Oppanna.com

ಕಟ್ಟ ಕಟ್ಟಿ ನೋಡು..

ಬರದೋರು :   ವೇಣೂರಣ್ಣ    on   14/06/2010    20 ಒಪ್ಪಂಗೊ

ವೇಣೂರಣ್ಣ
ಬೇಸಗೆಲಿ ನೀರಿಂಗೆ ತತ್ವಾರ ಅಪ್ಪಲೆ ಸುರು ಅವ್ತು ಹೇಳ್ತ ಪೂರ್ವ ಸೂಚನೆ ಇಪ್ಪಗಳೇ  ತೋಡಿ೦ಗೋ , ಹೊಳಗೋ ಕಟ್ಟ ಕಟ್ಟುದು ಸಾಮಾನ್ಯ.
ತೋಟದ ಕರೆಲಿ ಇಪ್ಪ ತೋಡಿಲ್ಲಿ ಬಿಡು ನೀರು ಹರಿವ ಪ್ರಮಾಣ ಕಮ್ಮಿ  ಅಪ್ಪದು ಗೊಂತಪ್ಪಗಳೇ ಕಟ್ಟ ಕಟ್ಟುವ ಏರ್ಪಾಡು ಸುರು ಅವ್ತು.
ಕಟ್ಟಲ್ಲಿ ಸಂಗ್ರಹ ಆದ ನೀರಿನ ತೋಟದ ಓಳಿಗೆ ಒಡ್ಡಿ ಬಿಟ್ಟರೆ  ಪುರುಸೋತ್ತಪ್ಪಗ ನೀರು ಚೇಪಿಗೊಂದರೆ ಆತು. ತೋಟ ತಂಪಿರ್ತು.
ಕಟ್ಟ ಕಟ್ಟುಲೇ ಎರಡು ಬಗೆ ಇದ್ದು.
ಕಟ್ಟಂದಾಗಿ ಊರು ಹಸಿರಾತು

ಒಂದು ಸಣ್ಣ ತೋಡಿ೦ಗೆ ಆದರೆ ಕಟ್ಟುವ ರೀತಿಗೂ ದೊಡ್ಡ ಹೊಳಗೆ ಆದರೆ ಇನ್ನೊಂದು ರೀತಿ ಇದ್ದು.
ಕಟ್ಟ ಕಟ್ಟುವ ಮೊದಲು ತೊಡಿಂದ ಹೊಯಿಗೆ ಎಳವದೆ ದೊಡ್ಡ ಕೆಲಸ. ಕಟ್ಟ ಕಟ್ಟುವ ಪ್ರಮಾಣ ನೋಡಿಗೊಂದು ಇದುದೆ ವೆತ್ಯಾಸ ಇರ್ತು ಹೇಳುವೋ!
ಸಣ್ಣ ತೋಡಿ೦ಗೆ ಆದರೆ ತೋಡಿಂದ ಹೊಯಿಗೆ ಎಳದು ಅಡಿ ಸಮ ಮಾಡಿ ಮಣ್ಣು ಜೆರಿಷಿ ಹಾಕಿ ಕಲಸಿ , ಹದ best replica rolex watches ಬರಿಸಿ, ಆಮೇಲೆ ಹಂತ ಹಂತವಾಗಿ ಮಣ್ಣು ಕಲಸಿ ಮೆತ್ತುತಾ  ಕತ್ತವ ಏರ್ಸುತ್ತಾ ಹೊಯೇಕ್ಕಿದಾ.
ನೀರು ಎಷ್ಟು ನಿಲ್ಲುತ್ತು ಹೇಳ್ತದ್ದರ ನೋಡಿಗೊಂಡು, ಹೆಚ್ಚಾದ ನೀರು ಹರಿವಲೆ ಕಟ್ಟಕ್ಕೊಂದು “ಮಾದು” ಕೊಡೆಕ್ಕು. ಇಲ್ಲದ್ರೆ ಕಟ್ಟ ಹೊಟ್ಟುಗಿದಾ.
ಕಟ್ಟ ಕಟ್ಟಿದ ಮೇಲೆ ಆ ನೀರು  ತೋಟದ ಒಳಿಲ್ಲಿ ಒಡ್ಡುಗು. ನೀರು ಒಡ್ಡುವ ಮೊದಲೇ ಒಳಿಗೆ ಬಿದ್ದ ಅದಕ್ಕೆ ಎಲ್ಲ ಹೆರ್ಕಿ ಅಯೆಕ್ಕು. ಅಲ್ಲಿಯೇ ಬಿಟ್ಟರೆ ಅದು ಕೊಡಿಪ್ಪುಲೇ  ಸುರು ಅಕ್ಕು!
ಮೊನ್ನೆ ಪೆರ್ಲದ ಮಾವ ತೋಟದ ಕೆಲಸಕ್ಕೆ ಜೆನ ಸಿಕ್ಕುತ್ತಿಲ್ಲೇ ಹೇಳಿ ತೋಟವನ್ನೇ ಮಾರಿದಡ.
ಅವಂಗೆ ಇಬ್ರೆ ಮಕ್ಕೋ ಅದ. ಒಬ್ಬ ಅಮೆರಿಕಲ್ಲಿಪ್ಪದು; ಮಗಳು ಬೆಂಗಳೂರಿಲ್ಲಿ ದೊಡ್ಡ ಸಾಫ್ಟ್ ವರ್ ಕಂಪನಿಲಿ ಇಪ್ಪದು. ಇನ್ನು ಮಾವಂಗೆ ತೋಟಕ್ಕೆ ಇಲಿವೋ ಹೇಳಿರೆ ಕಳೆದ ವರ್ಷ ಬಂದ ಚಿಕನ್ ಗೂನ್ಯದ ಗೆಂಟು ಬೇನೆ ಇನ್ನು ಕಮ್ಮಿ ಆಗದ್ದೆ “ಇನ್ನು ಎನ್ನಂದ ಪೂರೆಶುತ್ತಿಲ್ಲೇ” ಹೇಳುವ ಸ್ಥಿತಿಗೆ ಬಂದು ತೋಟವ ಮಾರಿದ್ದೇ.
ಅವ ತೋಟದ ಕರೆಲಿ ಇಪ್ಪ ತೋಡಿಂಗೆ ಪ್ರತಿ ವರುಷವೂ  ಕಟ್ಟ ಕಟ್ಟುಸುಗು. ರಜೆಲಿ ಎಂಗೋ ಎಲ್ಲ ಹೋದರೆ ಮೊದಲು ಚಡ್ಡಿ ಬಿಚ್ಚಿ ಹಾಕಿ ಹಾರಿಗೊಂಡಿತ್ತದು ಅದೇ ಕಟ್ಟಕ್ಕೆ !
ನೀರು ಹಿಡುದು ಮಡುಗುವ ಕಟ್ಟ
ತೋಟ ಮಾರಿದ ಮೇಲೆ ಇನ್ನು ಕಟ್ಟ ಹಾಕುಲೇ ಆರುದೆ ಇಲ್ಲೆ . ಏಕೆ ಹೇದರೆ ಮೊನ್ನೆ ಅತ್ಲಾಗಿ ಹೊಪಗ ಆ ತೋಟ ತೆಕ್ಕೊಂಡ ಕೊಚ್ಚಿ ಕ್ರಿಸ್ಚನುಗೋ ಅದರಲ್ಲಿಪ್ಪ ಅದಕ್ಕೆ ಮರ ಪೂರಾ ಕಡುದು ತೆಗದು ರಬ್ಬರ್ ಗುಂಡಿ ಮಾಡಿಗೊಂಡಿತ್ತಿದವು. “ರಬ್ಬರಿಂಗೆ ಒಳ್ಳೆ ರೇಟಿದ್ದು ಭಾವ ” ಹೇಳಿ ಕೆಲಾಣ ಮನೆ ಅಣ್ಣ ಹೇಳಿದ್ದು ಅಪ್ಪು ಹೇಳಿ ಅನಿಸಿತ್ತೆನಗೆ!
ಇನ್ನು ಹೊಳಗೆ ಕಟ್ಟ ಹಾಕುದರ ಪ್ರತಿ ವರ್ಷ ತಪ್ಪದ್ದೆ ಪಳ್ಳತ್ತ ಡ್ಕಲ್ಲಿ ಸಂಣಗಿಪ್ಪಂದಲೂ ನೋಡಿಗೊಂಡಿತ್ತದಲ್ಲದ. ಊರ ಮಹನೀಯರು ಸೇರಿ ಪಂಚಾಯ್ತಿ ಆಪೀಸಿಂದ ಅರ್ದ ಪೈಸೆ  ಮತ್ತೆ ಇನ್ನರ್ಧ ಕಿಸೆಂದ ಹಾಕಿ ಕಟ್ಟ ಕಟ್ಟುಗು.
ಪ್ರತಿ ಒರ್ಷ ಹಕುಲೇ ಇಪ್ಪ ಕಾರಣ ಸಿಮೆಂಟಿನ ಕೆಲವು ಕಟ್ಟೆಗಳ ಕಟ್ಟಿಗೊಂದರೆ ಮಧ್ಯಕ್ಕೆ ಕಲ್ಲು ಮಣ್ಣು ಮರ ಸೇರ್ಸಿಗೊಂಡರೆ ಸಾಕನ್ನೇ  ಹೇಳ್ತದ್ದು ಕೆಲವರ ಅಭಿಮತ .
ಹೊಳೇಲಿ ನೀರು ತುಂಬಿದ್ದರಲ್ಲಿ ಹಾರುವಾಗ  ಇಪ್ಪ ಮಜವೇ ಬೇರೆ . ಈಜುಲೆ ಬಾರದ್ರೆ ಬಾಳೆ ದಂಡಿನ ಸೇರುಸಿ ಮಾಡಿದ “ಪಿಂಡಿ “ಲಿ ಹಾರುಲೇ ಭಾರಿ ಕೊಶಿ ಅವ್ತು.
ಈಗ ಸ್ಪ್ರಿಂಕ್ಲರ್ , ಡ್ರಿಪ್ಪು ಎಲ್ಲ ಬಂದ ಮೇಲೆ ಸಾಂಪ್ರದಾಯಿಕ ಕಟ್ಟ ಕಟ್ಟುವ  ಕ್ರಮ ಕಮ್ಮಿ ಆವ್ತಾ ಇದ್ದು. ಕೆಲಸಕ್ಕೆ ಜೆನ ಸಿಕ್ಕೆಕನ್ನೇ ಭಾವಾ!
ಎಲ್ಲಿ ನೋಡಿರೂ ಬೋರ್ ವೆಲ್ ಕೊರದೂ ಕೊರದೂ ನೀರಿಂಗೆ ಬೇಗ ತತ್ವಾರ ಬಪ್ಪಲೆ ಸುರು ಆಯಿದು.
ಆಮೇಲೆ ತೋಟಕ್ಕೆ ಇಳಿವ ಜವ್ವನರ ಸಂಖ್ಯೆಯೂ ದಿನೇ ದಿನೇ  ಕಮ್ಮಿ ಆವ್ತಾ ಇದ್ದು!
ಎಂತ ಇದ್ದರೂ ನೀರಿನ ಜೀವ ಸೆಲೆ ಕಟ್ಟ ನೋಡಿಯಪ್ಪಗಲೇ ಗೊಂತಪ್ಪದು. ನೋಡಲೇ ಅವಕಾಹ್ಸ ಇಲ್ಲದ್ದೊರು ಫಟಲ್ಲಿ ಆದರೂ ನೋಡಿಕ್ಕಿ ಆತೋ!

20 thoughts on “ಕಟ್ಟ ಕಟ್ಟಿ ನೋಡು..

  1. ಮಡಿಪ್ಪಿನ ಕಟ್ತ ನೆಂಪಾತು,ಅದರೊಟ್ಟಿಂಗೆ ಮಡಿಪ್ಪು ಮಹಲಿಂಗಜ್ಜನುದೆ.

  2. ಹೆಚ್ಚಿನಂಶ ಘಟ್ಟದ ಮೇಲೆಯೇ ! ಬೆಂಗಳೂರಿನ್ಗೆ ಹತ್ತರೆ ಅಯೆಕ್ಕನ್ನೇ ? ಎರಡು ಲೋಡು ಜೆನ ಕಮ್ಮಿಲಿ ಬೇಕಕ್ಕು ಕಾಣುತ್ತೆನಗೆ ! ಗೆದ್ದ ಮೇಲೆ ಆದರೆ ನೋಟಿನ ಕಟ್ಟ ಕಟ್ಟುಲೇ ನೀನೊಬ್ಬನೇ ಸಾಕು ಅಲ್ಲದೋ ? 🙂

    1. ಅಕ್ಕಕ್ಕು.. ಗುಣಾಜೆ ಮಾಣಿಗೆ ಹೇಳಿರೆ ನಿಮಿಷಲ್ಲಿ ಜೆನ ಮಾಡುಗು.. ಯಡ್ಯೂರಪ್ಪನ ಸಮಾವೇಶಕ್ಕೆ ನಾಕು ಲೋಡು ಜೆನ ಮಾಡಿದ್ದ. ಎಂತ ಹೆದರಿಕೆ ಇಲ್ಲೆ… ಪಾಲು ಬೇಕನ್ನೆ…

    1. ಬಾವಾ ನಿಂಗೊಗೆ ಇಲ್ಲೆ ಹೇಳ್ಳೆ ಅವುತ್ತಾ.. ಬೈಲಿನ ಎಲ್ಲರ ಕರ್ಕೊಂಡು ಬತ್ತೆ ಪ್ರಚಾರಕ್ಕೆ.. ವೇಣೂರಿಲಿಯೊ.. ಘಟ್ಟದ ಮೇಲೆಯೋ

  3. Panchayathi vathinda katta katti engala thota kochi hoidu. Iga kattavu ille thotallithidda kelavu marangalu ille.

    1. ಕಾವೆರಿಕಾನ ಬಾವಂಗೆ ನಮಸ್ಕಾರ
      ನಿಂಗ ತಲೆ ಬೆಶಿ ಮಾಡಿರೆ ಹೇಂಗೆ…. ಬಪ್ಪ ಸರ್ತಿ ಪಂಚಾಯ್ತು ಓಟಿಂಗೆ ನಿಲ್ಲಿ ಎಲ್ಲ ಸರಿ ಮಾಡುಲಕ್ಕು… ಬೇಕಾರೆ ಗುಣಾಜೆ ಮಾಣಿಗೆ ಹೇಳಿ ಸೀಟು ಕೊಡ್ಸುತ್ತೆ..

  4. ಅಪ್ಪಚ್ಚಿಗೆ ಒಳ್ಳೆತ ಅನುಭವ ಇದ್ದದಾ 🙂

  5. {
    ರಜೆಲಿ ಎಂಗೋ ಎಲ್ಲ ಹೋದರೆ ಮೊದಲು ಚಡ್ಡಿ ಬಿಚ್ಚಿ ಹಾಕಿ ಹಾರಿಗೊಂಡಿತ್ತದು ಅದೇ ಕಟ್ಟಕ್ಕೆ
    }
    ವೇಣೂರಣ್ಣಾ, ಎದ್ದಿಕ್ಕಿ ಬಪ್ಪಗ ಮರದ್ದಿಲ್ಲೆನ್ನೇ! 😉

    1. ಅಮೆರಿಕಂದ ತಂದದು ಅಲ್ಲದ? ಮರದ್ದು ಇರ. ಬದಲಿದ್ದು ಇಪ್ಪಲೂ ಸಾಕು 🙂

  6. ಕಟ್ಟ ಹೇಳುವಾಗ ಕಾವೇರಿಕಾನ ಕಟ್ಟಲ್ಲಿ ಸಣ್ಣ ಇಪ್ಪಗ ಸೊಕ್ಕಿದ್ದು ನೆಂಪು ಬತ್ತು.
    ಕಟ್ಟಂದಾಗಿ ಭೂಮಿಲಿ ನೀರಿನ ಲೆವೆಲ್ ಏರುವದು ಮತ್ತೆ ಮಣ್ಣಿಲ್ಲಿ ನೀರ ಪಸೆ ಉಳಿವದು ಎಲ್ಲಾ ಪ್ರಯೋಜನಂಗೊ ಇದ್ದು. ಕಟ್ಟಂಗಳ ವಿಚಾರವಾಗಿ “ಏತಡ್ಕ ಚಂದ್ರಶೇಖರ” ಇವರ ಪ್ರಯತ್ನಂಗೊ ಕೂಡಾ ನೆಂಪು ಆತು.

    1. ಎಂಗಳ ಕಾವೇರಿಕಾನ ಮಾಣಿಗೆ ಕಟ್ಟ ಹೇಳಿತ್ತುಕಂಡ್ರೆ ಹೋಳಿಗೆಕಟ್ಟ ಮಾಂತ್ರ ಅರಡಿಗು, ಅಷ್ಟೇ 😉

      1. ಈಗ ಅಲ್ಲಿ ಕಟ್ಟ ಕಟ್ಟದ್ದ ಕಾರಣ, ಹೋಳಿಗೆ ಕಟ್ಟವೇ ನೆಂಪು ಅಕ್ಕಷ್ಟೆ.

      2. “ಸಾರಡಿ ಕಟ್ಟ” ನೆಂಪು ಆಗ ಆದಿಕ್ಕು ಅಲ್ಲದಾ? 🙂

        1. ಆಗಪ್ಪಾ ಆಗ!
          ಆ ಕಟ್ಟಲ್ಲಿ ಈಗ ನೀರೇ ಇಲ್ಲೆ..
          ಎಡಪ್ಪಾಡಿ ಸಟ್ಟುಮುಡಿಗೆ ಅಪ್ಪಗಳೇ ಮುಗುದ್ದಲ್ಲದೋ – !!

  7. ಒಪ್ಪಣ್ಣ ಹೇಳಿದ ಹಾಂಗೆ ವೇಣೂರಣ್ಣ ..,ಯಕ್ಷಗಾನದ ಅರ್ತ ಹೇಳ್ತ ನಮೂನೆ ನಿಜ ಜೀವನದ ಪ್ರಸಂಗಂಗಳ ಶುದ್ದಿ ಹೇಳ್ತದು ಅಪ್ಪು ಹೇಳಿ ಅನಿಸಿತ್ತಿದಾ… ಕಟ್ಟ ಕಟ್ಟುದರ ಬಗ್ಗೆ ಭಾರೀ ಚೆಂದಲ್ಲಿ ವಿವರುಸಿ ಬರದ್ದವು.. .. ಎಲ್ಲೋರಿಂಗೂ ಒಂದರಿ ಕಟ್ಟದ ಕರೆಂಗೆ ಹೋಗಿ ಬಂದ ಹಾಂಗೆ ಆದಿಕ್ಕು… ವೇಣೂರಣ್ಣ ಬಲಿಪ್ಪಜ್ಜನ ದೇವಿಮಹಾತ್ಮೆಯ ಪ್ರಸಂಗವ ಪುಸ್ತಕ ಮಾಡಿ ಎಲ್ಲೊರ ಕೈಲಿ ಬೆನ್ನಿಂಗೆ ಹೆಟ್ಟುಸಿಗೊಂಡು ಇಲ್ಲಿಗೆ ಬಂದ ಕಾರಣ ಅವಕ್ಕೆ ಬೆನ್ನು ಗಟ್ಟಿ ಆದಿಕ್ಕು.. ಹಾಂಗಾಗಿ ಅವಕ್ಕೆ ಅದು ತೊಂದರೆ ಆಗ… ವೇಣೂರಣ್ಣನ ಹೊಸ ಹೊಸ ಪ್ರಸಂಗಂಗ, ಅರ್ತಂಗ ಮುಂದುವರಿಯಲಿ…

  8. ಅನು ಬೆನ್ದಕಾಳೂರಿಲಿ ಇಪ್ಪದು, ಊರಿಲಿ ಅನುದೇ ಅಪ್ಪಂದೆ ಇ ಸರ್ತಿ ಒಂದು ಕಟ್ಟ ಹಾಕಿತ್ತಿದ್ದೆಯ, ಎನ್ಗೊಗೆ ತುಂಬಾ ಪ್ರಯೋಜನ ಅಯ್ದು. ಮೊನ್ನೆ ಅಪ್ಪ ಹೇಳಿದವು, ಮಳೆಗೆ ನಮ್ಮ ಕಟ್ಟ ಒಡದ್ದು ಹೇಳಿ.

  9. ಸಣ್ಣ ಇಪ್ಪಗ ಅಪ್ಪ ಅಮ್ಮನ ಕೈ ಹಿಡ್ಕೊಂಡು ಕಟ್ಟ ದಾಂಟಿದ್ದು ನೆಂಪಾವ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×