ವೇಣೂರಣ್ಣ ಶುದ್ದಿ ಹೇಳಿರೆ ಆಟದ ಅರ್ತದ ಹಾಂಗೆ!!

ವೇಣೂರಣ್ಣನ ಬಗ್ಗೆ ಅದಾಗಲೇ ಮಾತಾಡಿದ್ದು ನಾವು.
ಅಪ್ಪಲೆ ಗಟ್ಟದ ಮೇಗೆ ಎಲ್ಲಿಯೋ ದೊಡ್ಡ ಕೆಲಸಲ್ಲಿ ಇದ್ದವು, ಪೇಂಟಂಗಿ ಹಾಕುತ್ತ ನಮುನೆಯ ಕೆಲಸ.
ಊರಿಂಗೆ ಬಂದರೆ ಊರವು ಆಗಿಯೊಂಡು, ಆಟಲ್ಲಿ ಅರ್ತ ಹೇಳ್ತದು ಅವರ ವಾಡಿಕೆ.
ಬಲಿಪ್ಪಜ್ಜನ ದೇವಿಮಹಾತ್ಮೆಯ ಪ್ರಸಂಗವ ಪುಸ್ತಕ ಮಾಡಿ ಎಲ್ಲೊರ ಕೈಲಿ ಬೆನ್ನಿಂಗೆ ಹೆಟ್ಟುಸಿಗೊಂಡು ರಜ್ಜ ತೋರ ಆಯಿದವು!

ಈ ವೇಣೂರಣ್ಣ ನಮ್ಮ ಬೈಲಿಲಿ ಶುದ್ದಿ ಹೇಳ್ತ ಸಂಗತಿ ಗೊಂತಿದ್ದೋ?

ವೇಣೂರಣ್ಣಂಗೆ, ಪಟ ತೆಗೆತ್ತ ಹಳೆಮನೆಅಣ್ಣನ ಮೇಗೆ ಪಿಸುರು ಬಂದದು!

ಮೊನ್ನೆ – ಅಮೈ ಉಪ್ನಾನದ ಮರದಿನ ಸಿಕ್ಕಿದವು, ಪೇಟೆಯ ದೊಡ್ಡ ಮಾರ್ಗದ ಕರೆಲಿ – ಪಕ್ಕನೆ ಸಿಕ್ಕಿಅಪ್ಪಗ ’ಭಲ್ಲಿರೇನಯ್ಯ’ ಹೇಳಿ ಕೇಳಿದೆ –
(ನಾವು ನಾವೇ ಆದರೆ ಏನೂ – ಕೇಳ್ತು, ವೇಣೂರಣ್ಣ ಸಿಕ್ಕಿಅಪ್ಪಗ ಬಲ್ಲಿರೇನಯ್ಯ ಕೇಳುದು ಎಂಗೊ)
ಬೈಲಿಂಗೆ ಬಂದು ಶುದ್ದಿ ಹೇಳ್ತದರ ಬಗ್ಗೆ ಮಾತಾಡುವಗ ಒಪ್ಪಿಯೇ ಬಿಟ್ಟವು.

ಅವು ಮಾತಾಡಿರೇ ಒಂದು ಚೆಂದ, ಅದರ ಕೇಳುದು ಮತ್ತೂ ಚೆಂದ, ಅದು ಅರ್ತ ಆದರೆ ಇನ್ನೂ ಚೆಂದ ಇರ್ತು!
ಯಕ್ಷಗಾನದ ಅರ್ತ ಹೇಳ್ತದು ನೆಂಪಿಂಗೆ ಬತ್ತು -ಅವು ಮಾತಾಡ್ಳೆ ಸುರುಮಾಡಿರೆ.
ಅದಿರಳಿ, ಆನು ಹೀಂಗೆ ಹೇಳಿದೆ ಹೇಳಿ ಅವರತ್ರೆ ಹೇಳಿಕ್ಕೆಡಿ. 😉
ಯೇವದೇ ವಸ್ತು ವಿಶಯ ಆದರೂ ಅದು ಆಮೂಲಾಗ್ರ ಅರ್ತ ಅಪ್ಪ ಹಾಂಗೆ ಬಿಡುಸಿ ಬಿಡುಸಿ ಹೇಳ್ತದು ಅವರ ಕ್ರಮ.

ಹಾಂಗೆ ಬೈಲಿಂಗೆ ಬಂದು ಸಂತೋಷಲ್ಲಿ ಶುದ್ದಿ ಹೇಳ್ತವು.
ನಿಜಜೀವನಲ್ಲಿ ಕಾಂಬಂತ ’ಪ್ರಸಂಗಂಗಳ’ ಬಗ್ಗೆ ಶುದ್ದಿ ಹೇಳ್ತೆ – ಹೇಳಿದವು. ಅಕ್ಕು, ಸಂತೋಷ – ಹೇಳಿದೆ ಆನು!
ನಾವೆಲ್ಲರೂ ಓದಿ, ಶುದ್ದಿಗೊಕ್ಕೆ ಒಪ್ಪಕೊಟ್ಟು ಪ್ರೋತ್ಸಾಹಿಸೇಕು ಹೇಳ್ತದು ನಮ್ಮ ಕೋರಿಕೆ.
~
ಒಪ್ಪಣ್ಣ

ವೇಣೂರಣ್ಣ ಹೇಳ್ತ ಆಟದ ಶುದ್ದಿಗೊ ’ಭಲ್ಲಿರೇನಯ್ಯ’ ಹೇಳ್ತ ಪುಟಲ್ಲಿದೇ ಇದ್ದು, ಪುರುಸೋತಿಲಿ ಓದಿಕ್ಕಿ, ಆತೋ?

http://ballirenayya.blogspot.com

ಇವು ಇಲ್ಲಿ ಹೇಳ್ತ ಶುದ್ದಿಗೊ “ಭಲ್ಲಿರೇನಯ್ಯ”  ಅಂಕಣಲ್ಲಿ ಸದ್ಯಲ್ಲೇ ಸುರುಆವುತ್ತು!
~
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

2 Responses

  1. Ashoka says:

    Venooranna
    Shuddigokke kaaytaa idde

  2. lana says:

    venoorannana bagge layka baraddi… ivaratre eshtu sangraha iddu heli baraddilli…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *