ಬಂತದ ವಿಷು ಕಣಿ!

April 13, 2011 ರ 9:44 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೋಪಾಲಣ್ಣನ ವಿಷುಕಣಿಯ ಆಶಯ, ಭಾಮಿನಿಲಿ.

ಮೂಡಿಬಂದಾ ಬೆಶಿಲ ಬೇಗೆಗೆ
ಬಾಡಿದಂತಾ ಮೋರೆಯೆಂತಗೆ
ಆಡಿ ಕೊಣಿವಾ ಮಕ್ಕಳೆಲ್ಲರು ಬನ್ನಿ ಈ ಕಡೆಗೆ ॥
ನೋಡಿ ವಿಷುವಿನ ಹಬ್ಬ ಬಂತದ
ಓಡಿ ತನ್ನಿರಿ ಗೋವುಸಂಪಗೆ
ಕಾಡು ಮಾವಿನ ಹಣ್ಣು,ಬೀಜದ ಹಣ್ಣು,ಹಲಸುಗಳ॥೧॥

ದೇವರೊಳ ಮಣೆಯೊಂದ ಮಡಗಿರಿ
ಧಾವಿಸುತ ಕೆಂಬಟ್ಟೆ ಹಾಸಿರಿ
ದೇವ ಮೂಡಿದರಾಗಸದಿ ತಡವಕ್ಕು ಸನ್ನಾಹ।।
ಪಾವಲಿಯ ಸರ,ಬಳೆಯ ಹರಗಿರಿ
ಬಾವಿನೀರಿನ ಎಳೆದು ಚೆಂಬಿಲಿ
ಈವಗಳೆ ತುಂಬಿಸಿರಿ, ಹಾನದ ಗಿಣ್ಣಲಿನ ಮಡಗಿ॥೨॥

ಬಾಲಕೃಷ್ಣನ,ಗಣಪದೇವರ
ಮಾಲೆ ಹಾಕಿ ಅಲಂಕರಿಸಿ ಹಿ-
ತ್ತಾಳೆ ಕಲಶವ,ದೀಪ,ಕನ್ನಾಟಿಗಳ ಇರಿಸೆಕ್ಕು॥
ಏಳುವಾಗಳೆ ಕಣಿಯ ನೋಡೆಕು,
ಕಾಲು ಕೈ ಮೋರೆಯನು ತೊಳೆಯೆಕು
ಕಾಲು ಹಿಡಿಯೆಕು ಹಿರಿಯರೆಲ್ಲರ,ದೇವರಿಗೆ ನಮಿಸಿ॥೩॥

ಕಟ್ಟಿ ಕಡೆಕೊಡಿ ಅಕ್ಕಿಯುದ್ದಿನ
ಹಿಟ್ಟು ತುಂಬಿದ ಬಾಳೆಯೆಲೆಗಳ
ಅಟ್ಟಿನಳಗೆಲಿ ಬೇಶಿದರೆ ಕೊಟ್ಟಿಗೆಯು ಆತಣ್ಣ॥
ಪುಟ್ಟಮಕ್ಕಳು,ದೊಡ್ಡವರು ಇ-
ಲ್ಲೊಟ್ಟು ಸೇರುತ ಕಾಯಿಹಾಲಿನ
ಚಟ್ಟಣಿಯ ಕೂಡ್ಯೊಂಡು ಸಂತೋಷಲ್ಲಿ ಸವಿಯೆಕ್ಕು॥೪॥

ಬಂದವಕೆ ಪಾಯಸವು,ಕೊಟ್ಟಿಗೆ
ಯಿಂದ ಸಮ್ಮಾನಿಸೆಕು ವಿಷು ದಿನ
ದಂದು ಆರೂ ಕೋಪಮಾಡಲೆ ಆಗ, ಮಾಡಿದರೆ॥
ಎಂದಿಗೂ ಇಕ್ಕಾಮನೆಲಿ ರಣ!
ಚೆಂದವೋ ಇದು ನಮ್ಮ ಧರ್ಮಕೆ
ಕುಂದು ಬಾರದ ಹಾಂಗೆ ನಡೆಯೆಕು ವರ್ಷವಿಡಿ ನಾವು!॥೫॥

ಬಂತದ ವಿಷು ಕಣಿ!, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಊರಿಂಗೆ ಹೋಗಿ ಬಂದ ಮೇಲೆ ನೋಡುತ್ತಾ ಇದ್ದೆ-ನಿಂಗಳ ಎಲ್ಲರ ಅಭಿಪ್ರಾಯಕ್ಕ್ದೆ ತುಂಬಾ ಧನ್ಯವಾದ.
  ರಘು ಅಣ್ಣ ಬೆಶಿ ಕೊಟ್ತಿಗೆ ತಿಂದದು ಹೇಂಗೆ ಹೇಳಿ ಗೊಂತಾತು-ರಸಾಯನ ಹಾಕಿ ಅಪ್ಪಾಗ ತಣಿದತ್ತು ಅಲ್ಲದೊ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಅನು ಉಡುಪುಮೂಲೆದೊಡ್ಮನೆ ಭಾವvreddhiಪುಟ್ಟಬಾವ°ಅಕ್ಷರದಣ್ಣಮುಳಿಯ ಭಾವವಿದ್ವಾನಣ್ಣಶಾಂತತ್ತೆಬಟ್ಟಮಾವ°ಪುತ್ತೂರಿನ ಪುಟ್ಟಕ್ಕಚೆನ್ನಬೆಟ್ಟಣ್ಣಜಯಗೌರಿ ಅಕ್ಕ°ವೇಣೂರಣ್ಣಅನುಶ್ರೀ ಬಂಡಾಡಿಅಜ್ಜಕಾನ ಭಾವಗಣೇಶ ಮಾವ°ವೆಂಕಟ್ ಕೋಟೂರುಕೊಳಚ್ಚಿಪ್ಪು ಬಾವಪವನಜಮಾವಮಂಗ್ಳೂರ ಮಾಣಿದೀಪಿಕಾನೀರ್ಕಜೆ ಮಹೇಶಕಳಾಯಿ ಗೀತತ್ತೆಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ