ಕಟ್ಟ ಕಟ್ಟಿ ನೋಡು..

ಬೇಸಗೆಲಿ ನೀರಿಂಗೆ ತತ್ವಾರ ಅಪ್ಪಲೆ ಸುರು ಅವ್ತು ಹೇಳ್ತ ಪೂರ್ವ ಸೂಚನೆ ಇಪ್ಪಗಳೇ  ತೋಡಿ೦ಗೋ , ಹೊಳಗೋ ಕಟ್ಟ ಕಟ್ಟುದು ಸಾಮಾನ್ಯ.
ತೋಟದ ಕರೆಲಿ ಇಪ್ಪ ತೋಡಿಲ್ಲಿ ಬಿಡು ನೀರು ಹರಿವ ಪ್ರಮಾಣ ಕಮ್ಮಿ  ಅಪ್ಪದು ಗೊಂತಪ್ಪಗಳೇ ಕಟ್ಟ ಕಟ್ಟುವ ಏರ್ಪಾಡು ಸುರು ಅವ್ತು.
ಕಟ್ಟಲ್ಲಿ ಸಂಗ್ರಹ ಆದ ನೀರಿನ ತೋಟದ ಓಳಿಗೆ ಒಡ್ಡಿ ಬಿಟ್ಟರೆ  ಪುರುಸೋತ್ತಪ್ಪಗ ನೀರು ಚೇಪಿಗೊಂದರೆ ಆತು. ತೋಟ ತಂಪಿರ್ತು.
ಕಟ್ಟ ಕಟ್ಟುಲೇ ಎರಡು ಬಗೆ ಇದ್ದು.

ಕಟ್ಟಂದಾಗಿ ಊರು ಹಸಿರಾತು

ಒಂದು ಸಣ್ಣ ತೋಡಿ೦ಗೆ ಆದರೆ ಕಟ್ಟುವ ರೀತಿಗೂ ದೊಡ್ಡ ಹೊಳಗೆ ಆದರೆ ಇನ್ನೊಂದು ರೀತಿ ಇದ್ದು.
ಕಟ್ಟ ಕಟ್ಟುವ ಮೊದಲು ತೊಡಿಂದ ಹೊಯಿಗೆ ಎಳವದೆ ದೊಡ್ಡ ಕೆಲಸ. ಕಟ್ಟ ಕಟ್ಟುವ ಪ್ರಮಾಣ ನೋಡಿಗೊಂದು ಇದುದೆ ವೆತ್ಯಾಸ ಇರ್ತು ಹೇಳುವೋ!

ಸಣ್ಣ ತೋಡಿ೦ಗೆ ಆದರೆ ತೋಡಿಂದ ಹೊಯಿಗೆ ಎಳದು ಅಡಿ ಸಮ ಮಾಡಿ ಮಣ್ಣು ಜೆರಿಷಿ ಹಾಕಿ ಕಲಸಿ , ಹದ ಬರಿಸಿ, ಆಮೇಲೆ ಹಂತ ಹಂತವಾಗಿ ಮಣ್ಣು ಕಲಸಿ ಮೆತ್ತುತಾ  ಕತ್ತವ ಏರ್ಸುತ್ತಾ ಹೊಯೇಕ್ಕಿದಾ.
ನೀರು ಎಷ್ಟು ನಿಲ್ಲುತ್ತು ಹೇಳ್ತದ್ದರ ನೋಡಿಗೊಂಡು, ಹೆಚ್ಚಾದ ನೀರು ಹರಿವಲೆ ಕಟ್ಟಕ್ಕೊಂದು “ಮಾದು” ಕೊಡೆಕ್ಕು. ಇಲ್ಲದ್ರೆ ಕಟ್ಟ ಹೊಟ್ಟುಗಿದಾ.
ಕಟ್ಟ ಕಟ್ಟಿದ ಮೇಲೆ ಆ ನೀರು  ತೋಟದ ಒಳಿಲ್ಲಿ ಒಡ್ಡುಗು. ನೀರು ಒಡ್ಡುವ ಮೊದಲೇ ಒಳಿಗೆ ಬಿದ್ದ ಅದಕ್ಕೆ ಎಲ್ಲ ಹೆರ್ಕಿ ಅಯೆಕ್ಕು. ಅಲ್ಲಿಯೇ ಬಿಟ್ಟರೆ ಅದು ಕೊಡಿಪ್ಪುಲೇ  ಸುರು ಅಕ್ಕು!

ಮೊನ್ನೆ ಪೆರ್ಲದ ಮಾವ ತೋಟದ ಕೆಲಸಕ್ಕೆ ಜೆನ ಸಿಕ್ಕುತ್ತಿಲ್ಲೇ ಹೇಳಿ ತೋಟವನ್ನೇ ಮಾರಿದಡ.
ಅವಂಗೆ ಇಬ್ರೆ ಮಕ್ಕೋ ಅದ. ಒಬ್ಬ ಅಮೆರಿಕಲ್ಲಿಪ್ಪದು; ಮಗಳು ಬೆಂಗಳೂರಿಲ್ಲಿ ದೊಡ್ಡ ಸಾಫ್ಟ್ ವರ್ ಕಂಪನಿಲಿ ಇಪ್ಪದು. ಇನ್ನು ಮಾವಂಗೆ ತೋಟಕ್ಕೆ ಇಲಿವೋ ಹೇಳಿರೆ ಕಳೆದ ವರ್ಷ ಬಂದ ಚಿಕನ್ ಗೂನ್ಯದ ಗೆಂಟು ಬೇನೆ ಇನ್ನು ಕಮ್ಮಿ ಆಗದ್ದೆ “ಇನ್ನು ಎನ್ನಂದ ಪೂರೆಶುತ್ತಿಲ್ಲೇ” ಹೇಳುವ ಸ್ಥಿತಿಗೆ ಬಂದು ತೋಟವ ಮಾರಿದ್ದೇ.
ಅವ ತೋಟದ ಕರೆಲಿ ಇಪ್ಪ ತೋಡಿಂಗೆ ಪ್ರತಿ ವರುಷವೂ  ಕಟ್ಟ ಕಟ್ಟುಸುಗು. ರಜೆಲಿ ಎಂಗೋ ಎಲ್ಲ ಹೋದರೆ ಮೊದಲು ಚಡ್ಡಿ ಬಿಚ್ಚಿ ಹಾಕಿ ಹಾರಿಗೊಂಡಿತ್ತದು ಅದೇ ಕಟ್ಟಕ್ಕೆ !

ನೀರು ಹಿಡುದು ಮಡುಗುವ ಕಟ್ಟ

ತೋಟ ಮಾರಿದ ಮೇಲೆ ಇನ್ನು ಕಟ್ಟ ಹಾಕುಲೇ ಆರುದೆ ಇಲ್ಲೆ . ಏಕೆ ಹೇದರೆ ಮೊನ್ನೆ ಅತ್ಲಾಗಿ ಹೊಪಗ ಆ ತೋಟ ತೆಕ್ಕೊಂಡ ಕೊಚ್ಚಿ ಕ್ರಿಸ್ಚನುಗೋ ಅದರಲ್ಲಿಪ್ಪ ಅದಕ್ಕೆ ಮರ ಪೂರಾ ಕಡುದು ತೆಗದು ರಬ್ಬರ್ ಗುಂಡಿ ಮಾಡಿಗೊಂಡಿತ್ತಿದವು. “ರಬ್ಬರಿಂಗೆ ಒಳ್ಳೆ ರೇಟಿದ್ದು ಭಾವ ” ಹೇಳಿ ಕೆಲಾಣ ಮನೆ ಅಣ್ಣ ಹೇಳಿದ್ದು ಅಪ್ಪು ಹೇಳಿ ಅನಿಸಿತ್ತೆನಗೆ!
ಇನ್ನು ಹೊಳಗೆ ಕಟ್ಟ ಹಾಕುದರ ಪ್ರತಿ ವರ್ಷ ತಪ್ಪದ್ದೆ ಪಳ್ಳತ್ತ ಡ್ಕಲ್ಲಿ ಸಂಣಗಿಪ್ಪಂದಲೂ ನೋಡಿಗೊಂಡಿತ್ತದಲ್ಲದ. ಊರ ಮಹನೀಯರು ಸೇರಿ ಪಂಚಾಯ್ತಿ ಆಪೀಸಿಂದ ಅರ್ದ ಪೈಸೆ  ಮತ್ತೆ ಇನ್ನರ್ಧ ಕಿಸೆಂದ ಹಾಕಿ ಕಟ್ಟ ಕಟ್ಟುಗು.
ಪ್ರತಿ ಒರ್ಷ ಹಕುಲೇ ಇಪ್ಪ ಕಾರಣ ಸಿಮೆಂಟಿನ ಕೆಲವು ಕಟ್ಟೆಗಳ ಕಟ್ಟಿಗೊಂದರೆ ಮಧ್ಯಕ್ಕೆ ಕಲ್ಲು ಮಣ್ಣು ಮರ ಸೇರ್ಸಿಗೊಂಡರೆ ಸಾಕನ್ನೇ  ಹೇಳ್ತದ್ದು ಕೆಲವರ ಅಭಿಮತ .
ಹೊಳೇಲಿ ನೀರು ತುಂಬಿದ್ದರಲ್ಲಿ ಹಾರುವಾಗ  ಇಪ್ಪ ಮಜವೇ ಬೇರೆ . ಈಜುಲೆ ಬಾರದ್ರೆ ಬಾಳೆ ದಂಡಿನ ಸೇರುಸಿ ಮಾಡಿದ “ಪಿಂಡಿ “ಲಿ ಹಾರುಲೇ ಭಾರಿ ಕೊಶಿ ಅವ್ತು.
ಈಗ ಸ್ಪ್ರಿಂಕ್ಲರ್ , ಡ್ರಿಪ್ಪು ಎಲ್ಲ ಬಂದ ಮೇಲೆ ಸಾಂಪ್ರದಾಯಿಕ ಕಟ್ಟ ಕಟ್ಟುವ  ಕ್ರಮ ಕಮ್ಮಿ ಆವ್ತಾ ಇದ್ದು. ಕೆಲಸಕ್ಕೆ ಜೆನ ಸಿಕ್ಕೆಕನ್ನೇ ಭಾವಾ!
ಎಲ್ಲಿ ನೋಡಿರೂ ಬೋರ್ ವೆಲ್ ಕೊರದೂ ಕೊರದೂ ನೀರಿಂಗೆ ಬೇಗ ತತ್ವಾರ ಬಪ್ಪಲೆ ಸುರು ಆಯಿದು.
ಆಮೇಲೆ ತೋಟಕ್ಕೆ ಇಳಿವ ಜವ್ವನರ ಸಂಖ್ಯೆಯೂ ದಿನೇ ದಿನೇ  ಕಮ್ಮಿ ಆವ್ತಾ ಇದ್ದು!
ಎಂತ ಇದ್ದರೂ ನೀರಿನ ಜೀವ ಸೆಲೆ ಕಟ್ಟ ನೋಡಿಯಪ್ಪಗಲೇ ಗೊಂತಪ್ಪದು. ನೋಡಲೇ ಅವಕಾಹ್ಸ ಇಲ್ಲದ್ದೊರು ಫಟಲ್ಲಿ ಆದರೂ ನೋಡಿಕ್ಕಿ ಆತೋ!

ವೇಣೂರಣ್ಣ

   

You may also like...

20 Responses

  1. shivakumar says:

    ಮಡಿಪ್ಪಿನ ಕಟ್ತ ನೆಂಪಾತು,ಅದರೊಟ್ಟಿಂಗೆ ಮಡಿಪ್ಪು ಮಹಲಿಂಗಜ್ಜನುದೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *