಂಬಿತ್ತು, ಮನಸ್ಸೂ ತುಂಬಿತ್ತು. ಓದಿದ ನಿಂಗೊಗೆ ?? }

  ಬಂದ್ ಜೋರಾಗಿ ಅರ್ಧಲ್ಲೆ ಬಾಕಿ ಆತನ್ನೆ ಹೇಳಿ ಬೇಜಾರಾtu..

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಗೋಪಾಲ ಮಾವ

  ಬೆಂಗಳೂರಿಂದ ಮಂಗಳೂರಿಂಗೆ ಐರಾವತಲ್ಲಿ ಇಳಿದು ಬಂದ ಅನುಭವ, ಸಟ್ಟುಮುಡಿಯ ವಿವರಣೆ ಶೈಲಿ ಲಾಯಕಾಗಿತ್ತು. ಓದಿ ಹೊಟ್ಟೆ ತುಂಬಿದ್ದಿಲ್ಲೆ, ಮನಸ್ಸು ತುಂಬಿ ಬಂತು. ಹೇಳಿದ ಹಾಂಗೆ, ಯಕ್ಷಗಾನದ ಪ್ರಸಂಗ ಏವದೂ ಹೇಳಿ ಗೊಂತಾತಿಲ್ಲೆ.

  [Reply]

  ಮುಳಿಯ ಭಾವ

  raghumuliya Reply:

  ಮಾವಾ,ದ್ವಂದ್ವ ಭಾಗವತಿಕೆ ಇದ್ದದು.
  ಈ ಚೆನ್ನಬೆಟ್ಟಣ್ಣ , ಹೇಳಿಕೆ ಪಟ್ಟಿಮಾಡುವಷ್ಟೇ ಉಮೇದಿಲಿ ಪದ್ಯದ ಪಟ್ಟಿಯೂ ಮಾಡಿತ್ತಿದ್ದ.
  ಬಲಿಪ್ಪಜ್ಜ ‘ಚಿಕ್ಕ ಪ್ರಾಯದ ಬಾಲೆ ..’ ಹೇಳೋಗ ಮದಿಮ್ಮಾಯನೂ ಸ್ವರ ಸೇರಿಸಿದ್ದನೋ ಹೇಳಿ ಸಂಶಯ!!

  [Reply]

  VA:F [1.9.22_1171]
  Rating: 0 (from 0 votes)
 3. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಭಾವಾ!! ಮದಿಮ್ಮಾಯನ ಸ್ವಾಗತ ಮಾಡಿದ್ದೂ ಭಾರೀ ಲಾಯ್ಕಯ್ದು!! ಅದು ಸರಿ !! ಉದಿಯಪ್ಪಗಳೇ ಪತ್ರೊಡೆ, ತೆಳ್ಳವು ತಿಂದರೆ ಮಧ್ಯಾಹ್ನಕ್ಕೆ ಉಂಬಲೇ ಇದ್ದಾ? ಒಟ್ಟಾರೆ ಲೇಖನ ಭಾರ್ರೀ ಲಾಯ್ಕಾಯ್ದು!

  [Reply]

  ಮುಳಿಯ ಭಾವ

  raghumuliya Reply:

  ಆನು ಮದುವೆ ದಿನವೇ ಎಂಗಳ ಮನಗೆತ್ತಿದ್ದು.ಸಟ್ಟುಮುಡಿ ದಿನ ಉದೆಕಾಲಕ್ಕೆ ಹೋದ್ದು..

  [Reply]

  VA:F [1.9.22_1171]
  Rating: 0 (from 0 votes)
 4. ಚುಬ್ಬಣ್ಣ
  ಚುಬ್ಬಣ್ಣ...

  “…..ಐರಾವತಲ್ಲಿ ದೇವೇಂದ್ರನ ಹಾಂಗೆ ಹೆರಟಿದೆ” ಬಾವ… 😛 ಎನಗೆ ಒ೦ದು ಸ೦ಶಯಾ….!!!
  ದೇವೇಂದ್ರನೊಟ್ಟಿಗೆ ರ೦ಭೇ… ಊರ್ವಶಿ… ತಿಲೋತ್ತಮೆ…. ಎಲ್ಲಾ.. ಇರ್ತವಡಾ.. ಅಪ್ಪೊ?? 😛 😀 ಉಮ್ಮಪ್ಪಾ… ಆರೊ ಹೇಳಿಗೊ೦ಡ್ಡಿತ್ತವು…. ಮತ್ತೆ ಅನು ಈ ರಾಜಕುಮಾರನ ಸಿನುಮೆಲೆಲ್ಲಾ ಕ೦ಡಿದೆ. ಅಲ್ಲಾ ಅನು ಹೀ೦ಗೆ ಕೇಳಿದ್ದು ಮತ್ತೆ ನವಗರಡ್ಯ…… 😛 😀

  [Reply]

  ಮುಳಿಯ ಭಾವ

  raghumuliya Reply:

  ರ೦ಭೇ… ಊರ್ವಶಿ… ತಿಲೋತ್ತಮೆ…. ಎಲ್ಲಾ ಬೆಂಗಳೂರಿಲಿ ಹತ್ತಿದವು,ಗೊರಕೆ ಶಬ್ದ ತಡವಲೆಡಿಯದ್ದೆ ಹಾರಿ ಹೋದ್ದೆ, ಭಾವಾ… ಉಮ್ಮ ಸ್ವರ್ಗಲ್ಲಿದ್ದವೋ ಹೇಳಿ ಚೆನ್ನಬೆಟ್ಟಣ್ಣನ ಹತ್ತರೆ ಕೇಳೆಕ್ಕಷ್ಟೇ..

  [Reply]

  ಚುಬ್ಬಣ್ಣ

  ಚುಬ್ಬಣ್ಣ Reply:

  😛 :D…

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಚೆನ್ನಬೆಟ್ಟನ ಮದುವೆಗೆ ಹೋಗಿತ್ತಿದ್ದೆ. ಈಗ ಸಟ್ಟುಮುಡಿಗೆ ಕೂಡಾ ಹೋದ ಹಾಂಗೆ ಆತು. ಒಪ್ಪಣ್ಣಂಗೆ ಅಂತೂ ಅಶನ ಬಡುಸುವದು ಹೇಳಿರೆ ಪ್ರೀತಿಯೋ ಹೇಳಿ ಕಾಣುತ್ತು. ಎಲ್ಲಾ ಕಡೆಲಿಯೂ ಅಶನ ಬಳುಸಿದ ಕತೆಯೇ ಕೇಳುತ್ತು
  ಐರಾವತಲ್ಲಿ ಬಂದ ಅನುಭವಂಗಳ ಹೇಳಿದ್ದು ಕೊಶೀ ಆತು.

  [Reply]

  VA:F [1.9.22_1171]
  Rating: 0 (from 0 votes)
 6. ನೆಗೆಗಾರ°

  ದೇವಲೋಕ – ದೇವತೆ – ಸ್ವರ್ಗ – ಐರಾವತ – ಇಂದ್ರ –
  ಎಲ್ಲ ಒಂದೇ ಆಟಲ್ಲಿ ಬಪ್ಪ ಬೇರೆ ಬೇರೆ ಶಬ್ದಂಗಳಾ..??? 😉

  [Reply]

  ಮುಳಿಯ ಭಾವ

  raghumuliya Reply:

  ಒಂದೇ ಆಟಲ್ಲಿ ಇಷ್ಟು ಮಾತಾಡಿದರೆ ಉದಿವರೆಗೆ ಅಕ್ಕನ್ನೇ?ಈಗ ಇರುಳಿಡೀ ಆಟ ಮಾಡಿರೆ ನೋಡುಲೆ ವೇಷ ಹಾಕುವವು ಮಾಂತ್ರ ಇಕ್ಕಷ್ಟೇ ..

  [Reply]

  ನೆಗೆಗಾರ°

  ನೆಗೆಗಾರ° Reply:

  { ಆಟ ಉದಿವರೆಗೆ ಅಕ್ಕನ್ನೇ..}
  ಅಪ್ಪೋ!
  ಚೆನ್ನಬೆಟ್ಟಣ್ಣನತ್ರೆ ಕೇಳೆಕ್ಕಷ್ಟೆ!! 😉

  [Reply]

  VA:F [1.9.22_1171]
  Rating: 0 (from 0 votes)
 7. ಮೋಹನಣ್ಣ
  Krishnamohana Bhat

  iraavathada kate keliyappaga enagu ondari hindana prayaanada nempaatu.Hathare kuda urimusudina manusya raja hottappaga jaati mara koravale suru maadithu matte halasu, hebbalasu hinge kramagathavaagi ondonde mara koidu bangluringe ettalappaga kabbinavanne koravale suru maadithu.akerige enna hindaana seatilli kudavan avana yelusi ninu korettare jaati maravanne kore maaraya ee kabbinada korettadara sahisaledittille heli helida.mattondastu ladayavu aatu punyakke astappaga aa jana eliva jage bandu ondu churu nemmadi aatu.Hange muliya bhavan korettare jaati maravanne koradare saaku.gandada mara aadare ennu uttama.

  [Reply]

  ಮುಳಿಯ ಭಾವ

  raghumuliya Reply:

  ಗೊರಕಗೂ ಮರ ಕೊರವೊದಕ್ಕೂ ಒಳ್ಳೆ ಹೋಲಿಕೆ ಅಪ್ಪಚ್ಚೀ,ಕಬ್ಬಿಣ ಕೊರದರೆ ಹೆಂಗಿಕ್ಕಪ್ಪಾ..

  [Reply]

  ಕುವೈತ್ ಭಾವ Reply:

  ಕಬ್ಬಿಣ ಕೊರದರೆ .. ಪಾಶ್ಚಾತ್ಯ ಸಂಗೀತ !! pop ಮ್ಯೂಸಿಕ್ … :)

  [Reply]

  VA:F [1.9.22_1171]
  Rating: 0 (from 0 votes)
 8. ಕುವೈತ್ ಭಾವ

  ಮುಳಿಯ ಭಾವ, ಇಲ್ಲಿದ್ದೊಂಡೆ ಸುಲಾಭಲ್ಲಿ ಒಂದು ಸಟ್ಟುಮುಡಿಗೆ ಹೋಗಿ ಬಂದ ಹಾಂಗೆ ಆತು ….. ಎಂಗೊಗೆ ಸಟ್ಟುಮುಡಿಯ ಹೋಳಿಗೆಯೂ ಎತ್ತಿತ್ತು, ನಮ್ಮ ರಾಮಣ್ಣ ತಂದದಿದ…

  [Reply]

  ಮುಳಿಯ ಭಾವ

  raghumuliya Reply:

  ಎಲ..ರಾಮಣ್ಣನ ಪತ್ತೆಯೇ ಇಲ್ಲೆನ್ನೇ.ಬೈಲಿಂಗೆ ಎಳೆಯಿ ಕುವೈಟ್ ಭಾವಾ,ಹೋಳಿಗೆ ಕಟ್ಟದೊಟ್ಟಿ೦ಗೆ !!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಪುತ್ತೂರುಬಾವಸರ್ಪಮಲೆ ಮಾವ°ಅನುಶ್ರೀ ಬಂಡಾಡಿಮಾಷ್ಟ್ರುಮಾವ°ಅಕ್ಷರ°ಮಾಲಕ್ಕ°ಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ಗೋಪಾಲಣ್ಣದೀಪಿಕಾಅಕ್ಷರದಣ್ಣಯೇನಂಕೂಡ್ಳು ಅಣ್ಣರಾಜಣ್ಣಬಟ್ಟಮಾವ°ಕೇಜಿಮಾವ°ಡಾಮಹೇಶಣ್ಣವೆಂಕಟ್ ಕೋಟೂರುಪೆರ್ಲದಣ್ಣವೇಣೂರಣ್ಣಡೈಮಂಡು ಭಾವಹಳೆಮನೆ ಅಣ್ಣವೇಣಿಯಕ್ಕ°ಕಳಾಯಿ ಗೀತತ್ತೆಪುಣಚ ಡಾಕ್ಟ್ರುಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ