ಬೆಳೆವ ಸಿರಿ ಮೊಳಕೆಲಿ..

November 16, 2010 ರ 4:31 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೆಲವು ದಿನ ಆತು,ಲೇಖನ ಬರೆಯೆಕ್ಕು ಹೇಳಿ ಗ್ರೇಶಿ. ಇಂದು ಸಮಯ ಸಿಕ್ಕಿತ್ತಿದಾ.ವಿಷಯ ಹಳತ್ತೇ,ಆದರೆ ನಾವು ಕೆಲವು ಸರ್ತಿ ಗಮನ ಕೊಡದ್ದದೋ ಹೇಳ್ತ ಸಂಶಯಲ್ಲಿ ಬರೆದೆ.ಮನೆಗೆ ಹೋಪ ದಾರಿಕರೇಲಿಪ್ಪ ಆಚಾರಿಯ ಮನೆಗೆ ಹೋಗಿತ್ತಿದ್ದೆ, ಸುಖ ದುಕ್ಕ ವಿಚಾರಿಸಿ ಹೋಪ ಹೇಳಿ. ಆಚಾರಿ ಬಾಗಿಲಿನ ಹಲಗೆಲಿ ಉಳಿ ಸುತ್ತಿಗೆ ತೆಕ್ಕೊಂಡು ಎಂತದೋ ಗುರುಟಿಗೊಂಡಿತ್ತು.
ಎಂತ ಕೆಲಸ ಆಚಾರಿ ಹೇಳಿ ಕೇಳಿ ಅಪ್ಪಗ ಗೊಂತಾತು.ಕೇಚಜ್ಜನ ಪುಳ್ಳಿ, ಹೊಸ ಮನೆ ಕಟ್ಟಿಗೊಂಡಿದ್ದ.ದೇವರ ಕೋಣೆ ಬಾಗಿಲಿಂಗೆ ಚೆಂದದ ಕೆತ್ತನೆ ಆಯೆಕ್ಕು ಹೇಳಿದ್ದ ಹೇಳಿ. ಮರ ಎಲ್ಲಿಂದ ತಂದೆ ಹೇಳಿ ಕೇಳಿದೆ,ಆಚಾರಿ ಹತ್ತರೆ. ಅಡೂರಿನ ಹತ್ತರೆ ಫೋರೆಸ್ಟಿನವು ಏಲಮ್ಮಿಲಿ ಮಾರುತ್ತವು,ಅಲ್ಲಿ೦ದ ತಂದದು ಹೇಳಿ ಹೇಳಿತ್ತು ಆಚಾರಿ . ಹಾಂಗಾರೆ,ಕಾಡಿಲಿ ಹುಟ್ಟಿ ಬೆಳದು,ಬರೇಕೊರಡಾಗಿ ಬಿದ್ದುಗೊಂಡಿದ್ದ ಆ ಮರವ ಇಷ್ಟು ಚೆಂದದ ಕಲಾಕೃತಿಯಾಗಿ ಬದಲುಸುಲೆ  ಸಾಧ್ಯ ಇದ್ದಲ್ಲದೋ ?
ಚೆಂದವ ನೋಡುವ  ಮನಸ್ಸು,ಸರಿಯಾದ ಶಿಲ್ಪಿ ಇದೆರಡು ಇದ್ದರೆ ಸಾಕು ಅಲ್ಲದೋ?

ಶಾರದೆ, ದಯೆ ತೋರಿದೆ

ಮನ್ನೆ,ಸ್ವಾತಂತ್ರ್ಯ ದಿನಾಚರಣೆಯ ದಿನ ಮನೆ ಹತ್ತರಾಣ ಶಾಲೆಯ ಸಣ್ಣ ಮಕ್ಕಳೊಟ್ಟಿ೦ಗೆ ಮಾತಾಡಿಗೊಂಡಿಪ್ಪಗ ಒಂದು ಸಣ್ಣ ಪ್ರಶ್ನೆ ಕೇಳಿದೆ.ಮಕ್ಕಳೇ,ದೊಡ್ಡ ಆದ ಮೇಲೆ ನಿಂಗೊಗೆ ಎಂತ ಆಯೆಕ್ಕು ಹೇಳಿ ಆಸೆ? ಹೇಳಿ.
ಅಪ್ಪು,ನಾವು ಸಣ್ಣಾಗಿಪ್ಪಗಳೂ,ಹೀಂಗಿಪ್ಪ ಪ್ರಶ್ನೆಯ ಸುಮಾರು ಜೆನ ನಮ್ಮ ಹತ್ತರೆ ಖಂಡಿತಾ ಕೇಳಿಕ್ಕು.ಕೊಡೆಯಾಲಂದ ಬಂದ ದೊಡ್ದಪ್ಪನೋ,ಡಿಲ್ಲಿಂದ ಬಂದ ಪುಟ್ಟು ಮಾವನೂ,ಅಲ್ಲ  ಪುತ್ತೂರಿಂದ ಬಂದ ಪುಟ್ಟತ್ತೆಯೋ, ಶಾಲೆಲಿ ಮಾಷ್ಟ್ರೋ , ದೊಡ್ಡೋರು ಸಣ್ಣವರ ಹತ್ತರೆ ಕೇಳುತ್ತ ಪ್ರಶ್ನೆಯೇ ಅಲ್ಲದೋ ಇದು? ಈ ಪ್ರಶ್ನೆಯೇ ಅಲ್ಲದೋ ನಮ್ಮ ಭವಿಷ್ಯದ ಕನಸು ಕಾಂಬ ಹಾಂಗೆ ಮಾಡೋದು?
ನಾವು ನಮ್ಮ ಇಷ್ಟದ ಉದ್ಯೋಗವನ್ನೋ ಹವ್ಯಾಸವನ್ನೋ ಮಾಡಿ ದೊಡ್ಡ ಜೆನ ಆದ ಹಾಂಗಿಪ್ಪ ಆಲೋಚನೆಗಳ ಎಲ್ಲ ನಮ್ಮ ಮನಸ್ಸಿನ ಮೂಲೆಲಿ ಹುಟ್ಟುಸೋದು?

ಎರಡನೇ,ಮೂರನೇ ಕ್ಲಾಸಿಲಿ ಕಲಿತ್ತ ಆ ಮಕ್ಕೋ ಹೇಳಿದ ಉತ್ತರಂಗಳ ಕೇಳಿ ಎನ್ನ ಬಾಯಿ ಕಟ್ಟಿತ್ತು.ಕೆಲವು ಸುದೀಪನ ಹಾಂಗೆ,ದರ್ಶನನ ಹಾಂಗೆ ಸಿನೆಮಾಲ್ಲಿ ಡಿಶುಂ ಡಿಶುಂ ಮಾಡುತ್ತ ಕನಸು ಕಂಡರೆ ಇನ್ನು ಕೆಲವು ಐಶ್ವರ್ಯ ರೈ ಹಾಂಗೆ ಅಪ್ಪಲೇ ಕಾದುಗೊಂಡಿದ್ದವು.
ಒಂದೋ ಎರಡೋ ಸಚಿನ್ ತೆಂದೂಲ್ಕರಂಗಳೂ,ಸಾನಿಯಾ ಮಿರ್ಜಾ೦ಗಳೂ ಇತ್ತಿದ್ದವು, ಎನ್ನ ತಲೆಲಿ ಕಾಂಬ ಕರಿ ಕೂದಲಿನ ಹಾಂಗೆ…
ಅಂತೂ,ಕನಸುಗೊಕ್ಕೂ ಬರಗಾಲವೋ? ಹೇಳಿ ಸಂಶಯ ಆತು.ದೇವರೆತ್ತಿಸಿ  ಕೃಷಿಯ ವಿಷಯವೇ ಹೆಚ್ಚಿನವಕ್ಕೆ ಗೊಂತಿತ್ತಿಲ್ಲೆ,ಹಾಲು ಎಲ್ಲಿಂದ ಬಪ್ಪೊದು ಹೇಳಿ ಕೇಳಿರೆ ಅಂಗಡಿಂದ ಹೇಳಿ ಅಷ್ಟೇ ಗೊಂತಿಪ್ಪೊದೋ ಹೇಳಿ ಸಂಶಯವೂ ಆತು.

ಈಗಾಣ ವಿದ್ಯಾಭ್ಯಾಸದ ಕ್ರಮವೇ ಅದಲ್ಲದೋ? ಟಿಪ್ಟಾಪ್ ಸೂಟು,ಬೂಟು,ಟೈ ಇದ್ದರಾತು ತಲೆಯ ಒಳ ಖಾಲಿಸ್ಥಾನ ಆದರೂ!! ಎಲ್ಲ ಬಹಿರಂಗ ಶುದ್ಧಿಯ ಗೌಜಿಲಿ ಅಂತರಂಗ, ಶುದ್ದಿಯೇ ಇಲ್ಲದ್ದೆ ತಳಿಯದ್ದೆ ಕೂಯಿದೋ ಹೇಳಿ ಸಣ್ಣ ಸಂಶಯ.

ಮನಸ್ಸು ಸುಮಾರು ವರುಷ ಹಿಂದಂಗೆ ರಿವೈಂಡ್ ಆತು.ಸಣ್ಣಾಗಿಪ್ಪಗ ಆನೂ ಕೆಲವು ಕನಸು ಕಂಡಿತ್ತಿದ್ದೆ. ಕನಸುಗಳ ಸುಧೆಯೇ ಹರಿಕ್ಕೊಂಡಿದ್ದ ಕಾಲ ಅಲ್ಲದೋ ಅದು? ಅಪ್ಪನ ಹಾಂಗೆ ಆಫೀಸಿಲಿ  ದೊಡ್ಡ ಆಫೀಸರು ಆಯೆಕ್ಕು, ಒಳ ಹೋಗಿ ಎಂತ ಮಾಡೆಕ್ಕು ಹೇಳಿ ಗೊಂತಿಲ್ಲದ್ದರೂ.ಅಪ್ಪನ ಹಾಂಗೆ ಬ್ರಿಸ್ಟಾಲ್ ಸಿಗರೇಟು ಬೆರಳ ಎಡೆಕ್ಕಿಲಿ ಮಡುಗಿ ಒಂದು ದಮ್ಮು ಎಳದು ಚೆಂದಕ್ಕೆ ಹೊಗೆಬಿಡೆಕ್ಕು ಹೇಳಿ. ಬಚಾವು,ಅದೊಂದು ಅಭ್ಯಾಸ ಆಯಿದಿಲ್ಲೆ,ಮೂರನೇ ಕ್ಲಾಸಿಲಿ ಬೀಜದ ಮರ ಹತ್ತಿ ಕದ್ದು ಬೀಡಿ ಎಳದು ದಮ್ಮು ಕಟ್ಟಿ ಅಪ್ಪಗಳೇ  ಆ ಕನಸು ನಿಂದುಹೋದ್ದದು!! ದಾರಿ ತಪ್ಪೊದು ಹೀಂಗಿದಾ.ದಾರಿ ನೆಡವಗ ಒಂದು ಕವಲು ತಪ್ಪಿರೆ ಮುಟ್ಟುವ ಗುರಿ ಎಲ್ಲಿಯೋ?ಎಂತದೋ?

ಹಾಂಗೆ,ನಮ್ಮ ಎದುರು ಕಾಂಬ ವಿಷಯಂಗಳಲ್ಲಿ ಯಾವುದಾದರೂ ಒಂದರಲ್ಲಿ ನವಗೆ ಹೆಚ್ಚು ಆಸಕ್ತಿ ಇಪ್ಪೊದಲ್ಲದೋ?

ಇಂದು ಕಾಲ ಬದಲಾಯಿತು.

ನಾವು ನೋಡಿದ್ದು ಗೆದ್ದೆ ಬೈಲು ಈಗ ಇದ್ದು ಮೊಬೈಲು..
ಅಂದು ಇತ್ತು ಪಂಪು ಮೋಟರು ಈಗ ಬೈಂದು ಕಂಪ್ಯೂಟರು..

ಗಣಕಯಂತ್ರದ ಕೆಲವು ಗುಂಡಿಗಳಲ್ಲಿ, ಮೊಬೈಲಿನ ಕೆಲವು ಒತ್ತುವಿಕೆಲಿ ಜೀವನ ಎಲ್ಲಿಗೋ ಮೊರೆ ಮಾಡಿ ಸಾಗುವ ಸಾಧ್ಯತೆ ಇದ್ದು.

ಇಂದಿನ ಮಕ್ಕಳೇ ಮುಂದಿನ ಜನಾಂಗ ಹೇಳಿ ಹೆರಿಯೋರು ಹೇಳಿದ್ದವದ.
ಮಕ್ಕ ಸಣ್ಣಾಗಿಪ್ಪಗಳೇ  ಅವರ ಆಸಕ್ತಿಗಳ,ಎಲ್ಲಿಯೋ ಒಳ ಹುಗ್ಗಿಗೊಂಡು ಹೆರ ಬಪ್ಪಲೆ ಕಾದು ನಿಂದ ಪ್ರತಿಭೆಗಳ ಹುಡುಕ್ಕಿ ಹೆರ ತೆಗದು, ಅವು ದೊಡ್ಡಪ್ಪಗ ನೆಡೆಯೆಕ್ಕಾದ ದಾರಿ,ಕಲಿಯೆಕ್ಕಾದ ವಿದ್ಯೆ,ಅನುಸರಿಸೆಕ್ಕಾದ ಸಂಸ್ಕಾರ ಗಟ್ಟಿ ಅಕ್ಕು.
ಮಣ್ಣಿನೊಳದಿಕ್ಕೆ ಇಪ್ಪ ಚಿನ್ನವ ಶುದ್ಧ ಮಾಡಿ ಚೆಂದದ ಆಭರಣ ಮಾಡುತ್ತ ಹಾಂಗೆ,ಸಮುದ್ರದ ಅಡೀಲಿ ಚಿಪ್ಪಿನ ಒಳ ಹುಗ್ಗಿ ಕೂದ ಮುತ್ತುಗಳ ಹೆರ್ಕಿ ತಂದು ಚೆಂದದ ಮಾಲೆ ಮಾಡುತ್ತ ಹಾಂಗೆ, ಸಮಾಜದ ಭವಿಷ್ಯ ನಿರ್ಣಯ ಮಾಡುವ ಈ ಮಕ್ಕಳ ಪ್ರತಿಭೆಗಳ ಹುಡುಕ್ಕಿ ಬೆಣಚ್ಚಿಗೆ ತಪ್ಪ ಪ್ರಯತ್ನ ನಾವು ಮಾಡೆಕ್ಕಲ್ಲದಾ? ಸೆಸಿಯ ನೆಟ್ಟು ನೀರು,ಗೊಬ್ಬರ ಹಾಕಿ ಸಾಂಕಿ ಅದು ದೊಡ್ಡ ಮರ ಆಗಿ ಹೂಗು ಹಣ್ಣು ಬಿಡುವಗ ಎಷ್ಟು ತೃಪ್ತಿ ಸಿಕ್ಕುತ್ತೋ ಹಾಂಗೆಯೇ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಣೆ ಕೊಡೊದು ನವಗೆ ಅಷ್ಟೇ ಸಂತೋಷ ಕೊಡುಗು ಅಲ್ಲದೋ?

ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮವಿಕಾಸಕ್ಕಾಗಿ ಹೇಳ್ತದು  ಸತ್ಯ. ಹಾಂಗೆ ಅಪ್ಪ,ಅಬ್ಬೆ, ಗುರುಹಿರಿಯರು ಪೋಷಿಸಿದ ಕಾರಣ ಅಲ್ಲದೋ ನಮ್ಮಲ್ಲಿ  ಎಷ್ಟೋ ಪ್ರತಿಭೆಗೊ ಜಗತ್ತಿಲಿ ಪ್ರಕಾಶಮಾನ ಆದ್ದದು ?

ಅದರ ಬದಲಿಂಗೆ,ಮೂರು ಹೊತ್ತೂ ದುರ್ದರ್ಶನ ನೋಡಿಗೊಂದು ಕಾಲಹರಣ ಮಾಡಿರೆ ಸಿಲ್ಲಿಲಲ್ಲಿಗಳೇ, ಇತರೆ ಬೇಡ೦ಗಟ್ಟೆಗಳೇ,ನವಗೆ ಮಾದರಿ ಆಗಿ ಹೋಕಲ್ಲದೋ?
ಮಕ್ಕಳ ಮಂಗ ಮಾಡಿ ಬೇಕಾದ ಕುರೆಕುರೆಗಳ ಹತ್ತರೆ ಎಳೆಶುವ  “ಪೋಗೋ” ದ ಬದಲು “ಬಾರೋ”  ಹೇಳಿ ಎಲ್ಲೋರ ಹತ್ತರೆ ಬರುಸುವ,ನಮ್ಮ ಸಂಸ್ಕಾರವ ಒಳುಶುವ ಹವ್ಯಾಸಂಗೊ ಭವಿಷ್ಯದ ದೃಷ್ಟಿಲಿ ಒಳ್ಳೆದಲ್ಲದೋ?
ಯಾವದು ಒಳ್ಳೆದು ,ಯಾವದು ಹಾಳು ಹೇಳ್ತದರ ನೋಡಿ ತಿದ್ದುವ ಜವಾಬ್ದಾರಿಯೂ ಹೆರಿಯರದ್ದೇ ಅಲ್ಲದೋ?.

ಕಲೆ ವಿಲಾಸಕ್ಕಾಗಿ ಅಲ್ಲ,ಆತ್ಮವಿಕಾಸಕ್ಕಾಗಿ

ಮಕ್ಕಳ ಮನಸ್ಸು ಹೂಗಿನ ಮುಗುಟಿನ ಹಾಂಗೆ.ಅದು ಚೆಂದಕ್ಕೆ ಅರಳುಲೆ ಒಳ್ಳೆ ಗಾಳಿ ಬೆಣಚ್ಚಿ ನೀರು ಸಿಕ್ಕುವ ಹಾಂಗಿಪ್ಪ ವಾತಾವರಣ ಇರೆಕ್ಕಲ್ಲದೋ?
ಹೂಗಿನ ಮುಗುಟಿನ ಅರಳುವ ಮದಲೇ ಮುದ್ದೆ ಮಾಡಿದ ಹಾಂಗಲ್ಲದೋ ,ಮಕ್ಕೊ ಆಸೆಲಿ ಯಾವದಾದರೂ ಒಳ್ಳೆ ಹವ್ಯಾಸ,ವಿದ್ಯೆಯ ಕಲಿಯೆಕ್ಕು  ಹೇಳಿ ಮನೆಲಿ ಅಪ್ಪ ಅಬ್ಬೆಯ ಹತ್ತರೆ ಬೇಡಿ ಅಪ್ಪಗ ಅವರ ತಡವೊದು?

ಮದಲಾಣ  ಕಾಲಲ್ಲಿ ಹೆಚ್ಚಿನ ಅಬ್ಬೆ ಅಪ್ಪ೦ದಿರು, ಮಕ್ಕಳ ಪ್ರತಿಭೆಗಳ ಗುರ್ತಿಸಿದ್ದು ಕಮ್ಮಿಯೇ.ಕೂಸುಗಳ ಮದುವೆ ಮಾಡಿ ಕೊಟ್ರೆ ಮುಗಾತು.ಅಡಿಗೆ ಮಾಡುಲೆ ಸರಿ ಗೊಂತಿರೆಕ್ಕು,ಬೇರೆಲ್ಲ ವಿದ್ಯೆ ಕಲ್ತು ಎಂತ ಮಾಡುಲೆ ಇದ್ದು? ಮತ್ತೆ ಮಾಣಿಯ೦ಗೊ ಇದೆಲ್ಲ ಕಲ್ತು ಹೋದರೆ ತೋಟ ನೋಡೊದಾರು?ಹೇಳ್ತ ಕಾರಣಂದಲೋ ಎಂತದೋ ನಮ್ಮಲ್ಲಿ ಲಲಿತ ಕಲೆಗೊಕ್ಕೆ ಪ್ರೋತ್ಸಾಹ ಸಿಕ್ಕಿದ್ದು  ಕಮ್ಮಿಯೇ .ಆದರೂ ನಮ್ಮವು ಸ್ವಯಂಪ್ರಕಾಶಲ್ಲಿ ಬೆಳಗಿದ್ದದು ಸತ್ಯ.

ಮತ್ತೆ ಯಕ್ಷಗಾನದ ಮರುಳು ವಂಶ ಪಾರಂಪರ್ಯದ್ದು, ಚೆನ್ನಬೆಟ್ಟಣ್ಣ ಎಷ್ಟೇ ವಿರೋಧ ಇದ್ದು ಹೇಳಿರೂ ಬಿಡದ್ದದು,ಅಲ್ಲದೋ?

ಹಾಂಗೆ ಹೇಳಿ, ನಮ್ಮ ಆಸಕ್ತಿಗಳ ಅಥವಾ ಬರೇ ನವಗೆ ಇಷ್ಟ ಇಪ್ಪ ವಿಷಯಂಗಳ ಮಕ್ಕಳ ತಲೆಗೆ ತುರ್ಕಿಸಿ ಅವರ ಸಂಗೀತಕ್ಕೋ,ಆಟೋಟಕ್ಕೋ, ಡಾನ್ಸುಗೊಕ್ಕೋ ಬಲವಂತಲ್ಲಿ  ನೂಕುಲೆ ಪ್ರಯತ್ನ ಮಾಡೊದು ಹಶು ಇಲ್ಲದ್ದವಂಗೆ ಮ್ರಷ್ಟಾನ್ನ  ಭೋಜನ ಬಳುಸಿ ಊಟ ಮಾಡುಲೆ ಒತ್ತಾಯ ಮಾಡಿದ ಹಾಂಗಲ್ಲದೋ?

ಜೀವನಲ್ಲಿ ಪ್ರೀತಿ ಇಪ್ಪ ವಿದ್ಯೆ,ಕಸುಬು,ಹವ್ಯಾಸ ಮಾಡೆಕ್ಕಡ.ಆದರೆ ಅದು ಸಾಧ್ಯ ಆಗದ್ದದು ಜೀವನದ ಅನಿವಾರ್ಯತೆ ಆದರೆ, ಮಾಡುವ ಕೆಲಸವ ಶ್ರದ್ಧೆ ಪ್ರೀತಿಲಿ ಮಾಡೆಕ್ಕಡ.ಆವಾಗಲೇ ಮನಸ್ಸಿಂಗೆ ತೃಪ್ತಿ ನೆಮ್ಮದಿ.

ಅಂತೂ,ಇಂತೂ ಒಂದು ಸ್ಪಷ್ಟ .ನಾವು  ಸಮಾಜಲ್ಲಿ ನಮ್ಮ ಅಬ್ಬೆಅಪ್ಪ, ಗುರು ಹಿರಿಯರಿ೦ಗೆ ಒಳ್ಳೆ ಹೆಸರು ತಪ್ಪ ಹಾಂಗೆ ಬದುಕ್ಕೆಕ್ಕು,ಹೆಸರು ಹೇಳ್ಸುವ  ಹಾಂಗೆ ಅಲ್ಲ. ಸರಿಯೋ?

ಬೆಳೆವ ಸಿರಿ ಮೊಳಕೆಲಿ.. , 4.5 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ರಘು ಹೇಳಿದ ಎರಡು ವಾಕ್ಯಂಗೊ ಎನಗೆ ಕೊಶೀ ಆತು.
  [ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮವಿಕಾಸಕ್ಕಾಗಿ ಹೇಳ್ತದು ಸತ್ಯ]
  [ಮಕ್ಕಳ ಮನಸ್ಸು ಹೂಗಿನ ಮುಗುಟಿನ ಹಾಂಗೆ]
  ಮಕ್ಕಳಲ್ಲಿ ಇಪ್ಪ ಪ್ರತಿಭೆಯ ಗುರುತಿಸಿ ಅದರ ಬೆಳಶಲೆ ಹೆತ್ತವು ಸಹಕಾರ ಕೊಡೆಕು. ಲಲಿತ ಕಲೆ, ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುಸುವದರೊಟ್ಟಿಂಗೆ, ಅವರ ಮನಸ್ಸಿನ ಅನಗತ್ಯ ವಿಶಯಕ್ಕೆ ವಿಮುಖ ಆಗದ್ದ ಹಾಂಗೆ ನೋಡ್ತು.
  ಹಸಿ ಮಣ್ಣಿಲ್ಲಿ ಅಂಟಿದ ಕಲ್ಲು ಅಲ್ಲಿಯೆ ಗಟ್ಟಿ ಒಳಿತ್ತ ಹಾಂಗೇ, ಮಕ್ಕೊಗೆ ಸಣ್ಣ ಇಪ್ಪಗ ನೀತಿ ಕತೆಗಳ ಹೇಳಿ, ಸಂಸ್ಕಾರ ಕೊಟ್ಟರೆ ದೊಡ್ಡ ಅಪ್ಪ್ಗ ದಾರಿ ತಪ್ಪುವದು ಕಮ್ಮಿ ಅಕ್ಕು,
  ಉಳಿ ಪೆಟ್ಟು ಜಾಸ್ತಿ ಬಿದ್ದ ಕಲ್ಲು ,ಆರಾಧನೆ ಮಾಡುವ ಚೆಂದದ ಮೂರ್ತಿ ಅಪ್ಪದು. ಮಕ್ಕೊಗೆ ಶಿಕ್ಷಣ , ಶಿಕ್ಷೆ ಎರಡೂ ಅವಕ್ಕೆ ರಕ್ಷೆಯೇ. ಹಾಂಗಪ್ಪಗ ಅವು ಹೆತ್ತವಕ್ಕೆ ಹೆಸರು ತಪ್ಪ ಮಕ್ಕೊ ಅಕ್ಕಲ್ಲದ್ದೆ ಹೆಸರು ಹೇಳ್ಸುವವು ಆಗವು.

  [Reply]

  VA:F [1.9.22_1171]
  Rating: +2 (from 2 votes)
 2. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ರಘು ಭಾವ, ಈ ಶುದ್ದಿ ಯಾವ ಕಾಲಕ್ಕೆದೆ ಪ್ರಸ್ತುತವೇ!!!!
  ನಿಂಗೊ ಹೇಳಿದ ಹಾಂಗೆ ಚೆಂದವ ನೋಡುವ ಮನಸ್ಸು, ಅದಕ್ಕೆ ಮೂರ್ತ ರೂಪ ಕೊಡುವ ಶಿಲ್ಪಿ ಎರಡೂ ಬೇಕಲ್ಲದಾ?
  ಇದು ಜೀವನದ ಪ್ರತಿಯೊಂದು ಕೆಲಸಕ್ಕುದೆ ಅನ್ವಯಿಸುತ್ತಲ್ಲದಾ?
  ನಾವು ಸಣ್ಣ ಇಪ್ಪಗ ನವಗೆ ನಮ್ಮ ಮನೆಯೋರು, ನಮ್ಮ ನೆರೆಕರೆ, ನಮ್ಮ ಬಂಧುಗ ಮಾದರಿ ಆಗಿತ್ತಿದ್ದವು. ನಮ್ಮ ಎಳೆ ಮನಸ್ಸು ಅವರ ಹಾಂಗೆ ಅಪ್ಪಲೆ ಯೋಚಿಸಿಗೊಂಡಿತ್ತು. ಆದರೆ ಈಗ ಹಾಂಗಲ್ಲ, ಮಕ್ಕಳ ಎದುರು ಜಗತ್ತೇ ವಿಶಾಲ ಆಗಿ ತೆರೆದೇ ಇದ್ದು. ನಾವು ಮನೆಲಿ ಎಷ್ಟೇ ಮಾದರಿ ಆಗಿದ್ದರೂ ಹೆರಾಣ ಪ್ರಪಂಚಲ್ಲಿ ಅವಕ್ಕೆ ಅವರ ಒಟ್ಟಿನ್ಗೆ ಇಪ್ಪವು ಬೇರೆಯೇ ಲೋಕವ ತೋರ್ಸುತ್ತವು. ನಾವು ಅಷ್ಟು ಸಮಯ ಮಾಡಿದ ಪ್ರಯತ್ನ ನೀರಿಲಿ ಮಾಡಿದ ಹೋಮದ ಹಾಂಗೆ ಆವುತ್ತು !!
  ಅವಕ್ಕೆ ಕನಸು ಕಂಡು ಅದರ ಮುಟ್ಟುವ ಸಂಘರ್ಷ ಇಲ್ಲೆ. ಸಣ್ಣ ಪ್ರಾಯಲ್ಲೇ ಈ ಪ್ರಚಾರ ಮಾಧ್ಯಮಂದಾಗಿ ಅವಕ್ಕೆ ಒಂದೊಂದು ಗುರಿ ಸಿಕ್ಕುತ್ತು. ಆ ಸ್ಪರ್ಧೆಗಳಲ್ಲಿ ಗೆಲ್ಲುದೆ ಮಕ್ಕಳ ಗುರಿ ಆವುತ್ತು. ಪ್ರತಿ ದಿನ ನಾವು ಎಷ್ಟು ಮಕ್ಕಳ ಪ್ರತಿಭೆಗಳ ದೈನಿಕಂಗಳಲ್ಲಿ ಕಾಣುತ್ತಿಲ್ಲೇ? ಅದರಲ್ಲಿ ಎಷ್ಟು ಜನ ಈಗ ದೊಡ್ಡ ಆಗಿ ಸಮಾಜದ ಒಂದು ಮಾದರಿ ಅಪ್ಪ ಹಂತ ಮುಟ್ಟಿದ್ದವು? ಇದು ಹೆತ್ತವರ ಅತಿ ಆಸೆಂದಾಗಿ ಅಪ್ಪದಲ್ಲದಾ? ತಮಗೆ ಸಮಾಜಲ್ಲಿ ಗುರುತಿಸುವಿಕೆ ಸಿಕ್ಕದ್ದಿಪ್ಪಗ ಮಕ್ಕಳ ಉಪಯೋಗಿಸಿ ಗುರುತಿಸಿಗೊಂಬ ಒಂದು ಚಾಳಿ ಆದ್ದದಲ್ಲದಾ? ಇಂದು ಮಕ್ಕಳ ಒಟ್ಟಿನ್ಗೆ ಅಪ್ಪ, ಅಮ್ಮ ಇಕ್ಕು ಗೆಲ್ಲುವ ಹಾದಿಲಿ.. ನಾಳೆ ಅವು ಸೋತಪ್ಪಗ ಆರು ಇರ್ತವು? ಅಂಬಗ ಆ ಮಗು ಎಂತ ಮಾಡುಗು?
  ನಮ್ಮ ಮಕ್ಕಳ ಪ್ರತಿಭೆಗಳ ಗುರುತಿಸಿ ಅದಕ್ಕೆ ಪ್ರೋತ್ಸಾಹ ಕೊಟ್ಟು ಬೆಳೆಶೆಕ್ಕು, ಅದು ಕೂಡ್ಲೇ ಹೂಗು ಬಿಟ್ಟು ಫಲ ಕೊಡೆಕ್ಕು ಹೇಳಿ ಅಲ್ಲ ನಿಧಾನಲ್ಲಿ ಬೆಳದು ಆ ಪ್ರತಿಭೆ ಅವರಲ್ಲಿ ಅದೊಂದು ಅಂಗ ಆಯೆಕ್ಕು. ಅವರ ನಾಳೇಣ ಜೀವನಲ್ಲಿ ಅವು ಖುಷಿಪಟ್ಟು ಅವರ ವ್ಯವಹಾರಂಗಳ ಒಟ್ಟಿನ್ಗೆ ಅನುಭವಿಸುವ ಹಾಂಗೆ ಆಯೆಕ್ಕು. ನಿಂಗೊ ತಾಳಮದ್ದಳೆಲಿ, ಕವಿತೆಲಿ, ಬರವಣಿಗೆಲಿ.. ಆನಂದ ಅನುಭವಿಸುವ ಹಾಂಗೆ!! ಅಲ್ಲದಾ?
  ದೇರಾಜೆ ಮೂರ್ತಿ ಅಣ್ಣ ಹೇಳ್ತವು, ನಾವು ಮಕ್ಕೊಗೆ ಸೋಲುದನ್ನೂ ಕಲಿಸೆಕ್ಕಾವುತ್ತು ನಾಳೆ ಅವು ಗೆಲ್ಲುಲೇ ಹೇಳಿ.. ಸತ್ಯವೇ ಅಲ್ಲದಾ?

  [Reply]

  VA:F [1.9.22_1171]
  Rating: +2 (from 2 votes)
 3. ಮುಳಿಯ ಭಾವ
  ರಘುಮುಳಿಯ

  ಅಕ್ಕ, ಕಲೆ ವಿಲಾಸಕ್ಕಾಗಿ ಅಲ್ಲ ಹೇಳ್ತ ಮಾತು ನಿಜ. ಆದರೆ ಇಂದು ಮಾಧ್ಯಮದ ಮೇಲಾಟ ಹೆಚ್ಚಾಗಿ ಸಣ್ಣ ಮಕ್ಕೊ ಅನಗತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಾಂಗೆ ಆಯಿದು.
  ಕಲೆ ಆತ್ಮ ವಿಕಾಸಕ್ಕಾಗಿ ಬೆಳೆಯೆಕ್ಕೆ ಹೊರತು,ಸ್ಪರ್ಧೆಗೆ ಇಪ್ಪದು ಅಲ್ಲ. ದೂರದರ್ಶನದ ಸ್ಪರ್ಧೆಗೊಕ್ಕೆ ಅರ್ಥವೇ ಇಲ್ಲೆ ಹೇಳಿ ಎನ್ನ ಅಭಿಪ್ರಾಯ.ಆ ಮಕ್ಕಳ ಸಾಲಿಲಿ ನಿಲ್ಲಿಸಿ ಅವರ ಮಾನಸಿಕ ಸ್ಥೈರ್ಯವ ಪರೀಕ್ಷೆ ಮಾಡುವ ಅಗತ್ಯ ಇದ್ದೋ? ಕಲೆ ಮಾನಸಿಕ ವಿಕಸನಕ್ಕೆ ಇದ್ದರೇ ಚೆಂದ.ಇದು ಅಬ್ಬೆಅಪ್ಪಂದಿರು ಅರ್ಥ ಮಾಡಿಗೊಂಡು ನಿರ್ಧರಿಸೆಕ್ಕು. ಶಾಲೆಯ ಸ್ಪರ್ಧೆಗಳಲ್ಲಿ ಮಕ್ಕೋ ಸೋಲು ಗೆಲವುಗಳ ಅನುಭವಿಸಿರೆ ಸಾಕು ಅಲ್ಲದೋ?
  ಹೆಚ್ಚಿನ ವಿಷಯಂಗಳಲ್ಲಿ ದೃಶ್ಯ ಮಾಧ್ಯಮ ಶಾಪವೇ.ಮಕ್ಕಳ ಎಳೆ ಮನಸ್ಸಿನ ಹಾಳು ಮಾಡುಲೆ ಬೇಕಾದ ಎಲ್ಲವೂ ಕಣ್ಣ ಮುಂದೆ ನಿಂದರೆ ಅವು ದಾರಿ ತಪ್ಪದ್ದೆ ಇಕ್ಕೋ?ದಾರಿ ಸುಗಮವಾಗಿ ಇರೆಕ್ಕಾರೆ ಮಕ್ಕೋ ಯೇವದಾದರೊಂದು ಕಲೆಲಿ,ಆಟೋಟಲ್ಲಿ,ಸಮಾಜಮುಖಿ ಚಟುವಟಿಕೆಲಿ ಬೆಳೆಯೆಕ್ಕೆ ಹೊರತು ದೂರದರ್ಶನ,ಇಂಟರ್ನೆಟ್ ,ಮೊಬೈಲ್ ಗಳ ಒಟ್ಟಿ೦ಗೆ ಅಲ್ಲ , ಅಲ್ಲದಾ?

  [Reply]

  VA:F [1.9.22_1171]
  Rating: +1 (from 1 vote)
 4. ಒಪ್ಪಣ್ಣ

  ಮುಳಿಯಭಾವಾ..
  ಒಳ್ಳೆ ವಸ್ತು, ಒಳ್ಳೆ ನಿರೂಪಣೆ, ಒಳ್ಳೆ ವಾಕ್ಯಂಗೊ, ಒಳ್ಳೆಯ ತೂಕ – ಇಪ್ಪ ಲೇಖನಕ್ಕೆ ಸಹಸ್ರ ಸಹಸ್ರ ಒಪ್ಪಂಗೊ.
  ಮಕ್ಕಳ ಉನ್ನತಿಯೂ ಸ್ಪರ್ಧೆಲಿ, ಮಕ್ಕಳ ಅವನತಿಯೂ ಸ್ಪರ್ಧೆಲೇ ಅಡ.

  “ತೊತ್ತೋ ಚಾನ್” ಹೇಳ್ತ ಕೂಸಿನ ಬಗ್ಗೆ ಶ್ರೀ ಅಕ್ಕ ಯೇವತ್ತೂ ಹೇಳುದಿದ್ದು. ಅದರ ಯಶಸ್ಸು ಇಪ್ಪದು ಅದರ ಹಿಂದೆ ಇಪ್ಪ ಜೀವನ ಪದ್ಧತಿಲಿ – ಹೇಳ್ತ ಸಾರಾಂಶ ಅದರ ಪುಸ್ತಕಲ್ಲಿ ಇದ್ದಡ – ಶ್ರೀಅಕ್ಕನ ಹೇಳಿತ್ತಿದ್ದವು.

  ಗಂಭೀರ ವಿಚಾರಕ್ಕೆ ನಿಂಗೊಗೆ ಅಭಿನಂದನೆಗೊ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಧನ್ಯವಾದ.“ತೊತ್ತೋ ಚಾನ್” –ಈ ಕೂಸಿನ ಕಥೆ ರಜ ಬೈಲಿಲಿ ಬರವಿರಾ?

  [Reply]

  VA:F [1.9.22_1171]
  Rating: +1 (from 1 vote)
 5. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  [ದಾರಿ ನೆಡವಗ ಒಂದು ಕವಲು ತಪ್ಪಿರೆ ಮುಟ್ಟುವ ಗುರಿ ಎಲ್ಲಿಯೋ?ಎಂತದೋ?]
  ನೂರಕ್ಕೆ ನೂರು ಸತ್ಯದ ಮಾತು.
  ಅತ್ಯುತ್ತಮ ಲೇಖನ.

  [Reply]

  VA:F [1.9.22_1171]
  Rating: +1 (from 1 vote)
 6. ಮೋಹನಣ್ಣ

  ರಘು ಭಾವ ವಿಷಯವ ಇದರಿ೦ದ ಚೆ೦ದಕೆ ನಿರೂಪಣೆ ಮಾಡ್ಲೆ ಎಡಿಯ.ಆನು ಬರೇಕು ಹೇಳಿ ಗ್ರಹಿಸಿದ್ದದೆಲ್ಲ ಶರ್ಮಪ್ಪಚ್ಚಿಯೂ ಶ್ರೀದೇವಿ ಅಕ್ಕನೂ ಬರದ್ದವು ಇನ್ನು ಎನ್ನದೊ೦ದಷ್ಟು ಬರದು ಓದಿದವರ ರಸ ಕೆಡುಸುತ್ತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆನೀರ್ಕಜೆ ಮಹೇಶಕಾವಿನಮೂಲೆ ಮಾಣಿಡೈಮಂಡು ಭಾವಪವನಜಮಾವಹಳೆಮನೆ ಅಣ್ಣಗೋಪಾಲಣ್ಣವಿದ್ವಾನಣ್ಣಒಪ್ಪಕ್ಕಡಾಗುಟ್ರಕ್ಕ°ಉಡುಪುಮೂಲೆ ಅಪ್ಪಚ್ಚಿಬಟ್ಟಮಾವ°ಅನಿತಾ ನರೇಶ್, ಮಂಚಿಪುತ್ತೂರುಬಾವಪ್ರಕಾಶಪ್ಪಚ್ಚಿಪೆಂಗಣ್ಣ°ಸರ್ಪಮಲೆ ಮಾವ°ಕಳಾಯಿ ಗೀತತ್ತೆಅಕ್ಷರ°ಪುತ್ತೂರಿನ ಪುಟ್ಟಕ್ಕಯೇನಂಕೂಡ್ಳು ಅಣ್ಣಶಾ...ರೀಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆವಿನಯ ಶಂಕರ, ಚೆಕ್ಕೆಮನೆಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ