Oppanna.com

ಯಕ್ಷ ಗೋವಿಂದನ ಅರ್ಥವೈಭವ..

ಬರದೋರು :   ವೇಣೂರಣ್ಣ    on   04/10/2011    15 ಒಪ್ಪಂಗೊ

ವೇಣೂರಣ್ಣ

ಯಕ್ಷಗಾನ ಕ್ಷೇತ್ರಕ್ಕೆ ಹವ್ಯಕರ ಕೊಡುಗೆ ಅಪಾರ. ಹಾಂಗೆ ಹೇಳುತ್ತರೆ “ಭಟ್ರುಗಳೂ ಶೆಟ್ರುಗಳೂ ಇಲ್ಲದ್ರೆ ಆಟವೇ ಇಲ್ಲೆ ! ” ಹೇಳ್ತ ಮಾತು ನೂರಕ್ಕೆ ನೂರು ಸತ್ಯ .
ಯಕ್ಷಗಾನ ಪಿತಾಮಹ ಕುಂಬ್ಳೆ ಪಾರ್ತಿಸುಬ್ಬನ ಸೀಮೆಂದ ಅದೆಷ್ಟೋ ಕಲಾವಿದರು ಪ್ರಸಿದ್ಧರಾಯಿದವು . ಅದರಲ್ಲಿ ಸಿಂಹ ಪಾಲು ನಮ್ಮ ಹವ್ಯಕರದ್ದು ಹೇಳುದೆ ನವಗೆಲ್ಲ ಹೆಮ್ಮೆ!
ಜಾನಪದ ಆರಾಧನಾ ಕಲೆಯಾದ ಯಕ್ಷಗಾನ ಇಂದು ದೇಶ ವಿದೇಶಲ್ಲಿ ಮಾನ್ಯತೆ ಪಡದ್ದು . ನಮ್ಮ ಶೇಣಿ ಅಜ್ಜ ಯಕ್ಷಗಾನಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರು ವಿಶ್ವವಿದ್ಯಾಲಯಂದ ಗೌರವ ಡಾಕ್ಟರೇಟ್ ಪಡದ್ದವು.
ಹವ್ಯಕ ಕಲಾವಿದರ ಒಬ್ಬೊಬ್ಬನ ಸಾಧನೆಯೂ ಅನನ್ಯವೆ. ಯಕ್ಷಗಾನ ಶಕ ಪುರುಷರಲ್ಲಿ ನಮ್ಮವ್ವೆ ಹೆಚ್ಚು ಜೆನ ಹೇಳುದು ನಾವೆಲ್ಲ ಗರ್ವ ಪಡೆಕ್ಕಾದ ವಿಚಾರ .

ಕಳೆದ ವಾರ ಉಜಿರೆಯ ಜನಾರ್ಧನ ಸ್ವಾಮೀ ದೇವಸ್ಥಾನ , ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ , ಕುಬಣೂರು ಶ್ರೀಧರ ರಾಯರ ಸಾರಥ್ಯದ ಯಕ್ಷ ಪ್ರಭಾ ಮಾಸ ಪತ್ರಿಕೆಯ ಜಂಟಿ ಆಶ್ರಯಲ್ಲಿ “ದಶಾವತಾರಿ ” ಕೆ. ಗೋವಿಂದ ಭಟ್ ಸರಣಿ ಅರ್ಥ ವೈಭವ ಆಯೋಜಿಸಿತ್ತಿದ್ದವು .
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂತು . ಈ ಕಾರ್ಯಕ್ರಮಲ್ಲಿ ಕೆ. ಗೋವಿಂದ ಭಟ್ರ ಅತ್ಯಂತ ಪ್ರಸಿದ್ಧಿ ಪಡೆದ ಪ್ರಾತಿನಿಧಿಕ ಪಾತ್ರ೦ಗೊ ಚೆಂದಕೆ ಅನಾವರಣ ಗೊಂಡತ್ತು .
ಶ್ರೀರಾಮ , ಕೌಶಿಕ , ಭಸ್ಮಾಸುರ ,ಹಿರಣ್ಯ ಕಶಿಪು, ಶೂರ್ಪನಖಿ , ಇಂದ್ರಜಿತು , ಭೀಷ್ಮ , ಕೌರವ ಹೀಂಗೆ ಬೇರೆ ಬೇರೆ ಸ್ವಾಭಾವಂಗಳ ಎಂಟು ಪಾತ್ರ ಚಿತ್ರಣ ಒಂದು ವಾರದ ಸಪ್ತಾಹಲ್ಲಿ ಕಂಡು ಬಂತು.
ಎಲ್ಲ ಕಾರ್ಯಕ್ರಮದ ಪೂರ್ತಿ ಧ್ವನಿ ಮುದ್ರಣ ಮಾಡಿದ್ದವು. ಅದು ಸಂಘಟಕರ ಹತ್ತರೆ ಕೇಳಿರೆ ಬೇಕಾದವಕ್ಕೆ ಸಿಕ್ಕುತ್ತು.
ಕಾರ್ಯಕ್ರಮ ಮುಗುದಪ್ಪಗ ಇನ್ನು ಇರೆಕ್ಕಾತು ಹೇಳಿ ಎಲ್ಲೋರಿಂಗೂ ಅನಿಸಿತ್ತು.!

ನಮ್ಮ ಶೇಣಿ ಅಜ್ಜ ನಿಸ್ಸಂಶಯವಾಗಿ ಅತಿ ದೊಡ್ಡ ವಿದ್ವಾಂಸ ಹವ್ಯಕರೆಲ್ಲರೂ ಗರ್ವ ಪಡೆಕ್ಕಾದ ಯಕ್ಷಗಾನ ಅರ್ಥ ಬ್ರಹ್ಮ .
ಆದರೂ ಎನಗೆ ಏಕೋ ಶೇಣಿ ಅಜ್ಜನಿಗಿಂತಲೂ ಗೋವಿಂದಣ್ಣನೇ ಒಂದು ಕೈ ಮೇಲೆ ಹೇಳಿ ಯಾವಾಗಲೂ ಮನಸ್ಸಿಲ್ಲಿ ಅನಿಸುತ್ತು. ಗೋವಿಂದಣ್ಣ ನೃತ್ಯ , ಅಭಿನಯ , ಅರ್ತಗಾರಿಕೆ , ಭಾಗವತಿಕೆ , ಪ್ರಸಂಗ ರಚನೆ ಹಾಸ್ಯಂದ ಹಿಡುದು ಬಣ್ಣದ ವೇಷದ ವರೆಗೆ ಎಲ್ಲವನ್ನು ಲೀಲಾಜಾಲವಾಗಿ ನಿರ್ವಹಿಸುವ ಅಪೂರ್ವ ಸವ್ಯಸಾಚಿ (all-rounder) ಕಲಾವಿದ.
ಕೆಲವು ಜೆನ ಅರ್ತಲ್ಲಿ ರೈಸುಗು , ಕೆಲವು ಜನರ ಕೊಣಿತ ಚೆಂದ ಇಕ್ಕು ಕೆಲವರ ಅಭಿನಯ ಬಾರಿ ಒಳ್ಳೆದಿಕ್ಕು ಆದರೆ ಇದೆಲ್ಲವೂ ಒಬ್ಬನಲ್ಲೇ ಕಾಂಬಲೇ ಸಾಧ್ಯ ಇಲ್ಲೆ . ಒಂದು ವೇಳೆ ಇದ್ದರೆ ಅದು ಗೋವಿಂದಣ್ಣನಲ್ಲಿ ಮಾತ್ರ!
ಹೇಳಿರೆ ತಪ್ಪಲ್ಲ . ಗೋವಿಂದಣ್ಣನ ಶಬ್ದ ಸಂಪತ್ತು ಅಪಾರ . ಹೇಳೆಕ್ಕಾದ್ದರ ಚುಟುಕಾಗಿ ಪ್ರಭಾವ ಪೂರ್ಣವಾಗಿ ಸ್ಪಷ್ಟವಾಗಿ ಸಮಯ ಸಂದರ್ಭ ನೋಡಿಗೊಂಡು ಹೇಳುದು ಅವರ ವೈಶಿಷ್ಟ್ಯ .
ಗೋವಿಂದಣ್ಣನ ಅರ್ತಲ್ಲಿ ಕಸುವು ಇದ್ದು ಆದರೆ ಕಸವಿಲ್ಲೆ !

ಮೊದಲೆಲ್ಲ ಆಟದ ಕಲಾವಿದರು ಹೇಳಿರೆ ಸಂಸ್ಕಾರಂಗ ಇಲ್ಲದ್ದವ್ವು ಹೇಳಿ ಅವರ ಬಗ್ಗೆ ಅತ್ಯಂತ ತಿರಸ್ಕಾರ ಸಮಾಜಲ್ಲಿ ಇತ್ತು.
ಆಟದವಂಗೆ ಹೆಣ್ಣು ಕೊಡಲಾಗ. ಆಟದವಕ್ಕೆ ಸಕಲ ರೀತಿಯ ಚಟ೦ಗಳೂ ಇರ್ತು ಹೇಳ್ತ ಭಾವನೆ ಸಾರ್ವತ್ರಿಕವಾಗಿತ್ತು.
ಆದರೆ ಯಾವುದೇ ದುಶ್ಚಟ೦ಗೊ ಇಲ್ಲದ್ದೆ ಇಪ್ಪ, ಕ್ರಮ ಪ್ರಕಾರ ಸಂಧ್ಯಾವಂದನೆಯೇ ಮೊದಲಾದ ನಿತ್ಯವಿಧಿಗಳ ಅನುಷ್ಟಾನಲ್ಲಿ ಮಾಡಿಕ್ಕೊಂಡಿಪ್ಪ ಶುದ್ಧ ಕಲಾವಿದ ಗೋವಿಂದಣ್ಣ . ಈಗ ಕಲಾವಿದರ ಬಗ್ಗೆ ಗೌರವ ಭಾವನೆ, ಅವುದೆ ಎಲ್ಲೋರ ಹಾಂಗೆ ಹೇಳ್ತ ಭಾವನೆ ಜನರಲ್ಲಿ ನಾವ್ ಕಾಣುತ್ತು.

ಗೋವಿಂದಣ್ಣನ ಗದಾಯುದ್ಧದ ಕೌರವ , ಋತುಪರ್ಣ , ತಾಮ್ರಧ್ವಜ , ಅತಿಕಾಯ , ನರಕಾಸುರ , ಮಾಗಧ , ಪರೀಕ್ಷಿತ , ದಶರಥ , ಇಂದ್ರಜಿತು , ಮುಂತಾದ ಪ್ರತಿಯೊಂದು ಪಾತ್ರಂಗಳೂ ಅನನ್ಯವೇ.
ಗೋವಿಂದಣ್ಣ ರಂಗ ತುಂಬಿಸುವ ಕ್ರಮ , ನಾಟ್ಯ ,ಅರ್ಥಗಾರಿಕೆ ಎಲ್ಲವೂ ವಿಶಿಷ್ಟವೇ . ಧರ್ಮಸ್ಥಳ ಮೇಳಲ್ಲಿ ಒಂದು ಕಾಲಲ್ಲಿ ಕಡತೋಕ ಮಂಜುನಾಥ ಭಾಗವತರೂ -ಗೋವಿಂದಣ್ಣನ ಜೊತೆ ಬಲು ಪ್ರಸಿದ್ಧ .
ನಮ್ಮ ತಲೆಮಾರಿಂಗಪ್ಪಗ ಪುತ್ತಿಗೆ ಹೊಳ್ಳ – ಗೋವಿಂದಣ್ಣ ಜೊತೆ ರಂಗಲ್ಲಿ ನೋಡುದೆ ಚೆಂದ . ಯಾವುದೇ ಭಾಗವತ ಇರಲಿ ಆರೇ ಹಿಮ್ಮೆಳದವು ಇರಲಿ ಎಲ್ಲೋರೊಂದಿಗೂ ಹೊಂದಿಗೊಂಡು ಹೋಪ ಕಾರಣವೇ ಅವ ಎಲ್ಲ ಕಾಲಕ್ಕೂ ಎಲ್ಲರಿಂಗೂ ಬೇಕಾದ ಪರಿಪೂರ್ಣ ಕಲಾವಿದ .

ಗೋವಿಂದಣ್ಣನ ಹಾಂಗಿಪ್ಪ ಕಲಾವಿದರು ಇನ್ನು ಕಾಂಬಲೆ ಸಿಕ್ಕ . ಸತತ ಅಧ್ಯಯನ , ಪ್ರಯೋಗ ಕುಶಲತೆ , ಜೀವನದ ಪರಿಸ್ಥಿತಿಯ ಅನಿವಾರ್ಯತೆ೦ದ ಪೆಟ್ಟು ತಿಂದು ತಿಂದು ಗಟ್ಟಿಯಾದ, ಶ್ರದ್ದಾವಂತ ಕಲಾವಿದ ಅಷ್ಟು ಸುಲಭಲ್ಲಿ ಮೂಡಿ ಬಪ್ಪಲೆ ಕಷ್ಟ ಇದ್ದು .
ಇಂದ್ರಾಣ ದಿನಲ್ಲಿ ನಾವು ನೋಡುತ್ತಾ ಇಪ್ಪ ಹಾಂಗೆ ಪ್ರತಿಯೊಂದು ಕ್ಷೇತ್ರಲ್ಲೂ ಕಲಿವ ಶ್ರದ್ಧೆ ಕಮ್ಮಿ ಆವ್ತಾ ಇದ್ದು . ಎಲ್ಲೋರಿಂಗೂ ಬೇಗನೆ ಪ್ರಸಿದ್ಧಿ ಪಡವ ಹುಚ್ಚು . ಆದರೆ ಯಾವುದೇ ಕಲೆಯ ತಪಸ್ಸು ಮಾಡಿ ಕರಗತ ಮಾಡಿಗೊ೦ಬಲೆ ಪ್ರಯತ್ನಿಸುವವರ ಸಂಖ್ಯೆ ವಿರಳ ಆವ್ತಾ ಇಪ್ಪದು ಮಾತ್ರ ವಿಷಾದಕರ ವಿಷಯ.
ಕಷ್ಟ ಪಟ್ಟು ಸಾಧನೆ ಮಾಡಿರೆ ಎಂಥದನ್ನು ಮಾಡ್ಲೆಡಿತ್ತು ಹೇಳ್ತದ್ದು ಗೋವಿಂದಣ್ಣ೦ದ ಕಲಿವಲಕ್ಕು. ” ಯಕ್ಷೋಪಾಸನೆ” ಹೇಳ್ತದ್ದು ಗೋವಿಂದಣ್ಣನ ಆತ್ಮ ವೃತ್ತಾಂತ ವಿವರಿಸುವ ಪುಸ್ತಕ . ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ ಇದು .
ಅವ ಕಲಾವಿದ ಆಗಿರಲಿ , ಯಾವುದೇ ಕ್ಷೇತ್ರಲ್ಲಿ ಇರಲಿ, ಇಂದು ಗೋವಿಂದಣ್ಣ೦ಗೆ ಈ ಹೆಸರು ಬರೆಕ್ಕಾರೆ ಹಿಂದೆ ಅವನ ಸ್ಥಿತಿಗತಿ ಸಾಧನೆ ಹೆಂಗಿತ್ತು ಹೇಳ್ತದ್ದರ ಪೂರ್ಣ ಚಿತ್ರಣ ನಮಗೆ ಈ ಪುಸ್ತಕಲ್ಲಿ ಸಿಕ್ಕುತ್ತು.
ಪೂರ್ತಿ ಪುಸ್ತಕ ಓದಿ ಮುಗಿಶಿಯಪ್ಪಗ ನಿಜವಾದ ಸಾಧಕ ಅಯೆಕ್ಕರೆ ಅವ ಯಾವ ರೀತಿ ತಪಸ್ಸು ಮಾಡೆಕ್ಕು ಹೇಳ್ತದ್ದು ನವಗೆ ಗೊಂತಾವ್ತು.

ಗೋವಿಂದಣ್ಣನ ಜೀವಮಾನದ ಸಾಧನೆಗೆ ಡಾಕ್ಟರೇಟ್ ಕೊಡುಲಕ್ಕು.
ಇತ್ತೀಚಿಗೆ ನಮ್ಮಲ್ಲಿ ತಂತ್ರಜ್ಞಾನ ತಂಬಾ ಬೆಳವಣಿಗೆ ಆಯಿದು. ಗೋವಿಂದಣ್ಣನ೦ಥ ಅಪೂರ್ವ ಕಲಾವಿದರ ಪಾತ್ರ ವೈವಿಧ್ಯಂಗಳ ದಾಖಲೀಕರಣ ಮಾಡೆಕ್ಕಾದ ಅಗತ್ಯ ಇದ್ದು .
ಇವುಗಳೆಲ್ಲದರ ಚಿತ್ರೀಕರಿಸಿ ಸಂರಕ್ಷಿಸಿ ಮುಂದಾಣ ಪೀಳಿಗೆಗೆ ಎತ್ತುಸೆಕ್ಕಾದ ಜವಾಬ್ದಾರಿ ನವಗಿದ್ದು.
ನಿಂಗೊಗೆಂತ ಅನಿಸುತ್ತು ?


Subrahmanya Bhat
Assistant Professor in E&EE Department,
Sri Dharmasthala Manjunatheshwara Institute of Technology,Ujire
Ujire-574240

Belthangady Taluk,D.K.
Karnataka


15 thoughts on “ಯಕ್ಷ ಗೋವಿಂದನ ಅರ್ಥವೈಭವ..

  1. ಈ ಸರಣಿ ತಾಳಮದ್ದಲೆಯ ಸಿ.ಡಿ. ಉಜಿರೆ ಅಶೋಕ ಭಟ್ರ ಹತ್ತರೆ ಕೇಳಿರೆ ಸಿಕ್ಕುತ್ತು. ಅವ್ವೆ ಈ ಕಾರ್ಯಕ್ರಮದ ಪ್ರಧಾನ ಸಂಘಟಕರಲ್ಲಿ ಒಬ್ಬರು.

  2. ವೇಣೂರಣ್ಣಾ,
    ವಹಿಸಿದ ಪಾತ್ರಕ್ಕೆ ಪೂರ್ತಿ ನ್ಯಾಯ ಒದಗುಸುವ ಕಲಾತಪಸ್ವಿಯ ಶುದ್ದಿ ಲಾಯಿಕ ಆಯಿದು.ಪು೦ಡು,ರಾಜ,ಬಣ್ಣ,ಸ್ತ್ರೀ ಹೀ೦ಗೆ ಯಾವದೇ ವೇಷವಾದರೂ ಆಟಲ್ಲಿ ಎಷ್ತು ಚೆ೦ದಕ್ಕೆ ಪ್ರದರ್ಶಿಸುತ್ತವೋ ಹಾ೦ಗೆಯೇ ಕೂಟ೦ಗಳಲ್ಲಿ ಭಾವಪೂರ್ಣ ಅರ್ಥಗಾರಿಕೆಲಿ ಮಿ೦ಚುವ ಅಪರೂಪದ ಕಲಾವಿದನ ಪಾತ್ರದ ದಾಖಲಾತಿ ಅತಿ ಅಗತ್ಯ.
    ಕಳುದ ವರುಷವೂ ಪೆರಡಾಲಲ್ಲಿ ಋತುಪರ್ಣನ ಪಾತ್ರ ಅದ್ಭುತವಾಗಿ ಮಾಡಿದ್ದವಡ.ಪ್ರಾಯ ಎಪ್ಪತ್ತರ ಮೇಲಾಗಿದ್ದರೂ ರ೦ಗಲ್ಲಿ ಜವ್ವನಿಗನೇ ಸರಿ.
    ಈ ತಾಳಮದ್ದಳೆ ಸರಣಿಯ ಸ೦ಗ್ರಹ ಬೇಕಾತನ್ನೇ. ಎಲ್ಲಿ ಸಿಕ್ಕುಗು?

  3. {ಗೋವಿಂದಣ್ಣ ನೃತ್ಯ , ಅಭಿನಯ , ಅರ್ತಗಾರಿಕೆ , ಭಾಗವತಿಕೆ , ಪ್ರಸಂಗ ರಚನೆ ಹಾಸ್ಯಂದ ಹಿಡುದು ಬಣ್ಣದ ವೇಷದ ವರೆಗೆ ಎಲ್ಲವನ್ನು ಲೀಲಾಜಾಲವಾಗಿ ನಿರ್ವಹಿಸುವ ಅಪೂರ್ವ ಸವ್ಯಸಾಚಿ (all-rounder) ಕಲಾವಿದ.}
    ಆದ ಕಾರಣವೇ, ಗೋವಿಂದಣ್ಣಂಗೆ ಗೋವಿಂದಣ್ಣನೇ ಸಾಟಿ. ತರಬೇತಿ ಕೇಂದ್ರದ ನಿರ್ದೇಷಕನಾಗಿಯೂ ಕೆಲಸ ಮಾಡಿದ್ದವು. ” “ಯಕ್ಷೋಪಾಸನೆ” ಓದಿದರೆ ಅವು ಯಕ್ಷಗಾನದ ಒಬ್ಬ ದೊಡ್ಡ “ತಪಸ್ವಿ” ಹೇಳ್ತದು ಅನುಭವಕ್ಕೆ ಬತ್ತು.

  4. ಯಕ್ಷಗಾನ ರಂಗಲ್ಲಿ ಖ್ಯಾತರಾದ ಸೂರಿಕುಮೇರಿ ಗೋವಿಂದ ಭಟ್ಟರ ವ್ಯಕ್ತಿತ್ವ ಚಿತ್ರಣ ಕೊಟ್ಟ ವೇಣೂರಣ್ಣಂಗೆ ಧನ್ಯವಾದ. ಗೋವಿಂದ ಭಟ್ಟರ ಅಭಿಮಾನಿಗಳಲ್ಲಿ ಆನೂ ಒಬ್ಬ ಹೇಳ್ಲೆ ಹೆಮ್ಮೆ ಆವ್ತಾ ಇದ್ದು. ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷ ಏರ್ಪಾಟು ಮಾಡ್ತ ಯಕ್ಷಗಾನ ಕಾರ್ಯಕ್ರಮಲ್ಲಿ ಅವರ ವೇಷ/ಅರ್ಥಗಾರಿಕೆಯ ತುಂಬಾ ಸರ್ತಿ ಕಂಡಿದೆ. ವಾಹ್ ! ಅದ್ಭುತ.

  5. ‘ಮಧ್ಯಮ ವ್ಯಾಯೋಗ’ ಹೇಳ್ತ ತಾಳಮದ್ದಳೆ ಕೆಸೆಟ್ಟು ಕೇಳಿದ ನೆಂಪು. ಅದರಲ್ಲಿ ಭೀಮನ ಪಾತ್ರಲ್ಲಿ ಶೇಣಿ. ಹಿಡಿಂಬೆಯ ಮಗನ ಪಾತ್ರಲ್ಲಿ ಗೋವಿಂದ ಭಟ್ಟರು. ಶೇಣಿ ಹೇಳಿದ ಪ್ರತಿಯೊಂದೂ ಮಾತಿಂಗೂ ಉತ್ತರ ಕೊಡುತ್ತವು. ಅದಕ್ಕೆ ಶೇಣಿಯ ಉತ್ತರ: “ಎನ್ನೊಟ್ಟಿಂಗೆ ಹೀಂಗೆ ಮಾತಿಂಗೆ ಮಾತು, ಮಾತಿಂಗೆ ಮಾತು ಹೇಳೆಕ್ಕಾರೆ ನೀನೇ ಆಯೆಕ್ಕಷ್ಟೇ…”

  6. ನಮಸ್ಕಾರ,
    ಭಾರೀ ಲಾಯ್ಕಾಯಿದು ನಿಂಗಳ ಲೇಖನ.
    ಯಕ್ಷೋಪಾಸನೆದು ಎನಗೊಂದು ಪ್ರತಿ ಬೇಕಾತು. ಎಲ್ಲಿ ಸಿಕ್ಕುಗು ಅದು ?.

    ಮುರಳಿ

    1. ಕೊಡೆಯಾಲಲ್ಲಿ ( ಮಂಗಳೂರು) ಸಾಹಿತ್ಯ ಕೇಂದ್ರಲ್ಲಿ , ಅತ್ರಿ ಪುಸ್ತಕ ಭಂಡಾರ ಬಲ್ಮಠ ಲ್ಲಿ ಸಿಕ್ಕುತ್ತು. ಕೊಡೆಯಾಲಕ್ಕೆ ಹೊಪಲಿಪ್ಪಗ ತೆಕ್ಕೊಂಬಲಕ್ಕು

  7. ಗೋವಿಂದ ಭಟ್ರ ಸ್ವರ ಅತಿ ಮಧುರವಾದ್ದು-ಅವು ನಿಜವಾಗಿ ಯಕ್ಷಗಾನದ ಆಲ್ ರೌಂಡರ್-ನಿಸ್ಸಂಶಯವಾಗಿ.
    ಲಾಯ್ಕ ಲೇಖನ.

  8. ಉತ್ತಮ ಲೇಖನ ವೇಣೂರಣ್ಣ.
    ಗೋವಿಂದಣ್ಣನ ಬಗ್ಗೆ ಹೇಳುದರಂದ ಅವರ ವೇಷ ನೋಡಿಯೇ ಅನುಭವಿಸೆಕ್ಕು. “ಬಣ್ಣಿಸಲಸದಳ”, “ನೋಡಲೆರಡು ಕಣ್ಣು ಸಾಲದು”. ಹೀಂಗೆ.
    ಈ ಗೋವಿಂದಣ್ಣ, ಪ್ರಾಯಲ್ಲಿ ಗೋವಿಂದಜ್ಜ ಆಗಿದ್ದರೂ ರಂಗಸ್ಥಳಲ್ಲಿ ಗೋವಿಂದನೆ ಅಲ್ಲದ ?

    @ ಪಕಳಕುಂಜ ಮಾವ, ನಿಂಗ ಹೇಳಿದ್ದು ಸತ್ಯ. ಹಾಂಗೆ ಭಾಗವತಿಕೆಲಿ ಬಲಿಪ್ಪಜ್ಜಂಗೂ ಡಾಕುಟ್ರೆಟು ಕೊಡ್ಲೆ ಬಾಕಿ ಇದ್ದಿದ.

  9. ಹರೇ ರಾಮ॥
    ಸರಿಯಾಗಿ ಹೇಳಿದ್ದಿ ವೇಣೂರಣ್ಣ.

    ಯಕ್ಷ್ಗಗಾನಕ್ಕೆ ಹವ್ಯಕರ ಹೆಮ್ಮೆಯ ಕೊಡುಗೆ ಡಾ.ಶೇಣಿ ಅಜ್ಜ….
    ಡಾಕ್ಟರೇಟ್ ಸಲ್ಲ ತಕ್ಕ ವ್ಯಕ್ತಿತ್ವ ಸೂರಿಕುಮೇರಿ…..
    ಉದಯೋನ್ಮಖ ಪ್ರಾಮಿಸಿಂಗ್ ಸರ್ವಾಂಗ ಪರಿಪೂರ್ಣ ಕಲಾವಿದ ಸುಣ್ಣಂಬಳ ವಿಶ್ವೇಶ್ವರ…ಮೂರನೇ ಡಾಕ್ಟರೇಟ್ ಸಲ್ಲ ತಕ್ಕವ..

    ಆಗಿ ಹೋದವು ಮಾಂಬಾಡಿ… ಕುರಿಯ ……ದೇರಾಜೆ…ಕುದ್ರೆಕೋಡ್ಲು….ದಿವಾಣ…ನೆಡ್ಲೆ…ಹತ್ತು ಹಲವು ಜನ…

  10. ವೇಣೂರಣ್ಣನ ಶುದ್ದಿಗೆ ಮೆಚ್ಚುಗೆ. ನಮ್ಮವ° ಸೂರಿಕುಮೇರಿಗೋವಿಂದಣ್ಣ ಹೇಳ್ವಲ್ಲಿ ಅತೀವ ಹೆಮ್ಮೆ ಆವ್ತು. ಬದುಕಿನ ಹಿಂದಾಣ ಪುಟಂಗಳ ನೆಂಪಿಲ್ಲಿಸಿ ಕೊಂಬವು ಕೆಲವೇ ಮಂದಿ. ಯಕ್ಷರಂಗಲ್ಲಿ ಅದ್ವೀತಯನಾಗಿ ಮೆರೆತ್ತಾ ಇಪ್ಪ ಗೋವಿಂದಣ್ಣ ಒಬ್ಬ ಅಜಾತಶತ್ರು ಎಂಬಲ್ಲಿ ಯಾವ ಸಂಶಯವೂ ಇಲ್ಲೆ. ಪಾತ್ರಕ್ಕೆ ತಮ್ಮದೇ ಆದ ಮೆರುಗು ನೀಡುವಲ್ಲಿ ಗೋವಿಂದಣ್ಣನದ್ದು ವಿಶೇಷ ಸಾಧನೆ. ಗೋವಿಂದಣ್ಣನ ಕೌರವ, ಮಾಗಧ ಮುಂತಾದ ಪಾತ್ರಂಗಳ ನೋಡ್ಳೆ ಜನ ಇಂದಿಂಗೂ ವಿಶೇಷ ಆಸಕ್ತಿ ಇಪ್ಪವರಾಗಿದ್ದವು.

    ಯಕ್ಷಲೋಕಲ್ಲಿ ದೀರ್ಘ ಕಾಲ ಗೋವಿಂದಣ್ಣ ಮಿಂಚಿಯೊಂಡಿರಲಿ, ಅವರ ಬಗ್ಗೆ ಅಭಿಮಾನದ ಕಿರು ಶುದ್ದಿಯ ನೀಡಿದ ವೇಣೂರಣ್ಣಂಗೆ ಧನ್ಯವಾದವೂ ಹೇಳುವದು – ‘ಚೆನ್ನೈವಾಣಿ’.

  11. ಗೋವಿ೦ದಣ್ಣನ ಬಗ್ಗೆ ಹೇಳುಲೆ ಶಬ್ದ೦ಗಳೇ ಸಿಕ್ಕುತ್ತಿಲ್ಲೆ.ಅ೦ಥ ಹಿರಿಯ ಕಲಾವಿದರಾದರೂ ಶಾ೦ತ ಸ್ವಭಾವದ ಸರಳ ವ್ಯಕ್ತಿ.ಆನು ಸಣ್ಣ ಇಪ್ಪಗ ಅವರ ಯಕ್ಷಗಾನದ ಅರ್ಥ೦ಗಳ ಕೇಸೆಟ್ಟ್ಗಳಲ್ಲಿ ಕೇಳಿ ಖುಶಿ ಪಟ್ಟಿದೆ. ಈಗ ಮಗ ಯಕ್ಷಗಾನ ಕಲಿತ್ತಾ ಇದ್ದ. ಸಬ್ಬಣಕೋಡಿ ರಾಮ ಭಟ್ಟರ ಹತ್ತರೆ ಕಲಿವದಾದರೂ ರಜೆಲಿ ಗೋವಿ೦ದಣ್ಣ ಎ೦ಗಳ ಮನೆಗೆ ಬ೦ದು ಮಗ೦ಗೆ ನಾಟ್ಯ ಹೇಳಿ ಕೊಡ್ತವು!!

    1. ಮಕ್ಕೊಗೆ ನಮ್ಮ ಸಂಸ್ಕೃತಿಯ ಪ್ರತೀಕ ಯಕ್ಷಗಾನವ ಕಲಿಶುದು ತುಂಬಾ ಒಳ್ಳೆಯ ಕೆಲಸ .ಸಬ್ಬನಕೊಡಿ ರಾಮಣ್ಣ ತುಂಬಾ ಚೆಂದಕೆ ಮಕ್ಕೊಗೆ ಹೇಳಿ ಕೊಡುತ್ತವು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×