ನಾಳಂಗೆ ಜೆನ ಎಷ್ಟಕ್ಕು…..?

ಮನೇಲಿ ಮದುವೆಯೋ , ಉಪ್ಪಿನಾನವೋ  ಎಂಥದೇ ಶುಭ ಕಾರ್ಯಕ್ರಮ ಇರಲಿ ಮುನ್ನಾಣ  ದಿನ ಅತ್ತಾಳದ  ಗೆಣವತಿ ಪೂಜೆ ಆದ ಕೂಡ್ಲೇ ಬ್ರಹ್ಮಾರ್ಪಣ  ಬಿಟ್ಟಿಕ್ಕಿ ಮನೆ ಯೆಜಮಾನ ನಾಳೆ ಅಪ್ಪ ಕಾರ್ಯಕ್ರಮಕ್ಕೆ ಜೆನ ಎಷ್ಟಕ್ಕು ಹೇಳ್ತ ಕುತೂಹಲವ ತಣಿಸುಲೆ ಇಪ್ಪ  ಕ್ರಿಯೆಯೇ  ಇದು .

ಪರಕ್ಕಜೆ ಬಟ್ಟಮಾವನ ಪೂಜೆ ಆದ ಮತ್ತೆ ಅಡಿಗೆಯಣ್ಣ ಬಾಳೆಕಾಯಿ ಕೊರದ್ದು

ಸಾಮಾನ್ಯವಾಗಿ ಮೇಲಡಿಗೆಯ  ಭಾವ  ಕಜಿಪ್ಪನೋ , ಅಮುಂಡ ಬಾಳೆ ಕಾಯಿಯ ಉದ್ದಕ್ಕೂ ಅಡ್ಡಕ್ಕೂ ಕೊರದು ತಾಂಬಾಣ  ಪಾತ್ರಲ್ಲಿ ಹಾಕಿ  ಕೈ ಮುಗುದಪ್ಪಗ  ಎಷ್ಟು ಮೊಗಚ್ಚಿ ಬಿದ್ದತ್ತು ಹೇಳ್ತದ್ದರ
ಮನೆ ಯೆಜಮಾನ ಲೆಕ್ಕ ಹಾಕಿ,
ಮೊಗಚ್ಚಿ ಬಿದ್ದ ಸಂಖ್ಯೆಯುದೆ ಯೆಜಮಾನ ಮನಸ್ಸಿಲ್ಲಿ ಜಾನ್ಸಿಗೊಂಡ (ಏಕೆ ಹೇಳಿರೆ ಎಷ್ಟು ಜೆನಕ್ಕೆ ಕಾಗದ ಕೊತ್ತಿದು ಹೇಳ್ತದ್ದು ಅವಂಗೆ ಮಾತ್ರ ಸರೀ ಗೊಂತಿಪ್ಪದನ್ನೇ ! )
ಸಂಖ್ಯೆಯ ಗುಣಲಬ್ದ ಮರುದಿನ ಒಟ್ಟು ಎಷ್ಟು ಜನ ಅಕ್ಕು ಹೇಳ್ತದ್ದರ ತಿಳಿಸುತ್ತು ಹೇಳ್ತದ್ದು  ನಮ್ಮ ನಂಬಿಕೆ .
ಇದರಲ್ಲಿ ನಮ್ಮವರ ಲೆಕ್ಕ ಮಾತ್ರ ಬಪ್ಪದು ಹೇಳಿ ಕಾಣುತ್ತು !
ಹೆರಾಣವಕ್ಕೆ ಬಫೆ ಹೆಂಗೂ ಮಾಡ್ತನ್ನೇ!!
ಅಲ್ಲದ ಭಾವ ?

ವೇಣೂರಣ್ಣ

   

You may also like...

12 Responses

 1. Suvarnini Konale says:

  ಇದು ಹೊಸ ವಿಷಯ(ಎನಗೆ) !! ಎನಗೆ ಗೊಂತೇ ಇತ್ತಿಲ್ಲೆ !!

 2. ಓಹೋ ! ಅಪ್ಪಾ ? ಇದು ವಿಶೇಷವೇ ! 😀

 3. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಮುನ್ನಾ ದಿನ ಇರುಳು ಗಣಪತಿ ಪೂಜೆ ಮಾಡಿ ಬಾಳೆಕಾಯಿ ಕೊರದು ಜೆನ ಲೆಕ್ಕ ಮಾಡುವ ಕ್ರಮ ಮೊದಲಿಂಗೆ ಇತ್ತಿದ್ದು. ಹಾಂಗೆ ಕೊರದು ಹಾಕುವದು ಮೇಲಡಿಗೆಯವಂಗೆ ಇಪ್ಪ ಮರ್ಯಾದೆ. ಒಂದು ಲೆಕ್ಕಲ್ಲಿ ಬೆಂದಿಗೆ ಕೊರವಲೆ ಮುಹೂರ್ತ ಮಾಡಿದ ಹಾಂಗೇ. ಈ ಬಾಳೆಕಾಯಿಯ ತುಂಡುಗಳ ಮರುದಿನದ ಅಡಿಗೆಯ ತರಕಾರಿ ಒಟ್ಟಿಂಗೆ ಹಾಕುತ್ತವು. ಇದರ ದೇವರ ಪ್ರಸಾದ ಹೇಳಿ ಕೂಡಾ ತಿಳ್ಕೊಳ್ತವು. ಇತ್ತೀಚೆಗೆ ಹಾಲ್ ಗಳಲ್ಲಿ ಜೆಂಬ್ರಂಗೊ ಸುರು ಆದ ಮತ್ತೆ ಈ ಕ್ರಮ ರಜ ಕಮ್ಮಿಯೇ ಅಯಿದು.

 4. ಅಪ್ಪು . ಇತ್ತೀಚೆಗೆ ಹಾಲ್ ಗಳಲ್ಲಿ ಜೆಂಬ್ರಂಗೊ ಸುರು ಆದ ಮತ್ತೆ
  ಸುಮಾರು ಕ್ರಮಂಗೋ ಎಲ್ಲ ಹಳ್ಳ ಹತ್ತಿದ್ದು . ಬಟ್ಟಮಾವ ಮರುದಿನ ಉದಿಯಪ್ಪಗ ಬೇಗ ಬತ್ತೆ ಹೇಳಿಕ್ಕಿ
  ಎಸ್ಕೇಪ್ ಆದರೆ ಮತ್ತೆ ಯಾವ ಕಾರ್ಯಕ್ರಮವೂ ಇರ್ತಿಲ್ಲೆ. ದಿಬ್ಬಣ ಹೆರಡುಸುವಾಗ ಮಾಡುವ ಗೆಣವತಿ ಪೂಜೆಲಿ ಪ್ರಾರ್ಥನೆ ಮಾಡಿಗೊಂಬ ಕ್ರಮವೂ ಈಗ ಮಾಯ ಆವ್ತಾ ಇದ್ದು .

  ಅಡೂರು , ಮಧೂರು , ಕಾವು ,ಕಣ್ಯಾರಕ್ಕೆ ಊರ ದೇವಸ್ಥಾನಕ್ಕೆ , ದೈವ ದೇವರಿಂಗೆ ಇಂತಿಂಥ ಸೇವೆ ಮಾಡ್ಸುತ್ತೆ ಹೇಳಿ ಮನೆ ಯೆಜಮಾನ ಪ್ರಾರ್ಥನೆ ಮಾಡುವ ಕ್ರಮವೂ “ಬಟ್ಟ ಮಾವ ” ಇಲ್ಲದ್ದ ಕಾರಣ ಇಲ್ಲೆ !

  ಹೀಂಗೆ ಆದರೆ ಮುಂದೆ “ಕಾಲಮಿತಿ ಯಕ್ಷಗಾನದ ಹಾಂಗೆ ” ಕಾಲಮಿತಿ ಮದುವೆ ” ಅಪ್ಪಲಿದ್ದು !

  ಉದಿಯಪ್ಪಗ ತಿಂಡಿಗೆ ಎಲ್ಲರೂ ಬಪ್ಪದು ಮದ್ಯಾನ ೧೨.೩೦ರ ಒಳ ಎಲ್ಲ ಕಾರ್ಯಕ್ರಮ ಮುಗುದು ಉಂಡಿಕ್ಕಿ ಬಸ್ ಹತ್ತುದೆ 🙂

  ಮೊನ್ನೆ ವಿಟ್ಳಲ್ಲಿ ಒಂದು ಮದುವೇಲಿ ಹೀಂಗೆ ಆಯಿದು ! ಮದುಮ್ಮಾಯ ಮದುಮ್ಮಾಳು ಮದ್ಯಾನ ಎರಡನೆ ಹಂತಿ ಎಳೆಕ್ಕಾರೆ ಕಾರ್ ಹತ್ತಿ ಬೆಂಗಳೂರಿನ್ಗೆ ಹೆರಟದೆ !

  ಎಂತ ಹೇಳ್ತಿ ಇದಕ್ಕೆ ?

  • ಗಣೇಶ ಹಾಲುಮಜಲು says:

   ಬಹುಶಃ ನಮ್ಮಲ್ಲಿ ಈಗ, ಬರೇ ಸಂಪ್ರದಾಯ ಪಾಲಿಸುವ ನೆಪ ಆವ್ತಾ ಇದ್ದು . ಎಲ್ಲೋರಿಂಗುದೆ ಅರ್ಜೆಂಟು. ಕೈಗಾರಿಕಾ ಕ್ರಾಂತಿಂದ ನಾವು ಪ್ರತಿ ದಿನ ಬದುಕ್ಕುತ್ತ ಇಲ್ಲೇ….. ಬದಲಾಗಿ ಪ್ರತಿದಿನ ಸಾಯ್ತಾ ಇದ್ದೆಯ!!! ಬದುಕುಲೆ ಹೊಸತ್ತಾಗಿ ಹೇಳಿ ಕೊಡೆಕ್ಕು !!!!

   • ಸತ್ಯ .. ತಿಂಬ ಆಹಾರಂದ ಹಿಡುದು ಎಲ್ಲವೂ ವಿಷಮಯ. ಇನ್ನು ಒಳ್ಳೆ ಯೋಚನೆ ಮಾಡ್ಲೆ ಪುರುಸೋತ್ತಿಲ್ಲೇ !
    ಓಡು ಮಗಾ ಓಡು ಹೇಳಿ ಅಯಿದು ಪರಿಸ್ಥಿತಿ . ಎಲ್ಲಿಗೆ ಓಡು ? ಅದು ಗೊಂತಿಲ್ಲೇ !:D

 5. ಶ್ರೀದೇವಿ ವಿಶ್ವನಾಥ್ says:

  ನಮ್ಮ ಕ್ರಮಲ್ಲಿ ಬಟ್ಟ ಮಾವಂಗೆ ಕೊಡುವಷ್ಟೇ ಮರ್ಯಾದಿ ನಾವು ಅಡಿಗೆಯಣ್ಣನ್ದ್ರಿನ್ಗೂ ಕೊಡ್ತು.. ಕಾರ್ಯಕ್ರಮದ ಸಂಕಲ್ಪ ಅಪ್ಪಗ ಹಿರಿಯೋರ ಕಾಲು ಹಿಡಿವಾಗ ಅವರನ್ನೂ ಸೇರ್ಸಿಗೊಳ್ತು.. ಹಾಂಗೆ ಮುನ್ನಾಣ ದಿನ ಈ ದೇವರ ಎದುರು ಕೊರೆತ್ತ ಕಾರ್ಯಕ್ರಮಲ್ಲಿ ಬಂದ ಲೆಕ್ಕ ಸರಿಯೇ ಇರ್ತು ಅಲ್ಲದಾ?

 6. subrahmanya bhat says:

  ನಮ್ಮ ಮನೆ ಕಾರ್ಯಕ್ರಮದ ಯಶಸ್ಸಿಂಗೆ ಶ್ರಮಿಸುವ ಎಲ್ಲೋರನ್ನು ನಾವು ಸಮಾನವಾಗಿಯೇ ಗೌರವಿಸುತ್ತು . ಎನಗೆ ಅನಿಸಿದ ಹಾಂಗೆ ಅದು ನಮ್ಮ ಶ್ರದ್ದೆಯ ನಂಬಿಕೆ. ಅದು ಸರಿ ಅಪ್ಪಲೂ ಸಾಕು ಕೆಲವೊಂದರಿ ತಪ್ಪುಲೂ ಸಾಕು. ಆದರೆ ನಾವು ನಡೆಸುವ ಕಾರ್ಯಕ್ರಮ ಲಾಯಕ್ಕಲ್ಲಿ ನೆರವೇರುವ ಹಾಂಗೆ ದೇವರಲ್ಲಿ ಬೇಡಿ ಕೊಂಬಾಗ ನಡೆಸುವ ವಿಧಿ ಕ್ರಿಯೇಲಿ ಇದೂ ಒಂದು ಮುಖ್ಯ ವಿಚಾರವೇ ಹೇಳ್ತದ್ದು ಎನ್ನ ಅನಿಸಿಕೆ.

 7. ಪಾಕ ಯಜ್ಞಕ್ಕೆ ನಾಂದಿ….

 8. Pallajjana pulli says:

  ಎನ್ನ ಅಣ್ಣನ ಮದುವೆಲಿ, ಮಿತ್ತೂರು ಬಟ್ಟಮಾವಂದೆ, ಅಡುಗೆಯ ಮಾವಂದೆ ಸೇರಿ ಮಾಡಿದ ಲೆಕ್ಕ ಪಕ್ಕ ಅಯ್ದು. ನಾವು ನಮ್ಮ ಸಾಂಪ್ರದಾಯಕ್ಕೆ ಸರಿಯಾದ ಆಚರಣೆ ಮಾಡಕ್ಕು

 9. subrahmanya bhat says:

  ಸತ್ಯ. ನಾವು ನಮ್ಮ ಸಾಂಪ್ರದಾಯಕ್ಕೆ ಸರಿಯಾದ ಆಚರಣೆ ಶ್ರದ್ಧೆಲಿ ಮಾಡೆಕ್ಕು

 10. shivakumar says:

  ಪೇಟೆ ತರಕಾರಿ ಉಪಯೊಗಿಸುತ್ತರಿಂದಾಗಿ ಕೊರವಲೆ ಬಾಳೆಕಾಯಿಯೆ ಕೆಲ ಅನುಪತ್ಯಲ್ಲಿ ಇರುತ್ತಿಲ್ಲೆ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *