ಬಾಲಿಶ್ ಬರಹಂಗೊ. . . !

March 24, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪೂರ್ವ ಚಿಂತನೆಗಳ ಬಾಲಣ್ಣಂದೇ ಶೈಲಿಲಿ ಕೇಳುವೊ, “ಬಾಲಿಶ್” ಗಳಲ್ಲಿ…

ಬಾಲಿಶ್ – 01:

ಸೃಷ್ಠಿ ಒಂದು ಮಹಾಸ್ಫೋಟಂದ  ಆದ್ದು  ಹೇಳಿ ಆಧುನಿಕ ವಿಜ್ಣಾನ ಹೇಳುತ್ತು.
ಈ ವಿಚಾರವನ್ನೇ ನಮ್ಮ ಭಾರತೀಯ ದೄಷ್ಟಿಕೋನಂದ ,  ಕಾಡುಗಳಲ್ಲಿ  “ತಪಸ್ಸು” ಮಾಡೆಂಡು ಇದ್ದಿದ್ದ ಹಳೆ ವಿಜ್ಞಾನಿಗೊ, ಅವರ ನಾವು ಋಶಿಗೊ ಹೇಳಿ ಹೆಸರಿಸಿದ್ದು, ” ಓಂ”ಕಾರಂದ , ಪ್ರಣವಂದ – ಆದ್ದದು ಹೇಳಿದ್ದಿದ್ದವು.

ಈಗಾಣ ವಿಜ್ಞಾನಿಗೊ ಸೃಷ್ಥಿಯ ರಹಸ್ಯಂಗಳ ಬಗ್ಗೆ , ಆದಿ, ಅಂತ್ಯಂಗಳ ಸಾಧ್ಯತೆಗಳ ಬಗ್ಗೆ ವಿಚಾರ ಮಾಡೆಕಾದರೆ ಮದಲೇ ನಮ್ಮ ಋಶಿಗೊ ಅದರ ಮೌಖಿಕವಾಗಿ ಪಾಠ ಮಾಡೆಂಡು ಇದ್ದಿದ್ದವು ಹೇಳಿ ನಾವು ಕೆಲವು ಸರ್ತಿ ಅತೀ ಭಾವುಕತೆಂದ, ಒನ್ನು ಕೆಲವು ಸರ್ತಿ, ತರ್ಕಕ್ಕೆ, ಹೇಳೆಂಡು ಇರ್ತ್ತನ್ನೆ !

ಜಗತ್ತು ಒಂದು ಮಹಾಸ್ಫೋಟಂದ – ಬಿಗ್ ಬೇಂಗ್ (ಬ್ಯಾಂಗ್) ಥಿಯರಿ ಯ ವಿವರುಸುವ ಹೆಚ್ಚಿನ ಎಲ್ಲಾ ಬರಹಂಗಳಲ್ಲಿ ಸಿಕ್ಕುವ ಕೆಲ ಸಾಮಾನ್ಯ (ಕಾಮನ್) ವಿವರಂಗೊ-

ವಿಶ್ವ ಹೇಳಿ ನಾವು ಇಂದು ಒಪ್ಪಿಗೊಂಡ ಸಂಗತಿ, ಒಂದು ಸಿಂಗ್ಯುಲಾರಿಟಿಂದ ಆದ್ದದು.
ಅದರಿಂದ ಮೊದಲು, ಎಲ್ಲಿಯೂ ಎಂತದೂ ಇತ್ತಿಲ್ಲೆ ! ಬರೇ ಶೂನ್ಯ. ಇದರ ನಮ್ಮ ಋಶಿಗೊ, ಅನಂತ, ಶೂನ್ಯ ಹೇಳಿಯೆಲ್ಲಾ ಹೇಳಿದ್ದವು .
ಈ ಶೂನ್ಯಂದ, ಎಂತೂ ಇಲ್ಲದ್ದರಿಂದ , ಎಂತಾದರೂ ಉಂಟಾಯಿದು ಹೇಳಿ ಹೇಳುತ್ತದೇ ಆದ ವಿಜ್ಞಾನಕ್ಕೆ,  “ಕೇನ ?” ಹೇಳೊದಕ್ಕೆ ಉತ್ತರುಸಲೆ ಅರ್ಡಿಗಾಯಿದಿಲ್ಲೆ !

( ಇದನ್ನೇ “ಅದು”-   “ತತ್”ಹೇಳಿ ವೇದಂಗಳಲ್ಲಿ ಹೇಳಿದ್ದು ; ಆ ಏಕತ್ವ-ತತ್ ; ಆದಿಶಂಕರರಿಂಗೆ ದೇವರೂ, ಶಿವನೂ ಆದ್ದದೊ?
-ಅದರಿಂದಲೇ ತತ್ವಮಸಿ- ಬಂದದೋ- ? ಅದರ ವಿವರುಸಲೆ ಎಡಿಗಾದವನೇ ” ತತ್ವಮಸಿ ವಾಕ್ಯರ್ಥ ನಿರ್ಣಾಯಕನಾದ್ದದೋ .. ? ಉಮ್ಮಪ್ಪಾ  !
ಎನ್ನ ಬೆಪ್ಪು ಬುದ್ಧಿಗೆ ಇನ್ನೂ ಅರಡಿದ್ದಿಲ್ಲೆ. -ಗೊಂತಿದ್ದವು ರಜಾ ವಿವರುಸಿರೆ, ಅಥವಾ ಎಡಿಗಾದವೆಲ್ಲ  ಚರ್ಚೆ ಮಾಡಲೆ ಸುರು ಮಾಡಿರೆ .. ? )
ವಿದ್ವಾನುಗೊಕ್ಕೆ ಇದು ಸಾಧು ! {ದ್ವಿಜರುಗಳಿಗಿದು ಪರಮವೇದಗಳ ಸಾರ- ಹಾಂಗಾಗಿ ಎನ್ನಹಾಂಗಿಪ್ಪವರ ಬೋಧಿಸುವುದು . . . ಬೆಣಚ್ಚಿಂಗೆ ತಪ್ಪ ಕೆಲಸಕ್ಕೆ ಅವೆಲ್ಲಾ ಸೇರೆಕು ಹೇಳಿ ಕೋರಿಕೆ !}

ತತ್-ಸತ್.. ಬ್ರಹ್ಮಾಂಡಮಸ್ತು!

ಈ ಏಕತ್ವ, ತತ್- ಸ್ಫೋಟಕ್ಕೆ ಕಾರಣ ಅದರೊಳವೇ ಇದ್ದ , ಆದರೂ ಅದೇ ಅಲ್ಲದ್ದ, ಒಂದು ಸದಾ ಚಲನೆಲೇ ಇಪ್ಪ ಒಂದು “ಆತ್ಮತತ್ವ“!
( ಅಣುವಿನ ಒಳದ್ರವ್ಯಂಗಳಲ್ಲಿ ಯೂ ಕಂಪನ ಸದಾ ಇದ್ದು ಹೇಳಿ ಓದಿದ ನೆಂಪು-ಫಿಸಿಕ್ಸಿಲ್ಲಿ)
ಇದೇ “ಸತ್” ಹೇಳಿಯೂ ಈ ತತ್-ಸತ್ ಗಳೇ ನಾವಿಂದು ಸತ್ಯ ಹೇಳಿ ನಮ್ಮ ನಮ್ಮ ಇಂದ್ರಿಯಾನುಭವಂಗಳಲ್ಲಿ ತಿಳುಕ್ಕೊಂಡಿಪ್ಪಎಲ್ಲದರ ಮೂಲ ಹೇಳಿ ಉಪನಿಷತ್ತುಗಳ ಭಾಶಾಂತರಂಗಳಲ್ಲಿ ಓದಿಯಪ್ಪಗ ಗೊಂತಾದ್ದು !

ಈ ಏಕತ್ವ ತನ್ನ ಒಳ ಇದ್ದ ಕಂಪನಂಗಳ ಅತೀ ಒತ್ತಡಂದ (ಕಂಪನವೇ ಓಂಕಾರ-ಹೇಳಿಯೂ ಕಲುತ್ತವು ಹೇಳಿಕೊಟ್ಟಿದವು ) ಢಂ- ಆದ್ದದು,ಇದೇ ಮಹಾಸ್ಫೋಟ ! ” ಓಮಿತ್ಯೇಕಾಕ್ಶರಂ ಬ್ರ ಹ್ಮ ” – ಬ್ರಹ್ಮ ಸೃಷ್ಠಿಕರ್ತ ! ಇಲ್ಲಿಂದಲೇ ಬಂದದೋ ?

ಈ ಢಂ – ಓಂಕಾರದ ಮಹಾಕಂಪನ ಶಕ್ತಿ ತರಂಗಂಗೊ, ಇಡೀ ಶೂನ್ಯವ ಆವರಿಸಿ, ಶಕ್ತಿ ಹುಟ್ಟಿತ್ತು ! ಈ ಶಕ್ತಿಯೇ ಆಟಂ ಆತೋ..

ಇದರ ರೂಪಾಂತರವೇ ಆಟಮ್ಮೋ .. ಅಂತೂ ಅಸ್ತಿತ್ವಕೆ ಇದೇ ಮೂಲ ಹೇಳಿ ಈಗಾಣ ವಿಜ್ಞಾನಿಗೊ ಒಪ್ಪುತ್ತವು .
[ಅಂತು ಅಲ್ಲಿಗೆ ರೇಶ್ನಲಿಸ್ಟುಗಳ -ಸತ್ವಂದ ಮೊದಲು ಅಸ್ತಿತ್ವ ಬಂದದು ಹೇಳುವದು ಸೋತತ್ತು !  ಛೇ ! ಶಿವರಾಮ ಕಾರಂತರು ಇದರ ಪ್ರಕಟ ಅಪ್ಪಗ ಬೇಕಾತು ! ]

{ಈ ತತ್ ಮತ್ತು ಸತ್ ಗಳನ್ನೇ ನಮ್ಮ ಋಷಿಗೊ , ಪರಮಾತ್ಮ, ಶ್ರೀಮನ್ನಾರಾಯಣ , ಬ್ರಹ್ಮ ಹೇಳಿ ಎಲ್ಲಾ ಹೇಳಿದವೊ ? ಅವಕ್ಕೆ ಎನ್ನ ಹಾಂಗೆ ಇಪ್ಪ- ಹತ್ತು ಸತ್ತಿ ಹೇಳಿರೆ ಮಾಂತ್ರ ಅರ್ಥ ಅಪ್ಪ ಶಿಷ್ಯರು  ಹೆಚ್ಚಿಗೆ ಇದ್ದಿದ್ದವಾಗಿಕ್ಕು.
ಅದಕ್ಕೆ, ಪುರಾಣಕಥೆಗಳ ಮೂಲಕ ಹೇಳಿದವು. ಅದು ಆವರಿಂದ ತಿಳುದ ಅಜ್ಜ, ಅಜ್ಜಿಗೆ, ಅಜ್ಜಿ- ಪುಳ್ಳಿಗೆ , ಹೀಂಗೆ..
ನಮ್ಮ ತಲೆಗೆ ಎತ್ತುವಗ, ಅದರೊಟ್ಟಿಂಗೆ ಅರೆಪಿಸ್ಕಟೆ ವಿಜ್ಞಾನವೂ ಸೇರಿ, ಎನ್ನ ಜನರೇಶನ್ನಿನವು ಅರ್ಧಜ್ಞಾನಿಗೊ.. ಅದನ್ನೇ ಪರಮಜ್ಞಾನವಾಗಿ ಮಾಡಿಯೊಂಡದಲ್ಲದೋ ! ! !
ಎನ್ನ, ಎನ್ನ ಹಿಂದಾಣ ಒಂದೆರಡು ಶತಮಾನಂಗಳಲ್ಲಿ ಆದ ಘೋರತೆ ಇದು ಹೇಳಿ ಈಗ ಅನುಸುತ್ತು. }

ಇದರಿಂದ ಶಕ್ತಿ, ಅದರಿಂದ ಪ್ರಾಣ ಉಂಟಾತು  !

ಉಪನಿಶತ್ತುಗೊ ಇದನ್ನೇ ಆತ್ಮತತ್ವ ಹೇಳಿಯೂ, ಅನಂತ ಹೇಳಿಯೂ ಇದರಿಂದಲೇ ಶುಕ್ರಸ್ಫೋಟ ಆದ್ದದೂ ಹೇಳಿಯೂ..
ಆ ಸ್ಪೋಟಂದಲೇ ಸೃಷ್ಠಿ ಆದ್ದದೂ ಹೇಳಿಯೂ ಹೇಳುತ್ತು !
ಇದರ ಓದಿಯಪ್ಪಗ ಒಂದರಿ ಆಶ್ಚರ್ಯ, ಒಂದರಿ  ಒಂದು ರೀತಿಯ ಕೀಳರಿಮೆ..! ಅದರಿಂದೆಲ್ಲ ಹೆಚ್ಚು ಒಂದು ಜನಾಂಗವನ್ನೇ  ಬೋಚಂಗಳಾಗಿಸಿದ, ಬೋಸಂಗಳ ಪರಂಪರೆ ಸೃಷ್ಠಿಮಾಡಲೆ ಎಡಿಗಾದ  ಸನ್ನಿವೇಶ ಮತ್ತೆ ಆ ಪಾಶ್ಚಾತ್ಯ, ಮಧ್ಯಪೂರ್ವದ ಜನಂಗಳ  ಗ್ರೇಶುವಗ..
ಚೆಲಾ ! !  ಚ್ಚೇ..ಛೆ !.. ನಿಂಗೊಗೂ .. ಹೀಂಗೇ ….ಅನುಸುತ್ತು ಅಲ್ಲದೋ !?

ಮ್ಯಾಟರ್- ಇದೂ  ಅಣುಗಳಿಂದ ಆದ್ದದು, ಅಣುಗೊ ಪರಮಾಣುಗಳಿಂದ, ಈ ಅಣು ಪರಮಾಣುಗೊ ಸೇರಿ,   {ಕಾರ್ಬನ್ , ಹೈಡ್ರೊಜನ್ ಸೇರಿ ಉಂಟಾದ ಹೈಡ್ರೋಕಾರ್ಬನ್ ಗೊ- ಜೀವದ ಸೄಷ್ಠಿಗೆ ಕಾರಣ ! ಮೊಡರ್ನ್ ಸಯನ್ಸಿನ ವಿಶ್ಲೇಶಣೆ } ಎಲ್ಲಾ ಜೀವಿ, ನಿರ್ಜೀವಿ ವಸ್ತು ಗೊ ಆದ್ದದು ಹೇಳಿ ನಾವು ಕ್ರಿಸ್ತ ಸತ್ತ ನಂತರ ಕಲುತ್ತದು! ಈದನ್ನೇ ವೇದ ಕಾಲಲ್ಲಿ ಋಷಿಗೊ ಹೇಳಿದ್ದವು ! ವೇದ ಕಾಲವ ಪಾಶ್ಚಾತ್ಯರೂ ಪೌರಾತ್ಯರೂ ಒಪ್ಪಿದ್ದವು !
ಆದರೂ ನವಗೆ ವಿಪರೀತವಾಗಿ ಕಲುಶಿದವು ! ವೇದದ ಭಾಶೆ ಅರಡಿಯದ್ದವರ ಕೈಲಿ ನಮ್ಮ ತಾಳೆ ಒಲಿಲಿ ಬರದ್ದದು. (ಅದೂ ಬರದವನ ಬುಧ್ಧಿಗೆ ನಿಲುಕಿದ ಮಟ್ಟಿಂಗೆ ಬರದ್ದದು) ಒಳುದು , ಇಂದಿಂಗೂ ಕೆಲ ಮೆನುಸ್ಕ್ರಿಪ್ಟುಗೊ ಜರ್ಮನಿಲೋ ಎಲ್ಲೋ ಇದ್ದು !

ಹುಟ್ಟಿದ್ದಕ್ಕೆ ಒಂದು ತಾರ್ಕಿಕ ಅಂತ್ಯ..
ಹೈಡ್ರೊಜನ್ , ಕಾರ್ಬನ್ ಗಳಿಂದ ಆದ್ದದು ಮತ್ತೆ ಅದೇ  ಆಗಿ ವಾಪಾಸು ಮೂಲಕ್ಕೇ ಸೇರುವದೇ ಪ್ರಳಯ, ಅಂತ್ಯ. ಜೀವಿಗಳಲ್ಲಿ ಸಾವು, ಭೂಮಿಗೆ ಮತ್ತೆ ಸ್ಫೋಟ .. ಮತ್ತೆ ಕಣಂಗೊ .. ಅದೇ  ಸಿಂಗ್ಯುಲಾರಿಟಿಗೆ.. ಆದಿಶಂಕರರ “ಶಿವ” – !
ಅಂಬಗ ಸೃಷ್ಠಿ , ಸ್ಠಿತಿ , ಲಯ- ವ ವಿವರುಸಿದವು ಆರು? ಅರೆವಿಜ್ಞಾನಿಗಳೋ ? ?

~*~*~*~

ಬಾಲಿಶ್ ಬರಹಂಗೊ. . . !, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಬಾಲಣ್ಣ

  ವ್ರತ, ಪೂಜೆ, ನೇಮ ..ಇತ್ಯಾದಿಗೊ, ಬ್ರಾಹ್ಮಣರಿಂಗೆ ಹೇಳಿದ್ದಲ್ಲ ? !
  ಇಂದು “ಬ್ರಹ್ಮವಿದ್ ಬ್ರಾಹ್ಮಣ… ” ಆರು ಇದ್ದ್ವವು ? ..ನಿಜವಾಗಿ ವೈರಾಗ್ಯ ಬಂದವ ಇಂದು ಹುಚ್ಚಾಸ್ಪತ್ರೆಲಿ ಎಡ್ಮಿಟ್ ಅಕ್ಕು !

  ಇರಲಿ !
  ಮೂರ್ತಿ- ಸಂಕೇತ ಮಾತ್ರ. ಮಂಡ್ಲಂಗಳೂ ಅಷ್ಟೇ ! ಒಳಾಂದ. ಒಳಾ ಇಪ್ಪವಂಗೆ ಪೋಜೆ ಎಂತಕೆ -ಹೀಂಗೆಲ್ಲಾ ಕೇಳಿರೆ ಎನ್ನನ್ನೂ ಹಿಡುದು ಏರಡೆರಡು ಮಡುಗ್ಗು,. ..ನಿಂಗಳ ಬಯಲಿನ ಹತ್ತರೂ ಹೋಪಲೆಡಿಯ !

  ಆನಾದಿ ಕಾಲಂದಲೂ ಮನುಷ್ಯಂಗೆ , ಗೊಂತಿಲ್ಲದ್ದರ ಬಗ್ಗೆ ಹೆದರಿಕೆ ! ಇದು ಆ ಗೊಂತಿಲ್ಲದ್ದದರ ಅವರವರ ಭಾವಕ್ಕೆ ತಕ್ಕ ಹಾಂಗೆ ಚಿತ್ರಣಂಗಳ ಮಾಡಿಕೊಂಬಲೆ ಪ್ರೇರೇಪಿಸಿತ್ತು, ಅದೇ ಮೂರ್ತಿಗೊ, ಮಂಡಲಂಗೊ, ಭೂತಂಗೊ..ಇತ್ಯಾದಿಗೊಕ್ಕೂ, ಅವಕ್ಕೆ ಅವರವರ ಜೀವನಪದ್ಧತಿಗೆ ಸರಿಹೊಂದುವ ಪೂಜನೆಯ ಕ್ರಮಂಗಳನ್ನೂ ಉಂಟುಮಾಡಿತ್ತು …..

  ಈ ಎಲ್ಲ ಕಾಲಂಗಳಲ್ಲೂ ಕೆಲವು ವಿಶೇಷ ಆತ್ಮಂಗು..ಅಥವಾ ಏಕಾತ್ಮದ ತುಣುಕುಗೊ, ತಮ್ಮ ಕರ್ಮ, ಸಂಸ್ಕಾರಬಲಂದ ಉಳಿದವರಿಂದ ಭಿನ್ನವಾಗಿ, ಹೆಚ್ಚು ಸ್ಪಷ್ಟವಾಗಿ ತೋರಿಕೊಂಡವು. ಆ ವ್ಯಕ್ತಿಗಳ ನಾವು ಅನುಸರಿಸಿತ್ತು, ಅನುಕರಿಸಿತ್ತು ! ಇಲ್ಲಿ, ಒಳಿತು ಕೆಡುಕು ಕೂಡಾ ಅವ್ಕ್ಕೇ ನಾವು ಇಂದೂ ಅರ್ಪಿಸುತ್ತು ! ಇದು ನಮ್ಮ ಹೆದರಿಕೆಯ ಪರಿಣಾಮ !
  ಎಲ್ಲ ಪೂಜಾ, ಆರಾಗಧನಾ ಕ್ರಮಂಗಳೂ ಆ ವ್ಯಕ್ತಿಯ ಮಟ್ಟಿಂಗೆ ನಿಜ, ಅವಂಗೆ ಸರಿ ಮತ್ತು ಅವನ ಒಟ್ಟಿಂಗೆ ಇಪ್ಪ ಜನಂಗುಕ್ಕೆ ಒಪ್ಪಿತ ಆದಪ್ಪಗ ಅದು ಆಚರಣೆ ಆವುತ್ತಲ್ಲದೊ.
  ಸಾಮಾಜಿಕವಾಗಿ ನಾವು ಇನ್ನೊಬ್ಬಂಗೆ ಉಪದ್ರ ಕೊಡದ್ದೆ, (ಎನ್ನ ಭಜನೆಗೆ ಮೈಕು ಬೇಕು..ಶಾಲೆ ಮಕ್ಕೊ ನಾಳೆ ಓದಲಿ !..ಅಲ್ಲದಾ ) ನಮ್ಮದರ ಮುಂದುವರುಸಿರೆ ಅಡ್ಡಿ ಇಲ್ಲೆ ಹೇಳಿ ಎನ್ನ ಅನಿಸಿಕೆ.

  ಇಡೀ ಜಾತಿ ಪದ್ಧತಿ ಇಂದ್ರಾಣ ಅಥವಾ ಈ ಕ್ರಿಸ್ತಾನಂತರದ ಸಹಸ್ರಮಾನಂಗಳಲ್ಲಿ ..ಹುಟ್ಟಿನಿಂದ ಮಾಂತ್ರ ನಿಗದಿತ ಅಪ್ಪದು, ಬಹುಶಃ ಸರಿ ಅಲ್ಲ. ( ಬಹುಶಃ=ಹೆಚ್ಚಿನ ಅಂಶ-ಮಾಪನ ) ಜಾತಿಗೊ ..ಹುಟ್ಟಿದ್ದು , ಈಗಾಣ ರೂಪ..ಇದರ ಬಗ್ಗೆ ಇನ್ನೊಂದು ಸಂವಾದ ಸುರು ಮಾಡುವೊ !

  [Reply]

  ನೀರ್ಕಜೆ ಮಹೇಶ

  ನೀರ್ಕಜೆ ಮಹೇಶ Reply:

  ಬ್ರಾಹ್ಮಣಂಗೆ ವೈರಾಗ್ಯ ಬರೆಕ್ಕು ಹೇಳಿ ಇದ್ದ! ಇಲ್ಲೆನ್ನೆ.. ಹಾಂಗಾಗಿ ಹುಚ್ಚಾಸ್ಪತ್ರೆ ಸೇರುವ ಪ್ರಶ್ನೆ ಇಲ್ಲೆ. ಅವಕ್ಕವಕ್ಕೆ ಬೇಕಾದ ಹಾಂಗೆ ಪೂಜೆ ಮಾಡುದು ಸರಿ. ಎರಡು ಮಾತಿಲ್ಲೆ. ಇನ್ನೊಬ್ಬಂಗೆ ತೊಂದರೆ ಆಗದ್ದ ಹಾಂಗೆ ಮಾಡಿದರೆ ಆತು. ಇಲ್ಲಿ ತೊಂದರೆ ಅಥವಾ ತಪ್ಪಿನ ಪ್ರಶ್ನೆ ಅಲ್ಲ. ಆದರೇ ಬರೇ ಇಷ್ಟರಲ್ಲೇ ತೃಪ್ತ ಆದವಂಗೆ ಉಪನಿಷತ್ತು ವೇದ ಆಧ್ಯಾತ್ಮ ಎಂತಕ್ಕೆ ಬೇಕು ಅಲ್ಲದ! ಇವೆಲ್ಲ ಬೇಕಾದವಕ್ಕೆ ವ್ರತ ಪೂಜೆ ಹೊರತಾಗಿಯೂ ಬೇರೆ ಲೋಕ ಇದ್ದು ಹೇಳಿ ಎನ್ನ ಒಂದು ಅಭಿಪ್ರಾಯ ಅಷ್ಟೆ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ನೀರ್ಕಜೆ ಭಾವ,
  ವ್ರತ, ಪೂಜೆಯ ಅ೦ಧಾನುಕರಣೆ ಆಗದ್ದೆ ಅದರ ಒಳಾಣ ಅರ್ಥ೦ಗಳ ಪರಿಚಯ ಇರೆಕ್ಕು ಹೇಳಿ ನಿ೦ಗಳ ಅಭಿಪ್ರಾಯ ಅಲ್ಲದೋ? ಒಪ್ಪೆಕ್ಕಾದ್ದು.
  ಸಮಾಜಕ್ಕೆ ಉಪದ್ರ ಕೊಡದ್ದೆ ತೃಪ್ತಿಲಿ ಜೀವನ ಸಾಗುಸುವವ೦ಗೂ ತಿಳುಕ್ಕೊ೦ಬ ಹಶು ಇರ್ತನ್ನೇ?

  [Reply]

  ನೀರ್ಕಜೆ ಮಹೇಶ

  ನೀರ್ಕಜೆ ಮಹೇಶ Reply:

  ಹಶು ಎಲ್ಲರಿಂಗೂ ಇರೆಕ್ಕೇಳಿ ಇಲ್ಲೆ. ಇಲ್ಲದ್ದಿಪ್ಪದೂ ತಪ್ಪಲ್ಲ. ಹಶು ಇಪ್ಪವು ಅದರ ಹೆಚ್ಚು ಹೆಚ್ಚು ಸಮಾನ ಮನಸ್ಕರೊಡನೆ, ತಿಳುದೋರೊಡನೆ (ಬಾಲಣ್ಣ, ನಿಂಗೊ ಇತ್ಯಾದಿ ಒಪ್ಪಣ್ಣಂದಿರು) ಹಂಚಿಕೊಂಡರೆ, ಚರ್ಚೆ ಮಾಡಿದರೆ ಅದು ಬೆಳೆತ್ತು. ಒಂದು ರೀತಿಯ ಸತ್ಸಂಗದ ಹಾಂಗೆ. ಇದು ಇಲ್ಲಾರೆ ಆ ಹಶು ಅಡಗಿ ಹೋಕು. ಹಾಂಗೆ ಹಶು ಅಡಕಿ ಹೋಪದು ನಮ್ಮ ಧರ್ಮದ ದೃಷ್ಟಿಂದ ಖಂಡಿತಾ ಒಳ್ಳೆದಲ್ಲ.

  VA:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  “ನಿಜವಾಗಿ ವೈರಾಗ್ಯ ಬಂದವ ಇಂದು ಹುಚ್ಚಾಸ್ಪತ್ರೆಲಿ ಎಡ್ಮಿಟ್ ಅಕ್ಕು !”. ಲೌಕಿಕ ಮತ್ತು ಅಲೌಕಿಕಗಳ ಮಧ್ಯೆ ಸಮನ್ವಯತೆ ಸಾಧುಸುದು ತುಂಬಾ ಕಷ್ಟದ ಕೆಲಸ. ಈ ಹಾದಿಲ್ಲಿ ಮಾರ್ಗದರ್ಶನ ಮಾಡುಲೆ ನಮ್ಮ ಗುರುಗೋ ಇಪ್ಪದು ನಮ್ಮೆಲ್ಲರ “ಅನಂತ ಸೌಭಾಗ್ಯ”.

  “ಬ್ರಾಹ್ಮಣಂಗೆ ವೈರಾಗ್ಯ ಬರೆಕ್ಕು ಹೇಳಿ ಇದ್ದ! ಇಲ್ಲೆನ್ನೆ.. “… ಆ ಪರಿಪೂರ್ಣ ಜ್ಹಾನವ ಪಡೆಕಾರೆ ‘ಭಕ್ತಿ’ ಮತ್ತು ‘ವೈರಾಗ್ಯ’ ಇವೆರಡರ ಸಹಾಯಂದ ಮಾಂತ್ರ ಸಾಧ್ಯ.

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ

  ವ್ರತ, ಪೂಜೆ, ನೇಮ ..ಇತ್ಯಾದಿಗೊ, ಬ್ರಾಹ್ಮಣರಿಂಗೆ ಹೇಳಿದ್ದಲ್ಲ ? !
  ಇಂದು “ಬ್ರಹ್ಮವಿದ್ ಬ್ರಾಹ್ಮಣ… ” ಆರು ಇದ್ದ್ವವು ? ..ನಿಜವಾಗಿ ವೈರಾಗ್ಯ ಬಂದವ ಇಂದು ಹುಚ್ಚಾಸ್ಪತ್ರೆಲಿ ಎಡ್ಮಿಟ್ ಅಕ್ಕು !

  ಇರಲಿ !
  ಮೂರ್ತಿ- ಸಂಕೇತ ಮಾತ್ರ. ಮಂಡ್ಲಂಗಳೂ ಅಷ್ಟೇ ! ಒಳಾಂದ. ಒಳಾ ಇಪ್ಪವಂಗೆ ಪೋಜೆ ಎಂತಕೆ -ಹೀಂಗೆಲ್ಲಾ ಕೇಳಿರೆ ಎನ್ನನ್ನೂ ಹಿಡುದು ಏರಡೆರಡು ಮಡುಗ್ಗು,. ..ನಿಂಗಳ ಬಯಲಿನ ಹತ್ತರೂ ಹೋಪಲೆಡಿಯ !

  ಆನಾದಿ ಕಾಲಂದಲೂ ಮನುಷ್ಯಂಗೆ , ಗೊಂತಿಲ್ಲದ್ದರ ಬಗ್ಗೆ ಹೆದರಿಕೆ ! ಇದು ಆ ಗೊಂತಿಲ್ಲದ್ದದರ ಅವರವರ ಭಾವಕ್ಕೆ ತಕ್ಕ ಹಾಂಗೆ ಚಿತ್ರಣಂಗಳ ಮಾಡಿಕೊಂಬಲೆ ಪ್ರೇರೇಪಿಸಿತ್ತು, ಅದೇ ಮೂರ್ತಿಗೊ, ಮಂಡಲಂಗೊ, ಭೂತಂಗೊ..ಇತ್ಯಾದಿಗೊಕ್ಕೂ, ಅವಕ್ಕೆ ಅವರವರ ಜೀವನಪದ್ಧತಿಗೆ ಸರಿಹೊಂದುವ ಪೂಜನೆಯ ಕ್ರಮಂಗಳನ್ನೂ ಉಂಟುಮಾಡಿತ್ತು …..

  ಈ ಎಲ್ಲ ಕಾಲಂಗಳಲ್ಲೂ ಕೆಲವು ವಿಶೇಷ ಆತ್ಮಂಗೊ.ಅಥವಾ ಏಕಾತ್ಮದ ತುಣುಕುಗೊ, ತಮ್ಮ ಕರ್ಮ, ಸಂಸ್ಕಾರಬಲಂದ ಉಳಿದವರಿಂದ ಭಿನ್ನವಾಗಿ, ಹೆಚ್ಚು ಸ್ಪಷ್ಟವಾಗಿ ತೋರಿಕೊಂಡವು. ಆ ವ್ಯಕ್ತಿಗಳ ನಾವು ಅನುಸರಿಸಿತ್ತು, ಅನುಕರಿಸಿತ್ತು ! ಇಲ್ಲಿ, ಒಳಿತು ಕೆಡುಕು ಕೂಡಾ ಅವ್ಕ್ಕೇ ನಾವು ಇಂದೂ ಅರ್ಪಿಸುತ್ತು ! ಇದು ನಮ್ಮ ಹೆದರಿಕೆಯ ಪರಿಣಾಮ !
  ಎಲ್ಲ ಪೂಜಾ, ಆರಾಗಧನಾ ಕ್ರಮಂಗಳೂ ಆ ವ್ಯಕ್ತಿಯ ಮಟ್ಟಿಂಗೆ ನಿಜ, ಅವಂಗೆ ಸರಿ ಮತ್ತು ಅವನ ಒಟ್ಟಿಂಗೆ ಇಪ್ಪ ಜನಂಗುಕ್ಕೆ ಒಪ್ಪಿತ ಆದಪ್ಪಗ ಅದು ಆಚರಣೆ ಆವುತ್ತಲ್ಲದೊ.
  ಸಾಮಾಜಿಕವಾಗಿ ನಾವು ಇನ್ನೊಬ್ಬಂಗೆ ಉಪದ್ರ ಕೊಡದ್ದೆ, (ಎನ್ನ ಭಜನೆಗೆ ಮೈಕು ಬೇಕು..ಶಾಲೆ ಮಕ್ಕೊ ನಾಳೆ ಓದಲಿ !..ಅಲ್ಲದಾ ) ನಮ್ಮದರ ಮುಂದುವರುಸಿರೆ ಅಡ್ಡಿ ಇಲ್ಲೆ ಹೇಳಿ ಎನ್ನ ಅನಿಸಿಕೆ.

  ಇಡೀ ಜಾತಿ ಪದ್ಧತಿ ಇಂದ್ರಾಣ ಅಥವಾ ಈ ಕ್ರಿಸ್ತಾನಂತರದ ಸಹಸ್ರಮಾನಂಗಳಲ್ಲಿ ..ಹುಟ್ಟಿನಿಂದ ಮಾಂತ್ರ ನಿಗದಿತ ಅಪ್ಪದು, ಬಹುಶಃ ಸರಿ ಅಲ್ಲ. ( ಬಹುಶಃ=ಹೆಚ್ಚಿನ ಅಂಶ-ಮಾಪನ ) ಜಾತಿಗೊ ..ಹುಟ್ಟಿದ್ದು , ಈಗಾಣ ರೂಪ..ಇದರ ಬಗ್ಗೆ ಇನ್ನೊಂದು ಸಂವಾದ ಸುರು ಮಾಡುವೊ !

  [Reply]

  VA:F [1.9.22_1171]
  Rating: 0 (from 0 votes)
 3. ಗಣಪತಿ.ಭಟ್.ಬಿ
  ಗಣಪತಿ.ಭಟ್.ಬಿ

  >>>”””ಈ ತತ್ ಮತ್ತು ಸತ್ ಗಳನ್ನೇ ನಮ್ಮ ಋಷಿಗೊ , ಪರಮಾತ್ಮ, ಶ್ರೀಮನ್ನಾರಾಯಣ , ಬ್ರಹ್ಮ ಹೇಳಿ ಎಲ್ಲಾ ಹೇಳಿದವೊ ? ಅವಕ್ಕೆ ಎನ್ನ ಹಾಂಗೆ ಇಪ್ಪ- ಹತ್ತು ಸತ್ತಿ ಹೇಳಿರೆ ಮಾಂತ್ರ ಅರ್ಥ ಅಪ್ಪ ಶಿಷ್ಯರು ಹೆಚ್ಚಿಗೆ ಇದ್ದಿದ್ದವಾಗಿಕ್ಕು.
  ಅದಕ್ಕೆ, ಪುರಾಣಕಥೆಗಳ ಮೂಲಕ ಹೇಳಿದವು. ಅದು ಆವರಿಂದ ತಿಳುದ ಅಜ್ಜ, ಅಜ್ಜಿಗೆ, ಅಜ್ಜಿ- ಪುಳ್ಳಿಗೆ , ಹೀಂಗೆ..
  ನಮ್ಮ ತಲೆಗೆ ಎತ್ತುವಗ, ಅದರೊಟ್ಟಿಂಗೆ ವಿಜ್ಞಾನವೂ ಸೇರಿ, ಎನ್ನ ಜನರೇಶನ್ನಿನವು ಅರ್ಧಜ್ಞಾನಿಗೊ.. ಅದನ್ನೇ ಪರಮಜ್ಞಾನವಾಗಿ ಮಾಡಿಯೊಂಡದಲ್ಲದೋ ! ! !
  ಎನ್ನ, ಎನ್ನ ಹಿಂದಾಣ ಒಂದೆರಡು ಶತಮಾನಂಗಳಲ್ಲಿ ಆದ ಘೋರತೆ ಇದು ಹೇಳಿ ಈಗ ಅನುಸುತ್ತು. }”>>>

  ==>
  ನಾವು ಅರೆಬರೆ ಜ್ನಾನ ಇಪ್ಪವೇ ಇದರ ಎ೦ಥೆ೦ಥದೊ ಅರ್ಥ ಮಾಡಿಕೊ೦ಡು,ಇನ್ನೆ೦ಥದೊ ಕಲ್ಪಿಸಿಕೊ೦ಡು, ಆನು ಹೇಳಿದ್ದೇ ಸರಿ ಹೇಳಿ ಪೂರ್ತಿ ಹಾಳು ಮಾಡಿ ಹಾಕಿದ್ದು!!!! ಅದರ ಮೂಲ ಅರ್ಥವ ಆಗಲಿ, ಎ೦ಥಕೆ ಹಾ೦ಗೆ ಹೇಳಿದವು ಅವು ಹೇಳುದರ ಬಗ್ಗೆ ಯೊಚನೆಯೆ ಮಾಡದ್ದೆ,ಅರೆಪಿಸ್ಕಟೆ ವಿಜ್ನಾನಿಗೊ(ಅನ್ನಿಸಿಕೊ೦ಡವು) ಹೇಳಿದ್ದನ್ನೆ ಸತ್ಯ ಹೇಳಿ ನ೦ಬಿ,ನಮ್ಮದರ ಸಾರಾಸಗಟಾಗಿ ತಿರಸ್ಕಾರ ಮಾಡಿತ್ತು(ವಿಮರ್ಶೆ ಮಾಡದ್ದೆ).ಹಾ೦ಗಾಗಿಯೆ ಈಗಾಣ ಜೆನ ಹಳೇ ನಮ್ಮ ಋಶಿಗೊ ಹೇಳಿದ್ದು ಮತ್ತು ನಮ್ಮ ಶಾಸ್ತ್ರ೦ಗ ಎಲ್ಲ ಕೆಟ್ಟದ್ದು ಹೇಳಿ ತೀರ್ಮಾನಿಸಿ ಪಾಸ್ಚಾತ್ಯರ ಅ೦ದಾನುಕರಣೆ ಮಾಡುದು !!!! ಅದರಿ೦ದಾಗಿ ಮು೦ದಾಣ ತಲೆಮಾರಿ೦ಗೆ ತಪ್ಪು ಸ೦ದೇಶ ನಾವೇ ಕೊಟ್ಟ ಹಾ೦ಗೆ ಅವುತ್ತು ಅಲ್ಲದಾ?
  >>>ಇದರ ಬಗ್ಗೆ ಸಕಾರಾತ್ಮಕ ಚರ್ಚೆ ಇನ್ನೊ ಮು೦ದುವರಿಯಲಿ ಹೇಳಿ ಆಶಿಸುತ್ತೆ ಮತ್ತು ಈ ಲೇಖನ ಸರಣಿಯ ಮು೦ದಾಣ ಲೇಖನವ ಕಾದು ಕೊ೦ಡು ಇರ್ತೆ…

  [Reply]

  VA:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ತುಂಬಾ ಉತ್ತಮವಾದ ಲೇಖನ… ಅಚ್ಚರಿಗಳ ರಹಸ್ಯಂಗಳ ತಿಳುಕ್ಕೊಂಡಷ್ಟು ಇನ್ನೂ ಅಚ್ಚರಿಗಳ ಉಂಟುಮಾಡುತ್ತು… “ನಾವು ಪರಾ ದ್ರುಷ್ಟಿಂದ ನೋಡಿದರೆ ಈ ಜಗತ್ತಿನ ಪ್ರತಿ ಕಣ ಕಣಲ್ಲಿಯೂ ಇಡೀ ಜಗತ್ತಿನ ನೋಡುಲೆ ಸಾಧ್ಯ ಆವುತ್ತು”

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಮಾಲಕ್ಕ°ಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಅಕ್ಷರದಣ್ಣಡಾಗುಟ್ರಕ್ಕ°ಅನು ಉಡುಪುಮೂಲೆಸುವರ್ಣಿನೀ ಕೊಣಲೆಕೇಜಿಮಾವ°ಸಂಪಾದಕ°ಒಪ್ಪಕ್ಕಚೂರಿಬೈಲು ದೀಪಕ್ಕಸುಭಗಅಜ್ಜಕಾನ ಭಾವಪುತ್ತೂರಿನ ಪುಟ್ಟಕ್ಕಬಟ್ಟಮಾವ°ಶ್ಯಾಮಣ್ಣಕೆದೂರು ಡಾಕ್ಟ್ರುಬಾವ°ಜಯಗೌರಿ ಅಕ್ಕ°ಚೆನ್ನಬೆಟ್ಟಣ್ಣವೇಣಿಯಕ್ಕ°ಶರ್ಮಪ್ಪಚ್ಚಿಪ್ರಕಾಶಪ್ಪಚ್ಚಿಕಜೆವಸಂತ°ಅನಿತಾ ನರೇಶ್, ಮಂಚಿವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ